Saturday, May 29, 2010

ಚಿಟ್ಟೆಗಳ.... ಹಿಂದೆ ... ಅ ಒಂದು ಅನುಭವ...!!!!

ಪ್ರತಿ ಶನಿವಾರ ಮತ್ತೆ ಭಾನುವಾರ,, ಏನಾದರೊಂದು ಕೆಲಸ ತಗಲಾಕೊತ ಇತ್ತು.... ನನ್ನ ನೆಚ್ಚಿನ ಹವ್ಯಾಸಗಳನ್ನು ಮಾಡುವುದಕ್ಕೆ ಟೈಮ್ ಸಿಕ್ತಾ ಇರಲಿಲ್ಲ.... ಬ್ಲಾಗ್ ಕೂಡ ಚೆಕ್ ಮಾಡಿ, ಅಪ್ಡೇಟ್ ಮಾಡೋಕೆ ಟೈಮ್ ಸಿಕ್ತಾ ಇರಲಿಲ್ಲ....


ಎಸ್ಟೋ ದಿನಗಳ ಬಳಿಕ.... ಈ ವೀಕ್ ಎಂಡ್ ಫ್ರೀ ಆಗಿ ಇದ್ದೆ.... ಸರಿ...ಎಲ್ಲಿಗಾದ್ರೂ ಫ್ರೀ ಆಗಿ ಹೋಗಿ ಬರೋಣ ಅಂತ ಅನ್ಕೊತ ಇದ್ದೆ.... ಅದಕ್ಕೆ ಸರಿಯಾಗಿ,,, ನನ್ ಕಸಿನ್ ಕೃಷ್ಣ ಕಾಲ್ ಮಾಡಿದ,,, "ಅಣ್ಣ ನಾಳೆ ಫ್ರೀ ಇದ್ರೆ ಬೆಳಿಗ್ಗೆ ಫೋಟೋಗ್ರಫಿ ಮಾಡೋಕೆ ಹೋಗೋಣ ಅಂತ ಅಂದ " ನಂಗು ಅದೇ ಬೇಕಾಗಿತ್ತು , ಸರಿ ಕಣೋ ಅಂತ ಹೇಳಿದೆ... ಅವನು ಹೇಗೂ ನನ್ ಮನೆ ಹತ್ರನೇ ಇರೋದು... ಸರಿ ಶನಿವಾರ ಬೆಳಿಗ್ಗೆ 6 ಗೆ ಹೋಗಬೇಕು ಅಂತ ಶುಕ್ರವಾರನೇ ಮಾತಾಡಿಕೊಂಡು ಡಿಸೈಡ್ ಮಡ್ಕೊಂದ್ವಿ.....ಹಾಳಾದ್ದು ಶುಕ್ರವಾರನು ಫ್ರೀ ಇರಲಿಲ್ಲ... ಆಫೀಸ್ ಕೆಲಸ... ನೈಟ್ 10 :30 ಆಗಿತ್ತು ಮನೆ ಸೇರಿಕೊಂಡಾಗ..

ಶನಿವಾರ ಬೆಳಿಗ್ಗೆನೆ ಎದ್ದು ,..6 ಗೆ ಹೋಗ್ಬೇಕು ಅಂತ ಅನ್ಕೊಂಡು 6 :40 ಆಗಿತ್ತು ಮನೆ ಬಿಟ್ಟಾಗ.... ಮನೆ ಹತ್ರನೇ ಇರೋ.. ಜ್ಞಾನಭಾರತಿ(Bangalore university campus) ಒಳಗಡೆ ಇರೋ ಕಾಡಿಗೆ ಹೋಗೋಣ ಅಂತ ಮೊದಲೇ ಡಿಸೈಡ್ ಆಗಿತ್ತು.... ನಮ್ಮ ಬೆಂಗಳೂರಿನ ಮಧ್ಯ ಇಂಥ ಒಂದು ಜಾಗ ಇದೆ ಅಂತ ನನಗೆ ಇವೊತ್ತೇ ಗೊತ್ತಾಗಿದ್ದು.....ಒಳಗಡೆ ಇರುವ ಚಿಕ್ಕದಾದ ಅರಣ್ಯ ತುಂಬಾ ಚೆನ್ನಾಗಿ ಇದೆ.....

ಫೋಟೋಗ್ರಫಿ ಮಾಡೋಕೆ ಏನಾದರೂ ಒಂದು ಕಾನ್ಸೆಪ್ಟ್ ಬೇಕಲ್ವ... so ದಿಸ್ ಟೈಮ್,, ಚಿಟ್ಟೆ ಗಳ ಫೋಟೋ ತೆಗಿಯೋಣ ಅಂತ ಅನ್ಕೊಂದ್ವಿ... ನನ್ ಕಸಿನ್ ಆಗಲೇ ತುಂಬಾ ಸರಿ ಈ ಜಾಗಕ್ಕೆ ಬಂದಿದ್ದನಂತೆ....ಸರಿ ಚಿಟ್ಟೆಗಳು ಎಲ್ಲಿ ಸಿಗುತ್ತೆ ಅಂತ ಗೊತ್ತಿತು.... ತುಂಬಾ ಬಿಸಿಲು ಬರುವ ಮುಂಚೆ, ಅಲ್ಲಿ ಹೋಗಿ ಚಿಟ್ಟೆಗಳ ಫೋಟೋ ತೆಗಿಬೇಕಾಗಿತ್ತು... campus ನ ವಳಗಡೆ ನನ್ನ ಬೈಕ್ ಪಾರ್ಕ್ ಮಾಡಿ,,, ಚಿಕ್ಕದಾದ ಕಾಲು ದಾರಿನಲ್ಲಿ ನಡೆದುಕೊಂಡು ಹೋದ್ವಿ... ದಾರಿನಲ್ಲಿ ಹೋಗ್ತಾ ಹೂವ,, ಹುಲ್ಲಿನ ಮೇಲಿನ ಇಬ್ಬನಿ ಇವುಗಳ ಫೋಟೋ ಎಲ್ಲ ತಗೊಂಡ್ ಚಿಟ್ಟೆ ಹುಡುಕುತ್ತ ಹೊರಟ್ವಿ, ಎಷ್ಟು ಮುಂದೆ ಹೋದರು,, ಒಂದು ಚಿಟ್ಟೆ ನು ಸಿಗಲಿಲ್ಲ . ಮದ್ಯದಲ್ಲಿ ಎಲ್ಲೊ ಒಂದೆರಡು ಹಾರಿ ಬರ್ತಾ ಇತ್ತು,,, ಆದರೆ ಫೋಟೋ ತೆಗಿಯೋಣ ಅನ್ನೋಸ್ಟಕ್ಕೆ ಓದೋಕ್ತಾ ಇದ್ವು... ಇದರ ಫೋಟೋ ಇವೊತ್ತು ತೆಗೆದೇ ಹಾಗೆ ಅನ್ಕೊಂಡು,,ಸರ್ಕಸ್ ಮಾಡ್ಕೊಂಡ್ ಮುಂದೆ ಹೋಗ್ತಾ ಇದ್ವಿ... ಅವಾಗ ನನ್ ಕಸಿನ್ " ಇನ್ನು ಮುಂದೆ ಹೋಗೋಣ ಒಂದು ದೊಡ್ಡ ಹೊಂಡ ಇದೆ... ಅದರ ಹತ್ರ ಲಾಸ್ಟ್ ಟೈಮ್ ಸ್ವಲ್ಪ ಚಿಟ್ಟೆ ಗಳು ಇದ್ವು,, ಅಂತ... ಸರಿ ಬೇಗ ಬಾ ಟೈಮ್ ವೇಸ್ಟ್ ಮಾಡೋದು ಬೇಡ,,, ಅಂತ ಅಲ್ಲಿ ಗೆ ಓಡಿ ಹೋದ್ವಿ....ಇನ್ನು ಹತ್ರ ಹೋಗ್ತಾ ಇದ್ವಿ,,, ಅವಾಗ ಕಾಣಿಸ್ತು ನೋಡಿ,, ಚಿಟ್ಟೆ ಗಳ ಹಿಂಡು,,, ಸರಿ,,, ಸಿಕ್ಕಿದ್ದೇ ಚಾನ್ಸ್ ಅಂತ ನಿದಾನಕ್ಕೆ ಹೆಜ್ಜೆ ಮೇಲೆ ಹೆಜ್ಜೆ ಇಟ್ಟಕೊಂಡು ಸದ್ದು ಮಾಡದಿರ ಹತ್ರ ಹೋದ್ವಿ,,,, ಒಂದು ಸ್ವಲ್ಪ ಶಭ್ದ ಮಾಡಿ ಬಿಟ್ರು ಸಾಕು ಎಲ್ಲ ಎದ್ದು ಬೇರೆಕಡೆ ಹೋಗ್ತಾ ಇದ್ವು,,,, ೧೦ ಹೆಜ್ಜೆ ಇಡೋಕೆ ೫ ನಿಮಿಷ ತಗೊಂಡು,, ಅದರ ಹತ್ರ ಹೋದ್ವಿ.... ತುಂಬಾ ಚಿಟ್ಟೆಗಳ ಹಿಂಡು , ಒಂದೊಂದು ಒಂದೊಂದ್ ತರ ಡಿಸೈನ್ ,,ವೌ wah ಹಾಗೆ ಕೆಲವು ಫೋಟೋಗಳನ್ನು ತೆಗೆದ್ವಿ...ಆದರೆ ಸೂರ್ಯ ನಮಗೆ ಎದುರಾಗಿ ಇದ್ದಿದ್ದರಿಂದ lighting ಎಫೆಕ್ಟ್ ಜಾಸ್ತಿ ಇತ್ತು,, ಸರಿಯಾಗಿ ಬರ್ತಾ ಇರಲಿಲ್ಲ.... ಸರಿ ಹಾಗೆ ನಿದಾನಕ್ಕೆ ಹೊಂಡದ ಇನ್ನೊಂದು ಕಡೆ ಹೋಗೋಣ ಅಂತ,, ಸದ್ದು ಮಾಡದಿರ ಹೋದ್ವಿ.... ಮುಂದೆ ಹಸಿರು ಕೆಸರಿನ ಹೊಂಡ,,, ಆಳ ಎಷ್ಟು ಇದೆಯೋ ಗೊತ್ತಿಲ್ಲ... ಸರಿ ಆಗಿದ್ದು ಅಗಲಿ ಅಂತ,,, ಅ ಕಡೆ ಸರ್ಕಸ್ ಮಾಡಿಕೊಂಡು ಆ ಕಡೆ ಹೋದ್ವಿ...ಎಷ್ಟು ಬೇಕೋ ಅಸ್ತನ್ನು ಒಂದು ೨ ಹೌರ್ಸ್ ಕೂತ್ಕೊಂಡ್ ಫೋಟೋ ತೆಕ್ಕೊಂದ್ವಿ.... ನಿಜವಾಗಲು ಎಕ್ಷ್ಪೆಕ್ತ ಮಾಡಿರಲಿಲ್ಲ ಇಸ್ಟೊಂದು ಚಿಟ್ಟೆ ಸಿಗುತ್ತೆ ಅಂತ,,,, ನನಗಂತು ಫಸ್ಟ್ experience ...ಚಿಟ್ಟೆಗಳ ಫೋಟೋ ತೆಗಿಯೋದು... ಸಕತ್ ಮಜಾ ಇತ್ತು.... ಅಂತು ಕೆಲವು ಒಳ್ಳೆ ಫೋಟೋಗಳು ಸಿಕ್ಕವು,,,ಕೆಳಗೆ ಫೋಟೋ ಸಮೇತ ಹಾಕಿದ್ದೇನೆ ನೋಡಿ......

ಒಟ್ನಲ್ಲಿ ಶನಿವಾರದ ಬೆಳಿಗ್ಗೆ,,,, ಫುಲ್ ಜೋಷ್ ನಲ್ಲಿ... ಹ್ಯಾಪಿ ಆಗಿ ಕಳೆದು ಹೋಯ್ತು...... :-)

ಚಿಟ್ಟೆಗಳ ಬಗ್ಗೆ ಅಸ್ಟೊಂದು ಮಾಹಿತಿ ಗೊತ್ತಿಲ್ಲ.... ಆದರೆ ಫೋಟೋ ಚೆನ್ನಾಗಿ ಇತ್ತು,,, ನಿಮ್ಮಗಳ ಜೊತೆ ಶೇರ್ ಮಾಡ್ಕೋತಾ ಇದೇನೇ ಅಸ್ಟೇ....










ಚಿಟ್ಟೆಗಳ ಹಿಂಡು



ಚಿಟ್ಟೆಗಳ ಹಿಂಡು


37 comments:

  1. ಗುರು,

    ತುಂಬಾ ಒಳ್ಳೇ ಕೆಲಸ ಮಾಡಿದ್ದೀರಿ. ಹಾಡ್ತಾ ಹಾಡ್ತ ರಾಗ ಕೆಮ್ಮುತ್ತಾ ಕೆಮ್ಮುತ್ತಾ ರೋಗ ಅನ್ನುವಂತೆ...ಮೊದಲು ಹೀಗೆ ಚಿಟ್ಟೆ ಪೋಟೋಗ್ರಫಿ ಪ್ರಾರಂಭಿಸಬೇಕು. ನಂತರ ಉಳಿದ ವಿಚಾರವು ತಾನಾಗೆ ಗೊತ್ತಾಗುತ್ತೆ...

    ಫೋಟೋಗಳು ವಿಚಾರವಾಗಿ ನಾನು ತಾಂತ್ರಿಕವಾಗಿ ಹೇಳಲಾರೆ. ಆದ್ರೆ ನಿಮ್ಮ ಪ್ರಯತ್ನ ಮತ್ತು ಉತ್ಸಾಹಕ್ಕೆ ನನ್ನ ಕಡೆಯಿಂದ ಅಭಿನಂದನೆಯಿದೆ.
    ಮುಂದುವರಿಸಿ...

    ReplyDelete
  2. ಹಾ , ಹಾ, ಥ್ಯಾಂಕ್ಸ್ ಶಿವೂ,,, ಹೌದು,, ನಿಮ್ಮ ಹೊಸ ಲೇಖನವನ್ನು ನೋಡಿದೆ,, ಅದರಲ್ಲೂ ಚಿಟ್ಟೆಗಳ ಬಗ್ಗೆ ನೋಡಿದೆ.... ಖಂಡಿತ ವಾಗಿಯೂ, ಚಿಟ್ಟೆಗಳ ಬಗೆಗಿನ ಪುಸ್ತಕವನ್ನು ತೆಗೆದುಕೊಳ್ಳುತ್ತೇನೆ,,,, .. ನಿಮ್ಮ ಪ್ರೋಸ್ತಹ ಹೀಗೆ ಇರಲಿ,,, ಏನಾದರೂ ಸಲಹೆ ಬೇಕಾದರೆ ನೀವೇ ಇದ್ದಿರಲ್ಲ ಹೇಳಿ ಕೊಡಲು,,,,, :-)

    ReplyDelete
  3. ಗುರು,
    ಫೋಟೋಸ್ ತುಂಬಾ ಚೆನ್ನಾಗಿ ಬಂದಿದೆ. ಒಳ್ಳೆ ಕೆಲಸ ಮನಸ್ಸಿಗೂ ಸ್ವಲ್ಪ ಎಲ್ಲ ಕೆಲಸಗಳ ಒತ್ತಡದಿಂದ ಸಮಾದಾನ...ಜ್ಞಾನಭಾರತಿ ಕಾಡಲ್ಲಿ ಇಸ್ಟೆಲ್ಲಾ ಇದೆಯಾ..! ಸೂಪರ್.
    ನಿಮ್ಮವ,
    ರಾಘು.

    ReplyDelete
  4. ಸುಂದರವಾದ ಫೋಟೋಗಳು
    ಗುರು ಸರ್,
    ಇಷ್ಟೊಂದು ಫೋಟೋ ತೆಗೆಯಲು ತುಂಬಾ ಕಷ್ಟವಾಗಿರಬೇಕು ಅಲ್ವಾ?

    ReplyDelete
  5. ಗುರು, ಚಿತ್ರಗಳು ತುಂಬಾನೇ ಚೆನ್ನಾಗಿವೆ. ಹೀಗೆ ಮುಂದುವರಿಸಿ..........

    ReplyDelete
  6. Welcome to the world of Photography brother........ You have captured such a good snaps at the first time itself..... The Blog is outstanding........ :)

    ReplyDelete
  7. Guru,

    "ಜ್ಞಾನಭಾರತಿ"...ಇಷ್ಟೊಂದು ಚೆನ್ನಾಗಿದೆ ಎಂದು ಗೊತ್ತಿರಲಿಲ್ಲ...
    ಸಾಧ್ಯವಾದಾಗ ನಾನು ಹೋಗಿ ಬರುತ್ತೇನೆ..ತಿಳಿಸಿದಕ್ಕೆ ಧನ್ಯವಾದಗಳು..
    photos ಎಲ್ಲ ಸೂಪರ್... :-)

    ReplyDelete
  8. ಹೌದು ರಾಘು,,, ಕೆಲಸದ ಒತ್ತಡಗಳ ನಡುವೆ,,, ಈ ಹವ್ಯಾಸಗಳು ಎಸ್ಟೋ ರಿಲೀಫ್ ಕೊಡುತ್ತೆ....
    ಹೌದು university campus ಒಳಗಡೆ ತುಂಬಾ ದೊಡ್ದದ ಜಾಗ ಇದೆ,,, ತುಂಬಾ ಚೆನ್ನಾಗಿ ಇದೆ,,,, ಫ್ರೀ ಇದ್ದಾಗ ನೀವು ವಿಸಿಟ್ ಮಾಡಿ....

    ReplyDelete
  9. ಪ್ರವೀಣ್
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು,,, ಹೌದು,,, ಸ್ವಲ್ಪ ಕಷ್ಟ ಆಯಿತು ಅಸ್ಟೇ... ಅದನ್ನು ಹುಡುಕಿಕೊಂಡು ಹೋಗೋದೇ ಕಷ್ಟ,,, ಆದರೆ ನಮಗೆ ಒಂದೇ ಕಡೆ ಎಲ್ಲ ಚಿಟ್ಟೆಗಳು ಸಿಕ್ಕವು,, ಬೆಳಗಿನ ಜಾವ ಆಗಿದ್ದರಿಂದ,,, ಎಲ್ಲೂ ಹೋಗಿರಲಿಲ್ಲ....

    ReplyDelete
  10. ಥ್ಯಾಂಕ್ಸ್ ಮನಸು.... :-)

    ReplyDelete
  11. ಥ್ಯಾಂಕ್ಸ್ ನಿಶಾ....

    ReplyDelete
  12. ಥ್ಯಾಂಕ್ಸ್ ಬ್ರದರ್..... Lets make a plan for next week end. I am ready to capture Birds photo... :-)

    ReplyDelete
  13. ಧನ್ಯವಾದಗಳು ಅನಾಮಿಕರವರೆ.....

    ReplyDelete
  14. ಥ್ಯಾಂಕ್ಸ್ ದಿವ್ಯ .. ಹೌದು ,, ತುಂಬಾ ಚೆನ್ನಾಗಿ ಇದೆ.. ಕೆಲವೊಂದು ಪ್ರಾಣಿಗಳು ಸಿಗುತ್ತವೆ ನೋಡೋಕೆ.... ಬಿಡುವು ಮಾಡಿಕೊಂಡು ನೀವು ಹೋಗಿ ಬನ್ನಿ....ಬಟ್ ಸ್ವಲ್ಪ ಒಳಗಡೆ ಕಾಲು ದಾರಿನಲ್ಲಿ ನೆಡೆದು ಹೋಗಬೇಕು,,, ಮಿನಿ ಕಾಡು ಇದ್ದ ಹಾಗೆ ಇದೆ....

    ReplyDelete
  15. ಗುರು ಅವ್ರಿಗೆ ನಮಸ್ಕಾರ, ನಿಮ್ಮ ಚಿಟ್ಟೆ ಫೋಟೋಗ್ರಫಿ ಚೆನ್ನಾಗಿದೆ, ಕೆಲವೊಂದು ಫೋಟೋ ಗಳು ಇನ್ನು ಕ್ಲೋಸ್ ಅಪ್ ಇದ್ದಿದ್ರೆ ಚೆನ್ನಾಗಿರ್ತಿತ್ತು ಅನ್ನಿಸ್ತು, ಏನೆ ಆದ್ರು ನಿಮ್ಮ ಪ್ರಯತ್ನಕ್ಕೆ ಶ್ಲಾಘನೆ ಗಳು
    ಮತ್ತೆ ಹಕ್ಕಿಗಳದ್ದನ್ನ ನೋಡೋದಿಕ್ಕೆ ಕಾಯ್ತಾ ಇದ್ದೀನಿ.

    ನಮಸ್ಕಾರ ಮತ್ತೊಮ್ಮೆ

    ReplyDelete
  16. Namaskara Guru sir ge,

    Photo eno chennagi bandide adre variety tumba kadme annistu. parvagilla... Shramakke takkanada phala sikkide.... enatira?

    ReplyDelete
  17. ಚೆನ್ನಾಗಿವೆ ಫೋಟೋಗಳು, ಗುರು. ಕಾಕತಾಳೀಯ ಎಂಬಂತೆ ಶಿವು ಅವರೂ ಕೂಡಾ ಚಿಟ್ಟೆ, ಹುಳುಗಳ ಬಗ್ಗೆ ಬ್ಲಾಗ್ ಬರೆದಿದ್ದಾರೆ

    ReplyDelete
  18. ಮನಮೋಹಕ ಚಿಟ್ಟೆ
    ನೀ ಸೆರೆ ಹಿಡಿದು ಬಿಟ್ಟೆ
    ಚಿಟ್ಟೆಯ ರೆಕ್ಕೆಯ ಚಿತ್ತಾರ
    ನಿನ್ನಯ ಯತ್ನವು ಸಾಕಾರ

    ReplyDelete
  19. ಶಿವಣ್ಣ ಅವರ ಬ್ಲಾಗಿನಲ್ಲಿ ಚಿಟ್ಟೆಗಳ ಓದುತ್ತ ನಿಮ್ಮ ಬ್ಲಾಗಿಗೆ ಬ೦ದರೆ ಇಲ್ಲೂ ಚಿಟ್ಟೆಗಳು! ತುಂಬಾ ಖುಷಿ ಆಯಿತು ಬರಹ ಓದಿ. ಒಳ್ಳೆ ಹವ್ಯಾಸ ಇದೆ ನಿಮಗೆ :)

    ReplyDelete
  20. ಗುರು...ಏನಿದು ..? ಚಿಟ್ಟೆ ಹಿಂದೆ ನೀವಾ..? ಅಥವಾ ನಿಮ್ಮ ಹಿಂದೆ ಚಿಟ್ಟೆನಾ..? ಶಿವು ಮತ್ತೆ ನೀವು...ಹಹಹ.....ಆದ್ರೆ ಒಳ್ಲೆಯ ಚಿತ್ರಗಳು..ಚನ್ನಾಗಿವೆ ಸಂಗ್ರಹಿಸಿ ಇಡಿ ನಿಮ್ಮ ಈ ಚಿತ್ರಗಳನ್ನ....

    ReplyDelete
  21. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಉಮೇಶ್... ಹೌದು ಇನ್ನು ಹೊಸದಲ್ವ,,, ಹಾಗೆ ಕಳ್ತ್ಕೊಥ ಇದೇನೇ....

    ReplyDelete
  22. ನವೀನ, ಮುಂದಿನ ಸಾರಿ ಸ್ವಲ್ಪ ವೆರೈಟಿ ಯಾಗಿ ತೆಗೆಯುತ್ತೇನೆ...ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

    ReplyDelete
  23. ತುಂಬಾ ಥ್ಯಾಂಕ್ಸ್ ಗುರುಪ್ರಸಾದ್ ಸರ್...

    ReplyDelete
  24. ಹೌದು ದೀಪಸ್ಮಿತ... ನಾನು ನೋಡಿದೆ.. ಹಾಗೆ ಅವರಿಂದ ಸ್ವಲ್ಪ information ಕೂಡ ಪಡೆದುಕೊಂಡೆ... ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...

    ReplyDelete
  25. ಸೂಪರ್ ಕವನ ಪರಾಂಜಪೆ..... ಚೆನ್ನಾಗಿ ಇದೆ.... ಥ್ಯಾಂಕ್ಸ್ ನಿಮ್ಮ ಕವನ ಪೂರ್ಣ ಪ್ರತಿಕ್ರಿಯೆಗೆ...

    ReplyDelete
  26. ಥ್ಯಾಂಕ್ಸ್ ಸುದೇಶ್....:-)

    ReplyDelete
  27. ಧನ್ಯವಾದಗಳು ಸೀತಾರಾಮ್ ಸರ್...

    ReplyDelete
  28. ಅಜ್ಜಾದ್ ಸರ್.... ಚಿಟ್ಟೆ ಹಿಂದೆ ನಾವು ಸರ್... :-) ಥ್ಯಾಂಕ್ಸ್ ನಿಮ್ಮ ಪ್ರತಿಕ್ರಿಯೆಗೆ.....

    ReplyDelete
  29. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು... ಶ್ರೀಕಾಂತ್... ನಿಮ್ಮ ಬ್ಲಾಗ್ ಅನ್ನು ನೋಡಿದೆ.. ನೀವು ಒಳ್ಳೆ ಒಳ್ಳೆಯ ಫೋಟೋಗಳನ್ನು ಸೆರೆ ಹಿಡಿದ್ದಿರ....ತುಂಬಾ ಚೆನ್ನಾಗಿ ಇದೆ.... ಹೀಗೆ ಬರುತ್ತಿರಿ..

    ReplyDelete
  30. photogalu chennagi bandive saar, improve aagoke tumbane jaaga ide inna ...
    Shubavagali

    Sanju

    ReplyDelete
  31. Photogalu chennagi bandive saar..improve aagoke inna tumbane jaaga ide.

    Shubavagali
    Sanju

    ReplyDelete
  32. Chennagide saar!
    Shubavagali
    Sanju

    ReplyDelete