Friday, October 30, 2009

ಬತ್ತದ ಗದ್ದೆಯಲ್ಲೇ ಅರಳುವ ಸುಂದರ ಕಲೆ....!!!!!

       


ಈ ಮೇಲಿನ ಚಿತ್ರ ನೋಡಿದ್ರ... ಏನ್ ಸಕತ್ ಆಗಿ ಇದೆ ಅಲ್ವ ಆರ್ಟ್.?... ಹೌದು ಇದು ಎಲ್ಲಿ ಮಾಡಿರೋದು ಅಂತ ಗೊತ್ತ ...

ಇದನ್ನ ಎಲ್ಲಿ ಮಾಡಿದ್ದರೆ ಅನ್ನೋದನ್ನ ಹೀಗೆ ಮಾಡಿದ್ದರೆ ಅನ್ನೋದನ್ನ, ಕೇಳಿದ್ರೆ ನಿಮಗೆ ಆಶ್ಚರ್ಯ ಆಗುತ್ತೆ...
ಇಂಥ ಒಳ್ಳೆ ಯಾ ಆರ್ಟ್ ಅನ್ನು ಮಾಡಿರೋದು,, ಬತ್ತದ ಗದ್ದೆ ನಲ್ಲಿ...!!!! ಬತ್ತದ ಗದ್ದೆ ನಲ್ಲಿ ಹೀಗೆ ಮಾಡೋಕೆ ಆಗುತ್ತ ಅದು ಇಷ್ಟು ದೊಡ್ಡದಾಗಿ....?
ಹೌದು,, ಇದು ಯಾರೋ ಅನ್ಯ ಪ್ರಪಂಚದ alien ಮಾಡಿರೋದಲ್ಲ , ಇದನ್ನ ಮಾಡಿರುವುದು ಜಪಾನಿನ ರೈತರು...ಮಣ್ಣಿನ ಮಕ್ಕಳು....!!,,, ಆಶ್ಚರ್ಯ ಆಗ್ತಾ ಇರಬೇಕು ಅಲ್ವ... ಆದರೆ ನಂಬಲೇ ಬೇಕು...


ಹಾಂ ಇದನ್ನ ಸುಮ್ಮನೆ ಅವರ ಅಕ್ಕಿ ಬೆಳೆಯುವ ಹೊಲದಲ್ಲಿ ಪೇಯಿಂಟ್ ಅಥವಾ ಅನಿಮೇಷನ್ ಮಾಡಿರೋದಲ್ಲ... neet ಆಗಿ,, cleaver ಆಗಿ ಬತ್ತದ ತೆನೆಗಳನ್ನ ಬೆಳೆಸಿರೋದು...

ನಿದಾನಕ್ಕೆ ಬೇಸಿಗೆ ಮುಗಿಯುತ್ತ ಬಂದಂತೆ ಮುಂಗಾರಿನ ಸಮಯದಲ್ಲಿ ಈ ಬಿತ್ತನೆ ಕಾರ್ಯ ಶುರುವಾಗುತ್ತೆ.. ಬತ್ತದ ತೆನೆಗಳು ನಿದಾನಕ್ಕೆ ಬೆಳೆಯುತ್ತಾ ಬೆಳೆಯುತ್ತಾ...ಇಂಥ ಸುಂದರವಾದ ಕಲೆ ಬತ್ತದ ಗದ್ದೆ ಯಲ್ಲಿ ಬೆಳೆದು ನಿಲ್ಲುತ್ತೆ...

1

ಕುದುರೆ ಮೇಲೆ ಇರುವ ಸೈನಿಕನ ಚಿತ್ರ ಕಾಣುವ ಹಾಗೆ ಮಾಡಿರುವುದು ನೂರಾರು, ಸಾವಿರಾರು ಬತ್ತದ ತೆನೆ ಇಂದ ...ಇದರಲ್ಲಿ ಕಲರ್ ಹೇಗೆ ಬಂತಪ್ಪ ಅಂದರೆ,, ಅದೇ ಥರ ಕಲರ್ ಇರುವ ಬತ್ತದ ಸಸ್ಯಗಳಿಂದ....ಹೌದು ಇರು ಶುರು ಆಗಿದ್ದು 1993 ರಿಂದ ಅಂತ ...ಒಂದು ಚಿಕ್ಕ ಹಳ್ಳಿ,, tokyo ನಗರದಿಂದ 600 mile ದೂರ ಇರುವ "Inakadate " ಎಂಬ ಹಳ್ಳಿ ಯಲ್ಲಿ ಇದು ಶುರು ಆಗಿದ್ದಂತೆ . ಇವಾಗ ಇದು ವರ್ಷ ವರ್ಷ 150 ,000 ಪ್ರವಾಸಿಗರನ್ನು ಆಕರ್ಸಿಸುತ್ತ ಇದೆ ಅಂತೆ...


ಪ್ರತಿ ವರ್ಷ, ಇಲ್ಲಿನ ಹಳ್ಳಿ ಜನರು ಹಾಗೆ ರೈತರು ಸೇರಿಕೊಂಡು 4 ತರದ ಅಕ್ಕಿ ಯನ್ನು ಬೆಳೆಯುತ್ತರಂತೆ . ಇದರಲ್ಲಿ ಒಂದು ದೊಡ್ಡ ಹೊಲದಲ್ಲಿ. ಹಳ್ಳಿಗರು ಮತ್ತೆ ರೈತರು ಕೂಡಿ ಯೋಚಿಸಿ..ಪ್ಲಾನ್ ಮಾಡಿ,, ಈ ತರಹ ಕಲೆ ಇರುವ ಹಾಗೆ ಬತ್ತದ ತೆನೆಗಳನ್ನು ಜೋಡಿಸುತ್ತರಂತೆ..ಅದು ಬೆಳೆದು ದೊಡ್ದದಾದಮೇಲೆ...ನೋಡೋಕೆ ಎರಡು ಕಣ್ಣು ಸಾಲದು.....


ಇಲ್ಲಿನ ರೈತರು ಬೆಳ್ಯುವ ೪ ಥರದ ಅಕ್ಕಿಯನ್ನು ,,ಇಂಥ ಆರ್ಟ್ ನ ಮಾಡುವುದಕ್ಕೆ ಕಂದು ಮತ್ತೆ ಹಳದಿ ಎಲೆಗಳಿರುವ "kodaimai ರೈಸ್" ಎಂಬ ಬತ್ತದ ತೆನೆಯನ್ನು ಮಾಮೂಲಿ ಹಸಿರು ಎಲೆಗಳ ತೆನೆಯ "tsugaru roman "
ಎಂಬ ವಿದದ ಬತ್ತದ ತೆನೆಯ ಮದ್ಯ ಬೆಳೆಸುತ್ತರಂತೆ.... ಇದನ್ನು ಉಪಯೋಗಿಸಿಯೇ ಒಪ್ಪವಾಗಿ ಒಂದರ ಮದ್ಯ ಒಂದು ತೆನೆಗಳನ್ನು ನೆಟ್ಟು,,, ಇಷ್ಟು ಸೊಗಸಾದ ಬತ್ತದ ಗದ್ದೆಯ ಚಿತ್ರಗಳನ್ನು ಮಾಡುತ್ತಾರೆ....ಹಾಂ ಇದನ್ನು ಅಲ್ಲೇ ಹತ್ತಿರದಿಂದ ನೋಡಿದರೆ ಏನು ಗೊತ್ತಾಗುವುದಿಲ್ಲ... ಬತ್ತದ ಪೈರುಗಳು ನಿದಾನಕ್ಕೆ ಬೆಳೆಯುತ್ತಾ ಹೋದಂತೆ ಇದರ ಅಂದ ನೋಡಲು ಎರಡು ಕಣ್ಣು ಸಾಲದು,, ಇದನ್ನೂ ನೋದಲಿಕ್ಕೆಂದೇ. ಹಳ್ಳಿಯಲ್ಲಿ ಇರುವ mock castle tower of the village office ಮೇಲೆ ಹತ್ತಿ ನೋಡಬೇಕು... ಅವಾಗ ಇದರ ನೈಜ ಸೌಂದರ್ಯ ಗೊತ್ತಾಗುವುದು...
ಇಲ್ಲಿನ ರೈತರು ಮೊದಲು ಚಿಕ್ಕದಾದ ಅಕ್ರುತಿಗಳನ್ನ ಮಾಡುತ್ತ ಇದ್ದರಂತೆ... ಆಮೇಲೆ ಇದಕ್ಕೆ ಸಿಕ್ಕ ಪ್ರೋಸ್ಥಹ ಮನಗಂಡು,, ಇದರಲ್ಲೇ 3d ಚಿತ್ರಗಳನ್ನು ಹೋಲುವ ಜಪಾನಿನ ಸೈನಿಕರ , ರಾಜರ,, ಹೀಗೆ ಒಳ್ಳೆ ಒಳ್ಳೆಯ ಅಕ್ರುತಿಗಳನ್ನ ಮದೊದಕೆ ಶುರು ಮಾಡಿದ್ದರೆ... 2005 ರಿಂದ ಇಚೆಗೆ .. land owner ಜೊತೆ ಒಪ್ಪಂದ ಮಾಡಿಕೊಂಡು,,, ಅವರು ಬೆಳೆಯುವ ಬತ್ತದ ತೆನೆಗಳ ಮದ್ಯದಲ್ಲೇ ತುಂಬ ದೊಡ್ಡದಾದ ...ಹೆಚ್ಚು ಹೆಚ್ಚು ಈ ಥರ rice paddy art ಮಾಡೋಕೆ ಶುರು ಮಾಡಿದ್ದರಂತೆ....

ಇವಾಗಂತೂ ಜಪಾನಿನ ಚಿಕ್ಕ ಚಿಕ್ಕ ಹಳ್ಳಿಗಳಲ್ಲೂ ಇದೆ ಥರ ಮಾಡ್ತಾ ಇದ್ದರಂತೆ... ಇದನನ್ನ ನೋಡಲೆಂದೇ ಜಪಾನಿಗೆ ಆಸಕ್ತಿ ಪ್ರಿಯರ ದಂಡು,,,ಪ್ರವಾಸಿಗರ ದಂಡು ಹೋಗ್ತಾ ಇರೋದಂತು ನಿಜ..... ಎಂಥ ಕಲೆ ಅಲ್ವ....


ಜಪಾನಿನ "Inakadate ಮತ್ತೆ Yonezawa " ಹಳ್ಳಿಯ ರೈತರಿಗೆ ಹಾಗೆ ಹಳ್ಳಿಗರಿಗೆ ನನ್ನ ಒಂದು ದೊಡ್ದು ನಮನ ಇಲ್ಲಿಂದಲೇ..... ಇಂತಹ ಒಳ್ಳೆಯ ಕಲೆಯನ್ನು ಪರಿಚಯ ಮಾಡಿಕೊಟ್ಟಿದಕ್ಕೆ

(ನನಗೆ ಇದರ ಬಗ್ಗೆ ಒಂದು ಮೇಲ್ ಬಂದಿತ್ತು ,, ಹಾಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಹುಡುಕಿದಾಗ ಸಿಕ್ಕ ಮಾಹಿತಿ ಇದು) 

25 comments:

 1. ಅದ್ಬುತವಾಗಿದೆ ಗುರು

  ReplyDelete
 2. ಗುರು....

  ಅದ್ಭುತ...!
  ಎಷ್ಟು ಸೊಗಸಾಗಿದೆ ಅವರ ಕಲೆ ಮತ್ತು ಕ್ರಿಯೇಟಿವಿಟಿ...!

  ನನಗೆ ನಮ್ಮೂರ ರೈತರ ನೆನಪೂ ಆಯ್ತು..!

  ಈ ಕಲೆ, ಕ್ರಿಯಾಶೀಲತೆ ಎಲ್ಲವೂ...
  "ಸಮೃದ್ಧಿ" ಇದ್ದಲ್ಲಿ ಇರುತ್ತದಾ..?

  ಒಂದು ಚಂದದ ಲೋಕಕ್ಕೆ ಕರೆದೊಯ್ದ ನಿಮಗೆ ತುಂಬಾ.. ತುಂಬಾ ಥ್ಯಾಂಕ್ಸ್..!

  ReplyDelete
 3. ಗುರು,

  ನಿಜಕ್ಕೂ ಅದ್ವಿತೀಯವಾದ ಕಲೆಯನ್ನು ತೋರಿಸಿದ್ದೀರಿ.
  ನಮ್ಮ ಮಣ್ಣಿನ ಮಗ ದೇವೇಗೌಡರೂ ಈ ತರಹ ಏನಾದರೂ ಮಾಡಬಹುದೇನೋ !!
  ಅವರಿಗೂ ಇದನ್ನು ತೋರಿಸಿ ನೋಡಿ.

  ReplyDelete
 4. ಗುರು,
  ಬಹಳ ಚೆನ್ನಾಗಿದೆ...
  ಅಭಿನಂದನೆಗಳು...

  ReplyDelete
 5. ಅದ್ಭುತ, ಇದರ ಬಗ್ಗೆ ಹಿಂದೆಲ್ಲೋ ಒಮ್ಮೆ ಸ್ವಲ್ಪ ೋದಿದ್ದೆ. ಆದರೆ ಇಷ್ಟೊಂದು ವಿವರಗಳೊಂದಿಗೆ ಫೋಟೋಗಳನ್ನು ನೋಡಿದ್ದು ಇದೇ ಮೊದಲು. ನಿಮ್ಮ ಬ್ಲಾಗಿಗೆ ಬಂದರೆ ಇಂತಹುದೊಂದು ವಿಶೇಷ ಿದ್ದೇ ಇರುತ್ತದೆ. ನಿಮ್ಮ ೀ ಹುಡುಕಾಟ ಹೀಗೆಯೇ ಮುಂದುವರೆಯಲಿ

  ReplyDelete
 6. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಲೋದ್ಯಶಿ.. ನಿಮ್ಮ ಹೆಸರು ಚೆನ್ನಾಗಿ ಇದೆ

  ReplyDelete
 7. ಹೌದಲ್ವ ಪ್ರಕಾಶ್,, ಎಂಥ talent ಇರಬಹುದು ಅಲ್ಲಿನ ರೈತ ಜನರಿಗೆ .
  ನೀವು ಥಿಂಕ್ ಮಾಡಿರೋದು ಕರೆಕ್ಟ್ ಅಂತ ಕಾಣುತ್ತೆ.. ಎಲ್ಲಿ ಸಮೃದ್ಧಿ ನೆಮ್ಮದಿ.. ಇರುತ್ತೋ ಅಲ್ಲಿ ಇ ತರಹದ ಪ್ರಯೋಗಗಳಿಗೆ ಮುಂದಾಗುತ್ತಾರೆ ಅಂತ ಕಾಣುತ್ತೆ...

  ReplyDelete
 8. ಹಾ ಹಾ ದೇವೇಗೌಡರಿಗೆ ಇದನ್ನ ತೋರಿಸೋದ...ಅಸ್ಟೇ.....!!!! ಇಂತದನ್ನ ಮಾಡುವುದರಲ್ಲೂ ರಾಜಕೀಯ ಮಾಡಿರುತ್ತಾರೆ....:-)

  ReplyDelete
 9. ಧನ್ಯವಾದಗಳು ಸವಿಗನಸು ..

  ReplyDelete
 10. ಧನ್ಯವಾದಗಳು ಸತ್ಯನಾರಾಯಣ ಸರ್ ...

  ReplyDelete
 11. ಗುರು
  ಸೃಜನಶೀಲತೆ ಅ೦ದ್ರೆ ಇದೇನೇ. ತು೦ಬಾ ಚೆನ್ನಾಗಿದೆ. ನಿಮ್ಮ ಬ್ಲಾಗಿನಲ್ಲಿ ಇಂತಹ ವಿಚಾರಗಳನ್ನು ಓದಿದಾಗ, ನೋಡಿದಾಗ ಖುಷಿಯಾಗುತ್ತದೆ.

  ReplyDelete
 12. ಗುರು,

  ನಿಜಕ್ಕೂ ಇದರ ಬಗ್ಗೆ ಹೇಳೋಕೆ ನನಗೆ ಮಾತುಗಳೇ ಸಿಗುತ್ತಿಲ್ಲ. ಏಕೆಂದರೆ ಚಿತ್ರಗಳನ್ನು ಒಂದು ಕ್ಷಣ ನೋಡಿ ಖುಷಿಪಟ್ಟುಬಿಡುತ್ತೇವೆ. ಆದ್ರೆ ಇದನ್ನು ಹೇಗೆ ಪೈರಿನಿಂದ ಪ್ರಾರಂಭಿಸುತ್ತಾರೆ ಎನ್ನುವುದನ್ನು ನಾನು ಕಲ್ಪಿಸಿಕೊಂಡೆ. ಅದರ ಚಿತ್ರವೇ ಬರಲಿಲ್ಲ. ಅಂದಮೇಲೆ ಅವರಿಗೆ ಮೊದಲು ನೆಲವನ್ನು ಹೇಗೆ ಹದಮಾಡಬೇಕು, ನಂತರ ಚಿತ್ರವೆಷ್ಟು ದೊಡ್ಡದಾಗಿರಬೇಕು, ಅದಕ್ಕೆ ತಕ್ಕಂತೆ ಎಲ್ಲೆಲ್ಲಿ ಬೀಜಗಳನ್ನು ಬಿತ್ತಬೇಕು. ಅದು ಸ್ವಲ್ಪ ಅತ್ತ ಇತ್ತ ಆದರೂ ಚಿತ್ರ ಕೆಡುತ್ತದೆ. ಜೊತೆಗೆ ಬೆಳೆಯುವ ಸಮಯದಲ್ಲಿ ಮದ್ಯದ ಯಾವುದೇ ಪೈರುಗಳು ಹಾಳಾದರೂ ಚಿತ್ರದ ಅಂದ ಕೆಡುತ್ತದೆ.ಅದ್ದರಿಂದ ಹೆಚ್ಚು ಮುತುವರ್ಜಿ ವಹಿಸಬೇಕು. ಅಬ್ಬಾ ಏನೆಲ್ಲಾ ಇದೆ ಅಲ್ವಾ....ನಿಜಕ್ಕೂ ಈ ಜಪಾನ್ ರೈತರ ಕಲೆ ಎಲ್ಲಾ ಕಲೆಗಿಂತ ಮಿಗಿಲು ಅಂತ ನನಗನ್ನಿಸುತ್ತಿದೆ....ಗ್ರೇಟ್ ಅಲ್ವಾ....

  ReplyDelete
 13. ತುಂಬಾ ಚೆನ್ನಾಗಿದೆ....
  ಕನ್ನಡ ರಾಜ್ಯೋತ್ಸವದ ಶುಭಾಶಯಗಳು

  ReplyDelete
 14. Awesome!.. super agi ide guru..

  ReplyDelete
 15. abba!!.. jagattinalli enella majada vishaya untappa devre:):)

  ReplyDelete
 16. ಅಬ್ಬಬ್ಬಾ! ಏನೇನಿವೆ ನಿಮ್ಮ ಬ್ಲಾಗ್ ನಲ್ಲಿ! ಈ ಕಲೆಗಳ ಬಗ್ಗೆ ಏನಾದ್ರೂ ಹೇಳೋಕೂ ನನ್ನ ಹತ್ರ ಪದಗಳಿಲ್ಲ. ಅದ್ಭುತ ಎಂದಷ್ಟೇ ಹೇಳಬಲ್ಲೆ. ಪರಿಚಯಿಸಿದ ನಿಮಗೆ ಧನ್ಯವಾದಗಳು.

  ReplyDelete
 17. ಧನ್ಯವಾದಗಳು ಪರಾಂಜಪೆ

  ReplyDelete
 18. ಹೌದು ಶಿವೂ,,, ನಾನು ಇದರ ಬಗ್ಗೆ ಯೇಚಿಸುತ್ತ .,, ಇದೆಲ್ಲ ಸಾದ್ಯಾನ ಅಂತ ಅಂದುಕೊಂಡೆ.. ಆದರೆ ಇವರು ಮಾಡಿ ತೋರಿಸಿದ್ದರಲ್ಲ.. ಮೊದಲೇ ಚಿತ್ರ ಹೀಗೆ ಬರಬೇಕು ಎಂದು ಯಾವ ರೀತಿ caluculation ಹಾಕಿರ್ತರೋ... ಮತ್ತೆ ಅದಕ್ಕೆ ತಕ್ಕದಾಗಿ, ಬತ್ತದ ತೆನೆಗಳನ್ನ ಜೋಡಿಸುವ ರೀತಿ ಅಂತು ಅದ್ಬುತ.

  ReplyDelete
 19. Thanks you ಮನಸು,,.. ನಿಮಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

  ReplyDelete
 20. ಥ್ಯಾಂಕ್ಸ್ ರಘು, ಹೀಗೆ ಬರುತ್ತಿರಿ

  ReplyDelete
 21. ಹಾ ಹಾ, ಹೌದು ಗೌತಮ್ .. ತುಂಬ ವಿಚಿತ್ರ ವಿಷಯಗಳು ಇವೆ....ಅದರ ಹಿಂದೆ ಇರುವ ಕಲೆ, ತಾಳ್ಮೆ ಶ್ರದ್ದೆಗೆ ಬೆಲೆ ಕೊಡಲೇಬೇಕು... ಅಲ್ವ

  ReplyDelete
 22. very nice information & art is also too good by farmers

  ReplyDelete