ಕ್ರಿಸ್ಮಸ್ ಮತ್ತು ಹೊಸವರ್ಷದ ರಜೆ ೧ ವೀಕ್ ಲಾಂಗ್ ಲೀವ್, ಎಲ್ಲಿಗಾದ್ರೂ ಹೋಗೋಣ ಅಂಥ ಯೋಚನೆ ಮಾಡ್ತಾನೆ ಇದ್ದ ರಜೆ ಎಲ್ಲ ಮುಗಿದು ಹೋಗ್ತಾ ಇತ್ತು, ಮೊನ್ನೆ ರಾತ್ರಿ ಜಾಸ್ತಿ ಹೊತ್ತಿನ ತನಕ ನನ್ನ laptop ನಲ್ಲಿ ಅದು ಇದು ಮಾಡ್ಕೊಂಡು ಎದ್ದಿದ್ದೆ... ಹಾಗೆ ಏನೋ ಹುಡುಕ್ತಾ ಇರ್ಬೇಕಾದ್ರೆ "ಲಂಡನ್ ಫೋಟೋ ಆಲ್ಬಮ್ DVD" ಸಿಕ್ತು .... ನಾನು 2006-07 ನಲ್ಲಿ 4 ತಿಂಗಳು ಲಂಡನ್ ನಲ್ಲಿ ಇದ್ದಾಗ tegeda photos DVD , ಇದೆ ಡಿಸೆಂಬರ್ ಚಳಿಗಾಲದ ಸಮಯದಲ್ಲಿ ಹೋಗಿದ್ದೆ... ಅ ಹಳೇ ನೆನಪುಗಳು, ಅಲ್ಲಿ ಸುತ್ತಾಡಿದ ದಿನಗಳು, ಕ್ರಿಸ್ಮಸ್ ಮತ್ತೆ ಹೊಸ ವರುಷದ ಸಡಗರ ಸಂಭ್ರಮ.... ಎಲ್ಲ ನೆನಪುಗಳು ಹಾಗೇ ನನ್ನ ಕಣಣ್ಣ ಮುಂದೆ ಹಾದು ಹೋದವು ............
ಲಂಡನ್ ನನ್ನ ಮೊದಲ ವಿದೇಶದ ಪ್ರವಾಸ, ಹೊಸ ಕಂಪನಿಗೆ ಸೇರಿ ಸ್ವಲ್ಪ ದಿನದಲ್ಲೇ ಲಂಡನ್ ಎನ್ನೋ ಮಾಯಾನಗರಿಗೆ ಹೋಗೋ ಅವಕಾಶ ಸಿಕ್ತು. ನವೆಂಬರ್ 2006 ನಲ್ಲಿ ಹೋಗಿ ಮಾರ್ಚ್ 2007 ನಲ್ಲಿ ವಾಪಾಸ್ ಬಂದೆ. ಅಹಾ ಅಲ್ಲಿ ಇದ್ದ ಅ ದಿನಗಳನ್ನು ಎಷ್ಟು ನೆನಪಿಸಿಕೊಂಡರು ಸಾಲದು. ನನ್ನ ಮೋಸ್ಟ್ memoreble moments, ಅಂದು ನಮಗೆ ಕ್ರಿಸ್ಮಸ್ ಮತ್ತೆ ಬಾಕ್ಸಿಂಗ್ ಡೇ ರಜೆ ಇತ್ತು ಡಿಸೆಂಬರ್ 26 ಅಂಥ ಕಾಣುತ್ತೆ . ನಾನು ಮತ್ತೆ ನನ್ನ colleague ಎಲ್ಲೆಲಿ ಹೋಗಬೇಕು ಅಂಥ ಡಿಸೈಡ್ ಮಾಡಿಕೊಂಡು ಬೆಳಿಗ್ಗೆನೆ ನಮ್ಮ ಅಪಾರ್ಟ್ಮೆಂಟ್ ನಿಂದ ಹೊರಟೆವು, ಬಾಕ್ಸಿಂಗ್ ಡೇ ದಿನ ಶಾಪಿಂಗ್ ತುಂಬ ಡಿಸ್ಕೌಂದ್ ಇರುತ್ತೆ, ಅದ್ದರಿಂದ ಸ್ವಲ್ಪ ಶಾಪಿಂಗ್ ಮಾಡ್ಕೊಂಡು ಹಾಗೆ ಯಾವುದಾದರು ಒಳ್ಳೆ ಮೂವಿ ನೋಡ್ಕೊಂಡ್ ಬರೋಣ ಅಂಥ ತೀರ್ಮಾನಿಸಿ ಹೊರಟೆವು, ಬೆಳ್ಳಿಗ್ಗೆ ಇಂದ ಸಂಜೆ ತನಕ oxford street, Bond street, ನಲ್ಲಿ ಎಲ್ಲ ಸುತ್ತಾಡಿ, ಸಂಜೆ bigben ಹತ್ರ ಬಂದೆವು. ಪ್ರಶಾಂತ ವಾದ ವಾತಾವರಣ, ಮೈ ಕೊರೆಯುವ ಚಳಿ, ಮಂಜು ತುಂಬಿದ ಮೋಡದಲ್ಲೇ ಮುಳುಗಿರುವ ಲಂಡನ್ ಎನ್ನುವ ಮಾಯಾನಗರಿಯಲ್ಲಿ, ಬೆಚ್ಚಗಿನ ಕೋಟು ಹಾಕಿಕೊಂಡು ಥರಗುಟ್ಟುವ ಚಳಿಯಲ್ಲಿ ಓಡಾಡುವುದೇ ಒಂದು ಥರ ಮಜಾ... ಅಲ್ಲಿ ಟೈಮ್ ಹೋಗುವುದೇ ಗೊತ್ತಾಗುವುದಿಲ್ಲ ಎಲ್ಲದರಲ್ಲೂ ಫಾಸ್ಟ್ ಲೈಫ್.... ಅಲ್ಲಿ ಇದ್ದಾಗ ಅದು ಎಷ್ಟು ಫೋಟೋಸ್ ತೆಗೆದಿದ್ದೇನೋ ನನಗೆ ಗೊತ್ತಿಲ್ಲ, ಏನೋ ಒಂದು ಥರ ಆಸೆ ಏನಾದ್ರು ಚೆನ್ನಾಗಿರೋದು ಕಾಣಿಸಿದರೆ ನಾನು ಬೇಡ ಅಂದ್ರು ನನ್ನ ಕ್ಯಾಮೆರಾ ಬಿಡ್ತಾ ಇರಲಿಲ್ಲ, ಅದರಲ್ಲಿ ಸೆರೆ ಆಗ್ತಾ ಇತ್ತು, ಏನ್ ಇಲ್ಲ ಅಂದ್ರು ಒಂದು 8 GB ಫೋಟೋಸ್ ತಗೊಂಡ್ ಬಂದಿದ್ದೆ
ಹಾಂ ಅವೊತ್ತು ವರ್ಲ್ಡ್ ಫೇಮಸ್ I-MAX ಸಿನಿಮ ಹಾಲ್ ನಲ್ಲಿ Polar Express-3d ಮೂವಿ ನೋಡಿದ್ವಿ I MAX ಸಿನಿಮಾ ಹಾಲ್ ನೋಡೋದೇ ಚೆಂದ, ಫರ್ಸ್ಟ್ ಟೈಮ್ ನಾನು 3d ಮೂವಿನ I-MAX ನಲ್ಲಿ ನೋಡಿದ್ದು, ವಾಹ್ ಏನ್ ಚೆನ್ನಾಗಿ ಇತ್ತು ಗೊತ್ತ, am so impressed, ಅ ಮೂವಿ ನೋಡಬೇಕಾದ್ರೆ ದೊಡ್ಡ ದೊಡ್ಡ ಕನ್ನಡಕ ಕೊಟ್ಟಿದ್ರು, ಫಿಲ್ಮ್ ಹಾಲಅನ್ನು ಎಷ್ಟು ಚೆನ್ನಾಗಿ maintain ಮಾಡಿದ್ದರೆ,,, ಸೌಂಡ್ ಸಿಸ್ಟಂ ಅಂತು tooo good. ಒಟ್ನಲ್ಲಿ ಅ ದಿನ ಮಾತ್ರ ನನ್ನ ಮನಸಿನಲ್ಲಿ ಉಳಿದುಬಿಟ್ಟು ಇದೆ. ಪ್ರತಿ ಸಾರಿ ಕ್ರಿಸ್ಮಸ್ ಮತ್ತೆ ನ್ಯೂ ಇಯರ್ ಟೈಮ್ ನಲ್ಲಿ ನೆನಪು ಆಗ್ತಾ ಇರುತ್ತೆ
london eye, ಮತ್ತೆ I-MAX ಥಿಯೇಟರ ಹತ್ರ ತೆಗೆದ ಕೆಲವು ನನ್ನ ಇಷ್ಟವಾದ ಫೋಟೋಗಳು ಇಲ್ಲಿವೆ ನೋಡಿ..
ಥೇಮ್ಸ್ ನದಿಯ ಸೇತುವೆ ಮೇಲಿನಿಂದ
ಗುರು,
ReplyDeleteಲಂಡನ್ ಫೋಟೋಗಳು ತುಂಬಾ ಚೆನ್ನಾಗಿವೆ...
ತುಂಬ ಧನ್ಯವಾದಗಳು ಶಿವೂ , ಆದರೆ ನಾನು ನಿಮ್ಮ ಅಸ್ಟು ಒಳ್ಳೆ ಫೋಟೋಗ್ರಾಫರ್ ಅಲ್ಲ.......
ReplyDelete