Friday, March 27, 2009

ನಿಜವಾಗಲು AMAZING paintings......!!!!!!!



ಪುಣ್ಯಥ್ಮನ ಹೆಸರು Julian Beever ಅಂಥ, ಇವರೊಬ್ಬ Artist.... ಆದರೆ, ಅಂತಿಂಥ ಆರ್ಟಿಸ್ಟ್ ಅಲ್ಲ.. ಒಬ್ಬ ಮಹಾನ್ ಕಲೆಗಾರ..... ಇವರು ತಮ್ಮ ಎಲ್ಲ ಚಿತ್ರಗಳನ್ನು, footpaths ಅಂಡ್ pavement ಮೇಲೆ ಮಾತ್ರ ಬರೆಯೋದು... ಈತನ ಚಿತ್ರಗಳು ಒಂದಕಿಂಥ ಒಂದು ಭಿನ್ನ,, ಇವರ ಚಿತ್ರಗಳನ್ನು ಒಂದು angle ನಿಂದ ನಿಂತು ನೋಡಿದರೆ 3D ಅನಿಮೇಶನ್ ಚಿತ್ರಗಳ ಥರ ಕಾಣುತ್ತೆ. ಕಲೆ ಅನ್ನ್ನೋದು ನಿಜವಾಗ್ಲೂ ಎಲ್ಲಿ ಹೇಗೆ ಯಾವ ರೀತಿ ಇರುತ್ತೆ ಅಲ್ವ...

ನಮ್ಮ ಸುತ್ತ ಮುತ್ತ ನು ನೋವು ನೋಡಿರ್ತೇವೆ ರಂಗೊಲಿನಲ್ಲಿ , ಚಾಪೀಸ್ ನಲ್ಲಿ ರೋಡ್ ಮೇಲೆ ನಮ್ಮ ದೇವರುಗಳ ಫೋಟೋ ಬರೆದು ಹೊಟ್ಟೆಪಾಡಿಗಾಗಿ ಒದ್ದಾಡ್ತಿರೋ ದ್ರುಷ್ಯವನ್ನ ಅಲ್ವ. ನನ್ ಚಿಕ್ಕವನಾಗಿದ್ದಾಗ ಎಲ್ಲಾದ್ರು ಜತ್ರೆಗೋ ಅಥವಾ ಸಂತೆಗೋ ಹೋಗಿದ್ದಾಗ ಈ ರೀತಿ ಬರೆಯುವವರನ್ನ ನೋಡ್ತಾ ಇದ್ದೆ, ಆದರೆ ಇವಾಗ ಅಸ್ತೊಂದ್ ಕಾಣ ಸಿಗುತ್ತಿಲ್ಲ , ಅವಾಗ ನಾನು ಅಂದು ಕೊಳ್ಳ್ತಾ ಇದ್ದೆ, ಪಾಪ ಹೊಟ್ಟೆಪಾಡಿಗಾಗಿ ಏನೆಲ್ಲ ಮಾಡ್ತಾರೆ ಅಂಥ,, ಅವಾಗ ನಮ್ಮ ಹತ್ರನು ದುಡ್ಡು ಇರ್ತ ಇರಲಿಲ್ಲ , ಆದ್ರೂ ಅಪ್ಪನ ಹತ್ರನೋ ಅಥವ ಅಮ್ಮ ಹತ್ರನೋ ಇಸ್ಕೊಂಡು ಇಂಥವರಿಗೆ ೫೦ ಪೈಸನೋ ಅಥವ ೧ ರೋಪಯಿನೋ ಕೊಟ್ಟು ಬರ್ತಾ ಇದ್ದೆ .

ಹಾಂ ಬಿಡಿ,, ಬಟ್ ಇವಾಗ ಹೇಳ್ತಾ ಇರೋ ಈ ಕಲೆಗಾರ ಸುಮ್ನೆ ಹವ್ಯಾಸಕ್ಕಾಗಿ ಚಿತ್ರ ಬಿಡಿಸ್ತಾ ಇದ್ದಾನೆ, ಅದು ಅಂತಿಂಥ ಚಿತ್ರಗಳು ಅಲ್ಲ.. ವಾಹ್ ನಿಜವಾಗ್ಲೂ ನೋಡ್ತಾ ಇದ್ದರೆ ಬೆರಗಾಗಿ ಹೋಗಬೇಕು ......

ಎಲ್ಲರೂ ಈತನ ಕಲೆಯನ್ನ ಹಾಗು ಚಿತ್ರವನ್ನ ನೋಡಿ ಆನಂದಿಸಿ ಹೊಗಳಲಿ ಎಂದು ನನ್ನ ಬ್ಲಾಗಿನಲ್ಲಿ ಹಾಕಿದ್ದೇನೆ..

ಹಾಂ ಇವರೊಬ್ಬರೇ ಅಲ್ಲ ಈ ತರಹ ಚಿತ್ರ ಬರೆಯುವ ಹವ್ಯಾಸಿ ತಂಡವೇ ಇದೆಯಂತೆ,, ಅವರ ಕೆಲವೊಂದು ಚಿತ್ರಗಳನ್ನು ಸೇರಿಸಿದ್ದೇನೆ ಆದರೆ ಅವರ ಹೆಸರು ಗೊತ್ತಿಲ್ಲ ....

ಏನೆ ಆದರು ನನ್ನ ದೊಂದು ಬಿಗ್ ಸಲಾಂ ಈ AMEZING painters ಗೆ ....

Source :- ನನಗೆ ಯಾವೋದು ಮೇಲ್ ನಲ್ಲಿ ಬಂದಿದ್ದು ..















ನಿಜವಾದ ಪಾರಿವಾಳ ತರಾನೆ ಇದೆ ಅಲ್ವ ......



ಅಬ್ಬ!!!! ಕಂಪ್ಯೂಟರ್ graphics ಅಲ್ಲರಿ








ನಿಮಗೆ ಅನ್ಸುತ್ತಾ ಇವರು ಸುಮ್ನೆ ರೋಡ್ ಮಧ್ಯದಲ್ಲಿ ಕುಳಿತುಕೊಂಡಿದ್ದಾರೆ ಅಂಥ !!



ರೋಡ್ ಮೇಲೆ ಇದ್ಟ್ರು ಈ ಲ್ಯಾಪ್ ಟಾಪ್ ನಂ ಯಾರು ತಗೊಂಡ್ ಹೊಗೊಲ್ವ.... ಹಾಹಾ ಇದು ನಿಜವಾದ ಲ್ಯಾಪ್ ಟಾಪ್ ಅಲ್ಲ ಮಾರಾಯರೇ...



ಇದು ಯಾವ ಕಂಪ್ಯೂಟರ್ editings ಅಲ್ಲ....




A whole city under the pavement !!


ರೋಡ್ ಸೈಡ್ ನಲ್ಲಿ ಹಾಗೆ ಕೂತ್ಕೊಂಡ್ ಪೇಯಿಂಟ್ ಮಾಡ್ತಾ ಇದಾನೆ,,,, ಏನಾದ್ರು ಗೊತ್ತಾಗುತ್ತ?


ದಾರಿನಲ್ಲಿ ಹೋಗುವವರು ಕೂಡ ಸೈಡ್ ಇಂದ ಹೋಗ್ತಾರೆ........ಹೆದರಿಕೊಂಡು.... ನೋಡಿ ಹೇಗೆ ಇದೆ ಈ 3D ಪೇಯಿಂಟ್....


ಬರಿ ಬೋಟು . ವಾಟರ್ ಮಾತ್ರ ಅಲ್ಲ.. ರೋಡಿನಲ್ಲಿ depression ಥರ ಕಾಣೋ ಹಾಗೆ ಪೇಯಿಂಟ್ ಮಾಡಿದ್ದನಲ್ಲ ಅದಕ್ಕೆ ಕೊಡಬೇಕು.......



ವಾಹ್ ,,, ಇದು ನೋಡಿ,, ಚರ್ಚ್ ನಿಜವಾದದ್ದು,, ಆದರೆ ಆದರೆ reflection ಇದೆ ಅಲ್ವ ನೋಡ್ರಿ ಏನ್ ಸೂಪರ ಆಗಿ ಇದೆ.... ವಾಹ್ ಅದ್ಬುತ imagination ಅಲ್ವ .....


ಈ ಚಿತ್ರ ನೋಡಿ,,, ದಾರಿನಲ್ಲಿ ಹೋಗ್ತಾ ಇರುವವನು ಅಸ್ಟ್ಟೆ ಓಡಿ ಹೋಗ್ತಾನೆ ...




ನಿಜವಾಗಲು supreb ಅಲ್ವ ........ One more ಬಿಗ್ ಸಲ್ಯೂಟ್ ಮೈ ಡಿಯರ್ ಗ್ರೇಟ್ ಆರ್ಟಿಸ್ಟ್.......

17 comments:

  1. guru,
    tumba tumbane chennagide...nijakku avara kalege naavu solalebeku..
    dhanyavadagaLu namge intaha mahiti needidakke

    ReplyDelete
  2. ಧನ್ಯವಾದಗಳು ಮನಸು....

    ReplyDelete
  3. ಗುರು
    ತು೦ಬಾ ಚೆನ್ನಾಗಿದೆ

    ReplyDelete
  4. ಗುರು,

    ಸೂಪರ್ ಕಣ್ರಿ.....ಎಂಥಹ ಮಹಾನ ಕಲಾವಿದರು ಅವರು....ಅವರು ಸಿಕ್ಕಿದ್ರೆ ನಾನೊಂದು ದೀರ್ಘ ದಂಡ ನಮಸ್ಕಾರ ಮಾಡಿಬಿಡ್ತೀನಿ....ನಿಜಕ್ಕೂ ೩ಡಿ ಎಫೆಕ್ಟ್..ಅಂದ್ರೆ ಇದು....ಒಂದಕ್ಕಿಂತ ಒಂದು ಸೂಪರ್...ಇಂಥವನ್ನೆಲ್ಲಾ ಹುಡುಕಿ ತರುವ ನಿಮಗೂ ನನ್ನ ಹೃದಯಪೂರ್ವಕ ಸಲಾಂ....
    ಮತ್ತೆ ಯುಗಾದಿ ಹಬ್ಬದ ಶುಭಾಶಯಗಳು...
    ಧನ್ಯವಾದಗಳು...

    ReplyDelete
  5. ತುಂಬಾ thankx ಶಿವೂ .... ಇದು ನನ್ನ ಹವ್ಯಾಸ,, ಚೆನ್ನಾಗಿರೋ ಫೋಟೋಸ್,articles ಅಂಡ್ usefull information ಸಿಕ್ಕಿದ್ರೆ ಎಲ್ಲವನ್ನು collect ಮಡ್ಕೊಥ ಇರ್ತೇನೆ.........
    ಒಳ್ಳೆ information ಎಲ್ಲರೂ ನೋಡಲಿ ಅಂತ,,, ನಿಮ್ಮಗಳ ಜೊತೆ share ಮಡ್ಕೊಥ ಇದ್ದೇನೆ ಅಸ್ಟೇ....

    ReplyDelete
  6. ನಮಸ್ಕಾರ ಗುರು ಅವರಿಗೆ,

    ನಿಜವಾಗಲೂ ತುಂಬಾ ಚೆನ್ನಾಗಿದೆ. ಒಳ್ಳೆಯ ಚಿತ್ರಗಳನ್ನು ನೋಡಲು ನಮಗೂ ಅವಕಾಶ ಮಾಡಿಕೊಟ್ಟಿದ್ದಕ್ಕೆ, ಧನ್ಯವಾದಗಳು.

    ReplyDelete
  7. ಗುರು,
    ತು೦ಬಾ ತು೦ಬಾನೆ ಚೆನಾಗಿವೆ.ನಿಮ್ಮ ರುಚಿ-ಅಭಿರುಚಿಗೆ ಹ್ಯಾಟ್ಸ್ ಆಫ್.ಪರಿಚಯಿಸಿದ್ದಕ್ಕೆ ಧನ್ಯವಾದಗಳು.

    ReplyDelete
  8. ಹಲೋ ಸವಿನೆನಪು,
    ತುಂಬ ಧನ್ಯವಾದಗಳು,, ನನ್ನ ಬ್ಲಾಗಿಗೆ ಬಂದು ಪ್ರತಿಕ್ರಿಯಿಸಿದಕ್ಕೆ . ಹೀಗೆ ಬಂದು ಹೋಗುತ್ತಿರಿ..
    ಗುರು .

    ReplyDelete
  9. ಹಲೋ ಶ್ರೀಧರ್ ..
    ತುಂಬ ಥ್ಯಾಂಕ್ಸ್ ನನ್ನ ಬ್ಲಾಗಿಗೆ ಬಂದು ಪ್ರತಿಕ್ರಿಯಿಸಿದಕ್ಕೆ , ನಿಮ್ಮ ಬ್ಲಾಗಿನಲ್ಲಿ ಇರುವ ಲೇಖನ ನೋಡಿದೆ ತುಂಬ ಚೆನ್ನಾಗಿ ಬರೆದಿದ್ದೀರ .. ನಿಮ್ಮ ಲೇಖನಕ್ಕೆ ಅಲ್ಲೇ ಪ್ರತಿಕ್ರಿಯಿಸಿದ್ದೇನೆ.
    ಹೀಗೆ ಬಂದು ಹೋಗುತ್ತಿರಿ.......
    ಗುರು ....

    ReplyDelete
  10. ಸಕತ್ತಾಗಿದೆ ಸರ್. ಅದು permanent ಅಲ್ಲ ಅಂತ ಗೊತ್ತಿದ್ದರೂ ಬರೀ ಹವ್ಯಾಸಕ್ಕಾಗಿ ಎಷ್ಟು dedication ನಿಂದ ಮಾಡುತ್ತಾರೆ ಅಲ್ವಾ? ಅಲ್ಲಿ ಅವರಿಗೆ ಪ್ರೋತ್ಸಾಹವೂ ಸಿಗುತ್ತಿರಬಹುದು. ನಮ್ಮಲ್ಲಾದ್ರೆ ಇವನಿಗೆ ಬೇರೆ ಕೆಲ್ಸ ಇಲ್ಲ ಅನ್ನುತ್ತಾರೆ. ಆ ಕಲಾವಿದರಿಗೆ ದೊಡ್ಡ ಸಲಾಂ. ಅದನ್ನು ಪರಿಚಯಿಸಿದ ಗುರು ಅವರಿಗೆ ಚಿಕ್ಕ ಸಲಾಂ!

    ReplyDelete
  11. ಹಲೋ ಮಲ್ಲಿಕಾರ್ಜುನ್,
    ತುಂಬ ಥ್ಯಾಂಕ್ಸ್ ನನ್ನ ಬ್ಲಾಗಿಗೆ ಬಂದು ಪ್ರತಿಕ್ರಿಯಿಸಿದಕ್ಕೆ ,,, ಹೀಗೆ ಬಂದು ಪ್ರೋತ್ಸಾಹ ನೀಡುತ್ತಿರಿ....
    ನಿಮ್ಮ ಬ್ಲಾಗಿನಲ್ಲಿ ಇರೋ ಕನ್ನಡ ಕವಿಗಳ ಫೋಟೋ ಮತ್ತೆ ಬರಹ ತುಂಬ ಚೆನ್ನಾಗಿ ಇದೆ... ನನಗಂತು ತುಂಬ ಇಷ್ಟ ಆಯಿತು.....

    ಗುರು

    ReplyDelete
  12. ಗುರು ಅವರೆ, ನಿಜಕ್ಕೂ ಅದ್ಭುತ ಪ್ರತಿಭೆ. ಇಂಥ ಚಿತ್ರ ಬಿಡಿಸಲು ತುಂಬ imagination, ಮತ್ತು ತಾಳ್ಮೆ ಬೇಕು. ಚಿತ್ರಗಳನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು

    ReplyDelete
  13. ಹಾಯ್ ದೀಪಸ್ಮಿಥ,
    ತುಂಬ ಥ್ಯಾಂಕ್ಸ್ , ಬಂದು ಪ್ರತಿಕ್ರಿಯಿಸಿದಕ್ಕೆ , ಹೀಗೆ ಬಂದು ಹೋಗುತ್ತಿರಿ.. ಹೌದು ನೀವು ಹೇಳಿದ ಹಾಗೆ ಎ ಪೇಂಟಿಂಗ್ ಬಿಡಿಸಲು ತುಂಬ ತಾಳ್ಮೆ ಇರಬೇಕು.. ನಿಜಕ್ಕೂ they are simply great .

    ಗುರು

    ReplyDelete
  14. ನಿಮ್ಮ ಸಂಗ್ರಹ ನೋಡಿ ಖುಷಿಯಾಯಿತು. ಒಳ್ಳೆ ಮಾಹಿತಿ, ಒಳ್ಳೆ ಫೊಟೋಗಳು ಎಷ್ಟು ವಿಷಯಗಳನ್ನು ನಮ್ ತಲೆಗೆ ತುಂಬ್ತೀರಾ? ಧನ್ಯವಾದಗಳು ಕಣ್ರೀ.
    -ಧರಿತ್ರಿ

    ReplyDelete
  15. ಹಾಯ್ ಧರಿತ್ರಿ ,
    ಸ್ವಾಗತ ನನ್ನ ಬ್ಲಾಗಿನ ಲೋಕಕ್ಕೆ,, ನೀವು ಎಲ್ಲ ಹೀಗೆ ಬಂದು ಪ್ರೋತ್ಸಾಹ ನೀಡುತ್ತಿದ್ದಾರೆ , ಇನ್ನು ಬೇರೆ ಬೇರೆ ವಿಷಯಗಳನ್ನು ಹಂಚಿಕೊಳ್ಳಲು ಸ್ಫೂರ್ತಿ ಬರುತ್ತೆ..
    ಥ್ಯಾಂಕ್ಸ್ ಬಂದು ಪ್ರತಿಕ್ರಿಯಿಸಿದಕ್ಕೆ..

    ಗುರು

    ReplyDelete
  16. Hi vinutha,
    Welcome to Gurus world blog... thanks for your comments.

    Guru

    ReplyDelete