Wednesday, March 10, 2010

ನನ್ನಾಸೆ,,,,!!!!

ನನ್ನಾಸೆ,,,,


ಮುಂಜಾವಿನ ಮಂಜಿನ ಬಿಂದುಗಳ ಜೊತೆ
ಆಟವಾಡುವ ಅಸೆ .....!!!

ಕೊಡಚಾದ್ರಿ ಬೆಟ್ಟದ ಮೇಲಿನ ಬಿಳಿ ಮೇಘಗಳ
ಜೊತೆ ಹಾರಾಡುವಾಸೆ !!!!

ಸಹ್ಯಾದ್ರಿಯ ಹಸಿರು ವನಗಳ ನಡುವೆ...
ಸಣ್ಣಗೆ ಬೀಳುವ ಮಳೆಯ ಜೊತೆ ಜೊತೆಯಲಿ...
ನಲಿದಾಡುವಾಸೆ.......!!!

ಚುಮು ಚುಮು ಚಳಿಗಾಲದಲ್ಲಿ
ಮುನ್ನಾರಿನ ಬೆಟ್ಟದ ತುದಿಯಲ್ಲಿ
ದಟ್ಟ ಮಂಜಿನ ನಡುವಿನಲ್ಲಿ...
ನಡೆದಾಡಿಕೊಂಡು ಚಾ ಕುಡಿಯುವಾಸೆ....!!!!

ಆಗುಂಬೆಯ ಸವಿ ಸಂಜೆಯಲ್ಲಿ....
ಮುಳುಗುತಿರುವ ಕೆಂಪು ಸೂರ್ಯನನ್ನು
ದೂರದಿಂದಲೇ ಮುಟ್ಟುವ ಅಸೆ.....!!!!

ಜಟಿ ಜಟಿ ಸಣ್ಣನೆ ಮಳೆಯ ನಡುವೆ
ಮಲೆನಾಡ ಪ್ರಕೃತಿಯ ಮಡಿಲಲ್ಲಿ
ಒಬ್ಬನೇ ಡ್ರೈವ್ ಮಾಡಿಕೊಂಡು ಹೋಗುವಾಸೆ ....!!!!

38 comments:

  1. ಅಂತೂ ಎಲ್ಲ ಆಸೆಗಳನ್ನು ಹೇಳಿಕೊಳ್ಳುತ್ತಾ, ಕವನ ಬರೆಯುವ ಆಸೆ ಪೂರೈಸಿಕೊಂಡ್ರಿ :) ಎಲ್ಲಾ ಆಸೆಗಳೂ ಬೇಗ ನೆರವೇರಲಿ.

    ReplyDelete
  2. ಪ್ರಕೃತಿಮಾತೆ ಮಡಿಲಲ್ಲಿ ಮಗುವಾಗಿ ಆಡುವ ತಮ್ಮ ಆಶೆಗಳ ಪರಿ ಅದ್ಭುತವಾಗಿ ಕಾವ್ಯಧಾರೆಯಲ್ಲಿ ಹೊಮ್ಮಿದೆ. ಜೊತೆಗೆ ಹಲವು ಪರಿಸರ ತಾಣಗಳನ್ನು ಅವುಗಳ ವಿಶಿಷ್ಟತೆಯೊ೦ದಿಗೆ ಪರಿಚಯಿಸಿದೆ. ಧನ್ಯವಾದಗಳು.

    ReplyDelete
  3. ನಿಮ್ಮ ಆಸೆಗಳೆಲ್ಲ ನೆರವೇರುವಂತಾಗಲಿ... ಈ ಬಾರಿ ಕವನ ಸಾಲುಗಳನ್ನು ನೀಡಿದ್ದೀರಿ... ನಿಮ್ಮ ಒಳಮನಸ ಆಸೆ ವ್ಯಕ್ತಪಡಿಸಿದ್ದೀರಿ... ನಮ್ಮೆಲ್ಲರ ಹಾರೈಕೆ ಇದ್ದೇ ಇರುತ್ತೆ.

    ReplyDelete
  4. ಆಸೆ ಹೊತ್ತ ಕವನ ಚೆನ್ನಾಗಿ ಮೂಡಿ ಬ೦ದಿದೆ.
    ಸು೦ದರ ಪ್ರಕೄತಿಯ ಮಡಿಲಲ್ಲಿ ಎಷ್ಟೊ೦ದು ಕಲ್ಪನೆಗಳು ಬರುತ್ತದೆ ಅಲ್ಲವೆ?
    ಚೆನ್ನಾಗಿ ಬರೆದಿದ್ದೀರಿ.ಮತ್ತಷ್ಟು ಕವನಗಳು ಬರುತ್ತಿರಲಿ.

    ReplyDelete
  5. ಗುರು ಸರ್
    ನಿಮ್ಮ ಆಸೆ ಚೆನ್ನಾಗಿದೆ
    ಬೇಗನೆ ನಿಮ್ಮೆಲ್ಲ ಆಸೆಗಳು ನೆರವೇರಲಿ
    ಸುಂದರ ಕವನ

    ReplyDelete
  6. ಗುರು,
    ಚೆನ್ನಾಗಿದೆ ನಿಮ್ಮ ಆಸೆ...

    ReplyDelete
  7. ಗುರು, ತು೦ಬಾ ಚೆನ್ನಾಗಿದೆ ಕವನ

    ReplyDelete
  8. ಗುರು,

    ಕೊನೆಗೂ ನೀವೊಂದು ಕವನವನ್ನು ಬರೆದೇ ಬಿಟ್ಟಿರಲ್ಲ...ನಿಮ್ಮ ಆಸೆಗಳೆಲ್ಲಾ ಈಡೇರುವಂತಾಗಲಿ....all the best.

    ReplyDelete
  9. ಗುರು...

    ನೀವು ಕವಿ ಅಂತ ಗೊತ್ತಿರಲಿಲ್ಲ..!

    ಆಸೆಗಳನ್ನು..
    ಬಲು ಸುಂದರವಾಗಿ ಬಣ್ಣಿಸಿದ್ದೀರಿ...

    ಅಭಿನಂದನೆಗಳು...

    ReplyDelete
  10. ನಿಮಾಸಗಳು ಚೆನ್ನಾಗಿದೆ, ಅನುಕೂಲ ಇದ್ರೆ ಎಂಜಾಯ್ ಮಾಡಿ, ಆದ್ರೆ ಅಲ್ಲೇ ಉಳಿ ಬೇಡಿ, ಬಂದು ನಮ್ಮೊಂದಿಗೆ ಕೂಡಿಕೊಳ್ಳಿ, ಹಾಗೆ ನಿಮ್ಮ ಕವನವನ್ನು ಮುಂದಿವರೆಸಿ

    ReplyDelete
  11. ದಿವ್ಯ,
    ಹೌದು,,, ಈ ಆಸೇನು ತುಂಬಾ ದಿನದಿಂದ ಇತ್ತು,,, ಇವಾಗ ಪೂರ್ಣ ಗೊಂಡಿದೆ...
    ಇದೆಲ್ಲ ನನಗೆ ಮತ್ತೆ ಮತ್ತೆ ಕಾಡುತ್ತಿರುವ ಅಸೆ,, ಇದರಲ್ಲಿ ಕೆಲವು ಆಗಲೇ ಪೂರ್ಣ ಗೊಂಡ ಇದೆ... ಆದರು ಮತ್ತೆ ಮತ್ತೆ ಇದೆ ಅಸೆ ಆಗುತ್ತೆ ಏನ್ ಮಾಡೋದು....

    ReplyDelete
  12. ಸೀತಾರಾಮ್ ಸರ್,,
    ನನ್ನ ಕವನ ವನ್ನು ಮೆಚ್ಚಿ , ನಿಮ್ಮ ಅಭಿನಂದನಾ ಪೂರ್ಣ ಪ್ರತಿಕ್ರಿಯೆಗೆ ಧನ್ಯವಾದಗಳು.... ಎಸ್ಟೆ ಅಗಲಿ ನಾವೆಲ್ಲ ಪ್ರಕೃತಿ ಮುಂದೆ ಮಕ್ಕಳಲ್ಲವೇ....

    ReplyDelete
  13. ಹೌದು ಮನಸು..
    ತುಂಬಾ ದಿನಗಳಿಂದ ಕವನವನ್ನು ಬರೀಬೇಕು ಅಂತ ಇದ್ದೆ.. ಇದು ಅಚಾನಕ್ ಆಗಿ ಸುಮ್ನೆ ಕೂತಿರಬೇಕಾದರೆ ಬರೆದೆ,, ಚೆನ್ನಾಗಿ ಇದೆಯೋ ಇಲ್ವೋ ಗೊತ್ತಿಲ್ಲ,, ಆದರು ನನ್ನ ಮನಸಿನ ಅಸೆ ಗಳನ್ನ ಹೇಳಿಕೊಂಡ ಇದ್ದೇನೆ ಅಸ್ಟೇ... ಇದರಲ್ಲಿ almost ಎಲ್ಲ ಆಸೆಗಳು ಇಡೀರಿದೆ.. ನಿಮ್ಮಗಳ ಹಾರೈಕೆಗೆ ನಾ ಸದಾ ಅಭಾರಿ.....

    ReplyDelete
  14. ಹೌದು ಮನಮುಕ್ತ , ಇದೆ ನನ್ನ ಮೊದಲ ಪ್ರಯತ್ನ ,, ನೀವು ಹೇಳಿರುವ ಹಾಗೆ,, ಪ್ರಕೃತಿಯ ಮುಂದೆ.. ಅದರ ಸೌಂದರ್ಯದ ಮುಂದೆ,,,ಏನು ಇಲ್ಲ.. ಎಷ್ಟು ಸರಿ ಬೇಕಾದರೂ ಸವಿಯ ಬೇಕು ಅಂತ ಅನ್ನಿಸುತ್ತೆ...

    ReplyDelete
  15. ಕವನ ಮೆಚ್ಚಿದ್ದಕ್ಕೆ ಧನ್ಯವಾದಗಳು ಗುರು ಸರ್... ಇದರಲ್ಲಿ ಕೊನೆಯಾ ಒಂದು ಅಸೆ ಮಾತ್ರ ಹಾಗೆ ಉಳಿದಿದೆ ಬೇಗ ಅದನ್ನು ನನಸಾಗಿಸುತ್ತೇನೆ....

    ReplyDelete
  16. ಧನ್ಯವಾದಗಳು ಸವಿಗನಸು....

    ReplyDelete
  17. ಹಾ ಹಾ, ಹೌದು ಶಿವೂ, ಕೊನೆಗೂ,, ಬರೆಯಲೇ ಬೇಕು ಅಂತ ಬರೆದು ಬಿಟ್ಟೆ.... ಚೆನ್ನಾಗಿ ಇದ್ದೀಯ... ?

    ReplyDelete
  18. ಪ್ರಕಾಶಣ್ಣ ..
    ಕವಿ ಅಂತ ಏನು ಇಲ್ಲ ,, ನಿಮ್ಮಗಳ ಪ್ರೇರೇಪಣೆ ಇಂದ , ಒಂದಷ್ಟು ಸಾಲುಗಳನ್ನು ಗೀಚಿದ್ದೇನೆ ಅಸ್ಟೇ.... ಮೆಚ್ಚಿದ್ದಕ್ಕೆ ತುಂಬಾ ಧನ್ಯವಾದಗಳು ಪ್ರಕಾಶಣ್ಣ...

    ReplyDelete
  19. ಖಂಡಿತ ವಾಗಿಯು ವಾಪಾಸ್ ಬರ್ತೇನೆ ಉಮೇಶ್ ಸರ್... ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು....

    ReplyDelete
  20. @ರಾಜ್ ವಿನೋದ್ ರವರು ಹೀಗೆನುತ್ತಾರೆ...
    Guru, Tumba chennagide, munde nadesu ninna lekhani yanna

    ReplyDelete
  21. ಗುರು, ನಿಮ್ಮ ಆಸೆಗಳೆಲ್ಲ ನೆರವೇರಲಿ ಎಂದು ಹಾರೈಸುವೆ

    ReplyDelete
  22. ನಂಗು ಟ್ರೆಕ್ ಮಾಡೋ ಆಸೆ..:) ಸೂಪರ್ ಆಗಿ ಇದೆ ನಿಮ್ಮ ಅಸೆ..
    ನಿಮ್ಮವ,
    ರಾಘು.

    ReplyDelete
  23. thumba chennagide kavana. aasegalu neraverali.

    ReplyDelete
  24. ಕವನ ಚೆನ್ನಾಗಿದೆ ! keep writing, Good Luck

    ReplyDelete
  25. ಗುರು, ಮನದಾಸೆಯನ್ನು ಹೇಳಿಕೊಳ್ಳುವುದೇ ಒಂದು ಒಂದು ಆಸೆ..ಅದನ್ನು ಬಹಳ ಸೊಗಸಾಗಿ ಈಡೇರಿಸಿಕೊಂಡಿದ್ದೀರಿ...ಚನ್ನಾಗಿದೆ ನಿಮ್ಮ ಭಾವ ನಿವೇದನೆ...

    ReplyDelete
  26. ಥ್ಯಾಂಕ್ಸ್ ದೀಪಸ್ಮಿಥ.....

    ReplyDelete
  27. ರಾಘು, ಟ್ರೆಕ್ ನನ್ನ ನೆಚ್ಚಿನ್ನ ಹವ್ಯಾಸ... ಕೊಡಚಾದ್ರಿಗೆ ಹೋಗಿದ್ದಾಗ, ಆಗುಂಬೆ ಕಡೆ ಇಂದ ಬರೋವಾಗ, ಮುನ್ನಾರ್ ಗೆ ಹೋಗಿದ್ದಾಗ,,, ಇದೆಲ್ಲ ಅನುಭವಿಸಿದ್ದೇನೆ,,, ಆದರು ಇನ್ನೊಮ್ಮೆ ಮಗದೊಮ್ಮೆ ಇದೆ ರೀತಿ ಅನುಭವವನ್ನು ಅನುಭವಿಸಬೇಕು ಅಂತ ಅಸೆ.....:-)
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು....

    ReplyDelete
  28. ಧನ್ಯವಾದಗಳು ಒಜಸ್ವಿ :-)

    ReplyDelete
  29. ಧನ್ಯವಾದಗಳು ವಿ ಆರ್ ಭಟ್.

    ReplyDelete
  30. ಹೌದು ಆಜಾದ್ ಸರ್... ಮನಸಿನಲ್ಲಿ ಇರುವ ಅಸೆಗಳನ್ನೇ ಹೇಳಿಕೊಲ್ಲೋದೆ ಒಂದು ದೊಡ್ಡ ಅಸೆ... ನೀವುಗಳು ಎಲ್ಲ ಬರೆಯುವ ಕವನ ನೋಡಿ,, ನಾನು ಬರೀಬೇಕು ಅಂತ .. ಒಂದು ಚಿಕ್ಕ ಕವನ ಬರೆದಿದ್ದೇನೆ... ಮುಂದೆ ಆದರೆ ಹಾಗೆ ಮುಂದುವರಿಸುತ್ತೇನೆ,,, ನಿಮ್ಮಗಳ ಪ್ರೀತಿಯ ಅಭಿಪ್ರಾಯ, ಪ್ರೋತ್ಸ್ಥಹ ಹೀಗೆ ಇರಲಿ...

    ReplyDelete
  31. sooper kavana.... :-) nimma aasegalella ideerali... :-)

    ReplyDelete
  32. 'Guru's World ' ಅವ್ರೆ.,

    ಆಸೆ ಸರೀ.. ಆ ಚಳಿಯಲಿ ಒಬ್ಬರೇ ಸಾಕೆ?
    ಸುಮ್ಮನೆ ಹೇಳಿದೆ..
    ಚಂದದ ಆಸೆ..

    ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.com

    ReplyDelete
  33. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ದಿವ್ಯ....

    ReplyDelete
  34. ಥ್ಯಾಂಕ್ಸ್ ಸುಮಾ... :-)

    ReplyDelete
  35. ಗುರು ದೆಸೆ...
    ಹೌದು ನೀವು ಹೇಳುವುದೇನೋ ಸರಿ..... ಅ ಚಳಿ ನಲ್ಲಿ ಜೊತೆಗೆ ಯಾರಾದರು ಇದ್ದರೆ. ಈ ಅನುಭವಗಳನ್ನೆಲ್ಲ ಮಿಸ್ ಮಾಡಿಕೊಳ್ಳ ಬೇಕಾಗುತ್ತೆ ಅಲ್ವ...? ಪ್ರಕೃತಿ ಸವಿಯನ್ನು ಒಬ್ಬರೇ ಸವಿದರೆ ಚೆನ್ನ.....ಯಾರ + ಯಾವ ಜಂಜಾಟನೂ ಬೇಡ....:-)
    ನಿಮ್ಮ ಮನಸಿನ ಮನೆಯ ಲೇಖನಗಳು ತುಂಬಾ ಚೆನ್ನಾಗಿ ಮೂಡಿ ಬರ್ತಾ ಇದೆ....

    ReplyDelete
  36. ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ

    ReplyDelete
  37. guru!

    aparoopakke kavana!

    nimma aasegalu thumba hithavaagive :)

    ReplyDelete