Tuesday, May 5, 2009

ಭಾನುವಾರದ ಸುಂದರ ಸಂಜೆ.....

ಲಾಸ್ಟ್ ವೀಕ್. ಫ್ರೈಡೆ ಮೇ day ಇದ್ದದರಿಂದ 3 days ಲಾಂಗ್ ವೀಕ್ ಎಂಡ್ ಸಿಕ್ಕಿತ್ತು.... ಎಲ್ಲಾದರು ಹೊರಗಡೆ ಹೋಗೋಣ ಅಂತ, ಮೊದಲೇ ಪ್ಲಾನ್ ಮಾಡ್ತಾ ಇದ್ದೆ.. ಆದರೆ ನನ್ bad luck,,, ಫ್ರೈಡೆ ಮೇ ಡೇ ದಿನ ವರ್ಕ್ ಮಾಡಬೇಕಾಗಿ ಬಂತು.... ಯಾವುದೊ ಒಂದು emergency issue.... ಸರಿ ಇನ್ನು ಏನ್ ಮಾಡೋದು ಅಂತ ಹೋಗಿ ಬಂದೆ.... saturday ಬರಿ ರೆಸ್ಟ್ ತಗೊಂಡು ಹಾಗೆ ಹೀಗೆ ಟೈಮ್ ಪಾಸ್ ಆಗಿಹೋಯ್ತು .... ಇನ್ನು ಸಂಡೇ, ಏನು ಪ್ಲಾನ್ಸ್ ಇರಲಿಲ್ಲ....IPL matches ಮತ್ತೆ ಯವುದಾದರು ಟಿವಿ ನಲ್ಲಿ ಮೂವಿ ನೋಡಿಕೊಂಡ್ ಇರೋಣ ಅಂತ ಡಿಸೈಡ್ ಮಾಡಿದ್ದೆ..

ಆದರೆ ಅವೊತ್ತು ಬೆಳಿಗ್ಗೆ ನನ್ನ ಬೆಸ್ಟ್ ಫ್ರೆಂಡ್ ಒಬ್ಬರು ಫೋನ್ ಮಾಡಿದ್ರು... "ಗುರು ಬೇಜಾರ್ ಆಗ್ತಾ ಇದೆ ಕಣೋ ಎಲ್ಲಾದರು ಹೋಗೋಣ್ವಾ ಇವೊತ್ತು" ಅಂತ..
ಸರಿ ನಾನು ಓಕೆ ಅಂದೆ..... ಆದರೆ ಎಲ್ಲಿಗೆ ಹೋಗೋದು.....ಯಾವುದಾದರು filmge ಹೋಗೋಣ್ವಾ ಅಂತ ಕೇಳಿದೆ..(ಆದರೆ ನನಗೆ ಇಷ್ಟ ಇರಲಿಲ್ಲ,) ಪಾಪ ಅವರಿಗೆ ಯಾಕೆ ಬೇಜಾರ್ ಮಾಡಬೇಕು ಅಂತ ಕೇಳಿದೆ.. ನನ್ನ ಫ್ರೆಂಡ್ ಗು ಇಷ್ಟ ಇರಲಿಲ್ಲ,, ಬೇಡ ಕಣೋ ಅಂತ ಹೇಳಿದ್ಲು... ಸರಿ ನೀನೆ ಹೇಳು ಎಲ್ಲಿಗೆ ಹೋಗೋಣ ಅಂತ ಅಂದೆ.. ಬರಿ ಎಲ್ಲಿಗೆ ಹೋಗೋದು ಅಂತಾನೆ ಟೈಮ್ ವೇಸ್ಟ್ ಮಾಡಿದ್ವಿ .... ಮೂವಿ ಗೆ ಇಷ್ಟ ಇಲ್ಲ, ಇನ್ನು ಯಾವುದಾದರು ಮಾಲ್ ಗೆ ಹೋಗೋಣ ಅಂದ್ರೆ ಬೇಜಾರು... ಬರೀ ಗಜಿ ಬಿಜಿ... ಸ್ವಲ್ಪ ಹೊತ್ತು ನೆಮ್ಮದಿ ಆಗಿ ಕೂತುಕೊಂಡ್ ಬರೊ ಜಾಗ ಯಾವುದು ಇದೆ ನಮ್ ಬೆಂಗಳೂರಿನಲ್ಲಿ ಅಂತ ಯೋಚನೆ ಮಾಡಿ... ಕೊನೆಗೆ ನಾನೇ ಹೇಳಿದೆ.. ನಿಂಗೆ ಹೇಗಿದ್ರು ಬೇಜಾರು ಅಂತ ಹೇಳ್ತಾ ಇದ್ದೀಯ .. ನಾನು ಒಂದು ಪ್ಲೇಸ್ ಗೆ ಕರ್ಕೊಂಡ್ ಹೋಗ್ತೀನಿ ಸುಮ್ನೆ ಬಾ ಅಲ್ಲಿಗೆ ನಿನಗೆ ನೆಮ್ಮದಿ ಸಿಗುತ್ತೆ ಅಂತ ಹೇಳ್ದೆ.... ಅದಕ್ಕೆ ಓಕೆ ಅಂತ ಹೇಳಿದ್ಲು ... ಇವಾಗ ಹೋದ್ರೆ ತುಂಬ ಬಿಸಿಲು ಇರುತ್ತೆ ಸಂಜೆ ಮೇಲೆ ಹೋಗೋಣ ಅಂತ ಹೇಳ್ದೆ.. ನಂಗು ಸ್ವಲ್ಪ ಕೆಲಸ ಇದೆ ಅದನ್ನ ನಾನು ಮಧ್ಯಾನದ ಹೊತ್ತಿಗೆ ಮುಗಿಸಿಕೊಂಡು 4 ಗೆ ಇಲ್ಲಿಂದ ಹೊರಡೋಣ ಅಂತ ಡಿಸೈಡ್ ಮಾಡಿ ಆಯಿತು .

actually ನಾನು ಹೋಗ್ಬೇಕು ಅಂತ ಅನ್ಕೊಂಡ್ ಇದ್ದದ್ದು " ವಿಶ್ವ ಶಾಂತಿ ಆಶ್ರಮ " ನೆಲಮಂಗಲಕ್ಕೆ ಹತ್ರ ಇದೆ... ಇಲ್ಲಿಂದ ಒಂದು 20 KM ಆಗ್ಬೋದು... ತುಮಕೂರು ರೋಡಿನಲ್ಲಿ..ಸಿಗುತ್ತೆ.. ನಾನು ಬೈಕ್ ರೈಡ್ ಮಾಡಿ ತುಂಬ ದಿನ ಆಗಿತ್ತು,, ಸರಿ ಬೈಕ್ ನಲ್ಲೆ ಹೋಗೋಣ ಅಂತ ಹೇಳಿ ಕರಕೊಂಡು ಹೋದೆ... ಸಂಡೇ ಮಧ್ಯಾನ ಅಸ್ತೊಂದ್ ಟ್ರಾಫಿಕ್ ಇರಲಿಲ್ಲ... ನಮ್ಮ ಬಸವೇಶ್ವರನಗರದಿಂದ 30 - 35 ನಿಮಿಷಕ್ಕೆಲ್ಲ ಅಲ್ಲಿಗೆ ಹೋಗಿ ತಲುಪಿದೆವು ... ನಾನು ಮೊದಲು ಇದನ್ನ ನೋಡಿರಲಿಲ್ಲ ತುಂಬ ದಿನ ದಿಂದ ನೋಡ್ಬೇಕು ಅಂತ ಅನ್ಕೊತಾ ಇದ್ದೆ. ಇವಾಗ ಅವಕಾಶ ಆಯಿತು....
ನಿಜವಾಗ್ಲೂ,,, ತುಂಬ ಪ್ರಶಾಂತ ವಾದ ವಾತವರಣ.....ಮನಸಿಗೆ ಬೇಜಾರ್ ಆಗಿದ್ದರೆ..ಸ್ವಲ್ಪ ನೆಮ್ಮದಿ ಬೇಕು ಅಂತ ಅನ್ನಿಸಿದರೆ... ಒಮ್ಮೆ ಹೋಗಿ ಬನ್ನಿ, ತುಂಬ ನೆಮ್ಮದಿ ಇರುತ್ತೆ.

luckyly ಬಿಸಿಲು ಜಾಸ್ತಿ ಇರಲಿಲ್ಲ ತಣ್ಣಗೆ ಇತ್ತು ಬಾನುವಾರದ ಸಂಜೆ.... ಅಲ್ಲಿ ಹೋಗಿ,, ಮೊದಲು ಪಾಂಡುರಂಗನ ಧರ್ಶನ ಪಡೆದು...ಅಲ್ಲೇ ಇರುವ ಆಸ್ಟ ಲಕ್ಷ್ಮಿ ದೇವತೆಗಳ ಧರ್ಶನ ಮಾಡಿಕೊಂಡು... ಒಳಗಡೆ ಹೋದ್ವಿ... ಮೊದಲು ಒಂದು ಅದ್ಬುತ ವಾದ ಶಿಲಾ ಬಾಲಿಕೆಯರು attract ಮಾಡಿದರು .. actually ಇದು ಸಪ್ತ ನದಿಗಳ ಸಂಗಮ... ಗಂಗಾ, ಯಮುನಾ ,ಗೋದಾವರಿ, ಸರಸ್ವತಿ, ನರ್ಮದಾ, ಸಿಂದು, ಕಾವೇರಿ, ಇವರುಗಳ ಸುಂದರ ಶಿಲ್ಪಗಳು .... ತುಂಬ ಚೆನ್ನಾಗಿ ಮಾಡಿದ್ದಾರೆ .... ಅದನ್ನು ನೋಡಿ ಹಿಂದೆ ತಿರುಗಿದರೆ... ಕಾಣುತ್ತೆ ಒಂದು ಅದ್ಬುತ ಶಿಲ್ಪ ಬೃಹದಾಕಾರದ 4 ಅಶ್ವಗಳು ...ಅರ್ಜುನನ ರಥವನ್ನು ಎಳೆಯುತ್ತಿರುವ ದೃಶ್ಯ ....ಅದರಲ್ಲಿ ಶ್ರೀ ಕೃಷ್ಣ ಪರಮಾತ್ಮ ಸಾರಥಿ.....ಅದರ ಜೊತೆಗೆ ಅಂದರೆ ಕೆಳಗಡೆ ಇರುವ ಗಾಯತ್ರಿ ದೇವಿಯ ದೇವಸ್ತಾನ.....ಅಲ್ಲಿಂದ ಮೇಲೆ ಬಂದರೆ ....ಶ್ರೀ ಕೃಷ್ಣ ಪರಮಾತ್ಮ ಅರ್ಜುನನಿಗೆ ತೋರಿಸಿದ ವಿಶ್ವರೂಪ ಧರ್ಶನ.... ಅಹಾ ಇದನ್ನು ನೋಡಲು ಎರಡು ಕಣ್ಣು ಸಾಲದು....ತುಂಬ ಚೆನ್ನಾಗಿ ಮೂಡಿ ಬಂದಿದೆ ಈ ಶಿಲ್ಪದ ಕೆತ್ತನೆ.. ಶ್ರೀ ಕೃಷ್ಣ ಪರಮಾತ್ಮ ತೋರಿಸಿದ ವಿಶ್ವ ರೂಪ ಧರ್ಶನದ ಪ್ರತಿ ಮುಖಗಳು ಸ್ಪಷ್ಟ ವಾಗಿ ಎಷ್ಟು ಚೆನ್ನಾಗಿ ಮೂಡಿ ಬಂದಿದೆ ಗೊತ್ತ.. ಅದನ್ನು ನೋಡೆ ಆನಂದಿಸ ಬೇಕು.... ಅಲ್ಲೇ ಸ್ವಲ್ಪ ಹೊತ್ತು ಅದನ್ನ ನೋಡುತ್ತಾ ಕುಳಿತಿದ್ದೆವು,, ಟೈಮ್ ಹೋಗಿದ್ದೆ ಗೊತ್ತಾಗಲಿಲ್ಲ.. ಸೈಲೆಂಟ್ ಆಗಿ ಇತ್ತು... ಹಾಗೆ ಕೆಳಗೆ ಗಾಯತ್ರಿ ದೇವಿಯ ಹತ್ರ ಸ್ವಲ್ಪ ಹೊತ್ತು ಧ್ಯಾನ ಮಾಡ್ತಾ ಕುಳಿತಿದ್ದೆವು,, ಮನಸ್ಸಿಗೆ ಏನೋ ಒಂದು ಥರ ನೆಮ್ಮದಿ.... ಆಹಾ...ಎಷ್ಟು ಪ್ರಶಾಂತ ವಾಗಿ ಇತ್ತು ಗೊತ್ತ ....
ಅದಾದಮೇಲೆ ಅಲ್ಲೇ ಕೆಳಗಡೆ ಹುಲ್ಲು ಹಾಸಿನ ಮೇಲೆ ಬಂದು ಮಾತಾಡ್ತಾ ಸ್ವಲ್ಪ ಹೊತ್ತು ಇದ್ವಿ... ಮಳೆ ಬರುವ ಹಾಗೆ ಇತ್ತು,, ಆದರೆ ಮಳೆ ಬರಲಿಲ್ಲ.. ಬಿಸಿಲು ಅಸ್ಟು ಇರಲಿಲ್ಲ.. ತಣ್ಣಗೆ ತಂಪಾದ ಗಾಳಿ ಬೀಸುತ್ತ ಇತ್ತು... ಅಲ್ಲೇ ಹತ್ತಿರದಿಂದ ಗಾಯತ್ರಿ ದೇವಿಯ ಸ್ತೋತ್ರ ಕೇಳಿ ಬರುತ್ತಾ ಇತ್ತು.... ಹಾಗೆ ಸುಬ್ಬುಲಕ್ಷ್ಮಿ ಅವರ ಹಾಡು....ಅಂತು ಒಂದು ಒಳ್ಳೆ ಸಂಜೆ ನೆಮ್ಮದಿ ಇಂದ ಕಳೆದ ಅನುಭವ ಆಯಿತು..... ಆಮೇಲೆ ಕೇಳಿದೆ ನನ್ನ ಫ್ರೆಂಡ್ ಅನ್ನು,,, ಇಷ್ಟ ಆಯ್ತಾ ಈ ಪ್ಲೇಸ್ ಅಂತ .... ನನ್ ಫ್ರೆಂಡ್ ಅಂತು ಫುಲ್ ಖುಷಿ .... ನಿಜವಾಗ್ಲೂ ತುಂಬ ನೆಮ್ಮದಿ ಅನ್ನಿಸ್ತಾ ಇದೆ ಕಣೋ,, ಎಸ್ಟೋ ದಿನ ಆಗಿತ್ತು ಈ ಥರ ಒಳ್ಳೆ ಸಂಜೆ ಕಳೆದು ಅಂತ ಹೇಳಿದ್ಲು. ಅವಳು ಇದನ್ನ ನೋಡಿರಲಿಲ್ಲ.. ಗಾಯತ್ರಿ ದೇವಿ, ವಿಶ್ವರೂಪ ಧರ್ಶನದ ಪ್ರತಿಮೆ... ಸಪ್ತ ಸಾಗರ ಕನ್ಯೆಯರನ್ನು ನೋಡಿ ತುಂಬ ಖುಷಿ ಪಟ್ಟಿದ್ರು.... ಅಲ್ಲೇ ಸ್ವಲ್ಪ ಹೊತ್ತು ಕೂತು 7:30 ಗೆ ವಾಪಾಸ್ ಬೆಂಗಳೂರು ಎಂಬ ಟ್ರಾಫಿಕ್ ಸಿಟಿ ಕಡೆ ಹೊರಟೆವು.....
ನೀವು ಒಮ್ಮೆ ನೋಡಿ ಬನ್ನಿ ಟೈಮ್ ಸಿಕ್ಕಾಗ... ತುಂಬ ಚೆನ್ನಾಗಿ ಇದೆ...







ಪಾಂಡುರಂಗ ಸ್ವಾಮಿ ವಿಗ್ರಹ ......

ಸಪ್ತ ನದಿಗಳ ಸಂಗಮ... ಗಂಗಾ, ಯಮುನಾ ,ಗೋದಾವರಿ, ಸರಸ್ವತಿ, ನರ್ಮದಾ, ಸಿಂದು, ಕಾವೇರಿ, ಇವರುಗಳ ಸುಂದರ ಶಿಲ್ಪಗಳು



ಶ್ರೀ ಕೃಷ್ಣ ಪರಮಾತ್ಮ ಭಗವದ್ಗೀತ ಹೇಳುತ್ತಿರುವ ದೃಶ್ಯ .....

ಸಪ್ತ ಋಷಿಗಳ ಸಂಗಮ.....






ಶ್ರೀ ಗಾಯತ್ರಿ ದೇವಿಯ ದಿವ್ಯ ಸನ್ನಿದಿ......
ಶ್ರೀ ಕೃಷ್ಣ ಪರಮಾತ್ಮನ ವೀರಾಟ್ ವಿಶ್ವ ರೂಪ ಧರ್ಶನ..........








ಸಪ್ತ ಸಾಗರ ಕನ್ಯೆಯರ ರಾತ್ರಿಯ ನೋಟ.......

(ಬೆಂಗಳೂರು ತುಮಕೂರು ಹೆದ್ದಾರಿಯಲ್ಲಿ... ನೆಲಮಂಗಲಕ್ಕೆ ಎಡಕ್ಕೆ ತಿರುಗುವ ಬದಲು ಸ್ವಲ್ಪ ಮುಂದೆ ಹೋಗಿ,, ಅಲ್ಲೇ ಬಲಗಡೆ ವಿಶ್ವ ಶಾಂತಿ ಆಶ್ರಮ ಅಂಥ ಬೋರ್ಡ್ ಕಾಣುತ್ತೆ.. ಕಾರ್ ಮತ್ತೆ 2 ವ್ಹೀಲರ್ ಪಾರ್ಕಿಂಗ್ ಗೆ ಜಾಗ ಇದೆ ... ಒಳಗಡೆ ಹೋಗಲಿಕ್ಕೆ ಎಂಟ್ರಿ ಫೀಸು ಬರಿ 2 ರೂಪಾಯಿಗಳು ಮಾತ್ರ... ನೀವು ಏನಾದರೂ ಕ್ಯಾಮೆರಾ ತೆಗೆದುಕೊಂಡು ಹೋಗಿದ್ದಾರೆ 20 ರೂಪಾಯಿಗಳು ಕೊಡಬೇಕು ಕ್ಯಾಮೆರಾ fee ಅಂಥ... ಯಾವುದಾದರು ಒಂದು ಸಂಜೆ ನೆಮ್ಮದಿಯಿಂದ ಕಳೆಯಲು ಆರಾಮವಾಗಿ ಹೋಗಿ ಬರಬಹುದು.)
ಗುರು

13 comments:

  1. ಗುರು
    ಚಿತ್ರ-ಲೇಖನ ತು೦ಬಾ ಚೆನ್ನಾಗಿದೆ. ನಾನೊಮ್ಮೆ ಅಲ್ಲಿಗೆ ಹೋಗಿ ಬ೦ದಿದ್ದೇನೆ, ನಿಮ್ಮ ಬ್ಲಾಗ್ ನೋಡಿದ ನ೦ತರ ಇನ್ನೊಮ್ಮೆ ಹೋಗಬೇಕೆನಿಸಿದೆ.

    ReplyDelete
  2. ಗುರು,
    ನಿಮ್ಮ ಲೇಖನ, ಚಿತ್ರಗಳು ಎಲ್ಲವನ್ನು ನೋಡಿ ತುಂಬಾ ತುಂಬಾ ಖುಷಿ ಆಯ್ತು ಏಕೆ ಗೊತ್ತೆ..ನನ್ನ ನೆಚ್ಚಿನ ಸ್ಥಳ ಅದು ನಾವು ಯಾವಾಗಲೂಹೋಗುತ್ತಲಿರುತ್ತೇವೆ ನಮ್ಮ ಊರು ಅಲ್ಲಿಗೆ ತುಂಬಾ ಹತ್ತಿರ ಆಗಾಗ ಹೋಗುತ್ತಲೇ ಇರುತ್ತೇವೆ....... ತುಂಬ ಚೆನ್ನಾಗಿರುತ್ತೆ ಮನಸ್ಸಿಗೆ ಮುದನೀಡೋ ಸ್ಥಳ..... ಎಲ್ಲರೂ ನೋಡ ಬೇಕಾದ್ದೇ ಸರಿ... ಮತ್ತೆ ಬೆಂಗಳೂರಿಗರಿಗೆ ಸುತ್ತ ಮುತ್ತಲಿರೋ ಸ್ಥಳಗಳು ಗೊತ್ತೇ ಇರೋಲ್ಲ ಇಂತಹ ಸ್ಥಳ ಪರಿಚಯಿಸಿದ್ದಕ್ಕೆ ಧನ್ಯವಾದಗಳು...... ಈ ಭಾರಿ ಬೆಂಗಳೂರಿಗೆ ಹೋದಾಗ ಮತ್ತೊಮ್ಮೆ ಹೋಗಿ ಬರುವ ಆಸೆಯಾಗಿದೆ..
    ವಂದನೆಗಳು
    ಶುಭದಿನ.
    ಮನಸು

    ReplyDelete
  3. ಥ್ಯಾಂಕ್ಸ್ ಪರಾಂಜಪೆ,, ಮತ್ತೊಮ್ಮೆ ಹೋಗಿ ಬನ್ನಿ
    ಗುರು

    ReplyDelete
  4. ಹೆಲೋ ಮನಸು...
    ಈ ಸ್ಥಳ ನಿಮಗೆ ಇಷ್ಟ ಅಂತ ಕೇಳಿ ಸಂತೋಷ ಆಯಿತು... ಅಲ್ಲೇ ಹತ್ತಿರವಿರುವ ಊರು ಅಂತ ಹೇಳಿದಿರಿ....ಯಾವ ಊರು . ಇಲ್ಲಿಗೆ ಬಂದಾಗ ಇನ್ನೊಮ್ಮೆ ಹೋಗಿ ಬನ್ನಿ. ಹೌದು ಬೇರೆ ಕಡೆ ಇಂದ ಬಂದವರಿಗೆ ಇಂಥ ಸ್ಥಳ ಗೊತ್ತಿರುವುದಿಲ್ಲ.. ನಾವು ಹೋದಾಗ ತಿಳಿಸಿ ಹೇಳಿದರೆ .ಹೋಗಿ ಬರೋಕ್ಕೆ ಅನುಕೂಲ ಆಗುತ್ತೆ ಅಂತ ನಾನು ನನ್ನ ಬ್ಲಾಗಿನಲ್ಲಿ ಅಪ್ಲೋಡ್ ಮಾಡಿದ್ದೇನೆ..

    ಗುರು

    ReplyDelete
  5. ವೆರಿಗುಡ್ ಗುರು..ಓದಿ, ನೋಡಿ ತುಂಬಾ ಖುಷಿಪಟ್ಟೆ. ಬರುವ 15 ದಿನಗಳೊಳಗೆ ವಿಶ್ವ ಶಾಂತಿ ಆಶ್ರಮಕ್ಕೆ ಭೇಟಿ ನೀಡಲು ನಿರ್ಧರಿಸಿದ್ದೇವೆ. ನಿಮ್ ಬ್ಲಾಗ್ ಅದಕ್ಕೆ ಸ್ಫೂರ್ತಿ ಥ್ಯಾಂಕ್ಯೂಊಊಊ!!

    ತುಂಬಾ ಒಳ್ಳೆಯ ಜಾಗ ಅಲ್ವಾ? ಈ ಬೆಂಗಲೂರು ಮೈನ್ ಪ್ಲೇಸ್ ಗಳಲ್ಲಿ ಎಷ್ಟು ಉದ್ಯಾನಗಳಿದ್ರೂ ಅಲ್ಲಿ ಹೋಗಿ ನೆಮ್ಮದಿಯಿಂದ ಟೈಮ್ ಪಾಸ್ ಮಾಡೋಣ ಅಂದ್ರೆ ಅದೂ ಕಷ್ಟ.

    ಅಂತೂ-ಇಂತೂ ಒಳ್ಳೆ ಮಾಹಿತಿ, ನೀವು ಕೂಡ ರಜಾದಿನವನ್ನು ಖುಷಿ ಖುಷಿಯಿಂದ ಕಳೆದ್ರಿ ಅಲ್ವಾ?

    ಅಭಿನಂದನೆಗಳು

    -ಧರಿತ್ರಿ

    ReplyDelete
  6. ನಾನು ನೋಡಿದೀನಿ ಗುರು,
    ಅಯ್ಯಪ್ಪ ಸ್ವಾಮಿ ಯಾತ್ರೆ ಮಾಡಿ ವಾಪಸ್ ಮರುಳುವಾಗ, ಇಲ್ಲಿಗೆ ಭೇಟಿ ಕೊಟ್ಟು ಬಂದಿದ್ವಿ..
    ತುಂಬಾ ಚನ್ನಾಗಿದೆ...

    ReplyDelete
  7. ಧರಿತ್ರಿ
    ಹಾಂ ಖಂಡಿತವಾಗಲು ಹೋಗಿ ಬನ್ನಿ ನಿಮಗೆ ಇಷ್ಟ ಆಗುತ್ತೆ. ಇಲ್ಲಿಗೆ ಹೋಗೋಕ್ಕೆ ನನ್ನ ಬ್ಲಾಗ್ ಸ್ಫೂರ್ತಿ ಅಂದ್ರಲ್ಲ ಥ್ಯಾಂಕ್ಸ್.
    ಹೌದು ನಾನಂತು ತುಂಬ ನೆಮ್ಮದಿ ಇಂದ enjoye ಮಾಡಿ ಬಂದೆ...

    ಗುರು

    ReplyDelete
  8. ಹೌದು ಶಿವಪ್ರಕಾಶ್, ತುಂಬ ಚೆನ್ನಾಗಿ ಇದೆ ಅಲ್ವ ಈ ಪ್ಲೇಸ್..

    ಧನ್ಯವಾದಗಳು
    ಗುರು

    ReplyDelete
  9. ಗುರು,

    ನೀವು ಹೋಗಿರುವ "ವಿಶ್ವ ಶಾಂತಿ ಆಶ್ರಮ " ತುಂಬಾ ಚೆನ್ನಾಗಿದೆ...ನನ್ನ ಫೇವರೇಟ್ ಪ್ಲೇಸ್ ಕೂಡ. ನಾನು ಆಗಾಗ ಅಲ್ಲಿಗೆ ಹೋಗುತ್ತಿರುತ್ತೇನೆ...ಅಲ್ಲಿ ಹೋಗಿ ಒಂದೆರೆಡು ಗಂಟೆ ಕಳೆದರೆ ಮನಸ್ಸಿಗೆ ತುಂಬಾ ರೆಲ್ಯಾಕ್ಸ್ ಆಗುತ್ತೆ...ಮತ್ತೆ ನೀವು ಬಲಬಾಗದಲ್ಲಿರುವ ಶಿವಾಲಯಕ್ಕೆ ಹೋಗಲಿಲ್ಲವೆನಿಸುತ್ತದೆ. ಅಲ್ಲಿ ಒಂದು ಹತ್ತು ನಿಮಿಷ ಕುಳಿತು ದ್ಯಾನ ಮಾಡಿದರೆ ಅದರ ಅನುಭವವೇ ಬೇರೆ...ಮತ್ತೊಮ್ಮೆ ಹೋದಾಗ ಪ್ರಯತ್ನಿಸಿ...

    ಉಪಯುಕ್ತವಾದ ಮಾಹಿತಿಯುಳ್ಳ ಚಿತ್ರ-ಲೇಖನಕ್ಕಾಗಿ ಧನ್ಯವಾದಗಳು...

    ReplyDelete
  10. ತುಂಬ ಥ್ಯಾಂಕ್ಸ್ ಶಿವೂ ಚಿತ್ರ ಲೇಖನ ಮೆಚ್ಚಿದ್ದಕ್ಕೆ . ಹೌದು,, ನಾವು ಶಿವಾಲಯಯಕ್ಕೆ ಹೋಗಲಿಲ್ಲ ಅನ್ನಿಸುತ್ತೆ,, next time ಹೋದಾಗ ಖಂಡಿತ ಹೋಗಿ ಬರುವೆ...

    ReplyDelete
  11. ಆಶ್ರಮ ನೋಡಬೇಕೆನಿಸಿತು.

    ನಿಮ್ಮ ಊಹೆ ಸರಿ. ನಾನು ವಿ.ಕ.ದಲ್ಲೇ ಕೆಲಸ ಮಾಡುವುದು. ಆದ್ದರಿಂದ ನನ್ನ ಲೇಖನಗಳು (ಕೆಲವು)ಮೊದಲು ಅಲ್ಲಿ ನೋಡಿರುತ್ತೀರಿ.(ನನ್ನ ಲೇಖನಕ್ಕೆ ನೀವು ನೀಡಿರುವ ಪ್ರತಿಕ್ರಿಯೆಗೆ ಧನ್ಯವಾದ ಹೇಳುತ್ತಾ...)

    ReplyDelete
  12. ರಜನಿ,
    ಧನ್ಯವಾದಗಳು ... ಮೊದಲು ನಿಮ್ಮ ಪ್ರೊಫೈಲ್ ನೋಡಿರಲಿಲ್ಲ,, ಆಮೇಲೆ ಗೊತಾಯ್ತು .....
    ಗುರು

    ReplyDelete
  13. ಎಷ್ಟು ದಿನದಿ೦ದ ಇಲ್ಲಿಗೆ ಹೋಗಬೇಕು ಅನ್ಕೊತಾ ಇದೀನಿ, ಇನ್ನು ಅನ್ಕೊತಾನೆ ಇದೀನಿ :( ಈ ನಿಮ್ಮ ಲೇಖನ ನೋಡಿದಮೇಲೆ ಹೋಗಲೇಬೇಕು ಅನಿಸ್ತಿದೆ.

    ReplyDelete