Monday, September 28, 2009

ಮನಸಿನ ಕಲ್ಪನೆಯ ಚಿತ್ತಾರ....!!!!!


ಈ ಮೇಲಿನ ಚಿತ್ರ ನೋಡಿ, ಎಷ್ಟು ಚೆನ್ನಾಗಿ ಇದೆ ಅಲ್ವ... ಎಂಥ ಫೋಟೋಗ್ರಫಿ ಸಕತ್ ಆಗಿ ತೆಗೆದಿದ್ದಾರೆ ಅಂಥ ಅನ್ಕೊತಾ ಇದ್ದೀರಾ ಅಂದರೆ ಅದು ತಪ್ಪು....!!!!! ಹೌದು ನಾನು ಮೊದಲು ಹಾಗೆ ಅನ್ಕೊಂಡೆ... ಆದರೆ ಇದು ಫೋಟೋಗ್ರಫಿ ಅಲ್ಲ.... ಒಬ್ಬ ಮನುಷ್ಯನ ಮಸಸಿನ ಕಲ್ಪನೆಯ ಚಿತ್ತಾರ ಅವರ ಕೈ ಇಂದ ಮೂಡಿ ಬಂದಿದೆ... ಹೌದು ಇದು ಪೇಂಟಿಂಗ್,!!!! ಖಂಡಿತ ಕ್ಯಾಮೆರಾದಲ್ಲಿ ತೆಗೆದಿರುವ ಫೋಟೋ ಅಲ್ಲ.....!!!! ಆಶ್ಚರ್ಯ ಆಗ್ತಾ ಇರಬೇಕು ಅಲ್ವ... ಹೌದು,, ಇದು ಒಂದೇ ಅಲ್ಲ,,, ಇಂಥಾ ಎಸ್ಟೋ ಫೋಟೋಗಳು,,, ಅಲ್ಲ ಅಲ್ಲ ಪೇಂಟಿಂಗ್ ಚಿತ್ರಗಳನ್ನು ಇವರು ಬಿಡಿಸಿದ್ದಾರೆ.....
ಇಂತಹ ಅದ್ಬುತ ಕಲ್ಪನೆಗಳನ್ನು, ಕೆಲವೊಮ್ಮೆ ಫೋಟೋದಲ್ಲೂ ತೆಗೆಯುವುದಕ್ಕೆ ಆಗದೆ ಇರೋದನ್ನ ತಮ್ಮ ಕೈಚಳಕದ ಮೂಲಕ ಪೇಂಟಿಂಗ್ ನಲ್ಲಿ ಮೂಡಿಸಿರುವ ಮಹಾತ್ಮನ ಹೆಸರು.....ERIC ZENER ಅಂಥ ಇವರು ಅಮೇರಿಕಾ ದೇಶದವರು,
1968 University of California, Santa Barbara, BA ನಲ್ಲಿ ತಮ್ಮ ವಿಧ್ಯಾಭ್ಯಾಸವನ್ನು ಮುಗಿಸಿ. ಫೈನ್ ಆರ್ಟ್ಸ್, ಮತ್ತೆ, ಆಯಿಲ್ ಪೇಂಟಿಂಗ್ ನಲ್ಲಿ ಪರಿಣಿತಿಯನ್ನು ಪಡೆದು, ಇತರ ಎಸ್ಟೋ ಚಿತ್ರಗಳನ್ನು ಬಿಡಿಸಿದ್ದಾರೆ.... ಲೆಕ್ಕ ವಿಲ್ಲದಸ್ಟು ಪೇಂಟಿಂಗ್ ಪ್ರಸಸ್ತಿ ಗಳು ಇವರನ್ನು ಹುಡುಕಿಕೊಂಡು ಬಂದಿದೆ ಅಂತೆ.. ಅದರಲ್ಲಿ ಕೆಲವು ,
Beca Primavera de L’Ajuntament de l’Escala,International Juried Competition, Residency and Exhibition, 2000
Palm Springs Desert Museum, 31st Annual
National Juried Exhibition, April 2000
New American Paintings, #19, December 1998

ಇವರ ಎಲ್ಲ ಪೇಂಟಿಂಗ್ ಗಳು ಎಸ್ಟೋ exhibition ನಲ್ಲಿ ಪ್ರದರ್ಶನ ಗೊಳ್ಳುತ್ತಾ ಎಲ್ಲರ ಮನಸೂರೆ ಗೊಳ್ಳುತ್ತಾ ಇದೆ.... ಇವರ ಬಗ್ಗೆ ಹಾಗು ಇವರ ಪೇಂಟಿಂಗ್ ಬಗ್ಗೆ ಮತ್ತಸ್ತು ಮಾಹಿತಿ ಬೇಕಾದರೆ ಇಲ್ಲಿ ನೋಡಿ http://www.ericzener.com
ಬರಿ ಕಲ್ಪನೆ ಒಂದಿದ್ದರೆ ಸಾಕಲ್ವ .....ಯಾವ ಫೋಟೋಗಳು ಇದರ ಮುಂದೆ ಇಲ್ಲ ಆ ರೀತಿ ಪೇಂಟಿಂಗ್ ಮಾಡಿದ್ದರೆ,,, ಕೆಲವೊಂದು ಪೇಂಟಿಂಗ್ ನೋಡ್ತಾ ಇದ್ದರೆ, ಹವ್ಯಾಸಿ ಫೋಟೋಗ್ರಾಫರ್ ಕೂಡ ಬೆರಗಾಗಬೇಕು......ಹಾಂ, ನಾನೇನು ಹೆಚ್ಚಿಗೆ ಹೇಳೋಲ್ಲ,, ನೀವೇ ನೋಡಿ, ನಿಮ್ಮ ಅನಿಸಿಕೆಗಳನ್ನು ತಿಳ್ಸಿ....


















ಇದನ್ನ ಪೇಂಟಿಂಗ್ ಅನ್ನೋದಕ್ಕೆ ಆಗುತ್ತ ರೀ....

















25 comments:

  1. ಗುರು ಅವರೆ,
    ನೀವು ಹೇಳಿದ ಹಾಗೆ ಇದನ್ನು ಫೋಟೋಗ್ರಫಿ ಎ೦ದು ಅ೦ದು ಕೊ೦ಡಿದ್ದೆ. ಪೇಂಟಿಂಗ್ ಅ೦ದರೆ !!! ಅಚ್ಚರಿ ಯಾಗುತ್ತದೆ .
    ಆ ಕಲಾವಿದನಿಗೆ ನನ್ನ ನಮೋ ನಮಃ .
    ನಿಮಗೆ ನಮ್ಮೋ೦ದಿಗೆ ಹ೦ಚಿ ಕೊ೦ಡಿದ್ದಕ್ಕೆ ವ೦ದನೆಗಳು .

    ReplyDelete
  2. ರೂಪ..ಎಷ್ಟು ಚೆನ್ನಾಗಿ ಇದೆ ಅಲ್ವ...ಈ ಪೇಂಟಿಂಗ್ ಚಿತ್ರಗಳು....ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

    ReplyDelete
  3. ಗುರು ಅವರೇ....
    ಅದ್ಭುತವಾಗಿದೆ.... ನೀವು ಹೇಳದಿದ್ದರೆ ನಾನು ಫೋಟೋ ಎಂದೇ ತಿಳಿಯುತ್ತಿದ್ದೆ......ಒಳ್ಳೆಯ ಕೊಂಡಿ ಕೊಟ್ಟಿದ್ದಕ್ಕೆ ಧನ್ಯವಾದಗಳು

    ಶ್ಯಾಮಲ

    ReplyDelete
  4. ಅದ್ಭುತದ ಜೊತೆಗೆ ಪರಮಾಶ್ಚರ್ಯ ಮೂಡಿಸುತ್ತೆ... ಬಹಳ ಚೆನ್ನಾಗಿದೆ ನಿಮ್ಮ ಪ್ರಪಂಚದಲ್ಲಿ ಏನೆಲ್ಲ ಕುತುಹಲಕಾರಿ ಅದ್ಭುತ ನಗರಿಯನ್ನೆ ಸೃಷ್ಟಿಸುತ್ತ ಇದ್ದೀರಿ ಗುರು.
    ವಂದನೆಗಳು

    ReplyDelete
  5. ಗುರು,

    ಇದು ನಿಜಕ್ಕೂ ಅಚ್ಚರಿಯ ಮೇಲೆ ಅಚ್ಚರಿ. ERIC ZENER ಎಂಥ ಕಲಾವಿದ ಎನ್ನುವುದನ್ನು ಆತನ ಪೈಂಟಿಂಗ್‍ನಿಂದಲೇ ಗೊತ್ತಾಗುತ್ತೆ. ಆತ ಬಹುಶಃ ನೀರನ್ನು ಮುಖ್ಯ ವಸ್ತುವಾಗಿಟ್ಟುಕೊಂಡು ರಚಿಸಿದ ಎಲ್ಲಾ ಚಿತ್ರಗಳು ಅದ್ಭುತವೆನಿಸುತ್ತವೆ...ಆತನ ಸೈಟಿಗೆ ಹೋಗಿ ಮತ್ತಷ್ಟು ಚಿತ್ರಗಳನ್ನು ನೋಡುತ್ತೇನೆ...ಇದನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

    ReplyDelete
  6. ಅದ್ಭುತವೆನಿಸುವ ಪೇಂಟಿಂಗ್ ಗಳನ್ನು ತೋರಿಸಿದ್ದೀರಿ. ಇದನ್ನು ಫೋಟೋಗ್ರಫಿ ಅ೦ತ ಎಲ್ಲರೂ ಭಾವಿಸಬಹುದಾಗಿದೆ, ಅಷ್ಟು ಸ್ಫುಟವಾಗಿವೆ ಚಿತ್ರಗಳು. ಪ್ರತಿ ಬಾರಿಯೂ ಅಚ್ಚರಿಯ ವಿಶೇಷ ಸ೦ಗತಿಗಳನ್ನು ಅನಾವರಣಗೊಳಿಸುವ ನಿಮ್ಮ ಕಾರ್ಯ ಸ್ತುತ್ಯರ್ಹ

    ReplyDelete
  7. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಶ್ಯಾಮಲಾ ರವರೆ....sudden ಆಗಿ ನೋಡಿ ನೋಡಿ ನಾನು ಹಾಗೆ ಅಂದುಕೊಂಡಿದ್ದೆ.. ಇವರ ಪೂರ್ತ ಪ್ರೊಫೈಲ್ ನೋಡಿದ ಮೇಲೆ.. ನಾನು ಬೆರಗಾಗಿ ಹೋದೆ...ಎಂತಹ ಅದ್ಬುತ ಪೇಂಟಿಂಗ್ ಅಲ್ವ ?

    ReplyDelete
  8. ಧನ್ಯವಾದಗಳು ಮನಸು ನಿಮ್ಮ ಪ್ರತಿಕ್ರಿಯೆಗೆ .....

    ReplyDelete
  9. ಹೌದು ಶಿವೂ ಇದು ಅಚ್ಚರಿ ಅಂದರೆ ಉತ್ಪ್ರೇಕ್ಷೆ ಅಲ್ಲ... ನೀವು ಹೇಳಿರುವ ಹಾಗೆ ಇವರ ಎಸ್ಟೋ ಚಿತ್ರಗಳು ಎಲ್ಲ ನೀರಿನ ಮೇಲೆ ಬಿಂಬಿತ ವಾಗಿ ಇದೆ....
    ಅವರ ವೆಬ್ ಸೈಟ್ ಗೆ ಹೋಗಿ,, ಇನ್ನು ಹೆಚ್ಚಿನ ಚಿತ್ರಗಳನ್ನು ನೋಡಿ.. ಅದರಲ್ಲಿ ಕೆಲವೊಂದನ್ನು ಮಾತ್ರ ಆಯ್ದು ಹಾಕಿದ್ದೇನೆ...

    ReplyDelete
  10. ಧನ್ಯವಾದಗಳು ಪರಾಂಜಪೆ ಸರ್....

    ReplyDelete
  11. ಗುರು...

    ಎಂಥಹ ಅದ್ಭುತ ಚಿತ್ರಗಳು...!!

    ಎಲ್ಲವೂ ಛಾಯಾಚಿತ್ರಗಳಂತೇ ಇವೆ....

    ಗುರು...
    ನಿಮ್ಮ ಹುಡುಕಾಟಕ್ಕೂ...
    ಆ ಕಲಾವಿದನಿಗೂ...

    ಹೃದಯಪೂರ್ವಕ ಅಭಿನಂದನೆಗಳು...

    ReplyDelete
  12. ಗುರು ಅವರೇ...
    ವಾಹ್...ನಿಜಕ್ಕೂ ಅದ್ಭುತವಾಗಿದೆ ಕಣ್ರೀ ಕೈಚಳಕ... ಮಾಹಿತಿಗಾಗಿ ಧನ್ಯವಾದಗಳು...

    ReplyDelete
  13. ಧನ್ಯವಾದಗಳು ಪ್ರಕಾಶ್

    ReplyDelete
  14. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ದಿಲೀಪ್

    ReplyDelete
  15. ವಾಹ್ !

    ಎಲ್ಲೆಲ್ಲಿಂದ ಮಾಹಿತಿಗಳನ್ನು ಸಂಗ್ರಹಿಸಿ ನಮ್ಮೆದುರು ಬಿಚ್ಚಿದುತ್ತೀರಿ ಗುರು? ನಿಜ ಹೇಳಬೇಕೆಂದರೆ ' ನಂಬಲಾಗದ " ಪೇಂಟಿಂಗ್ ಗಳು !!!

    ReplyDelete
  16. ಎಂಥಹ ಅದ್ಭುತ ಚಿತ್ರಗಳು...!!


    ಹೃದಯಪೂರ್ವಕ ಅಭಿನಂದನೆಗಳು...

    ReplyDelete
  17. ಹೌದು ಗುರು. ಇದನ್ನ ನೋಡ್ತಿದ್ರೆ ಮೂಗಿನ ಮೇಲೆ ಕೈ ಇಟ್ಕೋಂಡು ಇದು ನಿಜವಾಗ್ಲು ಪೇಂಟಿಂಗಾ ಅಂತ ಕೇಳ್ಬೇಕು. ಹಾಗಿದೆ ಈ ಚಿತ್ರಗಳು. ಒಬ್ಜೆಟ್ಟಿನ ನೆರಳು, ನೀರಿನಲ್ಲಿ ಕಾಣಿವ ಪ್ರತಿಬಿಂಬ ಎಲ್ಲವೂ ಎಷ್ಟು ವಾಸ್ತವಿಕವಾಗಿದೆ. ಅದ್ಭುತ ಅತ್ಯದ್ಭುತ.

    ReplyDelete
  18. photos (paintings) are beautiful, first 2 paintings looks like photos, thanks

    ReplyDelete
  19. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಚಿತ್ರ... ಹಾ ಹಾ,, ಇದು ನನ್ನ ಹವ್ಯಾಸ... ಇಂಟರ್ನೆಟ್ ಎಂಬ ಮಹಾ ಸಮುದ್ರ ಇದೆಯಲ್ವ.... ಇದರಲ್ಲಿ ಯಾವಾಗಲು ಸರ್ಫ್ ಮಾಡ್ತಾ ಇರ್ತೇನೆ,, ನನಗೆ ಚೆನ್ನಾಗಿ ಇರೋದು ಸಿಕ್ಕಾಗ ನಿಮ್ಮಗಳ ಜೊತೆ ಹಂಚಿಕೊಳ್ಳುತ್ತೇನೆ... ಅಸ್ಟೇ

    ReplyDelete
  20. ಧನ್ಯವಾದಗಳು ಜಗದೀಶ್

    ReplyDelete
  21. ಪ್ರತಿಕ್ರಿಯೆಗೆ ಧನ್ಯವಾದಗಳು ರಾಜೀವ

    ReplyDelete
  22. ಗುರು,
    ನಂಬಲಿಕ್ಕೇ ಆಗಲ್ಲ. ಪೇಂಟಿಂಗ್ ಅಂತ ನೀವು ಹೇಳಿದಮೇಲೂ ಅದು ಫೋಟೋಗ್ರಫಿನೇ ಅನ್ನಿಸುವಂತಿದೆ. ಆ ಕಲಾವಿದನಿಗೆ ದೊಡ್ಡ ನಮಸ್ಕಾರ.ನಿಮಗೂ ಧನ್ಯವಾದಗಳು.

    ReplyDelete