Friday, December 19, 2008

ಆ ಒಂದು ಭಯಾನಕ ದಿನ....


ಆ ಒಂದು ಭಯಾನಕ ದಿನ....,
ಅಂದು ಸೋಮವಾರ ಬ್ಯುಸಿ ಸೋಮವಾರದ ಬೆಳ್ಳಿಗ್ಗೆ, ಎಲ್ಲರೂ ಭಾನುವಾರದ ರಜೆಯ ಸವಿ ಮುಗಿಸಿ ಬೆಳಗ್ಗೆ ಎದ್ದು ತಮ್ಮ ತಮ್ಮ ಕೆಲಸ ಕಾರ್ಯಗಳಿಗೆ ರೆಡಿ ಆಗುತಿದ್ದರು, ಆದರೆ ಆ ಸೋಮವಾರದ ಬೆಳಗ್ಗೆ ಮಾಮೂಲಿ ಥರ ಇರಲಿಲ್ಲ, ಬೆಳಗ್ಗೆ ಇಂದಾನೆ ಏನೋ ಒಂದು ಥರ ಕತ್ತಲು ಮಬ್ಬು, ಆವರಿಸಿತ್ತು .... ......
ಎಲ್ಲೊ ಒಂದು ಕಡೆ ಕಪ್ಪಗಿನ ಹೋಗೆ ಆಕಾಶಕ್ಕೆ ಸೇರಲು ನಿಧಾನವಾಗಿ ಮೇಲಕ್ಕೆ ಹೋಗುತ್ತಾ ಇತ್ತು, ಕೆಲವೇ ನಿಮಿಷಗಳಲ್ಲಿ ಇದು ಒಂದು ದೊಡ್ಡ ಸುದ್ದಿಯಾಗಿ ಎಲ್ಲ ಕಡೆ ಒಬ್ಬರ ಬಾಯಿ ಇಂದ ಒಬ್ಬರಿಗೆ ಹಬ್ಬಿತು, ಯಾರಿಗೂ ಏನ್ ಅಗುತ್ತಾ ಇದೆ ಅಂಥ ಸ್ಪಷ್ಟವಾಗಿ ಗೊತ್ತಾಗಲಿಲ್ಲ , ಎಲ್ಲರ ಬಾಯಿ ಯಲ್ಲೂ ಇದರದೇ ಮಾತು, ಒಬ್ಬೊಬ್ಬರು ಒಂದೊಂದು ಥರ ಹೇಳುಥ ಇದ್ದರು, ನಿಧಾನವಾಗಿ ಸೂರ್ಯ ಮೇಲೆ ಬರುತ್ತಾ ಬರುತ್ತಾ , ಇನ್ನೊಂದು ಕಡೆ ಇಂದ ದಟ್ಟವಾದ ಕಪ್ಪು ಆಕಾಶವನ್ನು ಅವರಿಸಿಕೊಳ್ಳುತ್ತಾ ಇತ್ತು,



ಕೆಲಸಕ್ಕೆ ಹೋಗಲು, ಮಕ್ಕಳನ್ನು ಸ್ಕೂಲಿಗೆ ಕಳುಹಿಸಲು ರೆಡಿ ಮಾಡುತಿದ್ದ ಅಪ್ಪ ಅಮ್ಮಂದಿರು ಒಂದು ನಿಮಿಷ ಯೋಚಿಸಿ, ಎಲ್ಲವನ್ನು ಹಾಗೆ ಬಿಟ್ಟು ಮನೆ ಇಂದ ಹೊರಬಂದು ಅಕ್ಕ ಪಕ್ಕದ ಮನೆ ಯವರ ಹತ್ತಿರ ಮಾತಾಡುತ್ತ ಇದ್ದ ದೃಶ್ಯ ಸಾಮಾನ್ಯವಾಗಿತ್ತು , ಯಾರಿಗೂ ಏನು ಮಾಡಬೇಕು, ಏನಿದು, ಯಾಕೆ ಈ ಥರಾ ಕಪ್ಪು ಹೋಗೆ ಬರುತ್ತಾ ಇದೆ, ಎಲ್ಲಿಂದ ಬರುತ್ತಾ ಇದೆ ಎಂದು ಗೊತ್ತಿಲ್ಲದೇ ತಮ್ಮ ತಮ್ಮಲ್ಲೇ ಮಾತಾಡಿ ಕೊಳ್ಳುತ್ತಾ ಇದ್ದರು,




ಎಲ್ಲರಲ್ಲೂ ಒಂದು ಥರ ಭಯ , ಆತಂಕ , ಆವರಿಸಿಕೊಂಡಿತ್ತು , ಯಾವ ಟಿವಿ ಚಾನೆಲ್ ನಲ್ಲಿ ನೋಡಿದರು ಇದರದೇ ಸುದ್ದಿ, ಇದರದೇ ನ್ಯೂಸ್ , ಎಲ್ಲ ಟಿವಿ ಚಾನೆಲ್ ನವರು ಅ ಕಪ್ಪು ಹೊಗೆಎಲ್ಲಿಂದ ಬರ್ತಾ ಇದೆ ಅಂಥ ಪ್ರಸಾರ ಮಾಡಲು ಅದರ ಜಾಡು ಹಿಡಿದು ಹೊರಟಿದ್ದರು .... ಹೊರಗಡೆ ಬಂದು ನೋಡಿದರೆ ಎಲ್ಲೊ ದೂರದಿಂದ ಕಪ್ಪು ಹೋಗೆ ಅವರಿಸಿಕೊಳ್ಳುತಿರುವುದು ಸ್ಪಷ್ಟ ವಾಗಿ ಕಾಣುತ್ತ ಇತ್ತು, ಎಲ್ಲರೂ ತಮ್ಮ ತಮ್ಮ ಸಂಬಂದಿಕರಿಗೆ ಬೇರೆ ಉರಿನಲ್ಲಿ ಇರುವ ತಮ್ಮ ಬಂದುಗಳಿಗೆ ಫೋನ್, ಮೊಬೈಲ್ ನಲ್ಲಿ ಸಂಭಾಷಣೆ ಮಾಡುತ್ತ ತಮ್ಮ ಆತಂಕ ಗಳನ್ನೂ ಹೇಳಿಕೊಳ್ಳುವುದಕ್ಕೆ ಪ್ರಯತ್ನ ಪಡ್ತಾ ಇರ್ಬೇಕಾದ್ರೆ ,, ಒಮ್ಮೆಲೇ ಎಲ್ಲ ನೆಟ್ವರ್ಕ್ ಜಾಮ್ ಆಗಿ ನಿಶಬ್ದವಾದವು .....




ಸ್ವಲ್ಪ ಹೊತ್ತಿನಲ್ಲೇ ನ್ಯೂಸ್ ಚಾನೆಲ್ ಮೂಲಕ ಒಂದು ಭಯಂಕರ ಸುದ್ದಿ ನೋಡಿದ ಜನ ಮನೆ ಇಂದ ಹೊರಬರಲು ಹೆದರಿದರು.. ಎಲ್ಲ ಮಕ್ಕಳನ್ನು ಮನೆ ಯಲ್ಲೇ ಕೂಡಿ ಹಾಕುತ್ತ ಇದ್ದರು, ಎಲ್ಲಾ ಶಾಲೆ ಕಾಲೇಜು ಮತ್ತೆ ಕೆಲಸಕ್ಕೆ ರಜೆ ಘೋಸಿಶಲಾಗಿದೆ ಅಂಥ ಅದಿಕೃತ ಮಾಹಿತಿ ಟಿವಿ ನಲ್ಲಿ ಪ್ರಾಸಾರವಾಗುತ್ತಲಿತ್ತು,

ಎಲ್ಲ ರೋಡ್ ಬಸ್ಸ್ಟ್ಯಾಂಡ್ ಬಿಕೋ ಬರಿ ಕಾಲಿ ಯಾಗಿ ಕಾಣಿಸುತ್ತಾ , ಒಂದು ರೀತಿಯ ಅಘೋಷಿತ ಬಂದ್......... ಬಸ್ ಟ್ರೈನ್, flight ಎಲ್ಲ ಕಾಲಿ, ದೊಡ್ಡವರು ಮನೆ ಇಂದ ಹೊರಬಂದು ತಮ್ಮ ತಮ್ಮಲ್ಲೇ ಮಾತಾಡಿ ಕೊಳ್ಳುತ್ತಾ ಇದ್ದರು ,, ಎಲ್ಲಿ ನೋಡಿದರು ಒಂದೊಂದು ತರಹದ ಸುದ್ದಿ, ನೆರೆ ರಾಷ್ಟ್ರ ಯುದ್ಧದ ಸಲುವಾಗಿ ಬಾಂಬ್ ಹಾಕಿದೆ ಅಂಥ ಒಬ್ಬರು , ಬೇರೆ ಗ್ರಹ ದಿಂದ ಆಕಾಶ ಕಾಯಗಳು (ಫ್ಲಯಿಂಗ್ ಸಾಸರ್) ಬಂದು ಭೂಮಿಗೆ ಅಪ್ಪಳಿಸಿವೆ ಅಂಥ ಕೆಲವರು... ಇನ್ನು ಕೆಲವರು ಇದು ಪ್ರಳಯದ ಮುನ್ಸೂಚನೆ ಯಾವಾಗ ಬೇಕಾದರು ಪ್ರಳಯ ವಗಭಾಹುದು ಅಂಥ ತಮ್ಮ ತಮ್ಮಲ್ಲೇ ಮಾತಾಡಿ ಕೊಳುತ್ತಾ ಇದ್ದರು..

ಅದೇ ಸಮಯದಲ್ಲಿ ಟಿವಿ ನಲ್ಲಿ ಪ್ರದಾನಮಂತ್ರಿಗಳು ದೇಶವನ್ನು ಉದ್ದೇಶಿಸಿ ಮಾಡುತ್ತಿರುವ ಭಾಷಣ ಅದರಲ್ಲಿ ಭಾರತದ ಮೂರು ಸೇನಾ ವಿಬಾಗದ ಮುಖ್ಯಸ್ಥರು ಹಾಜರಿದ್ದರು... ಪ್ರದಾನಿಯವರ ಭಾಷಣ ಹೀಗಿತ್ತು " ಪ್ರೀತಿಯ ಭಾರತದ ಪ್ರಜೆಗಳೇ, ನಮಗೆಲ್ಲರಿಗೂ ಗೊತ್ತಿಲ್ಲದೆ ಇರುವ ಒಂದು ದೊಡ್ಡ ಕಂಟಕ ಎದುರಾಗಿದೆ, ಇದು ಬರೀ ಭಾರತ ರಾಷ್ಟ್ರಕ್ಕೆ ಮಾತ್ರವಲ್ಲ, ಇಡಿ ವಿಶ್ವಕ್ಕೆ ಎದುರಾಗಿರುವ ಸಮಸ್ಯೆ, ಇದನ್ನು ಎದುರಿಸಲು ನಾವು ಸಮರ್ಥವಾಗಿ ಸಿದ್ದರಾಗಿದ್ದೇವೆ, ಅಮೇರಿಕಾ ಸೇರಿದಂತೆ ಎಲ್ಲ ರಾಷ್ಟ್ರಗಳ ಜೊತೆ ನಾವು ಸಮಾಲೋಚಿಸಿ ಮುಂದಿನ ಕ್ರಮ ತೆಗೆದುಕೊಳುತ್ತೇವೆ, ಸಮಸ್ತ ಭಾರತದ ಜನತೆ ಧೈರ್ಯವಾಗಿ ಯಾವುದೇ ಆತಂಕಕ್ಕೆ ಒಳಗಾಗದೆ ಸಂಪೂರ್ಣ ಸಹಕಾರ ನೀಡಬೇಕೆಂದು ಕೇಳಿ ಕೊಳುತ್ತೇನೆ " ಎಂದು ಹೇಳಿ, ಎಮರ್ಜೆನ್ಸಿ ಅಲರ್ಟ್ ಘೋಸಿಸಿದರು .............

ಇದನೆಲ್ಲ ನೋಡುತ್ತಾ ಇರುವ ಎಲ್ಲರಿಗೂ ಇನ್ನು ಆತಂಕ ಜಾಸ್ತಿ ಆಯ್ತು, ಅದು ಸಾಲದು ಎಂದು, ಕೆಲವು ನ್ಯೂಸ್ ಚಾನೆಲ್ ಗಳು,, ಜೋತಿಷಿ ಗಳ ಜೊತೆ ಇಂಟರ್ವ್ಯೂ ಲೈವ್ ಪ್ರಸಾರ ಮಾಡ್ತಾ ಇದ್ರೂ, ಎಲ್ಲ ಜೋತಿಷಿಗಳು ಸಿಕ್ಕ ಸದವಕಾಶವನ್ನು ಚೆನ್ನಾಗಿಯೇ ಬಳಸಿಕೊಳ್ಳುವುದಕ್ಕೆ ಮುಂದಾದರು , ಕೆಲ ಜೋತಿಷಿಗಳು ಇದು ಕಲಿಯುಗ ಮುಗಿಯಲು ಬಂದಿರುವ ಮುನ್ಸೂಚನೆ,, ದೊಡ್ಡ ಪ್ರಳಯ ವಾಗಲಿದೆ, ಯಾರು ಬದುಕಿರಲಾರರು ಎಂದೆಲ್ಲ ಬೊಬ್ಬೆ ಹಾಕುತ್ತ ಇದ್ರೂ, ಇನ್ನು ಕೆಲವರು, ನಾವು ಈ ವಿಪ್ಪತ್ತನು ಮೊದಲೇ ಭವಿಷ್ಯ ನುದಿಡಿದ್ದೆವು ಅದು ಈಗ ನಿಜವಾಗುತ್ತ ಇದೆ ಎಂದು ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕೆ ಮುಂದಾದರು.......



ನೋಡ ನೋಡುತಿದ್ದಂತೆ ಇನೊಂದು ಭಯಂಕರ ಸುದ್ದಿ ಹಬ್ಬಿತ್ತು, ಸಮುದ್ರ ತೀರದ ನಗರಗಲೆಲ್ಲವು ಸಮುದ್ರದ ನೀರು ಜಾಸ್ತಿ ಅಗುತ್ತಾ ಇರುವುದರಿಂದ ಮುಳುಗುಥಲಿದೆ ಅಂಥ..... ಟಿವಿ ಚಾನೆಲ್ ನವರು ಇದದನ್ನೇ ಬ್ರೇಕಿಂಗ್ ನ್ಯೂಸ್ ಅಂಥ ಪ್ರಸಾರ ಮಾಡ್ತಾ ಇದ್ರೂ. ಹೊರಗಡೆ ಬಂದು ನೋಡಿದರೆ ಕಪ್ಪು ಹೋಗೆ ಪೂರ್ತಿ ಆಕಾಶವನ್ನು ಅವರಿಸಿಕೊಳ್ಳುತಿರುವ ಹಾಗೆ ಸ್ಪಷ್ಟ ವಾಗಿ ಕಾಣುತ್ತಾ ಇದೆ ... ಎಲ್ಲಿ ನೋಡಿದರು ಮಿಲಿಟರಿ flight ಗಳ ಸುತ್ತಾಟ ...........................

..........................................................................................................................

ನಾನು ಇದನೆಲ್ಲ ನೋಡುತ್ತಾ ಏನು ಮಾಡಬೇಕು ಅಂಥ ಯೋಚಿಸಿತ್ತಿರಬೇಕಾದರೆ ನನ್ನ ಕೈಗೆ ಬೆಚ್ಚಗಿನ ಯಾವುದೂ ಬಿಸಿ ವಸ್ತು ತಾಗುತಿರುವ ಅನುಭವ ,,,,,,,, ಕಣ್ತೆರೆದು ನೋಡ್ತೇನೆ,,, ನಮ್ಮ ಅಮ್ಮ ಬಿಸಿ ಬಿಸಿ ಹಾಲು (bornvita) ಮಾಡಿಕೊಂಡು ಮುಂದೆ ನಿಂತಿದಾರೆ.... ಬೆಳಗ್ಗೆ ಆಗಿದೆ ಮಗನೆ,, ಬೇಗ ಎದ್ದು ರೆಡಿ ಆಗಿ, jogg ಗೆ ಹೋಗು ಅಂಥ ಹೇಳಿ ನನ್ ಕೈನಲ್ಲಿ ಹಾಲಿನ ಲೋಟ ಕೊಟ್ಟು ಹೋದ್ರು, ಬೇಗ ಎದ್ದು ಹೊರಗಡೆ ಹೋಗಿ ನೋಡಿದೆ,,,, ಎಲ್ಲ ನಾರ್ಮಲ್ ಆಗಿ ಇತ್ತು,, ಬೆಳಗ್ಗೆ 6:30 ಸಮಯ ಇರಬೇಕು,,, ಪಕ್ಕದ ಮನೆ ಆಂಟಿ ಮನೆ ಮುಂದೆ ರಂಗೋಲಿ ಹಾಕ್ತಾ ಇದ್ರೂ, ಎದುರುಗಡೆ ಮನೆ ಹುಡುಗಿ ನನ್ನ ನೋಡಿ ಸ್ವಲ್ಪ ಜಾಸ್ತಿ ಸ್ಟೈಲ್ ಆಗಿ ರಂಗೋಲೆ ಹಾಕೋಕ್ಕೆ ಶುರು ಮಾಡಿದ್ಲು ,,, .... ಇಸ್ಟೊತನಕ ಬಿದ್ದುದು ಒಂದು ಕನಸು ಅಂಥ ಅನ್ಕೊಂಡ್ ರೆಡಿ ಆಗಿ ಈ ತರ ಕನಸು ಯಾಕೆ ಬಿತ್ತು ಅಂಥ ಯೋಚಿಸಿಕೊಂಡು jogging ಹೊರಟೆ ....... ಡಿಸೆಂಬರ್ ಚಳಿಗಾಲದ ಬೆಳಗಿನ ಬೆವರಿಳಿಸುವ ಒಂದು ಕನಸು ನನ್ನ ದಿನ ಪೂರ್ತಿ ಯೋಚಿಸುವ ಹಾಗೆ ಮಾಡಿತ್ತು.....

2 comments:

  1. ಗುರು,
    ನಮ್ಮ ಭೂಮಿ ಹೀಗೆ ಬಿಸಿಹಾಗುತ್ತಿದ್ದರೆ ನಿಮ್ಮ ಕನಸು ನನಸಾಗುವ ದಿನ ಬಹುದೂರವಿಲ್ಲವೆನಿಸುತ್ತದೆ.!

    ReplyDelete
  2. ಹೌದು ಶಿವೂ, ನಾವು ಇದೆ ರೀತಿ ಭೂಮಿಯಲ್ಲಿ ಇರುವ ಸಂಪತ್ತು ಗಳನ್ನೂ ಹಾಳುಮಾದುತ್ತ ಇದ್ದರೆ ಒಂದಲ್ಲ ಒಂದು ದಿನ,, ದೊಡ್ಡ ಗಂಡಾಂತರ ಎದುರಿಸಬೇಕಾಗುತ್ತದೆ
    ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು ಶಿವೂ...

    ReplyDelete