Saturday, May 2, 2009

ಕ್ರಿಯೇಟಿವಿಟಿ ಇನ್ advertisement....

ಹಾಯ್ ಫ್ರೆಂಡ್ಸ್
ನೀವು ಇವಾಗ ನಡಿತ ಇರೋ 20 - 20 IPL ಮ್ಯಾಚ್ ನೋಡ್ತಾ ಇದ್ದೀರಾ ಅಲ್ವ. ಹಾಂ...... ನಾನು ಇವಾಗ ಈ ಮ್ಯಾಚ್ ಬಗ್ಗೆ ಮಾತಾಡ್ತಾ ಇಲ್ಲ ...... ಆದರೆ ಅದರಲ್ಲಿ ಬರುವ ಒಂದು advertisement , vadaphone ದು ,, ಅದರ ಬಗ್ಗೆ ಹೇಳೋಕೆ ಹೊರಟಿದೇನೆ? ನೀವು ಈ ಹೊಸ adverstisement ನೋಡಿದಿರಾ?.



Zoozoo ಹೊಸ ಬ್ರಾಂಡ್ advertisement. vadaphone ದು,,,, ಎಷ್ಟು ಚೆನ್ನಾಗಿ ಇದೆ ಅಲ್ವ... ಪುಟ್ಟ ಪುಟ್ಟ ವೈಟ್ Zoozoo ads. ಸಕತ್ ಮಜಾ ಇರುತ್ತೆ ಅಲ್ವ.. ಕೆಲವೊಂದ್ advertise ಬಂದ್ರೆ ನಾವು ಚಾನೆಲ್ ನೆ ಚೇಂಜ್ ಮಾಡಿ ಬಿಡ್ತ್ಹೇವೆ.... ಆದರೆ ಇಂಥ ಒಳ್ಳೆ atractive advertisements ಇದ್ರೆ ನೋಡೋಕು ಒಳ್ಳೆ ಮಜಾ ಇರುತ್ತೆ...
ಎಷ್ಟು ಚೆನ್ನಾಗಿ ಅನಿಮೇಷನ್ ಮಾಡದಿದ್ದರೆ ಈ ವೈಟ್ ಬೊಂಬೆಗಳನ್ನು ಅಂತ ಅನ್ನಿಸಿರಬೇಕು ಅಲ್ವ ನಿಮಗೆ .........ಹಾ ಹಾ..... ಇದೆ ತಪ್ಪು... ಇದು ಅನಿಮೇಶನ್ ಅಲ್ಲರಿ.... ಇದಾನ್ನು ಮಾಡಿರುವವರು ಮನುಷ್ಯರು........ಆಹಾ ...ಆಶ್ಚರ್ಯ ಆಗ್ತಾ ಇದ್ದೀಯ.....ಹೌದು... ನಾನು ಮೊದಲು ಕೇಳಿ ಶಾಕ್ ಅದೇ... ಆಮೇಲೆ ನೋಡಿದರೆ ಹೌದು,, ಇದು ಮನಷ್ಯರು ಅಂತ ಅರಗಿಸಿಕೊಳ್ಳೋಕೆ ಕಷ್ಟ ಪಟ್ಟೆ....
ಯಾರಪ್ಪ ಈ ಥರ ಕ್ರಿಯೇಟಿವಿಟಿ advertisement ಮಾಡಿರೋದು ಅಂತ ಅನ್ಕೊತಾ ಇದ್ದೀರಾ.. ಹೌದು ಇದನ್ನ produce ಮಾಡಿರೋದು Prakash Varma . ad filmmaker, Nirvana Films ಇವರು vadaphone ಗೋಸ್ಕರ ಇದನ್ನ ರೆಡಿ ಮಾಡಿ ಕೊಟ್ಟಿದ್ದಾರೆ...ಗ್ರೇಟ್ ಕ್ರಿಯೇಟಿವಿಟಿ ಅಲ್ವ....

ಇದನ್ನ create ಮಾಡೋಕ್ಕೆ ತುಂಬ ಕಷ್ಟ ಪಟ್ಟು , ಚಾಲೆಂಜಿಂಗ್ ಆಗಿ create ಮಾಡಿದ್ದಾರಂತೆ.... ಇದರಲ್ಲಿ body ಪಾರ್ಟ್ ಬೇರೆ costume ಮತ್ತೆ ತಲೆ ಬುರುಡೆಗೆ ಬೇರೆ costume use ಮಾಡಿ... ಡೆವಲಪ್ ಮಾಡಿದಾರಂತೆ.. ತಲೆ ನಮ್ಮ human ತಲೆ ಗಿಂತ ದೊಡ್ಡ ದಾಗಿ ಇರಬೇಕು ಅಂತ... Perspex ಅನ್ನೋ meterial use ಮಾಡಿ create ಮಾಡಿರೋದಂತೆ.
ಇಂಟರೆಸ್ಟಿಂಗ್ ವಿಷ್ಯ ಏನು ಅಂದ್ರೆ . ಇದರ ಸೈಜ್ .. actual ಆಗಿ ಇದು ಸ್ಕ್ರೀನ್ ನಲ್ಲಿ ದೊಡ್ಡ ಸೈಜ್ ನಿಂದ ಇದೆ . ಆದರೆ ಇದನ್ನ ಬೇರೆ ಟೆಕ್ನಾಲಜಿ ನಲ್ಲಿ ಅಂದ್ರೆ high speed shooting technology use ಮಾಡಿ ಶೂಟ್ ಮಾಡಿದಾರಂತೆ.... ಅದಕ್ಕೆ ನಮಗೆ ಪುಟ್ಟ ದಾಗಿ ನಾರ್ಮಲ್ ಸೈಜ್ ನಲ್ಲಿ ಕಾಣಿಸೋದು . ಹಾಗೆ ಸ್ವಲ್ಪ graphics edits ಕೂಡ..
ಇದರಲ್ಲಿ ಇನ್ನೊಂದು ಪಾಯಿಂಟ್ ಏನಪ್ಪಾ ಅಂದ್ರೆ... Zoozoo ನ ಹೈಲೈಟ್ ಮಾಡೋಕೆ background ನ ತುಂಬ ಸಿಂಪಲ್ ಆಗಿ.. create ಮಾಡಿದ್ದಾರೆ.. ಅಂದ್ರೆ ಇದು indore ನಲ್ಲಿ carboard ಸೆಟ್ ಹಾಕಿ spray paint use ಮಾಡಿ ಮಾಡಿರೋದು.... main Zoozoo ಚೆನ್ನಾಗಿ ಕಾಣಿಸಲಿ ಅಂತ...
ಈ ಫಿಲಂ ನ ಶೂಟ್ ಮಾಡಿರೋದು ಕೇಪ್ ಟೌನ್ , ಸೌತ್ ಆಫ್ರಿಕಾದಲ್ಲಿ . Nirvana ಅನ್ನೋ advertisement ಕಂಪನಿ ..
ಈ advertisement ಕ್ಲಿಕ್ ಆಗಿರೋದು ನೋಡಿ ಇದನ್ನೇ use ಮಾಡಿಕೊಂಡು ಇನ್ನು ಬೇರೆ ಬೇರೆ ತರಹದ add ಬರುತ್ತೆ ... ಒಟ್ಟ್ನಲ್ಲಿ Prakash Varma ಮತ್ತೆ Nirvana add ಟೀಂ ಗೆ,, hatsoff ಹೇಳಬೇಕು... ಈ ಥರ ಒಳ್ಳೆ advertisement ಕ್ರಿಯೇಟಿವಿಟಿ ಗೆ ಅಲ್ವ...
................................................................
ಇದನ್ನ ನಿಮಗೆ ಹೇಳ್ತಾ,, ನನ್ನ ಹತ್ರ ಇರೋ ಇನ್ನು ಕೆಲವು interesting advertise ಮೆಂಟ್ ನ upload ಮಾಡಿದ್ದೇನೆ ನೋಡಿ... ಇದರಲ್ಲಿ ಕೆಲವನ್ನ ನೀವು ನೋಡಿರಬೋದು ... but ಅದ್ರು ಇನ್ನೊಮೆ recall ಮಾಡಿಕೊಳ್ಳಿ .....
advertisement ಅಂದ್ರೆ ಕ್ರಿಯೇಟಿವಿಟಿ.... ಯಾವ ಥರ ಎಷ್ಟು efective ಆಗಿ advertise ಮಾಡಿದ್ರೆ ಜನ ನೋಡ್ತಾರೆ ಅಂಥ . ಅದು ಒಂದ್ ಥರ challenging job... ಇಲ್ಲಿ ಕೆಲವೊಂದು advertise ಫೋಟೋಸ್ ನ ಹಾಕಿದೇನೆ,, ನಿಜವಾಗ್ಲೂ worth ಇಂಥ effective advertise ನ ನೋಡೋಕೆ, ನೋಡಿ ಮಜಾ ಮಾಡಿ.......

ಸೂಪರ್ Tyre ಜಪ್ಪೈಯ್ಯ ಅಂದು ಅಲ್ಲಾಡೋಲ್ಲ..




ಇದಂತು ನಿಜ, ಇವಾಗ್ಲೇ ಗಂಡು ಹೆಣ್ಣಿನ ratio ಕಮ್ಮಿ ಇದೆ.. ಮುಂದೆ... ಇದೆ ಗತಿ......ಅಲ್ವ..


ಮರಗಳನ್ನ ಕಟ್ ಮಾಡ್ತಾ ಇದ್ದರೆ.... ಇದೆ ಗತಿ...... ಎದ್ದೇಳಿ ಜನರೇ ಫರ್ಸ್ಟ್ ಒಂದು ಗಿಡ ನೆಟ್ಟು ಪೋಸಿಸಿ


ಸೂಪರ್ ಫಾಸ್ಟ್ ಪೇಯಿಂಟ್........


ವಾಟ್ ಎನ್ ಕ್ರಿಯೇಟಿವಿಟಿ ಅಲ್ವ...









Soooopar

















haa haa very ನೈಸ್.......ಫ್ಯಾನು ಅಂದ್ರೆ ಹೀಗೆ ಇರಬೇಕು.... ಮೂಡಗಳೇ ಚದುರಿ ಹೋಗೋ ಹಾಗೆ....




head and shoulder advertisement ..... ಸ್ಟಾರ್ ರೆ ಇಲ್ಲ... ಮಾಯಾ.... ಏನ್ ಕ್ರಿಯೇಟಿವಿಟಿ ರೀ....







ವೆರಿ ನೈಸ್ ....

ಇದು simply marry .com.... adds... ಜಾತಿ ಯಾವುದಾದರೇನು ಶಿವ....ಅಲ್ವ ...
ಗುರು........

12 comments:

  1. ಗುರೂ
    ಫೋಟೋ, ಮಾಹಿತಿ ವಿಶಿಷ್ಟವಾಗಿದೆ, ಸೃಜನಶೀಲವಾಗಿದೆ.
    Good.

    ReplyDelete
  2. ಧನ್ಯವಾದಗಳು ಪರಾಂಜಪೆ....
    ಹಾ ನಿಮ್ಮ ಬ್ಲಾಗಿನಲ್ಲಿ ಪ್ರಕಟವಾಗಿರುವ ಕಾರ್ಮಿಕರ ದಿನದ ಕವನ ,, ತುಂಬ ಚೆನ್ನಾಗಿ ಇದೆ... ನೀವು ತುಂಬ ಚೆನ್ನಾಗಿ ಕವನ ವನ್ನು ಬರಿತಿರಿ....ಕೊನೆಯಲ್ಲಿ ಬರುವ ಪ್ರಾಸ ಬದ್ದ ಸಾಲುಗಳು ಚೆನ್ನಾಗಿ ಇರುತ್ತೆ... ಹೀಗೆ ಮುಂದುವರಿಸಿ.....
    ಗುರು

    ReplyDelete
  3. creative agi neevu saha...nimma blognalli hosatannu nammelarigu torisutteeri..
    keep posting...all the best

    ReplyDelete
  4. ಹಾ ಹಾ. ಥ್ಯಾಂಕ್ಸ್ ಮನಸು... ಹೀಗೆ ಇರಲಿ ನಿಮ್ಮಗಳ ಪ್ರೋತ್ಸಾಹ ....
    ಗುರು

    ReplyDelete
  5. ಗುರು,

    ಕೆಲಸದ ಒತ್ತಡದಿಂದ ತಡವಾಗಿದ್ದಕ್ಕೆ ಕ್ಷಮೆಯಿರಲಿ..

    ಮತ್ತೆ ನಿಮ್ಮ ಬ್ಲಾಗಿನಲ್ಲಿ ಹೊಸತನ. ಅದನ್ನು ನಾನು ನಿರೀಕ್ಷಿಸುವುದು ಕೂಡ....ಪ್ರಕಾಶ್ ವರ್ಮರ ಕ್ರಿಯೆಟಿವಿಟಿಗೆ ಹ್ಯಾಟ್ಸಪ್...ನಾನು animation basic course ಮಾಡಿದ್ದೇನೆ...ಅದ್ರ ತಲೆ ಬುಡ ಗೊತ್ತಿದೆ...ಅದ್ರೂ ಅದನ್ನೂ ಮೀರಿ ಪ್ರಕಾಶ ವರ್ಮರ ಕೆಲಸ ಖಂಡಿತ ಮೆಚ್ಚಲೇ ಬೇಕು...

    ಫೋಟೋಗಳು ತುಂಬಾ ಚೆನ್ನಾಗಿವೆ...

    ಧನ್ಯವಾದಗಳು.

    ReplyDelete
  6. ಗುರು ನಮಸ್ತೆ...
    ನಿಮ್ಮ ಮೆಚ್ಚಿಕೋಬೇಕು ಕಣ್ರೀ...ಪ್ರಕಾಶ್ ವರ್ಮರ ಕ್ರಿಯಾಶೀಲತೆ ಕುರಿತು ಆ ಸುಂದರ ಜಾಹೀರಾತು ಓದ್ತಾ ಹೋದಂಗೆ ಗುರು ನಿಮ್ಮ ಕ್ರಿಯಾಶೀಲತೆ ಕುರಿತು ಹೆಮ್ಮೆ ಅನಿಸ್ತು.

    ಕೆಲವು ಜಾಹೀರಾತುಗಳು ಹಂಗೇ..ಮತ್ತೆ ಮತ್ತೆ ನೋಡೋಣ ಅನಿಸುತ್ತೆ. ಹಿಂದೊಮ್ಮೆ ಕೆನರಾ ಬ್ಯಾಂಕ್ ದು ಒಂದು ಜಾಹೀರಾತು ಬರ್ತಾ ಇತ್ತು...ಪುಟ್ಟ ಮಗುವಿನದು! ತುಂಬಾ ಚೆನ್ನಾಗಿರ್ತಾ ಇತ್ತು. ಜನರನ್ನು ಸೆಳೆಯೋಕೆ ಇಂಥ ಗಿಮಿಕ್ ಗಳನ್ನು ಮಾಡುವುದೂ ಕೂಡ ಅದ್ಭುತ ಕ್ರಿಯೆಟಿವಿಟಿ.

    ನಿಮ್ಮ ಬ್ಲಾಗಿನಲ್ಲಿ ಹೊಸ ಹೊಸ ವಿಚಾರಗಳು, ಮಾಹಿತಿಗಳು ಇನ್ನಷ್ಟು ನಮ್ಮ 'ತಲೆ ತುಂಬಲಿ'! ಶುಭವಾಗಲೀ ಗುರು.

    -ಧರಿತ್ರಿ

    ReplyDelete
  7. ಶಿವೂ,
    ಹೌದು ನನಗು ಅನಿಮೇಷನ್ ನಲ್ಲಿ ಆಸಕ್ತಿ ಇದೆ... ಆದರೆ ನಾನು ಎಲ್ಲಿ ಹೋಗಿ ಕಲ್ತಿಲ್ಲ,, ನನ್ನ ಕಂಪ್ಯೂಟರ್ ನಲ್ಲೆ ಮಾಡಿ
    ಕಲ್ತಿದೇನೆ.. ಆದರೆ ಇವರು ಮನಷ್ಯ ರನ್ನೇ use ಮಾಡಿಕೊಂಡು ಅನಿಮೇಶನ್ ಥರ ಶೂಟ್ ಮಾಡಿದ್ದರಲ್ಲ ಅದಕ್ಕೆ ತಲೆ ಬಾಗಲೇ ಬೇಕು....
    ನಿಮ್ಮ ಮದುವೆ ಪುರಾಣದ ಕತೆ ಚೆನ್ನಾಗಿ ಇದೆ
    ಗುರು

    ReplyDelete
  8. ಹೆಲೋ ಧರಿತ್ರಿ ..
    ಪ್ರತಿಕ್ರಿಯಿಸಿದ್ದಕ್ಕೆ ತುಂಬ ಥ್ಯಾಂಕ್ಸ್ ,,, ಹಾಂ ನನಗು ಅ advertisement ಇಷ್ಟ .. ಅದೇ kenarabank ನಲ್ಲಿ ಅ ಪುಟ್ಟ ಹುಡುಗ saving ಮಾಡೋಕೆ ಅಂತ,, ಎಲ್ಲೆಲ್ಲೋ ಸುತ್ತಾಡಿಕೊಂಡು ಬರ್ತಾ ನಲ್ಲ ಅದು ಅಲ್ವ.. ವೆರಿ ನೈಸ್...
    ಇದೆ ಥರ ಕೆಲವೊಂದು ಗುಡ್ ಕ್ರಿಯೇಟಿವಿಟಿ ನಲ್ಲಿ ತೆಗೆದಿರುವ advertisements ನ ಹಾಕಿದೇನೆ ನೋಡಿ .. Plant tree ಅಂಡ್ ಫ್ಯಾನ್ adds ತುಂಬ ಚೆನ್ನಾಗಿ ಇದೆ ಅಲ್ವ.
    ಗುರು

    ReplyDelete
  9. ನಾನೂ ಮೊದ್ಲು ಆ vodaphone ad ನ ಅನಿಮೇಶನ್ ಅನ್ಕೊ೦ಡಿದ್ದೆ. ಮೊನ್ನೆ ಸ್ನೇಹಿತರೊಬ್ಬರು ಹೇಳಿದ್ಮೇಲೆ ಗೊತ್ತಾಗಿದ್ದು. ಇಲ್ಲಿ ಅದರ ವಿವರಣೆ ಇದೆ. ಮಿಕ್ಕಿದ ad ಗಳು ಚೆನ್ನಾಗಿವೆ.

    ReplyDelete
  10. ನಾನೂ ಈ ಮೊದ್ಲು ಆ vodaphone adನ ನೋಡಿರಲಿಲ್ಲ.. ನಿಮ್ಮ ಬ್ಲಾಗ್ ಪೋಸ್ತ್ ನೋಡಿದ್ ಮೇಲೆ ಗೂಗಲ್ ನಲ್ಲಿ ಹುಡುಕಿ ನೋಡಿದೆ, ಅದು ಅನಿಮೇಶನ್ ಅಲ್ಲ ಅಂತ ತಿಳಿದು ಆಶ್ಚರ್ಯ ಆಯ್ತು!!
    ಮಿಕ್ಕೆಲ್ಲಾ ads ಚೆನ್ನಾಗಿವೆ:)

    ReplyDelete
  11. ವಿನುತ.
    ಥ್ಯಾಂಕ್ಸ್ ಪ್ರತಿಕ್ರಿಯಿಸಿದ್ದಕ್ಕೆ , ಹೀಗೆ ಬರುತ್ತಿರಿ.....
    ಗುರು

    ReplyDelete
  12. ರೂpaश्री ಜಿ,,,
    ತುಂಬ ಧನ್ಯವಾದಗಳು ನನ್ನ ಬ್ಲಾಗಿಗೆ ಬಂದು ಪ್ರತಿಕ್ರಿಯಿಸಿದ್ದಕೆ....
    ಹೀಗೆ ಬರುತ್ತಿರಿ.....

    ReplyDelete