Saturday, July 25, 2009

ಮರದ ಸ್ಕೂಟರ್ ......ನೋಡಿದಿರಾ?

ಮನುಷ್ಯನ ತಲೆಗೆ ಏನಾದರೂ ಮಾಡಬೇಕು ಅಂತ ಬಂದರೆ......ಅದಕ್ಕೆ ಸರಿಯಾಗಿ ಛಲ ಅಂತ ಒಂದು ಇದ್ದರೆ... ಏನ್ ಬೇಕಾದರು ಮಾಡಿ ಬಿಡುತ್ತಾನೆ ಅನ್ನೋದಕ್ಕೆ ಇದು ಒಂದು ಉದಾಹರಣೆ.......(ನಮ್ಮಂಥ ಸೋಮಾರಿಗಳನ್ನು ಹೊರತುಪಡಿಸಿ :-)) ಅದಕ್ಕೆ ಅಲ್ವ... ಪ್ರಕೃತಿ ಯನ್ನು ಕೂಡ ಬಿಡದೆ.... ಎಲ್ಲ ನಮಗೆ ಬೇಕಾದ ಹಾಗೆ ಬದಲಾಯಿಸಿ ಕೊಳ್ಳುತ್ತಿರುವುದು.... ಇರಲಿ,, ಇವಾಗ ನಾನು ಹೇಳಲು ಹೊರಟಿರುವುದು..ಒಬ್ಬರ ಕ್ರಿಯೇಟಿವಿಟಿ ಬಗ್ಗೆ.. ಹಾಗೆ ಅವರ ಛಲ ದ ಬಗ್ಗೆ....
Carlos Alberto ಅನ್ನೋ ಒಬ್ಬ Portuguese carpenter .. ಇವರು, ತಮ್ಮಲ್ಲಿ ಇರುವ ಕಲೆಯನ್ನು ಹೇಗಾದರೂ ಮಾಡಿ... ಸುದ್ದಿ ಮಾಡಬೇಕು ಅಂತ ಯೋಚಿಸುತ್ತಾ ಇದ್ದರಂತೆ....ಅವಗ ಇವರ ಕಣ್ಣಿಗೆ ಕಾಣಿಸಿದ್ದು... ಗೋಡನ್ ನಲ್ಲಿ ಬಿದ್ದಿರುವ ಒಂದು ಹಳೆ ವೆಸ್ಪ ಸ್ಕೂಟರ್.....(ಗೊತ್ತಲ್ವ... ನಮ್ಮ ಹಳೆ ಕಾಲದ...ಹ್ಯಾಂಡ್ gear ಸ್ಕೂಟರ್... ಇವಗಂತು ನೋಡಕ್ಕೆ ಸಿಗೋದು ಸ್ವಲ್ಪ ಅಪರೂಪನೆ ಅಲ್ವ ) .. ಸರಿ ಇದನ್ನು ನೋಡ್ತಾ ಒಂದು ಯೋಚನೆ ಇವರಿಗೆ ಹೊಳೆಯಿತಂತೆ ...ನಾನು ಯಾಕೆ ಇದೆ ಮಾದರಿಯ,,, wooden ಸ್ಕೂಟರ್ ಮಾಡಬಾರದು ಎಂದು . ಇನ್ನೇನು... ಈ ತರಹದ ಯೋಚನೆ ಬಂದ ಕೂಡಲೇ ಅವರ ಒಳಗಿನ ಕಲೆಗಾರ ಎದ್ದು ಕುಳಿತುಬಿತ್ ಇದ್ದ.... ಅದಕ್ಕೆ ಸರಿಯಾಗಿ ಅವರ ಮಗಳು ಅಪ್ಪನಿಗೆ ಸಾತ್ ಕೊಡೋದಕ್ಕೆ ನಿಂತುಕೊಂಡಳು.....ಅದಾದ ಮೇಲೆ ಮುಂದಿನದು ಇತಿಹಾಸ.....ಕೊನೆಗೂ,,, ತನ್ನ ಛಲ ಬೇಡದೆ.....ಏನು ಅನ್ನುದೊಕೊಂಡ್ ಇದ್ದರೋ ಅದನ್ನು ಸಾದಿಸೆ ಬಿಟ್ಟರು....engine ಮಾತ್ರ ಹಳೆಯ ವೆಸ್ಪ ಸ್ಕೂಟರ್ ದು.... ಹಾಗೆ suspensions and wheels ಇದೆರಡು... ಮೆಟಲ್ ನಿಂದ ಮಾಡಿದ್ದೂ ಅಸ್ಟೆ... ಮಿಕ್ಕಿದೆಲ್ಲ ಬರಿ ಮರ........ಇದರ ಬಗ್ಗೆ ನಾನು ಏನು ಹೇಳೋದಿಲ್ಲ... ನೀವೇ ನೋಡಿ ಇವರ ಫೋಟೋಗಳೇ ಕತೆ ಹೇಳುತ್ತವೆ.........
ಅಂದ ಹಾಗೆ ಇದರ ಹೆಸರು Vespa Daniela ಅಂತೆ.. ಇದನ್ನು ತಮ್ಮ ಮಗಳಿಗೋಸ್ಕರ dedicate ಮಾಡಿ ತಯಾರಿಸಿರುವುದಂತೆ.... ಸೂಪರ್ ಅಪ್ಪ ಅಲ್ವ .....





















http://www.carpintariacarlosalberto.com/ ಇದು ಇವರ ಅದಿಕೃತ ವೆಬ್ ಸೈಟ್.... ಆದರೆ ಸೆಕ್ಯೂರಿಟಿ reason ನಿಂದ ಓಪನ್ ಮಾಡೋಕೆ ಆಗೋಲ್ಲ... ಪರ್ಸನಲ್ usege ಮಾತ್ರ ಇಟ್ಕೊಂಡ್ ಇದ್ದರೆ ಅಂತ ಕಾಣುತ್ತೆ.

19 comments:

  1. ಗುರು...

    ಎಂಥೆಂಥಾ ಜನರಿರ್ತಾರಪ್ಪಾ...!
    ಏನು ಕ್ರಿಯೇಟಿವಿಟಿ....!!

    ಹೇಳಲು ಶಬ್ಧಗಳೇ ಉಳಿದಿಲ್ಲ...

    ಎಷ್ಟು ಸೊಗಸಾಗಿದೆ ಮರದ ಸ್ಕೂಟರ್....!!

    ವಾಹ್...!

    ReplyDelete
  2. ಗುರು ಅವರೆ ,
    ಯಾವಾಗಿನ ಹಾಗೆ ಅದ್ಬುತ ಗಳನ್ನು ತೋರಿಸುವ ನಿಮ್ಮ ಕಾಯಕವನ್ನು ಮು೦ದುವರಿಸಿದ್ದಿರಿ ...
    ಹೇಳಲು ಪದಗಳೇ ಇಲ್ಲ ... ಅವರ ಕಲಾ ನೈಪುಣ್ಯಕ್ಕೆ ನಮೋನಮಃ

    ReplyDelete
  3. ಗುರು,

    ನಿಜಕ್ಕೂ ಇದು ಕ್ರಿಯೇಟಿವಿಟಿ ಅನ್ನಿಸಿದರೂ ಅದರ ಬಗ್ಗೆ ಡೆಡಿಕೇಶನ್ ತುಂಬಾ ಇಷ್ಟವಾಯಿತು. ಪ್ರತಿಯೊಂದು ಹಂತವನ್ನು ಈ ರೀತಿ ಪರೆಪೆಕ್ಟ್ ಆಗಿ ತೊಡಗಿಸಿಕೊಳ್ಳುವ ತಾಳ್ಮೆಗಾಗಿ ಆತನಿಗೆ ನನ್ನ ನಮನ....ಅದನ್ನು ನಮಗಾಗಿ ತಂದಿದ್ದಕ್ಕೆ ನಿಮಗೂ ನಮನ...

    ಮುಂದುವರಿಯಲಿ.....ಇನ್ನಷ್ಟು ಮತ್ತಷ್ಟು....ಗುರುಯಾನ.

    ReplyDelete
  4. ವಾವ್!
    ವಿಚಿತ್ರವಾದ ವಿಷಯ...ಊಹೆ ಕೂಡ ಮಾಡಿರಲಿಲ್ಲ

    ReplyDelete
  5. ಪ್ರಕಾಶ್
    ಹೌದು ರೀ.....ಇವರಿಂದ ನಾವು ನೋಡಿ ಕಲಿಯುವುದು ತುಂಬ ಇದೆ....ನೋಡೋಕೆ ಎಷ್ಟು ಖುಷಿ ಇರುತ್ತೆ ಅಲ್ವ.....ನಿಜಕ್ಕೂ gr8

    ReplyDelete
  6. Exactly roopashri....its really amezing!!!

    ReplyDelete
  7. ರೂಪ,
    ಅವರ ಕಲ ನೈಪುಣ್ಯ ಮೆಚ್ಚಿ ಹೊಗಳಿದ್ದಕ್ಕೆ ಧನ್ಯವಾದಗಳು....

    ReplyDelete
  8. ಹೌದು ಶಿವೂ,,, ನನಗು ಹಿಡಿಸಿದ್ದು,, ಅವರ dedicatation ವರ್ಕ್.... ತುಂಬ ಕಷ್ಟ ಇರುತ್ತೆ,,, ಅಸ್ತು ಸುಲಭ ಅಲ್ಲ....ಈ ರೀತಿ ಮಾಡುವುದು......ಅಲ್ವ... ನಿಜವಾದ ಸ್ಕೂಟರ್ ತಯಾರಾಗಬೇಕು ಅಂದ್ರೆ. ಎಷ್ಟು ಜನ ವರ್ಕ್ ಮಾಡ್ತಾರೆ... ಬಾಡಿ ಬಿಲ್ದಿಗ್ನ್ ಒಂದು ಕಡೆ..ಇನ್ನೊದು ಪಾರ್ಟ್ ಒಂದು ಕಡೆ....ಆದರೆ ಎಲ್ಲವನ್ನು ಬರಿ ಮರದಲ್ಲೇ ಒಬ್ಬರೇ ಮಾಡುವುದು ಅಂದ್ರೆ ಸುಮ್ನೆ ಅಲ್ಲ...
    hats of to that person...

    ReplyDelete
  9. ಅಂತರ್ವಾಣಿ..
    ಹೌದು... ನಮಗೆ ಊಹೆ ಮಾಡುವುದಕ್ಕೂ ಕಷ್ಟ... ಅಂತದ್ರಲ್ಲಿ.. ಮಾಡಲೇಬೇಕು ಅಂತ ಮಾಡಿದ್ದರಲ್ವ... he is gr8 ಪರ್ಸನಾಲಿಟಿ
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...

    ReplyDelete
  10. ಗುರು ಅವರೇ,
    ಅಧ್ಬುತಗಳನ್ನು ಸೃಷ್ಟಿಸುವ ಮಹಾತ್ಮರಿಗೂ, ಅದನ್ನು ನಮ್ಮವರೆಗೂ ತಲುಪಿಸುವ ಪುಣ್ಯಾತ್ಮರಿಗೂ, (ನಿಮಗೆ) ಶಿರಸಾಭಿವಂದನೆಗಳು!

    ReplyDelete
  11. Wonderful ಗುರು. ಈ ಪ್ರಪಂಚದಲ್ಲಿ ಎಂತೆಂತಾ ಅದ್ಭುತ ಜನರಿರ್ತಾರೆ ಅಲ್ವಾ? ಅದಕ್ಕಾಗೇ ಈ ಪ್ರಪಂಚ ಇಷ್ಟವಾಗುತ್ತಾ? ಗೊತ್ತಿಲ್ಲ. ಅಂತಹ ಅಪ್ಪ, Carpenter, ಕ್ರಿಯಾಶೀಲ ವ್ಯಕ್ತಿಯನ್ನು ಪರಿಚಯಿಸಿದ್ದಕ್ಕೆ ನಿಮಗೆ ಧನ್ಯವಾದಗಳು.

    ReplyDelete
  12. SSK ರವರೆ ನನ್ನನು ಪುಣ್ಯಾತ್ಮನಿಗೆ ಹೋಲಿಸಿದ್ದಿರ.... ಹಾ ಹಾ ನಗು ಬರ್ತಾ ಇದೆ...

    ReplyDelete
  13. ಪ್ರತಿಕ್ರಿಯೆಗೆ ಧನ್ಯವಾದಗಳು ಮಲ್ಲಿಕಾರ್ಜುನ್ :-)

    ReplyDelete
  14. ಗುರು,

    ಮರದ ಸ್ಕೂಟರ್ ನಿಜಕ್ಕೂ ಸುಂದರವಾಗಿದೆ.
    ನನಗೂ ಒಂದು ಕೊಡುಸ್ತಿರಾ?

    ReplyDelete
  15. ಗುರು..
    ಸ್ಕೂಟರ್ ತುಂಬ ಚೆನ್ನಾಗಿದೆ. ಅವರ ಡೆಡಿಕೇಶನ್ ತುಂಬಾ ಇಷ್ಟವಾಯಿತು.

    ReplyDelete
  16. ರಾಜೀವ,
    ಮರದ ಸ್ಕೂಟರ್ ಇಷ್ಟ ಪಟ್ಟಿದಕ್ಕೆ ಧನ್ಯವಾದಗಳು ... ಆದರೆ ಅಲ್ಲಿಗೆ ಸ್ಕೂಟರ್ ಕೊಡಿಸೋಕೆ ನನ್ನಿಂದ ಆಗೋಲ್ಲ....ಬೇಕಾದರೆ ಒಂದು ಆಟ ಆಡುವ ಮರದ ಸ್ಕೂಟರ್ ಕೊಡಿಸುತ್ತೇನೆ.... ಬೇಕ :-)

    ReplyDelete
  17. ಗೌತಮ್
    ನನ್ನ ಬ್ಲಾಗಿಗೆ ಸ್ವಾಗತ... ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.....ಹೀಗೆ ಬರುತ್ತಿರಿ....

    ReplyDelete