ನಾವು ಬ್ರೆಡ್ ನ ತಿನ್ನೋಕೆ ಮಾತ್ರ ಉಪಯೋಗಿಸುತ್ತೇವೆ ಅಲ್ವ... (ಹೌದು ಅದು ಇರೋದೇ ತಿನ್ನೋಕೆ ಅಂಥ,!! ) ಆದರೆ ಇಲ್ಲಿ ನೋಡಿ ಕೆಲವು ಮಹಾನುಭಾವರು,, ಬ್ರೆಡ್ ಬರಿ ತಿನ್ನೋದಕ್ಕೆ ಮಾತ್ರ ಅಲ್ಲ , ಟೈಮ್ ಸಿಕ್ರೆ ಈ ತರ ಚಿತ್ರ ಗಳನ್ನು ಮಾಡ್ತೇವೆ ಅಂಥ ತೋರಿಸಿದ್ದರೆ... ಏನ್ ವಿಚಿತ್ರ ಅಲ್ವ....!!!
ಹೌದು ನಾನು ಯೋಚಿಸ್ತಾ ಇದ್ದೆ.. ಚಿಕ್ಕವನಗಿರಬೇಕಾದರೆ..ಬ್ರೆಡ್ ಪೀಸ್ ನ ಚಿಕ್ಕ ಲೋಟದಲ್ಲಿ ಇರೋ ಕಾಫೀ ನಲ್ಲೋ ಅಥವ ಹಾಲ್ ನಲ್ಲೋ ಅಡ್ಡಿ ಕೊಂಡ ತಿನ್ನಬೇಕಾದರೆ ಬರಿ ಬ್ರೆಡ್ ನಲ್ಲೆ ಏನೇನೊ ತರ ಡಿಸೈನ್ ಮಾಡ್ತಾ ಇದ್ದದ್ದು ನೆನಪಿಗೆ ಬಂತು...
ಹಾಗೆ,, ಕೆಲವರು ಚಿಕ್ಕ ಅಕ್ಕಿ ಕಾಳಿನಲ್ಲಿ ಹೆಸರು ಬರೆಯುವುದು , ಡಿಸೈನ್ ಮಾಡುವುದು , ಮತ್ತೆ ದೊಡ್ಡ ದೊಡ್ಡ ಹೋಟೆಲ್ ನಲ್ಲಿ ಸಲಾಡ್ಸ್, ತರಕಾರಿನಲ್ಲಿ different ಆಗಿ ಜೋಡಿಸಿ ಕೊಡುವುದು, ಹಾಗೇನೇ ಮದುವೆ ಮನೆಗಳಲ್ಲಿ ದೊಡ್ಡ ದೊಡ್ಡ ಕುಂಬಳ ಕಾಯಿ ನಲ್ಲೋ ಅಥವ ಬೇರೆ ತರಕಾರಿನಲ್ಲೋ ಚೆಂದದ ಕಲಾಕೃತಿ ಗಳನ್ನ ಮಾಡಿರುತ್ತಾರೆ ಅಲ್ವ...
ಆದರೆ ಹೀಗೆ ಬ್ರೆಡ್ ನಲ್ಲಿ ಮಾಡಿರುವುದನ್ನ ಇದೆ ಮೊದಲ ಸಲ ನೋಡ್ತಾ ಇರೋದು.....


ಬ್ರೆಡ್ ಪೌಂಡ್ ನಲ್ಲಿ ಮಾಡಿರೋದು, ಆದರೆ ಈ ತರ ಚಿತ್ರ ಕಾಣುವ ಹಾಗೆ ಹೇಗೆ ಬೀಯಿಸಿದ್ದರೋ ಗೊತ್ತಿಲ್ಲ..!!!



ಬ್ರೆಡ್ ಒಳಗಡೆ ಚಿತ್ರ ಬಿಡಿಸಿರೋದಲ್ಲ ,, ಇದೆ ರೀತಿ ಬೈಸಿರೊದಂತೆ


(ಮದುವೆ ಮನೆಗಳಲ್ಲಿ ಮಾಡಿರುವ ತರಕಾರಿಯ ಕೆಲವು ವಿಚಿತ್ರ ಚಿತ್ರಗಳು ಇದೆ,, ಇನ್ನಸ್ಟು ಸಿಕ್ಕರೆ ಅದನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತೇನೆ)
ಗುರು...
ReplyDeleteಕ್ರಿಯೇಟಿವಿಟಿ ಇರುವವರು ಎಲ್ಲಿ ಏನು ಬೇಕಾದರೂ ಮಾಡುತ್ತಾರೆ...
ಅಲ್ಲವಾ...?
ಸೊಗಸಾದ ಚಿತ್ರಗಳು...!
ನಿಮ್ಮ ಹುಡುಕಾಟಕ್ಕೆ ನಮೋನ್ನಮಃ...
ನೀವು ಪ್ರತಿ ಬಾರಿಯ ಅಚ್ಚರಿ...
ಥ್ಯಾಂಕ್ಸ್....
ಗುರು...
ReplyDeleteಕ್ರಿಯೇಟಿವಿಟಿ ಇರುವವರು ಎಲ್ಲಿ ಏನು ಬೇಕಾದರೂ ಮಾಡುತ್ತಾರೆ...
ಅಲ್ಲವಾ...?
ಸೊಗಸಾದ ಚಿತ್ರಗಳು...!
ನಿಮ್ಮ ಹುಡುಕಾಟಕ್ಕೆ ನಮೋನ್ನಮಃ...
ನೀವು ಪ್ರತಿ ಬಾರಿಯ ಅಚ್ಚರಿ...
ಥ್ಯಾಂಕ್ಸ್....
Beautiful, super
ReplyDeletesuper!!! guru ello ello huduki tarteeri...
ReplyDeleteಎಲ್ಲಿ ಹುಡುಕುತ್ತೀಯಪ್ಪ ಗುರು....
ReplyDeleteಸೊಗಸಾಗಿದೆ....
ನಿಮ್ಮ ಹುಡುಕಾಟಕ್ಕೆ ಸಲಾಮ್...
ಸಕ್ಕತ್ತಾಗಿದೆ...
ReplyDeleteಮತ್ತೊಂದು ವಿಸ್ಮಯದೊಂದಿಗೆ ನಮ್ಮನ್ನು ಅಚ್ಚರಿಗೊಳಿಸಿದ್ದಕ್ಕೆ ಅಭಿನಂದನೆಗಳು..
ಇದನ್ನ ಹೇಗೆ ಮಾಡ್ತಾರೆ ಅಂತ ಇನ್ನೊಂದ್ ಸ್ವಲ್ಪ ವಿವರಣೆ ಕೊಟ್ಟಿದ್ರೆ ಇನ್ನೂ ಒಳ್ಳೇದಿತ್ತು...
ಜಾಸ್ತಿ expect ಮಾಡ್ತಿದಾನೆ ಅಂತ ಬೈಕೋಬೇಡಿ ಮತ್ತೆ... :)
ಗುರು ಸರ್ ,
ReplyDeleteನಂಗೆ ತಿನ್ನೋದಿಕ್ಕೆ ಏನಾದರೂ ಕೊಟ್ರೆ ಅದು ಮುಗ್ಸೋವರೆಗೆ ಬೇರೇನೂ ತಲೆಗೇ ಬರಲ್ಲ ..
ಇಲ್ಲಿ ನೋಡಿದ್ರೆ ??!!!!!!! ..............
ಕ್ರಿಯೇಟಿವಿಟಿ ಅಂದ್ರೆ ಇದೆ ಅಲ್ವ ... ಹೊಸ್ತಾಗಿದ್ದು ಏನಾದ್ರು ನೋಡ್ಬೇಕು ಅಂದ್ರೆ ನಿಮ್ಮಾ ಬ್ಲಾಗ್ ಗೆ ಬ೦ದಿರ್ತಿನಿ .. ತುಂಬಾ ಚೆನ್ನಾಗಿದೆ ಸರ್ ..
ಒಬ್ಬ !!! ಇವರ ಕ್ರಿಯೇಟಿವಿಟಿ ನೋಡಿದರೆ ಅಚ್ಚರಿ ಅನ್ನಿಸುತ್ತದೆ .
ReplyDeleteನಿಮ್ಮ ಹುಡುಕಾಟಕ್ಕೆ ವ೦ದನೆಗಳು .
ನಿಮ್ಮ ಬ್ಲಾಗಿನಲ್ಲಿ ಹೊಸದೇನಾದರು ಇದೆ ಎಂದು ತಿಳೀದಾಕ್ಷಣ ಬರುತ್ತೇನೆ, ಈ ರೀತಿ ಏನಾದರೂ ಹೊಸತು ಇರುತ್ತದೆ ಎಂಬ ಕಾರಣಕ್ಕೆ. ಯಾವಾಗಳು ನನಗೆ ನಿರಾಸೆಯಾಗಿಲ್ಲ!
ReplyDeleteಅಭಿವ್ಯಕ್ತಿಮಾರ್ಗಗಳ ಸಾಧ್ಯತೆ ಅನಂತ ಮತ್ತು ಅಕ್ಷಯ!
ಪ್ರಕಾಶ್,
ReplyDeleteನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು,, ಹೌದು,, ಕ್ರಿಯೇಟಿವಿಟಿ ಎಲ್ಲಿ ಹೀಗೆ ಬೇಕಾದರು ಬೆಳಕಿಗೆ ಬರುತ್ತೆ,,,ಅದು ಮಾಡೋ ತಾಳ್ಮೆ, ಅವರ ಮನಸಿನ ದೃಷ್ಟಿ ಕೋನ..ಇದೆಲ್ಲವುಗಳ ಮೇಲೆ ಅವಲಂಬಿತವಾಗಿ ಇರುತ್ತೆ....ಅಲ್ವ
Thank you umesh,
ReplyDeleteಮನಸು,,,
ReplyDeleteಹೀಗೆ,, ಎಲ್ಲಾದರು ಹುಡುಕ್ತಾ ಇರ್ತೇನೆ,,,ಹೀಗೆ ಹುಡುಕಾಡಿ ನಿಮ್ಮ ಜೊತೆ ಹಂಚಿಕೊಲ್ಲೊದರಲ್ಲೂ ಒಂದು ಥರ ಖುಷಿ ಇದೆ.....
ಹಾ ಹಾ, ಧನ್ಯವಾದಗಳು ಸವಿಗನಸು.......
ReplyDeleteದಿಲೀಪ್, ಹೌದು, ಇದರ ಬಗ್ಗೆ ಜಾಸ್ತಿ ಮಾಹಿತಿ ನನಗು ತಿಳಿದುಕೊಳ್ಳ ಬೇಕು ಅಂತ ಆಸೆ ಇತ್ತು,, ಆದರೆ ಸದ್ಯಕ್ಕೆ ಸಿಗಲಿಲ್ಲ....ಮುಂದೆ ಹುಡುಕಿ ನಿಮ್ಮ ಜೊತೆ share ಮಾಡ್ಕೋತೇನೆ...
ReplyDeleteನಿಮ್ಮ ಕುತೂಹಲ ಬರಿತ ಪ್ರತಿಕ್ರಿಯೆಗೆ ಧನ್ಯವಾದಗಳು
ತಿಂಡಿ ಪೋತಿ ರಂಜಿತ... (:-))!! ಥ್ಯಾಂಕ್ಸ್ ನಿಮ್ಮ ಪ್ರತಿಕ್ರಿಯೆಗೆ....actually ತಿನ್ನಬೇಕಾದರೆ ಬೇರೆ ಏನು ಯೋಚನೆ ಮಾಡಬರದಂತೆ...:-)
ReplyDeleteಧನ್ಯವಾದಗಳು ರೂಪ....
ReplyDeleteಸತ್ಯನಾರಾಯಣ ಸರ್,, ನೀವುಗಳು ಯಾವಾಗಲು ಹೀಗೆ ಬಂದು ಪ್ರೋಸ್ಥಹ ನೀಡ್ತಾ ಇರಿ...
ReplyDeleteನನಗು ಹೆಚ್ಚಿಗೆ ಹುಡುಕಿ ನಿಮ್ಮಗಳ ಮುಂದೆ ಶೇರ್ ಮಾಡ್ಕೊಳಕ್ಕೆ ಸ್ಫೂರ್ತಿ ಬರುತ್ತೆ... ಒಂದು ಒಳ್ಳೆ ಕೆಲಸ, ಕಲೆ.. ಒಂದೇ ಕಡೆ ಸ್ಥಿರವಾಗಿ ಇರಬಾರದು ಅಲ್ವ... ಅದನ್ನ ನೋಡಿ ಕೆಲವರು ಸ್ಫೂರ್ತಿ ಪಡೆದು, ಇನ್ನು ಏನಾದರೂ ಹೊಸ ಕಲೆ ಬೆಳಕಿಗೆ ಬರೋದಕ್ಕೆ ಅನುಕೂಲ ಆಗುತ್ತೆ...ಒಟ್ಟಿನಲ್ಲಿ ನಮ್ಮ ಮನಸು ಯಾವಾಗಲು ಕ್ರಿಯಶೀಲವಗಿರಬೇಕು,, ಏನನ್ನಾದರೂ ಹೊಸ ವಿಚಾರಗಳನ್ನು ತಿಳಿದುಕೊಳ್ತಾ ಇರಬೇಕು....ಮತ್ತೆ ಅದೇ ರೀತಿ ಯೋಚಿಸಬೇಕು...ಅವಾಗಲೇ innovative ಐಡಿಯಾ, ಕ್ರಿಯೇಟಿವ್ ideas ಬರುತ್ತೆ.
ನಿಮ್ಮ ಬ್ಲಾಗೆಂದರೆ ಅದು ಅಪರೂಪದ ಸೃಜನಶೀಲ ಕಲೆಗಾರಿಕೆಯ ಪ್ರದರ್ಶನ ತಾಣ. ನೀವು ತೋರಿಸುವ ಪ್ರತಿಯೊಂದು ವಿಷಯವು ಹೊಸತು ಮತ್ತು ವಿನೂತನವಾದದ್ದು. ತು೦ಬ ಚೆನ್ನಾಗಿದೆ.
ReplyDeleteಗುರು..ತಿನ್ನಬೇಕು ಎನ್ನುವವರಿಗೆ,,ಏನಿಲ್ಲದಿದ್ದರೂ ತಲೆ ತಿನ್ನುವುದಂತೂ ಬಂದೇ ಬರುತ್ತೆ...ಹಹಹ..ನಾನು ಯಾರನ್ನು ರೇಗಿಸ್ತಿರೋದು..ನಿಮಗೂ ಗೊತ್ತು...ಹಹಹಹ..
ReplyDeleteಆದ್ರೆ ನಿಮ್ಮ ಆನ್ವೇಷಣಾ ಸಾಮರ್ಥ್ಯ ಮತ್ತು ಪೇಶನ್ಸ್ ಗೆ ಬಹುಪರಾಕ್..ಹತ್ತು ಹಲವು..ತರ್ತೀರಿ ನಮ್ಮೆಲ್ಲರಿಗೆ ಮಾಹಿತಿ ಜೊತೆ ಫೋಟೋ ಸಹಾ ಒದಗಿಸ್ತೀರಿ..ಬ್ಲಾಗ್-ಬಲಗದ ವಿಭಿನ್ನರು ನೀವು...ಅಭಿನಂದನೆಗಳು..
ಗುರು,
ReplyDeleteತಿಂಗಳ ಮೊದಲ ವಾರ ನನಗೆ ಬಿಡುವು ಸಿಗೊಲ್ಲವಾದ್ದರಿಂದ ನಿಮ್ಮ ಬ್ಲಾಗಿಗೆ ಬರಲಾಗಲಿಲ್ಲ. ಹಾಗೆ ಬ್ರೆಡ್ಡು ತಿನ್ನುವ ವಿಚಾರವಾದ್ದರಿಂದ ನಿದಾನವಾಗಿ ತಿಂದರಾಯಿತು[ಬ್ರೆಡ್ಡು ಕಾಯಿಲೆ ಬಂದವರು ತಿನ್ನುವುದು ಅನ್ನೋದು ನಮ್ಮ ಕಡೆ ಮಾತು]ತಡಮಾಡಿದೆ[ತಮಾಷೆಗೆ].
ನೀವೇಳಿದಂತೆ ಈ ಜನ ಏನನ್ನು ಬಿಡುವುದಿಲ್ಲ ಕಣ್ರೀ...ಅವರ ಕಲೆಗೆ ಕ್ರೀಯೇಟಿವಿಟಿಗೆ ಏನು ಹೇಳಲಿ,
ಮತ್ತೆ ಅದೆಲ್ಲಾ ಇರಲಿ, ಇಂಥವರನ್ನು ಹುಡುಕಾಡುವ ನಿಮ್ಮ ಕುತೂಹಲಕ್ಕೆ ಏನೇಳಲಿ....
ಧನ್ಯವಾದಗಳು.
ಒಳ್ಳೆ ವಿಚಿತ್ರವಾದ ಕಲೆ. ಬಿಟ್ಟರೆ ಅನ್ನ ಸಾರಿನಲ್ಲೂ ಚಿತ್ರ ಬಿಡಿಸ್ಬಿಡ್ತಾರೆ ಇವರು ;-)
ReplyDeleteನಿಮ್ಮ ಹುಡುಕಾಟ ಹೀಗೇ ಮುಂದುವರೆಯಲಿ.
ತುಂಬಾ ಚೆನ್ನಾಗಿದೆ.... ಹೊಸದನ್ನು ಹುಡುಕಿ ನಮಗೆ ತೋರಿಸುವ ನಿಮ್ಮ ಶ್ರಮಕ್ಕೆ ಧನ್ಯವಾದಗಳು. ನಾನು ನಿಮ್ಮ ಬ್ಲಾಗ್ ನ ಕೊಂಡಿ ನನಗೆ ತಿಳಿದವರಿಗೆಲ್ಲಾ ಕಳಿಸಿದೆ.. ನನಗಷ್ಟು ಸಂತೋಷವಾಯಿತು. ಮಾಡುವ ಮನಸ್ಸಿದ್ದರೆ, ಏನು ಬೇಕಾದರೂ ಮಾಡಬಹುದು ಅಲ್ಲ್ವಾ?
ReplyDeleteಶ್ಯಾಮಲ
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಪರಾಂಜಪೆ ರವರೆ
ReplyDeleteಗೊತಾಯ್ತು ಜಲನಯನ ,, ನೀವು ಯಾರನ್ನು ರೆಗಿಸ್ತ ಇದ್ದೀರಾ ಅಂತ...
ReplyDeleteನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
ಶಿವೂ,
ReplyDeleteನಿದಾನಕ್ಕದರು ಬ್ರೆಡ್ ತಿನ್ನುವುದಕ್ಕೆ ಬಂದರಲ್ಲ ಅಸ್ಟೇ ಸಾಕು, :-)
ಇನ್ನು ನನ್ನ ಕುತೂಹಲಕ್ಕೆ ಏನು ಹೇಳಬೇಕಾಗಿಲ್ಲ.. ನನ್ನ ಜೊತೆ ನಿಮಗೂ ಒಂದಸ್ಟು ವಿಷಯಗಳ ಪರಿಚಯವಾಗುತ್ತೆ ಅಲ್ವ...ಅಸ್ಟೇ
Thanks ರಾಜೀವ ...
ReplyDeleteಹಾ ಹಾ ತುಂಬ ಧನ್ಯವಾದಗಳು ಶ್ಯಾಮಲಾ ರವರೆ ..
ReplyDeleteolle creativity ri...
ReplyDeleteVery Interesting...!! ತುಂಬಾ ಚೆನ್ನಾಗಿದೆ. ಈವರೆಗೆ ನಾನು ನೋಡಿರಲಿಲ್ಲ ಬ್ರೆಡ್ ಆರ್ಟ್. ವಿನೂತನ ಪ್ರಯತ್ನ.
ReplyDeleteಪ್ರತಿಕ್ರಿಯೆಗೆ ಧನ್ಯವಾದಗಳು ಶಿವ ಪ್ರಕಾಶ್
ReplyDeleteಪ್ರತಿಕ್ರಿಯೆಗೆ ಧನ್ಯವಾದಗಳು ತೇಜಸ್ವಿನಿ
ReplyDeleteತುಂಬಾ ಚೆನ್ನಾಗಿದೆ!! ಹೊಸದನ್ನು ಹುಡುಕಿ ನಮಗೆಲ್ಲಾ ತೋರಿಸುವ ನಿಮ್ಮ ಶ್ರಮಕ್ಕೆ ಧನ್ಯವಾದಗಳು ಗುರು ಅವರೆ:)
ReplyDeleteನನ್ನ ಮಗಳಿಗೆ ಊಟ ಮಾಡಿಸುವ ನೆಪದಲ್ಲಿ ನಾನೂ ಕೆಲವೊಂದು ಬ್ರೆಡ್, ದೋಸೆ, ಪ್ಯಾನ್ ಕೇಕ್ ಇತ್ಯಾದಿಗಳಲ್ಲಿ ಆರ್ಟ್(?) ಮೂಡಿಸಿದ್ದೀನಿ.. ಮುಂದೊಮ್ಮೆ ಅವಳ ಬ್ಲಾಗ್ ನಲ್ಲಿ ಹಾಕುವೆ!