Tuesday, December 30, 2008

London ಎಂಬ ಮಾಯಾ ನಗರದಲ್ಲಿನ ಒಂದು night ಬೀಟ್

ಕ್ರಿಸ್ಮಸ್ ಮತ್ತು ಹೊಸವರ್ಷದ ರಜೆ ೧ ವೀಕ್ ಲಾಂಗ್ ಲೀವ್, ಎಲ್ಲಿಗಾದ್ರೂ ಹೋಗೋಣ ಅಂಥ ಯೋಚನೆ ಮಾಡ್ತಾನೆ ಇದ್ದ ರಜೆ ಎಲ್ಲ ಮುಗಿದು ಹೋಗ್ತಾ ಇತ್ತು, ಮೊನ್ನೆ ರಾತ್ರಿ ಜಾಸ್ತಿ ಹೊತ್ತಿನ ತನಕ ನನ್ನ laptop ನಲ್ಲಿ ಅದು ಇದು ಮಾಡ್ಕೊಂಡು ಎದ್ದಿದ್ದೆ... ಹಾಗೆ ಏನೋ ಹುಡುಕ್ತಾ ಇರ್ಬೇಕಾದ್ರೆ "ಲಂಡನ್ ಫೋಟೋ ಆಲ್ಬಮ್ DVD" ಸಿಕ್ತು .... ನಾನು 2006-07 ನಲ್ಲಿ 4 ತಿಂಗಳು ಲಂಡನ್ ನಲ್ಲಿ ಇದ್ದಾಗ tegeda photos DVD , ಇದೆ ಡಿಸೆಂಬರ್ ಚಳಿಗಾಲದ ಸಮಯದಲ್ಲಿ ಹೋಗಿದ್ದೆ... ಅ ಹಳೇ ನೆನಪುಗಳು, ಅಲ್ಲಿ ಸುತ್ತಾಡಿದ ದಿನಗಳು, ಕ್ರಿಸ್ಮಸ್ ಮತ್ತೆ ಹೊಸ ವರುಷದ ಸಡಗರ ಸಂಭ್ರಮ.... ಎಲ್ಲ ನೆನಪುಗಳು ಹಾಗೇ ನನ್ನ ಕಣಣ್ಣ ಮುಂದೆ ಹಾದು ಹೋದವು ............



ಲಂಡನ್ ನನ್ನ ಮೊದಲ ವಿದೇಶದ ಪ್ರವಾಸ, ಹೊಸ ಕಂಪನಿಗೆ ಸೇರಿ ಸ್ವಲ್ಪ ದಿನದಲ್ಲೇ ಲಂಡನ್ ಎನ್ನೋ ಮಾಯಾನಗರಿಗೆ ಹೋಗೋ ಅವಕಾಶ ಸಿಕ್ತು. ನವೆಂಬರ್ 2006 ನಲ್ಲಿ ಹೋಗಿ ಮಾರ್ಚ್ 2007 ನಲ್ಲಿ ವಾಪಾಸ್ ಬಂದೆ. ಅಹಾ ಅಲ್ಲಿ ಇದ್ದ ಅ ದಿನಗಳನ್ನು ಎಷ್ಟು ನೆನಪಿಸಿಕೊಂಡರು ಸಾಲದು. ನನ್ನ ಮೋಸ್ಟ್ memoreble moments, ಅಂದು ನಮಗೆ ಕ್ರಿಸ್ಮಸ್ ಮತ್ತೆ ಬಾಕ್ಸಿಂಗ್ ಡೇ ರಜೆ ಇತ್ತು ಡಿಸೆಂಬರ್ 26 ಅಂಥ ಕಾಣುತ್ತೆ . ನಾನು ಮತ್ತೆ ನನ್ನ colleague ಎಲ್ಲೆಲಿ ಹೋಗಬೇಕು ಅಂಥ ಡಿಸೈಡ್ ಮಾಡಿಕೊಂಡು ಬೆಳಿಗ್ಗೆನೆ ನಮ್ಮ ಅಪಾರ್ಟ್ಮೆಂಟ್ ನಿಂದ ಹೊರಟೆವು, ಬಾಕ್ಸಿಂಗ್ ಡೇ ದಿನ ಶಾಪಿಂಗ್ ತುಂಬ ಡಿಸ್ಕೌಂದ್ ಇರುತ್ತೆ, ಅದ್ದರಿಂದ ಸ್ವಲ್ಪ ಶಾಪಿಂಗ್ ಮಾಡ್ಕೊಂಡು ಹಾಗೆ ಯಾವುದಾದರು ಒಳ್ಳೆ ಮೂವಿ ನೋಡ್ಕೊಂಡ್ ಬರೋಣ ಅಂಥ ತೀರ್ಮಾನಿಸಿ ಹೊರಟೆವು, ಬೆಳ್ಳಿಗ್ಗೆ ಇಂದ ಸಂಜೆ ತನಕ oxford street, Bond street, ನಲ್ಲಿ ಎಲ್ಲ ಸುತ್ತಾಡಿ, ಸಂಜೆ bigben ಹತ್ರ ಬಂದೆವು. ಪ್ರಶಾಂತ ವಾದ ವಾತಾವರಣ, ಮೈ ಕೊರೆಯುವ ಚಳಿ, ಮಂಜು ತುಂಬಿದ ಮೋಡದಲ್ಲೇ ಮುಳುಗಿರುವ ಲಂಡನ್ ಎನ್ನುವ ಮಾಯಾನಗರಿಯಲ್ಲಿ, ಬೆಚ್ಚಗಿನ ಕೋಟು ಹಾಕಿಕೊಂಡು ಥರಗುಟ್ಟುವ ಚಳಿಯಲ್ಲಿ ಓಡಾಡುವುದೇ ಒಂದು ಥರ ಮಜಾ... ಅಲ್ಲಿ ಟೈಮ್ ಹೋಗುವುದೇ ಗೊತ್ತಾಗುವುದಿಲ್ಲ ಎಲ್ಲದರಲ್ಲೂ ಫಾಸ್ಟ್ ಲೈಫ್.... ಅಲ್ಲಿ ಇದ್ದಾಗ ಅದು ಎಷ್ಟು ಫೋಟೋಸ್ ತೆಗೆದಿದ್ದೇನೋ ನನಗೆ ಗೊತ್ತಿಲ್ಲ, ಏನೋ ಒಂದು ಥರ ಆಸೆ ಏನಾದ್ರು ಚೆನ್ನಾಗಿರೋದು ಕಾಣಿಸಿದರೆ ನಾನು ಬೇಡ ಅಂದ್ರು ನನ್ನ ಕ್ಯಾಮೆರಾ ಬಿಡ್ತಾ ಇರಲಿಲ್ಲ, ಅದರಲ್ಲಿ ಸೆರೆ ಆಗ್ತಾ ಇತ್ತು, ಏನ್ ಇಲ್ಲ ಅಂದ್ರು ಒಂದು 8 GB ಫೋಟೋಸ್ ತಗೊಂಡ್ ಬಂದಿದ್ದೆ



ಹಾಂ ಅವೊತ್ತು ವರ್ಲ್ಡ್ ಫೇಮಸ್ I-MAX ಸಿನಿಮ ಹಾಲ್ ನಲ್ಲಿ Polar Express-3d ಮೂವಿ ನೋಡಿದ್ವಿ I MAX ಸಿನಿಮಾ ಹಾಲ್ ನೋಡೋದೇ ಚೆಂದ, ಫರ್ಸ್ಟ್ ಟೈಮ್ ನಾನು 3d ಮೂವಿನ I-MAX ನಲ್ಲಿ ನೋಡಿದ್ದು, ವಾಹ್ ಏನ್ ಚೆನ್ನಾಗಿ ಇತ್ತು ಗೊತ್ತ, am so impressed, ಅ ಮೂವಿ ನೋಡಬೇಕಾದ್ರೆ ದೊಡ್ಡ ದೊಡ್ಡ ಕನ್ನಡಕ ಕೊಟ್ಟಿದ್ರು, ಫಿಲ್ಮ್ ಹಾಲಅನ್ನು ಎಷ್ಟು ಚೆನ್ನಾಗಿ maintain ಮಾಡಿದ್ದರೆ,,, ಸೌಂಡ್ ಸಿಸ್ಟಂ ಅಂತು tooo good. ಒಟ್ನಲ್ಲಿ ಅ ದಿನ ಮಾತ್ರ ನನ್ನ ಮನಸಿನಲ್ಲಿ ಉಳಿದುಬಿಟ್ಟು ಇದೆ. ಪ್ರತಿ ಸಾರಿ ಕ್ರಿಸ್ಮಸ್ ಮತ್ತೆ ನ್ಯೂ ಇಯರ್ ಟೈಮ್ ನಲ್ಲಿ ನೆನಪು ಆಗ್ತಾ ಇರುತ್ತೆ



london eye, ಮತ್ತೆ I-MAX ಥಿಯೇಟರ ಹತ್ರ ತೆಗೆದ ಕೆಲವು ನನ್ನ ಇಷ್ಟವಾದ ಫೋಟೋಗಳು ಇಲ್ಲಿವೆ ನೋಡಿ..



ಥೇಮ್ಸ್ ನದಿಯ ಸೇತುವೆ ಮೇಲಿನಿಂದ







london eye night view












ಮಾಯನಗರಿಯ ಸುಂದರ ನೋಟ


I-MAX ಸಿನಿಮಾ theator



I-MAX ಸಿನಿಮಾ - ಟಿಕೆಟ್ ಕೌಂಟರ್

Polar Express - 3d... ನಾನು ನೋಡಿದ ಮೊದಲ 3d ಸಿನಿಮಾ


ನಾನು ಮತ್ತೆ ನನ್ನ ಬೆಸ್ಟ್ ಫ್ರೆಂಡ್ - Anuj






Saturday, December 27, 2008

ಮಡಿಕೇರಿಯ ಮಡಿಲಲ್ಲಿ ಒಂದು ದಿನ....


ಮಡಿಕೇರಿಯ ಮಡಿಲಲ್ಲಿ ಒಂದು ದಿನ....
ಮೊನ್ನೆ ಆಫೀಸ್ ನಲ್ಲಿ ಹಾಗೆ ಸುಮ್ನೆ ಕೂತ್ಕೊಂಡ್ ಮಾತಾಡ್ತಾ ಇದ್ವಿ.... ಟಾಪಿಕ್ ಏನು ಇರಲಿಲ್ಲ.. ಹಾಗೆ ಸುಮ್ನೆ ರಜೆ ಇದೆ ಅಲ್ವ, ಈ ವೀಕ್ ಎಂಡ್ ಎಲ್ಲಾದರು ಒಂದು ದಿನ ಟ್ರಿಪ್ ಹೋಗೋಣ ಅಂಥ, ಡಿಸ್ಕಶನ್ ನೆಡಿತಾ ಇತ್ತು... ಅಂತು ಇಂತು ಎಲ್ಲ ಹತ್ತಿರದ placess ಹೆಸರು ಲಿಸ್ಟ್ ಮಾಡ್ಕೊಂಡು... ಫೈನಲ್ ಆಗಿ ಮಡಿಕೇರಿಗೆ ಹೋಗೋಣ ಅಂಥ ಡಿಸೈಡ್ ಆಯಿತು...
ನನ್ನ ಸ್ನೇಹಿತ ರೋಬ್ಬರಿಗೆ ಅಲ್ಲಿ ಮೊದಲೇ ಪರಿಚಯ ಇದ್ದ ಒಬ್ಬರ ಹತ್ತಿರ ಗೆಸ್ಟ್ ಹೌಸ್ (ಎಸ್ಟೇಟ್ ) ಬುಕ್ ಮಾಡಿಸಿಕೊಂಡು ಮಡಿಕೇರಿ, ದುಬಾರೆ ಅರಣ್ಯ ಧಾಮ, ತಲಕಾವೇರಿಗೆ ಹೋಗಿ ಬಂದೆವು,
ಅಲ್ಲಿ ನನ್ನ ಕ್ಯಾಮೆರಾದಲ್ಲಿ ತೆಗೆದ ಕೆಲವು ಫೋಟೋಗಳು ಇಲ್ಲಿವೆ.
ಇಲ್ಲಿ ಇರುವ ಹೂವುಗಳ ಹೆಸರು ಗೊತ್ತಿಲ್ಲ, ಆದರೆ ಫೋಟೋಸ್ ಚೆನ್ನಾಗಿ ಬರುತ್ತೆ ಅಂಥ ತೆಗೆದಿದ್ದೇನೆ,, ಹೂವು ಗಳ ಹೆಸರು ಮಾತ್ರ .. ಕೇಳಬೇಡಿ, ಗೊತಿದ್ದ್ರೆ ಹೇಳಿ..








ನಾವು ಇದ್ದ ಎಸ್ಟೇಟ್ ನ ಪಕ್ಕದ ತೋಟ,


ಮಡಿಕೇರಿ ಬೆಟ್ಟದ ಸೊಬಗು, ತಲಕಾವೇರಿ ಬೆಟ್ಟದ ಮೇಲಿನಿಂದ
ಬೆಟ್ಟ ಮೇಲಿನಿಂದ ವಿಹಂಗಮ ನೋಟ
ಮೋಡದ ಬಿಸಿಲು ನೆರಳಿನ ಆಟದ ನೋಟ.....

ತಲಕಾವೇರಿ ಉದ್ಭವ ಸ್ಥಾನ ... ಬೆಟ್ಟದ ಮೇಲಿನಿಂದ

ನಾಯಿ ನೆರಳು.........

Friday, December 19, 2008

ಆ ಒಂದು ಭಯಾನಕ ದಿನ....


ಆ ಒಂದು ಭಯಾನಕ ದಿನ....,
ಅಂದು ಸೋಮವಾರ ಬ್ಯುಸಿ ಸೋಮವಾರದ ಬೆಳ್ಳಿಗ್ಗೆ, ಎಲ್ಲರೂ ಭಾನುವಾರದ ರಜೆಯ ಸವಿ ಮುಗಿಸಿ ಬೆಳಗ್ಗೆ ಎದ್ದು ತಮ್ಮ ತಮ್ಮ ಕೆಲಸ ಕಾರ್ಯಗಳಿಗೆ ರೆಡಿ ಆಗುತಿದ್ದರು, ಆದರೆ ಆ ಸೋಮವಾರದ ಬೆಳಗ್ಗೆ ಮಾಮೂಲಿ ಥರ ಇರಲಿಲ್ಲ, ಬೆಳಗ್ಗೆ ಇಂದಾನೆ ಏನೋ ಒಂದು ಥರ ಕತ್ತಲು ಮಬ್ಬು, ಆವರಿಸಿತ್ತು .... ......
ಎಲ್ಲೊ ಒಂದು ಕಡೆ ಕಪ್ಪಗಿನ ಹೋಗೆ ಆಕಾಶಕ್ಕೆ ಸೇರಲು ನಿಧಾನವಾಗಿ ಮೇಲಕ್ಕೆ ಹೋಗುತ್ತಾ ಇತ್ತು, ಕೆಲವೇ ನಿಮಿಷಗಳಲ್ಲಿ ಇದು ಒಂದು ದೊಡ್ಡ ಸುದ್ದಿಯಾಗಿ ಎಲ್ಲ ಕಡೆ ಒಬ್ಬರ ಬಾಯಿ ಇಂದ ಒಬ್ಬರಿಗೆ ಹಬ್ಬಿತು, ಯಾರಿಗೂ ಏನ್ ಅಗುತ್ತಾ ಇದೆ ಅಂಥ ಸ್ಪಷ್ಟವಾಗಿ ಗೊತ್ತಾಗಲಿಲ್ಲ , ಎಲ್ಲರ ಬಾಯಿ ಯಲ್ಲೂ ಇದರದೇ ಮಾತು, ಒಬ್ಬೊಬ್ಬರು ಒಂದೊಂದು ಥರ ಹೇಳುಥ ಇದ್ದರು, ನಿಧಾನವಾಗಿ ಸೂರ್ಯ ಮೇಲೆ ಬರುತ್ತಾ ಬರುತ್ತಾ , ಇನ್ನೊಂದು ಕಡೆ ಇಂದ ದಟ್ಟವಾದ ಕಪ್ಪು ಆಕಾಶವನ್ನು ಅವರಿಸಿಕೊಳ್ಳುತ್ತಾ ಇತ್ತು,



ಕೆಲಸಕ್ಕೆ ಹೋಗಲು, ಮಕ್ಕಳನ್ನು ಸ್ಕೂಲಿಗೆ ಕಳುಹಿಸಲು ರೆಡಿ ಮಾಡುತಿದ್ದ ಅಪ್ಪ ಅಮ್ಮಂದಿರು ಒಂದು ನಿಮಿಷ ಯೋಚಿಸಿ, ಎಲ್ಲವನ್ನು ಹಾಗೆ ಬಿಟ್ಟು ಮನೆ ಇಂದ ಹೊರಬಂದು ಅಕ್ಕ ಪಕ್ಕದ ಮನೆ ಯವರ ಹತ್ತಿರ ಮಾತಾಡುತ್ತ ಇದ್ದ ದೃಶ್ಯ ಸಾಮಾನ್ಯವಾಗಿತ್ತು , ಯಾರಿಗೂ ಏನು ಮಾಡಬೇಕು, ಏನಿದು, ಯಾಕೆ ಈ ಥರಾ ಕಪ್ಪು ಹೋಗೆ ಬರುತ್ತಾ ಇದೆ, ಎಲ್ಲಿಂದ ಬರುತ್ತಾ ಇದೆ ಎಂದು ಗೊತ್ತಿಲ್ಲದೇ ತಮ್ಮ ತಮ್ಮಲ್ಲೇ ಮಾತಾಡಿ ಕೊಳ್ಳುತ್ತಾ ಇದ್ದರು,




ಎಲ್ಲರಲ್ಲೂ ಒಂದು ಥರ ಭಯ , ಆತಂಕ , ಆವರಿಸಿಕೊಂಡಿತ್ತು , ಯಾವ ಟಿವಿ ಚಾನೆಲ್ ನಲ್ಲಿ ನೋಡಿದರು ಇದರದೇ ಸುದ್ದಿ, ಇದರದೇ ನ್ಯೂಸ್ , ಎಲ್ಲ ಟಿವಿ ಚಾನೆಲ್ ನವರು ಅ ಕಪ್ಪು ಹೊಗೆಎಲ್ಲಿಂದ ಬರ್ತಾ ಇದೆ ಅಂಥ ಪ್ರಸಾರ ಮಾಡಲು ಅದರ ಜಾಡು ಹಿಡಿದು ಹೊರಟಿದ್ದರು .... ಹೊರಗಡೆ ಬಂದು ನೋಡಿದರೆ ಎಲ್ಲೊ ದೂರದಿಂದ ಕಪ್ಪು ಹೋಗೆ ಅವರಿಸಿಕೊಳ್ಳುತಿರುವುದು ಸ್ಪಷ್ಟ ವಾಗಿ ಕಾಣುತ್ತ ಇತ್ತು, ಎಲ್ಲರೂ ತಮ್ಮ ತಮ್ಮ ಸಂಬಂದಿಕರಿಗೆ ಬೇರೆ ಉರಿನಲ್ಲಿ ಇರುವ ತಮ್ಮ ಬಂದುಗಳಿಗೆ ಫೋನ್, ಮೊಬೈಲ್ ನಲ್ಲಿ ಸಂಭಾಷಣೆ ಮಾಡುತ್ತ ತಮ್ಮ ಆತಂಕ ಗಳನ್ನೂ ಹೇಳಿಕೊಳ್ಳುವುದಕ್ಕೆ ಪ್ರಯತ್ನ ಪಡ್ತಾ ಇರ್ಬೇಕಾದ್ರೆ ,, ಒಮ್ಮೆಲೇ ಎಲ್ಲ ನೆಟ್ವರ್ಕ್ ಜಾಮ್ ಆಗಿ ನಿಶಬ್ದವಾದವು .....




ಸ್ವಲ್ಪ ಹೊತ್ತಿನಲ್ಲೇ ನ್ಯೂಸ್ ಚಾನೆಲ್ ಮೂಲಕ ಒಂದು ಭಯಂಕರ ಸುದ್ದಿ ನೋಡಿದ ಜನ ಮನೆ ಇಂದ ಹೊರಬರಲು ಹೆದರಿದರು.. ಎಲ್ಲ ಮಕ್ಕಳನ್ನು ಮನೆ ಯಲ್ಲೇ ಕೂಡಿ ಹಾಕುತ್ತ ಇದ್ದರು, ಎಲ್ಲಾ ಶಾಲೆ ಕಾಲೇಜು ಮತ್ತೆ ಕೆಲಸಕ್ಕೆ ರಜೆ ಘೋಸಿಶಲಾಗಿದೆ ಅಂಥ ಅದಿಕೃತ ಮಾಹಿತಿ ಟಿವಿ ನಲ್ಲಿ ಪ್ರಾಸಾರವಾಗುತ್ತಲಿತ್ತು,

ಎಲ್ಲ ರೋಡ್ ಬಸ್ಸ್ಟ್ಯಾಂಡ್ ಬಿಕೋ ಬರಿ ಕಾಲಿ ಯಾಗಿ ಕಾಣಿಸುತ್ತಾ , ಒಂದು ರೀತಿಯ ಅಘೋಷಿತ ಬಂದ್......... ಬಸ್ ಟ್ರೈನ್, flight ಎಲ್ಲ ಕಾಲಿ, ದೊಡ್ಡವರು ಮನೆ ಇಂದ ಹೊರಬಂದು ತಮ್ಮ ತಮ್ಮಲ್ಲೇ ಮಾತಾಡಿ ಕೊಳ್ಳುತ್ತಾ ಇದ್ದರು ,, ಎಲ್ಲಿ ನೋಡಿದರು ಒಂದೊಂದು ತರಹದ ಸುದ್ದಿ, ನೆರೆ ರಾಷ್ಟ್ರ ಯುದ್ಧದ ಸಲುವಾಗಿ ಬಾಂಬ್ ಹಾಕಿದೆ ಅಂಥ ಒಬ್ಬರು , ಬೇರೆ ಗ್ರಹ ದಿಂದ ಆಕಾಶ ಕಾಯಗಳು (ಫ್ಲಯಿಂಗ್ ಸಾಸರ್) ಬಂದು ಭೂಮಿಗೆ ಅಪ್ಪಳಿಸಿವೆ ಅಂಥ ಕೆಲವರು... ಇನ್ನು ಕೆಲವರು ಇದು ಪ್ರಳಯದ ಮುನ್ಸೂಚನೆ ಯಾವಾಗ ಬೇಕಾದರು ಪ್ರಳಯ ವಗಭಾಹುದು ಅಂಥ ತಮ್ಮ ತಮ್ಮಲ್ಲೇ ಮಾತಾಡಿ ಕೊಳುತ್ತಾ ಇದ್ದರು..

ಅದೇ ಸಮಯದಲ್ಲಿ ಟಿವಿ ನಲ್ಲಿ ಪ್ರದಾನಮಂತ್ರಿಗಳು ದೇಶವನ್ನು ಉದ್ದೇಶಿಸಿ ಮಾಡುತ್ತಿರುವ ಭಾಷಣ ಅದರಲ್ಲಿ ಭಾರತದ ಮೂರು ಸೇನಾ ವಿಬಾಗದ ಮುಖ್ಯಸ್ಥರು ಹಾಜರಿದ್ದರು... ಪ್ರದಾನಿಯವರ ಭಾಷಣ ಹೀಗಿತ್ತು " ಪ್ರೀತಿಯ ಭಾರತದ ಪ್ರಜೆಗಳೇ, ನಮಗೆಲ್ಲರಿಗೂ ಗೊತ್ತಿಲ್ಲದೆ ಇರುವ ಒಂದು ದೊಡ್ಡ ಕಂಟಕ ಎದುರಾಗಿದೆ, ಇದು ಬರೀ ಭಾರತ ರಾಷ್ಟ್ರಕ್ಕೆ ಮಾತ್ರವಲ್ಲ, ಇಡಿ ವಿಶ್ವಕ್ಕೆ ಎದುರಾಗಿರುವ ಸಮಸ್ಯೆ, ಇದನ್ನು ಎದುರಿಸಲು ನಾವು ಸಮರ್ಥವಾಗಿ ಸಿದ್ದರಾಗಿದ್ದೇವೆ, ಅಮೇರಿಕಾ ಸೇರಿದಂತೆ ಎಲ್ಲ ರಾಷ್ಟ್ರಗಳ ಜೊತೆ ನಾವು ಸಮಾಲೋಚಿಸಿ ಮುಂದಿನ ಕ್ರಮ ತೆಗೆದುಕೊಳುತ್ತೇವೆ, ಸಮಸ್ತ ಭಾರತದ ಜನತೆ ಧೈರ್ಯವಾಗಿ ಯಾವುದೇ ಆತಂಕಕ್ಕೆ ಒಳಗಾಗದೆ ಸಂಪೂರ್ಣ ಸಹಕಾರ ನೀಡಬೇಕೆಂದು ಕೇಳಿ ಕೊಳುತ್ತೇನೆ " ಎಂದು ಹೇಳಿ, ಎಮರ್ಜೆನ್ಸಿ ಅಲರ್ಟ್ ಘೋಸಿಸಿದರು .............

ಇದನೆಲ್ಲ ನೋಡುತ್ತಾ ಇರುವ ಎಲ್ಲರಿಗೂ ಇನ್ನು ಆತಂಕ ಜಾಸ್ತಿ ಆಯ್ತು, ಅದು ಸಾಲದು ಎಂದು, ಕೆಲವು ನ್ಯೂಸ್ ಚಾನೆಲ್ ಗಳು,, ಜೋತಿಷಿ ಗಳ ಜೊತೆ ಇಂಟರ್ವ್ಯೂ ಲೈವ್ ಪ್ರಸಾರ ಮಾಡ್ತಾ ಇದ್ರೂ, ಎಲ್ಲ ಜೋತಿಷಿಗಳು ಸಿಕ್ಕ ಸದವಕಾಶವನ್ನು ಚೆನ್ನಾಗಿಯೇ ಬಳಸಿಕೊಳ್ಳುವುದಕ್ಕೆ ಮುಂದಾದರು , ಕೆಲ ಜೋತಿಷಿಗಳು ಇದು ಕಲಿಯುಗ ಮುಗಿಯಲು ಬಂದಿರುವ ಮುನ್ಸೂಚನೆ,, ದೊಡ್ಡ ಪ್ರಳಯ ವಾಗಲಿದೆ, ಯಾರು ಬದುಕಿರಲಾರರು ಎಂದೆಲ್ಲ ಬೊಬ್ಬೆ ಹಾಕುತ್ತ ಇದ್ರೂ, ಇನ್ನು ಕೆಲವರು, ನಾವು ಈ ವಿಪ್ಪತ್ತನು ಮೊದಲೇ ಭವಿಷ್ಯ ನುದಿಡಿದ್ದೆವು ಅದು ಈಗ ನಿಜವಾಗುತ್ತ ಇದೆ ಎಂದು ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕೆ ಮುಂದಾದರು.......



ನೋಡ ನೋಡುತಿದ್ದಂತೆ ಇನೊಂದು ಭಯಂಕರ ಸುದ್ದಿ ಹಬ್ಬಿತ್ತು, ಸಮುದ್ರ ತೀರದ ನಗರಗಲೆಲ್ಲವು ಸಮುದ್ರದ ನೀರು ಜಾಸ್ತಿ ಅಗುತ್ತಾ ಇರುವುದರಿಂದ ಮುಳುಗುಥಲಿದೆ ಅಂಥ..... ಟಿವಿ ಚಾನೆಲ್ ನವರು ಇದದನ್ನೇ ಬ್ರೇಕಿಂಗ್ ನ್ಯೂಸ್ ಅಂಥ ಪ್ರಸಾರ ಮಾಡ್ತಾ ಇದ್ರೂ. ಹೊರಗಡೆ ಬಂದು ನೋಡಿದರೆ ಕಪ್ಪು ಹೋಗೆ ಪೂರ್ತಿ ಆಕಾಶವನ್ನು ಅವರಿಸಿಕೊಳ್ಳುತಿರುವ ಹಾಗೆ ಸ್ಪಷ್ಟ ವಾಗಿ ಕಾಣುತ್ತಾ ಇದೆ ... ಎಲ್ಲಿ ನೋಡಿದರು ಮಿಲಿಟರಿ flight ಗಳ ಸುತ್ತಾಟ ...........................

..........................................................................................................................

ನಾನು ಇದನೆಲ್ಲ ನೋಡುತ್ತಾ ಏನು ಮಾಡಬೇಕು ಅಂಥ ಯೋಚಿಸಿತ್ತಿರಬೇಕಾದರೆ ನನ್ನ ಕೈಗೆ ಬೆಚ್ಚಗಿನ ಯಾವುದೂ ಬಿಸಿ ವಸ್ತು ತಾಗುತಿರುವ ಅನುಭವ ,,,,,,,, ಕಣ್ತೆರೆದು ನೋಡ್ತೇನೆ,,, ನಮ್ಮ ಅಮ್ಮ ಬಿಸಿ ಬಿಸಿ ಹಾಲು (bornvita) ಮಾಡಿಕೊಂಡು ಮುಂದೆ ನಿಂತಿದಾರೆ.... ಬೆಳಗ್ಗೆ ಆಗಿದೆ ಮಗನೆ,, ಬೇಗ ಎದ್ದು ರೆಡಿ ಆಗಿ, jogg ಗೆ ಹೋಗು ಅಂಥ ಹೇಳಿ ನನ್ ಕೈನಲ್ಲಿ ಹಾಲಿನ ಲೋಟ ಕೊಟ್ಟು ಹೋದ್ರು, ಬೇಗ ಎದ್ದು ಹೊರಗಡೆ ಹೋಗಿ ನೋಡಿದೆ,,,, ಎಲ್ಲ ನಾರ್ಮಲ್ ಆಗಿ ಇತ್ತು,, ಬೆಳಗ್ಗೆ 6:30 ಸಮಯ ಇರಬೇಕು,,, ಪಕ್ಕದ ಮನೆ ಆಂಟಿ ಮನೆ ಮುಂದೆ ರಂಗೋಲಿ ಹಾಕ್ತಾ ಇದ್ರೂ, ಎದುರುಗಡೆ ಮನೆ ಹುಡುಗಿ ನನ್ನ ನೋಡಿ ಸ್ವಲ್ಪ ಜಾಸ್ತಿ ಸ್ಟೈಲ್ ಆಗಿ ರಂಗೋಲೆ ಹಾಕೋಕ್ಕೆ ಶುರು ಮಾಡಿದ್ಲು ,,, .... ಇಸ್ಟೊತನಕ ಬಿದ್ದುದು ಒಂದು ಕನಸು ಅಂಥ ಅನ್ಕೊಂಡ್ ರೆಡಿ ಆಗಿ ಈ ತರ ಕನಸು ಯಾಕೆ ಬಿತ್ತು ಅಂಥ ಯೋಚಿಸಿಕೊಂಡು jogging ಹೊರಟೆ ....... ಡಿಸೆಂಬರ್ ಚಳಿಗಾಲದ ಬೆಳಗಿನ ಬೆವರಿಳಿಸುವ ಒಂದು ಕನಸು ನನ್ನ ದಿನ ಪೂರ್ತಿ ಯೋಚಿಸುವ ಹಾಗೆ ಮಾಡಿತ್ತು.....

Saturday, December 13, 2008

Innovative ಫಿಲ್ಮ್ ಸಿಟಿ-- ಬೆಂಗಳೂರು

ಪ್ರಿಯ ಸ್ನೇಹಿತರೇ,
ಫಿಲ್ಮ್ ಸಿಟಿ ನೋಡಲು ಈಗ ನೀವು ಹೈದರಬಾದ್ ಗೆ ಹೋಗಬೇಕಾಗಿಲ್ಲ, ಇಲ್ಲೇ ನಮ್ಮ ಬೆಂಗಳೂರಿನಲ್ಲೇ ಒಂದು ಸುಂದರವಾಗಿ ಇರುವ ಫಿಲ್ಮ್ ಸಿಟಿ ಓಪನ್ ಆಗಿದೆ, ಕಳೆದ ವಾರ ನಾನು ಅಲ್ಲಿಗೆ ಹೋಗಿ ಬಂದೆ, ಬೆಳಗಿನಿಂದ ಸಂಜೆಯ ವರೆಗೆ ಆರಾಮವಾಗಿ ಸುತ್ತಾಡಿಕೊಂಡು ಬರಬಹುದು,
ಬೆಂಗಳೂರಿನಿಂದ ಬರಿ 30 KM ದೂರದಲ್ಲಿ ಮೈಸೂರ್ ಗೆ ಹೋಗುವ ದಾರಿನಲ್ಲಿ ಸಿಗುತ್ತೆ, ಬಿಡದಿ industrial ಏರಿಯ ನಲ್ಲಿ ಹೊಸದಾಗಿ ತಲೆ ಎತ್ತಿ ನಿಂತಿರುವ Innovative ಫಿಲ್ಮ್ ಸಿಟಿ, ಬೆಂಗಳೂರಿನ ಹೊಸದಾದ ಆಕರ್ಷಣೆ.
ಮೊದಲು ನಾನು ಇದನ್ನು ನನ್ನ frind ಒಬ್ಬರಿಂದ ಕೇಳಿ ತಿಳಿದುಕೊಂಡೆ, ಆಮೇಲೆ ಒಂದು ದಿನ ಹೋಗಿಬರೋಣ ಅಂಥ deceide madide,
ನನಗು ಮೊದಲು ಅಂಥ ಕಲ್ಪನೆ ಏನು ಇರಲಿಲ್ಲ, ಏನೋ ಮಾಮೂಲಾಗಿ ಇರುತೆ ಅಂಥ ಅಂದುಕೊಂಡು ಹೊರಟೆ, ಆದರೆ ಒಳಗಿನ ವೈಭವ ನೋಡಿ ವಿಸ್ಮಯ ಗೊಂಡೆ ,,, ತುಂಬ ಚೆನ್ನಾಗಿ maintain ಮಾಡಿದ್ದರೆ .ಒಂದು ದಿನದ ಮಟ್ಟಿಗೆ ಆರಾಮವಾಗಿ ನೋಡಿ ಬರಬಹುದು.
ಆ ತೆಗೆದ ಕೆಲವು ಫೋಟೋಗಳನ್ನು upolad ಮಾಡಿದೇನೆ


ಫಿಲ್ಮ್ ಸಿಟಿ ನಲ್ಲಿ ಇರುವ ಆಕರ್ಷಣೆಗಳ ಜಾಹಿರಾತು

ಒಳಗಿನ ವಿಹಂಗಮ ನೋಟ...
ಹಳೆ ಕಾಲದ ಟೆಂಟ್

horror house

WAX Musieum
water ಪೂಲ್




Night view