Tuesday, August 11, 2009

coins ನಲ್ಲೆ ಅರಳುವ ಕಲೆ....

ನಾವು ಚಿಕ್ಕವರಾಗಿದ್ದಾಗ ನಾಣ್ಯಗಳ ಜೊತೆ ಆಟ ಆಡ್ತ ಇದ್ದಿದು ನೆನಪಿದೆಯೆ.... 5ಪೈಸ, 10 ಪೈಸ, 20 ಪೈಸ, 25 ಪೈಸ, 50 ಪೈಸ, 1 ರೂಪಾಯಿ ......ಇವಾಗ ಅದೆಲ್ಲ ಬರಿ ನೆನಪು, ಅಲ್ವ...ಅದಕ್ಕೆಲ್ಲ ಎಷ್ಟು ವ್ಯಾಲ್ಯೂ ಇತ್ತು ಆಗಿನ ಕಾಲದಲ್ಲಿ.....೧ ರೂಪಾಯಿ ಇಟ್ಕೊಂಡ್ ಹೋದ್ರೆ ಎಸ್ಟೆಲ್ಲ ಪೆಪ್ಪರೆಮೆಂಟ್, ಚಿಕ್ಕ ಚಿಕ್ಕ ಚಾಕಲೇಟ್, ಮತ್ತೆ ನಿಂಬೆ ಹುಳಿ ಆಮೇಲೆ,, ಬೆಲ್ಲ ಮತ್ತೆ ಕೊಬ್ಬರಿ ಇಂದ ಮಾಡಿದ ಮಿಟಾಯಿ.. ಎಸ್ಟೆಲ್ಲ ಸಿಕ್ತ ಇತ್ತು ಅಲ್ವ ..... ಇವಾಗ ೧ ರೂಪಾಯಿಗೆ ಅಲ್ಲ.. ೫ ರೂಪಾಯಿ ನಾಣ್ಯಕ್ಕೂ ಬೆಲೆ ಇಲ್ಲದಿರೋ ತರ ಆಗಿದೆ.... ಇರಲಿ ಬಿಡಿ,, ನಾನು ಇದರ ವಿಷ್ಯ ಹೇಳೋಕೆ ಹೊರಟಿಲ್ಲ... ನಾವು ಚಿಕ್ಕವರಿದ್ದಾಗ... ನಾಣ್ಯ ಗಳಲ್ಲಿ ಏನೇನೋ ಡಿಸೈನ್ ಮಾಡಿ ಆಟ ಆಡ್ತ ಇದ್ದದ್ದು ನೆನಪಿಗೆ ಬಂದು......ಅದು ಯಾಕೆ ಬಂತು ಅಂದ್ರೆ... ಇಲ್ಲಿ ಕೆಳಗಿನ ಚಿತ್ರಗಳನ್ನು ನೋಡಿ....
ರಷ್ಯ ದೇಶದ ಒಬ್ಬ ಕಲಾಕಾರ ...ಬರಿ ನಾಣ್ಯ(coins) ದಿಂದ ಏನೆಲ್ಲ ಚಮತ್ಕಾರ ತೋರಿಸಿದ್ದಾನೆ ನೋಡಿ.. ಸುಮ್ಮನೆ ಕುಳಿತಿರಬೇಕಾದರೆ ಒಂದಸ್ಟು ನಾಣ್ಯಗಳ ಜೊತೆ ಆಟ ಆಡ್ತ ಇದ್ದನಂತೆ.. ಹಾಗೆ ಇದೇ ಒಂದು ತರ ಹವ್ಯಾಸ ಆಗಿ.. ತುಂಬ different ಆಗಿ , ಕ್ರಿಯೇಟಿವ್ ಆಗಿ, ನಾಣ್ಯಗಳನ್ನು ಜೋಡಿಸುತ್ತ ಆಕೃತಿ ಗಳನ್ನು ಮಾಡಿದ್ದಾನೆ....ನೋಡಿದರೆ ಒಂದಕ್ಕೊಂದು ಅಂಟಿಸಿದ್ದಾರೆ ಅಂಥ ಅನ್ನಿಸಬೇಕು.. ಆದರೆ ಹಾಗೆ ಮಾಡಿಲ್ಲ.. ಬರಿ ನಾಣ್ಯ ದಿಂದಲೇ, ಈ ತರ ಮಾಡಿದ್ದಾನೆ, ನೀವೇ ನೋಡಿ ಹೇಳಿ ಹೇಗೆ ಇದೆ ಅಂಥ ....


ಏನು ಸಪೋರ್ಟ್ ಇಲ್ಲ...ಒಳ್ಳೆ bridge ತರ ಇದೆ ಅಲ್ವ...?


ಬರಿ ಅರ್ದ coins ನಿಂದ ಜೋಡಿಸಿ ಮಾಡಿದ್ದಾನೆ,,, ಎಷ್ಟು ತಾಳ್ಮೆ ಇರಬೇಕಲ್ವ...

coins ಬಿಲ್ಡಿಂಗ್...


ಮದ್ಯದಲ್ಲಿ ಏನು ಸಪೋರ್ಟ್ ಇಲ್ಲ.....ಸರಿಯಾಗಿ ನೋಡಿ.....
ನನಗೆ ತುಂಬ ಇಷ್ಟ ಹಾಗೆ ಆಶ್ಚರ್ಯ ಆಗಿದ್ದು ಅಂದ್ರೆ ಇದು.....ಒಂದು ಚೂರು ಸಪೋರ್ಟ್ ಇಲ್ಲದಿರ ಹೀಗೆ ನಿಂತಿದೆ ಅದು ಅರ್ದ ಟೇಬಲ್ ನಿಂದ ಹೊರಗಡೆ....ಅಬ್ಬ....ಏನ್ talent ನೋಡಿ.....ಸೂಪರ್ ಅಲ್ವ....
ಇದನ್ನ ನೋಡಿ ನಾನು ಸ್ವಲ್ಪ ಟ್ರೈ ಮಾಡಿದೆ... ಆದ್ರೆ ತುಂಬ ತಾಳ್ಮೆ ಬೇಕು. ಸಕತ್ ಕಷ್ಟ ಇದೇ ರೀ.......ನೀವು ಒಂದ್ಸಲ ಟ್ರೈ ಮಾಡಿ ನೋಡಿ.....ಮಜಾ ಇರುತ್ತೆ....

23 comments:

 1. ಗುರು,
  ಟೈಟಲ್ ನೋಡಿ ’ಐದು ಪೈಸೆ ನಾಣ್ಯ ಅಂಟಿಸಿ ಮಾಡಿರೋ ಮಂಟಪ’ ಅಥವಾ ’ನಾಣ್ಯಗಳ ಮೇಲೆ ಪೈಂಟಿಂಗ್ ಮಾಡೊದನ್ನ’ ತೋರಿಸ್ತೀರಿ ಅಂದ್ಕೊಂಡಿದ್ದೆ.. ಆದ್ರೆ ಇದು ಬಹಳ ಭಿನ್ನವಾಗಿದೆ.
  ಎಷ್ಟು ಚೆನ್ನಾಗಿ ಜೋಡಿಸಿದ್ದಾರೆ ನಾಣ್ಯಗಳನ್ನ!!

  ReplyDelete
 2. ಹಾಂ , ಹೌದಲ್ವ... ಎಷ್ಟು ತಾಳ್ಮೆ ಇರಬೇಕು ಅವರಿಗೆ....ಲಾಸ್ಟ್ ಫೋಟೋ ನೋಡಿ...ಇಟ್ಸ್ really different
  ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ರೂಪಶ್ರಿ ಜಿ.... :-)

  ReplyDelete
 3. ತಾಳ್ಮೆ ಮತ್ತು ಶ್ರಮ ಇದ್ದರೆ ಏನನ್ನೂ ಸಾಧಿಸಬಹುದು ಎನ್ನುವುದಕ್ಕೆ ಮತ್ತೊಂದು ಉದಾಹರನೆಯಂತಿದೆ. ಖುಷಿಕೊಟ್ಟಿತು

  ReplyDelete
 4. ಗುರು ಅವರೆ,
  ನಿಮ್ಮ ಎಲ್ಲ ಪೋಸ್ಟ್ ಗಿ೦ತ ಇದು ತು೦ಬಾ ಬೇರೆ ರೀತಿ ಇದೆ .. ಯಾವುದೇ ಆದಾರ ಇಲ್ಲದೆ ಹೇಗೆ ಆ ರೀತಿ ನಾಣ್ಯವನ್ನು ಜೋಡಿಸಿದ್ದು ??
  ಕುತೂಹಲವಾಗಿ ಇದೆ .. ಕಾರಣ ಗೊತ್ತಾದರೆ ನಮಗೂ ತಿಳಿಸಿ ..
  ಇ೦ಥಹ ಕುತೂಹಲ ವಿಷಯವನ್ನು ನಮ್ಮೊ೦ದಿಗೆ ಹ೦ಚಿ ಕೊ೦ಡಿದ್ದಕ್ಕೆ ತು೦ಬಾ ತು೦ಬಾ ಧನ್ಯವಾದಗಳು .

  ReplyDelete
 5. ಹೌದು ಸರ್ ,

  ನಾಣ್ಯಗಳಲ್ಲಿ ಆಟ ಆಡೋದೇ ಒಂಥರಾ ಮಜಾ , ನೀವು ಹೇಳಿದ ಹಾಗೆ ತಾಳ್ಮೆ ಬಹಳ ಮುಖ್ಯ ಅಲ್ಲಿ .
  ಆ ವಿದೇಶಿಯನನ್ನು ಮೆಚ್ಚಲೇ ಬೇಕು ನಾವು
  ಇಂತಿ
  ವಿನಯ
  http://vinideso.blogspot.com/

  ReplyDelete
 6. ಅಧ್ಬುತವಾಗಿವೆ, ಗುರು ಅವರೇ! ಕೊನೆಯ U ಶೇಪಿನ ಜೋಡಣೆ ಅಂತೂ ಅತ್ಯಧ್ಬುತವಾಗಿದೆ! ಧನ್ಯವಾದಗಳು.

  ReplyDelete
 7. ಚೆನ್ನಾಗಿದೆ. ನಾವೆಲ್ಲಾ ಸಣ್ಣವರಿದ್ದಾಗ ನಾಣ್ಯಗಳ ಜೊತೆ ಆಟ ಆಡಿ ದೊಡ್ಡವರಿಂದ ಬೈಸಿಕೊಳ್ಳುತ್ತಿದ್ದುದು ನೆನಪಾಯ್ತು. ನಿಮ್ಮ ಹುಡುಕಾಟ ಮತ್ತು ಹೊಸ ಹೊಸ ವಿಚಾರಗಳನ್ನು ತಿಳಿಸುವ ಪರಿಗೆ ನಮೋನ್ನಮಃ

  ReplyDelete
 8. ಸಖ್ಖತ್ತಾಗಿದೆ ಗುರು.....ಒಂದಕ್ಕಿಂತ ಒಂದು ವಿಭಿನ್ನ

  ReplyDelete
 9. ಗುರು,

  ಆ ರಷ್ಯನ್ ಕಲಾವಿದನ ತಾಳ್ಮೆಗೆ ನನ್ನ ದೊಡ್ಡ ನಮನಗಳು. ಟೇಬಲ್ಲಿಂದ ಆಚೆ ಬಂದಿರುವಂತ ನಾಣ್ಯಗಳನ್ನು ಜೋಡಿಸಲು ಅವನಿಗೆ ಅದೆಷ್ಟು ತಾಳ್ಮೆ ಇರಬೇಕು ಅಲ್ವಾ...ಎಷ್ಟು ಸಲ ಬಿದ್ದಿರಬಹುದು. ಮತ್ತೆ ಮತ್ತೆ ಅದನ್ನೇ ಜೋಡಿಸಬೇಕಾದರೆ ಅವನಿಗೆ ಅದೆಷ್ಟು ತಾಳ್ಮೆ ಇರಬೇಕು ಅಲ್ವಾ..

  ReplyDelete
 10. ಹೌದು ಸತ್ಯನಾರಾಯಣ ಸರ್,,, ನೀವು ಹೇಳುವುದು ೧೦೦% ನಿಜ,,,,
  ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಸರ್...

  ReplyDelete
 11. ರೂಪ,
  ಕಾರಣ ನಂಗು ಗೊತ್ತಿಲ್ಲ... ಇದು ಒಂದು ಥರ talent ಅಸ್ಟೇ, ಸ್ವಲ್ಪ ತಾಳ್ಮೆ ಇಂದ ಅಭ್ಯಾಸ ಮಾಡಿದರೆ ನಾವು ಈ ರೀತಿ ಮಾಡುವುದಕ್ಕೆ ಆಗಬಹುದೇನೋ,,,ಟ್ರೈ ಮಾಡ್ತಿರ?

  ReplyDelete
 12. ವಿನಯ,
  ವಿದೇಶಿ ಕಲಾವಿದನನ್ನು ಮೆಚ್ಚುತ್ತಾ,, ನನ್ನ ಬ್ಲಾಗಿಗೆ ಬಂದು ಪ್ರತಿಕ್ರಿಯೆ ನೀಡಿದ್ದಕೆ ಧನ್ಯವಾದಗಳು.....
  ಹೌದು ತಾಳ್ಮ್ನೆಗೂ ನಿಮ್ಮ ಹೆಸರು ವಿನಯಕ್ಕು ಸಂಬಂದ ಇದೆಯಾ? :-)

  ReplyDelete
 13. SSK ಮೇಡಂ, ಹೌದು ಅದು ನಂಗೆ ಆಶ್ಚರ್ಯ ವಾಗಿದ್ದು....ಎಷ್ಟು dedication ಅಲ್ವ....

  ReplyDelete
 14. ಧನ್ಯವಾದಗಳು ಮನಸು....

  ReplyDelete
 15. ಧನ್ಯವಾದಗಳು ಪರಾಂಜಪೆ,, ಕ್ರಿಯೇಟಿವಿಟಿ ಹೇಗೆ ಇರುತ್ತೆ ಅಲ್ವ...

  ReplyDelete
 16. ಧನ್ಯವಾದಗಳು ಮಹೇಶ್

  ReplyDelete
 17. ಶಿವೂ..
  ಕರೆಕ್ಟ್ ಆಗಿ guess ಮಾಡಿದ್ದಿರ....ಎಷ್ಟು ತಾಳ್ಮೆ ಶ್ರದ್ದೆ ಇರಬೇಕು ಅಲ್ವ....ನಿಜವಾಗ್ಲೂ gr8 ....
  ನೋಡಿ ಕೆಲವರು ನಿಮ್ಮ ಥರಾನೆ,,,,ಸುಮ್ನೆ ಏನೋ ಒಂದು ಸಿಕ್ಕರೆ.. ಅದರಲ್ಲೇ ಏನನ್ನೋ ಮಾಡುವುದಕ್ಕೆ ನೋಡಿರುತ್ತಾರೆ....:-)

  ReplyDelete
 18. ಸಕತ್ತಾಗಿದೆ ಗುರು ಕಾಯಿನ್ ಬ್ಯಾಲೆನ್ಸಿಂಗ್!

  ReplyDelete
 19. modala notakke thumba saamaanyavagi kaanisithu... maththe nodidaaga yenu adbhutha kale antha anisithu... nijakku thumba thaalme beku idakke... chennaagide guru avare...

  ReplyDelete
 20. ಗುರು ನಮಸ್ತೆ...
  ತುಂಬಾ ದಿನಗಳಾಯ್ತು ಬ್ಲಾಗ್ ಕಡೆ ತಲೆಹಾಕದೆ. ನಾಣ್ಯಗಳ ಸಂಗ್ರಹ ಓದಿ ಅಚ್ಚರಿಗೊಂಡೆ. ಸಹನೆ ಮತ್ತು ಶ್ರದ್ದೆಯೇ ಇಂಥ ಅದ್ಭುತ ಕ್ರಿಯಾಶೀಲ ಕಲೆಯ ಹಿಂದಿನ ಗುಟ್ಟು ಅಲ್ವಾ?
  ಧನ್ಯವಾದಗಳು
  -ಧರಿತ್ರಿ

  ReplyDelete
 21. ನಿಮ್ಮ ಲೇಖನಗಳು ಹೀಗೆ ಯಾವಾಗಲೂ ಇಂಥ ಕಲಾತ್ಮಕ, ಸೃಜನಾತ್ಮಕ ಚಟುವಟಿಕೆಗಳ ಬಗ್ಗೆ ಇರುತ್ತವೆ. ಮನುಷ್ಯ ಮನಸ್ಸು ಮಾಡಿದರೆ ಏನೇನು ಮಾಡಬಹುದು ಎಂದು ಇವು ತೋರಿಸುತ್ತದೆ. ಈ ನಾಣ್ಯದ ಜೋಡಣೆಗಂತೂ ಎಷ್ಟು ತಾಳ್ಮೆ ಬೇಕು ಎಂದು ಯೋಚಿಸಿದರೇ ನಮ್ಮ ತಾಳ್ಮೆ ತಪ್ಪುತ್ತದೆ.

  ReplyDelete
 22. ಮಲ್ಲಿಕಾರ್ಜುನ್, ಧರಿತ್ರಿ, ಸುದೇಶ್, ದೀಪಸ್ಮಿಥ,,, ನಿಮ್ಮ ಪ್ರತ್ರಿಕ್ರಿಯೆಗೆ,, ಧನ್ಯವಾದಗಳು....:-)

  ReplyDelete