ಇಲ್ಲಿ ನೋಡಿ ಒಬ್ಬ ಪುಣ್ಯಾತ್ಮ ನಾವು ಉಪಯೋಗಿಸುವ ಬೆಂಕಿ ಕಡ್ಡಿನಲ್ಲೇ ಎಂಥ ಕಲಾಕೃತಿಗಳನ್ನ ಮಾಡಿದ್ದಾನೆ ಅಂತ... ಒಟ್ಟಿನಲ್ಲಿ ಏನಾದರೂ ಮಾಡಬೇಕು ಅಂತ ಕ್ರಿಯೇಟಿವ್ ಮನಸು ಇದ್ದರೆ ಸಾಕು...ಎಂಥ ವಸ್ತು ಸಿಕ್ಕರೂ,ಅಲ್ಲಿ ಒಂದು ಕಲೆ ಅರಳುತ್ತೆ ಅಲ್ವ...
ನನ್ನ ಬ್ಲಾಗಿನಲ್ಲೇ ನಮ್ಮ ಅಮ್ಮನ ಬಗ್ಗೆ ಒಂದು articale (ಇಲ್ಲಿ ಕ್ಲಿಕ್ಕ್ಕಿಸಿ) ಹಾಕಿದ್ದೆ, ಅದರಲ್ಲಿ ನಮ್ಮ ಅಮ್ಮ ಸಹ ಇದೆ ರೀತಿ, ಬೆಂಕಿ ಕಡ್ಡಿ ಹಾಗು ವೈರ್ ಉಪಯೋಗಿಸಿ ಒಂದು ಸುಂದರ, ಗೋಡೆಗೆ ಹಾಕುವಂಥ ಕಲಾಕೃತಿ ಮಾಡಿದ್ದರು ( ಇವಾಗಲು ಜೋಪಾನವಾಗಿ ಇದೆ)... ಆದರೆ ಇಲ್ಲಿ ಇರುವ ಹೊಸ ಹೊಸ ಅಕ್ರುತಿಗಳನ್ನ ನೋಡಿ ಅಮ್ಮ ನಿಜವಾಗ್ಲೂ ಬೆರಗಾಗಿ ಹೋದ್ರು....
ಅದರೆ ಇಲ್ಲಿ ಇರುವ ಕಲೆ ಯನ್ನು ಯಾರು ಮಾಡಿದ್ದರೋ ಗೊತ್ತಿಲ್ಲ , ಅವರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಸಿಕ್ಕರೆ ನಿಮ್ಮಗಳ ಜೊತೆ ಹಂಚಿಕೊಳ್ಳುತ್ತೇನೆ,,, ಅಲ್ಲಿವರೆವಿಗು ಇದನ್ನ ನೋಡ್ತಾ ಇರಿ....
(ಒಂದೊಂದೇ ಫೋಟೋಗಳನ್ನ ನಿದಾನಕ್ಕೆ ನೋಡಿ, ನಿಮಗೆ ಗೊತ್ತಾಗುತ್ತೆ ಎಂಥಹ ಅದ್ಬುತ ಕಲೆ ಅಂಥ)








really amezing,,,,,,










ಇದು ಬೆಂಕಿ ಕಡ್ದಿದೇನೆ,, ಆದರೆ ಕಲರ್ ಹಾಕಿದ್ದರೆ ಅಸ್ಟೇ....

ಎಷ್ಟು ಟೈಮ್ ಬೇಕೋ ಇದನ್ನ ಮಾಡೋಕೆ....!!!!


ಎಷ್ಟು cute ಆಗಿ ಇದೆ ಅಲ್ವ....



ವಾಹ್......
ಸಕತ್ತಾಗಿದೆ... ತುಂಬಾ ತಾಳ್ಮೆ ಬೇಕು ಇದಕ್ಕೆ...
ReplyDeleteಶ್ಯಾಮಲ
ಗುರು,
ReplyDeleteReally Amazing!!!!
ಮತ್ತೆ ಮತ್ತೆ ನೋಡ ಬೇಕೆನಿಸುವಂತಿದೆ...
ಇಂತ ಸುಂದರ ಕಲೆ ತೋರಿಸಿದ್ದಕ್ಕೆ ಧನ್ಯವಾದಗಳು....
ಗುರು ಅವರೇ,
ReplyDeleteಯಾವುದೇ ವಸ್ತುವಾಗಲಿ ಮೆಟ್ಟುವುದು (ಹಾಳು ಮಾಡುವುದು) ಸುಲಭ, ಕಟ್ಟುವುದು ಕಷ್ಟ ಆಲ್ವಾ....?
ಅಬ್ಬಾ ಎಷ್ಟೊಂದು ತಾಳ್ಮೆ ಇರಬೇಕು ಇವನ್ನೆಲ್ಲ ಮಾಡುವುದಕ್ಕೆ! ನಿಜವಾಗಿಯೂ ಇದನ್ನು ಮಾಡಿರುವವರು ಗ್ರೇಟ್ ಅಲ್ಲ ಅಲ್ಲ ಮಹಾ ಗ್ರೇಟ್!!!
ಸರ್
ReplyDeleteನೆನ್ನೆಯಷ್ಟೇ ನನ್ನ ಮಗಳಿಗೆ ಅವಳ ಸ್ಕೂಲಿನಲ್ಲಿ ಒಂದು ಪ್ರಾಜೆಕ್ಟ್ ಕೊಟ್ಟಿದ್ದರು, ಅದೂ ಯೂಕೆಜಿ ಮಕ್ಕಳಿಗೆ. ಅದೆಂದರೆ ಪೇಪರ್ ಮೇಲೆ ಬೆಂಕಿಕಡ್ಡಿ ಅಂಟಿಸಿ ಏನಾದರು ಒಂದು ಚಿತ್ರ ಮಾಡಿಕೊಂಡು ಬರಬೇಕೆಂದು! ನಾನು ಸುಮಾರು ನಾಲ್ಕು ಗಂಟೆ ಖರ್ಚು ಮಾಡಿ ಕಾರಿ ರೂಪ ಕೊಟ್ಟು ನನ್ನ ಮಗಳಿಗೆ ಸಮಾಧಾನ ಮಾಡುವ ಹೊತ್ತಿಗೆ ಸುಸ್ತೋ ಸುಸ್ತು! ಬೆಳಿಗ್ಗೆ ಬಂದು ನೋಡಿದರೆ ಬೆಂಕಿಡ್ಡಿಯದೇ ಕಲಾಕೃತಿಗಳು ನನ್ನನ್ನು ನಿಮ್ಮ ಬ್ಲಾಗಿಗೆ ಸ್ವಾಗತಿಸುತ್ತಿದ್ದವು. ನೋಡಿ ಖುಷಿಯಾಯಿತು. ಆ ಕಲಾಕಾರರ ತಾಳ್ಮೆಗೆ, ಪ್ರತಿಭೆಗೆ ನನ್ನ ಅಭಿನಂದನೆಗಳು, ನಿಮಗೂ
ಗುರು
ReplyDeleteಅದ್ಭುತವಾದ ಕಲೆಗಾರಿಕೆ. ಇದಕ್ಕೆ ತಾಳ್ಮೆ, ಸ೦ಯಮ, ಸಮಯ, ಎಲ್ಲದರ ಜೊತೆಗೆ ಕಲಾವ೦ತಿಕೆ ಬೆಟ್ಟದಷ್ಟಿರಬೇಕು. ನೋಡಿ ಮೂಕವಿಸ್ಮಿತನಾದೆ. ಇ೦ತಹ ಕಲಾಕೃತಿಗಳನ್ನು ನಿಮ್ಮ ಬ್ಲಾಗ್ ಮೂಲಕ ಅನಾವರಣಗೊಳಿಸಿದ್ದಕ್ಕೆ Thanks.
ಗುರು,
ReplyDeleteಕಲಾವಿದನಿಗೆ ಎಂಥೆಂಥ ವಸ್ತುಗಳು ಕಲಾಕೃತಿಗಳಾಗುತ್ತವೆ ಎನ್ನುವುದಕ್ಕೆ ಈ ಬೆಂಕಿಕಡ್ಡಿ ಕಲಾಕೃತಿಗಳೇ ಸಾಕ್ಷಿ. ಒಂದಕ್ಕಿಂತ ಒಂದು ತುಂಬಾ ಚೆನ್ನಾಗಿವೆ. ಆತನ್ಯಾರೋ, ಎಲ್ಲಿದ್ದಾನೋ..ಒಟ್ಟಿನಲ್ಲಿ ಆತನಗೊಂದು ನನ್ನ ಹೃತ್ಫೂರ್ವಕ ನಮನ.
ಗುರು ಅವರೆ,
ReplyDeleteಬೆ೦ಕಿಕಡ್ಡಿಯಲ್ಲಿ ವೈವಿದ್ಯ ವಸ್ತು ಮಾಡ ಬಹುದು ಎ೦ದು ನನಗೆ ಗೊತ್ತಿತ್ತು . ಆದರೆ ಈ ರೀತಿ ಇಷ್ಟು ಸು೦ದರವಾಗಿ ಹಾಗು ಇಷ್ಟು ಅದ್ಬುತ ವಾಗಿ ಎ೦ದು ಗೊತ್ತಿರಲಿಲ್ಲ .
ಮಾಡಿದ ಕಲಾವಿದನಿಗೆ ಹಾಗು ನಮ್ಮೋದಿ೦ದಿಗೆ ಹ೦ಚಿ ಕೊ೦ಡಿದಕ್ಕೆ ನಿಮಗೆ ನನ್ನ ಧನ್ಯವಾದಗಳು .
wow Super!!! tumba kushi aytu ee kaleyannu nodi
ReplyDeletedhanyavaadagaLu
ಅಬ್ಬಾ ಎಂತಹ ತಾಳ್ಮೆ ಇರಬೇಕು ಇದನ್ನ ಮಾಡಿದವರಿಗೆ. ಮಾಡಿದಮೇಲೆ ಇವುಗಳನ್ನ ಕಾಪಾಡಿಕೊಳ್ಳುವುದೂ ಕಷ್ಟ. ಒಂದು ಬೆಂಕಿಯ ಕಿಡಿ ತಾಕಿದರೂ, ಪೂರ್ತಿ ಸುಟ್ಟು ಹೋಗುತ್ತದೆ.
ReplyDeleteThumba ne spoorthikara vada visya...
ReplyDeleteನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಶ್ಯಾಮಲಾ ... ಹೌದು ನೀವು ಹೇಳುವ ಹಾಗೆ ಇದಕ್ಕೆ ತುಂಬ ತಾಳ್ಮೆ ಬೇಕು.....
ReplyDeleteಸವಿಗನಸು...ಹೌದಲ್ವ.. ಎಷ್ಟು ಸರಿ ನೋಡಿದರು,,, ಇನ್ನೊಮ್ಮೆ ನೋಡಿ ಹೀಗೆ ಮಾಡಿದ್ದಾರೆ ಅಂತ ತಿಳಿದುಕೊಳ್ಳ ಬೇಕು ಅಂತ ಅನ್ನಿಸುತ್ತೆ....
ReplyDeleteನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು....
SSK ಮೇಡಂ, ನೀವು ಹೇಳುವುದು ಕರೆಕ್ಟ್. ಇದನ್ನು ಮಾಡುವವರಿಗೆ ಗೊತ್ತು ಇದರ ಕಷ್ಟ....ನಿಜಕ್ಕೂ ಇವರು ಮಾಹ ಗ್ರೇಟ್....ಅಲ್ವ...
ReplyDeleteಸತ್ಯನಾರಾಯಣ ಸರ್ ,
ReplyDeleteಹಾಗಾದರೆ ಬೆಂಕಿ ಕಡ್ಡಿ ಕಲೆಯ ಹಿಂದಿನ ತಾಳ್ಮೆ, ಶ್ರದ್ದೆ, ಕಷ್ಟ ಎಲ್ಲ ಚೆನ್ನಾಗಿ ಗೊತ್ತಾಗಿದೆ ನಿಮಗೆ..... :-)
ಧನ್ಯವಾದಗಳು ಪರಾಂಜಪೆ...
ReplyDeleteಶಿವೂ,,
ReplyDeleteಹೌದು ನೀವು ಹೇಳುವುದು ನಿಜ.. ಒಂದು ಒಳ್ಳೆ ಕ್ರಿಯೇಟಿವ್ ಮೈಂಡ್ ಇದ್ದರೆ, ಏನೇ ವಸ್ತು ಸಿಕ್ಕರೂ ,, ಅಲ್ಲಿ ಒಂದು ಸುಂದರವಾದ ಕಲಾಕೃತಿ ಅರಳಿರುತ್ತದೆ...ಚಿತ್ರ ಬಿಡಿಸುವವರಿಗೆ ಒಳ್ಳೆಯ ಪೇಪರ್, ಬಣ್ಣದ ಪೆನ್ಸಿಲ್ ಬೇಕು ಅಂತಾನೆ ಏನು ಇಲ್ಲ... ಹಾಗೆ ಒಬ್ಬ ಶಿಲ್ಪಿಗೆ.. ಒಳ್ಳೆಯ ಗ್ರನೆಟ್ ಕಲ್ಲೇ ಬೇಕು ಅಂತ ಏನು ಇಲ್ಲ ... ಅದೇ ರೀತಿ ಕೆಲವರ ಕಲೆಗೂ ಅಸ್ಟೇ... ಇಂಥಹ ವಸ್ತುನೆ ಬೇಕು ಅಂತ ಇಲ್ಲ ...ಅಲ್ವ... ಇದೆ ಥರ ಕೆಲವರು ನಮ್ಮಗಳ ಮಧ್ಯದಲ್ಲೇ ಇರುತ್ತಾರೆ ಅವರನ್ನು ಹುಡುಕಿ ಪ್ರೋಸ್ಥಹಿಸ ಬೇಕು ಅಸ್ಟೇ...
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ರೂಪ....
ReplyDeleteThank you ಮನಸು ....
ReplyDeleteಹಾ ರಾಜೀವ.. ನೀವು ಇನ್ನ ಒಂದು ಹೆಜ್ಜೆ ಮುಂದೆ ಹೋಗಿ ಯೋಚನೆ ಮಾಡ್ತಾ ಇದ್ದೀರಾ... :-) ಅದು ಕರೆಕ್ಟ್,,, ಇದನ್ನ ಕಾಪಾಡೋದು ಎಷ್ಟು ಕಷ್ಟ ಇದೆ... ಮೊದಲೇ ಹೇಳಿದ ಹಾಗೆ, ನಮ್ಮ ಅಮ್ಮನ ಬೆಂಕಿ ಕಡ್ಡಿ ಇಂದ ಮಾಡಿದ ಕಲಾಕ್ರುತಿಯನ್ನ 20 ವರುಷ ದಿಂದ ಕಾಪಾಡಿ ಕೊಂಡು ಬಂದಿದ್ದೇವೆ....ಗೊತ್ತಿದೆ ಇದರ ಕಷ್ಟ ಏನು ಅಂತ..... :-)
ReplyDeleteThanks ಸುಪ್ರಿತ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...
ReplyDeletethumba chennagide guru.. mana seleyithu...
ReplyDeleteಗುರು ಕೆಲವರಿಗೆ ಕಸದಿಂದ ರಸ ತೆಗೆಯುವ ಕಲೆ ಕರಗತ ಆಗಿರುತ್ತೆ. ಆದ್ರೂ ಬಹಳ ಸಹನೆ ಬೇಕು...ನಾನು ಮರಳಲ್ಲಿ ಆಕೃತಿಗಳನ್ನು ಮಾಡುವ ಕಲೆಯ ಕೆಲವು ಫೋಟೋಗಳನ್ನು ನನ್ನ ಭಾವಮಂಥನದಲ್ಲಿ ಹಿಂದೊಮ್ಮೆ ಹಾಕಿದ್ದೆ...ನಿಮ್ಮ ಅಪರೂಪದ ಚಿತ್ರ ಮತ್ತು ವಿನ್ಯಾಸಗಳನ್ನು ಸಂಗ್ರಹಿಸುವ ಹವ್ಯಾಸದ ಲಾಭ ನಮಗೆ ದೊರೆಯುತ್ತಿದೆ. ಧನ್ಯವಾದಗಳು.
ReplyDeleteಧನ್ಯವಾದಗಳು ಸುದೇಶ್,
ReplyDeleteಹೌದು ಜಲನಯನ, ಸರ್,,
ReplyDeleteನೀವು ಹೇಳುವುದು ನಿಜ,,, ನಿಮ್ಮ ಬ್ಲಾಗ್ ನಲ್ಲಿ ಹಾಕಿದ ಮರಳಿನ artical ನ ನಾನು ನೋಡಿದೆ, ಹೌದು,, ಎಷ್ಟು ಕುಷಿ ಆಗುತ್ತೆ ಅಲ್ವ ಇಂಥಹ ಅದ್ಬುತ ಕಲೆಗಳನ್ನ ನೋಡೋಕೆ..
ಸೂಪರ್!
ReplyDeleteಅವರ ಸಹನೆಗೆ ಹ್ಯಾಟ್ಸ್ ಆಫ್ !!
ಇದನ್ನು ಪರಿಚಯಿಸಿದ ನಿಮಗೆ ಥ್ಯಾಂಕ್ಸ್ ಥ್ಯಾಂಕ್ಸ್!!