ನನಗೆ ಮೊದಲಿನಿಂದಲೂ,,, ಸ್ನೋ ಫಾಲ್ ನೋಡಬೇಕು ಅಂಥ ತುಂಬ ಆಸೆ ಇತ್ತು.... ಆದರೆ ನಮ್ಮ ಬೆಂಗಳೂರಿನಲ್ಲಿ ಎಲ್ಲಿ ಸಾದ್ಯ....ಎಸ್ಟೋ ದಿನಗಳ ಆಸೆ , ಕನಸು ಒಂದು ದಿನ ನನಸಾಗುವ ಸಮಯ ಬರುತ್ತೆ ಅಂಥ, ಅದು ಇಷ್ಟು ಬೇಗ ಬರುತ್ತೆ ಅಂಥ ನನಗೆ ಅನ್ನಿಸಿರಲಿಲ್ಲ...... ನಾನು ಲಂಡನ್ ಎಂಬ ಮಾಯಾ ನಗರದಲ್ಲಿ ಇದ್ದ ದಿನಗಳು.....ನಾವು ಹೋಗಿದ್ದು ಪೀಕ್ ವಿಂಟರ್ ಸೀಸನ್ ನಲ್ಲಿ..... ವಿಪರೀತ ಚಳಿ..... ಹೊಂದಿಕೊಳ್ಳೊದಕ್ಕೆ ತುಂಬ ಸಮಯ ಹಿಡಿಯಿತು.... ಡಿಸೆಂಬರ್ ಮುಗಿದು,,, ಆಗ ತಾನೆ ಹೊಸವರುಷದ ಜನವರಿ ಶುರು ಆಗಿತ್ತು..... ನಮಗೂ ಅಲ್ಲಿಯ ವಾತವರಣ,ಫಾಸ್ಟ್ ಲೈಫ್......ಎಲ್ಲದಕ್ಕೂ ಹೊಂದಿಕೊಂಡು, ಹೊಸ ಜನ, ಹೊಸ ವಿಚಾರದ ಜೊತೆಗೆ, ನಮ್ಮ ಕೆಲಸದ ಕಡೆ ಹೆಚ್ಚು ಗಮನ ಕೊಟ್ಟು.... ದಿನಗಳನ್ನು ಸವೆಸುತ್ತಿದ್ದ ಕಾಲ.. ಒಂದು ದಿನ ಸಂಜೆ.... ಬ್ಯುಸಿ ಸೋಮವಾರದ ಸಂಜೆ,,, ಆಫೀಸ್ ನಲ್ಲಿ ಇರುವ ಎಲ್ಲರ ಬಾಯಿಯಲ್ಲೂ ಮಂಗಳವಾರದ ದಿನ ಆಫೀಸ್ ಗೆ ಹೀಗೆ ಬರುವದು ಅಂಥ ಚರ್ಚೆ ನೆದಿಥ ಇತ್ತು.... ನಾನು ಮತ್ತೆ ನನ್ನ ಜೊತೆ ಬಂದಿದ್ದ.. ನನ್ನ ಸಹ ಸಂಗಡಿಗರು,, ಯಾವುದೊ presentation ಮುಗಿಸಿ ಕೊಂಡು ಸಿಟಿ ರೋಡ್ ನಲ್ಲಿ ಇರುವು ನಮ್ಮ Main ಆಫೀಸಿಗೆ ಬಂದೆವು... ನಮ್ಮನು ನೋಡಿಕೊಳ್ಳುತ್ತಿದ್ದ ಅಲ್ಲಿನ ಮ್ಯಾನೇಜರ್ ಒಬ್ಬರು ನಮ್ಮ ಬಳಿ ಬಂದು "ನಾಳೆ ನೀವು ಹೇಗೆ ಬರುತ್ತೀರಾ ಅಂಥ ಕೇಳಿದರು ..." ನಮಗೆ ಯಾಕೆ ಹೇಗೆ ಕೇಳ್ತಾ ಇದ್ದರೆ ಅಂಥ ಅರ್ಥ ಆಗಲಿಲ್ಲಾ....ನಾವು ಮಖ ಮಖ ನೋಡಿಕೊಂಡು,,, ಮಾಮೂಲಿ ಬಸ್ಸಿನಲ್ಲಿ ಅಥವಾ tube ನಲ್ಲಿ ಬರುತ್ತೇವೆ , ಯಾಕೆ ಹೇಗೆ ಕೇಳ್ತಾ ಇದ್ದೀರಾ ಅಂಥ ಅವರಿಗೆ question ಮಾಡಿದೆವು... ಅದಕ್ಕೆ ಅವರು ನಕ್ಕು,,, ಹಾ ಹಾ, ಹಾಗಲ್ಲ... ನಾಳೆ ಬೆಳಿಗ್ಗೆ ಬಸ್ ಅಥವ tube ಸಿಗೋದು ಕಷ್ಟ ಅಂಥ ಹೇಳಿದ್ರು..... ನಾವೆಲ್ಲ ಒಟ್ಟಿಗೆ ಯಾಕೆ ಅಂಥ ಅವರ ಮಾತನು ಪೂರ್ತ ಮಾಡುವುದಕಿಂಥ ಮುಂಚೇನೆ ಕೇಳಿ ಬಿಟ್ಟು ಇದ್ವಿ.... ನನ್ನ ತಲೆನಲ್ಲಿ ಆಗಲೇ ಏನೇನೋ ಯೋಚನೆ "ನಾಳೆ ಸ್ಟ್ರೈಕ್ ಇರಬಹುದ.." ಲಂಡನ್ ನಲ್ಲಿ ಕೂಡ ಸ್ಟ್ರೈಕ್ ನಡಿಯುತ್ತ... ಅದು ಹೇಗೆ ಇರುತ್ತೆ... ನಮ್ಮ ಬೆಂಗಳೂರಿನಲ್ಲಿ ಅಗೋ ಥರ ಎಲ್ಲ್ಲ ಬಂದ್ ಆಗಿರುತ್ತ? ಹೇಗೆ ಒಂದು ನಿಮಿಷದಲ್ಲಿ ಎಲ್ಲ ಯೋಚನೆಗಳು ಬಂದು ಹೋಗಿದ್ದವು......ಆದರೆ ಅಲ್ಲಿ ಆಗುತ್ತಿದ್ದದೆ ಬೇರೆ.... ಸಂದೀಪ್ (ಮ್ಯಾನೇಜರ್ ಅವರ ಹೆಸರು) ಹೇಳಿದ್ದು ಕೇಳಿದ ಮೇಲೆ ನನಗೆ ನಾನೇ ಯಾವುದೊ ಲೋಕದಲ್ಲಿ ಮುಳುಗಿ ಹೋಗಿದ್ದೆ....ಅವರು ಹೇಳ್ತಾ ಇದ್ದದು ನಿಜಾನ ಅಥವಾ ಸುಳ್ಳ ಅಂಥ ನಂಬೋಕೆ ಎಸ್ಟೋ ಹೊತ್ತು ಬೇಕಾಯಿತು...ಅವರು ಹೇಳಿದ್ದಿಸ್ತೆ "ನಾಳೆ ಹವಾಮಾನ ವೈಪರೀತ್ಯ ದಿಂದಾಗಿ ತುಂಬ " snow fall " ಅಗೋ chances ಜಾಸ್ತಿ ಇರುವುದರಿಂದ ಬೆಳಿಗ್ಗೆ bus ಹಾಗು tube ಸಂಚಾರ ಇಲ್ಲದಿರಬಹುದು,, ಅದಕ್ಕಾಗಿ ನೀವು ಹೇಗೆ ಆಫೀಸ್ ಬರುತ್ತಿರಿ ಅಂಥ ಕೇಳಿದೆ.. ನಾಳೆ ಬೆಳಿಗ್ಗೆ ಬಸ್ ಸಂಚಾರ ಇರಲಿಲ್ಲ ಅಂದರೆ ನಾನು ನಿಮಗಾಗಿ taxi arrange ಮಾಡುತ್ತೇನೆ ಅಂಥ ಹೇಳ್ತಾ ಇದ್ರೂ....
snow fall ಅಂಥ ಕೇಳಿದ್ದೆ ತಡ ನನಗೆ ಅವರು ಹೇಳುತ್ತಿದ್ದ ಮುಂದಿನ ವರ್ಡ್ಸ್ ಏನು ಕೇಳಿಸ್ತಾ ಇರಲಿಲ್ಲ..... !!!! snow fall ......ವೊವೋ ,,,,,,ಎಸ್ಟೋ ದಿನಗಳಿಂದ ನೋಡಬೇಕು,,, ಮಂಜಿನ ಜೊತೆ,ಹಿಮದ ಜೊತೆ, ಆಟ ಆಡಬೇಕು ಅಂಥ ಅಂದುಕೊಳ್ಥ ಇದ್ದ ಅಸೆ ನಾಳೆ ನನಸಾಗುತ್ತೆ ಅನ್ನೋದೇ ಒಂದು ಖುಷಿ.......
ಲಂಡನ್ ನಲ್ಲಿ weather prediction ತುಂಬ accurate ಆಗಿ ಇರುತ್ತೆ ... ಒಂದು ದಿನದಲ್ಲಿ 4 ತರಹದ climent ಚೇಂಜ್ ನೋಡ್ತಾ ಇದ್ದ ನಾವು, ಅದಕ್ಕೆ ಅಡ್ಜಸ್ಟ್ ಆಗಿ ಬಿಟ್ ಇದ್ವಿ......
ನಾವು ಪ್ರತೀ ಬಾರಿ ಹೊರಗಡೆ ಹೋಗಬೇಕಿದ್ದಾಗ,,, ಅಲ್ಲಿ ದಿನ ಸಿಗುವ ಬಿಟ್ಟಿ ನ್ಯೂಸ್ ಪೇಪರ್ ನಲ್ಲಿ,, ಅಥವಾ,,, Internet ನಲ್ಲಿ ನೋಡಿಯೇ ಹೊರಗಡೆ ಕಾಲು ಇಡ್ತಾ ಇದ್ದದ್ದು.....ಅಸ್ಟು ಅಭ್ಯಾಸ ಆಗಿ ಹೋಗಿತ್ತು,,, ಮತ್ತೆ ಅಸ್ಟು accurate ಆಗಿ ಅಪ್ಡೇಟ್ ಆಗ್ತಾ ಇತ್ತು ಅಲ್ಲಿನ climent .
ಸಂದೀಪ್(ಮ್ಯಾನೇಜರ್) ಹಾಗೆ ಹೇಳಿದಾಗಿನಿಂದ ನನ್ನ ತಲೆ ಅಲ್ಲಿ ಇರಲೇ ಇಲ್ಲ.... ಫಸ್ಟ್ ಹೋಗಿ Internet ನಲ್ಲಿ,,, weather forecast ನೋಡಿ.. confirm ಮಾಡಿ ಕೊಂಡೆ... ಅಲ್ಲಿನ ಮ್ಯಾನೇಜರ್ ಬೇರೆ arrange ment ಕೂಡ ಮಾಡಿದ್ರು,,,incase ಏನಾದ್ರು transport ತೊಂದರೆ ಆದರೆ ನಾವು ಆಫೀಸ್ ಗೆ ಕಾಲ್ ಮಾಡಬೇಕು ಆಮೇಲೆ,, ಅವರು ಟ್ಯಾಕ್ಸಿ ಮಾಡಿ ಕಳುಹಿಸುತ್ತಾರೆ ಅದರಲ್ಲಿ ಬರಬೇಕು ... ಅಥವಾ ಎಲ್ಲ ಸರಿ ಇದ್ದರೆ ನಾವು ಮಾಮೂಲಿ ಬಸ್ ನಲ್ಲೋ ಅಥವಾ tube ನಲ್ಲಿ ಬರಬೇಕು ಎಂದು....
ಸರಿ ಅಂತ ಅವೊತು ಸಂಜೆ ಆಫೀಸ್ ನಿಂದ ನಮ್ಮ ಅಪಾರ್ಟ್ಮೆಂಟ್ ಕಡೆ ಹೊರಟೆವು,,,,ನಮ್ಮ ಆಫೀಸ್ ಇದ್ದದ್ದು "ಸಿಟಿ ರೋಡ್ " Old street ಅನ್ನೋ ಪ್ಲೇಸ್ ನಲ್ಲಿ , ಅಲ್ಲಿಂದ ನಾವು ಇದ್ದ ಅಪಾರ್ಟ್ಮೆಂಟ್ ಒಂದು 5 ರಿಂದ 6 km ದೂರ , ಬೆಳಗಿನ ಹೊತ್ತು ಆಫೀಸಿಗೆ ಬೇಗ ಹೋಗಬೇಕು ಎಂದು ಬಸ್ ನಲ್ಲಿ ಹೋಗ್ತಾ ಇದ್ದೆವು, ನಾವು ಇದ್ದ tower bridge ರೋಡ್ ನಲ್ಲಿ ಇರುವ ಅಪಾರ್ಟ್ಮೆಂಟ್ ಹತ್ತಿರದಿಂದ ಡೈರೆಕ್ಟ್ ಆಗಿ ಒಂದು ಬಸ್ "Bishopgate " ತನಕ ಹೋಗುತ್ತಾ ಇತ್ತು,, ಅಲ್ಲಿಂದ ನಮ್ಮ ಆಫೀಸ್ 5 mins walkable distance . ಅದಕ್ಕೆ ಬೆಳಗ್ಗೆ ಅದಸ್ಟು ಬೇಗ ರೆಡಿ ಆಗಿ,,, ಬಸ್ ನಲ್ಲಿ ಹೋಗ್ತಾ,,, ಸಂಜೆ ವಾಪಸ್ಸು ಬರೋವಾಗ ನಿದಾನಕ್ಕೆ ನಡೆದುಕೊಂಡು ಬರುತ್ತಾ ಇದ್ದವಿ.....ಸಂಜೆ ಲಂಡನ್ ನಗರದ ಜಗಮಗಿಸುವ ಲೈಟ್ ಬೆಳಕಿನಲ್ಲಿ... 5 ಅಥವಾ 6 ಡಿಗ್ರಿ ಇರುವ ಕೊರೆಯೌವ ಚಳಿಯಲ್ಲಿ ನೆದೆದುಕೊಂಡ್ ನಾವು ಅನುಭವಿಸುತ್ತ ಇದ್ದ ಮಜನೆ ಬೇರೆ.....ಅಹಾ... ಇವಾಗಲು ನನ್ನ ಕಣ್ಣ ಮುಂದೆ ಇದೆ......
ಅದೇ ರೀತಿ ಸೋಮವಾರ ರಾತ್ರಿ ನಡೆದುಕೊಂಡು ನಮ್ಮ ನಮ್ಮಲೇ ಮಾತಾಡಿಕೊಂಡು ಹೋದೆವು,,,,,ನಾವು ಹೋಗಿದ್ದ 4 ಜನರಿಗೂ ಸ್ನೋ ಫಾಲ್ ಅನ್ನೋದು ಮೊದಲ ಸಲ ಅನುಭವ......ಎಲ್ಲರಲ್ಲೂ ಏನೋ ಒಂದು ಥರ ಕುಷಿ, ಅಸೆ,,,ಆನಂದ....ನನಗಂತು,,,,,ಏನ್ ಹೇಳೋದು,, ನಾನು ಅ ಲೋಕದಲ್ಲೇ ಇರಲಿಲ್ಲ ಬಿಡಿ.....ರಾತ್ರಿ ನಮ್ಮ ಅಪಾರ್ಟ್ಮೆಂಟ್ ಗೆ ಹೋಗಿ,,, ಸ್ವಲ್ಪ ಅನ್ನ ಸಾರು ಮಾಡಿಕೊಂಡು ತಿಂದು..(ನಾವು 4 ಜನ ರಾತ್ರಿ ಹೊತ್ತು ಅಡುಗೆ ಮಾಡಿಕೊಂಡು ತಿಂತ ಇದ್ದದ್ದೇ ಒಂದು ಸ್ಟೋರಿ, ಅದನ್ನು ನಿದಾನಕ್ಕೆ ಹಂಚ್ಕೊತೇನೆ.). ಬೆಳಗ್ಗೆ ಯಾವಾಗ ಆಗುತ್ತೋ ಅಂತ ಕನಸು ಕಾಣುತ್ತ ಇದ್ದೆ.....ರಾತ್ರಿ ನಿದ್ದೇನೆ ಬರದು,,, ಮಂಜು , ಹಿಮ ಹೇಗೆ ಬಿಳುತ್ತೆ....ನಾವು ನಡೆದಾದ ಬಹುದ ,,,, ಹಿಮವನ್ನು ಕೈನಲ್ಲಿ ಇಟ್ಟುಕೊಳ್ಳ ಬಹುದ.....ಅದರ ಜೊತೆ ಹೇಗೆ ಆಟ ಆಡಬೇಕು,,, ಛೆ ನಾಳೆ ಒಂದು ದಿನ ರಜೆ ಇದ್ದಿದ್ದರೆ,,,ಅಥವ್ ಎ ಹಿಮ saturday ನೋ sunday ನೋ ಬಿದ್ದಿದ್ದರೆ.....ಒಂದ ಎರಡ.....ಒಟ್ಟಿನಲ್ಲಿ ನಿದ್ದೆ ಅನ್ನೋದು.... ಬರಲೇ ಇಲ್ಲ.....ಯಾವಾಗ ನಿದ್ದೆ ಬಂತೋ ಗೊತ್ತಿಲ್ಲ,,, ಅದರಲ್ಲೂ ಯಾವಾಗಲೋ ಮದ್ಯ ರಾತ್ರಿ,,,ಎದ್ದು ಹೊರಗಡೆ ನೋಡ್ತಾ ಇದ್ದೆ...ಹೊರಗಡೆ ಪ್ರಶಾಂತ ವಾದ ವಾತಾವರಣ,, ಮಂಜಿನ, ಹಿಮದ , ಸದ್ದೇ ಇಲ್ಲ... ಅವಾಗ ಒಮ್ಮೆ ಅನ್ನಿಸಿತು,,, ಛೆ ನಾಳೆ ಸ್ನೋ ಫಾಲ್ ಆಗೋದೇ ಇಲ್ವೇನೋ ಅಂತ,,,,,ಸರಿ ಅಂತ ಅನ್ಕೊಂಡ್ ಮತ್ತೆ ಮಲಗಿಕೊಂಡೆ.......
.....
.......
.........
ಬೆಳಗ್ಗೆ ಅಲಾರಂ ಹೊದೆದುಕೊಂದಾಗಲೇ ಎಚ್ಚರ ಆಗಿದ್ದು,,,,,,,,6:30 ಆಗಿದ್ದಿರಬೇಕು,,,,,,,ಎದ್ದವನೇ ಮೊದಲು ಮಾಡಿದ ಕೆಲಸ ಅಂದ್ರೆ ಕಿಟಕಿ ಹತ್ರ ಬಂದು ಹೊರಗಡೆ ನೋಡಿದ್ದು,,,,,,,,,,ಒಹ್.,,,,,,,,!!!!!!! ನನ್ನ ಕಣ್ಣನು ನಾನೇ ನಂಬಲು ಆಗುತ್ತಿಲ್ಲ..........ಹೊರಗಡೆ ಎಲ್ಲ ಬೆಳ್ಳಗೆ ಕಾಣುತ್ತ ಇದೆ..... ಯಾವಾಗ ಶುರು ಆಗಿತ್ತೋ ಮಂಜು, ಹಿಮ ಬೀಳುವುದಕ್ಕೆ .....ಒಟ್ಟಿನಲ್ಲಿ ನಾನು ಕಾಯುತಿದ್ದ ದಿನ ಬಂದೆ ಬಿಟ್ಟಿತು,,, ನನ್ನ ಆನಂದಕ್ಕೆ , ಸಂತೋಷಕ್ಕೆ ಮಿತಿಯೇ ಇರಲಿಲ್ಲ......
ಆದರೆ ಹೊರಗಡೆ ತುಂಬ ಕತ್ತಲು ಕತ್ತಲು ಇತ್ತು , UK ನಲ್ಲಿ ವಿಂಟರ್ ಸೀಸನ್ ನಲ್ಲಿ ಬೆಳಕಾಗೋದು ಸ್ವಲ್ಪ ಲೇಟ್ , ಅದು ಅಲ್ಲದಿರ ನಾವು ಹಾಗೆ sudden ಆಗಿ ಹೊರಗಡೆ ಹೋಗೋದಕ್ಕೆ ಆಗೋದಿಲ್ಲ... ತುಂಬ ಚಳಿ ಇರುತ್ತೆ,,, ಸೊ ನಾನು ಫಸ್ಟ್ ನನ್ನ ಇನ್ನೊಬ್ಬ room mate ಅನ್ನು ಎಬ್ಬಿಸಿ... ಮೊದಲು ಎಷ್ಟು ಬೇಗ ಆಗುತ್ತೋ ಅಸ್ಟು ಬೇಗ ರೆಡಿ ಆದೆ.....ನಾನು ರೆಡಿ ಅಗೋ ಹೊತ್ತಿಗೆ ಸ್ವಲ್ಪ ಬೆಳಕು ಹರಿದಿತ್ತು.......ನನ್ನ ಸಂತೋಷಕೆ ಕೊನೆಯೇ ಇರಲಿಲ್ಲ... ಯಾವಾಗ ಬೀಗ ರೆಡಿ ಆಗಿ,, ಕೆಳಗಡೆ ಹೋಗಿ,, ಆ ಮಂಜಿನಲ್ಲಿ ಕೈ ಇಡುತ್ತೇನೋ ಅಂತ ಅನಿಸ್ತ ಇತ್ತು...... ಹಾಗೆ ಹೊರಗಡೆ ನೋಡಿದೆ....."ಶುಬ್ರವಾದ ಬೆಳ್ಳಗಿನ ಮಂಜು ನಿದಾನಕ್ಕೆ ಬೀಳುತ್ತಾ ಇದ್ದೆ... ಆಗಲೇ ರೋಡಿನ ಮೇಲೆ, ಮರದ ಮೇಲೆ... ಅಕ್ಕ ಪಕ್ಕ ನಿಂತಿರುವ ಕಾರ್ ಗಳ ಮೇಲೆಲ್ಲಾ ಬಂದು ಕೂತಿದ್ದಾಗಿದೆ......" ಅದನ್ನ ನೋಡ್ತಾ ನನ್ನ ಮನಸು...ಫುಲ್ ಖುಷಿ,,,, ಮಾತೆ ಬರ್ತಾ ಇರಲಿಲ್ಲ.......
ಮೊದಲು ನಮ್ಮ ಅಪಾರ್ಟ್ಮೆಂಟ್ ನಲ್ಲಿ ಇರುವ ನಾಲ್ಕು ಕಡೆ ಕಿಟಕಿಯ ಹತ್ತಿರ ಹೋಗಿ ನೋಡಿದ್ದೇ ನೋಡಿದ್ದು....
ಎಲ್ಲ ಕಡೆನು ಕಾರ್ ನಿಂತಿತು.....ಅದರ ಮೇಲೆ ಹಿಮದ ರಾಶಿ.....
ಆಮೇಲೆ ನಿದಾನಕ್ಕೆ ರೆಡಿ ಆಗಿ,,,, ಫುಲ್ ಬೆಚ್ಚಗೆ ಮೈ ತುಂಬ ಕವರ್ ಮಾಡಿಕೊಂಡು (ಇನ್ನರ್ wear , ಥರ್ಮಲ್ wear , ಆಮೇಲೆ ಫಾರ್ಮಲ್ಸ್ ಬಟ್ಟೆ ಅದರಮೇಲೆ ಸ್ವೆಟರ್, ಅದಾದಮೇಲೆ ಬೆಂಗಳೂರಿನಿಂದ ಮೂರು ಸಾವಿರ ಕೊಟ್ಟು ತಂದಿದ್ದ ಮಂಡಿ ತನಕ ಬರುವ ಬೆಚ್ಚಗಿನ ಕೋಟು ಇಷ್ಟು ಇಲ್ಲದಿರ ಹೊರಗಡೆ ಹೋಗೋಕೆ ನನಗೆ ಆಗ್ತಾ ಇರಲಿಲ್ಲ ನನಗೊಬ್ಬನಿಗೆ ಅಲ್ಲ... ಎಲ್ಲರಿಗೂ... ಇಷ್ಟು ಬಂದೋಬಸ್ತ್ uniform ಇಲ್ಲದಿರ.... ಹೊರಗಡೆ ಹೋಗೋಕೆ ಖಂಡಿತ ಆಗ್ತಾ ಇರಲಿಲ್ಲ.....ಒಟ್ಟಿನಲ್ಲಿ ಅಲ್ಲಿ ಇರುವ ತನಕ ಇಸ್ಟೆಲ್ಲಾ ಸರ್ಕಸ್ ಮಾಡಲೇ ಬೇಕಾಗಿತ್ತು......) ನಿದಾನಕ್ಕೆ ಹೊರಗಡೆ ಹೆಜ್ಜೆ ಇಟ್ಟೇ.....ಅ ಕ್ಷಣ ವನ್ನು ವರ್ಣಿಸಲು ನನಗೆ ಶಬ್ದಗಳೇ ಇಲ್ಲ....ರೋಡ್ ಮೇಲೆ ಬಿದ್ದಿದ್ದ ಹಿಮವನ್ನು ಮುಟ್ಟಿದೆ,,,, ಕಾರ್ ಹತ್ರ ಹೋಗಿ ಅದರ ಮೇಲೆ ಬಿದ್ದಿದ್ದ ಮಂಜನ್ನು ಹಿಡಿದುಕೊಂಡೇ......ಹೆಜ್ಜೆ ಇಟ್ಟರೆ ಸ್ಲಿಪ್ ಆಗ್ತಾ ಇದ್ದ ರೋಡ್,,,,,ನಿದಾನಕ್ಕೆ ನಮ್ಮ ಅಪಾರ್ಟ್ ment ಸುತ್ತಲೆಲ್ಲ ಓಡಾಡಿದೆ ...ನಿದಾನಕ್ಕೆ ಹಿಮ ಮಳೆ ಥರ ಬೀಳ್ತಾ ಇತ್ತು..........
ಅವೊತ್ತು ಆಫೀಸ್ ಇರಲಿಲ್ಲ ಅಂದಿದ್ದಾರೆ......ನಾನು ಎಲ್ಲಿ ಇರ್ತ ಇದ್ದೇನೆ ಗೊತ್ತಿರಲಿಲ್ಲ ...ಆದರು ಇವೊತ್ತು ಆಫೀಸ್ಗೆ ಸ್ವಲ್ಪ ಲೇಟ್ ಆಗಿ ಹೋದರಾಯಿತು ಅಂತ ತೀರ್ಮಾನಿಸಿ,,,,,ಇಂಥ ಅನುಭವನ್ನು ಅದಸ್ಟು ಅನುಭವಿಸಿ ಹೋಗೋಣ ಅಂತ ತೀರ್ಮಾನಿಸಿಯಾಗಿತ್ತು,,,,
(ಮುದುವರಿಯುವುದು.........ಆಫೀಸಿಗೆ ಹೋಗ್ತಾ ದಾರಿನಲ್ಲಿ......ಅಕ್ಕ ಪಕ್ಕದ ಪಾರ್ಕ್ನಲ್ಲಿ.......ಆಫೀಸ್ ಹತ್ರ ಆದ ಅನುಭವಗಳನ್ನ ಮುಂದಿನ post ನಲ್ಲಿ ಹಂಚಿಕೊಳ್ಳುತ್ತೇನೆ.......)
ಅವೊತ್ತು ಆಫೀಸ್ ಇರಲಿಲ್ಲ ಅಂದಿದ್ದಾರೆ......ನಾನು ಎಲ್ಲಿ ಇರ್ತ ಇದ್ದೇನೆ ಗೊತ್ತಿರಲಿಲ್ಲ ...ಆದರು ಇವೊತ್ತು ಆಫೀಸ್ಗೆ ಸ್ವಲ್ಪ ಲೇಟ್ ಆಗಿ ಹೋದರಾಯಿತು ಅಂತ ತೀರ್ಮಾನಿಸಿ,,,,,ಇಂಥ ಅನುಭವನ್ನು ಅದಸ್ಟು ಅನುಭವಿಸಿ ಹೋಗೋಣ ಅಂತ ತೀರ್ಮಾನಿಸಿಯಾಗಿತ್ತು,,,,
(ಮುದುವರಿಯುವುದು.........ಆಫೀಸಿಗೆ ಹೋಗ್ತಾ ದಾರಿನಲ್ಲಿ......ಅಕ್ಕ ಪಕ್ಕದ ಪಾರ್ಕ್ನಲ್ಲಿ.......ಆಫೀಸ್ ಹತ್ರ ಆದ ಅನುಭವಗಳನ್ನ ಮುಂದಿನ post ನಲ್ಲಿ ಹಂಚಿಕೊಳ್ಳುತ್ತೇನೆ.......)