Thursday, April 16, 2009

Internet - Security - Awareness !!!!!

Internet.... ಒಂದು ಥರ ಅವಿಬಾಜ್ಯ ಅಂಗ ಆಗಿ ಬಿಟ್ಟು ಇದೆ ಅಲ್ವ ನಮಗೆ..... ಹೌದು ಇವಗಂತು, ಎಲ್ಲದಕ್ಕೂ ಇಂಟರ್ನೆಟ್ ಗೆ ಮೊರೆ ಹೋಗ್ತಾ ಇದೇವೆ. ಎಲ್ಲಾನು online ನಲ್ಲೆ ನಡಿಬೇಕು. ಪತ್ರ ವ್ಯವಹಾರ. (ಮೇಲ್).. ಸ್ನೇಹಿತರ ಜೊತೆ ಹರಟೆ ಅದು ಚಾಟಿಂಗ್ ನಲ್ಲಿ, ಡೈರೆಕ್ಟ್ ಆಗಿ ಸಿಕ್ತ ಇಲ್ಲ ಅಂದ್ರೆ, ಚಾಟ್ ನಲ್ಲಿ ಇರ್ಥರಲ್ವ... ಮತ್ತೆ ಬ್ಯಾಂಕಿಂಗ್ , ಬಸ್ , ಟ್ರೈನ್, flightಟಿಕೆಟ್ resarvation.... ಅಬ್ಬ ಒಂದ ಎರಡ ನಿದಾನವಾಗಿ ಎಲ್ಲದಕ್ಕೂ ಇಂಟರ್ನೆಟ್ ಅನ್ನ್ಕೋ E-world ನ ಅವಿಬಾಜ್ಯ ಅಂಗವಾಗಿ ನಾವು ಇದ್ದೇವೆ... ಇದರಿಂದ ಎಸ್ಟೆ ಒಳ್ಳೆ ಉಪಯೋಗ ಇರುತ್ತೋ ಹಾಗೆ ಸ್ವಲ್ಪ ಅಪಾಯನು ಇದೆ. ಹಾಗಂತ ಇದನೆಲ್ಲ ಬಿಟ್ಟು ಬಿಡೋಕೆ ಆಗೋಲ್ಲ ಅಲ್ವ, ಆದಸ್ಟು ಮುಂಜಾಗ್ರತೆ ವಹಿಸಿ, ಸೇಫ್ ಆಗಿ ವ್ಯವಹರಿಸಬೇಕು . ಆಯೋ ಇಸ್ಟೆನ ಅಂಥ neglect ಮಾಡಿದ್ರೆ ನಮಗೆ loss .....
ಓಹ್ ನಾನು ಬೇರೆ ಏನೋ ಹೇಳಲು ಹೊರಟಿಲ್ಲ.. actually ನಾನು ಮೂಲತ network ಇಂಜಿನಿಯರ್, ಈ network security, network safety ಇದರ ಬಗ್ಗೆನೇ ವರ್ಕ್ ಮಾಡೋದು, ಅದ್ದರಿಂದ ನನಗೆ ಗೊತ್ತಿರುವ ಕೆಲವು ಸಣ್ಣ ಮಾಹಿತಿಗಳನ್ನು ನಿಮ್ಮಗಳ ಜೊತೆ ಹಂಚ್ಕೊಳೋಣ ಅಂಥ, ಇದರಬಗ್ಗೆ ನಿಮಗೂ ಗೊತ್ತಿರಬಹ್ದು ಆದರು ಸ್ವಲ್ಪ awareness ಇರಲಿ ಅಂಥ , ಕೆಲವೊಂದು ಉಪಯುಕ್ತ ಟಿಪ್ಸ್ ನ ಕೊಡ್ತಾ ಇದೇನೇ,, ನಿಮಗೆ ಇಷ್ಟ ಇದ್ರೆ use ಮಾಡಿಕೊಳ್ಳಿ..



1) ಮೊದಲನೆಯದಾಗಿ internet ಯಾವುದೇ ಅಕೌಂಟ್ ನ username ಅಂಡ್ password. ನೀವು ಯಾವುದೇ ವೆಬ್ ಸೈಟ್ ನಲ್ಲಿ ವ್ಯವಹರಿಸ ಬೇಕಾದರೆ ನಿಮ್ಮ ಐಡೆಂಟಿಟಿ ತುಂಬ ಮುಖ್ಯ ಅದಕ್ಕಾಗಿ username ಅಂಡ್ password ಅನ್ನು create ಮಾಡಿ ಅದರ ಮುಖಂಥರ ನೀವು ವ್ಯವಹರಿಸ ಬೇಕಾಗುತ್ತೆ.. for example ನಿಮ್ಮ E-ಮೇಲ್ ಅಕೌಂಟ್, ಇದು ನಿಮ್ಮ ಪರ್ಸನಲ್ ಅಕೌಂಟ್ ಇದ್ದ ಹಾಗೆ official ಆಗಿ ತುಂಬ datana ಸೇವ್ ಮಾಡಿರುತ್ತಿರ, ಹಾಗೆ ಎಲ್ಲ ವ್ಯವಹಾರಗಳಿಗೂ ಇದನ್ನೇ ಬಳಸುತ್ತಿರುತಿರ ಅಲ್ವ.. ನಿಮ್ಮ ಈ ಇಮೇಲ್ ಅಕೌಂಟ್ safety ಬಗ್ಗೆ ನಿಮಗೆ ಎಷ್ಟು ಗೊತ್ತು, ನಿಮ್ಮ ಯಾವುದೇ ಅಕೌಂಟ್ safety ಅಂಥ ಅನ್ನಿಸುತ್ತ? ಹೌದು ಅಸ್ಟೊಂದು safety ಇಲ್ಲ ನಾವು ಅದನ್ನ ಸೇಫ್ ಆಗಿ nodkobeku,, ಯಾರು ಬೇಕಾದರು ನಿಮ್ಮ ಅಕೌಂಟ್ ನ hack ಮಾಡಿ ನಿಮ್ಮ ಥರಾನೇ ವಯ್ವಹರಿಸುವ ಸಾದ್ಯತೆ ತುಂಬ ಇರುತ್ತೆ... ಅದ್ದರಿಂದ ನಾವು adastu saftyge ಒತ್ತು ಕೊಡಬೇಕು .. ಹೇಗೆ ?

a) ಮೊದಲು ನಿಮ್ಮ username :- Standard ಆಗಿ ಇರಲಿ, ಅಂದರೆ official ಆಗಿ interact ಮಾಡ್ಬೇಕಾದ್ರೆ ನಿಮ್ಮ ಹೆಸರು ಸರಿಯಾಗಿ ಇರಲಿ,, ಸುಮ್ಮನೆ ಕಾಟಾಚಾರಕ್ಕೆ ಅಂಥ ಯಾವುದೊ ಹೆಸರು (username) ಕೊಡಬೇಡಿ example ( munny123, chinnu248 ect) ಅದಸ್ಟು ಸ್ಪಷ್ಟವಾಗಿ ಇರಲಿ ನಿಮ್ಮ user name ಉದಾಹರಣೆಗೆ ನಿಮ್ಮ ಹೆಸರು ಶಿವ ಪ್ರಕಾಶ್ ಅಂಥ ಇದೆ ಅಂದ್ರೆ shivuP, ಶಿವ_ಪ್ರಕಾಶ್, ಶಿವೂ-ಪ್ರಕಶ್ ಅಂತಾನೋ uniqe ಆಗಿ ಇರಲಿ , ಗೊತ್ತಿರಲಿ ನಿಮ್ಮ username ನಿಮ್ಮ ವ್ಯಕ್ತಿತ್ವ ವನ್ನು ತೋರಿಸುತ್ತೆ .

b) ಇನ್ನು password , ಇದು ತುಂಬ importent, ನೀವು ನಿಮ್ಮ password ಅನ್ನು ಎಷ್ಟು effective ಆಗಿ ಎಷ್ಟು strong ಆಗಿ ಇಡುತ್ತಿರೋ ಅಸ್ಟು ನಿಮ್ಮ ಅಕೌಂಟ್ ಸೇಫ್ ಆಗಿ ಇರುತ್ತೆ.. ದಯವಿಟ್ಟು online ಬ್ಯಾಂಕಿಂಗ್ ನಲ್ಲಿ ವ್ಯವಹರಿಸ ಬೇಕಾದರೆ adastu strong encrypt password ಅನ್ನು ಉಪಯೋಗಿಸಿ . ( ಕೆಲವೊಂದು spyware software ಗಳು ಈಗ ಮಾರ್ಕೆಟ್ ನಲ್ಲಿ ಲಬ್ಯವಿದೆ , ಅದು ಒಂದು ಬಾರಿಗೆ 50,೦೦೦೦ ನಿದ ಅದೆಸ್ತೋ lacs ವರೆಗೂ password match ಮಾಡೋ ability ಇರುತ್ತೆ) ಅದ್ದರಿಂದ ವೀಕ್ passwords ನ use ಮಾಡಬೇಡಿ... ಏನಪ್ಪಾ ಇವನು ಬಾರಿ strong password ಕೊಡಿ ಅಂಥ ಹೇಳುತ್ತೀದನೆ ಅದನ್ನ ಹೇಗೆ ಕೊಡೋದು ಅಂಥ ಯೋಚನೆ ಮಾಡ್ತಾ ಇದ್ದೀರಾ,, ತಾಳಿ ಹೇಳುತ್ತೇನೆ.. ನೋಡಿ, ನಾರ್ಮಲ್ ಆಗಿ password ಅನ್ನು ಕೊಡಬೇಕಾದರೆ ನೀವು ನಿಮ್ಮ ಯಾವುದೊ ನಿಕ್ಕ್ name ಅನ್ನೋ ಮೊಬೈಲ್ ನಂಬರ್ ಅನ್ನೋ, ಮನೆ ನಂಬರ್ ಅನ್ನೋ ಅಥವ ನಿಮಗೆ ಇಷ್ಟ ವಾದವರ ಹೆಸರನ್ನೂ ಕೊಡುತ್ತೀರಾ ಅಲ್ವ... ಗೊತ್ತಿರಲಿ ಈ ಎಲ್ಲ್ಲ information ನೀವು ನಿಮ್ಮ ಪ್ರೊಫೈಲ್ create ಮಾಡೋವಾಗ ಗೊತ್ತಿದ್ದೋ ಗೊತ್ತಿಲ್ಲದೇನೋ use ಮಾಡಿರುತ್ತಿರ.. ಇದೆಲ್ಲ ಬೇಗ ಕಂಡುಹಿಡಿಯಬಹುದು, ಅದ್ದರಿಂದ strong ಆಗಿ ಇರೋ password ನ ಇಟ್ಕೊಬೇಕು,, ಹೇಗೆ ಅಂದ್ರೆ... ನಮ್ಮ password ನಲ್ಲಿ CAP Letters , small letters. spl characters , and numbers , ಇಸ್ಸ್ತನ್ನು use ಮಾಡಿದ್ದರೆ password break ಮಾಡೋದು ಕಸ್ತ ಆಗುತ್ತೆ.. example :- " Vchitra@1977, Vichitra!148 ", hege.. ಇದನ್ನ 3rd level encription password ಅಂಥ ಹೇಳ್ತಾರೆ.. ಇದರಲ್ಲಿ ಎಲ್ಲ numbers, Letters, ಹಾಗು ಸ್ಪೆಷಲ್ characters ಇರೋದ್ರಿಂದ break ಮಾಡೋದು ಕಷ್ಟ ಆಗುತ್ತೆ , ಬೇಕಾದರೆ ನಿಮಗೆ ಇಸ್ಟವಾಗಿರುವ ಯಾವುದಾದರು ಹೂವಿನ, ವಸ್ತುವಿನ (ಕಷ್ಟದ) ಹೆಸರಿನ ಜೊತೆ ನಿಮಗೆ ನೆನಪಿನಲ್ಲಿ ಉಳಿಯುವಂಥ numbers ನ ಸೇರಿಸಿಕೊಂಡು password create ಮಾಡಿ .
ಇದನ್ನ ಇನ್ನು strong ಆಗಿ ಬೇಕು ಅಂದ್ರೆ ಹೀಗೆ ಉಪಯೋಗಿಸಬಹುದು,, ಯಾವುದಾದರು ಲೆಟರ್ ಸ್ಪೆಷಲ್ character ಆಗಿದ್ದರೆ ಅದನ್ನೇ ಉಪಯೋಗಿಸ ಬಹುದು,, ಹೀಗೆ .. a ಜಾಗದಲ್ಲಿ @ , i ಜಾಗದಲ್ಲಿ !, ಹೀಗೆ ... ಮೇಲಿನ example ನೆ ತಗೊಳೋಣ, Vchitra@1977 ಹೀಗೆ use ಮಾಡಬಹುದು Vch!tr@1977 ಇಲ್ಲಿ i ಜಾಗದಲ್ಲಿ ! ಮತ್ತೆ a ೩೭೧೨೯೭೦೧೫ @ ನ ಉಪಯೋಗಿಸಿದ್ದೇನೆ.. So ನಿಮ್ಮ password ಇವಾಗ full strong ಆಗಿ ಇದೆ,


2) Internet Banking,:- online Internet Banking ನಲ್ಲಿ ವ್ಯವಹರಿಸುವಾಗ ತುಂಬ ಹುಷಾರಾಗಿ ಇರಬೇಕು. ನಿಮ್ಮ password ನ ಆದಸ್ಟು strong ಆಗಿ ಕೊಟ್ಟಿರಿ, ಆಮೇಲೆ, ಪ್ರತಿ 15 ಅಥವಾ 1 ತಿಂಗಳಿಗೊಮ್ಮೆ ಯಾದರು ಚೇಂಜ್ ಮಾಡ್ತಾ ಇರಿ .

* online ಬ್ಯಾಂಕ್ ನಲ್ಲಿ ವ್ಯವಹರಿಸುವಾಗ login ಆಗಲು virtual keyboad ನ ಉಪಯೋಗಿಸಿ ,, ನಿಮ್ಮ ಕಂಪ್ಯೂಟರ್ ಕೀ ಬೋರ್ಡ್ ನಿಂದ ಕೆಲವೊಮ್ಮೆ ASCI character ಮೂಲಕ password leak ಆಗಬಹುದು,



* ಸೈಬರ್ ಕೆಫೆ ನಿಂದ adastu online ಬಂಕಿಂಗೆ login ಆಗೋದನ್ನು avoid ಮಾಡಿ, ಯಾಕಂದ್ರೆ ಅಲ್ಲಿ ಕೆಲವೊಂದು 3rd party software ನ install ಮಾಡಿರ್ತಾರೆ , so chancess are very high for hacking your password

* ನೀವು ಯಾವುದಾದರು online Banking ವೆಬ್ ಸೈಟ್ ಓಪನ್ ಮಾಡಿರುವಾಗ ಪ್ರತಿಸಾರಿ ಅದು secure site ಅಂತ confirm ಮಾಡಿಕೊಳ್ಳಿ , ಅದು ಹೇಗೆ ಅಂದರೆ Internet pagena ಕೆಳಗೆ ಅಂದರೆ status ಬಾರ್ ನಲ್ಲಿ ಲಾಕ್ symbol ಇರುತ್ತೆ , ಕೆಳಗಿನ ಫೋಟೋನಲ್ಲಿ high light ಮಾಡ್ದಿದೆನೆ ನೋಡಿ ಅದನ್ನ ನೋಡಿ confirm ಮಾಡಿಕೊಳ್ಳಿ.




* ಒಂದು ಸರಿ ನಿಮ್ಮ transaction ಅಥವಾ ನಿಮ್ಮ ವ್ಯವಹಾರ ಮುಗಿದಮೇಲೆ.. ಸೇಫ್ ಆಗಿ ಲಾಗೌಟ್ ಆಗಿ,, Internet page ಅನ್ನು ಕ್ಲೋಸ್ ಮಾಡಿ ಬಿಡಿ .

*ಕೆಲವೊಂದು ಆನಿವಾರ್ಯ ಕಾರಣ ಗಳಿಂದ ಸೈಬರ್ ಕೆಫೆ ನಿಂದ online Banking ಮಾಡಬೇಕಾದಾಗ , Banking ಮಾಡಿ, ಆಮೇಲೆ ಎಲ್ಲ cokkies ನ ಡಿಲೀಟ್ ಮಾಡಿ ಬಿಡಿ.. ಹೀಗೆ ಅಂದ್ರೆ Internet explorer ನಲ್ಲಿ tools option ನ ಸೆಲೆಕ್ಟ್ ಮಾಡಿ Tools ----> Internet option ---> Genaral Tab----> Delete cookies , ಅನ್ನು ಪ್ರೆಸ್ ಮಾಡಿ ಡಿಲೀಟ್ ಮಾಡಿ.




3) ಇನ್ನು ಚಾಟಿಂಗ್...ನಿಮಗೆ ಗೊತ್ತಿಲ್ಲದೆ ಇರೋ ಹಾಗೆ ಬೇರೆಯವರು ನಿಮ್ಮ ID use ಮಾಡಿಕೊಂಡು ಚಾಟ್ ಮಾಡಬಹುದು, ಇದು ತುಂಬ missuse ಆಗ್ತಾ ಇರೋದು yahoo ಮತ್ತೆ AOL ಚಾಟ್ ನಲ್ಲಿ, ಹೌದು ನೀವು ಚಾಟ್ ಮಾಡಬೇಕು ಅಂತ ಯಾವುದಾದರು ಸೈಬರ್ ಕೆಫೆ ಇಂದ ಒಮ್ಮೆ ಲಾಗಿನ್ ಆದ್ರೆ ಸಾಕು,, ನಿಮ್ಮ user name ನ hack ಮಾಡ್ಕೊಬೋದು,, ಅದು ಹೇಗೆ ಗೊತ್ತ, ನೀವು ಲಾಗಿನ್ ಆದ ಮೇಲೆ, ನಿಮ್ಮ username folder , ಅ ಕಂಪ್ಯೂಟರ್ ನಲ್ಲಿ ಸೇವ್ ಆಗುತ್ತೆ, ಅದು C:>programm files>yahoo>messanger> ಅನ್ನೋ ಕಡೆ ಡೀಫಾಲ್ಟ್ ಆಗಿ ಸೇವ್ ಆಗಿಬಿಡುತ್ತೆ. ಇದನ್ನ utilize ಮಾಡೋಕೆ ಯಾವುದಾದರು ಒಂದು software ಅಲ್ಲಿ install ಆಗಿರುತ್ತೆ so ಇದನ್ನ use ಮಾಡಿಕೊಂಡು ಎಲ್ಲ username details hacking ಮಾಡುವವರಿಗೆ ಇಮೇಲ್ ನಲ್ಲಿ ರಾವನೆಅಗುತ್ತೆ, ನಿಮ್ಮ username ನ ಏನಕ್ಕೆ ಬೇಕಾದರು ಉಪಯೋಗಿಸಬಹುದು,,, mainly SPAM mails ಕಳ್ಸೋಕೆ ಇದು use ಆಗ್ತಾ ಇದೆ .ಹೀಗೆ ಬೇಕಾದರೆ ನಿಮ್ಮ ಹೆಸರಿನಲ್ಲಿ chatge ಬೇಕಾದರು ಉಪಯೋಗಿಸಬದುದು... ಅದ್ದರಿಂದ ನೀವು ಸೈಬರ್ ಕೆಫೆ ಇಂದ ಅಥವ ಎಲ್ಲಿಯಾದ್ರು public ಪ್ಲೇಸ್ ನಿಂದ ಚಾಟ್ ಅಥವಾ online ಗೆ ಹೋಗಿದ್ದಾರೆ C:>programm files>yahoo>messanger> ಇಲ್ಲಿ ಹೋಗಿ ನಿಮ್ಮ username ಹೆಸರಿನ folder ಅನ್ನು ಡಿಲೀಟ್ ಮಾಡಿ ಬಿಡಿ.

4) ಇನ್ನು ನಿಮ್ಮ ಮನೆನಲ್ಲಿ ನೀವು Internet use ಮಾಡ್ತಾ ಇದ್ರೆ , ಅದು ಏನು ಸೇಫ್ ಅಂತ ಅನ್ಕೋಬೇಡಿ...ಅಲ್ಲಿಗೆ ಬೇಕಾದರು ಬಂದು hack ಮಾಡಬೋದು... ಆದಸ್ಟು ಕೇರ್ ತಗೊಂಡು.. strong password, Security patches , Antivirus update ಮಾಡ್ಕೋತಾ ಇರಿ.


5) ನೀವು ನಿಮ್ಮ ಮನೆ ಕಂಪ್ಯೂಟರ್ನಲ್ಲಿ ತುಂಬ Internet pages ಅನ್ನು ಓಪನ್ ಮಾಡ್ತಾ ಇರುತ್ತೀರ ಅಂತ ಅನ್ಕೊಳ್ಳಿ , ಫರ್ಸ್ಟ್ ಟೈಮ್ ಒಂದು Internet page ಓಪನ್ ಆದರೆ ಅ ವೆಬ್ page ನಿಂದ ಒಂದು cookies ಬಂದು ನಿಮ್ಮ ಕಂಪ್ಯೂಟರ್ ನಲ್ಲಿ ಸೇವ್ ಆಗುತ್ತೆ,, ಇದು ಏನು ಕೆಟ್ಟದು ಅಲ್ಲ. ಹಾಗೆ ವೆಬ್ page ನಲ್ಲಿ ಇರೋ ಕೆಲವೊಂದು images , pages , ಕೂಡ ಸ್ಟೋರ್ ಆಗಿರುತ್ತೆ.. ಇದು ನೀವು next ಟೈಮ್ ಅದೇ pagena ಓಪನ್ ಮಾಡಬೇಕಾದರೆ main serverge ಹೋಗಿ ಅಲ್ಲಿಂದ ಡೌನ್ಲೋಡ್ ಮಾಡೋದರ ಬದಲು ನಿಮ್ಮ ಕಂಪ್ಯೂಟರ್ನಲ್ಲಿ ಇರುವ cache ನಲ್ಲೆ use ಮಾಡಿಕೊಂಡು ಓಪನ್ ಆಗುತ್ತೆ. ಹೀಗೆ ಪಾರ್ಟಿ ಬಾರಿ Internet pages ಓಪನ್ ಆಗ್ತಾ ಇರಬೇಕಾದ್ರೆ ಎಲ್ಲ Internet pages ನ cookies ಹಾಗೆ pages ನಿಮ್ಮ ಕಂಪ್ಯೂಟರ್ನಲ್ಲಿ ಸೇವ್ ಆಗ್ತಾ ಇರುತ್ತೆ, ಇದು ಕೆಲವೊಮ್ಮ್ನೆ ನಿಮ್ಮ Internet speed ಗೆ ಪ್ರಾಬ್ಲಮ್ ಆಗಬಹುದು ... ಅದ್ದರಿಂದ 1 ವೀಕ್ ಅಥವಾ 15 ದಿನ ಕ್ಕೆ ಒಂದು ಸಲ ಎ ಎಲ್ಲ file ಅನ್ನು ಡಿಲೀಟ್ ಮಾಡ್ತಾ ಇರಿ.. ಅವಾಗ ನಿಮ್ಮ Internet speed ಮತ್ತೆ ಹಳೇ cookies ಹೋಗಿ ಹೊಸ cookies ಸೇವ್ ಆಗ್ತಾ ಇರುತ್ತೆ , Security ದೃಷ್ಟಿ ಇಂದಲೂ ಇದು ಒಳ್ಳೇದು. ಈ Files ಎಲ್ಲಿ ಸೇವ್ ಆಗಿರುತ್ತೆ ಅಂದರೆ (ನಿಮ್ಮ system XP OS ಇದೆ ಅಂದ್ರೆ) C:\Documents and Settings\ "username"\Local Settings\Temporary Internet Filesನಿಮಗೆ ಇದನ್ನು ಹುಡ್ಕಿ ಡಿಲೀಟ್ ಮಾಡೋದು ಕಷ್ಟ ಆದರೆ ಹೇಗೆ ಮಾಡಿ..intenet explorer ನಲ್ಲಿ Tools ----> Internet option ---> Genaral Tab---->Delete Files ಅಂತ ಒಂದು option ide, ಅದನ್ನ ಕ್ಲಿಕ್ ಮಾಡಿ Delete ಮಾಡಿ....(ಮೇಲಿನ ಚಿತ್ರದಲ್ಲಿ ತೋರಿಸಿರುವ ಹಾಗೆ, cookies ಪಕ್ಕದಲ್ಲೇ ಇರುವ delete ಅನ್ನೋ option ನ ಕ್ಲಿಕ್ ಮಾಡಿ)


ಹಾಂ,,, ಇದೆಲ್ಲ ನಮ್ಮ safety ಗೊಸ್ಕರನೆ ರೀ,, ಕೆಲವೊಮ್ಮ್ನೆ ನಮಗೆ ಗೊತ್ತಿದ್ರು neglet ಮಾಡ್ತೇವೆ ಆಮೇಲೆ ಸುಮ್ನೆ tension ಮಾಡ್ಕೊತೇವೆ,, ಯಾಕೆ ಬೇಕು ಅಲ್ವ.. ಸ್ವಲ್ಪ care ತಗೊಂಡು ಹ್ಯಾಪಿ ಆಗಿ ಇರಬೋದು ಅಲ್ವ... ?ಇನ್ನು ಮುಂದಿನ Article ನಲ್ಲಿ ನಿಮ್ಮ ಮನೆ computerna ಹೇಗೆ ಸೇಫ್ ಆಗಿ, secure ಆಗಿ ಇಟ್ತ್ಕೊಬೋದು ಅಂತ ಹೇಳ್ತೇನೆ,, ಕೆಲವೊಂದು ಸಿಂಪಲ್ tips ide.. ಅದನ್ನ use ಮಾಡ್ತಾ ಇದ್ದರೆ ನಿಮ್ಮ computerna ಫಾಸ್ಟ್ ಆಗಿ,, ಸೂಪರ್ ಆಗಿ ವರ್ಕ್ ಅಗೋ ಥರ ಮಾಡ್ಕೊಬೋದು ..ಹಾಂ ಇದನೆಲ್ಲ ಸುಮ್ನೆ ಹೇಳ್ತಾ ಇಲ್ಲ ನಿಮಗೆ... ಇದಕ್ಕೆ ಪ್ರತಿಯಾಗಿ ನನಗೆ ನೀವು ನನಗೆ ಫೀಸ್ ಕೊಡಬೇಕು .... ಹಾ ಏನ್ ಫೀಸು ಗೊತ್ತ,, ನಿಮ್ಮ ಪ್ರೀತಿಯ ಕಾಮೆಂಟ್ಸ್,, ಅಸ್ಟೇ .. ನಿಮಗೆ ಉಪಯೋಗ ಆಗುತ್ತೆ ಅಂದ್ರೆ ನಿಮ್ಮ ಕಾಮೆಂಟ್ಸ್ ರೂಪದಲ್ಲಿ ಪ್ರತಿಕ್ರಿಯಿಸಿ...

************

ಕೊನೆಯಲ್ಲಿ ಒಂದು chikka ಮಾಹಿತಿ,...

ಇಲ್ಲಿ ಕೆಳಗಡೆ ತೋರಿಸಿರುವುದು Internet World Map2007 2007-08 ನಲ್ಲಿ ಸರ್ವೇ ಮಾಡಿದ್ದು ಇದರಲ್ಲಿ, ಯಾವ ಯಾವ countery ನಲ್ಲಿ internet address ಜಾಸ್ತಿ ಉಪಯೋಗಿಸುತಿದ್ದಾರೆ ಅಂತ ಒಂದು ಮಾಹಿತಿ ಇದೆ, just for your informationge ಅಸ್ಟೆ ಇವಾಗ ಇದರ 2 ಪಟ್ಟು ಜಾಸ್ತಿ use ಆಗ್ತಾ ಇರುತ್ತೆ

(Internet World Map2007
This study shows how the Internet is distributed across the entire world, as it can be appreciated at a first sight, North America and Europe concentrate the two largest groups of Internet assets with a total share of 22.5% for Europe and doubling this number 55.9% for North America.Therefore it can be said that both regions represent a total 77.4% of the global Internet structure having Asia being the next one in the list with a share of 14%. The image bellow uses colored dots to represent the distribution and is expressed in number of IP addresses per dot.)





More from www.ipligence.com


Breakdown by geographic IP location:
Geographic area Number of addresses Percentage
Africa 40241664 1.519%
Antartica 15620 0.001%
Asia 371297015 14.015%
Caribbean 1681866 0.063%
Central ಅಮೇರಿಕಾ 2557340 0.097%
Europe 569838903 21.510%
Middle East 12011131 0.453%
North ಅಮೇರಿಕಾ 1481754661 55.932%
Oceania 76417711 2.885%
South ಅಮೇರಿಕಾ 93409304 3.525%

8 comments:

  1. ಗುರು ಅವರೆ,
    ತುಂಬಾ ತುಂಬಾ ಉಪಯುಕ್ತ ಮಾಹಿತಿ. ನಾನು ಓದಿದ ತಕ್ಷಣವೇ tools-Internet options-General-Delete files ಒತ್ತಿದ್ದೇನೆ. ಮನೆ Computer ಬಗ್ಗೆ ಮಾಹಿತಿ ಕೊಡಿ. Fee ತಾನೆ ನಿಮಗೆ ಇಷ್ಟದ ಹೋಟೆಲ್ ನಲ್ಲಿ ಊಟ ಕೊಡಿಸುತ್ತೇವೆಂದು ಆಶ್ವಾಸನೆ ಕೊಡುವೆ(Ellection ಆಶ್ವಾಸನೆ!!).

    ReplyDelete
  2. ಮಲ್ಲಿಕಾರ್ಜುನ್ ಅವರೇ..
    ನನ್ನ ಈ ಸಣ್ಣ ಮಾಹಿತಿ ಇಂದ, ನಿಮಗೆ ಉಪಯೋಗ ಅಗುತ್ತೆ ಅಂದ್ರೆ ಅಸ್ಟೇ ಸಾಕು,,, ನಿಮ್ಮ ಬೇರೆ ಇನ್ನ್ಯಾವ ಎಲೆಕ್ಷನ್ ಆಶ್ವಾಸನೆ ನು ಬೇಡ. :-)
    ನಮಗೆ ಗೊತ್ತಿರುವ ಕೆಲವೊಂದು ವಿಷಯಗಳನ್ನು ಹಂಚಿಕೊಳ್ಳುವುದರಲ್ಲಿ ಏನು loss ಇಲ್ಲ.. ಇದರಿಂದ ಗೊತ್ತಿಲ್ಲದೆ ಇರುವವರಿಗೆ ಉಪಯೋಗ ಆಗೋದಾದ್ರೆ ಒಳ್ಳೇದು ಅಲ್ವ.
    ಇನ್ನಸ್ಟು ಇಂಟರ್ನೆಟ್ ಸೆಕ್ಯೂರಿಟಿ ಬಗ್ಗೆ ಹಾಗೆ ಮನೆ computerna safe ಆಗಿ fast ಆಗಿ use ಮಾಡೋದರ ಬಗ್ಗೆ ಅದಸ್ಟು ಬೇಗ ಮಾಹಿತಿ ಕೊಡುತ್ತೇನೆ .

    ReplyDelete
  3. ಗುರು ಸರ್/...ನಮಸ್ತೆ.
    ಒಳ್ಳೆ ಮಾಹಿತಿ ಕೊಟ್ಟಿದ್ದೀರಿ. ನಾನೂ ಎಲ್ಲಕ್ಕೂ ಇಂಟರ್ ನೆಟ್ ಬಳಸುವುದಾದರೂ ಇಷ್ಟು ಮಾಹಿತಿ ನಂಗೆ ಗೊತ್ತೇ ಇರಲಿಲ್ಲ. ಗುಡ್...ಓದಿ ಭಾಳ ತಿಳ್ಕೊಂಡೆ. ನಿಮ್ಮ ಬ್ಲಾಗ್ ನಲ್ಲಿ ನಿತ್ಯ ಡಿಫರೆಂಟ್ ವಿಷ್ಯಗಳಿರ್ತವೆ..ಓದಕ್ಕೆ ಖುಷಿಯಾಗುತ್ತೆ, ತಿಳ್ಕೊಂಡಂಗೂ ಆಗುತ್ತೆ. ಧನ್ಯವಾದಗಳು ಗುರು.
    -ಧರಿತ್ರಿ

    ReplyDelete
  4. ಗುರು,

    ಇದು ನಿಜಕ್ಕೂ ತುಂಬಾ ಉಪಯುಕ್ತವಾದ ಮಾಹಿತಿ. ನಾನು ಕೂಡ ನಿಮ್ಮ ಮಾಹಿತಿಯನ್ನು ಉಪಯೋಗಿಸುತ್ತೇನೆ...
    ಇಂಥ ಮಾಹಿತಿಗಳನ್ನು ಆಗಾಗ ಕೊಡುತ್ತಿರಿ...ನಿಮಗೂ ಪುಣ್ಯ ಬರುತ್ತದೆ...

    ಧನ್ಯವಾದಗಳು...

    ReplyDelete
  5. ಗುರು....

    ನಿಮ್ಮ ಬ್ಲಾಗಿನಲಿ ಯಾವಾಗಲೂ ಹೊಸತೊಂದು ಇರುತ್ತದೆ...

    ಈ ವಿಷಯ ನನಗೆ ಗೊತ್ತಿರಲಿಲ್ಲ...
    ನಿತ್ಯ ಜೀವನದಲ್ಲಿ ಉಪಯುಕ್ತವಾಗುವ..
    ಇಂಥಹ ಇನ್ನಷ್ಟು ಲೇಖನ ಬರಲಿ...

    ReplyDelete
  6. ಧನ್ಯವಾದಗಳು ದರಿತ್ರಿ.. . ನಾನೇನು ಬಹಳ ವಿಷಯ ಬರೆದಿಲ್ಲ,, ಎಲ್ಲರಿಗೂ ಗೊತ್ತಿರೋ ದನ್ನೇ ಇನ್ನೊಮ್ಮೆ ನೆನಪು ಮದಿಸ್ಥ ಇದ್ದೇನೆ ಅಸ್ತೆ... ಸೆಕ್ಯೂರಿಟಿ ಗೆ ತುಂಬ improtance ಕೊಡಬೇಕು ಇಲ್ಲ ದಿದ್ದರೆ ತುಂಬ ತೊಂದರೆ ಆಗುತ್ತೆ,, ಅದಕ್ಕೆ ಇ Awareness article ಅಸ್ಟೆ.

    ಗುರು

    ReplyDelete
  7. ಶಿವೂ,
    ನನ್ನ ಇ ಸಣ್ಣ ಮಾಹಿತಿ ಇಂದ ಉಪಯೋಗ ಆಗುತ್ತೆ ಅನ್ನೋದಾದ್ರೆ ನನಗೆ ತುಂಬ ಕುಶಿ ಆಗುತ್ತೆ.. ಹೀಗೆ ಬಿಡುವಾದಾಗ ನನಗೆ ಗೊತ್ತಿರುವ ಕಂಪ್ಯೂಟರ್ಸ್ utility, ಹಾಗು ಸೆಕ್ಯೂರಿಟಿ ಬಗ್ಗೆ ಟಿಪ್ಸ್ ಕೊಡ್ತಾ ಇರ್ತೇನೆ... ಉಪಯೋಗಿಸಿಕೊಳ್ಳಿ...
    ಇವಾಗ ತಾನೆ ನಿಮ್ಮ ಬ್ಲಾಗಿನಲ್ಲಿ ಹಾಕಿರುವ ನಿಮ್ಮ ಹಾಗು ಮಲ್ಲಿಕಾರ್ಜುನ್ ಅವರ ಸಂದರ್ಶನ ನೋಡಿ..ತುಂಬ ಕುಶಿ ಹಾಗು ಹೆಮ್ಮೆ ಪಟ್ಟೆ.. ನನಗು ಅಂತರ ರಾಷ್ಟ್ರೀಯ ಮನ್ನಣೆ ಸಿಕ್ಕಿರುವ ಫ್ರೆಂಡ್ಸ್ ಇದ್ದಾರೆ ಏನು... ಗುಡ್ I wish you All the best for your Sucusses . Keep it up shivu.
    Guru

    ReplyDelete
  8. Prakash,
    Thanks, ನನ್ನ ಇ ಪುಟ್ಟ ಮಾಹಿತಿ ನಿಮಗೆ ಉಪಯೋಗಕ್ಕೆ ಬಂದರೆ ಅಸ್ಟೆ ಸಂತೋಷ,,
    ಹೌದು ಏನ್ ಸರ್, ಬರ್ತಾ ಬರ್ತಾ . ನೀವು ಪತ್ತೇದಾರಿ, ಸಸ್ಪೆನ್ಸ್ ಬ್ಲಾಗುಗಾರ ಆಗುತ್ತಿದ್ದಿರ.. ತುಂಬ ಚೆನ್ನಾಗಿ ಇದೆ ನಿಮ್ಮ ಮನಸಿನ ಭಾವನೆಗಳ ಕತೆಗಳು,, ಹೀಗೆ ಮುಂದುವರಿಸಿ....

    ಗುರು

    ReplyDelete