Friday, April 10, 2009

ನೀವು ಕೂಡ ನಂಬಲೇ ಬೇಕು......!!!!! amezing artist..


ಇ ಮೇಲಿನ ಚಿತ್ರ ನೋಡಿದರೆ ನಿಮಗೆ ಏನ್ ಅನ್ನಿಸುತ್ತೆ, ಇದು ಯಾವುದಾದರು ಒಂದು ಫೋಟೋ ನಲ್ಲಿ ತೆಗೆದಿರುವ ಫೋಟೋನ ಅಥವ ಯಾರಾದರು ಬಿಡಿಸಿರುವ ಪೇಂಟಿಂಗ್ ಚಿತ್ರಣನ? ನೋಡಿ ನೋಡಿ,, ,,, ಸರಿಯಾಗಿ ನೋಡಿ......
.
.
.

?
ಗೊತ್ ಆಯ್ತಾ ಏನ್ ಇದು ಅಂಥ, ಫೋಟೋನ ಅಥವ ಪೇಂಟಿಂಗ್ ಅ?

ಸರಿ ಗೊತ್ತಾಗಲಿಲ್ವಾ.. ಇದನ್ನ ನೋಡಿ ಹೇಳಿ.. ಇವಗ್ಲಾದ್ರು ಗೊತ್ ಆಯ್ತಾ? ........

ಹಾಂ ಹೌದ್ರಿ .....ಇದು ನಿಜವಾಗ್ಲೂ ಪೇಂಟಿಂಗ್ ಗೆ ...... ನಿಜವಾಗಲು ನಂಬೋಕೆ ಕಷ್ಟ ಆಗ್ತಿರಬೇಕು ಅಲ್ವ.. ಇಸ್ಸ್ಟು realistic ಆಗಿ ಯಾರಪ್ಪ ಪೇಯಿಂಟ್ ಮಾಡ್ತಾರೆ ಅಂಥ ? ಹೌದು ಕೆಳಗೆ ನೋಡಿ,,,,,,


ಇವರ ಹೆಸರು :- Iman Maleki ..ಹುಟ್ಟಿದು :- 1976 ರ ರಲ್ಲಿ, Teheran ಎಂಬ ಉರಿನಲ್ಲಿ....ಇತ ಚಿಕ್ಕವರಿರಬೇಕದ್ರೆ ಪೇಂಟಿಂಗ್ ಬಗ್ಗೆ ತುಂಬ ಆಸಕ್ತಿ ಹೊಂದಿದ್ದರು... ಅವಗ್ಲಿಂದನೆ ಪೇಂಟಿಂಗ್ ಗೀಳು ಬೆಳೆಸಿಕೊಂಡ ಇವರು, ತನ್ನ 15 ನೆ ವಯಸಿನಲ್ಲಿ, ಇರಾನ್ ಮತ್ತೆ ಈ worldna
greatest realist painter " Morteza Katouzian" ಎಂಬುವರ ಹತ್ತಿರ ಪೇಂಟಿಂಗ್ ಅನ್ನು ಕಲಿತುಕೊಂಡರು. ಅಲ್ಲಿಂದ ಮುಂದೆ ,, ಇವರ ಎಲ್ಲ ಕಲಾಕೃತಿಗಳು ದೇಶ ವಿದೇಶ ಗಳಲ್ಲಿ ಪ್ರದಶನ ಗೊಳ್ಳುತ್ತ ಬಂದಿದೆ. ಇವಾಗ ಇವರೊಬ್ಬ ಈ worldna ಫೇಮಸ್ realist painter ಆಗಿದ್ದಾರೆ ,
"
The most important exhibition to date was the “Exhibition of Realist painters of Iran” in the Contemporary Museum of Art in Teheran(1999) and the “Group Exhibition of KARA Studio Painters” in the SABZ galerie(1998) and the SA'AD ABAD Palace(2003) "ಎಷ್ಟು real ಆಗಿ natural ಆಗಿ ಇದೆ ಅಲ್ವ ಫೋಟೋಗಳು...... ಇನ್ನು ನೋಡಿ ಆನಂದಿಸಬೇಕೆ ಇವರ ಅದ್ಬುತ ಕಲಾ ಕೃತಿಗಳನ್ನ ....... ಹಾಗಾದರೆ ನೋಡಿ ಕೆಳಗೆ..........

ಇದು ನಿಜವಾಗ್ಲೂ ಯಾವುದೊ ಹಳೇ ಕಾಲದ ಫೋಟೋ ತರಹ ಇದೆ ಅಲ್ವ.......

background ಎಫೆಕ್ಟ್ ನ ಇಷ್ಟು deep ಆಗಿ, ಬಿಡಿಸೋಕೆ ಆಗುತ್ತ?


ಇದು ನಿಜವಾಗಲು... amezing....... ಯಾವುದೊ ordinari ಕ್ಯಾಮೆರಾದಲ್ಲಿ ಫೋಟೋ ತೆಗೆದ ಹಾಗಿದೆ... ಅಲ್ವ ?ಏನ್ ಅದ್ಭುತ ವಾಗಿ ಇದೆ ...... ಈ ಹುಡುಗಿಯರು ಯಾವುದೊ ಫೋಟೋನ ನೋಡ್ತಾ ಇದ್ದರೆ,,, ಅವರ ಭಾವ ,, facial expression, ಕೆಳಗೆ ಬಿದ್ದಿರುವುದು ಫೋಟೋಸ್ ಅಲ್ಲ,,, ಅದು ಕೂಡ ಪೇಂಟಿಂಗ್!!!!!!!!
ಈ ಚಿತ್ರ ನೋಡಿ... ಮರ ಗಿಡಗಳ ನೆರಳು ಕೂಡ ಎಷ್ಟು ಚೆನ್ನಾಗಿ ಮೂಡಿ ಬಂದಿದೆ ಅಲ್ವ......

ನನಗೆ ಏನು ವರ್ಣಿಸುವುದಕ್ಕೆ ಬರ್ತಾ ಇಲ್ಲ,,, ನಿಮಗೆ ಏನಾದ್ರು ತೋಚಿದರೆ ಈ ಫೋಟೋ ಅಲ್ಲ ಅಲ್ಲ.... ಕಲಾಕೃತಿ ಬಗ್ಗೆ ಸ್ವಲ್ಪ ಬರೀರಿ.......ವಾಹ್ ..... ಅಸ್ಟೆ ಹೇಳೋಕೆ ಆಗೋದು ನನ್ ಕಡೆ ಇಂದ......


ಈ ಫೋಟೋನ ಕ್ಲಿಕ್ ಮಾಡಿ, ದೊಡ್ಡದು ಮಾಡಿ ನೋಡಿರಿ..... ಗುಬ್ಬಚಿ ಯಾ ಫೋಟೋಗಳು...ವಾಹ್ ಅದ್ಭುತ ........

ಪರದೆ ಒಳಗಿನಿಂದ ಬರುವ ಎಲೆ ಬಿಸಿಲು ಕೂಡ ಇಷ್ಟು real ಆಗಿ ಇರಲ್ವೇನೋ......


ಅಬ್ಬ ....... ಫೋಟೋ ಮತ್ತೆ ಪೇಂಟಿಂಗ್ ನಲ್ಲಿ ಯಾರದ್ರು ಆಸಕ್ತಿ ಇದ್ದರೆ ....ಇಲ್ಲಿ ಇರುವ techniques ಅಂಡ್ talent ನ ಸ್ವಲ್ಪ ನಮಗೂ ತಿಳಿಸಿ ಹೇಳಿ..... i am surrender to Iman Maleki ".... You really proved your self as worlds greatest realistic painter sir….. Hats of you……

20 comments:

 1. Sooper! Can't make out these are paintings, looks like photos only!

  ReplyDelete
 2. ಗುರು,

  ನೀವು ನಿಜಕ್ಕೂ ಗ್ರೇಟ್ ಕಣ್ರಿ....ಎಲ್ಲಿಂದ ಹುಡುಕಿ ತರ್ತೀರಿ ಇವುಗಳನೆಲ್ಲಾ...ನಾನು ಇಲ್ಲಿರುವ ಅದ್ಭುತ ಕಲಾಕೃತಿಗಳನ್ನು ವರ್ಣಿಸಲು ಪದಗಳೇ ಇಲ್ಲ...ಒಂದಕ್ಕಿಂತ ಒಂದು ಮೀರಿಸಿದಂತವುಗಳು...ಅವುಗಳಲ್ಲಿರುವ final touch, finishing touch, ಎಲ್ಲೂ ಅತಿ ಅನ್ನಿಸದ ಬಣ್ಣಗಳ ಹೊಂದಾಣಿಕೆ ಅದನ್ನು [ hormony of colours ಅಂತಲೂ ಹೇಳಬಹುದು] ಅತ್ಯುತ್ತಮ ನೆರಳು=ಬೆಳಕಿನ ಚಿತ್ತಾರ...ಅದೆಲ್ಲಾಕ್ಕಿಂತಾ ಮುಖ್ಯವಾಗಿ ಪ್ರತಿಚಿತ್ರದಲ್ಲೂ ಹೊರಹೊಮ್ಮುತ್ತಿರುವ ಭಾವನೆಗಳಂತೂ...ಪದಗಳಿಗೆ ಸಿಗದು....
  ನಾನಾಗಲೇ ಈ ಚಿತ್ರಗಳಿಂದ ಸ್ಪೂರ್ತಿ ಪಡೆದು ಹೊಸದೇನೋ[ಛಾಯಾಗ್ರಹಣ] ಮಾಡೋವ ಅಲೋಚನೆಗೆ ಬಿದ್ದಿದ್ದೇನೆ...
  ಟರ್ಕಿ ದೇಶದ "iman malaki" ಗೆ ನನ್ನ ಆನಂತಾನಂತ ನಮಸ್ಕಾರಗಳು...
  ಗುರು ನಿಮ್ಮ email ID ಕೊಡುತ್ತೀರಾ ಪ್ಲೀಸ್...

  ReplyDelete
 3. Thanks for your comments jothi, Yes, its really difficult to make out these are paintings..
  ಇದನ್ನೇ ಕಲೆ ಅನ್ನೋದು ಅಲ್ವ... iman malaki ಅವರು ನಿಜಕ್ಕೂ ಗ್ರೇಟ್ ....
  ಹೀಗೆ ಬರುತ್ತಿರಿ ...

  ReplyDelete
 4. ಶಿವೂ,,
  ನನಗೆ ಗೊತ್ತಿತ್ತು ಈ painitng ನಿಮಗೆ ತುಂಬ ಇಷ್ಟ ಆಗುತ್ತೆ ಅಂತ, ನೀವು ಕೂಡ ಇದರಲ್ಲಿ i mean photography ನಲ್ಲಿ experts ಅಲ್ವ ... ಹೌದು ಎಷ್ಟು realistic ಆಗಿ ಇದೆ ಅಲ್ವ ಈ paintings,, ಕೆಲವೊಮ್ಮೆ ಎಸ್ಟೆ ಕಷ್ಟ ಪಟ್ಟು ಪೋಟೋ ತೆಗೆದರು ನಮ್ ಕಲ್ಪನೆಗೆ ಬೇಕಾಗಿರೋಹಾಗೆ ಬರೋಲ್ಲ ಅಲ್ವ..
  ಈ ಚಿತ್ರ ದಿಂದ ಸ್ಫೂರ್ತಿ ಪಡೆದು ಹೊಸ ಛಾಯಾಗ್ರಹಣ ಮಾಡ್ತಿರ ಅಂತ ಹೇಳ್ತಾ ಇದ್ದೀರಾ,, ಆಲ್ ದಿ ಬೆಸ್ಟ್ ... ಅದನ್ನು ಹಾಗೆ ನಮ್ಮ ಜೊತೆ ಶೇರ್ ಮಾಡಿಕೊಳ್ಳಿ... ಆಯ್ತಾ...
  ಶಿವೂ ನಾನೇನು ಗ್ರೇಟ್ ಅಲ್ಲ ರೀ,, ನಿಜಕ್ಕೂ iman malaki ಅವರು ಗ್ರೇಟ್ .... ಇದು ನನ್ನ ಹವ್ಯಾಸ ಅಸ್ಟೇ.. ಚೆನ್ನಾಗಿ ಇರೋ ಫೋಟೋಸ್, paintings ನ collect ಮಾಡ್ಕೊಥ ಇರ್ತೇನೆ,, ಹಾಗೆ ಅವಕಾಶ ಸಿಕ್ಕಾಗ ಎಲ್ಲರ ಜೊತೇನೆ ಹಂಚೋಕೊತೇನೆ ಅಸ್ಟೇ....

  (ನಿಮ್ಮ ಮೇಲ್ Id ಗೆ ನನ್ ಮೇಲ್ ಮಾಡಿದೇನೆ ನೋಡಿ... )

  ReplyDelete
 5. ಗುರೂ..ಎನಿದು..???!!!
  ಅತ್ಯದ್ಭುತ...ಸಂಗ್ರಹಣೆ..Super artist ಅನ್ನೂ ಪರಿಚಯಿಸಿದ್ದೀರಿ...ಧನ್ಯವಾದಗಳು.

  ReplyDelete
 6. ಗುರು ಅವರೆ,
  Iman Malaki ಎಂಥ ಅದ್ಭುತ ಆರ್ಟಿಸ್ಟ್ ಅಲ್ವಾ. ಇವಲ್ಲಿ ಕೆಲವನ್ನು ನನ್ನ ತಂಗಿ ಮೇಲ್ ಮಾಡಿದ್ದಳು. ಆಗ ಇದು ಪೇಂಟಿಂಗೊ, ಫೋಟೋಗಳನ್ನು alter ಮಾಡಿರುವುದೋ ಎಂಬ ಸಂದಿಗ್ಧದಲ್ಲಿದ್ದೆ. ನೀವು ಈ ಕಲಾವಿದನ ಬಗ್ಗೆ ,Realistic painting ಎಂಬುದರ ಬಗ್ಗೆ ಮತ್ತು ಅನೇಕ ಚಿತ್ರಗಳನ್ನು ಕೊಟ್ಟು ಮನತುಂಬಿಸಿದ್ದೀರಿ. ಒಂದೊಂದರಲ್ಲೂ expression ಎಷ್ಟು ಚೆನ್ನಾಗಿದೆ...ವರ್ಣಿಸಲು ಪದಗಳು ಸಾಲವು.Thank u very much.

  ReplyDelete
 7. ಹೆಲೋ ಜಲನಯನ....
  ಏನು ಇಲ್ಲ ಅದ್ಬುತ ಪೇಂಟಿಂಗ್ ಕಾಲಕೃತಿಗಳು ಅಸ್ಟೆ.... ಹಾ ಹಾ ಹಾ
  ಎಷ್ಟು ರಿಯಲ್ ಆಗಿ ಇದೆ. ಅಲ್ವ... ಥ್ಯಾಂಕ್ಸ್ ಸರ್ ಬಂದು ಪ್ರತಿಕ್ರಿಯಿಸಿದಕ್ಕೆ ...

  ReplyDelete
 8. welcome to my world ನಿಶಾ...
  ಎಸ್,, ನಿಜವಾಗ್ಲೂ ಅದ್ಭುತ ಕಲಾಕೃತಿಗಳು ... ಹಾಗು ಅದ್ಬುತ ಕಲೆಗಾರ .....ಅಲ್ವ ..

  ReplyDelete
 9. Thanks ಮಲ್ಲಿಕಾರ್ಜುನ್ ಸರ್ ..
  ನನಗಿಂತ ನಿಮಗೆ ಇದರ ಬಗ್ಗೆ ಜಾಸ್ತಿ ತಿಳಿದಿರುತ್ತೆ..... Iman Malaki ನಿಜವಾಗ್ಲೂ ಅದ್ಬುತ ಕಲೆಗಾರ..... ಅವರ ಕಲೆಗೆ ನಾವು ತಲೆಬಾಗಲೇ ಬೇಕು.....
  ಹೀಗೆ ಬರುತ್ತಿರಿ....

  ReplyDelete
 10. ivara bagge naanu halavu kade tilididde...avaru adhbuta kale ullavaru.......
  olleya chitragalanne torisideeri heege saagali nimma prapancha..

  thnx....

  ReplyDelete
 11. Thanks manasu...
  ನಿಮ್ಮಗಳ ಪ್ರೋಸ್ತಾಹ ದಿಂದ ನನ್ನ ಪ್ರಪಂಚವು ಹೀಗೆ ಮುಂದುವರಿಯುತ್ತಿರುತ್ತೆ ....... :- )

  ReplyDelete
 12. ಮೊದಲ ನೋಟದಲ್ಲೆ ನಿಮ್ಮ ಬ್ಲಾಗ್ ಇಷ್ಟವಾಯಿತು. ಪೈಂಟಿಂಗ್ಸ್ ತುಂಬಾ ಚೆನ್ನಾಗಿದೆ. ಈ ರೀತಿಯ ರಿಯಲಿಸ್ಟಿಕ್ ಪೇಂಟಿಂಗ್ಸ್ ಮಾಡುವವರು ಇಲ್ಲೂ ಬಹಳಷ್ಟು ಕಲಾವಿದರಿದ್ದಾರೆ.

  ಅಂದ ಹಾಗೆ ನೀವು ಓದಿದ್ದು ಕುಣಿಗಲ್ನಲ್ಲ ಅಥವಾ ಬೆಂಗಳೂರಲ್ಲ?

  ReplyDelete
 13. ಹೆಲೋ ಬಸವರಾಜು ,
  ನನ್ನ ಬ್ಲಾಗಿಗೆ ಸ್ವಾಗತ,,,, ಮೊದಲನೋಟದಲ್ಲೇ ನನ್ನ ಬ್ಲಾಗ್ ಅನ್ನು ಮೆಚ್ಚಿದಿರಿ ಅಂತ ಹೇಳಿದ್ರಿ... ತುಂಬ thankx.....
  ಹೌದು ನಾನು ನನ್ನ schooling ಕುಣಿಗಲ್ ನಲ್ಲೆ ಮಾಡಿದ್ದೂ,,, ಆಮೇಲೆ ಬೆಂಗಳೂರಿಗೆ ಬಂದು ನೆಲೆಸಿದ್ದೀನೆ ತಾವು ಕುಣಿಗಲ್ ನವರ ?
  ಗುರು

  ReplyDelete
 14. ಗುರುರವರೆ...

  ಬರಲಿಕ್ಕೆ ತಡ ಆಯಿತು ಕ್ಷಮೆ ಇರಲಿ...

  ನಿಮ್ಮ ಹುಡುಕಾಟ ಇಷ್ಟವಾಗುತ್ತದೆ..
  ಎಲ್ಲಿ ಹುಡುಕುತ್ತೀರಿ ಇವುಗಳನ್ನು...?

  ಸೊಗಸಾದ ಪೇಂಟಿಂಗ್ಸ್...!

  ಅದ್ಭುತ ಕಲಾಕಾರ...!

  ಪರಿಚಯ ಮಾಡಿಸಿದ್ದಕ್ಕೆ ಧನ್ಯವಾದಗಳು...

  ReplyDelete
 15. ಪ್ರಕಾಶ್ .
  ಇದರಲ್ಲಿ ಕ್ಷಮೆ ಏನು ಬಂತು ಸರ್... ಯಾವಾಗ್ ಬೇಕಾದರು ಬಂದು,,, ಕಾಮೆಂಟ್ ಕೊಟ್ಟು ಪ್ರೋಸ್ಥಹ ಕೊಡುತ್ತ ಇರಿ;;
  ಎಲ್ಲಿಂದ ಹುದುಕೊದ.... ನನ್ನದು ಒಂದು ತರಹ ಹಠ.. ಏನಾದರೂ ಒಂದು ಚಿಕ್ಕ ವಸ್ತು ಸಿಕ್ಕರೂ ಸಾಕು ಅದರಬಗ್ಗೆ ಯಾವ ನೆಟ್ವರ್ಕ್ ಗೆ ಬೇಕಾದರು ಹೋಗಿ,, ಹುಡುಕಿಕೊಂಡು ಬರುತ್ತೇನೆ... ನನ್ Profession ಇದು ಅಲ್ವ..
  ಗುರು

  ReplyDelete
 16. ಈ ಸುಂದರ ಕಲಾಕೃತಿಗಳನ್ನು ನೋಡಲು ಬರುವಾಗ ಭಾಳ ತಡವಾಗೋಯ್ತು..ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದಲ್ಲಾ...ಕೆಲಸ ಚೂರು ಜಾಸ್ತಿ ಇತ್ತು. ಅದ್ಭುತವಾದ ಕಲಾಕೃತಿಗಳು. ಪ್ರತಿ ಕಲಾಕೃತಿಗಳಲ್ಲೂ ಭಾವನೆಗಳು ಮಾತಿಗಿಳಿದಂತೆ, ನಮ್ಮೊಳಗೆ ಖುಷಿಯ ಅನುಭುತಿಯನ್ನು ನೀಡುತ್ತಿವೆ. ನಿಮ್ಮ ಹವ್ಯಾಸಕ್ಕೆ ಹ್ಯಾಟ್ಸಾಪ್ ಗುರು. ಧನ್ಯವಾದಗಳು.
  -ಧರಿತ್ರಿ

  ReplyDelete
 17. ಬಂದು ಪ್ರತಿಕ್ರಿಯಿಸಿದಕ್ಕೆ ತುಂಬ ಧನ್ಯವಾದಗಳು ಧರಿತ್ರಿ....

  ReplyDelete
 18. ಅಬ್ಬಾ! ದ೦ಗು ಬಡಿಸುವ ಕಲಾಕೃತಿಗಳು. ಕಲಾವಿದನಿಗೆ ಇಲ್ಲಿ೦ದಲೇ ಹೃತ್ಪೂರ್ವಕ ನಮನಗಳು. ಪರಿಚಯಿಸಿದ ನಿಮಗೆ ಧನ್ಯವಾದಗಳು.

  ReplyDelete