ನಾವೆಲ್ಲಾ ನಮ್ಮ ಎಜುಕೇಶನ್ ಮುಗಿಸಿ ಕೆಲಸಕ್ಕೆ ಕಾಲಿಡಬೇಕು ಅನ್ನುತ್ತಿರುವಾಗ IT ಉದ್ಯಮ ಅಧೋಗತಿಗೆ ಇಳಿದಿತ್ತು....ಇವಾಗ ಏನು Recession ಅಂತ ಹೇಳ್ತಾರೋ...ಇದಕ್ಕಿಂತ ವೊರ್ಸ್ಟ್ situation 2001 - 2003 ನಲ್ಲಿ ಇತ್ತು ...ಅವಾಗ ನಾವೆಲ್ಲ ಸಿಕ್ಕ ಸಿಕ್ಕ ಕಡೆ ನಮ್ಮ CV ನ ಅಪ್ಡೇಟ್ ಮಾಡಿಕೊಂಡು, ಎಲ್ಲೆಲ್ಲಿ walkin ಇಂಟರ್ವ್ಯೂ ಇರುತ್ತೋ ಅಲ್ಲೆಲ್ಲ ಹೋಗಿ ಬರ್ತಾ ಇದ್ವಿ.....
ಆ ದಿನಗಳಲ್ಲಿ ಏನಾದರೂ,, ಕಂಪ್ಯೂಟರ್ ನಲ್ಲಿ ಹೆಲ್ಪ್ ಬೇಕು ಅಂದ್ರೆ ಯಾವಾಗಲು ನನ್ನನ್ನೇ ಕೇಳ್ತಾ ಇದ್ರೂ....(ಇವಗ್ಲೂ ಅಸ್ಟೇ ಸ್ವಲ್ಪ ಕಮ್ಮಿ ಆಗಿದೆ ಅಸ್ಟೇ....) ಅವಾಗ ಎಲ್ಲ ನನ್ನ ಸ್ನೇಹಿತರ ಮುಂದೆ ನಾನೇ ಕಂಪ್ಯೂಟರ್ ಗುರು ಆಗಿ ಬಿಟ್ ಇದ್ದೆ... :-)
ನನ್ ಸ್ಕೂಲ್ ಫ್ರೆಂಡ್ ಒಬ್ಬ ಇದ್ದ,, PUC ತನಕ ಒಟ್ಟಿಗೆ ಓದಿದ್ದು,,,,ಆಮೇಲೆ ಅವನು BE ಮಾಡ್ಬೇಕು ಅಂತ ಎಲ್ಲೊ ಬೇರೆ ಕಡೆ ಹೋದ,,, ನಾನು ಇನ್ನೊಂದು ಕಡೆ ಆಗಿದ್ದೆ... ಆಮೇಲೆ ಡಿಗ್ರಿ ಮುಗಿದ ಮೇಲೆ ಬೆಂಗಳೂರಿನಲ್ಲೇ ಒಟ್ಟಿಗೆ ಸಿಕ್ಕೆವು....ಈ ನನ್ನ ಫ್ರೆಂಡ್ (ಅವನ ಹೆಸರು ಬೇಡ , ಯಾಕೆ ಅಂದ್ರೆ ಅವನು ನನ್ನ ಬ್ಲಾಗ್ ಅನ್ನು ಅಪರೂಪಕೊಮ್ಮೆ ನೋಡ್ತಾ ಇರ್ತಾನೆ) ಸಿಕ್ಕ ಪಟ್ಟೇ ಸೋಂಬೇರಿ.....BE ಎಲೆಕ್ಟ್ರಾನಿಕ್ಸ್ ನಲ್ಲಿ 1st ಕ್ಲಾಸ್ ನಲ್ಲಿ ಪಾಸ್ ಮಾಡಿದ್ದರು,, ಯಾವುದೊ,, ಒಂದು ಚಿಕ್ಕ ಕಂಪನಿ ನಲ್ಲಿ ಕೆಲಸ ಮಾಡಬೇಕೋ ಬೇಡವೋ ಅಂತ ಕೆಲಸ ಮಾಡ್ತಾ ಇದ್ದ .... ಅವಗಂತು ಇವನಿಗೆ ಯಾವುದರಲ್ಲೂ ಇಂಟರೆಸ್ಟ್ ಇರಲಿಲ್ಲ.....ಅಸ್ಟು ಸೋಂಬೇರಿ.... ಸರಿ ಒಂದು ಸ್ವಲ್ಪ ವರ್ಷ ಆದಮೇಲೆ...ಕೆಲಸ ಚೇಂಜ್ ಮಾಡಬೇಕು ಅಂತ ಅನ್ನಿಸಿ....ಎಲ್ಲ ಕಡೆ ಅಪ್ಲೈ ಮಾಡಿದ್ದ.....
ಒಂದು ದಿನ ಬೆಳಿಗ್ಗೆ ಬೆಳಿಗ್ಗೆನೆ ಫೋನ್ ಮಾಡಿ.. "ಗುರು ನಾನು ಒಂದು ಕಡೆ ಕೆಲಸಕ್ಕೆ ಅಪ್ಲೈ ಮಾಡಿದ್ದೆ,,, ಅವರಿಂದ ರಿಪ್ಲೈ ಬಂದಿದೆ... ನಾನು ಅರ್ಜೆಂಟ್ ಆಗಿ ನನ್ನ CV ಅನ್ನು ಅವರಿಗೆ ಕಳುಹಿಸಬೇಕು, ಆದರೆ ಅವರು .asap format ನಲ್ಲಿ ಕಳುಹಿಸಬೇಕು ಅಂತ ಕೇಳ್ತಾ ಇದ್ದಾರೆ,, ಅರ್ಜೆಂಟ್ ಆಗಿ ಹೆಲ್ಪ್ ಮಾಡೋ.. ಆದರೆ ನೀನೆ ನನ್ನ CV ನ .asap format ನಲ್ಲಿ ಕಳುಹಿಸೋ ಅಂತ ಒಂದೇ ಉಸುರಿಗೆ ಹೇಳಿದ."
ನಾನು ಪರವಾಗಿಲ್ಲ ಇವಗಲಾದರು ಒಳ್ಳೆ ಬುದ್ದಿ ಬಂದಿದೆ,,, ಸರಿ ಅವನ ಪರವಾಗಿ ನಾನೇ CV ನ ಅಪ್ಡೇಟ್ ಮಾಡಿ ಕಳುಹಿಸೋಣ ಅಂತ, ಸರಿ ಕಣೋ ಕಳುಹಿಸುತ್ತೇನೆ ಅಂತ ಹೇಳಿದೆ..... ಆದರೆ ಅವನು ಹೇಳಿದ file format ಯಾವುದು ಅಂತ ಚಿಂತೆ ಆಯಿತು.... normal ಆಗಿ ಯಾವುದಾದರು ಕಂಪನಿ ನವರು,, ನಮ್ಮ CV ನ, .doc (MS world ಡಾಕುಮೆಂಟ್) , .rtf ( rich text format ) ಅಥವ .pdf ಫಾರ್ಮಾಟ್ ನಲ್ಲಿ ಕಳುಹಿಸಿ ಅಂತ ಹೇಳ್ತಾರೆ,,, ಇವನು ಯಾವುದೊ .asap ಫಾರ್ಮಾಟ್ ಅಂತ ಹೇಳ್ತಾ ಇದ್ದನಲ್ವ ಅಂತ ತೆಲೆ ಕೆರೆದುಕೊಂಡೆ . ಸರಿ ಇವನು ವರ್ಕ್ ಮಾಡ್ತಾ ಇರೋದು electronic ಫೀಲ್ಡ್ ಅಲ್ವ,, ಇದು ಯಾವುದೊ ಒಂದು file ಫಾರ್ಮಾಟ್ ಇರಬೇಕು ಅಂತ,,,,ಹುಡುಕೋಕೆ ಶುರು ಮಾಡಿದೆ.....ಒಂದು ಗಂಟೆ ಇಂಟರ್ನೆಟ್ ನಲ್ಲಿ ಎಲ್ಲ ಹುಡುಕಾಡಿದೆ. .asap ಫಾರ್ಮಾಟ್ ಇರೋ ಯಾವ file ಕೂಡ ಇಲ್ಲ..... ಮದ್ಯ ದಲ್ಲಿ... ಇವ ಎರೆಡೆರಡು ಸರಿ ಫೋನ್ ಮಾಡಿ,, "ಗುರು ಸಿಕ್ತ ಅ ಫಾರ್ಮಾಟ್ ಯಾವುದು ಅಂತ,,, ಅರ್ಜೆಂಟ್ ಆಗಿ ಕಳುಹಿಸ ಬೇಕೋ ಬೇಗ ಹುಡುಕಿಕೊಡು ಅಂತ ತಲೆ ತಿಂತಾ ಇದ್ದ " ನಾನು ಸ್ವಲ್ಪ ತಲೆ ಕೆಡಿಸಿಕೊಂಡ್ ಹುಡುಕುತ್ತ ಇದ್ದೆ....ಎಷ್ಟು ಟ್ರೈ ಮಾಡಿದರು ಇದು ಯಾವುದೊ ಹೊಸ ಫಾರ್ಮಾಟ್ ಸಿಕ್ತ ಇರಲಿಲ್ಲ... ಸರಿ ನಾನೇ ನನ್ ಫ್ರೆಂಡ್ ಗೆ ಫೋನ್ ಮಾಡಿ,, ಅವರು ಕಳುಹಿಸಿರುವ ಮೇಲ್ ಅನ್ನು ನನಗೆ farword ಮಾಡು,,, ನಾನೇ ನೋಡ್ತೇನೆ correct ಆಗಿ ಏನು ಅಂತ ಹೇಳಿದೆ. ಸರಿ ಅವನು ಕೂಡಲೇ ಆ ಕಂಪನಿ HR ಕಳುಹಿಸಿದ ಮೇಲ್ ಅನ್ನು farword ಮಾಡಿದ.. " ಆ ಮೇಲ್ ನ ನೋಡಿ, ನಂಗೆ ಶಾಕ್....ಅವಾಗ ಅವನ ಮೇಲೆ ಎಷ್ಟು ಸಿಟ್ಟು ಬಂತು ಅಂದ್ರೆ....ಪಕ್ಕದಲ್ಲಿ ಇದ್ದಿದ್ದರೆ ಏನಾದರೂ ತಗೊಂಡು ಸರಿಯಾಗಿ ಬಾರಿಸ್ತಾ ಇದ್ದೆ... ಒಂದು ಕಡೆ ನಗು,, ಇನ್ನೊಂದು ಕಡೆ ಸಿಟ್ಟು,,, ಎರಡು ಒಟ್ಟಿಗೆ ಬರೋಕೆ ಶುರು ಆಯಿತು,,,,actually ಅ ಮೇಲ್ ನಲ್ಲಿ ಅ ಕಂಪನಿ HR ಏನ್ ಕೇಳಿದ್ರು ಅಂದ್ರೆ " We have short listed your name for final round of interview, kindly send your updated CV ASAP" ಅಂತ ಇತ್ತು,,, ಅಂದರೆ ನಿಮ್ಮ ಹೆಸರು ಫೈನಲ್ ರೌಂಡ್ ಇಂಟರ್ವ್ಯೂ ಗೆ short list ಆಗಿದೆ , ನಿಮ್ಮ CV ನ ಅದಸ್ಟು ಬೇಗ ಕಳುಹಿಸಿ ಅಂತ ಇತ್ತು (ASAP - As Soon As Possible ) ಇದನ್ನ ನಮ್ಮ ಸೋಂಬೇರಿ enginer ಮಹಾನುಭಾವ .asap file ಫಾರ್ಮಾಟ್ ನಲ್ಲಿ ಕಳುಹಿಸಬೇಕು ಅಂತ ಅರ್ಥ ಮಾಡಿ ಕೊಂಡು,,, ನನ್ನ ತಲೆ ತಿಂದು,,, ನನ್ನ braingu ಕೆಲಸ ಕೊಟ್ಟು,, 2 hours time ನ ವೇಸ್ಟ್ ಮಾಡಿಸಿದ್ದ.... ಆಮೇಲೆ ಫೋನ್ ಮಾಡಿ ಸರಿ ಯಾಗಿ ಬೈದು,,,,ಅರ್ಥ ಮಾಡಿಸಿದ್ದು ಆಯಿತು.... ಅವಾಗ ಅವನು ನಿಜವಾಗ್ಲೂ BE Electornics ನ ಹೇಗೆ ಪಾಸ್ ಮಾಡಿದ್ದ ಅಂತ ಡೌಟ್ ಬಂದಿತ್ತು,,, ಇದೊಂದೇ ಅಲ್ಲ.... ಇದೆ ತರಹದ ಎಸ್ಟೋ ವಿಚಿತ್ರಗಳು ಅವನಲ್ಲಿ ಇವಗ್ಲೂ ಇದೆ.... ಇವಾಗ ಸ್ವಲ್ಪ ಪರವಾಗಿಲ್ಲ... ಬೇರೆ ಬೇರೆ ಕಂಪನಿ ಚೇಂಜ್ ಮಾಡಿ,,, US ಗೆ ಬೇರೆ 2 times ಹೋಗಿ ಬಂದಿದ್ದಾನೆ... ನನ್ನ ಬ್ಲಾಗ್ ನಲ್ಲಿ ಒಂದು ಹೊಸ ಪೋಸ್ಟ್ ಅಪ್ಡೇಟ್ ಮಾಡಿದೇನೆ ನೋಡೋ ಮಾರಾಯ ಅಂದ್ರೆ..." ನಂಗೆ ನೀನು ಕಳುಹಿಸಿರುವ ಮೇಲ್ ನ ಡಿಲೀಟ್ ಮಾಡೋದಕ್ಕೆ ಟೈಮ್ ಇಲ್ಲ,,, ಇನ್ನು ಇದನ್ನೆಲ್ಲಾ ಎಲ್ಲಿ ನೋಡೋಕೆ ಆಗುತ್ತೋ ಅಂತ ಹೇಳ್ತಾನೆ :-)
(ನೆನ್ನೆ ಯಾವುದೊ ಕಾರ್ಯಕ್ರಮಕ್ಕೆ ಅಂತ ನಮ್ಮ ಸ್ಕೂಲ್ ಫ್ರೆಂಡ್ಸ್ ಎಲ್ಲ ಸೇರಿದ್ವಿ,,, ಹಾಗೆ ಏನೋ ಹರಟೆ ಹೊಡೆಯುತ್ತ ಇರಬೇಕಾದರೆ 3 Idiots ಫಿಲಂ ಬಗ್ಗೆ ಮಾತಾಡ್ತಾ ಇರಬೇಕಾದರೆ ,,, ಅವಾಗ ನಾನು ಈ Idiot ಫ್ರೆಂಡ್ ನ ಪುರಾಣ ವನ್ನ ಹೇಳಿದೆ,,,, ಎಲ್ಲ ಕೇಳಿ ಬಿದ್ದು ಬಿದ್ದು ನಗ್ತಾ ಇದ್ರೂ....ಅವನು ಅಲ್ಲೇ ಪಕ್ಕದಲ್ಲೇ ಏನು ಗೊತಿಲ್ವೇನೋ ಅನ್ನೋ ಹಾಗೆ ಕೂತಿದ್ದ... :-))
ಗುರು
ReplyDeleteಚೆನ್ನಾಗಿದೆ ನಿಮ್ಮ ಸ್ನೇಹಿತನ ಅವಸ್ಥೆ
ಸುಂದರವಾಗಿ ಬರೆದಿದ್ದಿರಾ
ಹಹಾಹಹ.....
ReplyDeleteಸಕ್ಕತಾಗಿತ್ತು...
ಪರವಾಗಿಲ್ಲ ನನಗಿಂತ ದಡ್ಡರಿದ್ದಾರೆ....
ಅದು ಹೇಗೆ ಅಮೇರಿಕಾ ಹೋಗಿ ಬಂದ ಆ ಮಾರಾಯ ಅಂತೀನಿ....
ಮೇಲ್ ನ ಡಿಲೀಟ್ ಮಾಡೋದಕ್ಕೆ ಟೈಮ್ ಇಲ್ಲ ಅಂತಾನಲ್ಲ ಇನ್ನು ಓದೋಕೆ ಇನ್ನೆಲ್ಲಿ ಪುರುಸೊತ್ತು ಇದೆ ಪಾಪ!God Bless him...
ಒಹ್ ! ಚೆನ್ನಾಗಿದೆ.ನಗು ಬರತ್ತೆ.
ReplyDeleteASAP formatನ ಕಥೆ ತು೦ಬಾ ಸ್ವಾರಸ್ಯಕರವಾಗಿದೆ. ಹೊರಜಗತ್ತಿನ ಬಗ್ಗೆ ತಿಳುವಳಿಕೆ ಇಲ್ಲದ ಇ೦ಥವರನ್ನು ನಾವು "ಕೂಪಮ೦ಡೂಕ" ಅ೦ತೇವೆ.
ReplyDeleteha ha ha... i guessed it :)
ReplyDeletenice one sir.. :) hahaha :)
ReplyDeleteಒಳ್ಳೆ ಸ್ನೇಹಿತ ಗಂಟುಬಿದ್ದ ನಿಮಗೆ. ತಮಾಷೆಯಾಗಿದೆ
ReplyDeletehahaha chennagide, nanna maneyavaru ee katheyanna snehitarigella helta idru
ReplyDeleteಗುರು,
ReplyDeleteಹೊಸ ಫಾರ್ಮಾಟ್ ಕತೆ ಚೆನ್ನಾಗಿದೆ. ಕಂಪ್ಯೂಟರಿನ ಕೋಡ್‍ವರ್ಡುಗಳು ಬಂದು ಎಲ್ಲಾ ಹೀಗೆ ಆಗುತ್ತೆ ಅಲ್ವಾ...ತಮಾಷೆಯೆನ್ನಿಸಿತು.
ಒಳ್ಳೆ ತಮಾಷೆಯಾಗಿದೆ ಹೊಸ ಫಾರ್ಮಟ್ ಕಥೆ........
ReplyDeleteಶ್ಯಾಮಲ
ನಮಸ್ತೆ.,
ReplyDeleteನಿಮ್ಮ ಬರಹ ಹಾಸ್ಯಕರವಾಗಿದೆ ..
ಆದರೆ,
ನಿಮ್ಮ ಬರಹದಲ್ಲಿ 'ಷ' ಪದದ ಜಾಗವನ್ನು'ಸ' ಆಕ್ರಮಿಸಿ ಸ್ವಲ್ಪ ಓದಲು ಕಿರಿಕಿರಿ ಆಗಿದೆ.. 'ಅಸ್ಟು','ಅಸ್ಟೇ',' ಅದಸ್ಟು' ,'ಎಸ್ಟೋ'.. ಇವುಗಳ ಬದಲಾಗಿ 'ಅಷ್ಟು',ಅಷ್ಟೇ',ಆದಷ್ಟು','ಎಷ್ಟೋ'.. ಎಂದಿರಬೇಕಿತ್ತು..
ನನ್ನ ಮನಸಿನಮನೆಗೊಮ್ಮೆ ಬನ್ನಿ:http://manasinamane.blogspot.com/
ಗುರು ಸರ್,
ReplyDeleteಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ....ಹೌದು,,,ಇವನ ಇನ್ನ ಕೆಲವು ಅವಸ್ಥೆಗಳನ್ನ ಕೇಳಿದ್ರೆ ನಗು ಬರುತ್ತೆ....
ಹೌದು ಸವಿಗನಸು,,,
ReplyDelete೨ times ಅಮೆರಿಕಾಗೆ ಹೋಗಿ ಬಂದಿದ್ದಾನೆ,,,,,ಒಳ್ಳೆ cleaver ಹುಡುಗನೇ,, ಬಟ್ ಸ್ವಲ್ಪ ಹೀಗೆ ಆಡುತ್ತಾನೆ ಅಸ್ಟೇ :-)
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಮನ ಮುಕ್ತ
ReplyDeleteಹಾ ಹಾ, ಹೌದು ಪರಾಂಜಪೆ,,, ಕೆಲವೊಮ್ಮೆ,,, ನಾವು ಹೀಗೆ ಆಗಿ ಬಿಡುತ್ತೇವೆ... ಅದಕ್ಕೆ ಆದಸ್ತು ಹೊರಗಿನ ಪ್ರಪಂಚದ ಆಗು ಹೋಗು ಗಳನ್ನು ತಿಳಿದು ಕೊಳುತ್ತ ಇರಬೇಕು...ಅಲ್ವ
ReplyDeleteಥ್ಯಾಂಕ್ಸ್ ಶಿವಪ್ರಕಾಶ್ .... :-)
ReplyDeleteಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ snow white .... :-)
ReplyDeleteಹೌದು ದೀಪಸ್ಮಿಥ ಇಂಥ ಒಳ್ಳೆ ಸ್ನೇಹಿತರು ಇರಬೇಕು ಅವಾಗಲೇ ಸ್ವಲ್ಪ ಮಜಾ ಇರುವುದು..... ಕೆಲವೊಂದು ಸಂದರ್ಬಗಳಲ್ಲಿ ನಮಗೆ ಗೊತ್ತಿಲ್ಲದ ಹಾಗೆ ನಾವು ಮುಜುಗರಕ್ಕೆ ಒಳಗಾಗಿರುತ್ತೇವೆ !!!
ReplyDeleteಮನಸು
ReplyDeleteಹಾ ಹಾ,,, ಹೌದಾ, ನನ್ ಫ್ರೆಂಡ್ ಫೋನ್ ಮಾಡಿದ್ದ,,,ಏನೋ ನನ್ನ ಬಗ್ಗೆನೇ ಬರೆದಿದಿಯ,,, ಗುಡ್ ಮುಂದುವರಿಸು ಅಂತ.....
ಹೌದು ಶಿವೂ,, ಕೆಲವೊಂದು ಸಾರಿ,, ನಾವು ಗಲಿಬಿಲಿಗೆ ಒಳಗಾಗಿರುತ್ತೇವೆ.....ಇವಗಂತು ಎಲ್ಲ ಶಾರ್ಟ್ ಫಾರಂ.. ನಾವು ಮೇಲ್ ರಿಪ್ಲೈ ಮಾಡಬೇಕಾದರೆ ಹುಷಾರಾಗಿ ಮಾಡಬೇಕು.....
ReplyDeleteಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ ಶ್ಯಾಮಲಾ ರವರೆ...
ReplyDeleteಗುರು ದೆಸೆ,,,
ReplyDeleteನನ್ನ ಬ್ಲಾಗಿಗೆ ಸ್ವಾಗತ,,, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು,,, ನೀವು ಹೇಳಿರುವ ಪದಗಳನ್ನು ಸರಿಪಡಿಸಿಕೊಳ್ಳುತ್ತೇನೆ....ತಿಳಿಸಿ ಹೇಳಿದ್ದಕ್ಕೆ ಧನ್ಯವಾದಗಳು...
ನಿಮ್ಮ ಮನಸಿನ ಮನೆಗೆ ಖಂಡಿತ ವಾಗಿಯೂ ಬಂದು ಹೋಗುತ್ತೇನೆ... ಹೀಗೇ ಬರುತ್ತಿರಿ