Wednesday, May 27, 2009

ಮರದ ದಿಮ್ಮಿಯಲ್ಲೇ ಅರಳುವ ಇವರ ಕಲೆ ಅದ್ಬುತಃ!!!!!! Mr. Randy Boni


Mr. Randy Boni ~ Carving Full Time Since 1989
ಇವೊತ್ತು ಒಬ್ಬ ಮಹಾನ್ ಕಲೆಗಾರನನ್ನು ಪರಿಚಯ ಮಾಡಿಸ್ತಾ ಇದ್ದೇನೆ ನಿಮಗೆ ..... ಇವರ ಹೆಸರು Mr. Randy Boni ಅಂಥ
ಹುಟ್ಟಿದ್ದು Ridgeway Pennsylvania ನಲ್ಲಿ . ಇವರು ತಮ್ಮ ಬಾಲ್ಯವನ್ನು the Allegheny National Forest ಹತ್ರ ಬೆಳೆಯುತ್ತಾ ಅಲ್ಲಿನ ಪ್ರಾಣಿಪಕ್ಷಿಗಳ ಜೊತೆ ಬೆರೆಯುತ್ತಾ ಕಳೆದರು. ವಿಪರ್ಯಾಸ ಎಂದರೆ ಇವರಿಗೆ ಹುಟ್ಟಿದಾಗಿನಿಂದ blindness (cataracts) ಇತ್ತು, ಇದು heridity ಇಂದ ಬಂದಿದ್ದಂತೆ . ಅಂದರೆ ಸರಿಯಾಗಿ ಕಣ್ಣು ಕಾಣಿಸುತ್ತ ಇರಲಿಲ್ಲ ,, 30 ನೆ ವಯಸ್ಸಿನಲ್ಲಿ ಆಪರೇಷನ್ ಆದಮೇಲೆ ಇವರಿಗೇ ಸ್ಪಷ್ಟವಾಗಿ ಕಣ್ಣು ಕಾಣಿಸುವುದಕ್ಕೆ ಅನುಕೂಲ ಆಯ್ತಂತೆ... ಇವರಿಗೆ ಹಾಗು ಇವರ twin brother ಗೆ ಇಬ್ಬರಿಗೂ heridity ಪ್ರಾಬ್ಲಮ್ ಇತ್ತು. ಆದರೆ ಇದು ಯಾವುದು ಇವರ ಕಲೆಗೆ ಅಡ್ಡ ಬರಲಿಲ್ಲ ಎನ್ನುವುದು ಆಶ್ಚರ್ಯಕರವಾದ ಸಂಗತಿ..
ಇವರ ಇಡಿ ಫ್ಯಾಮಿಲಿ ತುಂಬ ಕ್ರಿಯೇಟಿವ್... ಇವರ ಇನ್ನೊಬ್ಬ ಟ್ವಿನ್ ಬ್ರದರ್ ಬಗ್ಗೆ ಇನ್ನೊಮ್ಮೆ ಹೇಳುತ್ತೇನೆ...
ಇವರ ನೆಚ್ಚಿನ ಹವ್ಯಾಸ ಮರಗಳಲ್ಲಿ ಕೆತ್ತನೆ ಕೆಲಸ ಮಾಡುವುದು ಹಾಗು ಅದಕ್ಕೆ ಬಣ್ಣವನ್ನು ಬಳಿದು ಮಾರುವುದು (Carving) ,,, ಇದರಲ್ಲಿ ಅಂಥ ವಿಶೇಷ ಏನು ಅಂತಿರ.... ಕೆಳಗಡೆ ಇವರ ಸ್ಯಾಂಪಲ್ ಆರ್ಟ್ ಗಳನ್ನೂ ತೋರಿಸಿದ್ದೇನೆ ನೋಡಿ . ನಿಮಗೆ ಗೊತ್ತಾಗುತ್ತೆ ಎಂಥ ಕಲೆ ಅಂಥ
ಇವರು ತುಂಬ ಪರಿಸರ ಪ್ರೇಮಿ. ಇವರ ಕಲಾಕೃತಿಗಳಿಗೆ ಬಳಸುವ ಮರದ ದಿಮ್ಮಿಗಳು ಎಂತದ್ದು ಗೊತ್ತ... "ಕಾಡಿನಲ್ಲಿ ಅದಾಗೇ ಬಿದ್ದಿರುವ ಮರಗಳು, damaged ಮರಗಳು , ಮತ್ತು ಸತ್ತು ಹೋಗಿರುವ ಒಣಗಿದ ಮರಗಳು... ಬರಿ ತಮ್ಮ ಕಲೆಗೊಸ್ಕರನೆ ಮರಗಳನ್ನು ಇವರು ಕಡಿಯುವುದಿಲ್ಲ. ಚಿಕ್ಕವರಗಿದ್ದಗಿನಿಂದ Forest ನಲ್ಲಿ ಮರಗಳ ಜೊತೆ ಬೆಳೆದಿರುವ ಇವರಿಗೇ... ಅದನ್ನ ಕಂಡರೆ ತುಂಬ respect. ತುಂಬ ಗೌರವ ದಿಂದ ನೋಡಿಕೊಳ್ಳುತ್ತಾರೆ...ಇವರು ನ್ಯಾಷನಲ್ Forest safeguarding ಮೆಂಬರ್ ಸಹ ಆಗಿದ್ದಾರೆ. ಒಂದು ಕಡೆ ಮರ ಉರುಳಿದರೆ ಅದೇ ಥರ ಮರಗಳನ್ನು ಬೆಳೆಸುತ್ತಾರಂತೆ... ಅಸ್ಟು ಪ್ರೀತಿ ಮರಗಳ ಹಾಗು ಪರಿಸರದ ಮೇಲೆ..
"If a tree is dying or has to be taken down, I feel I'm preserving some remembrance of the tree with my carvings," he stated.
ಅಸ್ಟು ಸರಿಯಾಗಿ ಕಣ್ಣು ಕಾಣಿಸದಿದ್ದ ಕಾರಣ ಚಿಕ್ಕ ವಯಸಿನಲ್ಲಿ ಸರಿಯಾಗಿ ಒಳ್ಳೆ ಸ್ಕೂಲಿಗೆ ಹೋಗದೆ Gym, Art, and wood shop ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು,, ಇ ಆರ್ಟಿಸ್ಟ್, ತಮ್ಮ ಕ್ರಿಯೇಟಿವ್ ಕಲೆ ನಲ್ಲೆ ಸಂತೋಷವನ್ನು ಕಾಣುತ್ತಿದ್ದಾರೆ. ಇವರಿಗೇ ಹಣ ಮುಖ್ಯವಲ್ಲ ವಂತೆ... Art ಮುಖ್ಯ ... ಹಣಕಾಗಿ ಯಾವೊತ್ತು ತಮ್ಮನ್ನು ಹಾಗು ತಮ್ಮ ಕಲೆಯನ್ನು ಮಾರಿಕೊಂಡು ಇಲ್ಲವಂತೆ.... ಅವರ ಮಾತಿನಲ್ಲೇ ಹೀಗೆ ಹೇಳುತ್ತಾರೆ ". "I'm a fool about it, I've built my life on creative expression,"
ಇವರ ಕತೆ ಇವರ ಫ್ಯಾಮಿಲಿ ಕಥೆ ಕೇಳಿ ನನಗೆ ನಿಜಕ್ಕೂ ಆಶ್ಚರ್ಯ ಆಯಿತು,, ಇವರ ಟ್ವಿನ್ ಬ್ರದರ್ ಬಗ್ಗೆ ಅವರ ಹವ್ಯಾಸದ ಬಗ್ಗೆ ಇನ್ನೊಮ್ಮೆ ನಿಮ್ಮ ಮುಂದೆ ಹೇಳುತ್ತೇನೆ... ಕೆಳಗೆ ತೋರಿಸಿರುವುದು ಇವರ ಸಿಂಪಲ್ Art ಅಸ್ಟೇ...ಇಂಥ ಎಸ್ಟೋ Art ಅನ್ನು ಕಳೆದ 30 ವರುಷದಿಂದ ಮಾಡುತ್ತಾ ಬಂದಿದ್ದಾರೆ..... ಹಾಗೆ ಇದರ ಬಗ್ಗೆ ಇವರ ಕಲೆ ಬಗ್ಗೆ ಬೇರೆಯವರಿಗೆ ಹೇಳಿಕೊಡುವ ಕ್ಲಾಸ್ ಅನ್ನು ನಡೆಸುತಿದ್ದಾರೆ... ಇವರ ಹಾಗು ಇವರ Art ಬಗ್ಗೆ ಹೆಚ್ಚಿನ ಮಾಹಿತಿಗಾಗಿ.. ಇಲ್ಲಿಗೆ ಬೇಟಿಕೊಡಿ
http://www.abundance-acres.com/
ಕೆಲವೇ ಕೆಲವು ಆಯ್ದ Art ಅನ್ನು ನೋಡಿ ಕಣ್ಣು ತುಂಬಿಕೊಳ್ಳಿ.....









































10 comments:

  1. ಈ ಚಿತ್ರಗಳುಳ್ಳ mail ಬಂದಿತ್ತು. ಆದ್ರೆ ಕಲಾವಿದನ ಬಗ್ಗೆ ಮಾಹಿತಿ ಗೊತ್ತಿರ್ಲಿಲ್ಲ.
    ಮಾಹಿತಿಯುಕ್ತ ಲೇಖನಕ್ಕೆ ಧನ್ಯವಾದಗಳು...

    ReplyDelete
  2. ಧನ್ಯವಾದಗಳು ಪ್ರಕಾಶ್....

    ReplyDelete
  3. ತುಂಬಾ ಕ್ರಿಯೆಟೀವ್ ವ್ಯಕ್ತಿ ಸರ್. ಆತನಿಗೆ ಹ್ಯಾಟ್ಸ್ ಆಫ್. ಅದೂ ಕಣ್ಣಿನ ತೊಂದರೆಯಿದ್ದಾಗ್ಯೂ ಈ ರೀತಿ ಮಾಡುತ್ತಾನೆಂದರೆ ಮೆಚ್ಚಲೇಬೇಕು. ಆತನ twin brother ಬಗ್ಗೆ ತಿಳಿಯಲು ಕುತೂಹಲದಿಂದಿದ್ದೇನೆ. ಆದಷ್ಟು ಬೇಗ ಬರೆಯಿರಿ.

    ReplyDelete
  4. Hello,

    Chennagdie baraha :)
    EE chitragala mail nodide avrbage thiliskotadake dhanyavadagalu :)

    ReplyDelete
  5. ee chitragaLannu noddiddevu aadre istu maahiti tiLidiralilla... avara kalege namma namana!!!

    vandanegaLu

    ReplyDelete
  6. ಇ೦ತಹ ಅಪರೂಪದ ಕಲಾವಿದನ ಬಗ್ಗೆ, ಆತನ ಕಾಷ್ಟಕಲೆಯ ಬಗ್ಗೆ ಉಪಯುಕ್ತ ಮಾಹಿತಿ ಕೊಟ್ಟಿದ್ದೀರಿ. ಚೆನ್ನಾಗಿದೆ.

    ReplyDelete
  7. ಮತ್ತೊಬ್ಬ ಅದ್ಭುತ ಕಲಾವಿದ ಮತ್ತು ಆತನ ಕಲಾಕೃತಿಗಳ ಪರಿಚಯಕ್ಕೆ ಧನ್ಯವಾದಗಳು.

    ReplyDelete
  8. ಗುರು,

    ಮತ್ತೊಬ್ಬ ಅಧ್ಬುತ ಕಲಾವಿದನನ್ನು ಪರಿಚಯಿಸಿದ್ದೀರಿ...ಅವರ ಜೀವನ ಚರಿತ್ರೆ ಮತ್ತು ಅವರು ಮಾಡಿರುವ ಕಲಾಕೃತಿಗಳು ತುಂಬಾ ಸೊಗಸಾಗಿವೆ...

    ಕಲಾವಿದನಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು..

    ReplyDelete
  9. @ಮಲ್ಲಿಕಾರ್ಜುನ್,
    ಧನ್ಯವಾದಗಳು, ಬೇಗನೆ ಅವರ ಇನ್ನೊಬ್ಬ ಬ್ರದರ್ ಬಗ್ಗೆನು ಮಾಹಿತಿ ಹಾಕುವೆ..

    @ಪ್ರೀತಿಯ ವೀಣಾ,
    ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು

    @ ಮನಸು ,
    ಧನ್ಯವಾದಗಳು

    @ಪರಾಂಜಪೆ ,
    ಧನ್ಯವಾದಗಳು

    @ವಿನುತ,
    ಧನ್ಯವಾದಗಳು , ಹೀಗೆ ಬರುತ್ತಿರಿ

    @ಶಿವೂ
    ಥ್ಯಾಂಕ್ಸ್ ಶಿವೂ.......

    ReplyDelete
  10. Mr. Randy Boni ಮತ್ತು ಅವರ ಅದ್ಭುತವಾದ ಕಲಾ ಜ್ಞಾನದ ಕುರಿತಾಗಿ ಓದಿ ಮನಸ್ಸು ಮುದಗೊಂಡಿತ್ತು. ಇನ್ನೂ ನಮ್ಮ ದೇಶದವರೇ ಆಗಿರುವ ಕಲಾಪ್ರತಿಭೆಗಳ ಕುರಿತು ಇನ್ನಷ್ಟು ಬರೆಯಿರಿ. ಒಂದ್ಸಲ ಚಿತ್ರ ಕಲಾ ಪರಿಷತ್ತು ಕಡೆ ಹೋಗಿಬನ್ನಿ. ಇಂಥ ಸಾಕಷ್ಟು ಕಲಾಕೃತಿಗಳು, ಕಲಾಪ್ರತಿಭೆಗಳ ಪರಿಚಯವನ್ನು ನಮಗಿಲ್ಲಿ ಉಣಬಡಿಸಬಹುದು. ಅಭಿನಂದನೆಗಳು
    -ಧರಿತ್ರಿ

    ReplyDelete