ನಮ್ಮ ಈ ಬೆಂಗಳೂರಿಗೆ ಎಷ್ಟೊಂದು ಮಾಲ್ ಬಂದ್ರು ಸಾಕಾಗೋದಿಲ್ಲ ಅನ್ನಿಸುತ್ತೆ ....... ಫೋರಂ ಮಾಲ್, ಗರುಡ ಮಾಲ್, ಸಿಗ್ಮಾ ಮಾಲ್, ಗೋಪಾಲನ್ ಮಾಲ್, ಇವಾಗ ಮಂತ್ರಿ ಮಾಲ್,,,,,,, ವೀಕ್ ಎಂಡ್ ಬಂದ್ರೆ ಸಾಕು,,, ನಮ್ಮ ಬೆಂಗಳೂರಿನ ಹುಡುಗಾಸ್ ಹೂಡುಗಿಸ್,,, ,, ಆಂಟಿಸು , ಅಂಕಲ್ಸು,,,,middle age ವೊಮೆನ್ಸು , ಅಜ್ಜಾ ಸು,, ಅಜ್ಜಿಸು.....ಕೊನೆ ಪಿಳ್ಳೆ ಪೀಚುಗಳು,,,,, ಈ ಮಾಲ್ ನಲ್ಲಿ ತುಂಬಿರ್ತಾರೆ alva ...
ಒಂದು ಸರಿ ಮಂತ್ರಿ ಮಾಲ್ ಗೆ ವೀಕ್ ಡೇಸ್ ನಲ್ಲಿ ಹೋಗಿದ್ದೆ,,, ಆದರೆ ವೀಕ್ ಎಂಡ್ ನಲ್ಲಿ ಹೋಗಿರಲಿಲ್ಲ,,, ಮೂನ್ನೆ ನನ್ನ ಹುಡುಗಿ ಜೊತೆ ಹೋಗಿದ್ದೆ,,, ಕಾಲ್ ಇಡೋಕು ಜಾಗ ಇಲ್ಲ,,, ಒಳಗಡೆ ಹೋಗಬೇಕಾದ್ರೆ ಸೆಕ್ಯೂರಿಟಿ ಚೆಕ್,,, ಅದಕ್ಕೆ ಮಾರುದ್ದ quee , ಅಬ್ಬಬ,, ಎಲ್ಲಿರ್ತಾರೆ ಇಷ್ಟೊಂದ್ ಜನ ನಮ್ ಬೆಂಗಳೂರಿನಲ್ಲಿ ......
ನಿಮಗೂ ಇದರ ಅನುಭವ ಆಗಿರಬೇಕು ಅಲ್ವ.....
ಇದು ಬಿಟ್ಟು,,, ಬೇರೆ ಪ್ರಶಾಂತ ವಾದ ಪ್ಲೇಸ್ ಬ್ಯಾಂಗಲೋರ್ ನಲ್ಲಿ,, ಯಾವುದು ಇಲ್ವಾ,,, ಅಥವಾ ಇದ್ರೂ ಈ ಮಾಲ್ ಗಳ ಗಲಾಟೆ ಇಂದ ಕಾಣಿಸ್ತಾ ಇಲ್ವಾ,,,,,
ಖಂಡಿತ ಇದೆ,,, ಒಳ್ಳೆಯ , ಪ್ರಶಾಂತ ವಾದ,, ನೆಮ್ಮದಿಯ,,, ಎಷ್ಟೊಂದು ಸುಂದರ ತಾಣ ಗಳು, ನಮ್ಮ ಸುತ್ತ ಮುತ್ತಲೇ ಇದೆ,,, ಆದರೆ ಅದನ್ನು,,,, ನಿದಾನಕ್ಕೆ ನೋಡಿ ಅನುಭವಿಸ ಬೇಕು ಅಸ್ಟೇ ,,
ಅ ತರ ಒಂದು ಸ್ಥಳದ ಬಗ್ಗೆ , ಈ ಮೊದಲೇ ಒಂದು ಅರ್ತಿಕ್ಲೆ ಬರೆದಿದ್ದೆ,,,
ವಿಶ್ವ ಶಾಂತಿ ಆಶ್ರಮ..... ಬಿಡುವಿದ್ದಾಗ.... ಒಮ್ಮೆ ನೋಡಿ ಬನ್ನಿ,,,,
(
http://guruprsad.blogspot.com/2009/05/blog-post.ಹ್ತ್ಮ್ಲ್)
ಇವಾಗ ಹೇಳ ಹೊರಟಿರುವುದು,,, ನಮ್ಮ ಮನೆಯ ಹತ್ತಿರ ಇರುವ ಒಂದು ಸುಂದರ , ಪ್ರಶಾಂತ,,, ದೇವಸ್ಥಾನದ ಬಗ್ಗೆ,,,, ಇದು ಸುಭ್ರಮಣ್ಯ ದೇವಸ್ತಾನ,,,, ರಾಜರಾಜೇಶ್ವರಿ ನಗರ ದ ಕೊನೆಯ ಭಾಗದಲ್ಲಿ ಇದೆ..... (ಈಗಿನ ಕಾಲದ ಹುಡುಗರಿಗೆ ಏರಿಯ , ದೇವಸ್ತಾನ ಎಲ್ಲ ಎಲ್ಲಿ ಗೊತ್ತಿರುತ್ತೆ,, ಯಾವುದಾದರು ಕ್ಲಾಬ್ಬೋ , ಪುಬ್ಬೋ ಹೇಳಿದ್ರೆ ಸರಿ,, ಅಲ್ವ,,, ) ಬೆಸ್ಟ್ ಕ್ಲಬ್ ಅಂತ ಒಂದು ಕ್ಲಬ್ ಇದೆ ರಾಜರಾಜೇಶ್ವರಿ ನಗರದಲ್ಲಿ,,, ಅದರ ಹಿಂಬಾಗ ಇದೆ ಈ ಸುಂದರ ದೇವಸ್ತಾನ,,,,,
ಮೊದಲು ಈ ರೋಡ್ ನಲ್ಲಿ ಹೋಗ್ತಾ ಇರಬೇಕಾದರೆ ಬೆಟ್ಟದ (ಗುಡ್ಡದ) ಮೇಲೆ ಇರುವ ಮನಮೋಹಕ ೫ ತಲೆ ಇರುವ ದೇವರು ಕಾಣಿಸ್ತ ಇತ್ತು,,, ಇದು ಇನ್ನು construction ನಲ್ಲಿ ಇದೆಯೇನೋ ಅಂತ,,, ಹೋಗಿರಲಿಲ್ಲ... ಒಂದು ದಿನ,, ನಮ್ಮ ಅಮ್ಮ ನಾನ್ನು ಕರೆದು ಕೊಂಡು ಸಂಜೆ ಇಲ್ಲಿಗೆ ಹೋಗಿಯೇ ಬಿಡೋಣ ಅಂತ ಹೋದೆ.... ಅವಾಗ ಅನ್ನಿಸಿತು,, ಇಷ್ಟು ದಿನ ಇದು ಕಣ್ಣಿಗೆ ಬಿದ್ದಿರಲಿಲ್ಲ,,, ಗೊತ್ತಾಗಿದ್ದರೆ,, ಬಿಡುವಾದಾಗಲೆಲ್ಲ ಬರಬಹುದಿತ್ತು ಅಂತ....
ಅಸ್ಟು ಸುಂದರವಾಗಿ ಇದೆ,, ಈ ಪುಟ್ಟ ಗುಡ್ಡದ ಮೇಲೆ ಇರುವ ಸುಭ್ರಮಣ್ಯ ದೇವಸ್ಥಾನ .
ಮೊದಲು,, ಪಂಚಮುಖಿ ಗಣಪತಿ,ಯಾ ದೇವರು,, ಸಿಗುತ್ತೆ,,, ಪ್ರಾಂಗಣದ ಸುತ್ತಲು,,, ಗಣಪತಿಯ ಪಂಚ ಮುಖಗಳು ಕಾಣಲಿ ಎಂದು,, ಕಿಂಡಿಗಳನ್ನು ಮಾಡಿದ್ದಾರೆ,,, ಎಷ್ಟು ಚೆನ್ನಾಗಿ ಎಲ್ಲ ಮುಖಗಳ ಧರ್ಶನ ಸಿಗುತ್ತೆ,,,, ಅದಾದಮೇಲೆ ಗುಡ್ಡ ಹತ್ತಿ ಕೊಂಡು ಹೋಗಲು...ದೊಡ್ಡದಾದ ಮೆಟ್ಟಿಲು ಗಳಿವೆ,,,ಮೆಟ್ಟಿಲು ಹತ್ತುವವರಿಗೆ ಕಷ್ಟ ಆದರೆ,, ಅಂಥವರು,, ಪಕ್ಕದಲ್ಲೇ ಇರುವ,, ಇಳಿಜಾರಾದ ಸಿಮೆಂಟು ನೆಲದ ಮೇಲೆ ನಿದಾನಕ್ಕೆ ಹತ್ತಿಕೊಂಡು ಹೋಗಬಹುದು,,,,
ಗುಡ್ಡ ಹತ್ತಿದ ಮೇಲೆ ಸುಂದರ ಮಂಟಪ, ದೇವಸ್ತಾನ,,, ಅದರಲ್ಲಿ ಪ್ರಶಾಂತ ವಾಗಿ ಇರುವ,,, ಸುಭ್ರಮಣ್ಯ ದೇವರ ಸುಂದರ ಮೂರ್ತಿ .... ಇದೆ,,, ಅದನ್ನ ಎಷ್ಟು ನೋಡಿದರು ಸಾಲದು,,,, ಅಸ್ಟು ಸುಂದರವಾಗಿ ಅಲಂಕಾರ ಮಾಡಿರುತ್ತಾರೆ,,,,
ಈ ಪುಟ್ಟ ಗುಡ್ಡದ ಮೇಲೆ ನಿಂತು ನೋಡಿದರೆ, ಬೃಹತ್ ಬೆಂಗಳೂರಿನ ಕೆಲವು ಭಾಗದ ಸುಂದರವಾದ ನೋಟ ಕಾಣಸಿಗುತ್ತದೆ,,, ಪೂಜೆ ಆದ ನಂತರ ಅಲ್ಲಿ ಕೊಡುವ ಪ್ರಸಾದ ತೆಗೆದುಕೊಂಡು,,,, ಅಲ್ಲೇ ಇರುವ ಮೆಟ್ಟಿಲುಗಳ ಮೇಲೆ ಕುಳಿತು,,,, ಸುಂದರವಾದ ನೋಟ ವನ್ನು ಸವಿಯುತ್ತ ಕಾಲ ಕಳೆಯ ಬಹುದು,,,
ಸಂಜೆಯ ಹೊತ್ತು ಹೋದರೆ ತುಂಬಾ ಪ್ರಶಾಂತ ವಾಗಿ ಇರುತ್ತೆ....
ಈ ದೇವಸ್ತಾನದ ಮುಂದೆ , ಒಂದು ಹೊಸದಾಗಿ ಅಮ್ಮನವರ ಗುಡಿ, ಇದೆ,,, ಹೋದ ಸರಿ ಹೋಗಿದ್ದಾಗ,, ಅಲ್ಲಿ ಇನ್ನು ಅಮ್ಮನವರ ಪ್ರತಿಷ್ಟಾಪನೆ ನಡೆಯುತ್ತ ಇತ್ತು,,,
ಒಟ್ಟಿನಲ್ಲಿ,,, ಜನ ಜಂಗುಳಿಯ ಜಂಜಾಟದಿಂದ , ನೆಮ್ಮದಿ, ಪ್ರಶಾಂತತೆ ಬೇಕೆಂದರೆ,, ಒಮ್ಮೆ ಇಲ್ಲಿಗೆ ಹೋಗಿ ಬರಬಹುದು,,,
( ಮೈಸೂರ್ ರೋಡ್ ---> ರಾಜರಾಜೇಶ್ವರಿ ನಗರದ ಆರ್ಚ್ ----> ಉತ್ತರಹಳ್ಳಿ ಗೆ ಹೋಗುವ ರೋಡ್ ----> ಬೆಸ್ಟ್ ಕ್ಲಬ್ ಅಪಾರ್ಟ್ಮೆಂಟ್ ----> ಸುಬ್ರಮಣ್ಯ ದೇವಸ್ಥಾನ )
ಗುಡ್ಡದ ದೇವಸ್ಥಾನದ ಮೇಲೆ ಇರುವ ಸುಂದರ ಮೂರ್ತಿ
ಮೆಟ್ಟಿಲು ಹತ್ತಿ ಹೋಗುವಾಗ
ನಮ್ಮ ಸುಂದರ ಬೆಂಗಳೂರಿನ ವಿಹಂಗಮ ನೋಟ.....
ಎದುರುಗಡೆ ಇರುವ ಅಮ್ಮನವರ ದೇವಸ್ಥಾನ ದಿಂದ ಒಂದು ನೋಟ....