Saturday, April 4, 2009

ಒಂದು ಸಣ್ಣ ಸಹಾಯ ಮಾಡುತ್ತೀರ.....ಪ್ಲೀಸ್ .....

ಆತ್ಮಿಯ ಮನುಷ್ಯ ಪ್ರಾಣಿಗಳಿಗೆ, ಪಕ್ಷಿ ಸಂಕುಲದವತಿಂದ ನಮಸ್ಕಾರಗಳು...

ನೀವುಗಳು ಎಲ್ಲರೂ ಚೆನ್ನಾಗಿದ್ದೀರ ಎಂದು ಭಾವಿಸಿರುತ್ತೇವೆ... ನಿಮ್ಮಲ್ಲಿ ನಮ್ಮ ಪಕ್ಷಿ ಸಂಕುಲದ ಕಡಯಿಂದ ಒಂದು ಮನವಿ ಮಾಡ್ಕೋತಾ ಇದ್ದೇವೆ.. ನೀವು ನಮ್ಮ ಕಷ್ಟವನ್ನು ಅರ್ಥ ಮಾಡಿಕೊಂಡು ನಮಗೆ ಸಹಾಯ ಮಾಡುತ್ತೀರ ಅಂತ ನಂಬಿರುತ್ತೇವೆ..

ಅಬ್ಬಬ್ಬ ಏನ್ ಬಿಸಿಲು ಇದೆ ಅಲ್ವ ಈ ಸಲ, ಪ್ರತಿ ದಿನ ಬಿಸಿಲು ಹೆಚ್ಚುತ್ತಲೇ ಇದೆ ಅಲ್ವ,, ನಿಮಗೇನು ಆರಾಮವಾಗಿ ಮನೆ ಎಂಬ ಗೂಡಿನಲ್ಲೋ, ಅಥವಾ ಆಫೀಸ್ ಗೂಡಿನಲ್ಲೋ A/C, ಫ್ಯಾನ್ ಕೆಳಗೆ ಆರಾಮವಾಗಿ ಇರುತ್ತೀರ ಬಿಡಿ.... ಆದರೆ ನಮ್ಮ ಪಾಡು ಹಾಗಲ್ಲ... ಆಹಾರ ಹುಡುಕಿಕೊಂಡು ಅಲೆದಾಡುತ್ತಿರಬೇಕು..... ಹೌದು ನಮಗೆ, ನಿಮಗೆ, ನೀರು ಎಷ್ಟು ಮುಖ್ಯ ಅಲ್ವ.. ನಿಮಗೆ ಈ ಬಿರು ಬೆಸಿಗೆನಲ್ಲಿ ನೀರಿನ ತೊಂದರೆ ಆಗಿಲ್ಲವಾ? ಖಂಡಿತ ಆಗಿರುತ್ತೆ ಅಲ್ವ? ಆದರೆ ನಿಮಗೆ ಮಾತಾಡೋ ಶಕ್ತಿ ಇದೆ, ಒಂದು ಕಡೆ ಇಲ್ಲ ಅಂದ್ರೆ ಬೇರೆ ಎಲ್ಲಿಂದ ಅದ್ರು ನೀರು ತಂದು ತಮ್ಮ ದಾಹ ತೀರಿಸಿ ಕೊಳ್ಳುತ್ತಿರ ......... ಆದರೆ,, ನಮ್ಮ ಬಗ್ಗೆ ಸ್ವಲ್ಪ ಯೋಚನೆ ಮಾಡಿದ್ದಿರ? ಹೌದು ಸ್ವಲ್ಪ ಯೋಚಿಸಿ ನೋಡಿ,,, ನಿಮ್ಮ ಮನೆ ಅಕ್ಕ ಪಕ್ಕ ಇರುವ ಪಕ್ಷಿಗಳು ಹೇಗೆ ನೀರಿಗಾಗಿ ಕಷ್ಟ ಪಡುತ್ತಿದೇವೆ ಅಂತ...ಹೌದು ಮನುಷ್ಯ ಪ್ರಾಣಿಗಳೇ .... ಇಂಥ ಬಿರು ಬಿಸಿಲಿನಲ್ಲಿ ಅದೂ ಈ ಬೆಂಗಳುರಿನಂಥ ಕಾಂಕ್ರೀಟ್ ನಾಡಿನಲ್ಲಿ ನಮಗೆ ನೀರಿಗೆ ತುಂಬ ತೊಂದರೆ ಆಗಿದೆ.. ಎಲ್ಲಿ ಹುಡುಕಿದರೂ ಒಂದು ಸ್ವಲ್ಪವೂ ನೀರು ಸಿಗುವುದಿಲ್ಲ.... ನಮಗೆ ದಾಹ ವಾದಾಗ ಚರಂಡಿ ನೀರನ್ನೂ ಅಥವಾ ಎಲ್ಲಾದರು ನಿಂತಿರುವ ನೀರನ್ನೂ ಹುಡುಕಬೇಕು.... ನೀವೇ ಯೋಚಿಸಿ,, ಈ ಕಾಂಕ್ರೀಟ್ ನಂತ ನಾಡಿನಲ್ಲಿ ಎಲ್ಲಿ ಹುಡುಕಿಕೊಂಡು ಹೋಗಬೇಕು ? ನಿಮ್ಮಗಳ ಅನುಕೂಲಕೊಸ್ಕರ ಇರುವ ಕೆರೆ ಭಾವಿ ಎಲ್ಲವನ್ನು ಒತ್ತುವರಿ ಮಾಡಿ,, ಮನೆ ಅಪಾರ್ಟ್ಮೆಂಟ್ ಅಂತ ಕಟ್ಟುತ್ತ ಇದ್ದೀರಾ? ಇನ್ನು ನಾವು ಎಲ್ಲಿಗೆ ಹೋಗಬೇಕು ನೀವೇ ಹೇಳಿ... ಮೊದಲು ನಾವು ಇರುವ ದೊಡ್ಡ ದೊಡ್ಡ ಮರಗಳನ್ನು,, ರಸ್ತೆಗೆ , ಮೆಟ್ರೋ ರೈಲಿಗೆ ಅಂತ ಕಡಿದು ಹಾಕಿದ್ರಿ,,, ಅವಗ್ಲು ನಾವು ಏನು ಅನ್ನಲಿಲ್ಲ,, ಆದರೆ ಈಗ ನೀರಿಗಾಗಿ ತುಂಬಾ ತೊಂದರೆ ಆಗುತ್ತ ಇರುವುದರಿಂದ ನಿಮ್ಮ ಕಡೆ ಇಂದ ಏನಾದರೂ ಸಹಾಯ ಬಯಸಿದ್ದೇವೆ ಅಸ್ಟೆ.... " ನೀವು ನಮಗಾಗಿ ಏನು ದೊಡ್ಡ ಸಹಾಯ ಮಾಡಬೇಕಾಗಿಲ್ಲ....ನಿಮ್ಮಗಳ ಮನೆ ಮೇಲೆ ಟೆರೆಸ್ ಮೇಲೆ, ಒಂದು ಸಣ್ಣ ಪಾತ್ರೆನಲ್ಲೋ ಅಥವ ಹಳೆಯ ಬಕೆಟ್ ನಲ್ಲೋ,, ಸ್ವಲ್ಪ ನೀರನ್ನು ಇಟ್ಟಿರಿ, ನಮಗೆ ದಾಹವಾದಾಗ ಬೇರೆ ಎಲ್ಲೊ ಹುಡುಕಿ ಹೋಗುವುದರ ಬದಲು,,, ನಿಮ್ಮ ಮನೆ ಮೇಲೆ ಬಂದು ದನಿವಾರಿಸಿಕೊಳ್ಳುತ್ತೇವೆ.. " ಈ ಬೆಸಿಗೆನಲ್ಲಿ ಇದೊಂದು ಸಹಾಯ ಮಾಡಿದ್ರೆ ನಿಮ್ಮ ಅಕ್ಕ ಪಕ್ಕ ಇರುವ ಕಾಗೆ , ಪಾರಿವಾಳ , ಮೊದಲಾದ ಪಕ್ಷಿಗಳು ತಮ್ಮ ದಾಹ ತೀರಿಸಿಕೊಳ್ಳಲು ಅನುಕೂಲ ಆಗುತ್ತೆ.. ಪ್ಲೀಸ್ ಇಂಥ ಒಂದು ಸಣ್ಣ ಸಹಾಯ ಮಾಡ್ತಿರ ಅಲ್ವ.......
ಇಂತಿ

ಪಕ್ಷಿ ಸಮುದಾಯ

**********************

ಪ್ರೀತಿಯ ಸ್ನೇಹಿತರೆ.........ಹೌದಲ್ವ ....

ಪ್ರತಿವರ್ಷ ಬೀಸಿಗೆ ಬಂತು ಅಂದ್ರೆ ಎಲ್ಲೆಡೆ ನೀರಿಗೆ ಹಾಹಾಕಾರ.. ನಮ್ಮ ಬೆಂಗಳೂರಿನ ಕೆಲವು ಬಡಾವಣೆಗಳಲ್ಲಿ ಕುಡಿಯಲು ಕೂಡ ನೀರು ಸಿಗುವುದಿಲ್ಲ... ಎಷ್ಟು ಕಷ್ಟ ಇರುತ್ತೆ ಅಲ್ವ..... ಆದರೆ ನಾವು ಮನುಷ್ಯರು , ಒಂದು ಕಡೆ ಕುಡಿಯುವುದಕ್ಕೆ ನೀರು ಇಲ್ಲ ಅಂದ್ರೆ ಬೇರೆ ಕಡೆ ಇಂದ ಹೇಗಾದರೂ ಮಾಡಿ ತರಿಸಿಕೊಳ್ತ್ಹೇವೆ...... ಸ್ವಲ್ಪ ಜಾಸ್ತಿ ದುಡ್ಡು ಕೊಟ್ಟು ಅದ್ರು ಸರಿ.... ನಮಗೆ ನೀರು ಬೇಕೆ ಬೇಕು.. ಅಲ್ವ.. ಹೇಗಾದರೂ ಮಾಡಿ ಪದ್ಕೊತೇವೆ....
.....ಹೌದಲ್ವ .... ನಾವು ಇದರ ಬಗ್ಗೆ ಸ್ವಲ್ಪನು ಯೋಚನೆ ಮಾಡಿದ್ವ? ಸ್ವಲ್ಪ ಯೋಚನೆ ಮಾಡಿ,,,,, ನಮಗೆ ಹೇಗೆ ನೀರು ಮುಖ್ಯವೋ, ನಮ್ಮ ಸುತ್ತ ಮುತ್ತ ಲಿರುವ ಪ್ರಾಣಿ, ಪಕ್ಷಿಗಳಿಗೂ ಅಸ್ಟೆ ಮುಖ್ಯ ಅಲ್ವ..... ಆದರೆ ಒಂದೇ ಒಂದು ವತ್ಯಾಸ ನಾವು ಮಾತಾಡಿ ಹೊಡೆದಾಡಿ, ನೀರು ಅಥವಾ ಬದುಕಲಿಕ್ಕೆ ಏನು ಬೇಕೋ ಅದನ್ನು ಪಡ್ಕೊತೇವೆ.... ಆದರೆ ಈ ಮೂಕ ಪ್ರಾಣಿ ಪಕ್ಷಿಗಳು ಏನ್ ಮಾಡುತ್ತೆ ಪಾಪ..... ಎಲ್ಲಾದರು ಒಂದು ಚಿಕ್ಕ ನೀರಿನ ಸೆಲೆ ಸಿಕ್ಕರೆ ತಮ್ಮ ದಣಿವಾರಿಸಿ ಕೊಳ್ಳುತ್ತೆ ಅಲ್ವ... ಆದರೆ ನಮ್ಮ ಬೆಂಗಳೂರಿನಂತ ಕಾಂಕ್ರೀಟ್ ನಗರದಲ್ಲಿ..... ನೀರೆ ಸಿಗಲಿಲ್ಲ ಅಂದ್ರೆ ಎಲ್ಲಿ ಹೋಗುತೆ? ಪಾಪ ಎಲ್ಲೂ ಇಲ್ಲ ಚರಂಡಿನಲ್ಲೊ, ಅಥವಾ ಎಲ್ಲಾದರು ನಿಂತಿರುವ ನೀರಿನಲ್ಲಿ ಕುಡಿಯೋಕೆ ಪ್ರಯತ್ನ ಪಡುತ್ತೆ....... ಇದಕ್ಕೆಲ್ಲ ನಾವೇ ಕಾರಣ ಅಂತ ಅನ್ನಿಸೋಲ್ವ ?ಹೌದು ... ನಮ್ಮ ಅಕ್ಕ ಪಕ್ಕ ಇರುವ ಪ್ರಾಣಿ ಪಕ್ಷಿ ಗಳಿಗೆ ನಮ್ಮಿಂದ ಸ್ವಲ್ಪ ಆದರು ಸಹಾಯಮಡೋಣ ಬನ್ನಿ,,, " ದಯವಿಟ್ಟು ನಿಮ್ಮ ಮನೆ ಮೇಲೆ ಇರುವ ತಾರಸಿ, ಟೆರೆಸ್ , ಮಹಡಿಯ ಮೇಲೆ,, ಒಂದು ಹಳೇ ಪಾತ್ರೆ , ಅಥವಾ ಹಳೇ ಬಕೆಟ್ ನಲ್ಲೋ, ಸ್ವಲ್ಪ ನೀರನ್ನು ತುಂಬಿ ಇಟ್ಟಿರಿ ನಿಮ್ಮ ಅಕ್ಕ ಪಕ್ಕದ ಮರಗಳಲ್ಲಿ ಇರುವ ಪಕ್ಷಿಗಳು ಬೇಕಾದಾಗ ತಮ್ಮ ದಾಹ ತೀರಿಸಿಕೊಳ್ಳ ಬಹುದು..... ಅಲ್ವ ? " ಸ್ವಲ್ಪ ಮಾನವೀಯತೆಯನ್ನು ತೋರೋಣ ಇದರಿಂದ ಒಂದು ಚಿಕ್ಕ ಸಹಾಯ ನಮ್ಮ ಕೈ ಇಂದ ಆಗುತ್ತೆ ಅಂದ್ರೆ ಅಸ್ಟೆ ಸಾಕು...
ನನಗೆ ಇದರಬಗ್ಗೆ ಒಂದು ಇಮೇಲ್ ಬಂದಿತ್ತು ಆದರೆ ಅದನ್ನು ಅಸ್ಟ೦ದು ಗಂಭಿರವಾಗಿ ಪರಿಗಣಿಸಿರಲಿಲ್ಲ, ಆದರೆ,, ಮೊನ್ನೆ ನಮ್ಮ ಮನೆ ಮಹಡಿಯ ಮೇಲೆ ನಿಂತು ಯಾರಿಗೋ ಕಾಲ್ ಮಾಡ್ತಾ ಇದ್ದೆ,, ಮಧ್ಯನ್ನ 12:30 ಇರಬೇಕು ನಮ್ಮ ಮನೆ ಎದರುಗಡೆ ಮನೆಯ ಮೇಲಿನ syntax ಟ್ಯಾಂಕ್ ಮೇಲೆ ಒಂದು ಹದ್ದು ಕುಳಿತುಕೊಂಡು ಏನೋ ಸರ್ಕಸ್ ಮಾಡ್ತಾ ಇತ್ತು, ಮೊದಲು ನಾನು ನೋಡಿ ಸುಮ್ಮನೆ ಅದೇ , ಹಾಗೆ ಫೋನ್ ನಲ್ಲಿ ಮಾತಾಡಿಕೊಂಡು ಅದ್ದನ್ನೇ ನೋಡ್ತಾ ಇದ್ದೆ ಏನ್ ಮಾಡುತ್ತೆ ಅಂತ,, ಪಾಪ,,, ಅದು ಪಡುತ್ತಿರುವ ಕಷ್ಟ ನೋಡಿ,, ನನಗೆ ಒಂದು ಕ್ಷಣ ಏನು ತೋಚಲಿಲ್ಲ ,,, ಅ ಹದ್ದು syntax ನೀರಿನ ಹೊರಗದೆ ಇರುವ ಪೈಪ್ ನಿಂದ ಸೊರುತ್ತೀದ್ದ ನೀರು ಕುಡಿಯಲು ಕಷ್ಟ ಪಡ್ತಾ ಇತ್ತು,, ನನಗಂತು ನೋಡಿ ತುಂಬ ಬೇಜಾರ್ ಆಯಿತು,,,,

ಅವಾಗ್ಲೇ ಮನೆಒಳಗಡೆ ಬಂದು ಒಂದು ಹಳೇ ಪ್ಲಾಸ್ಟಿಕ್ ಡಬ್ಬ ಹುಡುಕಿ ಅದರಲ್ಲಿ ನೀರು ತುಂಬಿ ನಮ್ಮ ಮನೆ ಮಹಡಿಯ ಮೇಲೆ ಎರಡು ಕಡೆ ಇಟ್ಟು ಬಂದೆ. ಅವೊತು ಆಫೀಸ್ ಗೆ ಹೋಗೋ ಟೈಮ್ ಅಗಿತ್ತದರಿಂದ ಹಾಗೆ ಹೋರಟು ಹೋದೆ.. ಮಾರನೇ ದಿನ ಬೆಳ್ಳಿಗ್ಗೆ ಮೇಲೆ ಹೋಗಿ ನೆನ್ನೆ ಇಟ್ಟಿರುವ ನೀರನ್ನು ಯಾವುದಾದರು ಪಕ್ಷಿ ಬಂದು ಕುಡಿದಿರುತ್ತೊ ಅಂತ ನೋಡಲು ಹೋದೆ.. ಒಂದು ಡಬ್ಬಿ ನೀರನ್ನು ಯಾವುದೊ ಪಕ್ಷಿ ಬೀಳಿಸಿ ಹೋಗಿತ್ತು ,, ಇನ್ನೊಂದರಲ್ಲಿ ನೀರು ಕುಡಿದ ಹಾಗೆ ಅಲ್ಲೆಲ್ಲ ಪುಕ್ಕ ಹಿಕ್ಕೆ ಬಿದ್ದಿತ್ತು ,, ಅವಾಗ ನನಗೆ ಎಷ್ಟು ಖುಷಿ ಆಯಿತು ಗೊತ್ತ,, ಅದಕ್ಕೆ ಪ್ರತಿ ದಿನ,, ಮೇಲೆ ಹೋಗಿ ಸ್ವಲ್ಪ ನೀರನ್ನು ಹಾಗೆ ಯಾವುದಾದರು ಕಾಳನ್ನು ಹಾಕಿ ಬರುತ್ತಿದೇನೆ,,,,,


"ನೀವು ಕೂಡ ನಿಮ್ಮ ಮನೆ ಟೆರೆಸ್ ಮೇಲೆ ಜಾಗ ಇದ್ದರೆ ಸ್ವಲ್ಪ ನೀರನ್ನು ಇಟ್ಟು ನಿಮ್ಮ ಮನೆಯ ಸುತ್ತ ಮುತ್ತ ಇರುವ ಪಕ್ಷಿಗಳಿಗೆ ಸಹಾಯ ಮಾಡಿ.... please ಸಾದ್ಯವಾದರೆ ಇ ಮೆಸೇಜ್ ಅನ್ನು ನಿಮ್ಮ ಬೇರೆ ಫ್ರೆಂಡ್ಸ್ ಗೂ ಕೂಡ ತಿಳಿಸಿ...ನಮ್ಮ ಬೆಂಗಳೂರಿನಂಥ ನಗರದಲ್ಲಿ ಅದರಲ್ಲೂ ಇ ಬೇಸಿಗೆಯಲ್ಲಿ ನಮ್ಮ ಸುತ್ತ ಮುತ್ತ ಇರುವ ಪಕ್ಷಿಗಳಿಗೆ ಸ್ವಲ್ಪ ನಾದ್ರೂ ಸಹಾಯ ಮಾಡೋಣ......"

ಗುರು

ಚಿತ್ರ ಕೃಪೆ :- B.L Ruhimy. ( ಸಂಗ್ರಹ)

ಗುರು ಫೋಟೋ :-)

15 comments:

  1. Khanditha, ivattininda naanu haage maduve kanri.

    ReplyDelete
  2. ಹಾಯ್ ಪೂರ್ವಿ,
    ನನ್ನ ಬ್ಲಾಗಿಗೆ ಸ್ವಾಗತ,,,ತುಂಬ ಥ್ಯಾಂಕ್ಸ್ . ಇದು ನಮಗೆ ಒಂದು ಸಣ್ಣ ಕೆಲಸ ಅಂತ ಅನ್ನಿಸಿದರೂ, ಪಾಪ, ಮೂಕ ಪಕ್ಷಿಗಳಿಗೆ ಯಾವುದೊ ಒಂದು ರೀತಿಯಲ್ಲಿ ಸಹಾಯ ಆಗುತ್ತೆ ಅಲ್ವ..

    ReplyDelete
  3. ಗುರು,
    ಒಳ್ಳೆ ಕೆಲಸ ಮಾಡಿದಿರಿ.. ನಾವೆಲ್ಲರೂ ಅರಿತುಕೊಳ್ಳಬೇಕಾದದ್ದು.. ನಮ್ಮ ಹಾಗೆ ಅವು ಕೂಡ...
    ಧನ್ಯವಾದಗಳು..

    ReplyDelete
  4. ಗುರು....

    ಲೇಖಕಿ "ಚೇತನಾ ತೀರ್ಥಹಳ್ಳಿಯವರು ಈಮೇಲ್ ಕಳಿಸಿದ್ದರು....
    ಇದೇ ಥರಹದ್ದು...

    ನಮ್ಮನೆ ಟೆರೆಸಿನಲ್ಲಿ ಇಂದಿನಿಂದಲೇ ನೀರು ಇಡಲು ಶುರು ಮಾಡಿದ್ದೇವೆ...

    ಮನಮುಟ್ಟುವ ಚಿತ್ರ ಲೇಖನ....

    ಇಂಥಹ ಮಾನವೀಯತೆಯ ಲೇಖನ ಇನ್ನಷ್ಟು ಬರಲಿ...

    ಸುಂದರ ಫೋಟೊ ಲೇಖನಕ್ಕೆ..
    ಧನ್ಯವಾದಗಳು...

    ReplyDelete
  5. ಗುರು,

    ನಿಮ್ಮ ಲೇಖನ ಓದಿದ ಮೇಲೆ ಮೊದಲ ಕೆಲಸ ನಮ್ಮ ಹೊಸ ಮನೆಯ ಟೆರಸ್‌ನಲ್ಲಿ ಒಂದು ದೊಡ್ಡ ಪಾತ್ರೆಯಲ್ಲಿ ನೀರು ಇಟ್ಟು ಬಂದಿದ್ದು.....ಅದೆಷ್ಟು ಚೆನ್ನಾಗಿ ಬರೆದಿದ್ದೀರಿ ಅಂದ್ರೆ ಆ ಪಕ್ಷಿಗಳೇ ದೀನವಾಗಿ ಬೇಡುತ್ತಿವೆಯೇನೋ...ಅನ್ನಿಸುತ್ತೆ....
    ಲೇಖನ ಮನಕಲಕುತ್ತೆ....ಮುಂದುವರಿಸಿ...

    ಧನ್ಯವಾದಗಳು...

    ReplyDelete
  6. ಧನ್ಯವಾದಗಳು ಮನಸು.
    ಹೌದು, ನಾವು ಒಂದು ಜೀವಿಗಳು ಎಂದು ಅರಿತು ಬಾಳಬೇಕು . ಬರಿ ನಮ್ಮಗಳ ಸ್ವಾರ್ಥ ಕೊಸ್ಕರ ನಮ್ಮ ಸುತ್ತಮುತ್ತಲಿನ ಪರಿಸರಕೆ ನಾವೇ ಎಷ್ಟು ಹಾನಿ ಮಾಡುತ್ತಿವೆ ಅಲ್ವ....

    ReplyDelete
  7. ಪ್ರಕಾಶ್,
    ನನಗು ಒಂದು ಮೇಲ್ ಬಂದಿತ್ತು ಆದರೆ ಅದರ ಕಡೆ ಅಷ್ಟಾಗಿ ಗಮನ ಕೊಡಲಿಲ್ಲ.. ಆದರೆ ಒಂದು ಹದ್ದು ಒಂದು ಗುಟುಕು ನೀರು ಕುಡಿಯಲು ಅಸ್ಟು ಕಷ್ಟ ಪಡುತ್ತಿರಬೇಕಾದರೆ ನನ್ನ ಮನಸು ತಡಿಯಲಿಲ್ಲ. ಅದಕ್ಕೆ ಅಂದಿನಿಂದ ಈ ಬೇಸಿಗೆ ಮುಗಿಯುವ ವರೆಗೂ, ನಮ್ಮ ಟೆರೆಸ್ ಮೇಲೆ,, ನೀರನ್ನು ತಪ್ಪದೆ ಇಡುತ್ತೇನೆ, ಅದು ಕುಡಿಯುತ್ತೋ ಇಲ್ಲವೊ ಗೊತ್ತಿಲ್ಲ ಆದರೆ ಅವಕ್ಕೆ ಬಾಯಾರಿದಾಗ, ನೀರನ್ನು ಹುಡುಕಿಕೊಂಡು ಬೇರೆ ಎಲ್ಲೊ ಅಲೆಯಬೇಕಾಗಿಲ್ಲ...
    ನೀವು ಕೂಡ ನೀರನ್ನು ಇಡಲು ಶುರುಮಾಡಿದಿರೆಂದು ಕೇಳಿ ತುಂಬ ಸಂತೋಷ ಆಯಿತು,,,, ನಮ್ಮ ಕೈನಲ್ಲಿ ಆದ ಚಿಕ್ಕ ಸಹಾಯ ಮಾಡಬಹುದು ಅಲ್ವ...?

    ReplyDelete
  8. ಶಿವೂ,
    ನನ್ನ ಲೇಖನಕ್ಕೆ ಸ್ಪಂದಿಸಿ , ನಿಮ್ಮ ಟೆರೆಸ್ ಮೇಲು ನೀರನ್ನು ಇಟ್ಟಿದ್ದಕೆ ಧನ್ಯವಾದಗಳು.. ಇದೇನು ಅಂತ ದೊಡ್ಡ ಕೆಲಸ ಅಲ್ಲ ಅಲ್ವ ನಮಗೆ? ಇದರಿಂದ ನಮ್ಮ ಮನೆ ಹತ್ತಿರ ವಿರುವ ಪಕ್ಷಿಗಳಿಗೆ ಸಹಾಯ ಆದರೆ ಅಸ್ಟೆ ಸಾಕು ..
    ನಿಮ್ಮ 50 ನೆ ಲೇಖನಕ್ಕೆ ನನ್ನ ಹುರ್ತ್ಪೂರ್ವಕ ಅಭಿನಂದನೆಗಳು....
    ಗುರು

    ReplyDelete
  9. ಉತ್ತಮ ಯೋಚನೆ. ಇನ್ನು ಮೇಲೆ ನಾನೂ ಬಾಲ್ಕನಿಯಲ್ಲಿ ನೀರು ಇಡುತ್ತೇನೆ.
    ಬರಹ ಚೆನ್ನಾಗಿದೆ.

    ReplyDelete
  10. ಜ್ಯೋತಿ,
    ನನ್ನ ಬ್ಲಾಗಿಗೆ ಸ್ವಾಗತ,, ಧನ್ಯವಾದಗಳು ಪಕ್ಷಿಗಳ ಕಷ್ಟವನ್ನು ಅರಿತು,, ಸಹಾಯ ಮಾಡುತಿರುವದಕ್ಕೆ... ಹೀಗೆ ಬರುತ್ತಿರಿ..

    ಗುರು

    ReplyDelete
  11. ಪಕ್ಷಿಗಳೇ ಕಾಣೆಯಾಗುತ್ತಿರುವ ಬೆ೦ಗಳೂರಿನ೦ತಹ ಮಹಾ ನಗರಗಳಲ್ಲಿ, ಉಳಿದಿರುವಷ್ಟನ್ನಾದರೂ ಉಳಿಸಿಕೊಳ್ಳುವ ಪ್ರಯತ್ನ ನಮ್ಮದಾಗಬೇಕು. ಇಲ್ಲಿ ಮಹಡಿಗಳೆಲ್ಲ ಇಲ್ಲದಿದ್ದರೂ, ನನ್ನೆಲ್ಲ ಸ್ನೇಹಿತರಿಗೆ ಈ ಸ೦ದೇಶವನ್ನು ತಲುಪಿಸುವ ಪ್ರಯತ್ನ ಮಾಡುತ್ತೇನೆ. ಉತ್ತಮ ಮಾಹಿತಿಗಾಗಿ ಧನ್ಯವಾದಗಳು.

    ReplyDelete
  12. ಹಲೋ ಪಕ್ಷಿ ಸಮುದಾಯವೇ...ನಮಸ್ಕಾರ. ಖಂಡಿತಾ ನಿಮಗೆ ಭರವಸೆ ಕೊಡ್ತೀನಿ..ಈಗಾಗಲೇ ನಮ್ಮನೆ ಟೆರೇಸ್ ಮೇಲೆ ಬಕೆಟ್ ಗಳಲ್ಲಿ ನೀರಿಡಲಾಗಿದೆ.

    ಗುರು ಸರ್..ಒಳ್ಳೆಯ ಬರಹ. ಇತ್ತೀಚೆಗೆ ಮೊಬೈಲ್ ಗಳಿಗೆ ಇಂಥ ಸಂದೇಶಗಳು ಬಹಳಷ್ಟು ಬರ್ತಾವೆ. ಫಾರ್ವರ್ಡ್ ಆಗ್ತಾ ಇರ್ತಾವೆ. ನಿಜ ಹೇಳಬೇಕಂದ್ರೆ ಈವಾಗ ಬೆಂಗಲೂರಿನಲ್ಲೂ ಅಷ್ಟೇ ತೀರ ಬಿಸಿಲು..ನಮಗೇ ಹೊರಗಡೇ ಫೀಲ್ಡ್ಇಗೂ ಹೋಗಕ್ಕಾಗಲ್ಲ. ನಿಮ್ಮ ಬರಹ ಓದಿ ಭಾಳ ಖುಷಿಪಟ್ಟೆ. ಅಭಿನಂದನೆಗಳು ನಿಮಗೆ. ಫೋಟೋಗಳು ತುಂಬಾ ಚೆನ್ನಾಗಿವೆ.
    _ಧರಿತ್ರಿ

    ReplyDelete
  13. ವಿನುತ,
    ಹೌದು,,, ಗುಬ್ಬಚಿ ಹಾಗು ಕೆಲವು ಪಕ್ಷಿಗಳು ಈ ಬೆಂಗಳೂರಿನಲ್ಲಿ ಕಾಣಿಸೋದೆ ಅಪರೂಪ ಆಗಿ ಬಿಟ್ ಇದೆ..... atleast, ನಮ್ಮ ಜೊತೆ ಇರುವ ಕೆಲವು ಪಕ್ಷಿಗಳನ್ನಾದರೂ ರಕ್ಷಿಸೋಕೆ ಒಂದು ಪುಟ್ಟ ಸಹಾಯ ಅಸ್ತೆ..
    ಲೇಖನ ಮೆಚ್ಚಿ, ನಿಮ್ಮ ಸ್ನೇಹಿತರಿಗೆಲ್ಲ ತಿಳಿಸುವೆ ಎಂದಿರುವಿರಿ, ಧನ್ಯವಾದಗಳು..ಹೀಗೆ ಬರುತ್ತಿರಿ ....

    ReplyDelete
  14. ದರಿತ್ರಿ ,
    ತುಂಬ ಧನ್ಯವಾದಗಳು,, ಪಕ್ಷಿ ಸಮುದಾಯದ ವಿನಂತಿಯನ್ನು ಅಲಿಸಿದ್ದಕ್ಕೆ. ಹಾ ಹಾ ....ಏನೋ ಪಾಪ ನಮ್ಮ ಕೈನಲ್ಲಿ ಆದ ಸಹಾಯ ಮಾಡಿದರೆ, ಅಳಿದುಳಿದ ಪಕ್ಷಿಗಳನ್ನಾದರೂ ಉಳಿಸಿಕೊಳ್ಳಬಹುದು,,,ಅಲ್ವ
    Thanks ಲೇಖನವನ್ನ ಮೆಚ್ಚಿದಕ್ಕೆ, ಹೀಗೆ ಬರುತ್ತಿರಿ,,,

    ReplyDelete
  15. ನೀರಿನ ಜೊತೆಗೆ ಸ್ವಲ್ಪ ಕಾಳು ಕೂಡ.

    ReplyDelete