Thursday, June 28, 2012

ಅಂಕೆ ಗೌಡರ ಪುಸ್ತಕದ ಅಂಗಳ... ಅಂಕೆಗೂ ನಿಲುಕದ ಪುಸ್ತಕಗಳ ಬಂಡಾರ .....


 ಅಂಕೆ ಗೌಡರ ಪುಸ್ತಕದ  ಅಂಗಳ... ಅಂಕೆಗೂ ನಿಲುಕದ ಪುಸ್ತಕಗಳ ಬಂಡಾರ .....

ಸಾದನೆ ಅಂದ್ರೆ ಏನು..... ನಿಜವಾಗ್ಲೂ ನಾವೆಲ್ಲಾ ಅಂದುಕೊಂಡಿದ್ದನ್ನು ಸಾದಿಸಿದ್ದೇವ.....?  ಇ ಒಂದು ಪ್ರೆಶ್ನೆ ನನ್ನ ಮುಂದೆ ಬಂದಿದ್ದು,,, ನಾವೆಲ್ಲಾ ಅಂಕೆ ಗೌಡರ ಪುಸ್ತಕದ ಅಂಗಳದೊಳಕ್ಕೆ ಕಾಲಿಟ್ಟಾಗ..... ಒಬ್ಬೊಬ್ಬರದು ಒಂದೊಂದು ಹವ್ಯಾಸ ಇರುತ್ತೆ.... ಅವರ ಹಾವ್ಯಸದಿಂದ .... ಅವರು ಮಾಡುವ ಸಾದನೆ ಇಂದ... ಸಿಗೋ ಸಂತೋಷ ಇದೆ ಅಲ್ವ ....ವಃ....
ನಾನು ನೋಡಿರುವ ಅಥವಾ ಓದಿರುವ ಮಟ್ಟಿಗೆ... ಜೀವನದಲ್ಲಿ ಒಂದು ಗುರಿ ಅನ್ನು ಇಟ್ಟುಕೊಂಡು... ಜೀವನ ಪೂರ್ತ ಆ ಗುರಿ ಮುಟ್ಟಿ ತಾವು ಅಂದುಕೊಂಡಿದ್ದನ್ನು ಸಾದಿಸಿರುವ ಕೆಲವೇ ಕೆಲವು ಅಗ್ರಮಾನ್ಯರಲ್ಲಿ... ಈ ಅಂಕೆಗೌದರು ಒಬ್ಬರು  ......  
ಅಲ್ಲ ತಮಗಾಗಿ ಏನು ಉಳಿಸಿಕೊಳ್ಳದೆ ಎಲ್ಲವನ್ನು ಪುಸ್ತಕ ಖರೀದಿ  ಮಾಡಿ ಮುಂದಿನ ಪೀಳಿಗೆಗೆ ಹಾಗು ಸುತ್ತ ಮುತ್ತಲಿನ ಹಳ್ಳಿ ಜನರಿಗೆ, ವಿಧ್ಯಾರ್ಥಿ  ಗಳಿಗೆ ಸಿಗಲಿ ಅಂತ ಇಟ್ಟಿದ್ದಾರಲ್ಲ ನಿಜಕ್ಕೂ ಗ್ರೇಟ್.

ಇಂಥಹ ಒಂದು ಅದ್ಬುತ ಲೋಕಕ್ಕೆ ಒಂದು ವಿಸ್ಮಯ ಪ್ರಪಂಚಕ್ಕೆ ಹೋಗುವ ಅವಕಾಶ ನಮ್ಮ ಬ್ಲಾಗಿಗರಿಗೆ ಸಿಕ್ಕಿತ್ತು ...... ಇದಕ್ಕೆ ಅವಕಾಶ ಮಾಡಿಕೊಟ್ಟ ಬಾಲಣ್ಣ ಹಾಗು ಪ್ರಕಾಶಣ್ಣ ಅವರಿಗೆ ನನ್ನ ಅನಂತ  ನಮಸ್ಕಾರಗಳು .....
ಇವರ ಬಗ್ಗೆ ಇವರ ಪುಸ್ತಕ ಪ್ರೀತಿ ಬಗ್ಗೆ ಯೀನೆ ಬರೆದರೂ ಸಾಲದು.... ಇಲ್ಲಿಗೆ ಒಮ್ಮೆ ಹೋಗಿ ಬರಬೇಕು ಅಷ್ಟೇ..... ಅಲ್ಲಿ ಕಳೆದ ಆ 4 ಗಂಟೆಗಳು....ಅವಿಸ್ಮರಣೀಯ..... 
ಇಂತಹ ಪುಸ್ತಕ ಇಲ್ಲ ಅನ್ನುವ ಹಾಗೆ ಇಲ್ಲವೇನೋ... ನಮ್ಮ ಯಾವ ದೊಡ್ಡ ದೊಡ್ಡ ಗ್ರಂಥಾಲಯದಲ್ಲೂ ಇರುವುದಿಲ್ಲವೇನೋ ಅಷ್ಟು  ಪುಸ್ತಕಗಳು..... ಅಬ್ಬ.... ಏನು ಹೇಳೋದು ೨೦೦ ವರುಷ ಹಳೆಯ ಮುದ್ರಣದ ಕೆಲವು ಅಪರೂಪವೆನಿಸುವ ಪುಸ್ತಕಗಳು ಇವರ ಬಳಿ ಇವೆ... ಯಾವ ವಿಷ್ಯದ ಪುಸ್ತಕ ಬೇಕು ನಿಮಗೆ... ಫೋಟೋಗ್ರಫಿ... science  , history ., ಫಿಲಾಸಫಿ , ಮೆಡಿಕಲ್, ಹಳೆಗನ್ನಡ..ಸಂಸ್ಕೃತ, ಹಾಗೆ ಕೆಲವು ಗೆರ್ಮನ್, ಮತ್ತೆ ಫ್ರೆಂಚ್ ಭಾಷೆ ಪುಸ್ತಕಗಳು ಇವರ ಬಳಿ ಇವೆ... ಮೈಸೂರ್ ಮತ್ತೆ ಶ್ರೀರಂಗಪಟ್ಟಣ  ಕ್ಕೆ ಬರುವ ಎಲ್ಲಾ ಅನ್ವೇಷಕರಿಗೂ... ಇಲ್ಲಿನ ಇವರ ಗ್ರಂಥಾಲಯದ ಮಾಹಿತಿಗಳು ಬೇಕೆ ಬೇಕು....
ಇವರ ಬಗ್ಗೆ ಎಷ್ಟು ಬರೆದರೂ ಸಾಲದು.... ಇಂಥ ಅದ್ಬುತ ವ್ಯಕ್ತಿ ನಮ್ಮ ನಡುವೆ ಇದ್ದಾರೆ , ಇವರಿಗೆ ನಮ್ಮಗಳ ಸಹಕಾರ ಅಭಿಮಾನ ಬೇಕಾಗಿದೆ..... ದಯವಿಟ್ಟು ಕೈ ಜೋಡಿಸಿ......ತಮ್ಮ ಜೀವನವನ್ನು ಪುಸ್ತಕಗಳಿಗಾಗಿ ಮುಡಿಪಾಗಿಟ್ಟು,,,  ಇಂತಹ ನಿಸ್ವಾರ್ಥ ಸೇವೆ ಮಾಡುತ್ತಿರುವ ಅಂಕೆಗೌದರಿಗೆ.. ನಮ್ಮ  ಸಹಕಾರ ಸಿಗುವಂತಾಗಲಿ......

ಅಲ್ಲಿನ ಕೆಲವು ಚಿತ್ರಗಳನು ಹಾಕಿದ್ದೇನೆ... ನೀವೇ ನೋಡಿ.... 

ವಿಳಾಸ  
ಶ್ರೀ ಅಂಕೆ ಗೌಡ ಜ್ಞಾನ ಪ್ರತಿಷ್ಠಾನ [ರಿ] 
ಪುಸ್ತಕದ ಮನೆ
ವಿಶ್ವೇಶ್ವರ ನಗರ
ಹರಳ ಹಳ್ಳಿ
ಪಾಂಡವಪುರ ತಾಲೂಕು
ಮಂಡ್ಯ - 571434
ದೂರವಾಣಿ :  9242844934 ,9242844206ಪುಸ್ತಕಗಳ  ಭಂಡಾರ   


 ಇದು ಜ್ಞಾನ ದೇಗುಲ 
 ಅಂಕೆ ಗೌಡರು 
 1800 ಇಸವಿಯ ಮುದ್ರಣದ ಪುಸ್ತಕಗಳು 

ಚಿಣ್ಣರಿಗಾಗಿ ಅದ್ಬುತ ಪುಸ್ತಕಗಳ ಲೋಕ್ಹವೇ ಇಲ್ಲಿ ಇದೆ 


 ಅಂಕೆ ಗೌಡರಿಗೆ ನಮ್ಮ ಬ್ಲಾಗಿಗರ ಪರವಾಗಿ ಚಿಕ್ಕ ಸನ್ಮಾನ 


 ಅಂಕೆ ಗೌಡರ ಎಲ್ಲ ಸಾದನೆಗಳಲ್ಲು ಜೊತೆಗೆ ಇರುವ ಅವರ ಧರ್ಮ ಪತ್ನಿ...


 ಬಜ್ಜಿಗರ ಗ್ರೂಪ್ 

 ಮೊಟ್ಟ ಮೊದಲ ಸುಧಾ ಪತ್ರಿಕೆ 

7 comments:

 1. ಗುರು ಅಂಕೇಗೌಡರ ಪುಸ್ತಕಮನೆಯ ಬೇಟಿಯನ್ನು ಮಾಹಿತಿಸಮೇತ ಉಪಯುಕ್ತವಾಗುವಂತೆ ಬರೆದಿದ್ದೀರಿ. ಬ್ಲಾಗಿಗರು ಬ್ಲಾಗವನಕ್ಕೆ ಬೇಟಿಕೊಟ್ಟನಂತರ ಎರಡನೇ ಅತ್ಯುತ್ತಮ ಪ್ರಯತ್ನ ಅಂಕೇಗೌಡರ ಪುಸ್ತಕಮನೆಗೆ ಬೇಟಿ ಕೊಟ್ಟಿದ್ದು.
  ಬ್ಲಾಗಿಗರಿಗೆ ಜಯವಾಗಲಿ..ಅಂಕೇಗೌಡರ ಪುಸ್ತಕ ಮನೆ ವಿಶ್ವ ಖ್ಯಾತಿಯನ್ನು ಹೊಂದಲಿ..

  ReplyDelete
 2. ಚನ್ನಾಗಿ ಮೂಡಿ ಬಂದಿದೆ ಚಿತ್ರಗಳು..ವಿವರಣೆ ಎಲ್ಲಾ... ವೆಲ್ ಡನ್ ಗುರು.

  ReplyDelete
 3. ಗುರು,
  ವಿಳಾಸ ಸಮೇತ ಅಲ್ಲಿನ ವಿಷಯಗಳನ್ನು ತೆರೆದಿಟ್ಟಿದ್ದೀರಿ. ಅಂಕೆಗೌಡ್ರ ಬಗ್ಗೆ ಕೇಳಿ ಖುಷಿ ಎನಿಸುತ್ತೆ. ಧನ್ಯವಾದಗಳು ಮಾಹಿತಿಗೆ ಹಾಗೆ ಪೋಟೋ ತುಂಬಾ ಇಷ್ಟವಾದವು

  ReplyDelete
 4. ಗುರು ನಿಮ್ಮ ಲೇಖನ ಚೆನ್ನಾಗಿ ಮೂಡಿಬಂದಿದೆ. ಸುಂದರ ಚಿತ್ರಗಳಿಗೆ ಅಂದದ ಲೇಖನ , ನಿಮಗೆ ಜೈ ಹೋ
  ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

  ReplyDelete
 5. ತುಂಬಾ ಚೆನ್ನಾಗಿದೆ ಗುರು

  ReplyDelete
 6. ಗುರು..ಮಸ್ತ್ ಲೇಖನ..ಸೂಪರ್ ಚಿತ್ರಗಳು...ಸೊಗಸಾದ ಬರವಣಿಗೆ..ಒಂದು ಚಿಕ್ಕ ಯಾನವನ್ನು ತೋರಿಸುತ್ತೆ..
  ಹೌದು ನೀವು ಹೇಳಿದ ಹಾಗೆ ಅವರ ಅಭಿಮಾನಕ್ಕೆ, ಹವ್ಯಾಸಕ್ಕೆ ಕೈ ಗೂಡಿಸಬೇಕು..ಇದು ಎಲ್ಲ ಪುಸ್ತಕ ಪ್ರೇಮಿಗಳ ಜವಾಬ್ದಾರಿ ಕೂಡ..
  ಧನ್ವ್ಯವಾದಗಳು

  ReplyDelete
 7. ಒಳ್ಳೆಯ ಮಾಹಿತಿ.
  ಗುರು ನಿಮಗೆ ಬೆಂಗಳೂರಿನಲ್ಲೇ ಸುಮಾರು ಒಂದೂವರೆಲಕ್ಷ ಪುಸ್ತಕಗಳನ್ನು ಕಲೆಹಾಕಿರುವ ಒಬ್ಬ ಸಾಹಿತಿಯಿದ್ದಾರೆ, ಗೊತ್ತಾ? ಇಲ್ಲೇ ಕೋಣನಕುಂಟೆ ಕ್ರಾಸಿನಿಂದ ಮುಂದಕ್ಕೆ ವಾಜರಹಳ್ಳಿ ಇದೆಯಲ್ಲಾ ಅಲ್ಲಿ. ಬಿದಿರಿನಿಂದ ಸ್ಟ್ಯಾಂಡ್ ಮಾಡಿಸಿ, ವಿಷಯವಾರು, ಲೇಖಕರವಾರು ಪುಸ್ತಕಗಳನ್ನು ಅಚ್ಚುಕಟ್ಟಾಗಿ ಜೋಡಿಸಿಇಟ್ಟಿದ್ದಾರೆ. ಅಷ್ಟೇ ಅಲ್ಲ. ಪ್ರತಿಯೊಂದು ಪುಸ್ತಕದ ಬಗ್ಗೆಯೂ ಅವರು ಮಾತನಾಡಬಲ್ಲರು. ಅವರ ಹೆಸರು ಹರಿಹರಪ್ರಿಯ. ಿದುವರೆಗೆ ಸುಮಾರು 25 ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ. ಅವರ ಮನೆಯ ಹೆಸರೇ "ಪುಸ್ತಕ ಮನೆ". ಬಿಡುವಾದಾಗ ಭೇಟಿ ಕೊಡಿ.

  ReplyDelete