Sunday, June 6, 2010

ಹುಳ ..ಕೀಟಗಳ ಹುಡುಕಾಟದ ಮಜಾ......

ಯಾಕೋ ಈ ಫೋಟೋಗ್ರಫಿ ಹುಚ್ಚು ಅಥವಾ ಕಿಕ್ಕ್ ನಿದಾನಕ್ಕೆ ನನ್ನನ್ನ ಸೆಳೀತ ಇದೆ... ಹಾಂ ಇದು ಒಂದು ತರ ಒಳ್ಳೆ ಅಭ್ಯಸನೆ..ಪ್ರತಿ ವಾರ ಟೈಮ್ ಸಿಕ್ಕರೆ ಯಾವುದಾದರು ಒಂದು ಪ್ಲೇಸ್ ಗೆ ಹೋಗಿ... ಏನಾದರೂ ಹೊಸದನ್ನು ಟ್ರೈ ಮಾಡೋಣ ಅಂತ ಅನ್ಕೊತ ಇದೇನೇ... ನೋಡೋಣ ಎಷ್ಟರ ಮಟ್ಟಿಗೆ ಆಸಕ್ತಿ ಉಳಿಸಿಕೊಳ್ತೇನೋ ಇದರಲ್ಲಿ ಅಂತ...


last ವೀಕ್ ಚಿಟ್ಟೆ ಗಳ ಹಿಂದೆ ಹೋದಂತೆ..ಈ ವಾರ...ಮನೆ ಹತ್ರ ಇರೋ ಉಲ್ಲಾಳ ಕೆರೆ ಹತ್ರ ಹೋಗಿ ಹಕ್ಕಿಗಳ ಚಿತ್ರಗಳನ್ನು ಸೆರೆ ಹಿಡಿಯಬೇಕು ಅಂತ ಅನ್ಕೊಂಡ್ ಇದ್ವಿ... ಆದರೆ ಅದಕ್ಕೆ ಅನುಕೂಲ ಆಗಲಿಲ್ಲ....ಸೊ ನಮ್ಮ ಜ್ಞಾನಭಾರತಿ campus ಒಳಗಡೆ ಇರೋ ಪುಟ್ಟ ಕಾಡಿನೊಳಗೆ ನುಗ್ಗಿ,, ಹುಳ ಕೀಟ,, ಹುಪ್ಪಟಗಳ, ಹಿಂದೆ ಬಿದ್ದು ಫೋಟೋ ತೆಗಿಯೋಕೆ ಹೋಗಿದ್ವಿ..... ಆದರೆ ಮೋಡ ಕವಿದ ವಾತಾವರಣ ಇದ್ದಿದ್ದರಿಂದ ಒಳ್ಳೆ ಒಳ್ಳೆ ಫೋಟೋ ಗಳನು ತೆಗೆಯಲು ಆಗಲಿಲ್ಲ....

ಈ ವಾರ ನನಗೆ ಹೊಸ ಫ್ರೆಂಡ್ಸ್ ಸಿಕ್ಕರು,,, "ರಮೇಶ್ ಬೆಳೆಗೆರೆ" ಅಂತ...ನನ್ನ ಕಸಿನ್ ಕೃಷ್ಣನ ಫ್ರೆಂಡ್... ಫೋಟೋಗ್ರಫಿ ನಲ್ಲಿ ಒಳ್ಳೆಯ ಅನುಭವ ಹೊಂದಿದ್ದಾರೆ...ಹಾಗೆ...ಬಂಡೀಪುರ ನಾಗರಹೊಳೆ , ಇಂತಹ ಕಡೆ ಹೋಗಿ nature ಬಗ್ಗೆ ರಿಸರ್ಚ್ ಕೂಡ ಮಾಡ್ತಾ ಇದ್ದಾರೆ... ಇವರ ಜೊತೆ,, ಇನ್ನು ಕೆಲವು ಹೊಸ ಫೋಟೋಗ್ರಫಿ ಫ್ರೆಂಡ್ಸ್ ಕೂಡ ಪರಿಚಯ ಅದ್ರು...

ಅಂತು ಇವರಿಂದ ಫೋಟೋಗ್ರಫಿ ಬಗ್ಗೆ ಕೆಲವು technical tips ,,ಸಿಕ್ತು,,,, Aparture , Shutter mode . ಮತ್ತೆ ಅದನ್ನು use ಮಾಡುವುದರ ಬಗ್ಗೆ... lighting ಎಫೆಕ್ಟ್ ಬಗ್ಗೆ... ಒಳ್ಳೆ ಮಾಹಿತಿ ಸಿಕ್ಕವು.... ಬೆಳಕು ಕಮ್ಮಿ ಇದ್ದ ಕಾರಣ,,, ಅಷ್ಟೊಂದು ಫೋಟೋಗಳನ್ನು ಇವೊತ್ತು ತೆಗೆಯಲು ಆಗಲಿಲ್ಲ....

ಆದರೆ ಚಿಕ್ಕ ಚಿಕ್ಕ ಹುಳ, ಮಿಡತೆ, ಐರೊಪ್ಲೈನ್ ಚಿಟ್ಟೆ, ಬಸವನ ಹುಳು. ಮಣ್ಣಿನ ಹುಳ... ಗೊದ್ದ , ಗೆದ್ದಲು ಹುಳ.... ಕಂಬಳಿ ಹುಳ... ಇವುಗಳನ್ನು ನೋಡಿ... ಅದರ ಕೆಲವು ಫೋಟೋಗಳನ್ನು ಆನಂದದಿಂದ ತೆಗೆದು....ಖುಷಿ ಪಟ್ವಿ... ಇದು ಒಂದುತರ ಒಳ್ಳೆ ಮಜದ ಅನುಭವ......ಮೊದಲೇ ಮಳೆ ಬಂದು ನೆಲ ಎಲ್ಲ ಸ್ವಲ್ಪ ಒದ್ದೆ ಆಗಿತ್ತು... ಸ್ವಲ್ಪ circus ಮಾಡ್ತಾ ಎಲ್ಲೆಂದರಲ್ಲಿ ಮಲ್ಕೊಂಡು ,,, ಕೂತ್ಕೊಂಡು.....ಕಾಡಿನ ಚಿಕ್ಕ ಚಿಕ್ಕ ಹುಳು ಹುಪ್ಪತ್ತೆಗಳ ಫೋಟೋ ತೆಗೆಯಲು ಸುಸ್ತಾಗಿ ಹೋಯ್ತು.... "ಕೆಲವು ಹುಳಗಳನ್ತು... ..ಏನ್ ದಿಮಾಕು ತೋರ್ಸಿಥ ಇದ್ವು ಗೊತ್ತ... ನಿನ್ನ ಫೋಟೋ ನ ನನ್ನ ಬ್ಲಾಗ್ ನಲ್ಲಿ ಹಾಕ್ತೇನೆ ಮಾರಾಯ, ಪೋಸ್ ಕೊಡು ಅಂದ್ರು ಕೂಡ ಕೊಡ್ತಾ ಇರಲಿಲ್ಲ....." ಆಮೇಲೆ ನಾವೇ ಅದು ಕೂತ್ಕೊಂಡ್ ಇದ್ದ ಎಲೆ ಕಾಂಡ ತಿರುಗು ಮುರುಗು ಮಾಡಿ ತೆಗೆದಿದ್ದು ಆಯಿತು....:-)

ಒಟ್ಟಿನಲ್ಲಿ ಹೂದವಾರದಂದೆ ಈ ಭಾನುವಾರದ ಬೆಳಗಿನ ಸಮಯ,,,ಗಿಡ ಗುಂಟೆಗಳ ಮದ್ಯದಲ್ಲಿ....ಮರ ಕೊಂಬೆಗಳ ನಡುವಿನಲ್ಲಿ.... ಜ್ಞಾನಭಾರತಿ ಯಾ ಪುಟ್ಟ ಕಾಡಿನಲ್ಲಿ ಖುಷಿ ಖುಷಿ ಆಗಿ ಕಳೆದು ಹೋಯ್ತು.....

ಇಂದಿನ ದಿನ ತೆಗೆದೇ ಕೆಲವು,,, ಫೋಟೋಗಳನ್ನು ನಿಮ್ಮ ಜೊತೆ ಹಂಚಿಕೊಳ್ಥ ಇದ್ದೇನೆ... ಚೆನ್ನಾಗಿ ಇದ್ದರೆ ನೋಡಿ ಪ್ರತಿಕ್ರಿಯಿಸಿ.....


ನನ್ನ ಫೋಟೋನು  ತೆಗಿರಿ.....:-)
?....
ಮುಂಜಾನೆಯ ಮಂಜಿನ ಬಿಂದುಗಳ ಸೊಬಗು ....

ಯಾವ ಹೂವು ನೀನು?

ಗೆದ್ದಲಿನ ಲೋಕ......

ಕಂಬಳಿ ಹುಳ.....
ಚಿಕ್ಕ ಹೊಂಡ.... ಪಕ್ಷಿ ಗಳಿಗಾಗಿ ಕಾದು ಮುಂದೆ ಹೋದ್ವಿ....

ಸಿಕ್ಕ ಸಿಕ್ಕ ಕಡೆ ಎಲ್ಲ ಹುಡುಕಿಕೊಂಡು ಹೋಗ್ತಾ ಇದೇವೆ.....:-)


ಹೂವೆ ...ಏನಿ ನಿನ್ನ ಅಂದವು....

ಮೋಡದ ಮರೆಯಾ...

ಇನ್ನು ಕೆಲವು ಫೋಟೊಗಳನ್ನ.... ನನ್ನ ಪಿಕಾಸ ಆಲ್ಬಮ್ ನಲ್ಲಿ ಹಾಕಿದ್ದೇನೆ....

28 comments:

 1. nice photography.!

  ಅಂತೂ ಹುಳು-ಹುಪ್ಪತೆಗಳನ್ನೂ ಬಿಡಲ್ಲ ಅಂತಾಯ್ತು!!!!!!!!!!!!

  ReplyDelete
 2. ಗುರು....

  ಮೊದಲು ಇಂಟರ್‍ನೆಟ್ಟಿನಿಂದ ವೈಚಿತ್ರ್ಯಗಳನ್ನು ಹುಡುಕಿ ನಮಗೆ ಉಣ ಬಡಿಸುತ್ತಿದ್ದೀರಿ...
  ಈಗ ನಿಮ್ಮದೇ ಫೋಟೋಗಳು... !

  ಫೋಟೊಗಳು ಸೊಗಸಾಗಿವೆ...

  ನಿಮ್ಮ ಹುಡುಕಾಟ ಮುಂದುವರೆಯಲಿ...

  ಅಭಿನಂದನೆಗಳು...

  ReplyDelete
 3. ಗುರು,

  ನಿನ್ನೆ ನೀವು ನಮ್ಮ ಮನೆಗೆ ಬಂದಾಗ ಈ ವಿಚಾರವನ್ನು ಹೇಳಿದ್ರಿ. ನನಗೂ ಕುತೂಹಲವಾಗಿ ನಿಮ್ಮ ಬ್ಲಾಗಿಗೆ ಬಂದ್ರೆ ತುಂಬಾ ಖುಶಿಯಾಯ್ತು. ಚಿತ್ರಗಳು ಹೇಗೆ ಇರಲಿ ನಿಮ್ಮ ಪ್ರಯತ್ನ ಮುಖ್ಯ. ನಿಮಗಿರುವ ಆಸಕ್ತಿಯೊಂದೇ ಸಾಕು ಮುಂದೆ ನಿಮ್ಮ ಇದೇ ದಾರಿಯಲ್ಲಿ ಸರಿಯಾಗಿ ಕರೆದೊಯ್ಯುತ್ತದೆಯೆನ್ನುವುದು ನನ್ನ ಭಾವನೆ. ಪ್ರತಿವಾರ ತಪ್ಪದೇ ಹೋಗಿ. ನಿಮ್ಮ ಪ್ರಯತ್ನಕ್ಕೆ all the best!

  ReplyDelete
 4. Guru, photos are excellent, doing a good job, continue, best wishes

  ReplyDelete
 5. ಹುಳ-ಹುಪ್ಪಟೆಗಳ ಲೋಕಕ್ಕೆ ನಮ್ಮನ್ನು ಕರೆದೊಯ್ದು ಸು೦ದರ ಚಿತ್ರಗಳ ದರ್ಶನ ಮಾಡಿಸಿದ್ದೀರಿ. ತು೦ಬಾ ಚೆನ್ನಾಗಿದೆ ನಿಮ್ಮ ಈ ಹವ್ಯಾಸ. ಮುಂದುವರಿಯಲಿ

  ReplyDelete
 6. ಖುಷಿಕೊಟ್ಟಿತು. ಚೆನ್ನಾಗಿವೆ. ಶುಭವಾಗಲಿ.

  ಹರೀಶ್ ಕೆ.ಆದೂರು
  ಸಂಪಾದಕ
  ಈಕನಸು.ಕಾಂ.

  ReplyDelete
 7. ಹಾ ಹಾ, ಹಾಗೇನು ಇಲ್ಲ ಪ್ರವೀಣ್,,, ನಾನು ಅಪ್ಪಟ ಸಸ್ಯಾಹಾರಿ.... ಹುಳ ಹುಪ್ಪಟ್ಟೆ,, ಬರಿ ಫೋಟೋ ತೆಗಿಯೋಕೆ ಮಾತ್ರ ಹೋಗಿದ್ದು....

  ReplyDelete
 8. ಥ್ಯಾಂಕ್ಸ್ ಪ್ರಕಾಶಣ್ಣ..... ಎಲ್ಲ ನಿಮ್ಮಗಳ ಪ್ರೋತ್ಸ್ಹಾಹ ಅಸ್ಟೇ...

  ReplyDelete
 9. ಶಿವೂ..
  ನಿಮ್ಮ ಮನೆಯಲ್ಲಿ ಆ ಪುಸ್ತಕ ನೋಡಿದಾಗಿನಿಂದ.. ಇದರಲ್ಲಿ ನನ್ನ ಆಸಕ್ತಿ ಇನ್ನು ಹೆಚ್ಹು ಆಗ್ತಾ ಇದೆ... ಇವಗೆನೋ ತುಂಬಾ ಇಂಟರೆಸ್ಟ್ ಇದೆ.. ಸಾಧ್ಯವಾದಷ್ಟು ಇದನ್ನ ಹೇಗೆ ಮುದುವರಿಸಿಕೊಂಡು ಹೋಗುತ್ತೇನೆ,,, ತುಂಬಾ ಕುಷಿ ಕೊಡುತ್ತೆ... ಹಾಗೆ ಆದಷ್ಟು ಬೇಗ,, ನಿಮ್ಮ ಕಡೆ ಇಂದ ಅ insect ಪುಸ್ತಕವನ್ನು ತರಿಸಿಕೊಳ್ಳುತ್ತೇನೆ..

  ReplyDelete
 10. ಥ್ಯಾಂಕ್ಸ್ ಸತ್ಯನಾರಾಯಣ ಸರ್.....

  ReplyDelete
 11. ಧನ್ಯವಾದಗಳು ಉಮೇಶ್ ... ಹೀಗೆ ಇರಲಿ ನಿಮ್ಮಗಳ ಪ್ರೋತ್ಸಾಹ

  ReplyDelete
 12. ಧನ್ಯವಾದಗಳು ಪರಾಂಜಪೆ... ಹೀಗೆ ಏನಾದರೂ ಮಾಡಿಕೊಂಡು active ಆಗಿ ಇರಬೇಕಲ್ವ... ಕಲಿಯಲು ತುಂಬಾ ವಿಷಯಗಳು ಇವೆ.. ಆಸಕ್ತಿ ಇರಬೇಕು ಅಸ್ಟೇ ನಮಗೆ,

  ReplyDelete
 13. ಹರೀಶ್ ಸರ್... ತುಂಬಾ ತುಂಬಾ ಥ್ಯಾಂಕ್ಸ್ ನನ್ನ ಬ್ಲಾಗಿಗೆ ಬೇಟಿ ನೀಡಿ ಪ್ರತಿಕ್ರಿಯೆ ನೀಡಿದ್ದಕ್ಕೆ....
  ನಾನ್ನು ನಿಮ್ಮ ಈಕನಸು.ಕಾಂ ನ ಅಭಿಮಾನಿ.... ತುಂಬಾ ಚೆನ್ನಾಗಿ ಮೂಡಿಬರ್ತ ಇದೆ... ಬಿಡುವು ಸಿಕ್ಕಾಗಲೆಲ್ಲ ಓದುತ್ತ ಇರುತ್ತೇನೆ...

  ReplyDelete
 14. ಪಿಕಾಸದಲ್ಲಿ ಇರೋ ಫೋಟೋಗಳನ್ನೂ ನೋಡಿದೆ... ನಿಮ್ಮ ಹೊಸ ಹವ್ಯಾಸ ನಮಗೂ ಖುಷಿ ಕೊಡುತ್ತಾ ಇದೆ :)

  ReplyDelete
 15. ಹೋದಲ್ಲೆಲ್ಲ ಕಾಟ ಕೊಡೊ ಹುಳುಗಳು , ಕೀಟಗಳು ಕೂಡ ನಿಮ್ಮ ಕ್ಯಾಮೆರಾ ಕಣ್ಣಲ್ಲಿ ಎಸ್ಟೊಂದು ಚೆನ್ನಾಗಿ ಕಾಣಸ್ತವೆ ಸರ್ ..
  ಫೋಟೋಜೆನಿಕ್ ಫೇಸ್ ಅನ್ಸುತ್ತೆ :D
  ತುಂಬಾ ಚೆನ್ನಾಗಿದೆ photography :)

  ReplyDelete
 16. guru,

  super foto's, heege munduvarisi

  ReplyDelete
 17. good one guru


  rakesh

  ReplyDelete
 18. ನಿಮ್ಮ ಈ ಆಸಕ್ತಿ ಹೆಚ್ಚಾಗಲಿ , ನಮಗಿನ್ನಷ್ಟು ಒಳ್ಳೇಯ ಫೋಟೊಗಳು ನೋಡಲು ಸಿಗಲಿ.

  ReplyDelete
 19. ಹೌದು ರಂಜಿತ,,,
  ಎಲ್ಲ ಹುಳು, ಚಿಟ್ಟೆ, ಇವುಗಳದ್ದೆಲ್ಲ ಫೋಟೋ ಗೆನಿಕ್ ಫೇಸ್ ,,, ಎಷ್ಟು ಚಿತ್ರ ಎಷ್ಟು ಕಾಲರ್ combination ಇರುತ್ತೆ ಅಲ್ವ ... :-) ,, ಇದೆ ಇರಬೇಕು ದೇವರ ಸೃಷ್ಟಿ

  ReplyDelete
 20. ಧನ್ಯವಾದಗಳು ಮನಸು....

  ReplyDelete
 21. ಥ್ಯಾಂಕ್ಸ್ ಸುಮಾ....

  ReplyDelete
 22. ಥ್ಯಾಂಕ್ಸ್ ಗುರು ಸರ್....:-)

  ReplyDelete
 23. ಹಾ ಹಾ,, ಥ್ಯಾಂಕ್ಸ್ ಸುದೇಶ್....

  ReplyDelete
 24. ಮೊದಲ ಬಾರಿ ನಿಮ್ಮ ಬ್ಲಾಗಿದೆ ಬಂದಿದ್ದೇನೆ... ಫೋಟೋಗ್ರಾಫಿ ನಿಜಕ್ಕೂ ಮನ ಸೆಳೆಯುತ್ತಿದೆ

  ReplyDelete