Friday, June 25, 2010

ಒರಿಸ್ಸಾ - ಪ್ರವಾಸದ ಅನುಭವ... -- ಭಾಗ ಒಂದು ...

ನನಗೆ ಟ್ರೆಕ್ಕಿಂಗ್ , traveling ಅಂದ್ರೆ ತುಂಬಾ ಇಷ್ಟ....ಆದರೆ ಅನಿವಾರ್ಯ ಕಾರಣಗಳಿಂದ,, ನನ್ನ ಈ ಹವ್ಯಾಸವನ್ನು ಕಳೆದೊಂದು ವರ್ಷದಿಂದ ಕಳೆದುಕೊಂಡು ಇದ್ದೆ... ವರ್ಷಕ್ಕೆ ಏನಿಲ್ಲ ಅಂದರು ೪ ಅಥವಾ ೫ ಬಾರಿ ಎಲ್ಲಿ ಗಾದರೂ ಹೋಗಿ ಬರ್ತಾ ಇದ್ದೆ... ಆದರೆ ನನ್ನ ಪರ್ಸನಲ್ ಪ್ರಾಬ್ಲಮ್ ನಿಂದಾಗಿ...ಎಲ್ಲೂ ಹೋಗಲು ಸಾಧ್ಯವಾಗಿರಲಿಲ್ಲ..


ಆದರೆ ಲಾಸ್ಟ್ ವೀಕ್ ಅಂತ ಒಂದು ಅವಕಾಶ ಸಿಕ್ಕಿತು... ನಮ್ಮ ಆಫೀಸ್ ನ ಸಹದ್ಯೋಗಿ ಒಬ್ಬರ ಮದುವೆ ಸೆಟ್ ಆಗಿತ್ತು... ಅವರು ಒರಿಸ್ಸಾ ದವರು,,, ಮದುವೆ ಇದ್ದದ್ದು ಪೂರಿ ನಲ್ಲಿ.... ಹಾಗಾಗಿ ,, ನಮ್ಮನ್ನು ಎಲ್ಲ invite ಮಾಡಿದ್ದ.... ನಮ್ಮ ಟೀಂ ನವರೆಲ್ಲ ಪ್ಲಾನ್ ಮಾಡಿಕೊಂಡು,,,, ಹೋಗಿ ಬರೋಣ ಅಂತ ಒಂದು ತಿಂಗಳ ಮೊದಲೇ ಡಿಸೈಡ್ ಮಾಡಿದ್ವಿ....
ಪೂರಿ ಇಲ್ಲಿಂದ 1600 ಕಿಲೋ ಮೀಟರ್ ದೂರ ಇದೆ .. ಹೋಗುವಾಗ ಟ್ರೈನ್ ನಲ್ಲಿ ಹೋಗೋಣ ಬರೋವಾಗ ಫ್ಲೈಟ್ ನಲ್ಲಿ ಬರೋಣ ಅಂತ ಪ್ಲಾನ್ ಮಾಡಿ ಆಗಿತ್ತು... ಟ್ರೈನ್ ನಲ್ಲಿ ಆದರೆ 29 ಗಂಟೆ ಪಯಣ.... ನಾನಂತು ಅಸ್ಟು ದೂರ, ಟ್ರೈನ್ ನಲ್ಲಿ ಯಾವಾಗಲು ಹೋಗಿ ಇರಲಿಲ್ಲ.. ಇದು ನನ್ನ ಫಸ್ಟ್ long train journey .... ಹಾಗಾಗಿ ತುಂಬಾ expectation ಇತ್ತು.... ಬೇಕು ಅಂತಲೇ ಹೋಗಬೇಕಾದರೆ ಟ್ರೈನ್ ನಲ್ಲಿ ಹೋಗೋಣ ಅಂತ ಡಿಸೈಡ್ ಮಾಡಿದ್ವಿ... ಒಟ್ಟಿಗೆ ನಮ್ಮ ಗ್ಯಾಂಗ್ ಎಲ್ಲ ಹೋದರೆ ಮಜಾ ಇರುತ್ತೆ ಅಂತ..... :-)

ಮದುವೆ ಇದ್ದದ್ದು,, 21st ಸೋಮವಾರ,,, ನಾವು ಶನಿವಾರ ರಾತ್ರಿ... ಬೆಂಗಳೂರಿಂದ ಹೊರಟೆವು.... "ಗರೀಬ್ ರಥ " ಟ್ರೈನ್ ನಲ್ಲಿ ಮೊದಲೇ AC ಕೂಚ್ ಬುಕ್ ಆಗ್ಗಿತ್ತು.... ಈ ಟ್ರೈನ್ ಇಲ್ಲಿಂದ ಶನಿವಾರ ರಾತ್ರಿ ೧೨:೦೦ ಕ್ಕೆ ಹೊರಟು ,, ಸೋಮವಾರ ಬೆಳಿಗ್ಗೆ 6:00 ಗಂಟೆಗೆ ಪೂರಿ ತಲುಪಬೇಕಾಗಿ ಇತ್ತು...

train ಬುಕ್ ಮಾಡುವಾಗ .. ದಿನಗಳ ವ್ಯತ್ಯಾಸ ಆಗಿದ್ದರಿಂದ ನಮ್ಮಲ್ಲಿ ೪ ಜನರಿಗೆ ಬೇರೆ ಬೇರೆ ಬೋಗಿ ಸಿಕ್ಕಿತು..... ಆದರೆ ಎಲ್ಲ ಒಟ್ಟಿಗೆ ಇರಬೇಕಲ್ವ... ಸೊ ನೈಟ್ ನಲ್ಲೆ ಟೆನ್ಶನ್ ಶುರು... ಅವರಿವರನ್ನು ಕಾಡಿ ಬೇಡಿ,, ಇಲ್ಲಿಂದ ಅಲ್ಲಿಗೆ ಅಲ್ಲಿಂದ ಇಲ್ಲಿಗೆ ಶಿಫ್ಟ್ ಮಾಡಿಸ್ತ... ಒದ್ದಾಡುತ್ತ ಇದ್ವಿ.... ಕೊನೆಗೂ ಎಲ್ಲ ಒಂಬತ್ತು ತಲೆಹರಟೆ ತಲೆಗಳು ಒಂದೇ ಭೋಗಿ ನಲ್ಲಿ ಅದು ಅಕ್ಕ ಪಕ್ಕ ಬರ್ತ್ ನಲ್ಲೆ ಕೊಲಿತುಕೊಳ್ಳುವ ಹಾಗೆ ಮಾಡಿಕೊಂಡ್ವಿ....

ಟ್ರೈನ್ ಹೊರಡೋದು ಒಂದು ಗಂಟೆ ಇಲ್ಲಿಂದಲೇ ತಡ ಆಯಿತು.... ಆದರೆ ನಮ್ಮ ಪ್ಲಾನ್ ಪ್ರಕಾರ ಇದು ಸೋಮವಾರ ಬೆಳಿಗ್ಗೆ... ೭:೦೦ ಗಂಟೆಗೆಲ್ಲ ಪೂರಿ ನಲ್ಲಿ ಇರಬೇಕಾಗಿತ್ತು... ಇಲ್ಲದೆ ಹೋಗಿದ್ದರೆ ನಾವು ಅಂದುಕೊಂಡಿದ್ದ ಪ್ಲಾನ್ ಎಲ್ಲ ಎಡವಟ್ಟು ಆಗ್ತಾ ಇತ್ತು..... (ಕೊನೆಗೆ ಹಾಗೆ ಆಯಿತು ಬಿಡಿ.....)
ನಾನಂತು ಫುಲ್ ಎಕ್ಷೈತ್ ಆಗಿದ್ದೆ... ಫಸ್ಟ್ ಟೈಮ್ ಲಾಂಗ್ ಜೌರ್ನಿ ಅಲ್ವ... ಮೊದಲೇ ನನ್ನ ಕ್ಯಾಮೆರಾ ನೆಲ್ಲ ಸೆಟ್ ಮಾಡಿಕೊಂಡ ಇದ್ದೆ,, ದಾರಿನಲ್ಲಿ ಹೋಗಬೇಕಾದರೆ,,, ಸಿಕ್ಕುವ ಒಳ್ಳೆ ಒಳ್ಳೆ ಫೋಟೋ ತೆಗಿಯಬೇಕು ಅಂತ.... :-)
ರಾತ್ರಿ ಇಲ್ಲಿಂದ ಹೊರಟಾಗಲೇ ನಮ್ಮ ಹುಡುಗರ ಗಲಾಟೆ ಶುರು ಆಗಿತ್ತು,, ಪಾಪ ಅಕ್ಕ ಪಕ್ಕದ ಬರ್ತ್ ನವರೆಲ್ಲ ಏನು ಅಂದುಕೊಳ್ಳದೆ ಸಹಿಸಿ ಕೊಂಡು ಇದ್ರೂ... ಅದರಲ್ಲಿ ಕೆಲವು ನಮಗೂ ಫ್ರೆಂಡ್ ಕೂಡ ಆಗಿ ಬಿಟ್ ಇದ್ರೂ.....

ಶನಿವಾರ ರಾತ್ರಿ...ಹೋಗಿದ್ದೆ ಗೊತ್ತಾಗಲಿಲ್ಲ...ಎಲ್ಲರಿಗೂ ಆಯಾಸ ಆಗಿದ್ದ ಕಾರಣ ,, ಮನೆ ಇಂದ ತಂದಿದ್ದ ಚಪಾತಿ.. ರೂಟಿ,,, ಎಲ್ಲ ಕಾಲಿ ಮಾಡಿ.. ತೆಪ್ಪಗೆ ಬಿದ್ದುಕೊಂಡೆವು.... ನನಗಂತು ಜಾಸ್ತಿ ನಿದ್ದೇನೆ ಬರಲಿಲ್ಲ... ಬೆಳಿಗ್ಗೆ ಬೇಗ ಎಚ್ಚರ ಆಗಿತ್ತು.. ಅವಾಗಲೇ ಕ್ಯಾಮೆರಾ ತಗೊಂಡು ಬಾಗಿಲ ಬಳಿ ನಿಂತ್ಕೊಂಡ್ ಇದ್ದೆ..

ಒಟ್ನಲ್ಲಿ ಭಾನುವಾರ ಪೂರ್ತ ಒಳ್ಳೆ ಮಜಾ ಇತ್ತು... ನಾವು ಆಡಿದ್ದೆ ಆಟ... ಕೆಲವೊಂದು ಗೇಮ್ ಆಡಿದೆವು... ಅದು ಇದು ಮಾತಾಡಿಕೊಂಡು ಒಬ್ಬರ ಕಾಲು ಒಬ್ಬರು ಎಳ್ಕೊಂಡು..... ಮದ್ಯಾನದ ತನಕ ಟೈಮ್ ಪಾಸ್ ಆಯಿತು,,, ಆಮೇಲೆ ಯಾಕೋ ಬೋರ್ ಆಗೋಕೆ ಸ್ಟಾರ್ಟ್ ಆಗ್ತಾ ಇತ್ತು,,,

ಅವಾಗ..ನಮ್ಮಲ್ಲೇ ಇದ್ದ ಲ್ಯಾಪ್ಟಾಪ್ ನಿಂದ,, ಮೂವಿ ಶೋ ಸ್ಟಾರ್ಟ್ ಆಯಿತು... ಬೇಜಾರ್ ಆದಾಗಲೆಲ್ಲ ಮೂವಿ ನೋಡ್ತಾ ಮಜಾ ಮಾಡ್ತಾ ಕೂತಿದ್ವಿ.....

ಒಟ್ನಲ್ಲಿ ಒಳ್ಳೆ ಮಜಾ ಇತ್ತು ಟ್ರೈನ್ ನಲ್ಲಿ.......ಅಕ್ಕ ಪಕ್ಕ ಬರ್ತ್ ಜನ ,, ಮತ್ತೆ ಟೀ,, ಕಾಫಿ ಮಾಡುವ ಹುಡುಗರೆಲ್ಲರೂ ಬಂದು ನಮ್ಮ ಜಾಗದಲ್ಲೇ ನಿಂತು ಮೂವಿ ನೋಡ್ತಾ ಇದ್ರೂ.....

ನಾನಂತು ಅದ್ರ ಹೊರಗಡೆ,, ಮತ್ತೆ ಒಳಗಡೆ ಹೋಗ್ತಾ ಬರ್ತಾ,,, ಆಟ ಅದ್ಕೊಂಡ್ ಕುಷಿ ಪಡ್ತಾ ಇದ್ದೆ.. ಬೆಳಗಿನ ಟೈಮ್ ನಲ್ಲಿ ,,ನಾನು ಜಾಸ್ತಿ ಹೊರಗಡೆ ಅಂದ್ರೆ ಡೋರ್ ಪಕ್ಕ ಕ್ಯಾಮೆರಾ ಹಿಡಿದು ಕೊಂಡು ನಿಂತುಕೊಂಡಿದ್ದೆ ಆಯಿತು... ಮೊವಿಂಗ್ ಟೈಮ್ ನಲ್ಲಿ ನನ್ನ ಕ್ಯಾಮೆರಾ ದಲ್ಲಿ ಎಕ್ಷ್ಪೆರಿಮೆನ್ತ ಮಾಡಿದ್ದೆ ಮಾಡಿದ್ದು... ಫೋಟೋಸ್ ಚೆನ್ನಾಗಿ ಬರ್ತಾ ಇತ್ತೋ ಇಲ್ವಾ ಗೊತ್ತಿಲ್ಲ... ಆದರೆ,,, ಅದು ಇದು,, ಸೆಟ್ಟಿಂಗ್ಸ್ ಟ್ರೈ ಮಾಡ್ತಾ ನನ್ನ ಪಾಡಿಗೆ ನಾನು ಕುಷಿ ಪಡ್ತಾ ಇದ್ದೆ... ಅದಕ್ಕೆ ಸಾಥ್ ಆಗಿ ನನ್ನ ಫ್ರೆಂಡ್ ರಾಜೇಶ್ ಕೂಡ ಜೊತೆಗೆ ಕಂಪನಿ ಕೊಡ್ತಾ ಇದ್ದ... ಅವನಿಗೂ ಕ್ಯಾಮರ ಹುಚ್ಚು ಇತ್ತು..... :-)

ಅಂತು ಟ್ರೈನ್ ಅನುಭವ ಮಜಾ ಇತ್ತು,, ಆದರೆ ನಮ್ಮ ಟ್ರೈನ್ ತಲುಪಬೇಕಾದ ಸಮಯಕ್ಕಿಂತ ೬ ಗಂಟೆ ನಿದಾನವಾಗಿ ತಲುಪಿದಾಗ,,, ನಮಗೆ ಆದ ಸಿಟ್ಟು.. ಅಸ್ಟಿಸ್ತಲ್ಲ ...ನಮ್ಮ monday ಪ್ಲಾನ್ ಎಲ್ಲ ಹಾಳಾಗಿ ಹೋಗಿತ್ತು..... ಭಾನುವಾರ ಇದ್ದ ಸಡಗರ ಮಜಾ,,, ಸೋಮವಾರದ ಬೆಳಿಗ್ಗೆ ಆಗುವ ಹೊತ್ತಿಗೆ ಟೂಸ್....

ಯಾವಾಗ ತಲುಪುತ್ತೋ ನಮ್ಮ destination ಅನ್ನೋ ಹಾಗೆ ಆಗಿತ್ತು.... ಇರಲಿ,, ಅದನ್ನ ಆಮೇಲೆ ಹೇಳುತ್ತೇನೆ

ಒರಿಸ್ಸಾದ ಕೆಲವು ಕಡೆ ಅಂತು... ಬರಿ ನೀರಿರಲಿ,, ಮಿನರಲ್ bottle ಕೂಡ ಸಿಕ್ತಾ ಇರಲಿಲ್ಲ....ಅಲ್ಲಿನ ಜಾಗ ಅಂತು ತುಂಬಾ ಗಲೀಜು.....ಕೆಲವೊಂದು ಸ್ಟೇಷನ್ ನಲ್ಲಿ ರೈಲು,,೩೦ ನಿಮಿಷ ಜಾಂಡ ಹೊಡಿತಾ ಇತ್ತು,,, ಯಾಕೆ ಲೇಟ್ ಆಯ್ತೋ ಗೊತ್ತಿಲ್ಲ ಅಂತು ಇಂತೂ... ಆರು ಗಂಟೆ ತಡವಾಗಿ,, ಪೂರಿ ತಲುಪಿತು,,, ಸೋಮವಾರ ಬೆಳಿಗ್ಗೆ ಪ್ರತಿ ಗಂಟೆಗೂ ನಮ್ಮ ಸಹನೆನ ಟೆಸ್ಟ್ ಮಾಡ್ತಾ ಇತ್ತು ಈ ಗರೀಬ್ ರಥ.....:


ಮೊದಲ ಸಾರಿ ಟ್ರೈನ್ ನಲ್ಲಿ ಟ್ರೈನ್ ಹೋಗ್ತಾ ಹೋಗ್ತಾ ಇರಬೇಕಾದರೆ ತೆಗೆದ ಫೋಟೋ ಗಳನ್ನ ಅದರಲ್ಲಿ ನನಗೆ ಇಷ್ಟ ಆಗಿದ್ದನ್ನ.. ಕೆಳಗಡೆ ಹಾಕಿದ್ದೇನೆ... ನೋಡಿ......ನಿಮ್ಮ ಅಭಿಪ್ರಾಯ ತಿಳಿಸಿ...


ಮೊದಲ ದಿನ ರೈಲಿನಲ್ಲಿ ಹೋಗುತ್ತ ತೆಗೆದಿರುವ ಎಲ್ಲ ಫೋಟೋಗಳನ್ನು....ನನ್ನ ಪಿಕಾಸ ಅಲ್ಬುಮ್ಬ್ ನಲ್ಲಿ ಹಾಕಿದ್ದೇನೆ,,,, ಎಲ್ಲ ಫೋಟೋಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ http://picasaweb.google.com/guru.prasadkr/OrissaTripDay1Photos

(ಮುಂದಿನ ಭಾಗದಲ್ಲಿ... ಚಿಲಕ lake ಬಗ್ಗೆ,,, ಪೂರಿ, ಜಗನ್ನಾಥ ದೇವಸ್ತಾನದ ಬಗ್ಗೆ,,, ಹಾಗು ಕೊನಾರ್ಕ್ ಸೂರ್ಯ ದೇವಸ್ತಾನದ ಬಾಗ್ಗೆ ಚಿತ್ರ ಸಮೇತ ಹಂಚಿಕೊಳ್ಳುತ್ತೇನೆ...)
ಟ್ರೈನ್ ನಲ್ಲಿ ಹೋಗ್ತಾನೆ ತೆಗೆದಿದ್ದು,,,ಈ ಎಲ್ಲ ಫೋಟೊಗಳನ್ನ


ಅಂದ್ರ ಪ್ರದೇಶ ....ವಿಶಾಕಪಟ್ಟಣ, ಹತ್ತಿರದ ಒಂದು bridge .. 
ಬರಿ ಹೊರಗಡೆ ನೋಡ್ಕೊಂಡ್ ಫೋಟೋ ತೆಗಿತ ಇರೋದೇ ಕೆಲಸ...
ಒರಿಸ್ಸಾ - ಚಿಲಕ lake ಹತ್ತಿರ...
ಬೆಳಗಿನ ಜಾವ ಅರಳುತ್ತಿರ ತಾವರೆ, ಹೂವ....

ನಮ್ಮ ಟ್ರೈನ್ ಪಕ್ಕದಲ್ಲೇ ಹೋಗುತ್ತಿರುವ ಇನ್ನೊಂದು ಟ್ರೈನ್......

ಮಿನಿ ಥಿಯೇಟರ್.,... ಬೇಜಾರ್ ಅದಾಗ.... ಎಲ್ಲ ಸೇರಿ,, laptop ನಲ್ಲಿ ಫಿಲಂ ನೋಡ್ತಾ ಇದ್ವಿ.....ಮುಂದುವರಿಯುವುದು ....
10 comments:

 1. ಗುರು,

  ತುಂಬ ಚೆನ್ನಾಗಿದೆ ಚಿತ್ರಗಳು. ಒರಿಸ್ಸಾ ರಾಜ್ಯದ ಯಾವ ಸ್ಥಳವನ್ನೂ ನಾನು ನೋಡಿಲ್ಲ. ನಿಮ್ಮ ಅನುಭವ ಲೇಖನ ನನ್ನ ಪ್ರವಾಸಕ್ಕೆ ಸಹಾಯವಾಗುತ್ತದೆ. ಮುಂದಿನ ಭಾಗಕ್ಕೆ ಕಾಯುತ್ತಿರುವೆ.

  ಅದು "ಪುರಿ" ಅನ್ಸುತ್ತೆ.."ಪೂರಿ" ಬದಲಾಗಿ. ನನಗೆ ತಿಳಿದಂತೆ ಅದು ಪುರಿ ಜಗನ್ನಾಥ ದೇವಾಲಯ.

  ReplyDelete
 2. ಫೋಟೋಸ್ ಎಲ್ಲಾ ಚೆನ್ನಾಗಿದೆ ಹಾಗೆ ಪ್ರವಾಸದ ವಿವರಣೆ ಸಹ.
  ನಿಮ್ಮವ,
  ರಾಘು.

  ReplyDelete
 3. ಗುರು,

  ಒರಿಸ್ಸಾ ರೈಲು ಪ್ರವಾಸದ ಫೋಟೊಗಳು ಚೆಂದವಿದೆ...ಮತ್ತಷ್ಟು ಫೋಟೋಗಳಿಗೆ ಕಾಯುತ್ತಿರುವೆ..

  ReplyDelete
 4. Guru's World,

  ಚೆನ್ನಾಗಿದೆ.. ಮುಂದುವರೆಸಿ..
  ನೀವೆಲ್ಲರೂ ಒಟ್ಟಿಗೆ ಇರೋ ಫೋಟೋನಲ್ಲಿ ಎಡಗಡೆಯ ೨ನೆಯವರು(ಕೆಂಪುಬಿಳಿ ಬಟ್ಟೆ) ಹಾಗೂ ೪ನೆಯವರು(ಕೆಂಪು ಬಟ್ಟೆ ) ಬೇಸರದಲ್ಲಿದ್ದಾರೆ ಅನ್ಸುತ್ತೆ..

  ReplyDelete
 5. ಧನ್ಯವಾದಗಳು ಸುಬ್ರಮಣ್ಯ ಸರ್,,, ಹೌದು ಅದು ಪುರಿ,,,, ನಾನು ತಪ್ಪಾಗಿ ಪೂರಿ ಅಂತ ಬರೆದಿದ್ದೇನೆ,, ಸರಿಯಾದುದನ್ನು ಅಪ್ಡೇಟ್ ಮಾಡುತ್ತೇನೆ,,,,
  ಒರಿಸ್ಸಾ ರಾಜ್ಯ,, ನನಗೂ ಹೊಸದು,,, ತುಂಬಾ ಚೆನ್ನಾಗಿ ಇದೆ,,, ಒಂದು ಸರಿ ಹೋಗಿ ನೋಡಿ ಕೊಂಡ ಬರಬಹುದು,,,,, ಮತ್ತಷ್ಟು ಮಾಹಿತಿಗಳನ್ನ ಮುಂದಿನ ಲೇಖನದಲ್ಲಿ ಕೊಡುತ್ತೇನೆ,,,,

  ReplyDelete
 6. ಥ್ಯಾಂಕ್ಸ್ ರಾಘು.....

  ReplyDelete
 7. ಧನ್ಯವಾದಗಳು ಶಿವೂ,,,,, ಮತ್ತಷ್ಟು ಫೋಟೋಗಳು ಮತ್ತು ವಿವರಣೆ ಸಹಿತವಾಗಿ,, ಹಾಕುತ್ತೇನೆ,,,,

  ReplyDelete
 8. ಹಾ ಹಾ,, ಹೌದು,,, ಟ್ರೈನ್ journy ಅಲ್ವ.. ಸ್ವಲ್ಪ ಸುಸ್ತು ಹಾಗಿದ್ರೂ,,,,,ಅಸ್ಟೇ....
  ಧನ್ಯವಾದಗಳು ನಿಮ್ಮ ಅನಿಸಿಕೆಗಳಿಗೆ...

  ReplyDelete
 9. chennagide sir nimma kathana mattu photos
  mundina bhaga barali bega

  ReplyDelete
 10. photos sakath aagi idave.. especially moving train photo ista aaytu..

  ReplyDelete