ಹಿಮಾಲಯದ ತಪ್ಪಲಿನಲ್ಲಿ ತುಂಗನಾಥ್ ಕೆಳಗೆ ಚರ್ದಾಮ್ ಗೆ ಹೋಗುವ ದಾರಿಯಲ್ಲಿ ಸಿಗುವ ಒಂದು ಪುಟ್ಟ ಊರು ಮಂಡಲ್. ಇಲ್ಲಿನ ಪ್ರಸಿದ್ಧಿ ಚಿಕ್ಕ ಚಿಕ್ಕ ಪಕ್ಷಿಗಳು, ಮತ್ತು ಅವುಗಳ ಕಲರ್ ಕಲರ್ ಬಣ್ಣಗಳು. ಉತ್ತರಕಾಂಡ ಪ್ರವಾಸದ ಐದನೇ ದಿನ ... ಚೋಪ್ತ ವ್ಯಾಲಿ ಮತ್ತೆ ತುಂಗನಾಥ್ ಮೇಲೆ ಹೊಸದಾಗಿ ಬಿದ್ದಿದ್ದ ಹಿಮದ ರಾಶಿಯಲ್ಲಿ ಮಿಂದೆದ್ದು.. ಕೆಲವೊಮ್ಮೆ ರಾತ್ರಿಯಲ್ಲಿ ಚಳಿ ಅದು ಮೈನಸ್ 5 ಡಿಗ್ರಿ ಕೊರೆಯುವ ಚಳಿಯಲ್ಲಿ ರೂಮ್ ಹೀಟರ್ ಇಲ್ಲದಿರ ಗಡಗಡ ನಡುಗಿ ಮಲಗಿದ್ದ ಅನುಭವ ಹೊತ್ತು ಸ್ವಲ್ಪ ಬೆಚ್ಚಗಿದ್ದ ಈ ಊರಿಗೆ ಬಂದಾಗ ಬಿಸಿಲು ನೋಡಿ ಸ್ವಲ್ಪ ಗೆಲುವು ಬಂದಿತ್ತು....
ಇಲ್ಲಿ ಕಾಣ ಸಿಗುವ ಪಕ್ಷಿ ಸಂಕುಲ ಪಟ್ಟಿಯನ್ನು ಒಮ್ಮೆ ನೋಡಿ ಮರುದಿನದ ತಯಾರಿ ಮಾಡಿಕೊಂಡು ಅಣಿಯಾಗಿದ್ದೆವು.. ಡಿಸೆಂಬರ್ ಚುಮು ಚುಮು ಚಳಿಯ ಬೆಳಗಿನ ಜಾವ ಬೇಗನೆ ಎದ್ದು ತಯಾರಾಗಿ ಗೈಡ್ ಜೊತೆ ಹೆಜ್ಜೆ ಹಾಕುತ್ತಾ ಇದ್ದೆವು... ರೋಡ್ ಪಕ್ಕದಲ್ಲೇ ನಮ್ಮನ್ನು ನಿಲ್ಲಿಸಿದ ನಮ್ಮ ಗೈಡ್ ರಾಹುಲ...
ಇನ್ನು ಬೆಳಕು ಆಗಿರಲಿಲ್ಲ... ಕತ್ತಲು ಕತ್ತಲು ಮಬ್ಬು ಹಾಗೆ ಇತ್ತು.. ಸುತ್ತಲೂ ಬೆಟ್ಟಗಳ ಗುಂಪು ಮದ್ಯ ಈ ಹಳ್ಳಿ.... ಸಮಯ 6 ಘಂಟೆ ಸುಮಾರು ಆಗ ನಿಧಾನಕ್ಕೆ ಬೆಳಕು ಬರಲು ಶುರು ಆಗಿತ್ತು.... ನಮ್ಮ ರಾಹುಲ್ ಆ ಸಣ್ಣ ಬೆಳಕಿನಲ್ಲೇ ಬೆನಾಕ್ಯುಲರ್ ಹಿಡಿದು ಯಾವುದೋ ಮರಗಳ ಮೇಲೆ ನೋಡುತ್ತಾ ಇದ್ದ.... ಇದ್ದಕಿದ್ದಂತೆ ನಮಗೆ ಸನ್ನೆ ಮಾಡಿ ಕ್ಯಾಮರಾ ರೆಡಿ ಇಟ್ಕೊಳಕ್ಕೆ ಹೇಳ್ದ... ಸ್ವಲ್ಪ ಸ್ವಲ್ಪ ಬೆಳಕು ಮೂಡ್ತಾ ಇತ್ತು... ಒಂದೆರಡು ನಿಮಿಷಗಳ ನಂತರ. ಎದುರಿಗೆ ಕಾಣುತ್ತಾ ಇದ್ದ ಮರದ ಮೇಲೆ ಫೋಕಸ್ ಮಾಡಿ ಇರಿ ಬೇಗ ಅಂದ.... ಅವನಿಗೆ ಯಾವುದೋ ಒಂದು ಪಕ್ಷಿ ಬರುವ ಮುನ್ಸೂಚನೆ ಸಿಕ್ಕಿತ್ತು....ಆದರೆ ನಮ್ಮ ಕಣ್ಣಿಗೆ ಕಾಣಿಸುತ್ತಾ ಇರಲಿಲ್ಲ.... ಇನ್ನೊಂದೆರಡು ನಿಮಿಷಗಳ ನಂತರ... ಹೋ ಬಂತು ಬಂತು... ಉದರ್ ದೇಕೊ ಅಂದ... ಅರೆ ಅರೆ....ನಾನು ಕ್ಯಾಮರಾ ಹಿಡ್ಕೊಂಡು ರೆಡಿ ಆಗಿದ್ದೆ.... ಎಲ್ಲಿತ್ತೋ ಒಂದು ಪುಟ್ಟ ಕೆಂಪು ಪಕ್ಷಿಗಳ ಗುಂಪು... ಸರ್ರ್ ಸರ್ರ್ ಎಂದು ಹಾರಿ ಬಂದು ನಮ್ಮ ಎದುರಿಗಿದ್ದ ಮರಗಳ ಮೇಲೆ ಬಂದು ಕೂತಿತು... ಸುಮಾರು ಪಕ್ಷಿ ಗಳು ಇದ್ದವು.... ಅದು ಚಿತ್ರ ಪಕ್ಷಿ (scarlet finch) ಮೊದಲ ಬಾರಿ ಅದನ್ನು ನೋಡ್ತಾ ಇದ್ದದ್ದು ಸೊ ನನ್ನ ಕುತೂಹಲ ಎಲ್ಲೋ ಹೋಗಿತ್ತು.... ಮೊದ ಮೊದಲು ದಟ್ಟ ಮರಗಳ ಒಳಗೇ ಇದ್ದ ಈ ಚಿತ್ರ ಪಕ್ಷಿಗಳ ಗುಂಪು ನಿಧಾನಕ್ಕೆ ಹೊರಗೆ ಬರಲು ಶುರು ಮಾಡಿತು.. ಒಂದೆರಡು ಪುಟ್ಟ ಹಕ್ಕಿಗಳು ಒಳ್ಳೆ ಯಾವುದೋ ಹಣ್ಣಿನ ತರಹ ಕೂತಿದ್ದ ಹಾಗೆ ಕಾಣುತ್ತ ಇತ್ತು...ಸ್ವಲ್ಪ ದೂರ ಇದ್ದರು ಅದರ ಅಂದ ಚೆಂದಕ್ಕೆ ಮನಸೋತು....ಕಣ್ಣಾರೆ ನೋಡಿ ಕ್ಯಾಮರಾ ನಲ್ಲಿ ಒಂದಷ್ಟು ಫೋಟೋ ತೆಗೆದುಕೊಂಡು ಅದರ ಚಲನ ವಲನ ರೆಕಾರ್ಡ್ ಮಾಡಿಕೊಳ್ಳುತ್ತಾ ಇದ್ದೆವು...
ಕೆಂಪು ಚಿತ್ತಾರದ ಚಿತ್ರ ಪಕ್ಷಿ -Scarlet Finch
ಒಂದು ನಾಲ್ಕು ಐದು ನಿಮಿಷ ಅಷ್ಟೇ ಇದ್ದದ್ದು.. ಆಮೇಲೆ ಅದರ ಆಹಾರ ಹುಡುಕಿಕೊಂಡು ಅಲ್ಲೇ ಕೆಳಗಿನ ಪೊದೆಗಳ ಒಳಗೆ ಮಾಯವಾಯಿತು....
ನಮ್ಮ ಗೈಡ್ ಗೆ ಅದರ ಬರುವಿಕೆ ಗೊತ್ತಿತ್ತು ಅಂಥ ಕಾಣುತ್ತೆ ಸರಿಯಾದ ಸಮಯಕ್ಕೆ ನಮ್ಮನ್ನು ಕರೆದು ಕೊಂಡು ಬಂದಿದ್ದ....wow ಎಂತಹ ಅದ್ಬುತ ಪುಟ್ಟ ಹಕ್ಕಿಗಳು....ಸ್ವಲ್ಪ ಹೊತ್ತಿನ ಬೇರೆ ಬೇರೆ ಪಕ್ಷಿ ಹುಡುಕಾಟದ ನಂತರ...ಕೆಳಗೆ ಇನ್ನಷ್ಟು ಸಮೀಪದಲ್ಲೇ ಇವು ಮತ್ತೆ ಸಿಕ್ಕಾಗ ಆದ ಆನಂದ ಅಷ್ಟಿಷ್ಟಲ್ಲ ... ತುಂಬಾ ನಾಚಿಕೆ ಸ್ವಭಾವದವೂ ಹತ್ತಿರದಲ್ಲಿ ಕಾಣಿಸುವುದು ಬಲು ಅಪರೂಪ.. ಒಂದಷ್ಟು ಒಳ್ಳೆಯ ಫೋಟೋಗಳನ್ನು ತೆಗೆದು ಚಿತ್ರಪಕ್ಷಿ scarlett finch ಗೆ ಟಾಟಾ ಮಾಡಿ ಮುಂದುವರಿದೆವು...
#scarletfinch #birdslover #ಪಕ್ಷಿ #ಪಕ್ಷಿಪರಿಚಯ
No comments:
Post a Comment