Friday, February 5, 2010

ಕಲ್ಲಂಗಡಿ ಹಣ್ಣಿನಲ್ಲಿ ಅರಳುವ ಕಲೆ.....!!!!!

ಮೊನ್ನೆ ನಮ್ಮ ಸಂಬಂದಿಕರ ಒಂದು ಮದುವೆ Reception ಗೆ ಹೋಗಿದ್ದೆ. ನನ್ನ ಕಣ್ಣಿಗೆ ಒಂದು ಏನಾದರೂ ಒಂದು ಹೊಸ ವಿಷಯ, ವಿನ್ಯಾಸ ಬಿದ್ದರೆ...ಬಿಡೋಲ್ಲ ಅದನ್ನೇ ನೋಡಿ ಅದರ ಬಗ್ಗೆ ಇನ್ನು ಹೆಚ್ಚಿಗೆ ತಿಳಿದು ಕೊಳ್ಳೋಕೆ ಪ್ರಯತ್ನ ಪಡ್ತಾ ಇರ್ತೇನೆ .. ಸ್ವಲ್ಪ ಕ್ರಿಯೇಟಿವ್ ಮೈಂಡ್ ನನ್ನದು,, reception ನಲ್ಲಿ ಮಾಡಿರುವ back ground decoration ಬಗ್ಗೆ... color color ಹೂವ ಗಳನ್ನು ಜೋಡಿಸಿರುವ ಬಗ್ಗೆ, ನೋಡ್ತಾ ಇರ್ತೇನೆ, ಇದನ್ನ ಇನ್ನು ಯಾವ ರೀತಿ ಕ್ರಿಯೇಟಿವ್ ಆಗಿ ಮಾಡಬಹುದಿತ್ತು ಅಂತ ಯೋಚಿಸ್ತಾ ಇರ್ತೇನೆ...

ಹಾಗೆ ಇನ್ನು ಒಂದು ವಿಷಯ ಜಾಸ್ತಿ ಗಮನ ಸೆಳೆಯುವುದು ಅಂದ್ರೆ, ತರಕಾರಿ ಅಥವಾ ಹಣ್ಣುಗಳಲ್ಲಿ ಮಾಡಿರುವ ಕಲೆಯ ಬಗ್ಗೆ. (Fruit Art ) , ಹಸಿ ತರಕಾರಿಗಳನ್ನು ನೀಟ್ ಆಗಿ ಕತ್ತರಿಸಿ, ಎಷ್ಟು desing ನಿಂದ ಜೋಡಿಸಿರುತ್ತಾರೆ , ಹಾಗೆ ಬೂದ ಕುಂಬಳಕಾಯಿ, ಪರಂಗಿ ಹಣ್ಣು, ಕಲ್ಲಂಗಡಿ ಹಣ್ಣು,, ಹೀಗೆ ತರ ತರ ಹಣ್ಣು ಗಳನ್ನು ಆ ಸೀಸನ್ ನಲ್ಲಿ ಸಿಗುವ ಹಣ್ಣುಗಳಿಂದ ಒಳ್ಳೆ ಒಳ್ಳೆಯ ಕಲಾಕೃತಿ ಮಾಡಿರುತ್ತಾರೆ... ನೋಡೋಕೆ ಎಷ್ಟು ಚೆನ್ನಾಗಿ ಇರುತ್ತೆ ಅಲ್ವ...

ಒಂದು ಸರಿ ಅಂತು, ನನ್ನ ಫ್ರೆಂಡ್ ತಂಗಿ ಮದುವೆಗೆ ಅಂತ ಹೋಗಿದೆ.. ಅಲ್ಲಿ ಮಾಡೋ ಕೆಲಸ ಬಿಟ್ಟು,, ಈ ತರಕಾರಿ desing ಮಾಡುವವನ ಹಿಂದೆ ಬಿದ್ದು ಅವನು ಹೇಗೇ ಮಾಡುತ್ತಾನೆ,, ಎಲ್ಲಿಂದ ಕಲಿತ ಹೀಗೆ ಮಾಡುವುದನ್ನ ಅಂತ ಮಾತದ್ಕೊಂಡ್ ಕೂತ್ಕೊಂಡ್ ಇದ್ದೆ. ಆಮೇಲೆ ಅವನಿಗೆ ಬೇಕಾದ ತರಕಾರಿ,, ಹಣ್ಣುಗಳನ್ನು ನಾನೇ ತಂದು ಕೊಡುವ ಕೆಲಸ ಒಪ್ಪಿಕೊಂಡು,, ಅವರ ಜೊತೇನೆ ಸ್ವಲ್ಪ ಹೊತ್ತು ಇದ್ದೆ......ಪಾಪ ಅವನು ಒಬ್ಬ ಪೇಪರ್ ಕಟ್ ಮಾಡುವ ಆರ್ಟಿಸ್ಟ್,,, ಈ ಕಲೆ ಬಗ್ಗೆ ಏನು ಗೊತ್ತಿರಲಿಲ್ಲ,,, ದುಡ್ಡಿಗೋಸ್ಕರ,, ತರಕಾರಿಗಳಲ್ಲಿ desing ಮಾಡ್ತಾ ಇದ್ದ ಅಷ್ಟೇ ... ಆದರು ಅವನೊಬ್ಬ ಒಳ್ಳೆ ಆರ್ಟಿಸ್ಟ್... ತುಂಬ ಚೆನ್ನಾಗಿ ನೀಟ್ ಆಗಿ, ತರ ತರಹದ desing ಮಾಡಿ ಕೊಡ್ತಾ ಇದ್ದ..

Actually ಈ fruit ಆರ್ಟ್ "The art of fruit and vegetable carving " ಕಲೆ ಹುಟ್ಟಿಕೊಂಡ್ ಇದ್ದು ಚೀನಾ ದಲ್ಲಿ ಅಂತೆ, Chinese Tang Dynasty (AD 618-906) and Sung Dynasty (AD 960-1279) ಈ ಸಮಯದಲ್ಲಿ ಈ ಕಲೆ ಬೆಳಕಿಗೆ ಬಂದಿದ್ದು,, ಆಮೇಲೆ ನಿದಾನಕ್ಕೆ ಪ್ರಪಂಚದ ಎಲ್ಲ ಕಡೆ ಹರಡಿ ಹೊಸ ಹೊಸ ವಿನ್ಯಾಸಕ್ಕೆ, ಹೊಸ ಹೊಸ creativiti ಗೆ ಅವಕಾಶ ಮಾಡಿ ಕೊಟ್ಟಿದೆ.

ಇವಾಗ Thai ಮತ್ತೆ ಫ್ರೆಂಚ್ ದೇಶದವರು ಈ ಆರ್ಟ್ ಅನ್ನು ಹೆಚ್ಚಾಗಿ ಬಳಸುತ್ತಾ ಇದ್ದಾರೆ, ಆರ್ಟ್ ಕ್ಲಾಸ್ ನಲ್ಲಿ ಇದರ ಬಗ್ಗೆನೇ ಒಂದು subject ಕೂಡ ಇದೆ ಅಂತೆ..

ಕೆಲವೊಂದು ಮದುವೆ ಮನೆಗೆ ಹೋದಾಗ,, ಅಲ್ಲಿ ಇರುವ ಒಳ್ಳೆ ಯಾ fruit ಆರ್ಟ್ ಚಿತ್ರಗಳನ್ನ ಸೆರೆ ಹಿಡಿದಿದ್ದೆ, ಆದರೆ, ನನ್ನ ಹಾರ್ಡ್ ಡಿಸ್ಕ್ ಪ್ರಾಬ್ಲಮ್ ಆಗಿ ನಾನು collect ಮಾಡಿದ್ದ ಚಿತ್ರಗಳೆಲ್ಲ ಹಾಳಾಗಿ ಹೋಗಿದೆ.. ಅದರ backup copy ನ ಎಲ್ಲೊ CD ಮಾಡಿ ಇಟ್ಟಿದ್ದೆ ಆದರೆ ಇವಾಗ ಸದ್ಯಕ್ಕೆ ಸಿಕ್ತಾ ಇಲ್ಲ.. ಇನ್ನೊಮ್ಮೆ ಅದನ್ನ ನಿಮ್ಮಗಳ ಜೊತೆ share ಮಾಡ್ಕೋತೇನೆ,

ಸದ್ಯಕ್ಕೆ ನನ್ನ collection ನಲ್ಲಿ ಇದ್ದ ಕೆಲವು international art of fruit and vegetable carving festival ಫೋಟೋಗಳನ್ನು ಹಂಚಿಕೊಳ್ತಾ ಇದ್ದೇನೆ,,, ನೋಡಿ ಖುಷಿ ಪಡಿ,, ಹಾಗೆ ಇದರ ಬಗ್ಗೆ ನಿಮಗೆ ಏನಾದ್ರು ಗೊತ್ತಿದ್ದರೆ, ತಿಳಿಸಿ ಹೇಳಿ....

(ಹೆಚ್ಚಿನ ಮಾಹಿತಿಗಾಗಿ http://www.lartedellintaglio.it/  ಬೀಟಿ ಕೊಡಿ,, ಇದು ಯಾವುದೊ ಬೇರೆ language ನಲ್ಲಿ ಇದೆ . ಆದರೆ ಈ ಕಲೆಗೆ ಉಪಯೋಗಿಸುವ ಚಾಕು, ಇನ್ನಿತರ ಉಪಕರಣಗಳ ಬಗ್ಗೆ ಮಾಹಿತಿ ಇದೆ,, ನೋಡಿ,
ಹಾಗೆ ನನ್ನ ಹಿಂದಿನ ಬ್ಲಾಗ್ ಪೋಸ್ಟ್ ನಲ್ಲಿ ಅದ್ಬುತ ಕೈಚಳಕದ ಕಲಾಕೃತಿಗಳು
http://guruprsad.blogspot.com/2009/02/blog-post.html   fruit ಬಗ್ಗೆ ಒಂದು ಲೇಖನ ಹಾಕಿದ್ದೆ,, ನೋಡಿ..)

ಈ ಕಲೆಗೆ ಉಪಯೋಗಿಸುವ ಸಲಕರಣೆಗಳು........

34 comments:

 1. ಗುರು ಅವರೆ,
  ಮೊದಲು ನಿಮಗೆ ಧನ್ಯವಾದಗಳು.
  ಇ೦ಥಾ ಅಪ್ರತಿಮ ಕಲೆಯನ್ನು ನಮಗೆ ನೋಡುವ೦ತೆ ಮಾಡಿದ್ದಕ್ಕೆ..
  ಮತ್ತೆ ಆ ಕಲಾಕಾರರಿಗೂ ನನ್ನ ಅಭಿನ೦ದನೆಗಳು.ಒ೦ದಕ್ಕಿ೦ತಾ ಒ೦ದು carving
  ಚೆನ್ನಾಗಿದೆ.ಸುಮ್ಮನೆ..ಹಣ್ಣಿನಲ್ಲಿ ಕೆತ್ತನೆ ಮಾಡಿದ್ದನ್ನು ನೋಡಿದ್ದೆ..ಅಷ್ಟೆ.
  ಮಾಹಿತಿಯು ಚೆನ್ನಾಗಿದೆ.

  ReplyDelete
 2. ಗುರು ಸರ್ ,
  ಎಲ್ಲಿಂದ ಹುಡುಕಿ ತರಿರ ಸರ್ ಇದನ್ನೆಲ್ಲಾ
  ತುಂಬಾ ಒಳ್ಳೆಯ ಉಪಯುಕ್ತ ಬರಹ
  ಫೋಟೋಗಳು ಕಥೆ ಹೇಳ್ತಾ ಇವೆ
  ತುಂಬಾ ಸುಂದರ ವಿವರಣೆ

  ReplyDelete
 3. ಹೌದು. ಮದುವೆಗಳಲ್ಲಿ ಈಗ ಇಂತಹ ಕಲೆಯನ್ನೂ ಪ್ರದರ್ಷಿಸುತ್ತಾರೆ.
  ಆ ಅಂತ ಬಾಯಿ ಬಿಟ್ಕೋಂಡು ಇರುವ ಕಲಂಗಡಿ ಹಣ್ಣು ತುಂಬಾ ಇಷ್ಟವಾಯಿತು.

  ReplyDelete
 4. Thanks for this sakkath infomation Guru. Hannu tarakarigalalli araliruva kale manassige thumba kushi kodthu.

  ReplyDelete
 5. ಏನ್ ಗುರುವೇ ನಿಮ್ಮ ಕ್ರಿಯಾಶೀಲತೆ ! ಏನಾದರೊಂದು ಹೊಸತನ್ನು ಹುಡುಕುತ್ತೀರಿ....ಬರೆಯುತ್ತೀರಿ...ಸಂತೃಪ್ತ ಭಾವ ನಿಮ್ಮದು. :) ಕಲ್ಲಂಗಡಿ ಕಲೆಯಂತೂ superb...Thanks for sharing with us..

  ReplyDelete
 6. HANNINALLI KALE TUMBAA CHENNAAGIDE, KOTTIDDAKKE DHANYAVAADAGALU

  ReplyDelete
 7. ಗುರು,
  ಹಣ್ಣಿನ ಮೇಲೆ ಕಲೆ ಬಗ್ಗೆ ತುಂಬಾ ಮಾಹಿತಿಯನ್ನು ಕಲೆಹಾಕಿದ್ದೀರಿ...ಥ್ಯಾಂಕ್ಸ್...ನಾನು ಮದುವೆಮನೆಯಲ್ಲಿ ಇಂಥವುಗಳನ್ನು ನೋಡುತ್ತಿರುತ್ತೇನೆ. ಆದರೂ ಇಲ್ಲಿರುವ ಕಲೆಯಲ್ಲಿ finishing touch ತುಂಬಾ ಚೆನ್ನಾಗಿದೆ...

  ಧನ್ಯವಾದಗಳು.

  ReplyDelete
 8. ಗುರು ಅವರೇ....
  ಕಲೆ ನೋಡಿ ವರ್ಣಿಸಲು ಶಬ್ದಗಳೇ ಸಿಗುತ್ತಿಲ್ಲ... ಅನೇಕ ವಿಷಯಗಳನ್ನೂ ಹೇಳಿ, ಚಿತ್ರಗಳನ್ನು ನಮಗೆ ತೋರಿಸಿದ ನಿಮಗೆ ಧನ್ಯವಾದಗಳು... ನಿಜಕ್ಕೂ ಅತ್ಯದ್ಭುತವಾಗಿದೆ....

  ReplyDelete
 9. ಈ ಕಲೆಯ ಬಗ್ಗೆ ಮಾಹಿತಿ ಕೂಡಾ ಕೊಟ್ಟಿದ್ದೀರಿ. ಒಳ್ಳೆಯ ಚಿತ್ರಗಳು

  ReplyDelete
 10. tumba chennagide guru, ellinda tarteeri ee reetiya kalegaLannu, hudukteeralla nimge abhinandanegaLu.

  ReplyDelete
 11. ಗುರು,
  ಸಕ್ಕತ್ ಸರಕು....
  ಇ೦ಥಹ ಕಲೆಯನ್ನು ನಮಗೆ ತೋರಿಸಿದ್ದಕ್ಕೆ ನಿಮಗೆ ಧನ್ಯವಾದಗಳು...
  ಬಹಳ ಚೆನ್ನಾಗಿದೆ....

  ReplyDelete
 12. Chennagide Guru Avre... NOdi santoshavaitu

  ReplyDelete
 13. ಧನ್ಯವಾದಗಳು ಮನಮುಕ್ತಾ.. :-)

  ReplyDelete
 14. ಹಾಗೆ,, ಇದು ಒಂದು ತರಹ ವಿಚಿತ್ರ ಹವ್ಯಾಸ ನನಗೆ,,, ಏನಾದರೂ ಕ್ರಿಯೇಟಿವ್ ಆಗಿ ಇರೋದನ್ನ,,ಹುಡುಕ್ತಾ ಇರ್ತೇನೆ... ಚೆನ್ನಾಗಿ ಇರೋ ಮಾಹಿತಿ ಸಿಕ್ಕರೆ ನಿಮ್ಮಗಳ ಜೊತೆ ಹಂಚ್ಕೊತೇನೆ...... ಅಷ್ಟೇ :-)

  ReplyDelete
 15. ಹೌದು ರಾಜೀವ....ಮದುವೆ ಮನೆನಲ್ಲೇ ನಾನು ನೋಡಿ ಇದರ ಬಗ್ಗೆ ಆಸಕ್ತಿ ಬೆಳೆಸಿಕೊಂಡ್ ಇದ್ದು.. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ..

  ReplyDelete
 16. ಥ್ಯಾಂಕ್ಸ್ ನಿಶಾ....ನಿಮ್ಮ ಅಭಿಪ್ರಾಯಕ್ಕೆ....

  ReplyDelete
 17. ಥ್ಯಾಂಕ್ಸ್ ಆರ್ಯ... :-)

  ReplyDelete
 18. ನಮಸ್ತೆ ಲೋದ್ಯಶಿ... ಸೂಪರ್ ಅಲ್ವ ಆ ಕಲೆಗಾರ.... :-)

  ReplyDelete
 19. ಏನ್ ಮಾಡೋದು ಸುಭ್ರಮಣ್ಯ...ನನಗೆ.. ಇದು ಒಂದು ತರ ವಿಚಿತ್ರ ಹವ್ಯಾಸ... ನಿಮ್ಮಗಳ ಸ್ಪೂರ್ತಿದಾಯಕ ಅಭಿಪ್ರಾಯಗಳಿಂದ,, ಇನ್ನಷ್ಟು ಹೊಸದನ್ನು ಹುಡುಕಿ... ನಿಮ್ಮ ಜೊತೆ ಹಂಚ್ಕೋಬೇಕು ಅಂತ ಅನಿಸ್ತಾ ಇದೆ....

  ReplyDelete
 20. ಧನ್ಯವಾದಗಳು ಉಮೇಶ್ ಸರ್...

  ReplyDelete
 21. ಹೌದು ಶಿವೂ... ನೀವು ಮದುವೆ ಮನೆಗಳಲ್ಲಿ ಜಾಸ್ತಿ ನೋಡಿರುತ್ತೀರ.... ಅಲ್ವ...
  ನೀವು ಹೇಳಿದ ಹಾಗೆ ಇಲ್ಲಿ ಇರುವ ಆರ್ಟ್ ಗಳಲ್ಲಿ,, ಫಿನಿಷಿಂಗ್ ಟಚ್,,, ತುಂಬ ಚೆನ್ನಾಗಿ ಇದೆ.... ಒಳ್ಳೆ proffessional ..

  ReplyDelete
 22. ಧನ್ಯವಾದಗಳು ಪರಾಂಜಪೆ...

  ReplyDelete
 23. ಧನ್ಯವಾದಗಳು ಶ್ಯಾಮಲಾ ರವರೆ...

  ReplyDelete
 24. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ದೀಪಸ್ಮಿಥ....

  ReplyDelete
 25. ಮನಸು,,, ಹಾಗೆ ನನ್ನ ಮನಸು ಏನಾದರೂ ಹುಡುಕುತ್ತ ಇರುತ್ತೆ,, ಇಂಟರ್ನೆಟ್ ಅನ್ನೋ ಜಾಲದಲ್ಲಿ ಜಾಲಾಡಿ,, ನಿಮ್ಮಗಳ ಜೊತೆಗೂ ಹಂಚಿಕೊಳ್ತಾ ಇದ್ದೇನೆ ಅಷ್ಟೇ .. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು....

  ReplyDelete
 26. ಧನ್ಯವಾದಗಳು ಸವಿಗನಸು.......

  ReplyDelete
 27. ಗುರು, ತಡವಾಯ್ತು ಕ್ಷಮಿಸಿ, ನಿಮ್ಮ ಆಸಕ್ತಿಗೆ ಮತ್ತು ವಿಶೇಷ ಕಾಳಜಿ ಇಂತಹ ಅಮೂಲ್ಯ ವಿಷಯ ಚಿತ್ರ ಹೊತ್ತ ಲೇಖನ ನಿಮ್ಮ ಬ್ಲಾಗಿನ ಮೂಲಕ ನಮಗೆಲ್ಲ ಉಣಬಡಿಸಿದ್ದಕ್ಕೆ..ನಮನ.
  ನಿಜಕ್ಕೂ ಮಾನವನ ಕಲಾವಂತಿಕೆಗೆ, ಸೃಷ್ಠಿಸಾಮರ್ಥ್ಯಕ್ಕೆ ಬೆರಗಾಗುವ ಅನಾವರಣಗಳು ಈ ಎಲ್ಲ ಪ್ರಯತ್ನಗಳು.

  ReplyDelete
 28. ಎಲ್ಲಿ ಬೇಕಾದರೂ ಕಲೆಯನ್ನು ಹುಡುಕಬಹುದು

  ReplyDelete
 29. sorry for being late :) superb pics :)

  ReplyDelete