Monday, September 21, 2009

ಇಡೀ ಮಾಸ್ಕೊ ಪಟ್ಟಣವನ್ನ ಒಂದು ಪುಟ್ಟ ಮನೆಯೊಳಗೆ ಬಂದಿಸಿಟ್ಟರೆ!!!

ಇಡಿ ಒಂದು ದೊಡ್ಡ ಪಟ್ಟಣ, ನಗರ ಅಥವಾ ಸಿಟಿ ನ ಒಂದು ಪುಟ್ಟ ಕೋಣೆಯೊಳಗೆ ಇಟ್ಟರೆ ಹೇಗೆ ಇರುತ್ತೆ... !!!!!!!
ಹಾಂ ಇವನೆನಪ್ಪ,, ಏನೋ ವಿಚಿತ್ರವಾಗಿ ಹೇಳ್ತಾ ಇದ್ದಾನೆ .. ಅಂತ ಅನ್ಕೊಂತ ಇದ್ದೀರಾ....ಹಾ ಸ್ವಲ್ಪ ನಿದಾನ,,, ನಾನು ಹೇಳಲು ಹೊರಟಿರುವುದು ವಿಚಿತ್ರವಾದ ವಿಸ್ಮಯವನ್ನ ..
ಹೌದು ಇವಾಗ ರಷ್ಯದ ರಾಜಧಾನಿ mascow ನಗರದಲ್ಲಿ ನಡೆಯುತ್ತಿರುವ exibition ನಲ್ಲಿ "breadboard model of ಮಾಸ್ಕೋ" ತುಂಬ ಫೇಮಸ್ ಅಂತೆ,,
breadboard model ಅಂದ್ರೆ ಇಡಿ ಮಾಸ್ಕೋ ನಗರವನ್ನು ಒಂದು ದೊಡ್ಡ ರೂಂನಲ್ಲಿ ಚಿಕ್ಕ ಚಿಕ್ಕ sculpture ಉಪಯೋಗಿಸಿ ಮಾಸ್ಕೊ ನಗರ ಹೇಗೆ ಇದೆಯೋ ಅದರಂತೆ ಮಾಡಿದ್ದರೆ .. ಒಂದು ಚಿಕ್ಕ ಗಲ್ಲಿ, ರೋಡ್, ಆ ರೋಡ್ ನಲ್ಲಿ ಇರುವ ಮನೆಗಳು, buidling ಗಳು , ಕಛೇರಿಗಳು , ಟ್ರೈನ್ ಸ್ಟೇಷನ್, ನಗರದ ಮಧ್ಯೆ ಹರಿಯುವ ನದಿಗಳು ಒಟ್ಟಿನಲ್ಲಿ ಇಡಿ ನಗರವನ್ನೇ ಒಂದೇ ರೂಮಿನಡಿಯಲ್ಲಿ ಮಾಡಿ ಇಟ್ಟಿದ್ದಾರಂತೆ.. ಈ ಮಾಡೆಲ್ 1986 ರಿಂದ ಇದೆಯಂತೆ,
ಪ್ರತಿವರ್ಷ ಈ ಪುಟ್ಟ ಪುಟ್ಟ ಮನೆಗಳಲ್ಲಿ ಆಫೀಸ್ ನಲ್ಲಿ ಇರುವ ಧೂಳನ್ನು ಕೊಡವಿ, ಮತ್ತೆ reconstruct ಮಾಡ್ತಾರಂತೆ .. ಹಾಂ ಹಾಗೆ ಹೊಸ ಹೊಸ ಯಾವುದಾದರು ಕಟ್ಟಡಗಳು ರೋಡ್ ಗಳು mascow ನಗರದಲ್ಲಿ ಕಟ್ಟಿದ್ದಾರೆ ಅದನ್ನು ಇಲ್ಲಿ ಹೊಸದಾಗಿ construct ಮಾಡಿ ಜೋಡಿಸುತ್ತಾರಂತೆ, ಇದನ್ನು ನೋಡ್ತಾ ಇದ್ದರೆ ಇದರ ಹಿಂದೆ ಇರುವ ಶ್ರಮ , ತಾಳ್ಮೆ, ಕಟ್ಟಿರುವ ರೀತಿ,, ವಾಹ್ ,, ಏನ್ ಹೇಳಬೇಕೋ ಗೊತ್ತಾಗ್ತಾ ಇಲ್ಲ.. ಸರಿ ಇದನ್ನ ನೀವೊಮ್ಮೆ ನೋಡಿ,, ಏನಾದರೂ ಹೇಳೋಕೆ ಆದ್ರೆ ಹೇಳಿ.....


ಒಟ್ಟಿನಲ್ಲಿ ನಮ್ಮ ಬೆಂಗಳೂರನ್ನು ಹೀಗೆ ಒಂದು ಕಡೆ ಕೂಡಿಹಾಕಿ(ಇದೆ ರೀತಿ breadboard model of bangalore) ಅಂಥ ಮಾಡಿ , ಇರುವ ಟ್ರಾಫಿಕ್ ಜಾಮ್ ತಲೆನೋವನ್ನು ಪರಿಹರಿಸುವುದಕ್ಕೆ ಏನಾದರೂ ಉಪಯೋಗಿಸಬಹುದು,,ಪಾಪ ದಿನಕ್ಕೊಂದು ಟ್ರಾಫಿಕ್ ರೂಲ್ಸ್ ಮಾಡೋ ಪೋಲಿಸರಿಗಂತು ಇದರಿಂದ ಉಪಯೋಗ ಆದೀತು ಏನ್ ಅಂತಿರ ?

25 comments:

 1. ಗುರು ಅವರೇ,
  ಯಾರು ಈ ಪ್ರತಿಕೃತಿಯ ಸೃಷ್ಟಿಕರ್ತ........? ಒಂದು ಸಲ ಮಾಡುವುದೇ ಎಷ್ಟು ಕಷ್ಟ! ಅಂತಹುದರಲ್ಲಿ ನಗರದಲ್ಲಿನ ಬದಲಾವಣೆಗೆ ತಕ್ಕಂತೆ ಇಲ್ಲೂ ಬದಲಾವಣೆ ಮತ್ತು ಅದರ ಸ್ವಚ್ಚತೆಯ ಮೇಲ್ವಿಚಾರಣೆ ಕೂಡ, ಅಬ್ಬಾ ಅವರಿಗೆ ನನ್ನದೊಂದು ಅಭಿನಂದನೆ!!
  ಇಂತಹ ಅಧ್ಬುತ ಚಿತ್ರ ವಿಚಿತ್ರಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವ ನಿಮಗೆ ನನ್ನ ಧನ್ಯವಾದಗಳು!!!

  ReplyDelete
 2. ಖಂಡಿತಾ ನಾವು ಏನು ಹೇಳೋಕೆ ಆಗೋಲ್ಲ ಬಿಡಿ, ಅಂತಹ ಅದ್ಭುತ ಕೆಲಸ

  ReplyDelete
 3. Woow.. Guru. this is fantastic...

  ಸಕ್ಕತ್ ಇಷ್ಟವಾಯ್ತು.. ಅದೆಷ್ಟು ಕಷ್ಟ ಪಟ್ಟು ಮಾಡಿದ್ದಾರೆ ಇದನ್ನ ಅಲ್ವಾ..??

  ಗೊತ್ತು ಗುರಿಯಿಲ್ಲದೇ, ಸಿಕ್ಕ ಸಿಕ್ಕಂತೆ ಬೆಳೆದಿರೊ, ಇನ್ನೂ ಬೆಳೀತಿರೊ ನಮ್ಮ ಬೆಂಗಳೂರನ್ನ ಈ ತರಹ ಒಂದು ಪುಟ್ಟ ಮನೆಯೊಳಗೆ ಬಂಧಿಸಿಡೋದು ಕಷ್ಟ ಬಿಡಿ...

  ReplyDelete
 4. ಗುರು ಅವರೆ,
  ನಾವು ಏನೂ ಹೇಳಲು ಆಗುವುದಿಲ್ಲ . ಅವರ ಕೆಲಸ ಮಾತ್ರ ಅದ್ಬತ . ವಿವರಣೆಗೆ ನಿಲುಕದ ವಿಷಯ . ನಮ್ಮೊಂದಿಗೆ ಹಂಚಿಕೊಳ್ಳುವ ನಿಮಗೆ ನನ್ನ ಧನ್ಯವಾದಗಳು.

  ReplyDelete
 5. ವಾವ್ ಇಡೀ ರಷ್ಯಾ ಒಂದಯ ಪುಟ್ಟ ಮನೆಯಲ್ಲಿ ಎಂಬ ಕಲ್ಪನೆಯೇ ವಿನೂತನವಾದುದ್ದು. ನಿಮ್ಮ ಬ್ಲಾಗಿಗೆ ಬಂದರೆ ಏನಾದರೊಂದು ಅಚ್ಚರಿಯ ವಿಷಯ ಕಾದಿರುತ್ತದೆ. ನಿಮ್ಮ ಹುಡುಕಾಟದ ರೀತಿಯೇ ಭಿನ್ನವಾದುದು. ಅದು ಹೀಗೇ ಮುಂದುವರೆಯಲಿ ಎಂದು ಹಾರೈಸುತ್ತೇನೆ.

  ReplyDelete
 6. ಗುರು,

  ಎಂಥ ಅದ್ಬುತ ಕಲೆ ಇದು! ಓಹ್! ಹೆಲಿಕಾಪ್ಟರಿನಲ್ಲಿ ಫೋಟೋ ತೆಗೆದು ನಂತರ ಒಂದೊಂದೇ ಭಾಗವನ್ನು ಮೂಲ ಕಟ್ಟಡ, ರಸ್ತೆ, ನದಿ, ಇತ್ಯಾದಿಗಳನ್ನು ಪಕ್ಕಾ ಆಳತೆಯಲ್ಲಿ ಮಾಡುವುದೆಂದರೇ....ನಿಜಕ್ಕೂ ಮಹಾನ್ ಸಾಧನೆಯೇ ಸರಿ....ಆ ಕಲಾವಿದಯಾರು? ಅವನ ಹಿನ್ನೆಲೆ-ಮುನ್ನಲೆ ಏನು ? ಇತ್ಯಾದಿಗಳ ವಿಚಾರವನ್ನು ಕೊಟ್ಟಿದ್ದರೇ ಖುಷಿಯಾಗುತ್ತಿತ್ತು. ಈಗಲೂ ಅವನ್ಯಾರೇ ಆಗಿರಲಿ. ಅವನಿಗೊಂದು ದೊಡ್ಡ ನಮನ ನನ್ನ ಕಡೆಯಿಂದ...
  ಇಂಥದ್ದನ್ನು ಹುಡುಕಿಕೊಟ್ಟ ನಿಮಗೂ ಧನ್ಯವಾದಗಳು.

  ReplyDelete
 7. ಗುರು, ನಿಮ್ಮ ಬ್ಲಾಗಿನ ಪ್ರತಿ ಮಾಹಿತಿಯೂ ವಿಸ್ಮಯ, ಅದ್ಭುತಗಳ ಆಗರ. ಎಲ್ಲಿಂದ ಹುಡುಕಿ ತರ್ತೀರಿ ಇ೦ತಹ ವಿಷಯ ಗಳನ್ನು.

  ReplyDelete
 8. Wow... Its great...
  sakat talent and patience beku idannu maadoke...

  ReplyDelete
 9. ಅದ್ಭುತ ಸ್ವಾಮಿ, ಅದ್ಭುತ, ನಮ್ಮ ಬೆಂಗಳೂರನ್ನ ಆಥರ ಮಾಡಿ ತೋರ್ಸಿದ್ರೆ ಒಂದುಕಡೆ ಹಸಿರು ಮತ್ತೊಂದುಕಡೆ ಕೊಚ್ಚೆ, ಕೊಳೆಗೇರಿ, ಎಲ್ಲ ಸೇರಿದ್ರೆ ಯಾವ ತರಹ ಇರ್ಬೋದು ಯೋಚಿಸ್ಕೊಳ್ಳಿ
  ವಂದನಗಳು

  ReplyDelete
 10. SSK ರವರೆ ಇದರ ಸೃಷ್ಟಿಕರ್ತ ಯಾರೋ ಒಬ್ಬರಲ್ಲ "This model has been built in ೧೯೮೮ and is being used for Moscow planing "
  ಇದನ್ನು ಅಲ್ಲಿನ mascow ಮುನ್ಸಿಪಾಲಿಟಿ ನೆ maintain ಮಾಡ್ತಾ,, mascow ಪ್ಲಾನಿಂಗ್ ಗೆ use ಮಾಡ್ತಾ ಇದ್ದರಂತೆ....
  ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು :-)

  ReplyDelete
 11. ಹೌದು ಮನಸು, ಇಂಥಹ ಕಲೆ ನ ನೋಡ್ತಾ ಇರಬೇಕಾದ್ರೆ ಏನ್ ಹೇಳೋಕ್ಕು ಮನಸು ಬರೋಲ್ಲ ಅಲ್ವ :-) ಸುಮ್ನೆ ನೋಡಿ ಆನಂದಿಸಬೇಕು ಅಸ್ಟೇ ...

  ReplyDelete
 12. "ಗೊತ್ತು ಗುರಿಯಿಲ್ಲದೇ, ಸಿಕ್ಕ ಸಿಕ್ಕಂತೆ ಬೆಳೆದಿರೊ, ಇನ್ನೂ ಬೆಳೀತಿರೊ " ನಮ್ಮ ಬೆಂಗಳೂರನ್ನ ಕಂಟ್ರೋಲ್ ಮಾಡಿ,, neeat ಆಗಿ ಪ್ಲಾನಿಂಗ್ ಮಾಡಲೇಬೇಕು ಅಂತ ಒಂದು ಗುರಿ ಇದ್ದರೆ(ನಮ್ಮ BBMP ಗೆ) , ಇದು ಅಂತ ಕಷ್ಟ ಅಲ್ಲ ಅಂತ ಅನ್ಕೊತೇನೆ,,

  ReplyDelete
 13. ಧನ್ಯವಾದಗಳು ರೂಪ ತಮ್ಮ ಅನಿಸಿಕೆಗೆ...

  ReplyDelete
 14. Thank you ಸತ್ಯನಾರಾಯಣ ಸರ್

  ReplyDelete
 15. ಶಿವೂ,,
  ಹೌದು ಇದನ್ನು ಮಾಡಿ ಮೈನ್ಟೈನ್ ಮಾಡ್ತಾ ಇರುವವರ ಬಗ್ಗೆ ನನಗು ಬರೀಬೇಕು ಅಂತ ಇತ್ತು, ಆದರೆ ಇದರ ಬಗ್ಗೆ ಅಸ್ತೊಂದ್ ಮಾಹಿತಿ ಸಿಗಲಿಲ್ಲ,, ಆದರು ನಿಮಗ ಬೇಜಾರು ಮಾಡಬಾರದು ಅಂತ,, ರಷ್ಯ ವೆಬ್ಸೈಟ್ ನೆಲ್ಲ ಜಾಲಾಡಿ ಇಷ್ಟು ಮಾಹಿತಿ ಹುಡುಕಿದ್ದೇನೆ..."ಇದನ್ನು ಯಾರೋ ಒಬ್ಬರು ಮಾಡಿರುವುದಲ್ಲ "This model has been built in ೧೯೮೮ and is being used for Moscow planing "
  ಇದನ್ನು ಅಲ್ಲಿನ mascow ಮುನ್ಸಿಪಾಲಿಟಿ ನೆ maintain ಮಾಡ್ತಾ,, mascow ಪ್ಲಾನಿಂಗ್ ಗೆ use ಮಾಡ್ತಾ ಇದ್ದಾರಂತೆ...."
  ಇನ್ನು ಹೆಚ್ಚಿನ ಮಾಹಿತಿ ಸಿಕ್ಕರೆ ನಿಮ್ಮಗೆ ತಿಳಿಸಿ ಹೇಳುತ್ತೇನೆ

  ReplyDelete
 16. ಹಾ ಹಾ ಪರಾಂಜಪೆ,,, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು,,, ಕೆಲವರಿಗೆ ಒಂದೊಂದು ರೀತಿ ಚಟ ಇರುತ್ತೆ ಅಲ್ವ,, ಹಾಗೆ ನನಗೆ ಈ ಇಂಟರ್ನೆಟ್ ನಿಂದ ಮಾಹಿತಿ colect ಮಾಡ್ತಾ , update ಮಾಡ್ಕೋತಾ, ಏನಾದ್ರು ಮಾಡ್ತಾ ಇರೋ ಚಟ ಇದೆ (ಇದು ಬಿಟ್ರೆ ಬೇರೆ ಇನ್ನು ಯಾವ ಚಟ ನು ಇಲ್ಲ ಸ್ವಾಮಿ ).. ಹಾಗೆ ಹುಡುಕುತ್ತ,,, ಇಂಥ ವಿಷಯಗಳು ಸಿಗುತ್ತವೆ,, ಅದನ್ನು ನಿಮ್ಮಗಳ ಜೊತೆ ಹಂಚಿಕೊಳ್ತೇನೆ ಅಸ್ಟೇ

  ReplyDelete
 17. ಹೌದು ಶಿವಪ್ರಕಾಶ್,,,
  ಪ್ರತಿಕ್ರಿಯೆಗೆ ಧನ್ಯವಾದಗಳು

  ReplyDelete
 18. ಉಮೇಶ್,,, ನೀವು ಹೇಳುವುದು ಕರೆಕ್ಟ್....:-)

  ReplyDelete
 19. Thank you ಸವಿಗನಸು ... :-)

  ReplyDelete
 20. ಗುರು....

  ಅದ್ಭುತವಾಗಿದೆ...!
  ಅವರ ಕ್ರಿಯೇಟಿವಿಟಿಗೆ ನಮೋ ನಮಃ...!

  ಬೆಂಗಳೂರನ್ನು ಮಾಡುವದು ಬಲು ಸುಲಭ ಬಿಡಿ...
  ಕೊಚ್ಚೆ ರಸ್ತೆಗಳನ್ನು ಮಾಡಿ..
  ರಸ್ತೆ ತುಂಬಾ ವಾಹನಗಳನ್ನು ಇಟ್ಟುಬಿಟ್ಟರಾಯಿತು...!

  ನಿಮ್ಮ ಹುಡುಕಾಟಕ್ಕೆ ಅಭಿನಂದನೆಗಳು...

  ReplyDelete
 21. ಪ್ರತಿಯೊಂದು ಕಟ್ಟಡವನ್ನೂ , ರಸ್ತೆಯನ್ನೂ ಅದೇ ರೀತಿ ನಿರ್ಮಿಸಬೇಕೆಂದರೆ ಎಷ್ಟು ತಾಳ್ಮೆ ಬೇಕು, ಅಬ್ಬಾ! ಗುರು, ನಿಮ್ಮ ಲೇಖನಗಳು ಯಾವಾಗಲೂ ಮಾಹಿತಿಪೂರ್ಣವಾಗಿರುತ್ತವೆ

  ReplyDelete
 22. ಧನ್ಯವಾದಗಳು ಪ್ರಕಾಶ್ ಸರ್.... ಕೊಚ್ಚೆ ಗುಂಡಿ ನಿರ್ಮಿಸೋದು ಅಸ್ಟು ಸುಲಭ ಅಲ್ಲ ಅಲ್ವ ?

  ReplyDelete
 23. ಧನ್ಯವಾದಗಳು ದೀಪಸ್ಮಿಥ....

  ReplyDelete
 24. ಅದ್ಭುತವಾಗಿದೆ!
  ಮಾಸ್ಕೋ ಮುನ್ಸಿಪಾಲ್ಟಿಗೆ, ಅವರ ಕ್ರಿಯೇಟಿವಿಟಿಗೆ ನಮೋ ನಮಃ...!

  ಪ್ರತಿ ಬಾರಿ ಹೊಸತನ್ನು ತೋರ‍ಿಸುವ ನಿಮಗೆ ಅಭಿನಂದನೆಗಳು:)

  ReplyDelete