Saturday, May 16, 2009

ದೊಡ್ಡ ಆಲದ ಮರ ಧರೆಗೆ ಉರುಳಿದಾಗ...........


ಶುಕ್ರವಾರ ಬೆಳಿಗ್ಗೆ... ನಾನು ಏಳುವುದು ತುಂಬ ತಡವಾಗಿತ್ತು....ರಾತ್ರಿ ಕೆಲಸ ಇತ್ತು ಅಂಥ ಲೇಟ್ ಆಗಿ ಮಕ್ಕೊಂಡಿದ್ದೆ.... ಬೆಳಿಗ್ಗೆ ಎದ್ದಾಗ 7:30 ಆಗಿತ್ತು... ಯಾಕೋ ಒಂದು ಥರ ಆಲಸ್ಯ....ಇವಾಗ ಏನು ವಾಕಿಂಗ್ ಗೆ ಹೋಗೋದು ಅಂಥ... ಸುಮ್ಮನೆ ಆಗಿ ಬಿಟ್ಟೆ.. ಅಪ್ಪ ಅಮ್ಮ ಇಬ್ಬರು ಯಾವಾಗಲೋ ಎದ್ದು ವಾಕಿಂಗ್ ಗೆ ಹೋಗಿದ್ದರು... ಸರಿ ಅಂಥ ನನ್ನ ಪಾಡಿಗೆ ನಾನು ಸೋಮ್ಬೇರಿಯಾಗಿ....ನಾಳೆ ಹೋದರಾಯಿತು ಅಂಥ ಪೇಪರ್ ಓದುತ್ತ ಕೂತಿದ್ದೆ . 8:00 ಗಂಟೆಗೆ ಅಮ್ಮ ಬಂದರು,, ಬರುತ್ತಿರಬೇಕಾದರೆ ಪಕ್ಕದ ಮನೆ ಅವರ ಹತ್ತಿರ...ಏನೋ ಮಾತಾಡ್ತಾ ಇದ್ದಿದು ಕೇಳಿಸ್ತು,, ಅಸ್ಪಷ್ಟವಾಗಿ...... ಅಮ್ಮ ಹೇಳ್ತಾ ಇದ್ರೂ..." ಹೌದು ರಾತ್ರಿ ಅಂತೆ ಆಗಿರೋದು..... ನೆನ್ನೆ ಮಧ್ಯಾನ ನೆ ಒಂದು ಕಡೆ ಬಿತ್ತಂತೆ...." ಅದಕ್ಕೆ ಪಕ್ಕದ ಮನೆ, ಎದುರುಮನೆ ಆಂಟಿ..." ಹೌದು ನಾವು ಹೋಗಿ ನೋಡ್ಕೊಂಡ್ ಬಂದ್ವಿ,,ರಾತ್ರಿ ೧೨:೦೦ ಗಂಟೆ ಗೆ ಅಂತೆ" ಅಂಥ ಹೇಳುತ್ತಾ ಇದ್ರೂ, ನನಗೆ ಇವರು ಯಾವ ವಿಷಯದ ಬಗ್ಗೆ ಮಾತಾಡ್ತಾ ಇದಾರೆ ಅಂಥ ಗೊತ್ತಾಗಲಿಲ್ಲ..... ಯಾರೋ ಸತ್ತು ಹೊಗಿರಬೇಕೆನೋ,,,,ಏನ್ ಕತೆನೋ.....ಅಂಥ ತಲೆಕೆಡಿಸಿ ಕೊಳ್ತಾ ಇದ್ದೆ ... ಸರಿ ಅಮ್ಮ ಮೇಲೆ ಹತ್ತಿ ಬರ್ತಾ ಇದ್ದರಲ್ವ ನೋಡೋಣ.....ಅವರೇ ಹೇಳ್ತಾರೆ ಏನೋ ಬಿಸಿ ಬಿಸಿ ಸುದ್ದಿ ಅಂಥ ಅನ್ಕೊಂಡೆ.....
ಅಮ್ಮ ಬಂದ್ರು,, ಅವರ ಮುಖದಲ್ಲಿ ಏನೋ ಒಂದು ದುಗುಡ.. ಏನನ್ನೋ ಕಳೆದು ಕೊಂಡ ಹಾಗೆ ಇತ್ತು.. ನಾನು ಕೇಳುವುದಕ್ಕೆ ಮುಂಚೇನೆ .. "ಗುರು ದೊಡ್ಡ ಆಲದ ಮರ ಬಿದ್ದು ಹೋಗಿದೆ ಕಣೋ.....ತುಂಬ ಜನ ಸೇರಿದ್ದಾರೆ....ರಾತ್ರಿ ಬಿತ್ತಂತೆ ........ಎಲ್ಲ ಬೋಡು ಬೋಡು ಆಗಿ ಕಾಂತ ಇದೆ ಕಣೋ...... ತುಂಬ ಬೇಜಾರ ಆಯಿತು ನೋಡಿ....ನೀನು ಹೋಗಿ ನೋಡ್ಕೊಂಡು ಬಾ" ಅಂಥ ಒಂದೇ ಉಸುರಿನಲ್ಲಿ ಹೇಳಿದ್ರು...... ಬೆಳಿಗ್ಗೆ ಬೆಳಿಗ್ಗೆನೆ ನಂಗೆ ಈ ವಿಷ್ಯ ಕೇಳಿ ತುಂಬ ಬೇಜಾರ ಆಯಿತು...... ಏನ್ ಹೇಳ್ತಾ ಇದಿಯಮ್ಮ ಅಂಥ ಅಂದು.. ಸರಿ ನೀವು ಬನ್ನಿ ನನ್ನ ಜೊತೆ..ಬೈಕ್ ನಲ್ಲಿ ಹೋಗೋಣ ಅಂತ ಹೇಳಿ ಅಮ್ಮನನ್ನು ಮತ್ತೆ ಕರೆದು ಕೊಂಡು ಹೋದೆ.......
ನನಗು ಒಂದು ಥರ ಸಂಕಟ ಆಗ್ತಾ ಇತ್ತು,,, ಮನೆ ಇಂದ ದೊಡ್ಡ ಆಲದ ಮರದ ಪಾರ್ಕ್ ಗೆ 5 ನಿಮಿಷ ಆಗುತ್ತೆ.....ಹತ್ರ ಹೋಗಿ ನೋಡ್ತಾ ಇದೇನೇ ಕರಳು ಚುರುಕ್ ಅಂತು.... ಅಲ್ಲಿ ನೆರೆದಿರುವವರೆಲ್ಲರು ಏನೋ ತುಂಬ ವಿಷಾದದಿಂದ ಬಂದು ಬಂದು ನೋಡಿ ಕೊಂಡು ಹೋಗುತ್ತಾ ಇದ್ದರು........ಆಗಲೇ ತುಂಬ ಜನ ಸೇರಿ ಆಗಿತ್ತು..... "ಸುರೇಶ ಕುಮಾರ್" ಸಚಿವರು ಬಂದು... ಬಿದ್ದಿದ್ದ ದೊಡ್ಡ ಆಲದ ಮರಕ್ಕೆ ಪೂಜೆ ಸಲ್ಲಿಸಿ ಹೂವ ಹಾಕಿ ಹೋಗಿದ್ದರು....
ನಾನು ಹೋಗಿ ನೋಡ್ತೇನೆ,,,,,ಮರದ ಮಧ್ಯದಿಂದ ಎರಡು ಭಾಗ ಆಗಿ ಪೂರ್ತಿ ಮಾರನೇ ಬಿದ್ದು ಹೋಗಿದೆ.....ಅದು ಬುಡದ ಸಮೇತ... ಮರದ ಬುಡದಲ್ಲಿ ಒಂದು ದೊಡ್ಡ ಹಳ್ಳ......ಪಾರ್ಕ್ ತುಂಬ ಹರಡಿ ಕೊಂಡಿದ್ದ ......ಎಸ್ಟೋ ಪಕ್ಷಿಗಳಿಗೆ ಆಶ್ರಯ ಕೊಟ್ಟಿದ್ದ...400 ವರುಷಗಳಿಗೂ ಹಳೆಯದಾದ ಮರ.....ಪಾರ್ಕ್ ತುಂಬ ಹರಡಿಕೊ೦ಡು.....ಹಾಗೆ ಬಿದ್ದು ಬಿಟ್ಟಿದೆ... ಅಲ್ಲಿದ್ದ ಬೆಳಗಿನ ವಾಯು ವಿಹಾರಕ್ಕೆಂದು ಬಂದಿದ್ದ ಎಲ್ಲ ಪರಿಸರ ಪ್ರೇಮಿಗಳು...ಅಜ್ಜಿ ತಾತಂದಿರು.....ವಯಸ್ಕರು....ಆಂಟಿ ಅಂಕಲ್ ಎಲ್ಲರಲ್ಲೂ ಒಂದು ತರಹದ ಸೂತಕದ ಛಾಯೆ,, ಯಾರೋ ದೊಡ್ಡ ಮನುಸ್ಯರು ಸತ್ತು ಹೋದಾಗ ಜನ ಬಂದು ಮಾತದಿಕೊಳ್ಳುತ್ತರಲ್ಲ ಹಾಗೆ.....ನಮ್ಮ ಬಸವೇಶ್ವರ ನಗರದ ಜನತೆಗೆ ಏನೋ ಒಂದು ಕಳೆದು ಹೋದ ಆತಂಕ......
ಅಲ್ಲಿದ್ದ ಜನರೆಲ್ಲ ಒಂದೊಂದು ರೀತಿ ಮಾತಾಡಿ ಕೊಳ್ಳುತ್ತಾ ಇದ್ದರು.... ಮರದ ಭಾರ ಜಾಸ್ತಿ ಆಗಿ ಅದೇ ಬಿದ್ದು ಹೋಗಿದೆ ಅಂಥ... ಇನ್ನು ಕೆಲವರು ಇದು ಒಳ್ಳೆ ಸುದ್ದಿ ಅಲ್ಲ... ಏನೋ ಕೆಟ್ಟದು ಈ ಥರ ಒಂದು ಆಲದ ಮರ ಬೀಳಬಾರದು ಅಂಥ... ಕಾರಣ ಏನೆ ಇದ್ದರು....400 ವರುಷದ ಹಿಂದಿನ ಒಂದು ದೊಡ್ಡ ಆಲದ ಮರ...ನಮ್ಮನು ಅಗಲಿ....ತನ್ನ ಮಾಡಿಲಲ್ಲಿ ಇರುವ ಪಕ್ಷಿ ಸಮುದಾಯಕ್ಕೆ ....ಬೆಳಿಗ್ಗೆ ಮದ್ಯಾನ ಸಂಜೆ ಅಂಥ ಯಾವಾಗಲಾದರು ಅದರ ಮಡಿಲಲ್ಲಿ ತಣ್ಣಗೆ ಕೂತು ಮಾತನಾಡಿಕೊಳ್ಳುತ್ತಿದ್ದ ಎಸ್ಟೋ ಜನರನ್ನು ಬಿಟ್ಟು....ಮಲಗಿ ಬಿಟ್ಟಿತ್ತು .............
(ಅವೊತ್ತು ಎಲ್ಲ ಟಿವಿ ನಲ್ಲಿ ಇ ನ್ಯೂಸ್ ಪ್ರಕಟ ವಾಗಿತ್ತು .. ಶನಿವಾರದ ವಿಜಯಕರ್ನಾಟಕದ ಪೇಪರ್ ನಲ್ಲಿ ಕೂಡ ಇದರ ಮಾಹಿತಿ ಬಂದಿದೆ)
ಫ್ಲಾಶ್ ಬ್ಯಾಕ್......
ನಮ್ಮ ಬಸವೆಸ್ವರನಗರಕ್ಕೆ ಮುಕುಟ ದಂತೆ ಈ ಆಲದ ಮರ ಮತ್ತು, ಇದರ ಪಾರ್ಕ್ ಫೇಮಸ್ ಆಗಿತ್ತು... ಒಟ್ಟು "ಎರಡು ಎಕರೆ " ಪ್ರದೇಶದಲ್ಲಿ ಬಸವೇಶ್ವರ ಸರ್ಕಲ್ ನಿಂದ ಕೆಲವೇ ಅಂತರದ ದೂರದಲ್ಲಿ ಸುತ್ತ ಮುತ್ತ ಇರುವ ಮನೆಗಳ ಮದ್ಯ. ಇತ್ತು .. ಈ ಆಲದ ಮರಕ್ಕೆ 400 ವರುಷಗಳ ಇತಿಹಾಸ ಇದೆ ಅಂತೆ.. ಅದರ ಮಡಿಲಲ್ಲಿ ಒಂದು ಮುನೆಶ್ವರ ಸ್ವಾಮಿ ವಿಗ್ರಹ ಹಾಗು ಪುಟ್ಟ ದೇವಸ್ತಾನ ಇತ್ತು,, ಹಲವು ವರುಷಗಳ ಕೆಳಗೆ ಇಲ್ಲಿ ಜಾತ್ರೆ ನೆದಿಥ ಇತ್ತಂತೆ...ಮುನೇಶ್ವರ ಸ್ವಾಮಿ ಪೂಜೆ ಮಾಡಲು ತುಂಬ ಜನ ಬರುತಿದ್ದರಂತೆ....
ಇತ್ತೀಚೆಗಂತೂ ...ಈ ಪಾರ್ಕ್ ತುಂಬ ಅಭಿವೃದಿ ಹೊಂದಿತ್ತು.....ಇಷ್ಟು ದೊಡ್ಡ ಮರವಿರುವ ಜಾಗದಲ್ಲಿ ಒಂದು ಸುಂದರ ಉದ್ಯಾನವನ ಅಭಿವೃದ್ದಿ ಆಗಿತ್ತು... ನೂರಾರು ಜನ ಬೆಳಿಗ್ಗೆ ಹಾಗು ಸಂಜೆ ಇಲ್ಲಿ ವಾಕಿಂಗ್ ಗೆ ಅಂಥ ಜೋಗ್ಗಿನ್ಗೆ ಅಂಥ ಬರುತ್ತಿದ್ದರು....ಇನ್ನು ಮಧ್ಯಾನ ಪ್ರೇಮಿಗಳಿಗೆ ... ಅಜ್ಜಿ ತಾತ ಅವರಿಗೆ.. ಎಸ್ಟೋ ಜನರಿಗೆ ನೆರಳನ್ನು ಕೊಟ್ಟು ತನ್ನ ಹತ್ತಿರ ಕೂಡಿಸಿ ಕೊಳ್ತಾ ಇತ್ತು ಈ ಮರ...
ನನ್ನ ಹಾಗು ಈ ದೊಡ್ಡ ಆಲದ ಮರ ಇರುವ ಪಾರ್ಕಿನ ಒಡನಾಟ ತುಂಬ ಹಳೆದು.... ನಾನು ಚಿಕ್ಕವನಗಿರ ಬೇಕಾದರೆ.. ಬೇಸಿಗೆ ರಜೆ ನಲ್ಲಿ ನಮ್ಮ ಬಸವೆಸ್ವರನಗರ ದಲ್ಲಿ ಇರುವ ಅಜ್ಜಿ ಮನೆಗೆ ಬಂದಾಗ.....ಈ ದೊಡ್ಡ ಆಲದ ಮರದ ಪಾರ್ಕ್ ನಮ್ಮ ಆಟದ ಮೈದಾನ....ಎಷ್ಟು ಹೊತ್ತು ಇಲ್ಲಿ ಕಳೆದು ಮನೆಗೆ ಹೋಗ್ತಾ ಇದ್ದೆವೋ ಗೊತ್ತಿಲ್ಲ... ಕಣ್ಣಾ ಮುಚ್ಚಾಲೆ ಆಟ.. ಕುಂಟೆ ಬಿಲ್ಲೆ... ಇಲ್ಲಿರುವ ಮಕ್ಕಳ ಆಟದ ಆಟಿಕೆ ಇಂದ ಎಷ್ಟು ಹೊತ್ತು ಇಲ್ಲೇ ಇರುತ್ತಾ ಇದ್ದೆವು....
ಅದಾದಮೇಲೆ ನಾವು ಬೆಂಗಳೂರಿಗೆ ಬಂದು ಬಸವೇಶ್ವರ ನಗರದಲ್ಲೇ settle ಆದ ಮೇಲಂತೂ ... ನನ್ನ ಬೆಳಗಿನ jogginge , ಸಂಜೆಯ ವಾಯು ವಿಹಾರಕ್ಕೆ...ಎಲ್ಲದಕ್ಕೂ ಇಲ್ಲಿಗೆ ಬರುತ್ತಾ ಇದ್ದಿದು..ಯಾವಾಗ್ಲಾದ್ರು ಬೇಜಾರು ಅದಾಗ ಸಂಜೆ ಹೊತ್ತು ಇಲ್ಲಿ ಬರುತ್ತಾ ಇದ್ದೆ.. ಆಗ ಇಲ್ಲಿ ಓಡಾಡಿಕೊಂಡಿರುವ ಚಿಕ್ಕ ಚಿಕ್ಕ ಮಕ್ಕಳನ್ನು ನೋಡಿ ,,,, ಸಂಜೆ ಆಯಿತು ಅಂದ್ರೆ ಅದೆಲ್ಲಿರುತ್ತೋ ಪಕ್ಷಿಗಳು ಬಂದು ತಮ್ಮ ಗೂಡು ಸೇರಿಕೊಳ್ಳುವ ತವಕದಲ್ಲಿ ಚಿಲಿ ಪಿಳಿ ಚಿಲಿ ಪಿಳಿ ಅನ್ನುತ್ತಾ..ಇರುವ ಶಬ್ದ....ಇದೆಲ್ಲವನ್ನೂ ಕೇಳಿ ಬೇಜಾರು ಮರೆತು ಹೋಗುತ್ತಿತ್ತು ..
ಇವಾಗ ಈ ಪಾರ್ಕಿನ ಹತ್ರ ಜಾಸ್ತಿ ಹೋಗ್ತಾ ಇರಲಿಲ್ಲ ತುಂಬ ಜನ ಅಂಥ... ಆದರೆ ನಮ್ಮ ಅಮ್ಮ ಹಾಗು ಅಪ್ಪ ಇಬ್ಬರು ಬೆಳಿಗ್ಗೆ ಎದ್ದು ಇಲ್ಲಿಗೆ ವಾಕಿಂಗ್ ಅಂಥ ಬಂದು ಅವರ ಸ್ನೇಹಿತರ ಜೊತೆ... ಹರಟೆ ಹೊಡೆದು.....ಬರುವುದು ದಿನಚರಿ ಅಗ್ಗಿತ್ತು .......
ಇವೊತ್ತು ಅಮ್ಮ ನ ಜೊತೆ ಹೋದಾಗ ಅವರು ಮರ ಬಿದ್ದ ಕೆಳಗಡೆ ಇರುವ ಬೆಂಚ್ ಅನ್ನು ತೋರಿಸಿ ಅದೇ ಕಣೋ ನಾವೆಲ್ಲ ಕೂತ್ಕೊಥ ಇದ್ದ ಬೆಂಚು ... ಅಂಥ ಹೇಳಿ ತೋರಿಸ್ತಾ ಇದ್ರೂ....ನಂಗೆ ಅವರ ಈ ಮರದ atachment ನೋಡಿ ಏನೋ ಒಂದು ತರ ಅಂಥ ಅನ್ನಿಸಿತು....
ಇವಾಗ ಇದೆಲ್ಲ ಇತಿಹಾಸ..........ಇನ್ನು ಮುಂದೆ ಈ ಪಾರ್ಕ್ ಇರುತ್ತೆ ಆದರೆ ಬೋಡು ಬೊಡಾಗಿ..... ಆದರೆ ನನ್ನ ಪ್ರಕಾರ ಇದು ಬೀಳುವುದಕ್ಕೆ ಕಾರಣ ಇದರ ಸುತ್ತ ಅಭಿವೃದ್ದಿ ಪಡಿಸಿರುವುದೇ ...ಒಂದು ಚೂರು ಮಣ್ಣು ಬಿಡದೆ ಸಿಮೆಂಟ್ ಟೈಲ್ಸ್ ನಿಂದ ಸುತ್ತಲುನು ವಾಕಿಂಗ್ ಗೆ ಅಂಥ ಜಾಗ ಮಾಡಿದ್ದರು.... ಮರದ ಬುಡ ಒಂದು ಬಿಟ್ಟು.. ಸುತ್ತಲೆಲ್ಲ ಸಿಮೆಂಟ್ ಹಾಕಿ ಬೆಂಚುಗಳನ್ನು ಹಾಕಿ ಆಟ ಆಡೋದಕ್ಕೆ ಚಿಕ್ಕಮಕ್ಕಳು ಕೂರೋದಕ್ಕೆ ಅವಕಾಶ ಮಾಡಿದ್ದರು..... ಇದು ನನ್ನ ಅನಿಸಿಕೆ... ಆದರೆ ಬೇರೆಯವರು ಹೇಳುವ ಪ್ರಕಾರ ಮರದ ಭಾರ ಜಾಸ್ತಿ ಆಗಿ ಬಿದ್ದು ಬಿಟ್ಟಿದೆ ಅಂಥ....
ಏನೆ ಕಾರಣ ಇರಲಿ....ತುಂಬ ವರುಷದ ಇತಿಹಾಸ ಇರುವ ಮರ ನಮ್ಮನ್ನು ಬಿಟ್ಟು ಹೋಗಿದೆ ಅಸ್ಟೇ.......


ಪಾರ್ಕಿನ ತುಂಬ ಹರಡಿ ಕೊಂಡಿರುವ ಮರದ ಕೊಂಬೆಗಳು










ನೋಡಲು ಹರಿದು ಬಂದಿರುವ ಜನಸಾಗರ...







ಬುಡದ ತಳದಲ್ಲಿ ಆಗಿರುವ ಗುಂಡಿ.......


ಎಲ್ಲರಿಂದ ಮರಕ್ಕೆ ಪೂಜೆ.. ಅಂತಿಮ ವಿದಾಯ......




ಮರ ಬಿದ್ದರು,,,ಇ ಜೇನು ಗೂಡು ಮಾತ್ರ ಕದಲಿಲ್ಲ......


ದೊಡ್ಡ ದೊಡ್ಡ ಮರದ ಕೊಂಬೆಗಳು

ಪಾರ್ಕ್ ಎದುರಿರುವ ಮನೆ ಮೇಲಿನಿಂದ.....



ಬೋಡು ಬೋಡಾಗಿ ಕಾಣುತ್ತಿರುವ ನಮ್ಮ ಬಸವೇಶ್ವರ ನಗರದ ಉದ್ಯಾನವನ......
.....
...........
ಕೊನೆಯದಾಗಿ,,, ನನ್ನ ಮನಸ್ಸಿಗೆ ತುಂಬ ನೋವು ಉಂಟು ಮಾಡಿದ ಸಂಗತಿ ಎಂದರೆ.... ಇನ್ನು ಕಣ್ಣು ಕೂಡ ಬಿಟ್ಟಿರದ ಪುಟ್ಟ ಹಕ್ಕಿ ಮರಿಗಳ ಕೂಗು..... ಮರ ಬಿದ್ದಿದ್ದರಿಂದ ಇದರಲ್ಲಿ ಗೂಡು ಕಟ್ಟಿ ಕೊಂಡು ಇರುವ ಎಷ್ಟು ಪಕ್ಷಿಗಳ ಸಂಸಾರ ಹಾಳದವೋ ...ನನ್ನ ಕಣ್ಣಿನ ಎದುರಿಗೇ ಈ ಪುಟ್ಟ ಹಕ್ಕಿಮರಿಗಳು (ಯಾವ ಹಕ್ಕಿ ಮರಿಗಳು ಅಂಥ ಗೊತ್ತಾಗಲಿಲ್ಲ.... ಇದು ಹದ್ದಿನ ಹಕ್ಕಿ ಮರಿ ಅಂಥ ಹೇಳಿದ್ರು ) ಚೀರಾಡುತ್ತಾ ಒದ್ದಾಡುತ್ತ ಇದ್ದವು,, ಇದನ್ನು ಜೋಪಾನವಾಗಿ ಒಂದು ಕಡೆ ಇಟ್ಟು... ಪ್ರಾಣಿ ದಯಾಸಂಗ ಕ್ಕೆ ಫೋನ್ ಮಾಡಿ ತೆಗೆದುಕೊಂಡು ಹೋಗಲು ಹೇಳಿದ್ದೆವು ... ನನಗೆ ಟೈಮ್ ಆಗಿದ್ದರಿಂದ ಇದನ್ನು ನೋಡಿಕೊಳುತ್ತ ಇರುವ ಇನ್ನೊಬ್ಬರಿಗೆ ಹೇಳಿ ವಾಪಾಸ್ ಬಂದುಬಿಟ್ಟೆ....ಪಾಪ ಈ ಪುಟ್ಟ ಮರಿಗಳು ಪ್ರಾಣಿ ದಯಾಸಂಘಕ್ಕೆ ಜೋಪಾನವಾಗಿ ಸೇರಿದವು ಅಂಥ ನಂಬಿದ್ದೇನೆ.....




24 comments:

  1. Keli nangu tumba vyathe aitu guru avre...

    ReplyDelete
  2. ಹೌದು ಅನು ಅವರೇ ಇದು ಬೇಜಾರ ಅಗೋ ಅಂತ ವಿಷ್ಯನೇ...... ಬ್ಲಾಗಿಗೆ ಬಂದು ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು

    ReplyDelete
  3. ನನ್ನ ಅತಿ ಪ್ರೀತಿಯ ಪಾರ್ಕ್ ಗುರು, ನಮ್ಮ ಅಮ್ಮನ ಮನೆಗು ಆ ಪಾರ್ಕಿಗು ೧೫ ನಿಮಿಷ ಆಗಬಹುದು..... ನಮ್ಮ ಅಮ್ಮ ಅಪ್ಪ ಎಲ್ಲರು ದಿನಾ ಅದೇ ಪಾರ್ಕಿಗೆ ವಾಕ್ ಹೋಗುತ್ತಾರೆ. ನಮ್ಮ ಅಮ್ಮ ನೆನ್ನೆ ರಾತ್ರಿ ಫೋನ್ ಮಾಡಿ ಹೀಗೆ ಆಗಿದೆ ಎಂದು ತಿಳಿಸಿದಾಗ ನನಗೆ ನಂಬಲಾಗಲಿಲ್ಲ ನೆನ್ನೆ ಮತ್ತೆ ನ್ಯೊಸ್ ಪೇಪರ್ ನೋಡಿದ ಮೇಲೆ ನಿಜವೆನಿಸಿತು.
    ನಿಜಕ್ಕೊ ಇದು ಆಘಾತಕಾರಿ ವಿಷಯ, ಕಳೆದಬಾರಿ ಊರಿಗೆ ಹೋದಾಗ ದಿನವೊ ಆ ಪಾರ್ಕಿಗೆ ಹೋಗುತ್ತಲಿದ್ದೆ.... ಈಗ ಹೇಗೆ ನೋಡುವುದು ಬೋಡು ಬೋಡಾದ ಆ ಪಾರ್ಕನ್ನು ಎಂದೆನಿಸುತ್ತದೆ. ಕಾರಾಳ ಛಾಯೇ ಮೊಡಿರಬೇಕಲ್ಲವೇ ಅಲ್ಲಿ.
    ಕಣ್ಣು ಒದ್ದೆಯಾದವು ಆ ಚಿತ್ರಗಳನ್ನೆಲ್ಲಾ ನೋಡಿ ನಿಜಕ್ಕೊ ನನಗೆ ಬೇಸರವಾಗಿದೆ..... ಮತ್ತೆ ಅಂತ ಬೃಹದಾಕಾರ ಮರ ಬೆಳೆಸುವುದು ಎಷ್ಟು ಕಷ್ಟದ ಕೆಲಸ ಅಲ್ಲವೇ?

    ReplyDelete
  4. ಆ ಪುಟ್ಟ ಮರಿಗಳು ನೋಡು ಮತ್ತಷ್ಟು ಮನಕಲಕುತ್ತಲಿದೆ ಗುರು ಮನ ತಡೆಯಲಾರದೆ ಮತ್ತೊಮ್ಮೆ ಅನಿಸಿಕೆ ತಿಳಿಸಿದೆ... ಆ ಮರಿಗಳನ್ನು ತೆಗೆದುಕೊಂಡು ಹೋದರ ತಿಳಿದುಕೊಳ್ಳಿ... ಸಾಧ್ಯವಾದರೆ.... ಮನಸಲ್ಲೇ ಬೇಸರ!!!!!
    ಆ ಜೇನೊಗೊಡಿನಿಂದ ಜೇನು ಹುಳಗಳು ಹೂರಬರಲೇ ಇಲ್ಲವೇ..?

    ReplyDelete
  5. ಬೇಸರದ ವಿಷಯ, ನಗರೀಕರಣದ ಭರದಲ್ಲಿ ಎಲ್ಲೆಡೆ ಮರದ ಬುಡದ ತನಕ ಕಾ೦ಕ್ರೀಟು ಹಾಕಿಸಿ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿದೆ. ನೋಡುತ್ತಿರಿ, ಈ ಮಳೆಗಾಲದಲ್ಲಿ ಇನ್ನಷ್ಟು ಮರಗಳು ಧರೆಗುರುಳಲಿವೆ. ನಾವೆಲ್ಲಾ ಮೂಕಪ್ರೇಕ್ಷಕರು. ನಿಮ್ಮ ಪರಿಸರ ಕಾಳಜಿ ಮೆಚ್ಚುವ೦ಥಾದ್ದು

    ReplyDelete
  6. ಮನಸು..
    ನಿಮಗೆ ಆಗಿರುವ ಬೇಸರ ನನಗೆ ಅರ್ಥ ಆಗ್ತಾ ಇದೆ.....ಆದರೆ ಏನು ಮಾಡುವುದು...ನಾವು ಮೂಕ ಪ್ರೇಕ್ಷಕರಾಗಬೇಕಿದೆ ಅಸ್ಟೆ...
    ಇದರ ಬಗ್ಗೆ ಒಡನಾಟ ಇಟ್ಟುಕೊಂಡಿರುವ ಎಸ್ಟೋ ಜನಕ್ಕೆ ನಿಜವಾಗ್ಲೂ ಆಘಾತ ಆಗಿದೆ....ಅದು ಅವರ ಭಾವನೆಗಳಲ್ಲೇ ಗೊತ್ತಾಗುತ್ತ ಇತ್ತು......
    ಅ ಪುಟ್ಟ ಮರಿಗಳನ್ನು ಪ್ರಾಣಿ ಧಯ ಸಂಘದವರು ತೆಗೆದು ಕೊಂಡು ಹೋದರಂತೆ... ಮತ್ತೆ ನನಗೆ ಅ ಕಡೆ ಹೋಗುವುದಕ್ಕೆ ಮನಸ್ಸು ಆಗಲಿಲ್ಲಾ... ಆಗಲೇ BBMP ನವರು ಕಟ್ ಮಾಡೋಕೆ ಶುರು ಮಾಡಿದ್ದರು,,, mostly ಜೇನು ಗೂಡನ್ನು ಕೆಡವಿ ಹಾಕಿರುತ್ತಾರೆ.....
    ಇನ್ನು ನನಗೆ ಬೇಜಾರು ಹೋಗಿಲ್ಲ.... :-(

    ReplyDelete
  7. ಪರಾಂಜಪೆ ರವರೆ,,, ಹೌದು ನೀವು ಹೇಳುತಿರುವುದು ನಿಜ..... ನಗರೀಕರಣದ ಭರಾಟೆಯಲ್ಲಿ ಇರುವ ಮರಗಳನ್ನು ಉಳಿಸುವುದಿರಲಿ ...ಇರುವುದನ್ನು ಮೆಟ್ರೋಗೆ, ರೋಡ್ ಗೆ ಅಂತ ಕಡಿದು ಹಾಕುತ್ತಲಿದ್ದಾರೆ..... ಇನ್ನು ಇ ತರಹದ ಮರ ತಾನಾಗೆ ಬಿದ್ದಿರುವುದನ್ನು ನೋಡಿ. ಎಲ್ಲ ಅದಿಕಾರಿಗಳು ಲೆಕ್ಕಾಚಾರಕ್ಕೆ ಇಳಿದಿರುತ್ತಾರೆ....ಎಷ್ಟು ದುಡ್ಡು ಮಾಡಿಕೊಳ್ಳ ಭಹುದು ಅಂತ.....
    ನಿಜಕ್ಕೂ ಬೇಸರದ ಸಂಗತಿ....

    ಗುರು

    ReplyDelete
  8. aalada mara biddide nija...adanna nodalu hoda nanagoo tumba bejaar aaitu....aalada maravanne aadharisidda jeevigaLu anaathavaagive...idu aakasmika...
    aadre mahaanagaradalli 'METRO' emba maayege saaviraaru maragaLanna uruLisuttiro muttHaLarige en heLbeku...????
    Vijayanagaradalli METROgaagi nooraaru maragaLanna nelasama maaDiruva drushya manakalakuttade....

    ReplyDelete
  9. ಲೇಖನ ಓದಿ ಫೋಟೋಗಳನ್ನ ನೋಡಿ ಬೇಸರವಾಯಿತು.. ಆಪ್ತರೊಬ್ಬರು ಅಗಲಿದ ನೋವು, ವ್ಯಥೆ ನಿಮ್ಮ ಮಾತುಗಳಲ್ಲಿ ಕಾಣಿಸುತ್ತೆ..

    ReplyDelete
  10. ಮರ ಮತ್ತು ಮರಿಗಳನ್ನು ನೋಡಿ ಅಯ್ಯೋ ಅನ್ನಿಸುತ್ತಿದೆ.......ತಮ್ಮ ಕಳಕಳಿಗೆ ನನ್ನ ಬೆಂಬಲವಿದೆ

    ರಂಜನಾ
    ranjanahegde.wordpress.com
    ranjanah.blogspot.com

    ReplyDelete
  11. bahaLa bejaar aaytu idanna odi. illi mara hege bitto, adakke parokshavaagi naavu manushyaru kooda kaaranaru. alva ?

    namma maneya hinde maravondannu kaDidaaga aada anubhavaannu nanna blog nalli daakhalisiddEne.dayamaadi odi.

    http://princessoftheocean.blogspot.com/2008/11/blog-post_16.html

    ReplyDelete
  12. ತೇಜಸ್ವಿನಿ, ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು..
    ಹೌದು,,, ಮೆಟ್ರೋಗೆ ಅಂತ ರೋಡ್ ಗೆ ಅಂತ ಮರಗಳನ್ನು ಕಡಿದು ಹಾಕುತ್ತಿರುವುದು ವಿಶಾದನಿಯ .. ಆದರೆ ಅದಕ್ಕೆ ಪೂರಕವಾಗಿ ಮರಗಳನ್ನು ಗಿಡಗಳನ್ನು ನೆಟ್ಟು ಪೋಷಿಸುವಲ್ಲಿ ವಿಪಲರಾಗುತಿದ್ದೇವೆ.... ಒಟ್ಟಿನಲ್ಲಿ ನಮ್ಮ ಸ್ವಾರ್ಥ ಹಾಗು ಅಭಿವೃದ್ದಿಗೂಸ್ಕರ ನಮ್ಮ ಸುತ್ತ ಮುತ್ತಲಿನ ಮರಗಳನ್ನು ಹಾಳು ಮಾಡಿ, ನಮಗೆ ನಾವೇ ಸಂಚಕಾರ ತಂದು ಕೊಳ್ಳುತಿದ್ದೇವೆ...
    ಗುರು

    ReplyDelete
  13. ರೂಪಶ್ರಿ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು..
    ಹೌದು ನನಗಂತು ತುಂಬ ಬೇಜಾರ ಆಯಿತು...ತುಂಬ ದಿನಗಳಿಂದ ಇ ಮರ ನನಗೆ ಹತ್ತಿರವಾಗಿತ್ತು.....ಯಾರನ್ನೋ ಕಳೆದು ಕೊಂಡ ಸಂಕಟ
    ಗುರು

    ReplyDelete
  14. ರಂಜನ
    ನನ್ನ ಕಳಕಳಿಯನ್ನು ಅರ್ಥ ಮಾಡಿಕೊಂದಿದಕ್ಕೆ ಧನ್ಯವಾದಗಳು...
    ಗುರು

    ReplyDelete
  15. ಲಕ್ಷ್ಮಿ,
    ಲೇಖನ ನೋಡಿ ಪ್ರತಿಕ್ರಿಯಿಸಿದಕ್ಕೆ ತುಂಬ ಧನ್ಯವಾದಗಳು ... ಖಂಡಿತ ಮರದ ಬಗ್ಗೆ ಇರುವ ನಿಮ್ಮ ಬ್ಲಾಗಿನ ಲೇಖನ ವನ್ನು ಓದುತ್ತೇನೆ...
    ಗುರು

    ReplyDelete
  16. ವಿಷಯ ಕೇಳಿ ತುಂಬಾ ಬೇಜಾರ ಆಯ್ತು :(

    ReplyDelete
  17. ಗುರು ಅವರೆ,
    ಯುಂಬಾ ಬೇಸರವಾಯ್ತು ಓದಿ. ಹಗಲು ಹೊತ್ತು ಬಿದ್ದಿದ್ದರೆ ಎಷ್ಟೊಂದು ಜನರ ಪ್ರಾಣ ಹೋಗುತ್ತಿತ್ತಲ್ಲವಾ? ಅದು ರಾತ್ರಿಯೇ ಬೀಳುವುದಂದರೇನು? ಪ್ರಕೃತಿಯಲ್ಲಿ ಇರುವ ಸಹಜ ಕಾಳಜಿಯನ್ನು ಗಮನಿಸಬೇಕಲ್ಲವೇ?

    ReplyDelete
  18. ಗುರು,

    ದೊಡ್ಡ ಆಲದ ಮರದ ಕತೆ ಓದಿ ಬೇಸರವಾಯಿತು...ಎಷ್ಟು ವರ್ಷ ಹಳೆಯದು...ನಾನು ೧೨ ವರ್ಷಗಳ ಹಿಂದೆ ಇದೇ ಬಸವೇಶ್ವರ ನಗರದಲ್ಲಿ ಗುಜರಾತಿಗಳ ದಿನಪತ್ರಿಕೆ ಕೊಡಲು ಬರುತ್ತಿದೆ.[ಅದು ಮದ್ಯಾಹ್ನ ಬರುತ್ತಿತ್ತು.]ಆಗ ಈ ಅಲದ ಮರದ ಸುತ್ತ ಮುತ್ತಲ ರಸ್ತೆಗಳ ಮನೆಗಳಿಗೆ ಸೈಕಲ್ಲಿನಲ್ಲಿ ಬಂದು ಹಂಚುತ್ತಿದ್ದೆ. ಆಗ ಎಷ್ಟು ದೊಡ್ಡ ಮರ ಅಂದುಕೊಳ್ಳುತ್ತಿದ್ದೆ....ಈಗ ಎಲ್ಲಾ ನೆನಪಾಯಿತು..
    ಕೊನೆಯಲ್ಲಿ ಪಕ್ಷಿಗಳ ಮರಿಗಳನ್ನು ಫೋಟೋಗಳನ್ನು ನೋಡಿ ನನ್ನ ಮನಸ್ಸು ವಿಲಗುಟ್ಟಿದಂತಾಯಿತು...ಅವುಗಳನ್ನು ಉಳಿಸುವಲ್ಲಿನ ನಿಮ್ಮ ಪ್ರಯತ್ನ ನೋಡಿ ಮನಸ್ಸಿಗೆ ಸ್ವಲ್ಪ ನೆಮ್ಮದಿಯಾಯಿತು...

    ಧನ್ಯವಾದಗಳು

    ReplyDelete
  19. ಮಲ್ಲಿಕಾರ್ಜುನ ರವರೆ.
    ಹೌದು ನೀವು ಹೇಳುತ್ತಿರುವುದು ನಿಜ,,, ನಾನು ಇದರ ಬಗ್ಗೆ ಯೋಚನೆ ಮಾಡಿದ್ದೆ.. ಇದೇನಾದರೂ,,, ಬೆಳಗಿನ ಹೊತ್ತು ಅಥವಾ ಸಂಜೆ ಹೊತ್ತು ಬಿದ್ದಿದರೆ ಗತಿ ಏನು ಅಂತ,,,, ನನ್ನ ಅಪ್ಪ ಅಮ್ಮ ಸಹಿತ,, ತುಂಬ ಜನ ನೂರಾರು ಜನ ಬೆಳಗಿನ ವಾಕಿಂಗ್ ಗೆ ಸಂಜೆ ವಿಹಾರಕ್ಕೆ ಅಂತ ಇದೆ ಮರದ ಕೆಳಗೆ ಓಡಾಡುತ್ತ ಹಾಗು ಮಾತಾಡುತ್ತಾ ಕೂತಿರುತ್ತಿದ್ದರು,,,,,,
    ಎಷ್ಟು ವಿಚಿತ್ರ ಅಲ್ವ.... ಯಾರಿಗೂ ತೊಂದರೆ ಆಗದೆ.... ನೈಟ್ ಟೈಮ್ ನಲ್ಲಿ ಬಿದ್ದಿದೆ......ಒಂದು ಸಣ್ಣ ವಾಹನಕ್ಕೂ ಏನು ಆಗಿಲ್ಲ....
    ಗುರು

    ReplyDelete
  20. ಶಿವೂ,,
    ಒಹ್ ನೀವು ಇಲ್ಲಿಗೆ ಬರುತ್ತಿದ್ದರ... ಸರಿ... ಹೌದು,,, ತುಂಬ ವರ್ಷ ಹಳೆಯ ಮರ....ಮತ್ತೆ ಇದೆ ಥರದ ಮರ ಬೆಳೆಸುವುದು ಕಷ್ಟ ಆಗುತ್ತೆ... ಇವಾಗ ಅಂತು ಎ ಪಾರ್ಕ್ ಬೋಡು ಬೋಡಾಗಿ ಕಾಣುತ್ತ ಇದೆ .

    ReplyDelete
  21. ಗುರು...

    ಮರವೊಂದೇ ಬೀಳಲಿಲ್ಲ....
    ಎಷ್ಟೊಂದು ಪಕ್ಷಿಗಳು, ಕೀಟಗಳು ತಮ್ಮ ಮನೆಯನ್ನು ಕಳೆದು ಕೊಂಡವು..!
    ನೋರಾರು ವರ್ಷಗಳಿಂದ ಆ ಮರ ಅವುಗಳಿಗೆಲ್ಲ ಆಶ್ರಯ ತಾಣವಾಗಿತ್ತು.
    ನಮಗೆ ನೆರಳು, ಉತ್ತಮ ಹವೆ ನೀಡುತ್ತಿತ್ತು...

    ಆ ಪಕ್ಷಿ ಮರಿಗಳನ್ನು ನೋಡಿ ಪಶ್ಚಾತ್ತಾಪವಾಯಿತು..

    ಹ್ರದಯ ಕಲುಕುವಂಥ ಘಟನೆ....

    ಬೇಸರವಾಯಿತು....

    ReplyDelete
  22. ತುಂಬಾ ಬೇಜಾರಾಗಿತ್ತು ಅವತ್ತು ನ್ಯೂಸ್ ಕೇಳಿದಾಗ. ಇಲ್ಲಿ ಆ ಪಕ್ಷಿಗಳ ಚಿತ್ರ ನೋಡಿದಮೇಲ೦ತೂ ಹೊಟ್ಟೇಲಿ ಏನೋ ಸ೦ಕಟ :((

    ReplyDelete
  23. ಪ್ರಕಾಶ್
    ತುಂಬ ದಿನಗಳಾದ ಮೇಲೆ ನನ್ನ ಬ್ಲಾಗ್ ಲೋಕದ ಕಡೆ ಬಂದಿದ್ದಿರಾ.... ಹೌದು,,, ನೀವು ಹೇಳುವುದು ನಿಜ,,, ತುಂಬ ಪ್ರಾಣಿ ಪಕ್ಷಿಗಳು ತಮ್ಮ ಗೂಡು ಸಂಸಾರಗಳನ್ನು ಕಳೆದುಕೊಂಡ ಇದ್ದಾವೆ.....

    ReplyDelete
  24. ವಿನುತ,,,,
    ಪ್ರತಿಕ್ರಿಯೆಗೆ ಧನ್ಯವಾದಗಳು.....ಹೀಗೆ ಬರುತ್ತಿರಿ....

    ReplyDelete