Sunday, May 31, 2009

Photography revolution!!!! 1.5 Giga pixel image ..ಅದ್ಬುತ !!!

ಹೆಲೋ ಫ್ರೆಂಡ್ಸ್

Technology ಎಷ್ಟು ಮುಂದುವರಿಥ ಇದೆ ಅಂದ್ರೆ...We dont know where it will reach.. ಎಲ್ಲ ಪ್ರಾಡಕ್ಟ್ ನಲ್ಲೂ improvement.. ನ್ಯೂ invention.... ಕೆಲವೊಂದು ಫೀಲ್ಡ್ ನಲ್ಲಿ ಮನುಷ್ಯ ಎಸ್ಟೋ ಮುಂದೆ ಹೋಗಿದ್ದಾನೆ.. ಅದಕ್ಕೆ ಪೂರಕವಾಗಿ ಈ ಕಂಪ್ಯೂಟರ್ Technology ಕೂಡ help ಆಗ್ತಾ ಇದೆ.. ನಿಮಗೆಲ್ಲ ಗೂಗಲ್ earth ಬಗ್ಗೆ ಗೊತ್ತಲ್ಲ.. settelite ನಿಂದ image ತೆಗೆದು ಇಡಿ ವರ್ಲ್ಡ್ ನಲ್ಲಿ ಇರುವ ಸಿಟಿ ನೆಲ್ಲ ರೋಡ್, ಗಲ್ಲಿ ಸಹಿತ ನೋಡ್ಬೋದು .. ಅದರಲ್ಲೂ ಕೂಡ ಇವಾಗ ಕೆಲವೊಂದು ಪ್ಲೇಸ್ ಅನ್ನು ಲೈವ್ ಆಗಿ watch ಮಾಡಬಹುದಂತೆ,,, ಆದರೆ secutity reason ನಿಂದ ಪಬ್ಲಿಕ್ ಗೆ ಅವಕಾಶ್ ಮಾಡಿ ಕೊಟ್ಟಿಲ್ಲ.. ಸರಿ ಇದರ ಬಗ್ಗೆ ಆಮೇಲೆ ಹೇಳ್ತೇನೆ..
ಇವಾಗ ಹೇಳ್ತಾ ಇರೋದು image. ಫೋಟೋ image ಬಗ್ಗೆ. ನಾವೆಲ್ಲ ಇವಾಗ ಡಿಜಿಟಲ್ ಕ್ಯಾಮೆರಾ use ಮಾಡ್ತಾ ಇದ್ದೇವೆ ಅಲ್ವ.. ಮೊದಲು 3 mega pixcel.. ಜಾಸ್ತಿ ಅಂತ ಹೇಳ್ತಾ ಇದ್ವಿ.. ಇವಾಗ 10 ಅಂಡ್ 12 mega pixcel ತನಕ ಕ್ಯಾಮೆರಾ availebility ಇದೆ.. ಇನ್ನು SLR ಕ್ಯಾಮೆರಾ ಗೆ ಹೋದರೆ ಬೇರೆ ಬೇರೆ lense use ಮಾಡಿಕೊಂಡು ಇನ್ನು high resolution photo ತೆಗಿಬೋದು...
ಆದರೆ ನೀವು 1.5 Giga pixcel or 5.5 Giga pixcel ಫೋಟೋ ನೋಡಿದ್ದೀರಾ? !!!!!! ಅಂದ್ರೆ 1 MB capacity ಗಿಂತ 100 ಪಟ್ಟು ಹೆಚ್ಚಿನ resolution ಫೋಟೋ... ಹೌದು Giga pan system ಅನ್ನೋ ಒಂದು ಕಂಪನಿ ಕೆಲವೊಂದು ಕ್ಯಾಮೆರಾ release ಮಾಡಿದೆ .. ಇದರಲ್ಲಿ preloaded software ಇದೆಯಂತೆ.. ಅದು,, ನೀವು ತೆಗೆದ ನಾರ್ಮಲ್ ಫೋಟೋ ಅನ್ನು ಆಟೋಮ್ಯಾಟಿಕ್ ಆಗಿ combine ಮಾಡಿ gigapixcel ಪನೋರಮ ( Landscape ಫೋಟೋ) ರೆಡಿ ಮಾಡುತ್ತಂತೆ..
ಇದರಲ್ಲಿ ತೆಗೆದ ಕೆಲವು ಫೋಟೋಸ್ ನೋಡಿದೆ..... ನಿಜವಾಗ್ಲೂ ಅದ್ಭುತ.... !!!!!!
ಈ ಕ್ಯಾಮೆರಾ ಇಂದ US President Obama , innagural cermany ಫೋಟೋ ತೆಗೆದಿದ್ದಾರೆ.... ಓಹ್,, ಏನ್ ಸಕತ್ ಇದೆ ಗೊತ್ತ.. ಇಲ್ಲಿ ಕೆಳಗೆ ಇರುವ ಲಿಂಕ್ ಅನ್ನು ಕ್ಲಿಕ್ ಮಾಡಿ .. Giga pan ಬ್ರೌಸೆರ್ನಲ್ಲೇ ಓಪನ್ ಆಗುತ್ತೆ.. ಅಲ್ಲೇ side ನಲ್ಲಿ ಇರುವ zoom in and zoom out ನ ಕ್ಲಿಕ್ ಮಾಡ್ತಾ ಹೋಗಿ..... ಅಲ್ಲಿರುವ ಅಸ್ಟು ಜನರ zoom in ಫೋಟೋಸ್ ನ ಎಷ್ಟು clear ಆಗಿ ನೋಡಬಹುದು ಗೊತ್ತ...
http://gigapan.org/viewGigapanFullscreen.php?auth=033ef14483ee899496648c2b4b06233c


ಇದರ ಫೋಟೋ sepcification ನೋಡಿ ಹೀಗೆ ಇದೆ ಅಂತ.. ಇದು 220 images ನ ಸೇರಿಸಿ ಮಾಡಿರೋದಂತೆ. ಇದರ resolution 1474 megapixels (59783 x 24658 pixels) ಎಷ್ಟು ಎಫ್ಫೆಕ್ಟಿವೆ ಆಗಿ ಇದೆ ಅಂದ್ರೆ... ನೀವೇ ಒಮ್ಮೆ ನೋಡಿ ಮಜಾ ಮಾಡಿ... ಈ ಒಂದು Giga pixcel ಫೋಟೋ ನಲ್ಲಿ ಒಟ್ಟು 2355 ಫೋಟೋ ಇದೆ... ನಿದಾನಕ್ಕೆ ಚೆಕ್ ಮಾಡ್ತಾ ನೋಡಿ,, ಎಲ್ಲರ face ಕೂಡ ಎಷ್ಟು ಚೆನ್ನಾಗಿ ಕಾಣುತ್ತೆ ಅಂತ....
Snapshots: 2355
Size: 1.47 gigapixels
Field of View: 194.19 degrees wide, 80.09 degrees high
Stitcher Notes: hide
GigaPan Stitcher version 0.4.3509 (Macintosh)
Panorama size: 1474 megapixels (59783 x 24658 pixels)
Input images: 220 (20 columns by 11 rows)
Field of view: 194.2 degrees wide by 80.1 degrees high (top=47.1, bottom=-33.0)
Settings:
All default settings
Original image properties:
Camera make: Canon
Camera model: Canon PowerShot G10
Image size: 4416x3312 (14.6 megapixels)
Capture time: 2009-01-20 12:02:11 - 2009-01-20 12:19:56
Aperture: f/5.6
Exposure time: 0.004
ISO: 200
Focal length (35mm equiv.): 142.3 mm
Digital zoom: off
White balance: Fixed
Exposure mode: Manual
Horizontal overlap: 34.5 to 52.7 percent
Vertical overlap: 32.6 to 39.2 percent
Computer stats: 3072 MB RAM, 2 CPUs
Total time 6:35:08 (1:47 per picture)
Alignment: 11:08, Projection: 26:49, Blending: 5:57:10

2) ಇದೆ ರೀತಿ ಕೆಲವು ಹವ್ಯಾಸಿ ಫೋಟೋ graphers ಇನ್ನು ಕೆಲವು ಫೋಟೋಗಳನ್ನು Giga pan image ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಿದ್ದರೆ.... ಒಂದಕಿಂಥ ಒಂದು..... We can't belive ಅಸ್ಟು high resolution ಫೋಟೋಸ್ ಇದೆ...
ಫೋಟೋಗ್ರಫಿಕ್ ನಲ್ಲಿ ಆಸಕ್ತಿ ಇರೋವ್ರು ಕೆಳಗೆ ಕೊಟ್ಟಿರುವ ಲಿಂಕ್ ಅನ್ನು ಒಮ್ಮೆ ಕ್ಲಿಕ್ಕಿಸಿ ನೋಡಿ.... ತುಂಬ ಮಾಹಿತಿ ಸಿಗುತ್ತೆ..
ಹಾಗೆ ಡೈರೆಕ್ಟ್ ಅಗ್ಗಿ ಈ ಫೋಟೋ ತೆಗೆದಿರುವವರ ಹತ್ರ .. ನಮ್ಮ questions and ಸಲಹೆ ಪಡ್ಕೋಬೋದು.....
http://gigapan.org/searchGigapansList.php?keywords=&sort=poopular

ಕೆಲವೊಂದು ಫೋಟೋಸ್.. ಮತ್ತೆ image stitcher, ಅದನ್ನ ತೆಗೆದಿರುವ ರೀತಿ,, ಇಟ್ಸ್ really amezing..... ಯಾರೋ ಒಂದು question ಕೇಳಿದ್ದಾರೆ ಇದರಲ್ಲಿ.... ಫೋಟೋಗ್ರಾಫರ್ ಗೆ... ನೀವು ಎಷ್ಟು size ನ ಮೆಮೊರಿ use ಮಾಡ್ತಿರ ಅಂತ.. ಅದಕ್ಕೆ ಅವರು ಹೇಳಿದ್ದರೆ 8 GB cannon ಮೆಮೊರಿ ಕಾರ್ಡ್ ಅಂತ.. ಒಂದು ಸರಿ ಫೋಟೋ ತೆಗೆದರೆ 8GB space utilize ಮಾಡುತ್ತಂತೆ.....ನಾನ್ ಕೇಳಿ ಶಾಕ್ ಅದೇ....
(ಫೋಟೋಗ್ರಫಿ ನಲ್ಲಿ ಆಸಕ್ತಿ ಇರುವವರು ಇದರ ಬಗ್ಗೆ ಇನ್ನು ಗೊತಿದ್ದರೆ ತಿಳಿಸಿ ಹೇಳಬಹುದು... mostly ನಮ್ಮ ಶಿವೂ ಹಾಗೆ ಮಲ್ಲಿಕಾರ್ಜುನ್ ಅವರಿಗೆ ಈ ಸೈಟ್ help ಆಗುತ್ತೆ.. ಹಾಗೆ ಅವರಿಂದ ಕೆಲವು ಮಾಹಿತಿ ಕೂಡ ಸಿಗಬಹುದು ಅಂತ ಅನ್ಕೊಂಡಿದೇನೆ)

http://gigapan.org/
ಗುರು

18 comments:

  1. ಫೋಟೋಗ್ರಫಿ ಬಗ್ಗೆ ಅದ್ಭುತ ಮಾಹಿತಿ

    ReplyDelete
  2. ಗುರು...

    ಫೋಟೊಗ್ರಫಿಯ ಈ ಅದ್ಭುತ ಬೆಳವಣಿಗೆ
    ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು...

    ನನ್ನಲ್ಲಿರು ಈಗಿನ ಕ್ಯಾಮರಾ ಕೂಡ ಔಟ್ ಡೇಟೆಡ್ ಆಗಿಬಿಡುತ್ತದಲ್ಲಾ.....

    ಶಿವು, ಮಲ್ಲಿಕಾರ್ಜುನ್ ಹಾಗೆ ಇನ್ನೊಬ್ಬ ಛಾಯಾ ಬ್ಲಾಗಿಗರಿದ್ದಾರೆ...
    "ಅನುಭವ ಮಂಟಪದ ಪಾಲಚಂದ್ರ"

    ಉತ್ತಮ ಮಾಹಿತಿಗಾಗಿ ವಂದನೆಗಳು....

    ReplyDelete
  3. ಹರೀಶ್ ..
    ತುಂಬ ಧನ್ಯವಾದಗಳು ಸರ್.

    ReplyDelete
  4. ಪ್ರಕಾಶ್
    ನಿಮ್ಮ ಬಿಡುವಿಲ್ಲದ ಕೆಲಸದ ಮದ್ಯ ನನ್ನ ಬ್ಲಾಗಿಗೆ ಬಂದು ಪ್ರತಿಕ್ರಿಯಿಸಿದ್ದಕೆ ಧನ್ಯವಾದಗಳು,,
    ಹೌದಲ್ವ ಪಾಲ ಅವರನ್ನು ಬಿಟ್ ಇದ್ದೆ .. .... ತಿಳಿಸಿದಕ್ಕೆ ಧನ್ಯವಾದಗಳು....
    ಹೀಗೆ ಬರುತ್ತಿರಿ

    ಗುರು

    ReplyDelete
  5. ಒಳ್ಳೆಯ ಮಾಹಿತಿ

    ReplyDelete
  6. ಫೋಟೋಗ್ರಫಿ ಬಗ್ಗೆ ನಿಮಗಿರುವ ತಿಳುವಳಿಕೆ, ಜ್ಞಾನ, ನೀವು ಅದನ್ನು ಬ್ಲಾಗಿಗರೊ೦ದಿಗೆ ಹ೦ಚಿಕೊಳ್ಳುವ ಬಗೆ ಅನುಪಮ. ಕ್ಯಾಮರಾ ವಿಚಾರದಲ್ಲಿ, ಅದರ ತಾ೦ತ್ರಿಕ ಅ೦ಶಗಳ ಕುರಿತಾಗಿ ನಾನೊಬ್ಬ ಅಜ್ಞಾನಿ, ನಿಮ್ಮ ಲೇಖನಗಳು ನನಗೆ ಆ ಕೊರತೆ ತು೦ಬುವಲ್ಲಿ ಸಹಕಾರಿ. ಆ ಮಟ್ಟಿಗೆ ನಾನು ಧನ್ಯ. ನಿಮ್ಮ೦ತಹ ಬ್ಲಾಗಿಗ ಮಿತ್ರರಿ೦ದ ಹಲವಾರು ವಿಷಯ ತಿಳಿದುಕೊಳ್ಳುವ ಅವಕಾಶ ನನಗೆ ದಕ್ಕಿದೆ.

    ReplyDelete
  7. ಗುರು,

    ನೀವು ನಿನ್ನೆ ಹೇಳಿದಾಗಲೇ ನನಗೆ ಕುತೂಹಲ ಉಂಟಾಗಿತ್ತು.

    ಇಲ್ಲಿ ಕೊಟ್ಟಿರುವ ಮಾಹಿತಿಯನ್ನು ಮತ್ತೊಮ್ಮೆ ನಿದಾನವಾಗಿ ಓದಬೇಕೆನಿಸಿದೆ...ಮತ್ತೆ ಅವರು ಉಪಯೋಗಿಸುವ ತಾಂತ್ರಿಕವಿವರಗಳ ಬಗ್ಗೆ ತಿಳಿದುಕೊಳ್ಳಬೇಕೆನಿಸಿದೆ...ಮತ್ತೆ ನಮಗೆ ಗೊತ್ತಿರುವಂತೆ ಈಗ ೨೬.೫ ಮೆಗಾ ಪಿಕ್ಸಲ್ ಕ್ಯಾಮೆರಾ ಕ್ಯಾನನಲ್ಲಿ ಬಂದಿದೆ. ಅದನ್ನು ನಮ್ಮ ಫೋಟೋಗ್ರಫಿ ಮ್ಯಾಗಜಿನ್ ನಲ್ಲಿ ನೋಡಿದ್ದೇನೆ. ಈಗ ಅದಕ್ಕಿಂತ ದೊಡ್ದದಾಗ[ಮೆಗಾ ಪಿಕ್ಸೆಲ್] ಕ್ಯಾಮೆರಾ ನೋಡಬೇಕೆನಿಸಿದೆ...

    ಮತ್ತೆ ನಮ್ಮ ಕ್ಯಾಮೆರಾದಲ್ಲಿ ನಾವು ಕೆಲವೊಮ್ಮೆ raw formatನಲ್ಲಿ ಕ್ಲಿಕ್ಕಿಸಿದಾಗ ಒಮ್ಮೆ ಒಂದು image 80MB ಇತ್ತು. ಈಗಲೂ ನಾವು raw format ನಲ್ಲಿ ಕ್ಲಿಕ್ಕಿಸಿದಾಗ 40 ರಿಂದ 50 MB ಇರುತ್ತದೆ.

    ಆದ್ರೆ ನನಗೆ ಹೆಚ್ಚು ಕುತೂಹಲವಿರುವುದು ಫೋಟೋ ತೆಗೆದರೆ 8 GB ಕಾರ್ಡು ಖರ್ಚಾಗುವ ಬಗ್ಗೆ. ಇರಲಿ ಉತ್ತಮ ಉಪಯುಕ್ತ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.

    ReplyDelete
  8. Hi Guru,
    Thank you for the informative article

    ReplyDelete
  9. ಧನ್ಯವಾದಗಳು ಮನಸು....

    ReplyDelete
  10. ಧನ್ಯವಾದಗಳು ಮನಸು....

    ReplyDelete
  11. ಪರಾಂಜಪೆ,,,
    ಇದರಲ್ಲಿ ಏನ್ ಇದೆ,, ನನಗೆ ಗೊತ್ತಿರುವ ವಿಚಾರಗಳನ್ನು ನನ್ನ ಬ್ಲಾಗಿನಲ್ಲಿ ಹಾಕ್ತಾ ಇದೇನೇ ಅಸ್ತೆ.. ಇದರಿಂದ ಗೊತ್ತಿಲ್ಲದೆ ಇರುವವರು ನೋಡಲಿ ನೋಡಿ ತಿಳಿದುಕೊಳ್ಳಲಿ ಅಂತ....ಅಸ್ತೆ
    ಗುರು

    ReplyDelete
  12. ಹೌದು ಶಿವೂ...
    ಇವರ ಕಾಮೆಂಟ್ಸ್ ನೋಡಿ ನಾನು ತುಂಬ ಆಶ್ಚರ್ಯ ಪಟ್ಟೇ... ಒಂದು ಸರಿ ಫೋಟೋ ತೆಗಿಬೇಕದ್ರೆ ಎಷ್ಟು ಇಮಗೆಸ್ ಒಟ್ಟಿಗೆ ಸೇವ್ ಆಗ್ಬೋದು... ಅದಕ್ಕೆ 8GB ಅಸ್ತು ಸೇವ್ ಆಗುತ್ತೆ ಅಂತ ಕಾಣುತ್ತೆ .....
    ನೀವು ಫೋಟೋ ನೋಡಿದಿರಾ... ಎಷ್ಟು ದೊಡ್ಡ landscape ನ...ಫೋಟೋ,,, ಹಾಗೆ ಎಷ್ಟು ಸ್ಪಷ್ಟ ಇದೆ ಅಲ್ವ... resolution ಅಂಡ್ ಕ್ವಾಲಿಟಿ ವೆರಿ ನೈಸ್.. ಒಮ್ಮೆ ಇ ಸೈಟ್ ನೋಡಿ....ಎಸ್ಟೋ ಫೋಟೋಗ್ರಫಿ ವಿಷಯಗಳು ಇದೆ.. image stiching ಅಂತ ಹೊಸ ಕಾನ್ಸೆಪ್ಟ್... ನನಗೆ ಇದರ ಬಗ್ಗೆ ಗೊತ್ತಿರಲಿಲ್ಲ ....ನಿಮಗೆ ಏನಾದರೂ ತಿಳಿದಾಗ ನಮಗೂ ತಿಳಿಸಿ ಹೇಳಿ
    ಗುರು

    ReplyDelete
  13. ಥ್ಯಾಂಕ್ಸ್ ಶಿವಪ್ರಕಾಶ್

    ReplyDelete
  14. ಗುರು,

    ನೀವು ಕೊಟ್ಟ ಮಾಹಿತಿಯ ಹಿಂದೆ ಬಿದ್ದಿದ್ದೇನೆ...ನನಗೂ ಕುತೂಹಲವಾಗಿರುವುದು image stiching ಅನ್ನುವ ಹೊಸ ಕಾನ್ಸೆಪ್ಟ್. ನೋಡೋಣ ಎಲ್ಲಿ ಹೋಗುತ್ತೇ ನಮಗಲ್ಲದೇ ಇನ್ಯಾರಿಗೆ ಅದನೆಲ್ಲಾ ಮಾಡಿರುವುದು ಅಲ್ವಾ.. ಹೀಗೆ ಹುಡುಕಾಟದಲ್ಲೇ ಮಜವಿದೆಯಲ್ಲವೇ...
    ಧನ್ಯವಾದಗಳು.

    ReplyDelete
  15. "ಇನ್ನು SLR ಕ್ಯಾಮೆರಾ ಗೆ ಹೋದರೆ ಬೇರೆ ಬೇರೆ lense use ಮಾಡಿಕೊಂಡು ಇನ್ನು high resolution photo ತೆಗಿಬೋದು..."

    ನಿಮ್ಮ ಮೇಲಿನ ಹೇಳಿಕೆ ಸರಿ ಅಲ್ಲಾಂತ ನನ್ನಭಿಪ್ರಾಯ. ಲೆನ್ಸ್ಗೂ resolutionಗೂ ಏನು ಸಂಬಂಧ?

    ReplyDelete
  16. ಪಾಲ ರವರೆ,,,
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು....
    ನಾನು ಇದರಲ್ಲಿ ಅಂದ್ರೆ ಫೋಟೋಗ್ರಫಿ ನಲ್ಲಿ ಅಸ್ಟು ಅನುಭವಸ್ತನಲ್ಲ,. SLR ಕ್ಯಾಮೆರಾ ದಿಂದ ಬೇರೆ ಲೆನ್ಸ್ use ಮಾಡಿ ತೆಗೆದರೆ ಇಮೇಜ್ quality ಚೆನ್ನಾಗಿ ಇರುತ್ತೆ ಹಾಗೆ ಒಳ್ಳೆ resolution ಇರುತ್ತೆ ಅನ್ನೋ ಅರ್ಥದಲ್ಲಿ ಹೇಳಿದೆ.. ಇದರಲ್ಲಿ ತಪ್ಪಿದ್ದರೆ ಕ್ಷಮಿಸಿ... ಹಾಗೆ ಯಾವುದು ಸರಿ ಅಂತ ತಿಳಿಸಿ ಹೇಳಿ... ಅದಕ್ಕೆ ಶಿವೂ ಮತ್ತೆ ಮಲ್ಲಿ ಅವರ Suggestion ಕೇಳಿದ್ದು .
    ಹೀಗೆ ಬರುತ್ತಿರಿ ... ನಿಮ್ಮ ಬ್ಲಾಗಿನ ಫೋಟೋ ಗಳಲೆಲ್ಲವು ತುಂಬ ಚೆನ್ನಾಗಿ ಇದೆ...
    ಗುರು

    ReplyDelete
  17. ಗುರು,
    ರೆಸೊಲುಶನ್ ಕ್ಯಾಮರಾ ಮೇಲೆ ಡೆಪೆಂಡ್ ಆಗುತ್ತೆ. ಒಂದು ಕ್ಯಾಮರಾ ರೆಸೊಲುಶನ್ ೧೦ ಮೆಗಾ ಪಿಕ್ಸೆಲ್ ಇತ್ತು ಅಂದ್ರೆ, ಯಾವ ಲೆನ್ಸ್ ಉಪಯೋಗಿಸಿದರೂ ಅದು ೧೦ತ್ತೇ ಇರುತ್ತೆ.

    ಬೇರೆ ಬೇರೆ ಲೆನ್ಸ್ ಬೇರೆ ಬೇರೆ ತರದ ಪೋಟೋಗ್ರಫಿಲಿ ಉಪಯೋಗಿಸ್ತಾರೆ. ಕೀಟಗಳ, ಚಿಕ್ಕ ಪುಟ್ಟ ವಿಷಯಕ್ಕೆ ಮ್ಯಾಕ್ರೋ ಲೆನ್ಸು, ಪೋರ್ಟ್ರೈಟಗಳಿಗೆ ಸಾಮಾನ್ಯ ಜೂಮಿನ ಲೆನ್ಸ್, ಹಕ್ಕಿಗಳ ಕಾಡಿನಪ್ರಾಣಿಗಳ ಫೋಟೋಗೆ ಇನ್ನೂ ಹೆಚ್ಚಿನ ಜೂಮು, ಹಾಗೆಯೇ ಆಕಾಶ ಕಾಯಗಳ ಚಿತ್ರ ತೆಗೆಯೋಕೆ ಇನ್ನೂ ಹೆಚ್ಚಿನ ಜೂಮು.. ಲ್ಯಾಂಡ್ಸ್ಕೇಪಿಗೆ ವೈಡ್ ಆಂಗಲ್ ಲೆನ್ಸ್.. ಹೀಗೆ

    ಈ ಮೇಲಿನ ಯಾವ ಲೆನ್ಸ್ ಉಪಯೋಗಿಸಿದರೂ ಎಸ್.ಎಲ್.ಆರ್.ನ ರೆಸೊಲುಶನ್ ಒಂದೇ.

    ReplyDelete
  18. Thanks for the information Pala..

    ReplyDelete