Sunday, March 25, 2018

ಹಾರ್ನ್ ಬಿಲ್ಲ್ಸ್ ಇನ್ ಬೆಂಗಳೂರು....


ಹಾರ್ನ್ ಬಿಲ್ಲ್ಸ್ ಇನ್ ಬೆಂಗಳೂರು....

ಇವೊತ್ತು ಬೆಳಿಗ್ಗೆ ಹಾಗೆ ಸುಮ್ನೆ ಸುತ್ತಾಡಿಕೊಂಡು ಒಂದೆರಡು sunbirds ಫೋಟೋಗಳನ್ನು ತೆಗೆಯೋಣ ಅಂತ ಕೊಮ್ಮಘಟ್ಟ ಕೆರೆ ಹತ್ರ ಹೋಗಿದ್ದೆ . ನನ್ನ ಅದೃಷ್ಟ ಏನೋ... ಇಂಡಿಯನ್ ಗ್ರೇ ಹಾರ್ನ್ ಬಿಲ್ಲ್ಸ್ ಕಾಣಿಸೋದ... ಹೋದ ವಾರ ಕಂಡಿತ್ತು ಆದರೆ ಫೋಟೋ ತೆಗೆಯೋಕೆ ಆಗಲಿಲ್ಲ... ಆದರು ಡೌಟ್ ಇತ್ತು... ಅದೇ ಹಾರ್ನ್ ಬಿಲ್ಲ್ಸ್ ಇದು ಅಂತ... ಇವೊತ್ತು ಬಿಸಿಲಿನಲ್ಲಿ ಒಂದ್ ಘಂಟೆ ಕಾಯುತ್ತ ಕುಳಿತಿದ್ದು ಸಾರ್ಥಕ ಆಯಿತು.... ಫಸ್ಟ್ ಸರಿ ನೋಡಿದಾಗಲೇ ಕನ್ಫರ್ಮ್ ಆಯಿತು ಇದು ಹಾರ್ನ್ ಬಿಲ್ ಅಂತ... ಇದು ತುಂಬ ನಾಚಿಕೆ ಸ್ವಭಾವದ ಪಕ್ಷಿ... ಯಾರೇ ಓಡಾಡಿದರು ಕಾಣಿಸುವುದಿಲ್ಲ ಸ್ವಲ್ಪ ಜನ ಬೇರೆ ವಾಕಿಂಗ್ , ಜಾಗಿಂಗ್ ಮಾಡ್ತಾ ಇದ್ರೂ.... ಒಂದೆರಡು ಹಕ್ಕಿಗಳು ದೂರದ ಮರದ ಮೇಲೆ ಇದ್ದದ್ದು ಕಾಣಿಸ್ತಾ ಇತ್ತು.. ಆದರೆ ಹೊರಗಡೆ ಮಾತ್ರ ಬರ್ತಾ ಇರಲಿಲ್ಲ..... ಹೇಗೋ ಒಂದು ಘಂಟೆ ಸುಮ್ನೆ ಕಾಯ್ತಾ ಕುಳಿತಿದ್ದೆ.... ಅವಾಗ ಸ್ವಲ್ಪ ಹೊರಗಡೆ ಬಂದು.... ನೋಡ್ತಾ ಒಣಗಿದ ಮರಗಳ ತೊಗಟೆಯನ್ನು ತಿನ್ನುತ್ತ ,,, ಹಣ್ಣುಗಳನ್ನು ತಿನ್ನುತ್ತ ಇತ್ತು.... ಒಳ್ಳೆ ಚಾನ್ಸ್ ಅಂತ ಒಂದೆರಡು ಫೋಟೋ ಕ್ಲಿಕ್ ಮಾಡ್ತಾ ಇದ್ದೆ... ಆದರೆ ಸ್ವಲ್ಪ ದೂರನೇ ಇತ್ತು.... ಇನ್ನೊಂದ್ ಐದು ನಿಮಿಷ ಆಗಿದ್ರೆ ಇನ್ನು ಹತ್ರ ಬರ್ತಾ ಇತ್ತು... ಅಷ್ಟರಲ್ಲಿ ಒಬ್ಬ ಪುಟ್ಟ ಹುಡುಗ ಅಲ್ಲಿಂದ ಸೈಕಲ್ ಬೆಲ್ ಹೊಡ್ಕೊಂಡು ಜೋರಾಗಿ ಹತ್ರನೇ ಬಂದ.....ಅಷ್ಟೇ ... ಇನ್ನು ಹತ್ರ ಬರ್ತಾ ಇದ್ದ ಹಾರ್ನಬಿಲ್ ಹಾರಿ ಹೋಯ್ತು.... !!! ಅ ಪುಟ್ಟ ಹುಡುಗನಿಗೆ... ಪಾರ್ಕಿನಲ್ಲಿ ಹೀಗೆಲ್ಲ ಬೆಲ್ ಮಾಡಿಕೊಂಡು ಬರಬೇಡ ಅಂತ ಹೇಳಿ.... ವಾಪಾಸ್ ಬಂದೆ......



ಒಟ್ನಲ್ಲಿ... ಒಳ್ಳೆ ಸಂತೋಷ ಆಯಿತು ...ಕಾಡಿನ ಮಿತ್ರ ಹೊರ್ನಬಿಲ್ ನಮ್ಮ ಬೆಂಗಳೂರಿನಲ್ಲಿ ನೋಡಿ..... ಇದರ ಸಂತತಿ ಹೀಗೆ ಮುಂದುವರಿಯಲಿ ಎಂದೇ ನನ್ನ ಹಾರೈಕೆ....




Feeling so Happy to saw this Eco friendly bird near to our hours ( In Komaghatta lake) .
Saw it on news paper last month, and couple of my friends told they spotted near kanakapura road surroundings and Sarjapur road side.
I got a chance to spot this bird near kommaghatta lake today.


 




3 comments:

  1. ನಾನು ಇದುವರೆಗು ಈ ಹಾರ್ನ ಬಿಲ್ ಪಕ್ಷಿನ ನೋಡೆ ಇಲ್ಲ.. ಇದು ಕಲರ್ ಕಲರ್ ಆಗಿ ಇರೋದನ್ನ ಕೆಲವು ಪಟಗಳಲ್ಲಿ ನೋಡಿದ್ದೆ.. ಬಿಳಿ ಬಣ್ಣದ್ದು ಇವತ್ತೆ ಫೋಟೋ ದಲ್ಲಿ ನೋಡಿದ್ದು... ಚೆನ್ನಾಗಿದೆ ಗುರು ಗಳೆ... ಮುಂದುವರೆಸಿ.. ಶುಭವಾಗಲಿ....����

    ReplyDelete
  2. ನಾನು ಇದುವರೆಗು ಈ ಹಾರ್ನ ಬಿಲ್ ಪಕ್ಷಿನ ನೋಡೆ ಇಲ್ಲ.. ಇದು ಕಲರ್ ಕಲರ್ ಆಗಿ ಇರೋದನ್ನ ಕೆಲವು ಪಟಗಳಲ್ಲಿ ನೋಡಿದ್ದೆ.. ಬಿಳಿ ಬಣ್ಣದ್ದು ಇವತ್ತೆ ಫೋಟೋ ದಲ್ಲಿ ನೋಡಿದ್ದು... ಚೆನ್ನಾಗಿದೆ ಗುರು ಗಳೆ... ಮುಂದುವರೆಸಿ.. ಶುಭವಾಗಲಿ....����

    ReplyDelete
  3. ತಾಳ್ಮೆ ಇದ್ದಾಗ ಸಾಧನೆಗಳು ಹೇಗಿರುತ್ತವೆ ಎನ್ನುವುದಕ್ಕೆ ಈ ಚಿತ್ರಗಳು ಉದಾಹರಣೆ.. ಹಕ್ಕಿಗಳ ಛಾಯಾಚಿತ್ರಣ ಸವಾಲು ಹಾಗೂ ತಾಳ್ಮೆಯನ್ನು ಬೇಡುವ ಹವ್ಯಾಸ..

    ಸೊಗಸಾಗಿದೆ ಗುರು.. ನಿಮ್ಮ ತಾಳ್ಮೆ, ಪರಿಶ್ರಮ ಮತ್ತು ಹಿಡಿದ ಕೆಲಸ ಸಾಧಿಸುವ ಪರಿ ಸೂಪರ್

    ReplyDelete