Thursday, December 17, 2009

Cheese Art - Cheese ಲೇಡಿ

ತುಂಬ ದಿನ ಆಯಿತು ನನ್ನ ಬ್ಲಾಗ್ ಅಪ್ಡೇಟ್ ಮಾಡಿ, ನನ್ನ ಕೆಲವು ಬ್ಲಾಗ್ ಸ್ನೇಹಿತರು ಫೋನ್ ಮಾಡಿ, ಮೇಲ್ ಮಾಡಿ ಕೇಳ್ತಾ ಇದ್ರೂ,, ಎಲ್ಲಿ ಕಳೆದು ಹೋಗಿದಿಯ ಅಂತ... ಎಲ್ಲೂ  ಕಳೆದು ಹೋಗಿರಲಿಲ್ಲ,,, ಹಾಗೆ ಸ್ವಲ್ಪ ಕೆಲಸದ ಒತ್ತಡ...ಮತ್ತೆ ಪರ್ಸನಲ್ ಪ್ರಾಬ್ಲಮ್ ನಲ್ಲಿ ಕಳೆದು ಹೋಗಿದ್ದೆ,,, ಟೈಮ್ ಇದ್ರೂ, ಬ್ಲಾಗ್ ನ ಅಪ್ಡೇಟ್ ಮಾಡೋಕೆ ಮನಸ್ಸು ಇರಲಿಲ್ಲ....
ನಾನು ಬ್ಲಾಗ್ ಲೋಕಕ್ಕೆ ಬಂದು ವರ್ಷದ ಮೇಲೆ ಆಗಿದೆ... ಇದು ನನ್ನ ನೆಚ್ಚಿನ ಹವ್ಯಾಸಗಳಲ್ಲಿ ಒಂದು,
ಪ್ರಾಬ್ಲಮ್, ಕಷ್ಟ ,  ಒತ್ತಡ ಎಲ್ಲರಿಗು ಇರುತ್ತೆ, ಸುಮ್ಮನೆ ಅದರಲ್ಲೇ ತಲೆಕೆಡಿಸಿಕೊಂಡ್ ಇದ್ದರೆ ಆಗೋಲ್ಲ ಅಂತ ಅಂದುಕೊಂಡು,,, ಸ್ವಲ್ಪ active ಆಗಿ ನನ್ನ ಹವ್ಯಾಸಗಳಲ್ಲಿ ತೊಡಗಿಸಿಕೊಂಡು ಸ್ವಲ್ಪ ಸಂತೋಷವಾಗಿ ಇರೋಣ ಅಂತ ಡಿಸೈಡ್ ಮಾಡಿ, ಹೊಸ ಪೋಸ್ಟ್ ನ ಅಪ್ಡೇಟ್ ಮಾಡ್ತಾ ಇದ್ದೇನೆ,,

ಇವಾಗ ನಾನು ಹೇಳಲು ಹೊರಟಿರುವುದು...sarah kaufmann  ಎಂಬ cheese ಲೇಡಿ ಬಗ್ಗೆ . ಇ ವಯಸ್ಸಾದ ಅಜ್ಜಿ, ನೈಸ್ ಆಗಿ, ಸ್ವೀಟ್ ಆಗಿ  ಇರುವ ಚೀಸ್ ನಲ್ಲೆ ತನ್ನ ಕಲೆಯನ್ನ, ಕೈ ಚಳಕವನ್ನು ತೋರಿಸಿದ್ದಾಳೆ. , commercial art ನಲ್ಲಿ ಡಿಗ್ರಿ ಪಡೆದು, wisconsin dairy indrustry ನಲ್ಲಿ 16 ವರ್ಷದಿಂದ ವರ್ಕ್ ಮಾಡ್ತಾ ,, ಇ ಚೀಸ್ ಆರ್ಟ್ ಬಗ್ಗೆ , ಚೀಸ್ ನಿಂದಲೇ ಮಾಡುವ  ಕಲೆ , sculptor  ಬಗ್ಗೆ ಆಸಕ್ತಿ ಬೆಳೆಸಿಕೊಂಡು,, ಇವೊತ್ತು  ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ  ,, ಹಾಗೆ ತುಂಬ ಕಡೆ ಇಂದ ಅವಾರ್ಡ್ ಬೇರೆ ಪಡ್ಕೊಂಡ್ ಇದ್ದಾರೆ... ಎಸ್ಟೋ ಫುಡ್ ಫೆಸ್ಟಿವಲ್ ನಲ್ಲಿ ಇವರ ಚೀಸ್ ಆರ್ಟ್ ಪ್ರದರ್ಶನ ಗೊಂಡು, ಹೆಸರುವಾಸಿ ಆಗಿದೆ ಅಂತೆ..
ಇತ್ತೇಚೆಗೆ ಲಂಡನ್ ನಲ್ಲಿ ನಡೆಯುತ್ತಿದ್ದ ಫುಡ್ ಫೆಸ್ಟಿವಲ್ ನಲ್ಲಿ ಇವರ ಆರ್ಟ್ ಬಗ್ಗೆ ಒಂದು Article ಬಂದಿತ್ತು ,, ಆದರೆ ಜಾಡು ಹಿಡಿದು ಹೊರಟಾಗ ಇವರ ಅದ್ಬುತ ಕಲೆಯ ಪರಿಚಯ ಆಯಿತು....ಅದನ್ನ ಹಾಗೆ ನಿಮ್ಮಗಳ ಜೊತೆ share ಮಾಡ್ಕೋತಾ ಇದ್ದೇನೆ.
ಇವರ ಬಗ್ಗೆ , ಹಾಗು ಇವರ ಕಲೆ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಬೇಕಾದರೆ.. ಇವರದೇ ವೆಬ್ ಸೈಟ್ ನಲ್ಲಿ ನೋಡಬಹುದು,,,
ಇವರ ಕೆಲವು ಆಯ್ದ , ಅದ್ಬುತ ಕಲಾಕೃತಿಗಳು ಇಲ್ಲಿವೆ ನೋಡಿ.....








14 comments:

  1. Guru,
    ಮತ್ತೊಂದು ಅದ್ಭುತ ಕಲೆ.....
    ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು....

    ReplyDelete
  2. ಗುರು,

    ಚಿತ್ರಗಳು ಎಂದಿನಂತೆ ಸೂಪರ್. ಇದನ್ನು ಡಿಸ್ಕವರಿಯಲ್ಲಿ ಅಥವಾ ಎನ್‍ಜಿಸಿನಲ್ಲಿ ನೋಡಿದ ನೆನಪು.
    ಎಲ್ಲಿ ಹೋಗಿದ್ದರಿ ಇಷ್ಟು ದಿನ? ಕೆಲಸದ ಒತ್ತಡ ಹೆಚ್ಚಾಯಿತೇ?
    ವಾರಕ್ಕೊಂದು ಹೊಸ ವಿಷಯ ಪರಿಚಯಿಸುತ್ತಿದ್ದು, ಒಂದು ತಿಂಗಳಾದರೂ ನಿಮ್ಮ ಸುಳಿವೇ ಇಲ್ಲವಲ್ಲ ಎಂದು ಯೋಚಿಸುತ್ತಿದ್ದೆ.
    ಇವತ್ತು ಇದನ್ನು ನೋಡಿ ಸಮಾದಾನವಾಯಿತು. ಹೇಗೇ ಬರೆಯುತ್ತಿರಿ.

    ReplyDelete
  3. tumba chennagive, bahaLa dinagaLa nantara oLLe kale parichayisiddeeri

    ReplyDelete
  4. ಗುರು,
    ಎಂಥ ಅದ್ಭುತ ಕಲೆ ಆಲ್ವಾ,
    ಕ್ರಿಯೇಟಿವಿಟಿ ಎಲ್ಲ ಕಡೆನೂ ಇರತ್ತೆ, ನೋಡೋ ಮನಸು ಬೇಕು
    ಅನ್ನೋದಕ್ಕೆ ಇವರೇ ಸಾಕ್ಷಿ,
    ಸುಂದರ ಫೋಟೋಗಳು ಕೂಡಾ
    ತಿಳಿಸಿದ್ದಕ್ಕೆ ಧನ್ಯವಾದಗಳು

    ReplyDelete
  5. ಗುರು,

    cheeseನಲ್ಲಿ ಎಷ್ಟೊಂದು ಸುಂದರ ಕಲಾಕೃತಿಗಳು. ನೋಡಲು ತುಂಬಾ ಚೆನ್ನಾಗಿವೆ. ಇದೆಲ್ಲಾ ಮಾಡಲು ತುಂಬಾ ತಾಳ್ಮೆ ಬೇಕಲ್ವ...ಆಕೆಯ ಶ್ರಮಕ್ಕೆ ನಮ್ಮ ಸಾವಿರ ನಮನಗಳು.

    ReplyDelete
  6. ಅದ್ಭುತ ಕಲೆಗಾರಿಕೆ, ಇಂತಹ ವಿಚಾರಗಳನ್ನು ಹುಡುಕಿ ನಮಗೆ ಕೊಟ್ಟು ನಮ್ಮ ತಿಳಿವಿನ ಪರಿಧಿಯನ್ನು ವಿಸ್ತಾರಗೊಳಿಸುತ್ತಿದ್ದೀರಿ. ತು೦ಬಾ ಖುಷಿ ಯಾಯಿತು

    ReplyDelete
  7. ಧನ್ಯವಾದಗಳು ಸವಿಗನಸು....

    ReplyDelete
  8. ಹೌದು ರಾಜೀವ,,
    ಸ್ವಲ್ಪ ಕೆಲಸ ಹಾಗೆ ಪರ್ಸನಲ್ ಒತ್ತಡ ಜಾಸ್ತಿ ಇಟ್ಟು,, ನಿಮ್ಮ ತರ ಮೌನಿ ಆಗಿ ಬಿಟ್ ಇದ್ದೆ, ಸ್ವಲ್ಪ ದಿನ... :-)
    ಪ್ರತಿಕ್ರಿಯೆಗೆ ಧನ್ಯವಾದಗಳು...

    ReplyDelete
  9. ಧನ್ಯವಾದಗಳು ಮನಸು,,,,

    ReplyDelete
  10. ಹೌದು ಗುರು ಸರ್, ಇನ್ನು ಎಂತೆಂತ ಕಲೆ ಇರುತ್ತವೋ... ನೋಡಲು ಹಾಗು ಪ್ರೋತ್ಸಾಹಿಸಲು ಸಿಕ್ಕರೆ,,ಇಂತಹ ಎಸ್ಟೋ ಕಲೆಗಳು ಬೆಳಕಿಗೆ ಬರುತ್ತವೆ... ನಮ್ಮ ಗ್ರಾಮೀಣ , ಹಳ್ಳಿಗಳ ಕಡೆನು ತುಂಬ ಜನರು ಒಳ್ಳೆಯ ಕಲಾ ನೈಪುಣ್ಯತೆ ಹೊಂದಿದ್ದರೆ,, ಅಂತಹವರಿಗೆ ಪ್ರೋಸ್ತಾಹ ಸಿಕ್ಕರೆ ಇನ್ನು ಮುಂದೆ ಬರಬಹುದು...

    ReplyDelete
  11. ಧನ್ಯವಾದಗಳು ಶಿವೂ,,,,

    ReplyDelete
  12. ಧನ್ಯವಾದಗಳು ಪರಾಂಜಪೆ,,,,

    ReplyDelete