Tuesday, June 29, 2010

ಕೊನಾರ್ಕ್ ಸೂರ್ಯ ದೇವಸ್ಥಾನ....ಒರಿಸ್ಸಾ ಪ್ರವಾಸ ಭಾಗ ೨


ಕೊನಾರ್ಕ್ ಸೂರ್ಯ ದೇವಸ್ಥಾನ....


ಸೋಮವಾರ ನಾವು ಪುರಿ ತಲುಪಿದ್ದು ಮಧ್ಯಾನ ೧ ಘಂಟೆ ಆಗಿತ್ತು... ನಾವು ಮೊದಲೇ ಮಾಡಿದ್ದ ಪ್ಲಾನ್ ಎಲ್ಲ ಹಾಳಾಗಿ ಹೋಗಿತ್ತು,,, ಸೊ ಹೇಗೂ ಲೇಟ್ ಆಗಿದೆ,,, ಮೊದಲು ಕೊನಾರ್ಕ್ ಸೂರ್ಯ ದೇವಸ್ಥಾನ ಮುಗಿಸಿಕೊಂಡು,,, ಸಂಜೆ ಟೈಮ್ ಇದ್ದರೆ ಪುರಿ ದೇವಸ್ತಾನಕ್ಕೆ ಹೋಗೋಣ ಅಂತ ಮಾತಾಡಿಕೊಂಡು ಆಯಿತು..... ಬೇಗ ಬೇಗ,, ನಮಗಾಗಿ ಬುಕ್ ಮಾಡಿದ್ದ,, ಹೋಟೆಲ್ ಹಾಲಿಡೇ ಇನ್ ರೆಸಾರ್ಟ್ ನಲ್ಲಿ ಫ್ರೆಶ್ ಅಪ್ ಆಗಿ,,,, ಊಟ ಮಾಡಿಕೊಂಡು,,, ಕೊನಾರ್ಕ್ ದೇವಸ್ಥಾನಕ್ಕೆ ಹೊರಟೆವು,,,,

ಕೊನಾರ್ಕ್ ಇದು ಒಂದು historical place .. ಒರಿಸ್ಸಾ ರಾಜ್ಯದ ಆಕರ್ಷಣೀಯ ಸ್ಥಳ.... ಇದು ಪುರಿ ಇಂದ 35 KM ಗಳ ದೂರದಲ್ಲಿ ಇದೆ.... ಇಲ್ಲಿಗೆ ಹೋಗುವುದಕ್ಕೆ ಬಸ್ ಹಾಗು taxi ವ್ಯವಸ್ತೆ ಇದೆ... ಪುರಿ ಇಂದ 45 ನಿಮಿಷಗಳ ಪ್ರಯಾಣ.... ನಾವು ಒಂದು qualis ಮಾಡಿಕೊಂಡು ಹೊರಟೆವು,,,, ದೇವಸ್ಥಾನ ಬಗ್ಗೆ ಅಸ್ತೊಂದ್ ಮಾಹಿತಿ ಇರಲಿಲ್ಲ..... ಆದರು ಇದು ಒಂದು, ಒಳ್ಳೆಯ ಇತಿಹಾಸಿಕ ಸ್ಥಳ ಅಂತ ಗೊತ್ತಿತು,,,

ಕೊನಾರ್ಕ್ ಗೆ 3 :30 ಗೆ ಬಂದು ಸೇರಿದೆವು,,,, ಯಾವುದೇ vechile ಅನ್ನು temple ಹತ್ತಿರಕ್ಕೆ ಬಿಡುವುದಿಲ್ಲ... ಸ್ವಲ್ಪ ದೂರ ನೆಡೆದು ಕೊಂಡು ಹೋಗಬೇಕು,,,, ನಾವು ಇಳಿದ ಕೂಡಲೇ ಅಲ್ಲಿನ guide ಬಂದು ಸುತ್ತುವರೆದರು,,,, ದೇವಸ್ತಾನದ ಬಗ್ಗೆ ಎಲ್ಲ ತಿಳಿಸಿ ಹೇಳಲು,, ೧೫೦ ರೂ ಕೊಡಬೇಕಾಗುತ್ತೆ ಅಂತ ಕೇಳಿ ಹಿಂದೆ ಬಿದ್ದಿದ್ದರು,,, ಸರಿ ಮೊದಲು ನಾವು ಒಪ್ಪಿಕೊಳ್ಳ ಲಿಲ್ಲ.. ಆಮೇಲೆ ಸ್ವಲ್ಪ ಕಮ್ಮಿಗೆ ಅವರೇ ಬಂದು,, ಎಲ್ಲವನ್ನು explain ಮಾಡುತ್ತೇನೆ ಅಂತ ಬಂದರು,,, ಆದರೆ ನನಗೆ ಅಲ್ಲಿನ ಶಿಲ್ಪಗಳ ಹಾಗು ಕೆತ್ತನೆ ಕೆಲಸಗಳನ್ನು ಫೋಟೋ ತೆಗೆಯಬೇಕಾದ್ದರಿಂದ... ಅವರ ಜೊತೆ ಹೋಗದೆ,, ಒಬ್ಬನೇ ಫೋಟೋ ತೆಗೆಯಲು ಹೊರಟೆ,,,,,

ನಿಜವಾಗಲು ಇದು ಒಂದು ಅದ್ಬುತ ಕಲೆಯ ದೇವಸ್ಥಾನ,,, ಆದರೆ ತುಂಬಾ ಶಿಥಿಲ ವಾಗಿ ಹಾಳಾಗಿ ಹೋಗಿದೆ.... ಒಂದು ಪಾರ್ಶ್ವ ಬಿದ್ದು ಹೋಗಿದೆ ಕೂಡ...

ಇದರ ಇತಿಹಾಸ ಕೆಣಕಿದಾಗ ಸಿಕ್ಕ ಮಾಹಿತಿ....

ಕೊನಾರ್ಕ್ ಗೆ ಈ ಹೆಸರು ಬಂದಿದು ಕೋನ (corner ) + ಅರ್ಕ (ಸೂರ್ಯ) . ಇದಕ್ಕೆ ಇನ್ನೊಂದು ಹೆಸರು ಕೂನಾದಿತ್ಯ ಅಂತ.... ಇದು ಪುರಿ ಯಾ north eastern ಕಾರ್ನೆರ್ ನಲ್ಲಿ ನೆಲೆಸಿದೆ . ಇದಕ್ಕೆ ಮತ್ತೊಂದು ಹೆಸರು ಅರ್ಕಕ್ಷೇತ್ರ ಇದನ್ನ ಕಟ್ಟಿದು,,1278 CE ನಲ್ಲಿ ಅಂತೆ...


"ಗಂಗಾ Dynasty ನಲ್ಲಿ ಈ ದೇವಸ್ಥಾನವನ್ನು ಕಟ್ಟುವುದಕ್ಕೆ ನರಸಿಂಹ ದೇವ -೧ ರಾಜ ಅದೇಶಿಸುತ್ತನಂತೆ.....ಈ ದೇವಸ್ಥಾನವನ್ನು ಆಗಿನ ಅವನ ಕಾಲದ ರಾಜಕೀಯ ಪ್ರತಿಷ್ಟೆ ಯಾ ಸಂಕೇತವಾಗಿ,,, ಕಟ್ಟಿಸಲು ಯೋಚಿಸಿದ್ದರಂತೆ,,, ಅದಕ್ಕಾಗಿ. 12000 ಜನ ನುರಿತ ಶಿಲ್ಪ ಕಲಾವಿದರನ್ನು ಸೇರಿಸಿ ೧೨ ವರುಷಗಳ ಸತತವಾಗಿ ಶ್ರಮ ಪಟ್ಟರಂತೆ ಇದನ್ನ ಕಟ್ಟಲು.... ಆದರು ಇದನ್ನು ಅಂದುಕೊಂಡ ಸಮಯಕ್ಕಿಂತ ಮುಂಚೆ ಕಟ್ಟಲಾಗಲಿಲ್ಲ ... ಇದಕ್ಕೆ ಕಾರಣ,, ಇದನ್ನು ಕಟ್ಟಬೇಕಾದರೆ ಒಂದು ವಾಸ್ತು ದೋಷ ಎದುರಾಯಿತಂತೆ..... ಇದರ ನಿರ್ವಹಣೆ ಹೊಹಿಸಿಕೊಂಡಿದ್ದ..ಬಿಸು ಮಹಾರಾಣ .. ಅವರಿಗೂ ಇದಕ್ಕೆ ಉತ್ತರ ಕಂಡು ಹಿಡಿಯುವುದಕ್ಕೆ ಸಾದ್ಯವಗಲಿಲ್ಲವಂತೆ... ಆಗ,, ಅವರ ಮಗ ಧರ್ಮಪಾದ ಇದಕ್ಕೆ ಉಪಾಯವನ್ನು ಕಂಡು ಹಿಡಿದು,, ಕೊನೆಯ ಕಲ್ಲನ್ನು ತಾನೇ ಗೋಪುರದ ಮೇಲೆ ಇಟ್ತನತ್ತೆ ,, ಆಮೇಲೆ ಧರ್ಮಪಾದನ ಶವ,,, ದೇವಸ್ಥಾನ ದ ಹತ್ತಿರ ಇರುವ ಸಮುದ್ರದಲ್ಲಿ ತೇಲುತ್ತಿತ್ತಂತೆ... ಹೀಗೆ ಅವನ ಹೆಸರು,, ತಮ್ಮ ಸಮುದಾಯದ ರಕ್ಷಣೆಗೋಸ್ಕರ.. ತನ್ನ ಪ್ರಾಣವನ್ನೇ ಕೊಟ್ಟ ಎಂದು ಹೆಸರುವಾಸಿ ಆಯಿತು ಅಂತ ಪ್ರತೀತಿ.....ಆದರೆ ಇಗಲೂ..ಇದರ ವಾಸ್ತು ಸರಿ ಇಲ್ಲದೆ ಇರುವ ಕಾರಣ,, ದೇವಸ್ಥಾನ ಇಷ್ಟು ಅವನತಿ ಹೊಂದಿದೆ ಅಂತ ಹೇಳುತ್ತಾರೆ , ಇಲ್ಲಿನ ಸ್ಥಳೀಯರು,,, "

ಈ ಇಡೀ ದೇವಸ್ಥಾನ ಒಂದು ರಥದ ಮೇಲೆ ನಿಂತಿದೆ.. ಎಲ್ಲ ಕಡೆಗಳಲ್ಲೂ 24 ಚಕ್ರಗಳಿವೆ....ಕೆತ್ತನೆಯ ಕೆಲಸ ತುಂಬಾ ಚೆನ್ನಾಗಿ ಇದ್ದು,,, ಮನಮೋಹಕವಾಗಿ ಇದೆ..... (ಆದರೆ ತುಂಬಾ ಹಾಳಾಗಿ ಹೋಗಿದೆ....ಕೆಲವೊಂದು ಕಡೆ,,, ಏನು ಕಾಣಿಸುವುದಿಲ್ಲಾ. ಕಾಲದ ಮಹಿಮೆಯೋ,, ಅಥವಾ ಇಂಥ ಒಂದು ಅದ್ಬುತ ಕಲೆಯನ್ನು ಉಳಿಸಿಕೊಲ್ಲದೆ ಇರುವ ನಮ್ಮ ಅಸಹಾಯಕತೆಯೋ ಗೊತ್ತಿಲ್ಲ..) ಒಟ್ಟು ೭ ಅಶ್ವಗಳು ಈ ರಥವನ್ನು ಎಳೆಯುತ್ತಿದ್ದರೆ.. ಎರಡು ಸಿಂಹಗಳು ಆನೆ ಯನ್ನು ತುಳಿದು ಮುನ್ನುಗ್ಗುತ್ತಿರುವ ಹಾಗೆ ಕೆತ್ತಲಾಗಿದೆ......

ಒಟ್ಟಿನಲ್ಲಿ ಇದೊಂದು ಒಳ್ಳೆಯ ಕೆತ್ತನೆಯ,,, ಕಲಾ ದೇವಸ್ಥಾನ .... ಆದರೆ ಗರ್ಭಗುಡಿಯ ಮುಖ್ಯ ಗೋಪುರ ಬಿದ್ದು ಹೋಗಿ... ದೇವಸ್ಥಾನವೇ ಇಲ್ಲದೆ,, ಬರಿ ಹೊರಗಿನಿಂದ ನೋಡಬಹುದಾದ ಒಂದು ಆಕರ್ಷಣೀಯ ಸ್ಥಳವಾಗಿದೆ...

ಇಲ್ಲಿನ guide ಹೇಳುತ್ತಿದ್ದ ಇನ್ನೊಂದು ಮಹತ್ವದ ವಿಚಾರ ವೆಂದರೆ... ಈ ಗೋಪುರದ ಮೇಲೆ ಇರುವುದು,,, ಸಾಮಾನ್ಯ ಕಲ್ಲು ಅಲ್ಲ... ಇದು magnetic ಕಲ್ಲು ಗಳು ಅಂತ,,, ಇದು ಇಡೀ ಗೋಪುರವನ್ನಿ ಹಿಡಿದು ಇಟ್ಟಿದೆ ಅಂತೆ....ಇದು ಒಂದು ಕಲ್ಲಿನಿಂದಲೇ ಮುಖ್ಯ ಗೋಪುರ ಬಿದ್ದು ಹೋಗಿರುವುದ್ ಅಂತ ಹೇಳ್ತಾ ಇದ್ದ ,, ಹಾಗೆ ಇಂಥಹ magnet 12 ನೆ ಶತಮಾನದಲ್ಲಿ ನಮ್ಮ ಹತ್ತಿರ ಇತ್ತು ಅಂದರೆ,,, 14 ನೆ ಶತಮಾನದಲ್ಲಿ Europe ನಲ್ಲಿ magnet ಹೇಗೆ ಕಂಡುಹಿಡಿದರು ಅಂತ..... ???????


ಈ ದೇವಸ್ಥಾನ ಕಟ್ಟಲು ಕಾರಣ,,,

The temple was dedicated to the Sun-God (Arka), popularly called Biranchi-Narayan, and the area in which it is located was known as Arka-Kshetra as well as padma-kshetra. According to folklore, Samba, son of Lord Krishna, was struck with leprosy due a curse of Lord Krishna himself. Samba for 12 years underwent harsh atonement at Mitravana, near the convergence area of Chandrabhaga River with the sea at Konark. He was finally successful in pleasing the SUN god (Surya), the healer of all skin diseases, and was cured of his ailment.

In gratitude, he decided to erect a temple in the honor of Surya. The day following his cure, while Samba was bathing in the Chandrabhaga, he discovered an image of the god, which had been fashioned out of Surya's body by Viswakarma. Samba installed this image in a temple he built in Mitravana, where he propitiated the god. Since then, throughout the ages, this place has been regarded as sacred.

...

ಅಲ್ಲಿನ ಕೆಲವು ಫೋಟೋ ಗಳನ್ನ ಇಲ್ಲಿ ಹಾಕಿದ್ದೇನೆ,, ಹಾಗೆ ಇದರ ಎಲ್ಲ ಫೋಟೋಗಳನ್ನು ನನ್ನ ಪಿಕಾಸ ಆಲ್ಬಮ್ ನಲ್ಲಿ ಹಾಕಿದ್ದೇನೆ,, ನೋಡಿ...

 
 








ಮುಂದುವರೆಯುವುದು.......

ಒರಿಸ್ಸಾ ಪ್ರವಾಸದ ಭಾಗ ೧ ಅನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ..... http://guruprsad.blogspot.com/2010/06/blog-post_25.html

ಪಿಕಾಸ ಫೋಟೋಗಳು
http://picasaweb.google.co.in/guru.prasadkr/OrissaTripDay2PhotosKonark#

Friday, June 25, 2010

ಒರಿಸ್ಸಾ - ಪ್ರವಾಸದ ಅನುಭವ... -- ಭಾಗ ಒಂದು ...

ನನಗೆ ಟ್ರೆಕ್ಕಿಂಗ್ , traveling ಅಂದ್ರೆ ತುಂಬಾ ಇಷ್ಟ....ಆದರೆ ಅನಿವಾರ್ಯ ಕಾರಣಗಳಿಂದ,, ನನ್ನ ಈ ಹವ್ಯಾಸವನ್ನು ಕಳೆದೊಂದು ವರ್ಷದಿಂದ ಕಳೆದುಕೊಂಡು ಇದ್ದೆ... ವರ್ಷಕ್ಕೆ ಏನಿಲ್ಲ ಅಂದರು ೪ ಅಥವಾ ೫ ಬಾರಿ ಎಲ್ಲಿ ಗಾದರೂ ಹೋಗಿ ಬರ್ತಾ ಇದ್ದೆ... ಆದರೆ ನನ್ನ ಪರ್ಸನಲ್ ಪ್ರಾಬ್ಲಮ್ ನಿಂದಾಗಿ...ಎಲ್ಲೂ ಹೋಗಲು ಸಾಧ್ಯವಾಗಿರಲಿಲ್ಲ..


ಆದರೆ ಲಾಸ್ಟ್ ವೀಕ್ ಅಂತ ಒಂದು ಅವಕಾಶ ಸಿಕ್ಕಿತು... ನಮ್ಮ ಆಫೀಸ್ ನ ಸಹದ್ಯೋಗಿ ಒಬ್ಬರ ಮದುವೆ ಸೆಟ್ ಆಗಿತ್ತು... ಅವರು ಒರಿಸ್ಸಾ ದವರು,,, ಮದುವೆ ಇದ್ದದ್ದು ಪೂರಿ ನಲ್ಲಿ.... ಹಾಗಾಗಿ ,, ನಮ್ಮನ್ನು ಎಲ್ಲ invite ಮಾಡಿದ್ದ.... ನಮ್ಮ ಟೀಂ ನವರೆಲ್ಲ ಪ್ಲಾನ್ ಮಾಡಿಕೊಂಡು,,,, ಹೋಗಿ ಬರೋಣ ಅಂತ ಒಂದು ತಿಂಗಳ ಮೊದಲೇ ಡಿಸೈಡ್ ಮಾಡಿದ್ವಿ....
ಪೂರಿ ಇಲ್ಲಿಂದ 1600 ಕಿಲೋ ಮೀಟರ್ ದೂರ ಇದೆ .. ಹೋಗುವಾಗ ಟ್ರೈನ್ ನಲ್ಲಿ ಹೋಗೋಣ ಬರೋವಾಗ ಫ್ಲೈಟ್ ನಲ್ಲಿ ಬರೋಣ ಅಂತ ಪ್ಲಾನ್ ಮಾಡಿ ಆಗಿತ್ತು... ಟ್ರೈನ್ ನಲ್ಲಿ ಆದರೆ 29 ಗಂಟೆ ಪಯಣ.... ನಾನಂತು ಅಸ್ಟು ದೂರ, ಟ್ರೈನ್ ನಲ್ಲಿ ಯಾವಾಗಲು ಹೋಗಿ ಇರಲಿಲ್ಲ.. ಇದು ನನ್ನ ಫಸ್ಟ್ long train journey .... ಹಾಗಾಗಿ ತುಂಬಾ expectation ಇತ್ತು.... ಬೇಕು ಅಂತಲೇ ಹೋಗಬೇಕಾದರೆ ಟ್ರೈನ್ ನಲ್ಲಿ ಹೋಗೋಣ ಅಂತ ಡಿಸೈಡ್ ಮಾಡಿದ್ವಿ... ಒಟ್ಟಿಗೆ ನಮ್ಮ ಗ್ಯಾಂಗ್ ಎಲ್ಲ ಹೋದರೆ ಮಜಾ ಇರುತ್ತೆ ಅಂತ..... :-)

ಮದುವೆ ಇದ್ದದ್ದು,, 21st ಸೋಮವಾರ,,, ನಾವು ಶನಿವಾರ ರಾತ್ರಿ... ಬೆಂಗಳೂರಿಂದ ಹೊರಟೆವು.... "ಗರೀಬ್ ರಥ " ಟ್ರೈನ್ ನಲ್ಲಿ ಮೊದಲೇ AC ಕೂಚ್ ಬುಕ್ ಆಗ್ಗಿತ್ತು.... ಈ ಟ್ರೈನ್ ಇಲ್ಲಿಂದ ಶನಿವಾರ ರಾತ್ರಿ ೧೨:೦೦ ಕ್ಕೆ ಹೊರಟು ,, ಸೋಮವಾರ ಬೆಳಿಗ್ಗೆ 6:00 ಗಂಟೆಗೆ ಪೂರಿ ತಲುಪಬೇಕಾಗಿ ಇತ್ತು...

train ಬುಕ್ ಮಾಡುವಾಗ .. ದಿನಗಳ ವ್ಯತ್ಯಾಸ ಆಗಿದ್ದರಿಂದ ನಮ್ಮಲ್ಲಿ ೪ ಜನರಿಗೆ ಬೇರೆ ಬೇರೆ ಬೋಗಿ ಸಿಕ್ಕಿತು..... ಆದರೆ ಎಲ್ಲ ಒಟ್ಟಿಗೆ ಇರಬೇಕಲ್ವ... ಸೊ ನೈಟ್ ನಲ್ಲೆ ಟೆನ್ಶನ್ ಶುರು... ಅವರಿವರನ್ನು ಕಾಡಿ ಬೇಡಿ,, ಇಲ್ಲಿಂದ ಅಲ್ಲಿಗೆ ಅಲ್ಲಿಂದ ಇಲ್ಲಿಗೆ ಶಿಫ್ಟ್ ಮಾಡಿಸ್ತ... ಒದ್ದಾಡುತ್ತ ಇದ್ವಿ.... ಕೊನೆಗೂ ಎಲ್ಲ ಒಂಬತ್ತು ತಲೆಹರಟೆ ತಲೆಗಳು ಒಂದೇ ಭೋಗಿ ನಲ್ಲಿ ಅದು ಅಕ್ಕ ಪಕ್ಕ ಬರ್ತ್ ನಲ್ಲೆ ಕೊಲಿತುಕೊಳ್ಳುವ ಹಾಗೆ ಮಾಡಿಕೊಂಡ್ವಿ....

ಟ್ರೈನ್ ಹೊರಡೋದು ಒಂದು ಗಂಟೆ ಇಲ್ಲಿಂದಲೇ ತಡ ಆಯಿತು.... ಆದರೆ ನಮ್ಮ ಪ್ಲಾನ್ ಪ್ರಕಾರ ಇದು ಸೋಮವಾರ ಬೆಳಿಗ್ಗೆ... ೭:೦೦ ಗಂಟೆಗೆಲ್ಲ ಪೂರಿ ನಲ್ಲಿ ಇರಬೇಕಾಗಿತ್ತು... ಇಲ್ಲದೆ ಹೋಗಿದ್ದರೆ ನಾವು ಅಂದುಕೊಂಡಿದ್ದ ಪ್ಲಾನ್ ಎಲ್ಲ ಎಡವಟ್ಟು ಆಗ್ತಾ ಇತ್ತು..... (ಕೊನೆಗೆ ಹಾಗೆ ಆಯಿತು ಬಿಡಿ.....)
ನಾನಂತು ಫುಲ್ ಎಕ್ಷೈತ್ ಆಗಿದ್ದೆ... ಫಸ್ಟ್ ಟೈಮ್ ಲಾಂಗ್ ಜೌರ್ನಿ ಅಲ್ವ... ಮೊದಲೇ ನನ್ನ ಕ್ಯಾಮೆರಾ ನೆಲ್ಲ ಸೆಟ್ ಮಾಡಿಕೊಂಡ ಇದ್ದೆ,, ದಾರಿನಲ್ಲಿ ಹೋಗಬೇಕಾದರೆ,,, ಸಿಕ್ಕುವ ಒಳ್ಳೆ ಒಳ್ಳೆ ಫೋಟೋ ತೆಗಿಯಬೇಕು ಅಂತ.... :-)
ರಾತ್ರಿ ಇಲ್ಲಿಂದ ಹೊರಟಾಗಲೇ ನಮ್ಮ ಹುಡುಗರ ಗಲಾಟೆ ಶುರು ಆಗಿತ್ತು,, ಪಾಪ ಅಕ್ಕ ಪಕ್ಕದ ಬರ್ತ್ ನವರೆಲ್ಲ ಏನು ಅಂದುಕೊಳ್ಳದೆ ಸಹಿಸಿ ಕೊಂಡು ಇದ್ರೂ... ಅದರಲ್ಲಿ ಕೆಲವು ನಮಗೂ ಫ್ರೆಂಡ್ ಕೂಡ ಆಗಿ ಬಿಟ್ ಇದ್ರೂ.....

ಶನಿವಾರ ರಾತ್ರಿ...ಹೋಗಿದ್ದೆ ಗೊತ್ತಾಗಲಿಲ್ಲ...ಎಲ್ಲರಿಗೂ ಆಯಾಸ ಆಗಿದ್ದ ಕಾರಣ ,, ಮನೆ ಇಂದ ತಂದಿದ್ದ ಚಪಾತಿ.. ರೂಟಿ,,, ಎಲ್ಲ ಕಾಲಿ ಮಾಡಿ.. ತೆಪ್ಪಗೆ ಬಿದ್ದುಕೊಂಡೆವು.... ನನಗಂತು ಜಾಸ್ತಿ ನಿದ್ದೇನೆ ಬರಲಿಲ್ಲ... ಬೆಳಿಗ್ಗೆ ಬೇಗ ಎಚ್ಚರ ಆಗಿತ್ತು.. ಅವಾಗಲೇ ಕ್ಯಾಮೆರಾ ತಗೊಂಡು ಬಾಗಿಲ ಬಳಿ ನಿಂತ್ಕೊಂಡ್ ಇದ್ದೆ..

ಒಟ್ನಲ್ಲಿ ಭಾನುವಾರ ಪೂರ್ತ ಒಳ್ಳೆ ಮಜಾ ಇತ್ತು... ನಾವು ಆಡಿದ್ದೆ ಆಟ... ಕೆಲವೊಂದು ಗೇಮ್ ಆಡಿದೆವು... ಅದು ಇದು ಮಾತಾಡಿಕೊಂಡು ಒಬ್ಬರ ಕಾಲು ಒಬ್ಬರು ಎಳ್ಕೊಂಡು..... ಮದ್ಯಾನದ ತನಕ ಟೈಮ್ ಪಾಸ್ ಆಯಿತು,,, ಆಮೇಲೆ ಯಾಕೋ ಬೋರ್ ಆಗೋಕೆ ಸ್ಟಾರ್ಟ್ ಆಗ್ತಾ ಇತ್ತು,,,

ಅವಾಗ..ನಮ್ಮಲ್ಲೇ ಇದ್ದ ಲ್ಯಾಪ್ಟಾಪ್ ನಿಂದ,, ಮೂವಿ ಶೋ ಸ್ಟಾರ್ಟ್ ಆಯಿತು... ಬೇಜಾರ್ ಆದಾಗಲೆಲ್ಲ ಮೂವಿ ನೋಡ್ತಾ ಮಜಾ ಮಾಡ್ತಾ ಕೂತಿದ್ವಿ.....

ಒಟ್ನಲ್ಲಿ ಒಳ್ಳೆ ಮಜಾ ಇತ್ತು ಟ್ರೈನ್ ನಲ್ಲಿ.......ಅಕ್ಕ ಪಕ್ಕ ಬರ್ತ್ ಜನ ,, ಮತ್ತೆ ಟೀ,, ಕಾಫಿ ಮಾಡುವ ಹುಡುಗರೆಲ್ಲರೂ ಬಂದು ನಮ್ಮ ಜಾಗದಲ್ಲೇ ನಿಂತು ಮೂವಿ ನೋಡ್ತಾ ಇದ್ರೂ.....

ನಾನಂತು ಅದ್ರ ಹೊರಗಡೆ,, ಮತ್ತೆ ಒಳಗಡೆ ಹೋಗ್ತಾ ಬರ್ತಾ,,, ಆಟ ಅದ್ಕೊಂಡ್ ಕುಷಿ ಪಡ್ತಾ ಇದ್ದೆ.. ಬೆಳಗಿನ ಟೈಮ್ ನಲ್ಲಿ ,,ನಾನು ಜಾಸ್ತಿ ಹೊರಗಡೆ ಅಂದ್ರೆ ಡೋರ್ ಪಕ್ಕ ಕ್ಯಾಮೆರಾ ಹಿಡಿದು ಕೊಂಡು ನಿಂತುಕೊಂಡಿದ್ದೆ ಆಯಿತು... ಮೊವಿಂಗ್ ಟೈಮ್ ನಲ್ಲಿ ನನ್ನ ಕ್ಯಾಮೆರಾ ದಲ್ಲಿ ಎಕ್ಷ್ಪೆರಿಮೆನ್ತ ಮಾಡಿದ್ದೆ ಮಾಡಿದ್ದು... ಫೋಟೋಸ್ ಚೆನ್ನಾಗಿ ಬರ್ತಾ ಇತ್ತೋ ಇಲ್ವಾ ಗೊತ್ತಿಲ್ಲ... ಆದರೆ,,, ಅದು ಇದು,, ಸೆಟ್ಟಿಂಗ್ಸ್ ಟ್ರೈ ಮಾಡ್ತಾ ನನ್ನ ಪಾಡಿಗೆ ನಾನು ಕುಷಿ ಪಡ್ತಾ ಇದ್ದೆ... ಅದಕ್ಕೆ ಸಾಥ್ ಆಗಿ ನನ್ನ ಫ್ರೆಂಡ್ ರಾಜೇಶ್ ಕೂಡ ಜೊತೆಗೆ ಕಂಪನಿ ಕೊಡ್ತಾ ಇದ್ದ... ಅವನಿಗೂ ಕ್ಯಾಮರ ಹುಚ್ಚು ಇತ್ತು..... :-)

ಅಂತು ಟ್ರೈನ್ ಅನುಭವ ಮಜಾ ಇತ್ತು,, ಆದರೆ ನಮ್ಮ ಟ್ರೈನ್ ತಲುಪಬೇಕಾದ ಸಮಯಕ್ಕಿಂತ ೬ ಗಂಟೆ ನಿದಾನವಾಗಿ ತಲುಪಿದಾಗ,,, ನಮಗೆ ಆದ ಸಿಟ್ಟು.. ಅಸ್ಟಿಸ್ತಲ್ಲ ...ನಮ್ಮ monday ಪ್ಲಾನ್ ಎಲ್ಲ ಹಾಳಾಗಿ ಹೋಗಿತ್ತು..... ಭಾನುವಾರ ಇದ್ದ ಸಡಗರ ಮಜಾ,,, ಸೋಮವಾರದ ಬೆಳಿಗ್ಗೆ ಆಗುವ ಹೊತ್ತಿಗೆ ಟೂಸ್....

ಯಾವಾಗ ತಲುಪುತ್ತೋ ನಮ್ಮ destination ಅನ್ನೋ ಹಾಗೆ ಆಗಿತ್ತು.... ಇರಲಿ,, ಅದನ್ನ ಆಮೇಲೆ ಹೇಳುತ್ತೇನೆ

ಒರಿಸ್ಸಾದ ಕೆಲವು ಕಡೆ ಅಂತು... ಬರಿ ನೀರಿರಲಿ,, ಮಿನರಲ್ bottle ಕೂಡ ಸಿಕ್ತಾ ಇರಲಿಲ್ಲ....ಅಲ್ಲಿನ ಜಾಗ ಅಂತು ತುಂಬಾ ಗಲೀಜು.....ಕೆಲವೊಂದು ಸ್ಟೇಷನ್ ನಲ್ಲಿ ರೈಲು,,೩೦ ನಿಮಿಷ ಜಾಂಡ ಹೊಡಿತಾ ಇತ್ತು,,, ಯಾಕೆ ಲೇಟ್ ಆಯ್ತೋ ಗೊತ್ತಿಲ್ಲ ಅಂತು ಇಂತೂ... ಆರು ಗಂಟೆ ತಡವಾಗಿ,, ಪೂರಿ ತಲುಪಿತು,,, ಸೋಮವಾರ ಬೆಳಿಗ್ಗೆ ಪ್ರತಿ ಗಂಟೆಗೂ ನಮ್ಮ ಸಹನೆನ ಟೆಸ್ಟ್ ಮಾಡ್ತಾ ಇತ್ತು ಈ ಗರೀಬ್ ರಥ.....:


ಮೊದಲ ಸಾರಿ ಟ್ರೈನ್ ನಲ್ಲಿ ಟ್ರೈನ್ ಹೋಗ್ತಾ ಹೋಗ್ತಾ ಇರಬೇಕಾದರೆ ತೆಗೆದ ಫೋಟೋ ಗಳನ್ನ ಅದರಲ್ಲಿ ನನಗೆ ಇಷ್ಟ ಆಗಿದ್ದನ್ನ.. ಕೆಳಗಡೆ ಹಾಕಿದ್ದೇನೆ... ನೋಡಿ......ನಿಮ್ಮ ಅಭಿಪ್ರಾಯ ತಿಳಿಸಿ...


ಮೊದಲ ದಿನ ರೈಲಿನಲ್ಲಿ ಹೋಗುತ್ತ ತೆಗೆದಿರುವ ಎಲ್ಲ ಫೋಟೋಗಳನ್ನು....ನನ್ನ ಪಿಕಾಸ ಅಲ್ಬುಮ್ಬ್ ನಲ್ಲಿ ಹಾಕಿದ್ದೇನೆ,,,, ಎಲ್ಲ ಫೋಟೋಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ http://picasaweb.google.com/guru.prasadkr/OrissaTripDay1Photos

(ಮುಂದಿನ ಭಾಗದಲ್ಲಿ... ಚಿಲಕ lake ಬಗ್ಗೆ,,, ಪೂರಿ, ಜಗನ್ನಾಥ ದೇವಸ್ತಾನದ ಬಗ್ಗೆ,,, ಹಾಗು ಕೊನಾರ್ಕ್ ಸೂರ್ಯ ದೇವಸ್ತಾನದ ಬಾಗ್ಗೆ ಚಿತ್ರ ಸಮೇತ ಹಂಚಿಕೊಳ್ಳುತ್ತೇನೆ...)




ಟ್ರೈನ್ ನಲ್ಲಿ ಹೋಗ್ತಾನೆ ತೆಗೆದಿದ್ದು,,,ಈ ಎಲ್ಲ ಫೋಟೊಗಳನ್ನ






ಅಂದ್ರ ಪ್ರದೇಶ ....ವಿಶಾಕಪಟ್ಟಣ, ಹತ್ತಿರದ ಒಂದು bridge .. 








ಬರಿ ಹೊರಗಡೆ ನೋಡ್ಕೊಂಡ್ ಫೋಟೋ ತೆಗಿತ ಇರೋದೇ ಕೆಲಸ...




ಒರಿಸ್ಸಾ - ಚಿಲಕ lake ಹತ್ತಿರ...
ಬೆಳಗಿನ ಜಾವ ಅರಳುತ್ತಿರ ತಾವರೆ, ಹೂವ....

ನಮ್ಮ ಟ್ರೈನ್ ಪಕ್ಕದಲ್ಲೇ ಹೋಗುತ್ತಿರುವ ಇನ್ನೊಂದು ಟ್ರೈನ್......

ಮಿನಿ ಥಿಯೇಟರ್.,... ಬೇಜಾರ್ ಅದಾಗ.... ಎಲ್ಲ ಸೇರಿ,, laptop ನಲ್ಲಿ ಫಿಲಂ ನೋಡ್ತಾ ಇದ್ವಿ.....



ಮುಂದುವರಿಯುವುದು ....




Tuesday, June 15, 2010

ಗಾಜಿನ ಕಲಾಕೃತಿಗಳ ಆಕರ್ಷಕ ಚಿತ್ತಾರ...

ಗಾಜು,,, ಎಂತಹ ವಸ್ತು ಅಲ್ವ... ಎಷ್ಟು ನಯವಾದ ವಸ್ತು.... ಇದರಿಂದ ಯಾವ ತರದ ಆಕೃತಿ ಬೇಕಾದರೂ ತಯಾರಿಸಬಹುದು..... ಬಹುಷಃ ... ಪ್ಲಾಸ್ಟಿಕ್. bronze ಬಳಿಕ ಗಾಜು (glass) ತುಂಬಾ ಚಾಲ್ತಿ ಯಲ್ಲಿ ಇರುವ ಅಲಂಕಾರಿಕ ವಸ್ತು ಅಂತ ಕಾಣುತ್ತೆ... ಕಾಫಿ , juice , ಕುಡಿಯುವ ಲೋಟದಿಂದ ಹಿಡಿದು.... ಮನೆಯ ಅಲಂಕಾರಿಕ ದೀಪ, ಶೋ ಕೇಸ್ , ಬೊಂಬೆಗಳು... ವಾಸ್ ಗಳು... ಎಲ್ಲಾನು ಗ್ಲಾಸ್ ಎಂಬ ಲೋಹ(brittle)  ಅವರಿಸಿಕೊಂಡ್ ಬಿಟ್ಟಿದೆ ಅಲ್ವ....


ಗ್ಲಾಸ್ ...ಅಥವಾ ಗಾಜು,,,, ಬಳಕೆಗೆ ಬಂದಿದ್ದು,,, 1500bc, ನಲ್ಲಿ ಅಂತೆ.. ಆದರೆ ಯಾವಾಗ ಇದರ ಜನನ ಆಯಿತು ಅಂತ ಇನ್ನು ಗೊತ್ತಿಲ್ಲ... ಮೊದಲು,, egypt ಪರಂಪರೆಯಲ್ಲಿ ಬಳಕೆಗೆ ಬಂತಂತೆ .. ಗ್ಲಾಸ್ ನಿಂದ ವಸ್ತು ತಯಾರಿಸೋದು ಶುರು ಮಾಡಿದ್ದು ಬ್ರಿಟನ್ ನಲ್ಲಿ.. ಆಮೇಲೆ ರೋಮ್, ಹಾಗೆ ಯುರೋಪ್ ನಲ್ಲಿ ಹೆಚ್ಚು ಹೆಚ್ಚು ಬಳಕೆಗೆ ಬಂತು ಅಂತ ಹೇಳ್ತಾರೆ...

(ಇದರ history ತಿಳಿಯಲು..ಇಲ್ಲಿ ನೋಡಿ http://www.specialistglass.co.uk/Glass-History.asp )

ಇದು ಹಾಗೆ ಇರಲಿ... ಇದರ ಬಗ್ಗೆ ಹಾಗೆ ಏನನ್ನೋ ಹುಡುಕುತ್ತ ಇರಬೇಕಾದರೆ,, ಕೆಲವು ಆಕರ್ಷಕ ಗ್ಲಾಸ್ಸ್ ಕಲಾಕೃತಿಗಳು ಸಿಕ್ಕವು,,, (http://www.glassartists.org/) ಅದನ್ನು ನಿಮ್ಮ ಜೊತೆ ಹಂಚಿಕೊಳ್ಥ ಇದ್ದೇನೆ ನೋಡಿ....

ಕೆಲವು ವಸ್ತುಗಳು ನಮ್ಮ ಜೊತೆಗೆ,, ನಮ್ಮ ಡೈಲಿ ಡೇ ಟು ಡೇ ಜೀವನ ದಲ್ಲಿ,,, ಒಂದು ಅವಿಬಾಜ್ಯ ಅಂಗವಾಗಿ

ಇರುತ್ತೆ,, ನಮಗೆ ಗೊತ್ತೇ ಆಗೋದಿಲ್ಲ....ಆದರು ಅದರ ಮೇಲೆ ಎಷ್ಟು ಅವಲಂಬಿತ ವಾಗಿ ಇರುತ್ತೇವೆ ಗೊತ್ತ...

ಇದನ್ನ ಯಾರು ಕಂಡು ಹಿಡಿದರೋ ಪುಣ್ಯಾತ್ಮ,,,ಅವನಿಗೊಂದು hats off ...

ಗ್ಲಾಸ್ಸ್ ಅಥವಾ ಗಾಜು ನಮ್ಮ ಜೀವನದಲ್ಲಿ ಇಲ್ಲದೆ ಇದ್ದಿದ್ದರೆ ಏನು ಆಗ್ತಾ ಇತ್ತು ಯೋಚಿಸಿ....

* ಗಾಜಿನ ಕನ್ನಡಿ ಇಲ್ಲದೆ ಹೋಗಿದ್ದರೆ....(ಹೆಣ್ಣು ಮಕ್ಕಳು ರೆಡಿ ಆಗೋಕೆ ಟೈಮ್ ವೇಸ್ಟ್ ಮಾಡ್ತಾ ಇರಲಿಲ್ಲ ಬಿಡಿ :-))


* ಮನೆಯ ಕಿಟಕಿ..ಹಾಗು ಅಲಂಕಾರಕ್ಕೆ ಗಾಜು ಇಲ್ಲದೆ ಇದ್ದಿದ್ದರೆ...? (ಎಲ್ಲ ಕ್ಲೋಸ್,,ಮರದಲ್ಲೇ ಕಿಂಡಿ ಮಾಡಿ ನೋಡಬೇಕಾಗಿತ್ತು..ಅಲ್ವ :-)


* ಹೆಣ್ಣು ಮಕ್ಕಳ ಗಾಜಿನ ಬಳೆಗಳು ಇಲ್ಲದೆ ಇದ್ದಿದ್ದರೆ...? ( ಪ್ಲಾಸ್ಟಿಕ್ ,fiber ಬಳೆ ಇದೆ ಅಂತೀರಾ)


* ಗಾಜಿನ ಬಲ್ಬ್ . ದೀಪ ಇಲ್ಲದೆ ಇದ್ದಿದ್ದರೆ....??


* ಮದ್ಯ ಪ್ರಿಯರಿಗೆ ,,ಗ್ಲಾಸ್ಸ್ bottle ಇಲ್ಲದೆ ಇದ್ದಿದ್ದರೆ?


* ಬಸ್ಸು ಲಾರಿ,, ಕಾರು,, ಇದಕ್ಕೆ ಗ್ಲಾಸ್ ಇಲ್ಲ ಅಂತ ಇದ್ದಿದ್ದರೆ....?


* .........

ಹಾಗೆ ಯೋಚಿಸಿ ನೋಡಿ,, ಗ್ಲಾಸ್ ಮೇಲೆ ಎಷ್ಟು ಡಿಪೆಂಡ್ ಆಗಿದ್ದೇವೆ ಅಂತ..... ಹಾಗೆ ಯೋಚಿಸುತ್ತ... ಕೆಳಗಿರುವ ಕೆಲವು ಒಳ್ಳೆಯ ಗಾಜಿನ ಕಲಾಕ್ರುತಿಗಳನ್ನ ನೋಡಿ.... ನಿಮ್ಮ ಅನಿಸಿಕೆ ತಿಳಿಸಿ....