Wednesday, June 24, 2009

ನಿಂಬೆ ಹಣ್ಣಿನ ಹಬ್ಬ.....!!!!! menton


menton ಒಂದು ಸುಂದರವಾದ ನಗರ ಇದು french-italian boarder ನಲ್ಲಿ ಇದೆ ... ಸುತ್ತಲು ನೀರಿನಿಂದ ಹಾಗು ಬೆಟ್ಟದಿಂದ ಆವೃತ ವಾದ ಒಂದು ಸುಂದರ ನಗರವಂತೆ,, ಸುತ್ತಲು ಬೆಟ್ಟಗಳು ಇರುವುದರಿಂದ ಬಲವಾಗಿ ಬೀಸುವ ಗಾಳಿ ಅಸ್ತು ಪ್ರಬಲವಾಗಿ ಇಲ್ಲದೆ ಇರುವ ಕಾರಣ,, ಇಲ್ಲಿ ಯಾವಾಗಲು ಒಳ್ಳೆಯ ಹವಾಮಾನ ಇರುತ್ತಂತೆ...
ನಿಮಗೆ ಗೊತ್ತಿರ ಬೇಕಲ್ವ... ನಮ್ಮ ಲಾಲ್ ಬಾಗ್ ನಲ್ಲಿ ಒಂದು ಸೀಸನ್ ನಲ್ಲಿ ಪಲ ಪುಷ್ಪ್ಹ ಗಳ ಪ್ರದರ್ಶನ ನಡೆಯುತ್ತೆ .... ಇಂತದ್ದನ್ನು ನೋಡಲು ಎಷ್ಟು ಚೆನ್ನಾಗಿ ಇರುತ್ತೆ ಅಲ್ವ...
ಇದೆ ರೀತಿ ಈ menton ಅನ್ನೋ ಸಿಟಿ ನಲ್ಲಿ ಪ್ರತಿ ಬೇಸಿಗೆ ಸಮಯದಲ್ಲಿ lemons- ನಿಂಬೆ ಹಣ್ಣುಗಳ ಪ್ರದರ್ಶನ ನಡೆಯುತ್ತೆ,, ಇದು ಎಷ್ಟು ಪ್ರಸಿದ್ದಿ ಪಡೆದಿದೆ ಅಂದರೆ... ತುಂಬ ದೇಶದಿಂದ ಜನರು ಇದನ್ನು ನೋಡಲು ಬರುತ್ತಾರೆ... ಪ್ರತಿವರ್ಷ ಇದು ಅಭಿವೃದ್ದಿ ಹೊಂದುತ್ತಾ ಇದೆ ಅಂತೆ ....ಅದು ಎಷ್ಟು ನಿಂಬೆ ಹಣ್ಣನ್ನು ಬೆಳೆಯುತ್ತಾರೋ ಏನ್ ಕತೆನೋ,, ಕೆಳಗೆ ಇರುವ ಚಿತ್ರ ನೋಡಿ....ನೀವೇ ಹೇಳಿ...... ಇಡಿ ಪಾರ್ಕ್ ಅನ್ನು ನಿಂಬೆ ಹಣ್ಣುಗಳ ರಾಶಿ ಇಂದ ತುಂಬಿಸಿ ಇದ್ದಾರೆ ಹಾಗೆ ಅದರಲ್ಲೇ ಅದ್ಬುತ ಕಲಾಕೃತಿಗಳು ಬೇರೆ ......
ಅಲ್ಲೇ ಇರುವ ನನ್ನ ಸ್ನೇಹಿತನೊಬ್ಬ ಇದರಬಗ್ಗೆ ಹೇಳಿದ್ದ..ಕೂತುಹಲದಿಂದ ಹಾಗೆ ಸ್ವಲ್ಪ ಇಂಟರ್ನೆಟ್ ನಲ್ಲಿ ಹುಡುಕಾಡಿದಾಗ ನನಗೆ ಸಿಕ್ಕ ಮಾಹಿತಿ ಇಷ್ಟು ,, ಯಾರಾದರು ಫ್ರಾನ್ಸ್ ಗೆ ಪ್ರವಾಸ ಹೋಗುವವರಿದ್ದರೆ ಇಲ್ಲಿಗೂ ಒಮ್ಮೆ ಹೋಗಿ ಬನ್ನಿ.....
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೋಡಿ : - http://www.menton.com/uk/menton/index.html


14 comments:

 1. ಗುರು.....ಇದೇನ್ರೀ...?
  ನಿಂಬೇ ಹಣ್ಣಿನಿಂದ ಬಿಲ್ಡಿಂಗ್ ಕಟ್ಟಿಬಿಟ್ಟಿದ್ದಾರೆ...
  ಎಷ್ಟು ಚಂದವಾಗಿ....

  ವಾಹ್...!

  ಆರೇಂಜ್ ಬಣ್ಣದ ನಿಂಬೇ ಹಣ್ಣು ಇರುತ್ತದಾ...?

  ಅವರ ಕಲಾಕ್ರತಿಗಳಿಗೂ...
  ಪರಿಚಯಿಸಿದ ನಿಮಗೂ...
  ಅಭಿನಂದನೆಗಳು...

  ReplyDelete
 2. ಗುರು ಅವರೆ,
  ಕೇಸರಿ ಬಣ್ಣದ ಹಲಸಿನಹಣ್ಣು ನೋಡಿದ್ದೆ.
  ಆದರೆ ಕೇಸರಿ ಬಣ್ಣದ ನಿಂಬೆಹಣ್ಣು ನೋಡಿರಲಿಲ್ಲ.

  ಈ ಮಾಹಿತಿಗಾಗಿ ಧನ್ಯವಾದಗಳು.

  ReplyDelete
 3. ಗುರು ಅವರೇ,
  ವಾರಕ್ಕೊಂದು ವಿಸ್ಮಯ ತೋರುವ ನಿಮಗೆ, ನನ್ನ ಶಿರಸಾಭಿವಂದನೆಗಳು!!!

  ReplyDelete
 4. ಗುರು,

  ಸಕ್ಕತ್ತಾಗಿದೆ. ನಿಂಬೆಹಣ್ಣಿನಿಂದಲೂ ಕಟ್ಟಡಗಳು, ಶಿಲ್ಪಗಳು, ಕಲಾಕೃತಿಗಳು....ಎಲ್ಲಾ ಎಷ್ಟು ಚೆನ್ನಾಗಿ ಒಪ್ಪವಾಗಿ finishing touch ಕೊಟ್ಟಿದ್ದಾರಲ್ವಾ....

  ಆರೆಂಜ್ ಬಣ್ಣದ ನಿಂಬೆ ಹಣ್ಣು ನೋಡಿ ಆಶ್ಚರ್ಯವಾಯಿತು...ಅದು ಎಂದಿನಂತೆ ಉಳಿಯೋ ಅಥವ ರುಚಿ ಬದಲಾಗಿದೆಯೋ ಅನ್ನುವುದನ್ನು ಅಲ್ಲಿರುವ ನಿಮ್ಮ ಗೆಳೆಯನನ್ನು ಕೇಳಿ ನಮಗೆ ತಿಳಿಸಿ....

  ಸೂಪರ್ ಫೋಟೋಗಳನ್ನು ತೋರಿಸಿದ್ದಕ್ಕೆ ಧನ್ಯವಾದಗಳು..

  ReplyDelete
 5. guru saar,
  abbaa !!! waav !! tu0baa KuShi anisitu .. nODi. dhanyavaadagaLu nimage. e0taha oLLeya maahitigaLu nimmi0da .. nimma blaag maahitiya KaNaja . ... hats of Sir.

  ReplyDelete
 6. ಹೌದು ಪ್ರಕಾಶ್,,, ನೋಡಿ... ನೀವು ಬರಿ ಮಣ್ಣು ಕಲ್ಲಿನಿಂದ ಮನೆ ಕಟ್ಟುತ್ತಿರ ಆದ್ರೆ ಇಲ್ಲಿ ಬರಿ ನಿಂಬೆ ಹಣ್ಣಿನಿಂದ ಮನೇನೆ ಕಟ್ಟಿ ಬಿಟ್ ಇದ್ದಾರೆ......ಸಕತ್ ಇದೆ ಅಲ್ವ...
  ನಂಗು ಅದೇ ಡೌಟ್ orange ಬಣ್ಣದ ನಿಂಬೆ ಹಣ್ಣಿನ ಮೇಲೆ ... ಏನೇನೊ ವಿಚಿತ್ರಗಳು ಇರಬೇಕಾದರೆ ಕಲರ್ ವ್ಯತ್ಯಸನು ಇರಬಹುದಲ್ವಾ

  ReplyDelete
 7. ರಾಜೀವ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...
  ಹೌದು ನನಗು ಮೊದಲು ಗೊತ್ತಿರಲಿಲ್ಲ... ಇಲ್ಲಿ ನೋಡಿದಮೇಲೆ ನೆ ಗೊತ್ತಾಗಿದ್ದು ..

  ReplyDelete
 8. ಥ್ಯಾಂಕ್ಸ್ SSK ರವರೆ .. ಹೀಗೆ ಬಂದು ಪ್ರೋಸ್ತಾಹಿಸುತ್ತಿರಿ..

  ReplyDelete
 9. ಧನ್ಯವಾದಗಳು ಶಿವೂ,,, ಖಂಡಿತ ಕೇಳಿ ಹೇಳುತ್ತೇನೆ....ಸಿಹಿ ಇದ್ದಾರೆ ಒಂದೆರಡು ತರಸಿಕೊಳ್ಳೋಣ

  ReplyDelete
 10. ನಿಮ್ಮ ಪ್ರತಿಕ್ರಿಯೆಗೆ ತುಂಬ ಧನಯವಾದಗಳು ರೂಪ...

  ReplyDelete
 11. ಗುರು ಅವರೆ,
  ಮತ್ತೊಂದು ವಿಸ್ಮಯದ ಪರಿಚಯ ಮಾಡಿಸಿದಕ್ಕೆ ಥ್ಯಾಂಕ್ಸ್. ಒಂದಕ್ಕಿಂತ ಒಂದು ಸೂಪರ್ ಕಲಾಕೃತಿಗಳು!!
  ಅವರು ಬಳಸಿರೋ ಆ ಆರೆಂಜ್ ಬಣ್ಣದ ಹಣ್ಣುಗಳು ಆರೆಂಜೆ (ಕಿತ್ತಲೆ/ಟ್ಯಾಂಜರೀನ್) ಇರಬೇಕು ಅಂತ ನನ್ನ guess... thou hemanth says orange coloured lemons which taste just like a lemon do occur..
  check this link
  http://www.freshplaza.com/news_detail.asp?id=15325

  ReplyDelete
 12. ಗುರು ಅವರೆ,
  "ನಿಂಬೇಹಣ್ಣಿನ ಬಿಲ್ಡಿಂಗ್ ಬಂತು ನೋಡು...
  ಅರೆ ಬಾಲು..ಅರೆ ಗುರು.."
  ಪ್ರತೀಬಾರಿ ಹೊಸ ಸಂಗತಿ ನಿಮ್ಮ ಬ್ಲಾಗಿನ ವೈಶಿಷ್ಟ್ಯ. ನೋಡಿ ಅವರು ನಿಂಬೆಯಲ್ಲೇ ಮೋಡಿಮಾಡಿ ಪ್ರವಾಸಿಗರನ್ನು ಆಕರ್ಷಿಸುತ್ತಾರೆ. ನಾವು ಮಾಡಲು ಇಲ್ಲಿ ಸಾಕಷ್ಟು ಸಂಗತಿಗಳಿದ್ದರೂ ಪ್ರವಾಸಿಗರನ್ನು ಆಕರ್ಷಿಸಲು ಹೆಣಗುತ್ತೇವೆ.
  ಧನ್ಯವಾದಗಳು.

  ReplyDelete
 13. ರೂಪಶ್ರಿ
  ನಿಮ್ಮ ಮಾಹಿತಿಗೆ ಧನ್ಯವಾದಗಳು... ನಾನು ಅದು orange ಇರಬೇಕು ಅಂತ ಅನ್ಕೊಂಡ್ ಇದ್ದೆ. ಆದರೆ ಇ ತರಹದ ನಿಂಬೆಹಣ್ಣು ಇದೆಯಂತೆ . ಹೆಚ್ಚಿನ ಮಾಹಿತಿಗಾಗಿ ನಾನು ಹುದುಕುತ್ತಿದೇನೆ....

  ReplyDelete
 14. ಮಲ್ಲಿಕಾರ್ಜುನ್.
  ನೀವು ಹೇಳುತ್ತಿರುವುದು ನಿಜ ಸರ್... ನಮಗೆ ಬೇಕಾಗಿರೋ ಎಲ್ಲ resources ಇದ್ರೂ ಕೂಡ ಸರಿಯಾಗಿ ಉಪಯೋಗಿಸಿಕೊಳ್ಳದೇ ವೇಸ್ಟ್ ಮಾಡುತ್ತಿದೇವೆ.... ಆದರೆ ಬೇರೆ ಕಡೆ... ಎಷ್ಟು ಇರುವುದೋ ಅಸ್ಟರಲ್ಲೇ ಏನೇನೊ ಮಾಡಲು ನೋಡುತ್ತಿರುತ್ತಾರೆ....ಎಂಥಹ ವಿಪರ್ಯಾಸ ಅಲ್ವ...

  ಗುರು

  ReplyDelete