ನಮ್ಮಲ್ಲಿ ವಿಚಿತ್ರ ಅಂದ್ರೆ ಏನೋ ತಪ್ಪು ಮಾಡಿರೋದು.. ಅಥವಾ ಯಾವುದಾದರು ಕೆಲಸ ಸರಿಯಾಗಿ ಮಾಡದೇ ಇದ್ದರೆ ಅದೇ ಒಂದು ವಿಚಿತ್ರ ತರ ಕಾಣುತ್ತೆ ಅಲ್ವ.... ಒಂದು ಬಿಲ್ಡಿಂಗ್ ಕಟ್ಟ್ತೋದ್ರಲ್ಲೇ ಇರಬೋದು,, ಅಥವಾ ಪಾರ್ಕ್ ಅನ್ನು neat ಆಗಿ ಇಟ್ಕೊಲೋದ್ರಲ್ಲೇ ಇರ್ಬೋದು ..... ಏನೋ ಒಂದು ಥರ ಕಾಪಿ ಕಟ್ ಮಾಡುವವರ ಥರ ಮಾಡುತ್ತೇವೆ.. ಒಂದು ಹೊಸ ಯೋಚನೆ,,innovation, ಕ್ರಿಯೇಟಿವಿಟಿ ಏನು ಇರೋಲ್ಲ... (mostly ಎಲ್ಲರೂ ನಮ್ಮ ಸ್ಕೂಲ್ಸ್ ಕಾಲೇಜ್ exams ನಲ್ಲಿ ಏನು ಪಠ್ಯ ಪುಸ್ತಕ ಇರುತ್ತದೋ ಅಸ್ತನ್ನೇ ಓದಿ ಅದೇ ರೀತಿ ಬರೆದು, ಜೀವನದಲ್ಲೂ ಅದೇ ಥರ ಅಳವಡಿಸಿಕೊಂಡ ಬಿಟ್ ಇದ್ದೇವೆ ಅಂಥ ಕಾಣುತ್ತೆ).
ನಮ್ಮ ನಿಜ ಜೀವನದಲ್ಲಿ ಎಲ್ಲೊ ಅಪರೂಪ ಒಂದು ಒಳ್ಳೆ ಕ್ರಿಯೇಟಿವ್ ವಸ್ತು ವನ್ನ ಕಾಣೋದು ಅಲ್ವ... ಹಾಗಂತ ಏನು ಚೆನ್ನಾಗಿ ಇರೋಲ್ಲ ಅಂಥ ಅಲ್ಲ ತುಂಬ ಚೆನ್ನಾಗಿ beautifull ಆಗಿ ಇರುತ್ತೆ ಆದ್ರೆ ಎಲ್ಲ ಒಂದೇ ಥರ ಇರುತ್ತೆ, ಅಂಥಹ ವಸ್ತುವನ್ನ ಮೊದಲೇ ಎಲ್ಲೊ ನೋಡಿದ ಹಾಗೆ ಅನ್ನಿಸಿರುತ್ತದೆ... different ಅಂಥ ಅನ್ನಿಸೋದೇ ಇಲ್ಲ .
recent ಆಗಿ ನಮ್ಮ ಕಂಪನಿ ಇಂದ Goldan Pam ರೆಸಾರ್ಟ್ ಗೆ ಹೋಗಿದ್ದೆ , ಅಲ್ಲಿ ನೋಡೋಕೆ ಎಲ್ಲ ಚೆನ್ನಾಗಿ ಇದ್ದವು,, ಅದೇ ಶಿಲ್ಪಾ ಕಲೆಗಳು, ಹುಲ್ಲು ಹಾಸು, ದೊಡ್ಡ ಸ್ವಿಮಿಂಗ್ ಪೂಲ್ , ಏನೋ different ಆಗಿ ಇರುವ ವಸ್ತು ಇಲ್ಲವೇನೋ ಅಂಥ ಅನ್ನಿಸುತ್ತಿರಬೇಕಾದರೆ ಒಂದು ಚಿಕ್ಕ fountain ಕಣ್ಣಿಗೆ ಬಿತ್ತು.. ಚಿಕ್ಕದಾದರೂ ಏನೋ ಒಂದು ಹೊಸತನ,,, ಕ್ರಿಯೇಟಿವಿಟಿ ಅದರಲ್ಲಿ ಇತ್ತು , ಅದನ್ನೇ ನೋಡ್ತಾ ಸ್ವಲ್ಪ ಸಮಯ ಅದರ ಬಗ್ಗೆನೇ ಯೋಚನೆ ಮಾಡ್ತಾ ಇದ್ದೆ,, ಇದೆ ಥರ ಏನಾದರೂ different ಆಗಿ ಇರೋದನ್ನ ಮಾಡ್ತಾ ಇದ್ದರೆ ಎಷ್ಟು ಚೆನ್ನಾಗಿ ಇರುತ್ತೆ ಅಲ್ವ ಅಂಥ..... ಹೌದಲ್ವ.. ಇಂತದಕ್ಕೆ ತುಂಬ ಕರ್ಚು ಮಾಡಿ ಏನು ಮಾಡಬೇಕಾಗಿ ಇರೋಲ್ಲ .. ಇರುವ ವಸ್ತುವಿನಲ್ಲೇ ಸ್ವಲ್ಪ different ಆಗಿ ಇರೋ ಥರ ಮಾಡಬೋದು.....
ಇದೆ ರೀತಿ ಬೆಳಗಾವಿ ಮಹಾರಾಷ್ಟ್ರದ ಗಡಿ ನಲ್ಲಿ,, ಸಿಮೆಂಟ್ ನಲ್ಲಿ ಮಾಡಿದ ಹಳ್ಳಿ ಮಾದರಿಯ ಕಲಾಕ್ರುತಿಗಳು ತುಂಬ ಪ್ರಸಿದ್ದಿ ಪಡೆದಿವೆ ಅಂತೆ...ಶಿರಡಿಗೆ ಹೋಗಬೇಕಾದರೆ ದಾರಿನಲ್ಲಿ ನೋಡಿಕೊಂಡು ಹೋಗಿದ್ವಿ,, ಆದರೆ ಫೋಟೋಗಳನ್ನ ಇನ್ನೊಮ್ಮೆ ನಿಮ್ಮ ಜೊತೆ ಹಂಚಿಕೊಲ್ತೇನೆ.. ಅದನ್ನ ನೋಡಿ ಏನೋ ಒಂದು ಥರ ಕುಷಿ ಅನ್ನಿಸ್ತು.... ಹೀಗೆ ಒಳ್ಳೆ ಪ್ರೋಸ್ತಹ ಸಿಕ್ಕರೆ ನಮ್ಮಲ್ಲೂ ಒಳ್ಳೆ ಪ್ರತಿಬೆಗಳು ಇದ್ದಾರೆ ಅವರಿಂದ ಒಳ್ಳೆ ಒಳ್ಳೆ ಹೊಸತನವನ್ನು ಪಡೆಯಬಹುದು.....
ಹಾಂ ಈ ವಿಚಾರ ನನ್ನ ತಲೆ ನಲ್ಲಿ ಯಾಕೆ ಬಂತು ಅಂದ್ರೆ... ಈ ಕೆಳಗಿನ ಚಿತ್ರಗಳನ್ನು ನೋಡಿ ,,, ಮಾಡಕ್ಕೆ ಏನು ಕೆಲಸ ಇಲ್ಲವೇನೋ ಅನ್ನುವಂತೆ,,, ಚಿತ್ರ ವಿಚಿತ್ರ ವನ್ನು ಮಾಡಿದ್ದಾರೆ ಇದನ್ನು ನೋಡಿ ಯೋಚಿಸುತ್ತಾಇರಬೇಕಾದರೆ ನನಗು ಈ ಯೋಚನೆ ಗಳು ಬಂದವು,,, ನೀವು ನೋಡಿ,, ಈ ಥರದಹ ವಿಚಿತ್ರ ಯೋಚನೆ ಬಂದರೆ,, ಅಥವಾ ವಿಚಿತ್ರ ಕಲೆಗಳನ್ನು ನಿಮ್ಮ ಸುತ್ತ ಮುತ್ತ ನೋಡಿದ್ದರೆ ,, ನನ್ನ ಜೊತೆಗೂ ಹಂಚಿ ಕೊಳ್ಳಿ.....
ಸುಮ್ನೆ ಹಾಗೆ ...ಯಾರೋ ನೆತಾಡೋ ತರ ಮನುಷ್ಯನ ಅಕ್ರುತಿಯನ್ನ ಮಾಡಿ ಬಿಟ್ ಇದ್ದಾರೆ ಅಸ್ಟೆ....
ಸರಿಯಾಗಿ ನೋಡಿ, ಕುದುರೆ ಮೇಲೆ ಅಲ್ಲ ಕೂತಿರೋದು,,, ಉಲ್ಟಾ ಆಗಿ....
ರಬ್ಬರ್ ನಲ್ಲಿ ಮಾಡಿರೋದು
simply super !!! i like u r blog very much because of this creative pics .. hats of sir ..
ReplyDeleteThanks Roopa..
ReplyDeletesuperb!!! keep posting all the best to u!
ReplyDeleteಇವರಿಗಳು ಇಂಥ ಕೆಲ್ಸ ಮಾದದೇ ಇದ್ರೆ... ನಿಮಗೆ ಮಾಡೋಕ್ಕೆ ಏನು ಕೆಲಸ ಇರೋಲ್ಲಾ ಅಲ್ವ? ಹ್ಹಹ್ಹ
ReplyDeleteಒಂದಕ್ಕಿಂತ ಒಂದು ವಿಭಿನ್ನವಾಗಿವೆ!
ಗುರು.....
ReplyDeleteನಿಮ್ಮ ಬ್ಲಾಗ್ ನನ್ನ ಫೇವರಿಟ್ ಗಳಲ್ಲಿ ಒಂದು....
ನನಗೊಂದೇ ಅಲ್ಲ ನಮ್ಮನೆಯವರಿಗೂ ಸಹ...
ಅಂದೇ ನೋಡಿದ್ದೆವು ...
ಪ್ರತಿಕ್ರಿಯೆ ಹಾಕಲು ವಿಳಂಬವಾಯಿತು...
ನಿಜಕ್ಕೂ ಇವರಿಗೆಲ್ಲ ಮಡಲಿಕ್ಕೆ ಬೇರೆ ಕೆಲಸ ಇಲ್ಲವಾ...?
ಮಸ್ತ್ ಇದೇರಿ..
ನಿಮ್ಮ ಹುಡುಕಾಟ...
ಪರಿಚಯಿಸಿದ್ದಕ್ಕೆ ಧನ್ಯವಾದಗಳು....
ನಿಮ್ಮ ಬ್ಲಾಗ್ ವೈವಿಧ್ಯತೆಗಳ ಆಗರ, ಹೊಸಹೊಸ ವಿಚಾರಗಳ ಬಗ್ಗೆ ಗಮನ ಸೆಳೀತೀರಿ. ಚೆನ್ನಾಗಿದೆ.
ReplyDeleteಧನ್ಯವಾದಗಳು ಮನಸು ... ತುಂಬ ದಿನ ನನ್ನ ಬ್ಲಾಗಿನ ಕಡೆ ಬಂದು.....ಎಲ್ಲಿ ಇದ್ದೀರಾ ಇವಾಗ?
ReplyDeleteರೂಪಶ್ರಿ.... ಹೌದಲ್ವ... ಕರೆಕ್ಟ್ ಆಗಿ ಹೇಳಿದ್ದಿರ,,, ಹಾಗೆ ನಿಮಗೂ ಕಾಮೆಂಟ್ ಮಾಡುವ ಕೆಲಸ ಇರ್ತ ಇರಲಿಲ್ಲ ಅಲ್ವ....
ReplyDeleteಧನ್ಯವಾದಗಳು
ಪ್ರಕಾಶ್,,,
ReplyDeleteನಾನು ಅಸ್ಟೆ,,, ನಿಮ್ಮ ನವಿರಾದ ಬರಹದ ಅಭಿಮಾನಿ.....ಏನ್ ಬರಿತಿರ ಸರ್ ನೀವು....ಎಲ್ಲೋ ಹೋಗಿ ಎಲ್ಲೋ ಬಂದು ಬಿದ್ದಿರ್ತಿವಿ.....
ಪರಾಂಜಪೆ ...
ReplyDeleteನಿಮ್ಮ ಅಭಿನಂದನಾ ಪ್ರತಿಕ್ರಿಯೆಗೆ ಧನ್ಯವಾದಗಳು......
ಗುರು,
ReplyDeleteನಿಜಕ್ಕೂ ನಿಮ್ಮ ಬ್ಲಾಗಿನ ಈ ಹೊಸತನ್ನು ನೋಡಿದ ತಕ್ಷಣ ಖುಷಿಯಾಯ್ತು..ನನಗೆ ಕಳೆದೆರಡು ದಿನದಿಂದ ಜ್ವರವಿದ್ದುದ್ದರಿಂದ ಕಾಮೆಂಟು ಹಾಕಲಾಗಲಿಲ್ಲ...
ನೀವು ಪ್ರತಿವಾರ ಹೊಸದನ್ನು ಹುಡುಕಿ ತಂದು ನಮಗೆಲ್ಲಾ ತೋರಿಸುವುದನ್ನು ನಾನು ಮತ್ತು ನನ್ನ ಶ್ರೀಮತಿ ನೋಡಿ ಖುಷಿ ಪಡುತ್ತೇವೆ...ನಿಮ್ಮ ಬ್ಲಾಗ್ ನಮ್ಮ ಮನೆಯಲ್ಲಿ ತುಂಬಾ ಪಡುವ ಬ್ಲಾಗ್ ಆಗಿದೆ.
[ನಿಜಕ್ಕೂ ಇವರಿಗೆ ಬೇರೆ ಕೆಲಸವಿಲ್ವ...ಅಂತ ಕೇಳಿದ್ದೀರಿ...ಒಂದು ಖಾಲಿ ರಸ್ತೆಯ ಫೋಟೋ ತೆಗೆಯಲು ಒಂದು ವಾರ ಅದೇ ಜಾಗಕ್ಕೆ ಅಲೆದಿದ್ದಕ್ಕೆ ನನ್ನ ಅನೇಕ ಗೆಳೆಯರು ನನಗೂ ಹಾಗೆ ಕೇಳುತಿದ್ದುದ್ದು ನೆನಪಾಯಿತು..]
ಮನೂರಿ...ಚನ್ನಾಗಿದೆ ವಿಚಿತ್ರಗಳ ಸಚಿತ್ರ ಮತ್ತು ರಂಜನೀಯ ಪೋಸ್ಟ್....ಶಿವು...ಜ್ವರ ನಿಮ್ಮ ಈ ವಿಚಿತ್ರಗಳ ಸರಣಿನೋಡಿ ಓಡೋಗಿರಬೇಕು...ಹಹಹ
ReplyDeleteಧನ್ಯವಾದಗಳು ಶಿವೂ..
ReplyDeleteನನ್ನ ಶೀರ್ಷಿಕೆಯ ಜೊತೆಗೆ, ನಿಮ್ಮ ಅನುಭವವನ್ನು ಹಂಚಿಕೊಂಡಿದ್ದಕ್ಕೆ ಥ್ಯಾಂಕ್ಸ್
ಆದರೆ ನಿಮಗೆ ಏನ್ ಆಯಿತು ಶಿವೂ? ಇವಾಗ ಹುಷಾರಿ ಇದ್ದೀರಾ ತಾನೆ ?
ಜಲನಯನರವರೆ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ..
ReplyDeleteಶಿವುರವರ ಜ್ವರ ಎ ವಿಚಿತ್ರಗಳನ್ನು ನೋಡಿ ಓಡಿ ಹೋಗಿ,,, ಅವರಿಂದ ಇನ್ನು ಹೊಸ ಬ್ಲಾಗ್ ಬರಹ ಬಂದರೆ ಅಸ್ತೆ ಖುಷಿ ಅಲ್ವ...
ಗುರುಅವರೆ,
ReplyDeleteಸಕತ್ತಾಗಿದೆ ಕಣ್ರೀ. ನಾವು ಅವರಂತೆ different ಆಗಿ ಆಲೋಚಿಸದಿರುವುದಕ್ಕೆ ನಮ್ಮ ವಿದ್ಯಾಭ್ಯಾಸ ಕ್ರಮವೇ ಕಾರಣವಿರಬಹುದು.ನೀವು ಚಿತ್ರಗಳ ಮುಂಚೆ ಬರೆದಿರುವವಿಚಾರ ಆಲೋಚಿಸುವಂತಹುದಾಗಿದೆ. ನೀವು ತೋರಿಸಿರುವ ಸಕತ್ತಾದ ಚಿತ್ರಗಳನ್ನು ನೋಡುತ್ತಾ ನಾವ್ಯಾಕೆ ಈ ರೀತಿ ಯೋಚಿಸಲ್ಲ ಎಂದು ಪ್ರಶ್ನಿಸಿಕೊಳ್ಳಬೇಕಿದೆ.
ಅಂದ ಹಾಗೆ ನಿಮ್ಮ ಕುಣಿಗಲ್ಲಿನ ಕುಮಾರಸ್ವಾಮಿ ಎಂಬುವವರು ನನ್ನ ಸ್ನೇಹಿತರು.ನಿಮ್ಮಂತೆಯೇ Software Engineer. ಬಿಗ್ ಬಜಾರ್ ಬಳಿ ಅವರ ಮನೆ.ನಿಮಗೆ ಪರಿಚಿತರಾ?
ಮಲ್ಲಿಕಾರ್ಜುನ್
ReplyDeleteನಾನು ಹೇಳಿರುವಂಥ ವಿಚಾರವನ್ನು ಅರ್ಥ ಮಾಡಿಕೊಂಡು ಯೋಚಿಸಿದ್ದಕ್ಕೆ ಧನ್ಯವಾದಗಳು.. ನೀವು ತುಂಬಾ ಕ್ರಿಯೇಟಿವ್ ಅಂತ ಗೊತ್ತು,,, ಹಾಗೆ ನಿಮ್ಮ ಫೋಟೋಗ್ರಫಿ ನಲ್ಲೂ ಇನ್ನೆ different ವೆರೈಟಿ ಕಾಣಬಹುದ ..?
ನೀವು ಹೇಳಿದ ಕುಮಾರ ಸ್ವಾಮಿ ಎಂಬುವರ ಬಗ್ಗೆ ನನಗೆ ಅಸ್ಟು ಗೊತ್ತಿಲ್ಲ.... ನಾನು ಕುಣಿಗಲ್ಲಿನಲ್ಲಿ ನನ್ನ ಸ್ಕೂಲಿಂಗ್ ಮಾತ್ರ ಮಾಡಿದ್ದು ....