"ಇದ್ದಕ್ಕೆ ಇದ್ದ ಹಾಗೆ ಹಿಮ ಬೀಳುವಿಕೆ ಜೋರ್ ಆಯಿತು......ಎಲ್ಲರೂ ಫುಲ್ ಕವರ್ ಆಗಿ, ಕೈ ನಲ್ಲಿ ಒಂದು ಚಿಕ್ಕ ಛತ್ರಿ ಹಿಡಿದುಕೊಂಡು ಬೇಗ ಬೇಗ ಹೋಗುತ್ತಿದ್ದರು,,,,,(London ಎಂಬ ಸಿಟಿ ನೆ ಹಾಗೆ,,, ಏನೆ ಅಗಲಿ,,, ಇಲ್ಲಿನ ಜನರ ಓಟ ಮಾತ್ರ ನಿಲ್ಲೋಲ್ಲ.... ಒಟ್ಟಿನಲ್ಲಿ ಸಮಯಪಾಲನೆ ಅನ್ನೋದು ಇವರಿಗೆ ಹುಟ್ಟಿನಿಂದ ಬಂದಿದ್ದ ಹಾಗೆ ಇತ್ತು,)
London bridge ಬಸ್ ಸ್ಟಾಪ್ ಸ್ವಲ್ಪ ದೂರ ಇತ್ತು,,, ಸ್ವಲ್ಪ ದೂರ ಒಂದು ಚಾನೆಲ್ ನಲ್ಲಿ (ಅಂದರೆ bridge ಕೆಳಗೆ ಇರುವ ಸುರಂಗ ಮಾರ್ಗದಲ್ಲಿ ನೆಡೆದು ಹೋಗಬೇಕಾಗಿ ಇತ್ತು,,,,,ಕೆಲವೊಂದು tunnel ತುಂಬ ಉದ್ದವಾಗಿ ಇರುತ್ತೆ) ಒಳಗಡೆ ಪೂರ್ತಿ ಕಪ್ಪು,,,,ಹೊರಗಡೆ ಹಿಮ ಬಿಳ್ತಾ ಇರೋದು ಕಾಣಿಸ್ತಾ ಇದೆ..... ನಾನು ಈ ಕಡೆ ಇಂದ ಅಕಡೆಗೆ ಹೋಗೋ ಅಸ್ಟು ಹೊತ್ತಿಗೆ,, ಹಿಮದ ಮಳೆ ಸ್ವಲ್ಪ ಜೋರ್ ಆಗಿತ್ತು,,,,,ನಾನು ಛತ್ರಿ ತೆಗೆದು ಕೊಂಡು ಹೋಗಿದ್ದರು ಅದನ್ನ ಬಿಚ್ಚಿರಲಿಲ್ಲ.....ಅಪರೂಪಕ್ಕೆ ಬೀಳುವ ಹಿಮದ ಮಳೆಯಲ್ಲಿ ನೆನೆಯಬೇಕು,,,,,ನನ್ನ ಮೈ ಮೇಲೆಲ್ಲಾ ಹಿಮ ಬೀಳಬೇಕು ಅಂತ ಹಾಗೆ ನೆಡೆದು ಕೊಂಡ ಹೋಗ್ತಾ ಇದ್ದೆ...ಯಾವಾಗ ಹಿಮದ ಮಳೆ ಜೋರ್ ಆಯ್ತೋ,,,,,ಒಂದು ಕ್ಷಣ ಕಣ್ಣನ್ನು ಮೇಲೆ ಎತ್ತಿ ನೋಡಿದೆ....ಯಾರೋ ಮೇಲಿನಿಂದ ಮಲ್ಲಿಗೆ ಹೂಗಳನ್ನು ಹಾಕುತ್ತ ಇದ್ದ ಹಾಗೆ ನಿದಾನಕ್ಕೆ ಹಿಮ ಬೀಳ್ತಾ ಇತ್ತು,,,,ನನ್ನ ಮುಖ ಒಂದನ್ನು ಬಿಟ್ಟು ಮೈ ಎಲ್ಲ ಪೂರ್ತಿ ಕವರ್ ಆಗಿತ್ತು,,,,,ಮುಖದ ಮೇಲೆ ಮಲ್ಲಿಗೆ ಹೂವಿನ ತರಹದ ಹಿಮ ಮುತ್ತು ಕೊಡಲು ಒಂದೊಂದಾಗಿ ಬರ್ತಾ ಇದಿಯೇನೋ ಅಂತ ಅನಿಸ್ತು..,,,,,ಸ್ವಲ್ಪ ತಣ್ಣಗೆ ಕೊರೆಯುವ ಹಾಗೆ ಇದ್ದರು,, ಏನೋ ಒಂದು ಥರ ವಿಶೇಷ ಅನುಭವ......ಖುಷಿ.....ಹಾಗೆ ಸ್ವಲ್ಪ ಸಮಯ ಅಲ್ಲಿ ಪುಟ್ಟ ಮಕ್ಕಳ ಥರ ಓಡಾಡ್ತಾ ಇದ್ದೆ... ಎಲ್ಲರೂ ಕೈ ನಲ್ಲಿ ಛತ್ರಿ ಇದ್ಕೊಂಡು ಹೋಗ್ತಾ ಇದ್ರೆ ನಾನ್ ಮಾತ್ರ ಹಾಗೆ ಆಟ ಆಡ್ತ ಇದ್ದೆ..... ಅದೇ ಸಮಯಕ್ಕೆ ನನ್ನ ಹತ್ತಿರವಿದ್ದ ಕ್ಯಾಮರ ಕೂಡ ಅ ಹಿಮದ ಚಳಿಗೆ ಒದ್ದಾಡಿ... ಬ್ಯಾಟರಿ ಎಲ್ಲ ಡ್ರೈ ಆಗಿ... ಬೆಚ್ಚಗೆ ಕುಳಿತುಕೊಂಡ್ ಬಿಡ್ತು,,,,,(ನಾಳೆ ಸ್ನೋ ಫಾಲ್ ನೋಡಬೇಕೆಂಬ ಕುಶಿನಲ್ಲಿ ಕ್ಯಾಮೆರಾನ ಚಾರ್ಜ್ ಮಾಡೇ ಇರಲಿಲ್ಲ ...ಕೆಲವೊಮ್ಮೆ ಹೀಗೆ ಮರೆತುಹೊಗುತ್ತೇವೆ )
ಒಂದು ಕ್ಷಣ ಮನಸಿನಲ್ಲಿ ಇವೊತ್ತು ಆಫೀಸಿಗೆ ಹೋಗೋದೇ ಬೇಡ... ರಜೆ ಹಾಕಿ ಇಲ್ಲೇ ಅಟಾಡೋಣ ಅಂತ ಅನ್ಕೊಂಡೆ ಆದರೆ ಏನ್ ಮಾಡೋದು,, ಅದು ಇಂಡಿಯಾ ಅಲ್ಲ ... ಸರಿ ಅಂತ ಒಲ್ಲದ ಮನಸಿನಿಂದಲೇ ಬಸ್ ಸ್ಟ್ಯಾಂಡ್ ಗೆ ಬಂದು ಬಸ್ ಹತ್ತಿದೆ.....ಬಸ್ ನಲ್ಲಿ ಕುಳಿತುಕೊಂಡೆ ಹೊರಗಿನ ಸೌಂದರ್ಯ ವನ್ನು ಸವಿಯುತ್ತ....ಹೊರಟೆ (ಅಲ್ಲಿ ಎಲ್ಲ ಬಸ್ ಗಳು ವೋಲ್ವೋ, ಮತ್ತೆ benz , ಹವಾನಿಯಂತ್ರಿತ, ನಮ್ಮಲ್ಲಿ ಇದೆಯಲ್ವ ವೋಲ್ವೋ ಅದೇ ತರ) ಅಂತು ಆಫೀಸ್ ಬಂತು.....ಒಲ್ಲದ ಮನಸಿನಿಂದಲೇ ಒಳಗೆ ಹೋದೆ..ಆಗಲೇ ಎಲ್ಲ ಬಂದಿದ್ದರು,,,,,ನಾನೇ 20 ನಿಮಿಷ ಲೇಟ್ , ಸೆಕ್ಯೂರಿಟಿ person ಗೊಣಗುತ್ತ ಇದ್ದ, ನಾನೆ ಅದು ಇದು ಕತೆ ಹೇಳಿ access ಪಡೆದುಕೊಂಡೆ (10 ನಿಮಿಷ ಲೇಟ್ ಆದರೆ ಅಲ್ಲಿ ಒಂದು ತರ ನೋಡ್ತಾರೆ....ನಾನು ಆಫೀಸ್ ಗೆ ಹೋದ second day 15 ನಿಮಿಷ ಲೇಟ್ ಆಗಿ ಹೋದೆ ...ಅ ಬಡ್ಡಿ ಮಗ ಡೈರೆಕ್ಟ್ ಆಗಿ ಹೇಳೇ ಬಿಟ್ ಇದ್ದ "you are too early for tomarrow ಅಂತ " )
ಆಫೀಸ್ ನಲ್ಲಿ ಇರುವ ಎಲ್ಲ collegues ಗು ನನ್ನ ಅನುಭವನ್ನ ಹೇಳಿದ್ದೆ ಹೇಳಿದ್ದು.....ಎಲ್ಲ ಅಲ್ಲಿಯವರೇ,, ಅವರಿಗೆಲ್ಲ ಇದು ಕಾಮನ್ , ಆದರೆ ಈ ಸರಿ ಆದ ಹಿಮ ಪಾತ ಕಳೆದ ೫ ವರ್ಷಗಳಿಗಿಂತ ಅದಿಕ ವಾಗಿ ಇತ್ತಂತೆ...ಅಲ್ಲಿನ ಇಂಗ್ಲಿಷ್ ಜನ ಅವರ ಅನುಭವಗಳನು ಹೇಳ್ತಾ ಇದ್ರೂ,,,,,
ಹಾಗೆ ಮದ್ಯದಲ್ಲಿ ಸ್ವಲ್ಪ ಹೊತ್ತು ಉಟಕ್ಕೆ ಅಂತ ಹೊರಗಡೆ ಹೋಗಿ ಬಂದೆ ಅವಾಗಲು ನಿದಾನಕ್ಕೆ ಹಿಮ ಬೀಳ್ತಾ ಇತ್ತು....
ನಾನು ಬೆಳಿಗ್ಗೆ ಬೇಗ ಬಂದಿದ್ದೆನದ್ದರಿಂದ ಸಂಜೆ ೧ hours permission ಕೇಳಿಕೊಂಡ ಬೇಗ ಹೊರಟೆ.......ಆದರೆ ಕೆಲವೊಂದು ಫೋಟೋಗಳನ್ನು ತೆಗೆದು ಕೊಂಡು ಹೋಗೋಣ ಅಂತ......ಬೆಳಿಗ್ಗೆ ಇಂದ ಮದ್ಯಾನದ ವರೆವಿಗೂ ಬಿದ್ದ ಹಿಮ ಪಾತ ..ಸಂಜೆ ಅದ್ರು ಕರಗಿರಲಿಲ್ಲ.... ಕೆಲವೊಂದು ಹಸಿರಿನ ಪ್ರದೇಶದಲ್ಲಿ , ಪಾರ್ಕ್ ನಲ್ಲಿ ಹಾಗೆ ಕರಗದೆ ಇತ್ತು......ನಿದಾನಕ್ಕೆ ಅದನ್ನೆಲ್ಲಾ ನೋಡಿಕೊಂಡು,,,,, ಬಿದ್ದಿರುವ ಹಿಮದ ಉಂಡೆ ಮಾಡಿ ಆಡಿಕೊಂಡು ಹೊರಟೆ....
ಅದಾಗಲೇ ಕತ್ತಲು ಆವರಿಸಿ ಯಾಗಿತ್ತು......(London ನಲ್ಲಿ ಚಳಿಗಾಲದಲ್ಲಿ ಬೆಳಗಗೋದು ೭:30 - ೮:೦೦ ಗಂಟೆಗೆ ಹಾಗೆ..ಸಂಜೆ 4:30 ಗೆಲ್ಲ,,, ಸೂರ್ಯ ಮುಳುಗಿ,,, ಕತ್ತಲು ಆವರಿಸಿಕೊಂಡು ಬಿಟ್ ಇರುತ್ತೆ.....)
ಮನೆ ಹತ್ರ ಇರುವ ಒಂದು ಪಾರ್ಕ್ ನಲ್ಲಿ,, ಚಿಕ್ಕ ಮಕ್ಕಳು,,, ಸ್ನೋ ಮ್ಯಾನ್ (ಹಿಮದ ಬೊಂಬೆ ಮಾಡಿ ) ಆಟ ಆಡ್ತ ಇದ್ರೂ,,,,,, ಹಾಗೆ ಪಾರ್ಕ್ ನಲ್ಲಿ ಅಡ್ಡಾಡಿ,,,,ಹಿಮದ ಉಂಡೆಗಳನ್ನು ಮಾಡಿ ಬಿಸಾಡಿ.....ಚಿಕ್ಕಮಕ್ಕಳ ತರ ಅದರಲ್ಲೇ ಸ್ಕೇಟಿಂಗ್ ಆಡಿ......ಬಿದ್ದು,,,,,ಎದ್ದು,,,,,,ರಾತಿ ೮ ಗಂಟೆಗೆ ನನ್ನ ಪ್ಲಾಟ್ ಸೇರಿಕೊಂಡೆ.........ಅಂದಿನ ಅ ಒಂದು ದಿನದ ಅನುಭವ ನಿಜವಾಗಲು ನನ್ನ ಜೀವನದ ಆನಂದದ ಕ್ಷಣಗಳಲ್ಲಿ ಒಂದು .......
ಆಫೀಸ್ ಹತ್ರ ಹೋಗ್ತಾ ಇರಬೇಕಾದರೆ
ನಮ್ಮ ಆಫೀಸ್ ನ 2nd ಫ್ಲೊರ್nalli ಇರುವ ನಮ್ಮ ಕ್ಯಾಬಿನ್ ನಿಂದ ತೆಗೆದದ್ದು,,,,, ಆಫೀಸ್ ಹೊರಗಿನ fountain..ಪೂರ್ತಿ ಹಿಮ ದಿಂದ ಮುಚ್ಚಿಹೊಗಿತು....
ಸಂಜೆ ಬೇಗ ಹೊರಟಾಗ .....ದಾರಿಯಲ್ಲಿ ಇರುವ ಒಂದು ಹುಲ್ಲು ಹಾಸು,,,,,ಆದರೆ ಇಲ್ಲಿ ಬರಿ ಬಿಳಿ ಹಿಮ ದ ಗಾರ್ಡನ್ ಆಗಿದೆ....
ಇದು ಇನ್ನೊಂದು ಕಡೆ....ಇಲ್ಲಿ ಸ್ವಲ್ಪ ಸ್ವಲ್ಪ ಹಿಮ ಕರಗುತ್ತಾ ಇತ್ತು......
ನಮ್ಮ ಆಫೀಸ್ ಎದುರುಗಡೆ ಇರುವ ಜಾಗ ....
ದಾರಿಯಲ್ಲಿ ಸಿಕ್ಕ ಇನ್ನೊಂದು ಪಾರ್ಕುಅಲ್ಲ ಅಲ್ಲ ......sorry ಸ್ಮಶಾನ .....
ಮನೆ ಹತ್ರ,,, ಚಿಕ್ಕ ಮಕ್ಕಳು,,, ಹಿಮದಿಂದ ಗೊಂಬೆ ಮಾಡಿ ಆಟ ಆಡ್ತ ಇದ್ದರು
ಬೆಳಿಗ್ಗೆ ಬಿದ್ದಿದ್ದ ಹಿಮ... ಸಂಜೆ ಅದ್ರು ಕರಗಿರಲಿಲ್ಲ..... ಇಲ್ಲೇ ಎಸ್ಟೋ ಹೊತ್ತು ನಾನು ಬಿದ್ದ ಹಿಮದ ರಾಶಿ ಜೊತೆ ಆಟ ಆಡ್ತ ಇದ್ದೆ.....
ಟ್ರಫಾಲ್ಗರ್ ಸ್ಕ್ವೇರ್ ಹತ್ತಿರ .......ಬೆಳಗ್ಗೆ ಬಸ್ಸಿನಲ್ಲಿ ಹೋಗ್ತಾ ತೆಗೆದದ್ದು.....
ದಾರಿನಲ್ಲಿ ಬರ್ತಾ ಯಾರದೋ ಮನೆ compund ನಲ್ಲಿ ಬಿದ್ದ ಹಿಮದ ರಾಶಿ
(ನನಗೆ ಈ ಅನುಭವಗಳನ್ನು ಹೀಗೆ ಬರೆಯಬೇಕು ಅಂತ ಪ್ರೇರೇಪಣೆ ನೀಡಿದ್ದು,,,,ಒಂದು ಪುಸ್ತಕ, ರೀಸೆಂಟ್ ಆಗಿ "ಸತೀಶ್ ಚ್ಚಪರಿಕೆ ಅವರ " ಥೇಮ್ಸ್ ತಟದ ತವಕ ತಲ್ಲಣ ಪುಸ್ತಕ: ಬಿಡುಗಡೆ ಸಮಾರಂಬಕ್ಕೆ ಹೋಗಿದ್ದೆ, ಅಲ್ಲಿ ಪುಸ್ತಕವನ್ನು ತೆಗೆದುಕೊಂಡ ಓದುತ್ತ ಇರಬೇಕಾದರೆ....ನನಗು ನನ್ನ ಅನುಭವಗಳನ್ನು ಹಂಚಿಕೊಳ್ಳ ಬೇಕು ಅಂತ ಅನ್ನಿಸಿ... ನಿನ್ನ ಜೊತೆ ಹಂಚಿಕೊಳ್ಥ ಇದ್ದೇನೆ ಅಸ್ಟೇ )
(ನನಗೆ ಈ ಅನುಭವಗಳನ್ನು ಹೀಗೆ ಬರೆಯಬೇಕು ಅಂತ ಪ್ರೇರೇಪಣೆ ನೀಡಿದ್ದು,,,,ಒಂದು ಪುಸ್ತಕ, ರೀಸೆಂಟ್ ಆಗಿ "ಸತೀಶ್ ಚ್ಚಪರಿಕೆ ಅವರ " ಥೇಮ್ಸ್ ತಟದ ತವಕ ತಲ್ಲಣ ಪುಸ್ತಕ: ಬಿಡುಗಡೆ ಸಮಾರಂಬಕ್ಕೆ ಹೋಗಿದ್ದೆ, ಅಲ್ಲಿ ಪುಸ್ತಕವನ್ನು ತೆಗೆದುಕೊಂಡ ಓದುತ್ತ ಇರಬೇಕಾದರೆ....ನನಗು ನನ್ನ ಅನುಭವಗಳನ್ನು ಹಂಚಿಕೊಳ್ಳ ಬೇಕು ಅಂತ ಅನ್ನಿಸಿ... ನಿನ್ನ ಜೊತೆ ಹಂಚಿಕೊಳ್ಥ ಇದ್ದೇನೆ ಅಸ್ಟೇ )
ಗುರು,
ReplyDeleteಲಂಡನ್ ಹಿಮದ ಆನುಭವವನ್ನು ಚೆನ್ನಾಗಿ enjoy ಮಾಡಿದ್ದೀರಿ. ಅದನ್ನಿಲ್ಲಿ ನಮ್ಮೊಂದಿಗೂ ಹಂಚಿಕೊಂಡಿದ್ದಕ್ಕೆ ಖುಷಿಯಾಯ್ತು.
ಮತ್ತೆ ಇಂಥ ಆನುಭವಗಳಲ್ಲಿ ನಾವು ಮಕ್ಕಳಂತೆ ಆಡೋದು ಎಂಥ ಮಜ ಅಲ್ವಾ...ಬ್ಯಾಟರಿ ಲೋ ಆಗಿದ್ರು ಕೆಲವು ಸುಂದರ ಫೋಟೋಗಳನ್ನು ತೆಗೆದಿದ್ದೀರಿ....
ಧನ್ಯವಾದಗಳು.
ನನ್ನ ಅನುಭವದ ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು.. ಶಿವೂ.....
ReplyDeleteಹೌದು ನನಗೆ ಅವಾಗ ಕ್ಯಾಮೆರಾ ತೆಗೆದುಕೊಂಡ ಹೊಸದು........ಸುಮ್ಮನೆ ಹಾಗೆ ತೆಗೆಯುತ್ತ ಇದ್ದೆ (ನಿಮ್ಮಸ್ತು proffesional ಅಲ್ಲಪ್ಪಾ), ಇವಾಗ ಸ್ವಲ್ಪ ಪಳಗಿದ್ದೇನೆ...ಅದಕ್ಕೆ ನಿಮ್ಮ ಬಗಲಿ SLR ಕ್ಯಾಮೆರಾ ಬಗ್ಗೆ ವಿಚಾರಿಸಿದ್ದು....
ಗುರು...
ReplyDeleteತುಂಬ ಸೊಗಸಾಗಿ ಬರೆದಿದ್ದೀರಿ...
ಫೋಟೊಗಳೂ ಚೆನ್ನಾಗಿವೆ...
ನನ್ನ ಲಂಡನ್‍ನ ದಿನಗಳು ನೆನಪಾದವು...
ಫೋಟೊ ನೋಡಲು ಬಲು ಚಂದ...
ಖುಷಿಯಾಯಿತು...
ಲಂಡನ್ ಛಳಿ ಅನುಭವ ನೆನಪಿಸಿದ್ದಕ್ಕಾಗಿ ವಂದನೆಗಳು...
Hey, you gotta get me some Kannada to engish convertor..
ReplyDeleteBTW, nice to see pics of those days.. good work buddy.. i think you should post a pic of all 4 of us in this :)
ಲಂಡನ್ ಛಳಿ....
ReplyDeleteನಿಮ್ಮ ಬ್ಲಾಗಲ್ಲಿ ಹೇಳಿ....
ತಿಳಿದು ಮೈನವಿರೇಳಿ....
ಹುಡುಕುತ್ತಿದೆ ಕಂಬಳಿ.....
ಸೊಗಸಾಗಿ ಬರೆದಿದ್ದೀರಿ....
ಧನ್ಯವಾದಗಳು ಪ್ರಕಾಶ್ ..
ReplyDeleteHey dude,,
ReplyDeleteThanks for your comments, Yeah, you should get Kannada to English translator, Actually this article is about, our London Days story, I remembered snow fall day, and explained most beautiful memories on that day.
Of course I had uploaded your Photos and name in my other article See here .
http://guruprsad.blogspot.com/2008/12/london-night.html
ಮಹೇಶ್,
ReplyDeleteನನ್ನ ಬ್ಲಾಗಿಗೆ ಸ್ವಾಗತ ಹಾಗೆ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು,,,, ಹೀಗೆ ಬರುತ್ತಿರಿ....
ಗುರು,
ReplyDeleteಕೆಲವೊಂದು ಸಲ ಮಕ್ಕಳಹಾಗೆ ಆಗಬೇಕಂತೆ. ಆಗಲೇ ವರ್ತಮಾನವನ್ನು ಸವಿಯಲು ಸಾಧ್ಯ. ಇಂತಹ ಭಾವನೆಗಳನ್ನು ಉಳಿಸಿಕೊಳ್ಳಿ.
ಒಳ್ಳೆ ಅನುಭವ.
ಗುರು,
ReplyDeleteಲಂಡನ್ ಹಿಮದ ಅನುಭವ ಚೆನ್ನಾಗಿದೆ. ತುಂಬ ಸೊಗಸಾಗಿ ಬರೆದಿದ್ದೀರಿ.
ಫೋಟೊಗಳೂ ಚೆನ್ನಾಗಿವೆ!!
ಲ೦ಡನ್ ನ ಚಳಿ, ಹಿಮಪಾತ - ಇವುಗಳ ಸಚಿತ್ರ ವರ್ಣನೆಯೊ೦ದಿಗೆ, ನಿಮ್ಮ ಸ್ವಾನುಭವ, ರೋಚಕವಾಗಿ, ರೋಮಾ೦ಚಕವಾಗಿ ಮೂಡಿದೆ. ಚೆನ್ನಾಗಿದೆ.
ReplyDeleteರಾಜೀವ್,,,,ಹೌದಲ್ವ ಕೆಲವೊಂದು ಸರಿ ಅದೇ ರೀತಿ ಆಗಿ,, ಅನುಭವಿಸಿದರೆನೆ ಚೆಂದ,,,,,
ReplyDeleteಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು
ಧನ್ಯವಾದಗಳು ಪರಾಂಜಪೆ.....
ReplyDeleteಧನ್ಯವಾದಗಳು ರೂಪಶ್ರಿಜಿ.....
ReplyDeleteಗುರು ಅವರೆ,
ReplyDeleteನಿಮ್ಮ ಲ೦ಡನ್ ಅನುಭವ ತು೦ಬಾ ಸು0ದರವಾಗಿ ಮೂಡಿ ಬ೦ದಿದೆ .
ಚಿತ್ರ ಗಳು ಚೆನ್ನಾಗಿವೆ!! ಅಬ್ಬ ಆ ಹಿಮದಲ್ಲಿ ಎಲ್ಲವು ಪೂರ್ತಿ ಬಿಳಿಯಾಗಿ ಎಷ್ಟು ಸು೦ದರವಾಗಿ ಎಲ್ಲ ಜಾಗ ಕಾಣುತ್ತಿದೆ ..
ಅದನ್ನಿಲ್ಲಿ ನಮ್ಮೊಂದಿಗೂ ಹಂಚಿಕೊಂಡಿದ್ದಕ್ಕೆ ತು೦ಬಾ ಖುಷಿಯಾಯ್ತು. ..
ತು೦ಬಾ ತು೦ಬಾ ಧನ್ಯವಾದಗಳು ...
ಆಹಾ... ಲ೦ಡನ್ ಮತ್ತು ಸ್ನೋ ಫಾಲ್... ಫೋಟೋದಲ್ಲೇ ನೋಡುತ್ತಿದ್ದರೆ ಎಷ್ಟು ಚೆನ್ನಾಗಿದೆ ಅ೦ತ ಅನಿಸುತ್ತದೆ... ಇನ್ನು ನಿಜವಾಗಿಯೂ ನೋಡಿದ ನೀವು ಎಷ್ಟು ಲಕ್ಕಿಗಳು :)
ReplyDeleteನಿಮ್ಮ ಅಭಿಮಾನ ಪೂರ್ಣ ಪ್ರತಿಕ್ರಿಯೆಗೆ ಧನ್ಯವಾದಗಳು ರೂಪ.....
ReplyDeleteಗುರು
ಹೌದು ಸುಧೇಶ್,,,, ನಾನು ಒಂದು ಥರ ಲಕ್ಕಿ ನೆ..... :-)
ReplyDeleteನಿಮ್ಮ ಪ್ರತಿಕ್ರಿಯೆಗೆ
ಧನ್ಯವಾದಗಳು ಸುಧೇಶ್....
ಹಾಗೆ ಪಾರ್ಕ್ ನಲ್ಲಿ ಅಡ್ಡಾಡಿ,,,,ಹಿಮದ ಉಂಡೆಗಳನ್ನು ಮಾಡಿ ಬಿಸಾಡಿ.....ಚಿಕ್ಕಮಕ್ಕಳ ತರ ಅದರಲ್ಲೇ ಸ್ಕೇಟಿಂಗ್ ಆಡಿ......ಬಿದ್ದು,,,,,ಎದ್ದು,,,,,,
ReplyDeleteನಿಮ್ಮ ಈ ಸಾಲು ಓದಿದಾಗ ನನಗೂ ಅಲ್ಲಿಗೆ ಹೋಗಬೇಕು ಅಂತನ್ನಿಸಿತು.
ನಿರೂಪಣೆ, ಸುಂದರ ಫೋಟೋಗಳಿಂದ ನನಗೆ ಖರ್ಚಿಲ್ಲದ ಯಾತ್ರ ಮಾಡಿದಂತಾಯಿತು. thanks
ನಮಸ್ತೆ...
ReplyDeleteಒಳ್ಳೆಯ ಸಚಿತ್ರಲೇಖನ. ಅನುಭವ ಅರಸಿ ಹೋಗುವ ನಿಮ್ಮ ತುಡಿತ ಹಾಗೇ ಜೀವಂತವಾಗಿರಲಿ. ಮತ್ತೆ ಬರೆಯಿರಿ.
tumba chennagide...
ReplyDeleteಹರೀಶ್
ReplyDeleteನನ್ನ ಬ್ಲಾಗಿಗೆ ಸ್ವಾಗತ....ಹಾಗೆ ಲೇಖನ ಮೆಚ್ಚಿ ಪ್ರತಿಕ್ರಿಯಿಸಿದ್ದಕೆ ಧನ್ಯವಾದಗಳು....
ನಮಸ್ಕಾರ ಏಕಾಂತ.....
ReplyDeleteನನ್ನ ಬ್ಲಾಗಿಗೆ ಬಂದು...ಲೇಖನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬ ಧನ್ಯವಾದಗಳು.....
ಮನಸು....
ReplyDeleteಎಲ್ಲಿ ಕಳೆದು ಹೋಗಿ ಬಿಟ್ಟ ಇದ್ದೀರಾ...ತುಂಬ ದಿನ ಆಯಿತು ನಮ್ಮ ಬ್ಲಾಗಿನ ಕಡೆ ಬಂದು.....ಎಲ್ಲಿ ಇರುವಿರಿ ಇವಾಗ....?
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು..