ನಮ್ಮ ನಿಜ ಜೀವನದಲ್ಲಿ ಎಲ್ಲೊ ಅಪರೂಪ ಒಂದು ಒಳ್ಳೆ ಕ್ರಿಯೇಟಿವ್ ವಸ್ತು ವನ್ನ ಕಾಣೋದು ಅಲ್ವ... ಹಾಗಂತ ಏನು ಚೆನ್ನಾಗಿ ಇರೋಲ್ಲ ಅಂಥ ಅಲ್ಲ ತುಂಬ ಚೆನ್ನಾಗಿ beautifull ಆಗಿ ಇರುತ್ತೆ ಆದ್ರೆ ಎಲ್ಲ ಒಂದೇ ಥರ ಇರುತ್ತೆ, ಅಂಥಹ ವಸ್ತುವನ್ನ ಮೊದಲೇ ಎಲ್ಲೊ ನೋಡಿದ ಹಾಗೆ ಅನ್ನಿಸಿರುತ್ತದೆ... different ಅಂಥ ಅನ್ನಿಸೋದೇ ಇಲ್ಲ .
recent ಆಗಿ ನಮ್ಮ ಕಂಪನಿ ಇಂದ Goldan Pam ರೆಸಾರ್ಟ್ ಗೆ ಹೋಗಿದ್ದೆ , ಅಲ್ಲಿ ನೋಡೋಕೆ ಎಲ್ಲ ಚೆನ್ನಾಗಿ ಇದ್ದವು,, ಅದೇ ಶಿಲ್ಪಾ ಕಲೆಗಳು, ಹುಲ್ಲು ಹಾಸು, ದೊಡ್ಡ ಸ್ವಿಮಿಂಗ್ ಪೂಲ್ , ಏನೋ different ಆಗಿ ಇರುವ ವಸ್ತು ಇಲ್ಲವೇನೋ ಅಂಥ ಅನ್ನಿಸುತ್ತಿರಬೇಕಾದರೆ ಒಂದು ಚಿಕ್ಕ fountain ಕಣ್ಣಿಗೆ ಬಿತ್ತು.. ಚಿಕ್ಕದಾದರೂ ಏನೋ ಒಂದು ಹೊಸತನ,,, ಕ್ರಿಯೇಟಿವಿಟಿ ಅದರಲ್ಲಿ ಇತ್ತು , ಅದನ್ನೇ ನೋಡ್ತಾ ಸ್ವಲ್ಪ ಸಮಯ ಅದರ ಬಗ್ಗೆನೇ ಯೋಚನೆ ಮಾಡ್ತಾ ಇದ್ದೆ,, ಇದೆ ಥರ ಏನಾದರೂ different ಆಗಿ ಇರೋದನ್ನ ಮಾಡ್ತಾ ಇದ್ದರೆ ಎಷ್ಟು ಚೆನ್ನಾಗಿ ಇರುತ್ತೆ ಅಲ್ವ ಅಂಥ..... ಹೌದಲ್ವ.. ಇಂತದಕ್ಕೆ ತುಂಬ ಕರ್ಚು ಮಾಡಿ ಏನು ಮಾಡಬೇಕಾಗಿ ಇರೋಲ್ಲ .. ಇರುವ ವಸ್ತುವಿನಲ್ಲೇ ಸ್ವಲ್ಪ different ಆಗಿ ಇರೋ ಥರ ಮಾಡಬೋದು.....
ಇದೆ ರೀತಿ ಬೆಳಗಾವಿ ಮಹಾರಾಷ್ಟ್ರದ ಗಡಿ ನಲ್ಲಿ,, ಸಿಮೆಂಟ್ ನಲ್ಲಿ ಮಾಡಿದ ಹಳ್ಳಿ ಮಾದರಿಯ ಕಲಾಕ್ರುತಿಗಳು ತುಂಬ ಪ್ರಸಿದ್ದಿ ಪಡೆದಿವೆ ಅಂತೆ...ಶಿರಡಿಗೆ ಹೋಗಬೇಕಾದರೆ ದಾರಿನಲ್ಲಿ ನೋಡಿಕೊಂಡು ಹೋಗಿದ್ವಿ,, ಆದರೆ ಫೋಟೋಗಳನ್ನ ಇನ್ನೊಮ್ಮೆ ನಿಮ್ಮ ಜೊತೆ ಹಂಚಿಕೊಲ್ತೇನೆ.. ಅದನ್ನ ನೋಡಿ ಏನೋ ಒಂದು ಥರ ಕುಷಿ ಅನ್ನಿಸ್ತು.... ಹೀಗೆ ಒಳ್ಳೆ ಪ್ರೋಸ್ತಹ ಸಿಕ್ಕರೆ ನಮ್ಮಲ್ಲೂ ಒಳ್ಳೆ ಪ್ರತಿಬೆಗಳು ಇದ್ದಾರೆ ಅವರಿಂದ ಒಳ್ಳೆ ಒಳ್ಳೆ ಹೊಸತನವನ್ನು ಪಡೆಯಬಹುದು.....
ಹಾಂ ಈ ವಿಚಾರ ನನ್ನ ತಲೆ ನಲ್ಲಿ ಯಾಕೆ ಬಂತು ಅಂದ್ರೆ... ಈ ಕೆಳಗಿನ ಚಿತ್ರಗಳನ್ನು ನೋಡಿ ,,, ಮಾಡಕ್ಕೆ ಏನು ಕೆಲಸ ಇಲ್ಲವೇನೋ ಅನ್ನುವಂತೆ,,, ಚಿತ್ರ ವಿಚಿತ್ರ ವನ್ನು ಮಾಡಿದ್ದಾರೆ ಇದನ್ನು ನೋಡಿ ಯೋಚಿಸುತ್ತಾಇರಬೇಕಾದರೆ ನನಗು ಈ ಯೋಚನೆ ಗಳು ಬಂದವು,,, ನೀವು ನೋಡಿ,, ಈ ಥರದಹ ವಿಚಿತ್ರ ಯೋಚನೆ ಬಂದರೆ,, ಅಥವಾ ವಿಚಿತ್ರ ಕಲೆಗಳನ್ನು ನಿಮ್ಮ ಸುತ್ತ ಮುತ್ತ ನೋಡಿದ್ದರೆ ,, ನನ್ನ ಜೊತೆಗೂ ಹಂಚಿ ಕೊಳ್ಳಿ.....

ಸುಮ್ನೆ ಹಾಗೆ ...ಯಾರೋ ನೆತಾಡೋ ತರ ಮನುಷ್ಯನ ಅಕ್ರುತಿಯನ್ನ ಮಾಡಿ ಬಿಟ್ ಇದ್ದಾರೆ ಅಸ್ಟೆ....

ಸರಿಯಾಗಿ ನೋಡಿ, ಕುದುರೆ ಮೇಲೆ ಅಲ್ಲ ಕೂತಿರೋದು,,, ಉಲ್ಟಾ ಆಗಿ....

ರಬ್ಬರ್ ನಲ್ಲಿ ಮಾಡಿರೋದು