Saturday, March 17, 2018

ಚಿಲಿ ಪಿಲಿ ಹಕ್ಕಿಗಳ ಲೋಕದಲ್ಲಿ

ಕಳೆದ ಒಂದೆರಡು ವರುಷಗಳಿಂದ  ಹಕ್ಕಿಗಳ ಬಗ್ಗೆ ನನಗೆ ಆಸಕ್ತಿ ಜಾಸ್ತಿಯಾಗಿ , ಎಲ್ಲೆಂದರಲ್ಲಿ ಹಕ್ಕಿಗಳ ಹಿಂದೆ ಓಡಾಡುವ ಹಾಗಾಗಿದೆ... ಇದಕ್ಕೆ ಮೂಲ ಕಾರಣ..  ಪುಟ್ಟ ಪುಟ್ಟ ಹಕ್ಕಿಗಳ ಆಟೋಟಗಳು  ,,,,,  ಕ್ಯಾಮೆರಾ ದಲ್ಲಿ ಸೆರೆ ಹಿಡಿಯುವುದಕ್ಕಿಂತ  ಬರ್ಡ್ ವಾಚ್.... ತುಂಬ ಖುಷಿ ಕೊಡ್ತಾ ಇದೆ..... 
ಏನ್ ಚೆಂದ ಈ ಹಕ್ಕಿ/ ಪಕ್ಷಿಗಳ ಪ್ರಪಂಚ......   ಕಳೆದ ಮೂರ್ನಾಲ್ಕು ತಿಂಗಳಿನಿಂದ ಏನಿಲ್ಲವೆಂದರೂ ಒಂದು ಇನ್ನೂರು ಐವತ್ತು ಬಗೆಯ ಹಕ್ಕಿಗಳನ್ನು ನೋಡಿದ್ದೇನೆ.....  ಕೇರಳದ ತಟ್ಟೆಕಾಡು . Dr ಸಾಲಿಂ ಅಲಿ ಬರ್ಡ್ ಸಂಚುರಿ.... ದಾಂಡೇಲಿ. ಗಣೇಶ್ ಗುಡಿ, ಬಿಳಿಗಿರಿರಂಗನ ಬೆಟ್ಟ , ಮಲೆಮಹದೇಶ್ವರ ಬೆಟ್ಟ, ಆಗುಂಬೆ, ನಮ್ಮ ಬೆಂಗಳೂರಿನ ಅಕ್ಕ ಪಕ್ಕದ ಕೆರೆ..... ಹೀಗೆ ಲಿಸ್ಟ್ ದೊಡ್ಡದಿದೆ......
ಚಿಕ್ಕ ಹಕ್ಕಿ.. flower picker ನಿಂದ ಹಿಡಿದು... hornbill ಹಾಗು ದೊಡ್ಡ ಕೊಕ್ಕರೆಗಳ ತನಕ ಒಂದು 250 ಪಕ್ಷಿಗಳನ್ನು ಗುರುತಿಸುವ ಹಾಗೆ ಹಾಗಿದೆ.....
ಒಂದು ಸರಿ ಇದರ (ಚಟ ) ಲೋಕಕ್ಕೆ ಬಿದ್ದರೆ ..... ಹಾಗೆ ಕರೆದುಕೊಂಡು ಹೋಗುತ್ತೆ ಪಕ್ಷಿಗಳ ಲೋಕ...... ಅಂತಹ ಅದ್ಬುತ ಇದು....
ಗಣೇಶಗುಡಿ ಹಾಗು ಬೆಂಗಳೊರಿನ ಹತ್ತಿರ ತೆಗೆದಿರುವ ಕೆಲವು ಹಕ್ಕಿಗಳ ವೀಡಿಯೊ ಮಾಡಿದ್ದೇನೆ ನೋಡಿ..

Blue capped rock Thrush male



                                                                   oriental white eye and Brown Cheacked Fluveta
Oriental white eye ಗೆ ಕನ್ನಡದಲ್ಲಿ ಬೆಳ್ಗಣ್ಣ  ಅಂತ ಕರಿತಾರೆ..


emarald ಡವ್.  ಹಸಿರು ಬಣ್ಣದ ಪಾರಿವಾಳ....


ಈ ವೀಡಿಯೊ ತೆಗೆದಿದ್ದು.. ನಮ್ಮ ಮನೆ ಹತ್ರ .... ಕೊಮ್ಮಘಟ್ಟ ಕೆರೆ ಹತ್ತಿರ.....




2 comments:

  1. Hello sir, this provides handful information about birds and also visual treat 😀 keep going plz try to post information about all 250 birds 👍

    ReplyDelete
  2. ಯಾವುದೇ ಬಂಧನವಿಲ್ಲದೆ ತನ್ನ ಪಾಡಿಗೆ ತಾನು ಹಾರಾಡಿಕೊಂಡಿರುವ ಹಕ್ಕಿಗಳ ಪ್ರಪಂಚ ಸೊಗಸಾಗಿದೆ.. ಪಕ್ಷಿಗಳ ಚಿತ್ರಗಳನ್ನು ಸೆರೆ ಹಿಡಿಯುವುದು ಒಂದು ಸಾಧನೆಯೇ ಹೌದು.. ತಾಳ್ಮೆ ಇರಬೇಕು.. ಅದನ್ನು ಹುಡುಕುವ ಚುರುಕು ಕಣ್ಣುಗಳು.. ಅವು ಕಂಡು ಬಂದಾಗ. ಚುರುಕಾಗಿ ಕೆಲಸ ಮಾಡುವ ಕ್ಯಾಮೆರಾದ ಕೈ ಚಳಕ ಈ ಚಿತ್ರಗಳನ್ನು ಸುಂದರವಾಗಿಸುತ್ತವೆ..

    ಅದ್ಭುತವಾಗಿ ಮೂಡಿ ಬಂದಿವೆ.. ಅಭಿನಂದನೆಗಳು ಗುರು

    ReplyDelete