Tuesday, October 22, 2019

ಚಿತ್ರಕೂಟ ಶಾಲೆಯ "ಚಿತ್ರ ಕಥಾ"


ಚಿತ್ರಕೂಟ ಶಾಲೆಯ "ಚಿತ್ರ ಕಥಾ"

ನಮಸ್ಕಾರ

ಚಿತ್ರಕೂಟ ಶಾಲೆಯ ಸ್ಕೂಲ್ ಡೇ ಕಾರ್ಯಕ್ರಮವು ಅತ್ಯದ್ಭುತವಾಗಿ ಮೂಡಿಬಂದಿತ್ತು..

ಚಿತ್ರಕೂಟ ಶಾಲೆಯು ಬೆಳೆದು ಬಂದ 15ವರ್ಷಗಳ ಮೆಲಕು ಇದನ್ನೇ ಥೀಮ್ ಆಗಿ ಇಟ್ಟುಕೊಂಡು "ಚಿತ್ರ ಕಥಾ" ಎಂಬುವ ಸ್ಕೂಲ್ ಡೇ ಕಾರ್ಯಕ್ರಮವು ಬಹಳ ಅದ್ದೂರಿ ತನದಿಂದ, ತುಂಬಾ ಅರ್ಥಗರ್ಭಿತವಾಗಿ ಯಶಸ್ವಿಯಾಗಿ ನೆರವೇರಿತು...

ನನಗೆ ಚಿತ್ರಕೂಟ ಶಾಲೆ ಇಷ್ಟವಾಗುವುದು ಇಂತಹ ಪ್ರಯೋಗಗಳಿಂದ... ನನ್ನ ಪ್ರತಿ ಬಾರಿ ಇಂತಹ ಅದ್ಭುತ ಕಾರ್ಯಕ್ರಮಗಳನ್ನು ಯಾವ ಕಾರಣದಿಂದಲೂ ಮಿಸ್ ಮಾಡಿಕೊಳ್ಳುವುದಿಲ್ಲ... ಇದನ್ನು ನಾನು ಒಂದು ರಂಗಪ್ರಯೋಗ ಎಂದರೂ ಕೂಡ ಅತಿಶಯೋಕ್ತಿಯಾಗಲಾರದು....

ನನ್ನ ಮಗ ಈ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ಇದ್ದಾನೆ ಈ ಸ್ಕೂಲ್ ಡೇ ಕಾರ್ಯಕ್ರಮ ಇದ ದ್ದು ಇದೇ ಭಾನುವಾರ 2:00 ಗಂಟೆಗೆ.. ಸುಮಾರುಎರಡು ಗಂಟೆಗಳ ಕಾರ್ಯಕ್ರಮ ಇದಾಗಿದ್ದು ... ಅತಿ ಅದ್ಭುತವಾಗಿ ಮೂಡಿಬಂದಿತ್ತು, ಬಂದಿದ್ದ ಎಲ್ಲಾ ಮಕ್ಕಳ ತಂದೆ-ತಾಯಿಯರು ಸಹ ತದೇಕಚಿತ್ತದಿಂದ ಕಾರ್ಯಕ್ರಮವನ್ನು ನೋಡಿ, ಅದರಲ್ಲಿ ಅಡಗಿರುವ ಅಥವ ತಿಳಿಸಿ ಹೇಳುತ್ತಿರುವ ಪ್ರಸಕ್ತ ವಿದ್ಯಮಾನಗಳ ಕನ್ನಡಿಯನ್ನು ನೋಡಿ ,ತಮ್ಮನ್ನು ತಾವೇ ಪ್ರಶ್ನಿಸಿಕೊಂಡು ವಿಮರ್ಶೆ ಮಾಡುವುದಕ್ಕೆ ಕಾರಣವಾಯಿತು...

ಪ್ರತಿಯೊಂದು ಹಂತದಲ್ಲೂ ಕೂಡ ಈ ಕಾರ್ಯಕ್ರಮದ ಹಿಂದಿರುವ ಕಾಳಜಿ, ವಹಿಸಿರುವ ಶ್ರಮ, ಶ್ರದ್ಧೆ ಹಾಗೂ ಅದಕ್ಕೆ ಪೂರಕವಾಗಿ ಅಚ್ಚುಕಟ್ಟಾಗಿ ಎಲ್ಲವನ್ನೂ ನಿಭಾಯಿಸಿದ ರೀತಿ ನಿಜಕ್ಕೂ ಶ್ಲಾಘನೀಯ..

ಡಾಕ್ಟರ್ ಕಶ್ಯಪ್ ಇವರು ಇರುತ್ತಾರೆ ಎಂದರೆ ಅಲ್ಲಿ ಏನಾದರೂ ಒಂದು ಸಾಮಾಜಿಕ ಕಳಕಳಿಯ ಸಾಂದರ್ಭಿಕ ಚಿತ್ರಣಗಳು ಹಾಗೂ ನೆರೆದಿರುವ ಪ್ರೇಕ್ಷಕರನ್ನು ವಿಮರ್ಶೆಗೆ ಒಳಪಡಿಸುವ ಒಂದು ಅದ್ಭುತವಾದ ಮೆಸೇಜ್ ಇರುತ್ತದೆ... ನನ್ನ ಊಹೆ ಕೂಡ ಸರಿಯಾಗಿತ್ತು .

" ಹೊತ್ತಿಗೆಯ ಹೊತ್ತು" ಕಂಪ್ಯೂಟರ್ ಮೊಬೈಲ್ ಫೋನ್ ತರಹೇವಾರಿ ಆಪ್ ಗಳು ಟಿವಿಗಳು ಎಡಬಿಡದೆ ಬರುತ್ತಿರುವ ಲೈವ್ ಶೋಗಳು, ಈ ಎಲ್ಲಾ ಕಾರಣಗಳಿಂದ ಪುಸ್ತಕಗಳನ್ನು ಓದುವವರ ಸಂಖ್ಯೆ ನಿಜವಾಗು ಕಮ್ಮಿಯಾಗುತ್ತಿದೆ, ಇದು ಎಲ್ಲರಿಗೂ ಗೊತ್ತಿರುವ ವಿಷಯ. ಕೆಲವೊಂದು ವರ್ಗ ಮಾತ್ರ ಪುಸ್ತಕಗಳನ್ನು ಪ್ರೀತಿಸಿ ಓದುತ್ತಿದ್ದಾರೆ... ಇದರ ಬಗ್ಗೆ ಬೆಳಕು ಚೆಲ್ಲುವ ಒಂದು ಅದ್ಭುತ ಕಲ್ಪನೆಯ " ಹೊತ್ತಿಗೆಯ ಹೊತ್ತು" ರಂಗ ಪ್ರಯೋಗ ತುಂಬಾ ಚೆನ್ನಾಗಿತ್ತು, ಚಿಕ್ಕ ಮಕ್ಕಳು ಮಾಡಿರುವ ಪ್ರತಿಯೊಂದು ಭಾಗ ಅಥವಾ ಪ್ರತಿಯೊಂದು ಪಾತ್ರ ನಮ್ಮನ್ನು ನಾವೇ ಪ್ರಶ್ನಿಸುವ ಹಾಗೆ ಮಾಡಿತ್ತು.

ಹರಿಕಥಾ ಪ್ರ ಸಹನ ದಿಂದ ಶುರುವಾಗುವ ನಾಟಕ ಸಿಂಡ್ರೆಲಾ, ಕ್ರಿಸ್ಮಸ್ ತಾತ, ತೇಜಸ್ವಿಯವರ ಮಂದಣ್ಣ, ಮಾಸ್ತಿಯವರ ಮೊಸರಿನ ಮಂಗಮ್ಮ ಇಂತಹ ಅದ್ಭುತ ಪಾತ್ರಗಳನ್ನು ನಾವುಗಳು ಓದದೆ ನಿರ್ಲಕ್ಷಿಸಿ ಅವುಗಳ ಬಣ್ಣ ಕಳೆದು ಕೊಳ್ಳುವ ಹಾಗೆ ಮಾಡುತ್ತಿರುವ ನಮ್ಮತನವನ್ನು ಪ್ರಶ್ನಿಸಿಕೊಳ್ಳುವ ಸಮಯವನ್ನು ತಿಳಿಹೇಳಿ ಹೇಳಿತು...  ಪುಸ್ತಕದ ಹುಳ  ಕೂಡ ಚಿತ್ರಗಳುಳ್ಳ ಪುಸ್ತಕಗಳು ಬೇಕು ... ಅದು ಯಾಕೆ ಅದನ್ನು ಕೇಳ್ತಾ ಇದೆ ಅಂತ ಪೂರ್ತಿ ನಾಟಕ ನೋಡಿದರೆ ಗೊತ್ತಾಗುವುದು.

ಇದಕ್ಕೆ ಪೂರಕವಾಗಿ ಅಂತರ್ಜಾಲ ಹಾಗೂ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ರೀತಿ ಅದ್ಭುತ ಕಲ್ಪನೆ ರಂಗಪ್ರಯೋಗ... ಚಿಕ್ಕ ಮಕ್ಕಳಾದಿಯಾಗಿ ಎಲ್ಲಾ ಪಾತ್ರಗಳಿಗೆ ಭಾವತುಂಬಿ ನಟಿಸಿದ ಚಿಕ್ಕಮಕ್ಕಳಿಗೆ ಅನಂತ ಧನ್ಯವಾದಗಳು... ಇದರ ಹಿಂದಿನ ಶಕ್ತಿ ಡಾಕ್ಟರ್ ಕಶ್ಯಪ್ ಅವರಿಗೆ ಅನಂತ ನಮನಗಳು....

ಈ ಕಾರ್ಯಕ್ರಮದ ನಿರೂಪಣೆಯನ್ನು ಇಬ್ಬರು ಪುಟಾಣಿ ಮಕ್ಕಳು ನಡೆಸಿಕೊಟ್ಟರು ಅಬ್ಬಾ ಎಂತಹ ವಾಕ್ಚಾತುರ್ಯ ಹಾಗೂ ಕಾರ್ಯಕ್ರಮ ನಡೆಸಿಕೊಡುವ ರೀತಿ ಅದ್ಭುತ...

ಮಹೇಶ್ ಪ್ರಿಯದರ್ಶಿನಿ ಹಾಗೂ ಮತ್ತೊಬ್ಬ ಸಂಗೀತ ಟೀಚರ್ ರಾಗ ಸಂಯೋಜಿಸಿ ಚಿತ್ರಕೂಟದ ಚಿತ್ರ ಕಥ ಇದರ ಒಂದು ಕವನ ಅಥವಾ ಪದ್ಯ ಅಥವಾ ಹಾಡು ಹಾಗು ಅದಕ್ಕೆ  ಅತಿ ಸಂಯಮದಿಂದ ಚಿಕ್ಕಮಕ್ಕಳನ್ನು ನಾಚಿಸುವಂತೆ ನಟಿಸಿ ಡ್ಯಾನ್ಸ್ ಮಾಡಿ ಅನುಭವಿಸಿದ ಚಿತ್ರಕೂಟದ ಶಿಕ್ಷಕ /ಶಿಕ್ಷಕಿ ವೃಂದದವರಿಗೆ ಒಂದು ಅದ್ಭುತ ಅಭಿನಂದನೆಗಳು ಹಾಗೂ ಚಪ್ಪಾಳೆ ಎದ್ದುನಿಂತು ಕೊಡಬೇಕು.

ಮುಂದೆ ಮಹೇಶ್ ಅವರು ಸಂಯೋಜನೆ ಮಾಡಿದ ದೇಶಭಕ್ತಿ ಅಥವಾ ದೇಶಪ್ರೇಮ ನೆನಪಿಸುವ ಸುಮಧುರ ಗೀತೆಯನ್ನು ಹತ್ತಾರು ಮಕ್ಕಳು ಒಟ್ಟಿಗೆ ಹಾಡುತ್ತಿರುವಾಗ... ನಿಜವಾಗಲೂ ಮೈ ರೋಮಾಂಚನವಾಯಿತು ಅದ್ಭುತ ಪ್ರಯೋಗ...

ಇದರ ಮಧ್ಯದಲ್ಲಿ ಪೋಷಕರು ಹಾಗೂ ಮಕ್ಕಳ ದೈನಂದಿನ ಚಟುವಟಿಕೆಗಳ ಬಗ್ಗೆ ಹಾಗೂ ಪೋಷಕರು ಮತ್ತು ಮಕ್ಕಳು ಹೀಗೆ ಸಮಾಜದಲ್ಲಿ ಇರಬೇಕು ಎನ್ನುವ ಬಗ್ಗೆ ಬಂದ ತುಣುಕುಗಳು ನಮ್ಮನ್ನು ನಾವು ತಿದ್ದಿಕೊಂಡು ಸರಿ ಮಾಡಬೇಕು ಎಂದು ಒಂದು ಸಣ್ಣ ವಧೆ ಕೊಟ್ಟಹಾಗೆ ನಡೆದು ಬಂತು... ನಮ್ಮ ದೈನಂದಿನ ಪ್ರತಿಯೊಬ್ಬರ ಬದುಕಿನಲ್ಲೂ ಕೂಡ ಕೆಲಸ ಹಾಗೂ ಕನ್ನಡ ನಿಜವಾಗಿಯೂ ಕೂಡ ನಮ್ಮ ಮಕ್ಕಳಬಗ್ಗೆ ಕಾಳಜಿ ವಹಿಸುತ್ತಿದ್ದೇವೆ ಎಂಬ ಪ್ರಶ್ನೆಯನ್ನು ಹುಟ್ಟಿಹಾಕಿತ್ತು... ದುಡ್ಡು ಇದೆ ಎಂದ ಮಾತ್ರಕ್ಕೆ ನಾವು ಚೆನ್ನಾಗಿ ಖರ್ಚು ಮಾಡುತ್ತಿದ್ದೇವೆ ಅದರಿಂದ ನಮ್ಮ ಮಕ್ಕಳು ಒಳ್ಳೆಯವರಾಗಿ ಬೆಳೆಯುತ್ತಾರೆ ಎಂಬ ಅವಿವೇಕತನದಿಂದ ಮೌಲ್ಯಯುತ ಹಾಗೂ ಜವಾಬ್ದಾರಿಯುತ ಸಣ್ಣಪುಟ್ಟ ಕೆಲಸ ಕಾರ್ಯಗಳನ್ನು ನಾವು ಕಾಳಜಿ ವಹಿಸದೆ ಅದರ ಅದರ ಮೌಲ್ಯ ತಿಳಿಸಿ ಹೇಳದೆ ನಮಗೆ ಗೊತ್ತಿದ್ದು ಅಥವಾ ಗೊತ್ತಿಲ್ಲದೆಯೋ ಬೆಳೆಸಿಕೊಂಡು ಬಂದಿರುತ್ತೇವೆ.. ಇದರ ಬಗ್ಗೆ ಮೂಡಿಬಂದ ನಾಟಕ ಹಾಗೂಚಿಕ್ಕ ಮಕ್ಕಳು ಮಾಡಿದ ಪ್ರಯೋಗ ಅತಿ ಅದ್ಭುತವಾಗಿ ಮೂಡಿಬಂತು.

ಇದಾರೆ ಜೊತೆಗೆ ದೇಶದ  ಸೈನ್ಯದ ಒಂದು ಪ್ರಯೋಗ ಅದ್ಭುತವಾಗಿ ನೆರೆದಿರುವ ಎಲ್ಲರನ್ನು ಮನರಂಜಿಸಿತು...   ಎಲ್ಲದರಲ್ಲೂ ಪುಟ್ಟ ಮಕ್ಕಳ ಅದ್ಬುತ ನಾಟ್ಯ ಹಾಗು ನಾಟಕ... ಮೂಗಿನ ಮೇಲೆ ಬೆರಳಿಟ್ಟು ನೋಡುವ ಹಾಗೆ ಮಾಡಿತು...

ಕೊನೆಯಲ್ಲಿ ಮೂರನೇ ತರಗತಿಯ ಮಕ್ಕಳು ನಡೆಸಿಕೊಟ್ಟ ನಮ್ಮ ನಿಮ್ಮೆಲ್ಲರ ಅಚ್ಚು ಮೆಚ್ಚಿನ ಪುಣ್ಯಕೋಟಿ ನಾಟ್ಯ ಪ್ರಯೋಗ ಅತಿ ಅದ್ಭುತವಾಗಿ ಮೂಡಿಬಂತು ಹಾಗೆ ಕುಳಿತಿರುವವರ ಕಣ್ಣಂಚಿನಲ್ಲಿ ನೀರನ್ನು ಕೂಡ ತರಿಸಿತು..

ನಿನಗೆ ನಿಜವಾಗಲೂ ಕೂಡ ಯಾವುದೋ ಒಂದು ಲೈವ್ ಕಾಂಟೆಸ್ಟ್ ಅಥವಾ ಒಂದು ರಂಗಭೂಮಿಯ ಮಧ್ಯದಲ್ಲಿ ಇದ್ದೀನಿ ಅಂತ ಅನಿಸಿತು ಸ್ಕೂಲ್ ಡೇ ಇವೆಂಟ್. ಇದು ಒಂದು ತರಹ ಚಿತ್ರಕೂಟ ಫ್ಯಾಮಿಲಿ ಇವೆಂಟ್ ತರ ಇತ್ತು... ಈ ಹದಿನೈದು ವರ್ಷಗಳಲ್ಲಿ ಶ್ರಮಿಸಿದ ಎಲ್ಲರನ್ನೂ ನೆನೆದು ಚಿತ್ರಕೂಟ ಶಾಲೆ ಬೆಳೆದು ಬಂದ ಪ್ರತಿಯೊಂದು ಹಂತವನ್ನು ಜವಾಬ್ದಾರಿಯುತವಾಗಿ ಹೇಳಿ ಮುಂದಿರುವ ಸವಾಲುಗಳನ್ನು ತಿಳಿಸಿ ಒಂದು ರಚನಾತ್ಮಕ ಪ್ರಯೋಗವಾಗಿ ಸ್ಕೂಲ್ ಡೇ ಈವೆಂಟ್ ಅನ್ನು ಆಯೋಜಿಸಿದ ರೀತಿಗೆ ನಮ್ಮೆಲ್ಲರ ಸಹಮತ ಸಹಕಾರ ಇದ್ದೇ ಇರುತ್ತದೆ.

ಇಂತಹ ಪ್ರಯೋಗಗಳಿಂದ ಚಿತ್ರಕೂಟ ಶಾಲೆಯ ಜವಾಬ್ದಾರಿಗಳು ಇನ್ನೂ ಹೆಚ್ಚುತ್ತ, ಭವಿಷ್ಯದಲ್ಲಿ ಇನ್ನೂ ಹೆಚ್ಚು ಹೆಚ್ಚು ಇದೇ ರೀತಿ ಹೊಸತರದ ಪ್ರಯೋಗಗಳನ್ನು ರೂಪಿಸ ಬೇಕಾದ ಜವಾಬ್ದಾರಿಯನ್ನು ಚಿತ್ರಕೂಟ ಶಾಲೆಯು ತನ್ನ ಮೇಲೆ ಹೊರಿಸಿ ಕೊಂಡಿದೆ" ಹೊತ್ತಿಗೆಯ ಹೊತ್ತು"  ನಾಟಕ 


ಚಿತ್ರಕಥಾ ...ಹಾಡಿಗೆ ರಾಗ ಸಂಮಯೋಜಿಸಿದ ಮಹೇಶ್.. 
 ಎಲ್ಲ ಶಿಕ್ಷಕ ವೃಂದದ ನಾಟ್ಯ.... ಪ್ರಸ್ತುತ ವಿದ್ಯಮಾನಗಳ ... ಮಕ್ಕಳ ಹಾಗು ಪೋಷಕರ ಜವಾಬ್ದಾರಿ ನೆನಪಿಸುವ ಒಂದು ಅರ್ಥ ಗರ್ಭಿತ  ನಾಟಕ...


 ಎಲ್ಲ ಕಾರ್ಯಕ್ರಮಗಳ ಹಿಂದಿನ ರೂವಾರಿಗಳಾದ ...ಡ್ಯಾನ್ಸ್ ಟೀಚರ್ಸ್......

No comments:

Post a Comment