Sunday, April 17, 2011

ಅರ್ಜೆಂಟೈನ ದೇಶದ ಅನುಭವಗಳು - ಭಾಗ 3

( ತುಂಬಾ ದಿನ ಆಯಿತು,,, ನನ್ನ ಬ್ಲಾಗಿನ ಕಡೆ ತಲೆ ಹಾಕಿ.... ಅರ್ಜೆಂಟೈನ ದಲ್ಲಿ ಇದ್ದದಾಗ ಪ್ರತಿ ವೀಕ್ ಅಲ್ಲಿನ ಅನುಭವಗಳನ್ನು ಹಂಚಿಕೊಳ್ಳ ಬೇಕು ಅಂತ ಅನ್ಕೊಂಡ್ ಇದ್ದೆ... ಆದರೆ ಏನ್ ಮಾಡೋದು ,,,, ತುಂಬಾ ಕೆಲಸದ ಒತ್ತಡ.... ಬರಿಯೋಕೆ ಟೈಮ್ ಆಗಲಿಲ್ಲ.... ಅದಾದಮೇಲೆ ಇಲ್ಲಿಗೆ ಬಂದಮೇಲು ಟೈಮ್ ಸಿಗಲಿಲ್ಲ... ಹಾಗಾಗಿ ಕೆಲವು ತಿಂಗಳಿನಿಂದ ನನ್ನ ಬ್ಲಾಗ್ ಅಪ್ಡೇಟ್ ಮಾಡೋಕೆ ಆಗಲಿಲ್ಲ.... ಇವಾಗ ಸ್ವಲ್ಪ ಟೈಮ್ ಸಿಕ್ಕಿದೆ.... ಅದಕ್ಕೆ ನನ್ನ ಅರ್ಜೆಂಟೈನ ಅನುಭವದ ಮುಂದಿನ ಲೇಖನಗಳನ್ನ ಹಂಚಿಕೊಳ್ಥ ಇದೇನೇ )






ಪಿನಮಾರ್ ಬೀಚ್.......very beauitiful Place and one of best attractions in Argentina.....

400 KM ಡ್ರೈವ್ ಮಾಡ್ಕೊಂಡ್ ಪಿನಮಾರ್ ಸಿಟಿ ರೆಅಚ್ ಅದಾಗ ಆಗಲೇ ೧೨:೩೦ ,, ಮೊದಲೇ ಬುಕ್ ಮಾಡಿದ ಹೋಟೆಲ್ ಹುಡುಕಲಿಕ್ಕೆ ಕಷ್ಟ ಏನು ಆಗಲಿಲ್ಲ.....ಇಲ್ಲಿ ಇನ್ನೊಂದ್ ವಿಷಯ ಏನು ಅಂದ್ರೆ ಕಾರ್ ನಲ್ಲಿ ಹೋಗಬೇಕಾದರೆ ಎಲ್ಲರೂ GPRS ನ ಡಿಪೆಂಡ್ ಆಗಿದಾರೆ , ಎಲ್ಲಿಗೆ ಹೋಗಬೇಕು ಅಂತ ಟೈಪ್ ಮಾಡಿ ಬಿಟ್ಟರೆ ಸಾಕು,,,, ಅದೇ direction ತೋರಿಸುತ್ತೆ , ಮುಂದೆ traffic ಸಿಗ್ನಲ್ ಇದ್ದರೆ, ಅಥವಾ ಸಿಟಿ ಲಿಮಿಟ್ ನಲ್ಲಿ ಎಲ್ಲಾದರು ಸ್ಪೀಡ್ ಬ್ರೇಕ್ ಇದ್ದರೆ ಮುಂಚೇನೆ ಹೇಳಿ ಬಿಡುತ್ತೆ ಈ GPRS ಸಿಸ್ಟಮ್. ಸೊ ಇದರ ಸಹಾಯದಿಂದಲೇ,,,ಇಲ್ಲಿರುವ ಹೋಟೆಲ್ ಗೆ ಕರೆಕ್ಟ್ ಆಗಿ ತಲುಪಿದೆವು.....

ಹೋಟೆಲ್ ಏನೋ ಚೆನ್ನಾಗಿ ಇತ್ತು,,, ನನ್ ಫಸ್ಟ್ ಕೇಳಿದ್ದು , ಹೋಟೆಲ್ ನಲ್ಲಿ ಇರುವ receptionist ಗೆ ಇಂಗ್ಲಿಷ್ ಬರುತ್ತಾ ಅಂತ... ಸದ್ಯ ನನ್ನ ಅದೃಷ್ಟಕ್ಕೆ ಅವರು ಸ್ವಲ್ಪ ಇಂಗ್ಲಿಷ್ ಮಾತಾಡ್ತಾ ಇದ್ದರು.... ಸರಿ ಬದುಕಿದೆ ಗುರು ಅಂದುಕೊಂಡು... ರೂಂ ಕೀ ತಗೊಂಡೆ... ನನ್ನ ಫ್ರೆಂಡ್ ಸ್ವಲ್ಪ ಹೊತ್ತು ನನ್ನ ಜೊತೆ ಇದ್ದು ...ಆಮೇಲೆ ಹೊರಟು ಹೋದರು,,,, ನಾನು ಹೋಗಿದ್ದು ಮಧ್ಯಾನ ಅದ್ದರಿಂದ... ಇವಗ್ಲೆ ಬೀಚ್ ಹತ್ರ ಹೋಗಿ ಬನ್ನಿ... ಚೆನ್ನಾಗಿ ಇರುತ್ತೆ ಅಂತ ಹೇಳಿದರು.... ನಾನು ಓಕೆ ಅಂತ.. ಅವಗ್ಲೆ ಹೊರಟೆ.... ವೌ.. ನಿಜಕ್ಕೂ ತುಂಬಾ ವಿಶಾಲವಾದ ಬೀಚ್..... ಸಕತ್ ಉದ್ದವಾದ ಬೀಚ್.....ಕ್ಯಾಮೆರಾ ತಗೊಂಡ್ ಹೋಗಿದ್ದೆ.... ಬೀಚ್, ಮತ್ತೆ ಅದರ ಹತ್ತಿರ....ಅಲ್ಲಿ ಆಟ ಆಡುತ್ತಿದ್ದ ಮಕ್ಕಳ... ಎಲ್ಲರ ಫೋಟೋ ತೆಗಯುತ್ತ ಹೊರಟೆ..... ನೀರಿನಲ್ಲಿ ಇಳಿಯಲಿಲ್ಲ..... ಸ್ವಲ್ಪ ಹೊತ್ತು ಅಲ್ಲೇ ಸುತ್ತಾಡಿ.... ಕೆಲವೊಂದು ಫೋಟೋ ತೆಗೆದು ಮತ್ತೆ ವಾಪಾಸ್ ರೂಂ ಗೆ ಬಂದೆ... ... ಮತ್ತೆ ಬೀಚ್ ಹತ್ರ ಹೋದೆ ಸ್ವಲ್ಪ ಹೊತ್ತು ನೀರಿನಲ್ಲಿ ಆಡೋಣ ಅಂತ... ಸರಿ ಅಲ್ಲಿಗೆನೋ ಹೋದೆ, ಒಬ್ಬನೇ ಇರೋದು, ನನ್ನ ಬಟ್ಟೆ ಸ್ಲಿಪ್ಪೆರ್ಸ್ ಎಲ್ಲಾ ಎಲ್ಲಿ ಇಡೋದು ಅಂತ ಯೋಚನೆ... ಆಮೇಲೆ ಅಲ್ಲೇ ಇದ್ದ ಸೆಕ್ಯೂರಿಟಿ costal gaurd ) ಹತ್ರ ಇತ್ತು ಸ್ವಲ್ಪ ಹೊತ್ತು ಬರ್ತೇನೆ ಅಂದೇ...ಫಸ್ಟ್ ಅವನು ಒಪ್ಪಿಕೊಳ್ಳಲಿಲ್ಲ,,, ಆಮೇಲೆ ಅವನಿಗೆ ಹೇಳಿ.. ನಾನು ಒಬ್ಬನೇ ಬಂದಿರೋದು ಅಂತ ಕೇಳಿಕೊಂಡು ಅಲ್ಲೇ ಇತ್ತೇ... ಅವನನ್ನು ಸ್ವಲ್ಪ ಹೊತ್ತು ಮಾತಾಡಿಸುತ್ತ...ಅಲ್ಲಿನ ವಿಷಯಗಳನ್ನ , ಹೇಗೆ ವತ್ಚ್ ಮಾಡ್ತಾರೆ,,,ಏನಾದರೂ ಯಾರಾದರು ಮುಳುಗುತ್ತಿದ್ದಾಗ ಇವರು ಹೇಗೆ ರೆಸ್ಕುಎ ಮಾಡ್ತಾರೆ ಅಂತ ಕೇಳ್ತಾ ಇದ್ದೆ... ಪ್ರತಿ ಅರ್ದ ಕಿಲೋ ಮೀಟರ್ ಗೆ ಒಂದರಂತೆ.. costal gauard ಆಫೀಸೆರ್ಸ್ ಇರ್ತಾರೆ.... ಇವರ ಮುಖ್ಯ ಕರ್ತವ್ಯ ,, ಯಾರು ಸಮುದ್ರದ ತುಂಬಾ ಒಳಗೆ ಹೋಗದೆ ಇರೋ ರೀತಿ ಕಾಪಾಡಬೇಕು... ಎಲ್ಲರನ್ನು watch ಮಾಡ್ತಾ ಇರ್ತಾರೆ,. ಯಾರಾದರು ಸ್ವಲ್ಪ ಒಳಕ್ಕೆ ದೂರಕ್ಕೆ ಹೋಗ್ತಾ ಇದ್ದರೆ immidiet ಆಗಿ alert ಮಾಡಿ... ವಾಪಾಸ್ ಕರ್ಸ್ಕೊತಾರೆ ,, ನನ್ನ ಜೊತೆ ಮಾತನಾಡುತ್ತಿದ ಸ್ವಲ್ಪ ಹೊತ್ತು ಮಾತಾಡಿಕೊಂಡೆ ಎಲ್ಲರನ್ನು watch ಮಾಡ್ತಾ ಇದ್ದರು , ಆಮೇಲೆ ಇವರ ಹತ್ತಿರ ನನ್ನ ಬಟ್ಟೆ ಎಲ್ಲಾ ಇಟ್ಟು ಸಮುದ್ರದ ಬಳಿ ಹೋದೆ... ಆದರೆ ಯಾಕೋ ಮನಸೇ ಆಗಲಿಲ್ಲ.... ನಾನೊಬ್ಬನೇ.... ನನ್ನ wife ಕೂಡ ನನ್ನ ಜೊತೆ ಇದ್ದಿದ್ದರೆ ಅಂತ ಅನ್ನಿಸಿ,, ಬೇಜಾರ್ ಆಗಿ ಒಬ್ಬನೇ,,, ಸಮುದ್ರದ ಅಲೆಗಳ ಜೊತೆ ಕೂತ್ಕೊಂಡ್ ಬಿಟ್ ಇದ್ದೆ... ಒಬ್ನೇ enjoyee ಮಾಡೋಕೆ ಮನಸು ಆಗಲಿಲ್ಲ ....

ಅಲ್ಲೇ ನೀರಿನಲ್ಲಿ ಸ್ವಲ್ಪ ಹೊತ್ತು ಕೂತಿದ್ದು.... ವಾಪಾಸ್ ಬಂದೆ ಬಂದಾಗ ಆಗಲೇ ೪:೦೦ ಗಂಟೆ ,,, ಬೆಳಿಗ್ಗೆ ಸ್ವಲ್ಪ ತಿಂದಿದ್ದು.... ಮದ್ಯದಲ್ಲಿ coffee ಕುಡಿದಿದೆ ಅಸ್ಟೇ...ಹೊಟ್ಟೆ ಹಸಿವಗ್ತಾ ಇತ್ತು... ಸರಿ ಏನ್ ತಿನ್ನೋದು.... ನನ್ ರೂಂ ನಲ್ಲಿ ಆಗಿದ್ದರೆ ಏನಾದ್ರು ಮಾಡ್ಕೊಂಡ್ ತಿನ್ನ್ಥ ಇದ್ದೆ.... ಇಲ್ಲಿ.... ಅದು veg ಫುಡ್ ಏನಾದ್ರು ಸಿಗುತ್ತಾ .. ಅನ್ಕೊಂಡ್ ಒಂದೆರಡು ಕಡೆ ಕೇಳಿದೆ... ದರಿದ್ರ ಭಾಷೆ ಪ್ರಾಬ್ಲಮ್ ಬೇರೆ.... ಅವರಿಗೆ ಅರ್ಥ ಆಯ್ತೋ ಇಲ್ವೋ.... ಏನು ಸಿಗಲಿಲ್ಲ... ಅಲ್ಲಿನ ಜನ ತಿನ್ತ ಇರೋದ್ ನೋಡೆ ನಂಗೆ ಒಂದು ತರ ಆಗ್ತಾ ಇತ್ತು,,,, .. ಸರಿ mac -donald ಗೆ ಹೋಗಿ,, veg burger ಸಿಕ್ಕರೆ ತಿನ್ನೋಣ ಅಂತ ಹೋದೆ....ಒಂದು ಮೈಲಿ queue ಇತ್ತು....

ಅದೇನು ಅಂತ ತಿಂತಾರೋ ಅಂತ ,, ನನ್ನ ಸರದಿ ಬರೋವರ್ಗು wait ಮಾಡ್ತಾ ಇದ್ದೆ.. ಅಂತು ಒಂದು ೨೦ mins ಆದಮೇಲೆ ನನ್ನ ಸರದಿ ಬಂತು... ಕೌಂಟರ್ ನಲ್ಲಿ vegiterian ಫುಡ್ ಏನಾದ್ರು ಇದೆಯಾ,, ಲೈಕ್ ವೆಜ್ burger ಅಂತ ಕೇಳಿದೆ... ಅವಳಿಗೋ ನನ್ engilish ನಲ್ಲಿ ಕೇಳ್ತಾ ಇರೋದು ಅರ್ಥ ಆಗ್ತಾ ಇಲ್ಲ. ಅವಳು ಸ್ಪಾನಿಶ್ ನಲ್ಲಿ ಹೇಳ್ತಾ (ಬೈತಾ :-) ಇದ್ಲು (ಅವರು ಅಸ್ತು ಫಾಸ್ಟ್ ಆಗಿ ಹೇಳೋದು ನಿಜವಾಗಲು ಬೈಯೋ ಹಾಗೆ ಇರುತ್ತೆ :) ) ಇರೋದು ನಂಗೆ ಗೊತ್ತಾಗ್ತಾ ಇಲ್ಲ.... ಇದೊಳ್ಳೆ ಕತೆ ಆಯ್ತಲ್ವ... ಮೊದಲೇ ಹೊಟ್ಟೆ ಹಸಿವು...೨೦ ನಿಮಿಷದಿಂದ ಲೈನ್ ನಲ್ಲಿ ಬೇರೆ ನಿಂತಿದೇನೆ ಅಂತ ಅನ್ಕೊಂಡ್ ಅಕ್ಕ ಪಕ್ಕ ನೋಡಿದೆ... ಸದ್ಯ ಅಲ್ಲಿ ಇರುವ ಒಬ್ಬ turist ಗೆ engilish ಬರ್ತಾ ಇತ್ತು ನನ್ನ ಅವಸ್ತೆ ನೋಡಿ ಅವನೇ ಏನ್ beeku ನಿಮಗೆ ಅಂತ ಕೇಳಿದ... ಅವಾಗ ಹೇಳ್ದೆ,, "ನಂಗೆ veg burger ಬೇಕು ,, ಅದಿಲ್ಲ ಅಂದ್ರೆ ಬೇರೆ ಏನಾದ್ರು ವೆಜಿಟೇರಿಯನ್ ಫುಡ್ ಇದ್ರೂ ಓಕೆ ಅಂತ..... " ಅವನು ಸ್ಪಾನಿಶ್ ಗೆ ಕನ್ವರ್ಟ್ ಮಾಡಿ ಕೌಂಟರ್ ನಲ್ಲಿ ಕೇಳಿದ... ಅವಳು ವೆಜ್ burger ಇಲ್ಲ,, ಬೇಕಾದರೆ vegiteble salad ಇದೆ ಬಟ್ ಅದು ವಿಥ್ ಚಿಕ್ಕೆನ್ ಅಂತ ಹೇಳಿದಳು... ಇದು ಯಾಕೋ ಸರಿ ಹೋಗೋಲ್ಲ.... ಇಲ್ಲಿ ಇದ್ರೆ ಟೈಮ್ ವೇಸ್ಟ್ ಅಂತ... ಸುಮ್ನೆ ಹೊರಗಡೆ ಬಂದೆ.... ಆಗಲೇ ೫ ಗಂಟೆ... ಒಂದು ಘಂಟೆ ಇನ್ನ್ದ ಸುತ್ತಾಡ್ತಾ ಇದೇನೇ....ವೆಜಿಟೇರಿಯನ್ ಫುಡ್ ಗೆ.....ಅದು ಫುಲ್ ಹೊಟ್ಟೆ ಹಸಿವ್ಕೊಂಡ್.... ನಿಜವಾಗಲು ಅವಾಗ ಗೊತ್ತ ಆಯಿತು ಕಷ್ಟ ಏನು ಅಂತ....... ಇನ್ನ ಒಂದೆರಡು ಹೋಟೆಲ್ ನಲ್ಲಿ ಕೇಳಿದೆ... ಹ್ಞೂ ಹ್ಞೂ..... ಏನು ಪ್ರಯೋಜನ ಇಲ್ಲ..... ನಿಜವಾಗಲು ಅಸ್ಟೇ ನನ್ ಕತೆ ಇವೊತ್ತು ಅನ್ಕೊಂಡೆ.... ಮತ್ತೆ ನಾಳೆ ದಿನ ಬೇರೆ ನೆನಪು ಆಯಿತು......ಹೇಗಪ್ಪ ಇನ್ನ ಎರಡು ದಿನ ಇರೋದು ಇಲ್ಲಿ ಅಂತ ಅನ್ಕೊಂಡ್ ಯೋಚನೆ ಸ್ಟಾರ್ಟ್ ಆಯಿತು... ಸರಿ ದೇವರು ಇದಾನೆ ಅಂತ ಅನ್ಕೊಂಡು... ನನ್ ಹೋಟೆಲ್ ಕಡೆ ಬಂದೆ... ನಮ್ ಹೋಟೆಲ್ ನಲ್ಲಿ ಕ್ಯಾಂಟೀನ್ ಸರ್ವಿಸ್ ಇರಲಿಲ್ಲ.... ಸರಿ ಅಂತ ಅಲ್ಲಿರೋ reception ನ ಕೇಳಿದೆ , ಏನಾದ್ರು ಸಿಗುತ್ತಾ ವೆಜಿಟೇರಿಯನ್ ಫುಡ್ ಇಲ್ಲಿ ಅಂತ... ಅವಳು ನನ್ನ ಮಕ ನೋಡಿ... ತುಂಬಾ ಕಷ್ಟ ಇದೆ... ನೋಡ್ತೇನೆ ತಾಳಿ ಅಂತ ಒಂದೆರಡು ಕಡೆ ಫೋನ್ ಮಾಡಿದಳು.... ಆಮೇಲೆ ಒಂದು ರೆಸ್ಟೋರೆಂಟ್ ಅಡ್ರೆಸ್ ಕೂಟ್ಟಳು... ನಾನ್ ಇರೋ ಹೋಟೆಲ್ ನಿಂದ ೫ ಬಿಲ್ಡಿಂಗ್ ಆದಮೇಲೆ ಒಂದು ರೆಸ್ಟೋರೆಂಟ್ ಇದೆ... ಅಲ್ಲಿ ನಿಂಗೆ ವೆಜ್ pasta ಸಿಗುತ್ತೆ ಅಷ್ಟೇ ಅಂದ್ಲು... ಸರಿ ಬದುಕಿದೆ ಅಂತ ಬೇಗ ಬೇಗ ಹೋದೆ... ಪಾಪ ನಮ್ ಹೋಟೆಲ್ receptionist ಆಗಲೇ ಫೋನ್ ಮಾಡಿ ಹೇಳಿದ್ದಳು.... ಆಮೇಲೆ...ನಾನು ಹೋಗಿ ಬರದೆ ಇರೋ ಸ್ಪಾನಿಶ್ ನಲ್ಲಿ ಕೇಳಿದೆ "alimentos vegiterian " ಅವಳು ಓಕೆ ಓಕೆ ಅಂತ,,, ಕೂತ್ಕೊಳಕ್ಕೆ ಹೇಳಿದಳು,,, ಮೆನು ನೋಡಿದೆ...40 $ ಅಂತ ಇತ್ತು... ಅಸ್ಟೇ ಇವೊತ್ತು ನನ್ನ ಕತೆ ,, ಇರಲಿ,, ಹೊಟ್ಟೆ ಗೆ ಏನಾದ್ರು ಬಿದ್ರೆ ಸಾಕು ಅಂತ ಸುಮ್ನೆ ಕೂತ್ಕೊಂಡೆ.... ಕೂತ್ಕೊಂದಾಗ ಮೊದಲು ಒಂದಷ್ಟು ಬ್ರೆಡ್ ಮತ್ತೆ bun ತಂದಿಟ್ರು ( ಅದು ತರ ತರದು,, ಉದ್ದದ್ದು.. ದೊಡ್ಡ ,, ಕಡ್ಡಿ ತರ ಇರೋದು)...,,, ಏನ್ ಇದೇನಾ pasta ಇಷ್ಟೇನಾ ಅನ್ಕೊಂಡ್ ಅದರ ಜೊತೆ ಒಂದು ತರ ಸಾಸ್ ಕೊಟ್ಟಿದ್ರು,,, ಅದನ್ನೇ ನೆನ್ಚ್ಕೊಂಡ್ ತಿನ್ತ ಇದ್ದೆ....(ಇದನ್ನ ಎಲ್ಲಾ ಕಡೆ ಇಲ್ಲಿ ಸುಮ್ನೆ ಕೊಡ್ತಾರಂತೆ ) ಎಷ್ಟು ಹೊಟ್ಟೆ ಹಸಿವಾಗಿತ್ತು ಅಂದ್ರೆ... ಅದನ್ನೇ ಗಬ ಗಬ ಅಂತ ತಿನ್ತ ಇದ್ದೆ.... ಜೊತೆಗೆ ಒಂದು coke ಬೇರೆ ಇತ್ತು... ಸ್ವಲ್ಪ ಹೊತ್ತು ಆದಮೇಲೆ ಬಿಸಿ ಬಿಸಿ ಗಿರೋ ಏನೋ ಒಂದು ಪ್ಲತೆ ತಂದಿಟ್ಲು... ಆಮೇಲೆ ಗೊತ್ತ ಆಯಿತು ಇದೆ main ಡಿಶ್ ಅಂತ.... ಸರಿ ಏನೋ ಬಿಸಿ ಬಿಸಿ ಇದೆ.... ಅಂತ ನೋಡಿದೆ ಒಂದೆರಡು ಆಲೂ ಮತ್ತೆ ಸೊಪ್ಪು ಕಾಣಿಸಿತು... ಸರಿ ಇದು ವೆಜ್ ದೇ ಅನ್ಕೊಂಡ್ ಒಂದು ಸೂಪ್ ಬಾಯಿನಲ್ಲಿ ಇಟ್ಕೊಂಡೇ.... ಅಬ್ಬ !!!! ನಿಜವಾಗಲು ಕಚಡ ವಾಗಿ ಇತ್ತು.... ಉಪ್ಪಿಲ್ಲ, ಖಾರ ಇಲ್ಲ... ಇಲ್ಲಿನ ಪಾಪಿ ಗಳು.... ಖಾರ ನೆ ತಿನ್ನೋಲ್ಲ..... ಅದು ಸಾಲದು ಅಂತ ಒಂದು ಮಣ ಚೀಸ್ , ಹಂಗೆ ತೇಲ್ತಾ ಇದೆ.... (ಇಲ್ಲಿ ಎಲ್ಲದಕ್ಕೂ ಚೀಸ್ ಬೇಕೆ ಬೇಕಂತೆ....) ಹೇಗಪ್ಪ ಇದನ್ನ ತಿನ್ನೋದು..... ಅನ್ಕೊಂಡ್ ಕಣ್ ಮುಚ್ಕೊಂಡು ಒಂದೆರಡು ಸೂಪನ್ ಬಾಯಿಗೆ ಇಟ್ಕೊಂಡೇ ......ಇನ್ನೊಂದ್ ಕಡೆ ಸ್ವಲ್ಪ ರೆಡ್ color ನಲ್ಲಿ ಸಾಸ್ ತರ ಹಾಕಿದರು.... ಅದನ್ನ ಮಾತ್ರ ತಿನ್ತ ಇದ್ದೆ... ಅದು ಒಂದು ಚೂರು ಕಾರ ಇತ್ತು ಅಸ್ಟೇ ಒಂದು 4 ಅಥವಾ 5 ಸ್ಪೂನ್ ಅಸ್ಟೇ ತಿನ್ದಿರೋದು ಆಗಲೇ ವಾಂತಿ ಬರೋ ಹಾಗೆ ಆಯಿತು.... ಇದ್ದದ್ರಲ್ಲೇ ಸ್ವಲ್ಪ ಸೇರಿಸಿಕೊಂಡ್ ಇನ್ನೊಂದೆರಡು ಸ್ಪೂನ್ ಜಾಸ್ತಿ ತಿಂದು.... ಎಲ್ಲ ಹಾಗೆ ಬಿಟ್ಟು....ಕೌಂಟರ್ ಹತ್ರ ಹೋಗಿ.. ಬಿಲ್ಲಿ ಕೊಡಿ ಅಂದೇ... ಅದೇ 54 $ ಆಗಿತ್ತು ನನ್ ಕರ್ಮ ಅನ್ನ್ಕೊಂಡ್ ಅಷ್ಟು ಕೊಟ್ಟು ಓದಿ ಬಂದ್ಬಿಟ್ಟೆ...ಹೊಟ್ಟೆ ಉರಿತ ಇತ್ತು.... (ನಮ್ ಇಂಡಿಯಾ ಲೆಕ್ಕದಲ್ಲಿ ಒಂದು 600 ರುಪಾಯಿ ನಾನು ಕರ್ಚು ಮಾಡಿದ್ದು ) ಬರಿ ಒಂದು ೪ ಸ್ಪೂನ್ ಗೆ ಇಷ್ಟೋಂದ ಅಂತ..... ಇನ್ನೊಂದ್ ದಿನ ಇದೆ ಅಷ್ಟೇ ನನ್ ಕತೆ ಅನ್ಕೊಂಡ್ ರೂಂ ಗೆ ಬಂದೆ.... ಬರ್ತಾ 2 ಲೀಟರ್ ವಾಟರ್ bottel ತಗೊಂಡ್ ಬಂದೆ ,, ಆಮೇಲೆ ಬ್ಯಾಗ್ ನಲ್ಲಿ ನೋಡಿದೆ,,, ನನ್ನ ಅದೃಷ್ಟಕೆ ಒಂದೆರಡು ಅಪ್ಪೆಲ್ ಮತ್ತೆ ಕ್ಯಾರೆಟ್ ಇತ್ತು.... (ಎಲ್ಲಾದರು ಹೋಗಬೇಕಾದಾಗ ಇರಲಿ ಅಂತ ಅಪೆಲ್ , orange , ಇತ್ತ್ಕೊಂಡ್ ಇರ್ತೇನೆ ) ಸರಿ ಅಂತ ಒಂದು ಅಪೆಲ್ ಮತ್ತೆ ಕ್ಯಾರೆಟ್ ನ ತಿಂದು ನೀರು ಕುಡಿದು ಮಲ್ಕೊಂಡೆ.... ಸುತ್ತಾಡಿ ತುಂಬಾ ಸುಸ್ತು ಆಗಿತ್ತು....

ಮತ್ತೆ ಎದ್ದಾಗ,,,, ರಾತ್ರಿ ೮ ಘಂಟೆ ... ಫುಲ್ ಕತ್ತಲು ಆಗಿತ್ತು ಸರಿ ಹೊರಗಡೆ ಓಡಾಡಿಕೊಂಡ್ ಬರೋದನ ಅಂತ ಹೊರಟೆ.... ವೌ..... ಬೆಳಿಗ್ಗೆ ಇದ್ದ ಸಿಟಿ ನೆ ಬೇರೆ.. ಇವಾಗ ನೈಟ್ ನಲ್ಲಿ ನೋಡ್ತಾ ಇರೋ ಸಿಟಿ ನೆ ಗೆರೆ.... ಇದೇನಾ ನಾನು ಬೆಳಗ್ಗೆ ನೋದ್ದಿದ್ದು ಅಂತ ಅನ್ನಿಸಿತು.... ಎಲ್ಲಿ ನೋಡಿದರಲ್ಲಿ ಜಗಮಗಿಸುವ ದೀಪಗಳು.... ಹಾಗೆ ಒಂದು ವಾಕ್ ಹೊರಟೆ ಮೇನ್ ರೋಡ್ ನಲ್ಲಿ..... ರೋಡಿನ ಎರಡು ಕಡೆ... ಕಾರ್ ಶೋ.... ದೊಡ್ಡ ದೊಡ್ಡ ಕಂಪನಿ ಗಳು ತಮ್ಮ ತಮ್ಮ ಹೊಸ ಹೊಸ ಮಾದರಿಯ ಕಾರ್ ಗಳನ್ನ ಶೋ ಗೆ ಇಟ್ಟಿದ್ದರು.... ಅಲ್ಲಲ್ಲಿ.... ಕೆಲವು ಲೈವ್ ಶೋ,, ಜನ ಅಂದ್ರೆ ಜನ... ಒಳ್ಳೆ ಜಾತ್ರೆ ತರ ಇದೆ....ಬೆಳಿಗ್ಗೆ ಎಷ್ಟು ಬಿಸಿಲು ಇತ್ತೋ ಸಂಜೆ ಅಷ್ಟೇ ತಣ್ಣಗೆ ಇತ್ತು.... (ರಾತ್ರಿ ಹೊತ್ತು ತುಂಬಾ ಚಳಿ ಇರುತ್ತೆ ಒಂದು ಜೆರ್ಕಿನ್ ಇತ್ತ್ಕೊಂಡ್ ಇರು ಅಂತ ನನ್ನ ಫ್ರೆಂಡ್ ಹೇಳಿದ್ದ) ಅದು ಇವಾಗ ಉಪಯೋಗಕ್ಕೆ ಬಂತು ... ಎಲ್ಲಾ ಕಾರು ಗಳ ಶೋ ನ ನೋಡಿಕೊಂಡು ಸುತ್ತಾಡ್ತಾ ಇದ್ದೆ ,, .. ಒಂದು ಕಡೆ "saamba " ಗೇಮ್ ಇತ್ತು.... ಸಕತ್ ಆಗಿ ಇತ್ತು... ಹೋಗಿ ಆಡಿದೆ... ಒಂದು ದೊಡ್ಡ ತಟ್ಟೆ ತರ ಇರುತ್ತೆ,, ಅದರ ಮೇಲೆ ಕುತ್ಕೊಬೇಕು... ಆಮೇಲೆ ಮ್ಯೂಸಿಕ್ ಗೆ ತಕ್ಕ ಹಾಗೆ ಆ ತಟ್ಟೆ ಕುಣಿಯುತ್ತೆ,,, ಅದರ ಒಳಗೆ ಇರುವ ನಾನು ಅಷ್ಟೇ.... ವೌ... ಸಕತ್ ಆಗಿ ಇತ್ತು.....

ಅಲ್ಲಿಂದ ಬಂದು ಸುತ್ತಾಡ್ತಾ ಸುತ್ತಾಡ್ತಾ ಟೈಮ್ ಹೋಗಿದ್ದೆ ಗೊತ್ತಾಗಲಿಲ್ಲ... ನೋಡ್ತೇನೆ ಆಗಲೇ ೧೧ ಘಂಟೆ ರಾತ್ರಿ... ಸರಿ ಮತ್ತೆ ಹೊಟ್ಟೆ ಹಸಿವು,,, ಅಕ್ಕ ಪಕ್ಕ ಎಸ್ಟೊಂದ್ ರೆಸ್ಟೋರೆಂಟ್ ಇದೆ.... ಏನು ಪ್ರಯೋಜನ ಇಲ್ಲ ನನಗೆ.... ಆಮೇಲೆ blackbery messanger ನಲ್ಲಿ ನನ್ ಇಲ್ಲಿಯ ಫ್ರೆಂಡ್ ಒಬ್ಬನನ್ನ ಕೇಳಿದೆ... ಏನಾದ್ರು ಸಿಗ್ಗುತ್ತ ಇಲ್ಲಿ ವೆಜಿಟೇರಿಯನ್ ಫುಡ್ ತಿನ್ನೋಕೆ ಅಂತ... ಅವನು ಹೇಳಿದ ಒಂದು ರೆಸ್ಟೋರೆಂಟ್ ಇದೆ,, ಅಲ್ಲಿ ಹೋಗಿ... ವೆಜ್ salad ಅಂತ ಕೇಳು,,, ಚೆನ್ನಾಗಿ ಇರುತ್ತೆ ಅದು ತಿನ್ನು ಅಂತ ಹೇಳಿದ.... ಸರಿ ಅಂತ ಅದನ್ನ ಹುಡುಕಿಕೊಂಡ್ ಹೊರಟೆ... ಸದ್ಯ ಅದರ owner ಇಂಗ್ಲಿಷ್ ನಲ್ಲಿ ಮಾತಾಡ್ತಾ ಇದ್ಲು... ನನ್ನ ಕಷ್ಟ ಹೇಳಿಕೊಂಡೆ... ನಂಗೆ ಬರಿ vegitables ಇರೋ ಏನಾದ್ರು ಫುಡ್ ಇದ್ರೆ ಕೊಡಿ ಅಂತ... ಅವಳು ಮೆನು ತೋರಿಸಿ.. ಇದು ವೆಜ್ salad ಬಫೆ,, ಅಲ್ಲಿ ಎಲ್ಲಾ vegitables ಇದೆ.... ಮತ್ತೆ ರೈಸ್ ಇದೆ,, ನಿಂಗೆ ಏನು ಬೇಕೋ ಅದನ್ನ serv ಮಾಡ್ಕೋ ಅಂದ್ಲು.... ಬದುಕಿದೆ ಗುರುವೇ ಅನ್ಕೊಂಡ್ ಅದನ್ನ ಹಾಕೊಳೋಕ್ಕೆ ಹೋದೆ .. ಅಲ್ಲಿ ರೈಸ್ ಇತ್ತು.. ಸ್ವಲ್ಪೇ ಸ್ವಲ್ಪ.... ಅದರಲ್ಲಿ ಏನೋ ಇದ್ದ ಹಾಗೆ ಇತ್ತು... ಅದು vegitables ಅಂತು ಅಲ್ಲ .. ಮತ್ತೆ ಅವಳನ್ನ ಕರೆದು ಕೇಳಿದೆ... ಇದು ಏನು ಅಂತ... ಅವಳು ನೋಡಿ... ಅದು ಫಿಶ್ ಪೀಸ್ ಅಸ್ಟೇ ಅಂದ್ಲು.... ತಲೆ ಕೆಟ್ಟು ಹೋಯ್ತು... ಸರಿ ನಮ್ಮ ತಾಯಿ ನಂಗೆ ಏನು ಬೇಡ ಅಂತ... ಸಪ್ಪೆ ಮುಖ ಮಾಡ್ಕೊಂಡ್ ಬಂದೆ.... ಇನ್ನೆಲ್ಲೂ ಟ್ರೈ ಮಾಡೋದು ಬೇಡ ಅಂತ.... ಅಲ್ಲೇ ಒಂದು ಶಾಪ್ ನಲ್ಲಿ ಒಂದು coke bottel ಇನ್ನೊಂದಸ್ತು ಬಿಸ್ಕುಟ್ ಮತ್ತೆ cookies ತಗೊಂಡ್ ಇಸ್ಟೇ ಇವೊತ್ತು ಅನ್ಕೊಂಡ್ ರೂಮ್ಗೆ ಬಂದೆ... ಒರಂಗೆ ಮತ್ತೆ ಇನ್ನೊಂದೇ ಒಂದು ಅಪೆಲ್ ಇತ್ತು... ಸರಿ ಅಂತ ಅಷ್ಟನ್ನು ತಿಂದೆ... ಅದರೂ ಯಾಕೋ ಸಮಾದಾನ ಇರಲಿಲ್ಲ.... ... ಬ್ಯಾಗ್ ನಲ್ಲಿ ಬಟ್ಟೆ ತಗೊಳೋಕೆ ನೋಡ್ತಾ ಇರಬೇಕಾದ್ರೆ ಒಂದು ಚಿಕ್ಕ ಕಪ್ nudels ಪ್ಯಾಕ್ ಸಿಗಬೇಕ.... ಅಬ್ಬ ನನಗಂತು ಫುಲ್ ಖುಷಿ..... ಫಸ್ಟ್ ಹೋಗಿ.... ಒಂದು ದೊಡ್ಡ ಗ್ಲಾಸ್ ಬಿಸಿ ಬಿಸಿ ನೀರು ತಂದು,, ಅದರಲ್ಲಿ ಇದನ್ನ ಹಾಕಿ.... ಸ್ವಲ್ಪ ಹೊತ್ತಾದಮೇಲೆ ತಿಂದೆ.... !!! ಅಬ್ಬ ಅವಗಂತೂ ಫುಲ್ ಸಮಾದಾನ ಆಯಿತು...... ತುಂಬಾ ಸುತ್ತಿದ್ದೆ ಬೇರೆ,, ಚೆನ್ನಾಗಿ ನಿದ್ದೆ ಬಂತು.....



ಮುಂದಿನ ಭಾಗದಲ್ಲಿ ... ಅರ್ಜೆಂಟೈನ ದ,, TANGO ಡಾನ್ಸ್ ಮತ್ತೆ,,, ಅಲ್ಲಿನ ಸಿಟಿ ಬಗ್ಗೆ ಬರಿತೇನೆ



















20 comments:

  1. ಕುತೂಹಲ ಹುಟ್ಟಿಸುವ ಲೇಖನ.ಸುಂದರವಾದ ಚಿತ್ರಗಳೂ.

    ReplyDelete
  2. ಗುರು,

    ನಿಮ್ಮ ಊಟದ ಕತೆ ಓದಿ ನಗುಬಂತು. ಅದಕ್ಕೆ ಹೇಳೋದು ಹೆಂಡತಿ ಪಕ್ಕದಲ್ಲಿರಬೇಕು ಅಂತ. ಇಂದೊಂತರ ಕೈಗೆ ಸಿಕ್ಕಿದ್ದು ಬಾಯಿಗೆ ಸಿಗಲಾರದು ಅನ್ನುವಂತೆ. ಇರಲಿ ಮುಂದುವರಿಸಿ ನಿಮ್ಮ ಅಲ್ಲಿನ ಕತೆಯನ್ನು...

    ReplyDelete
  3. very nice guru... oota chennagi maaDi hahaha

    ReplyDelete
  4. ಆಶ್ಚರ್ಯ!!! ಇಷ್ಟು ದಿನ ಈ ಬ್ಲಾಗ್ ನೋಡದಿದ್ದದ್ದು!!! ದಕ್ಷಿಣ ಅಮೇರಿಕ ನನ್ನ ನೆಚ್ಚಿನ ಕುತೂಹಲದ ಖಂಡ. ಒಬ್ಬರು ಬ್ಲಾಗ್ ಪರಿಚಯಸ್ತರು ಈಗಾಗಲೇ ಚಿಲಿ ಬಗ್ಗೆ ಬ್ಲಾಗ್ ಬರಿತಿದ್ದಾರೆ. ಇನ್ನೊಬ್ಬರು ನಮ್ಮೂರಿನವರು (ನಾನು ಕೊಟ್ಟ ಎಮರ್ಜೆನ್ಸಿ ಮೆಡಿಸಿನ್ ಗಳೊಂದಿಗೆ) ಬ್ರೆಜಿಲ್ ಗೆ ಹೊರಟ್ಟಿದ್ದಾರೆ!!!
    ನಿಮ್ಮ ಮುಂದಿನ ಲೇಖನಗಳಿಗಾಗಿ ಕಾಯುತ್ತಿದ್ದೇನೆ.

    ReplyDelete
  5. nimma updates ge wait madtha idde.... abba..nimma kashtave :)

    photo haakididdre chennagirthittu :)

    mundina bhaagakke kaaytha ideeni :)thumba chennaagi bareetha ideera:)

    ReplyDelete
  6. ಧನ್ಯವಾದಗಳು ಗುರು ಸರ್ ..

    ReplyDelete
  7. ಥ್ಯಾಂಕ್ಸ್ ವಿಚಲಿತ....

    ReplyDelete
  8. ನಿಮ್ಮ ಅನಿಸಿಕೆಗಳಿಗೆ , ಧನ್ಯವಾದಗಳು ದಿನಕರ್.

    ReplyDelete
  9. ಥ್ಯಾಂಕ್ಸ್ ಸುನಾಥ ಅಂಕಲ್....

    ReplyDelete
  10. ಹಾ, ಶಿವೂ,, ಅಲ್ಲಿ ಹೆಂಡತಿ ಇದ್ದಿದ್ದರೆ.. ಇದೆ ಗೋಳು ಆಗ್ತಾ ಇತ್ತೇನೋ..... ಅಬ್ಬ ಎರಡು ದಿನ ಅಂತು,,, ಸಕತ್ ಕಷ್ಟ ಪಟ್ಟೇ.. ಊಟಕ್ಕೆ ..

    ReplyDelete
  11. ಥ್ಯಾಂಕ್ಸ್ ಮನಮುಕ್ತಾ ...

    ReplyDelete
  12. ಸುಗುಣ ಮೇಡಂ.... ಹೌದು... ಮನೆಗೆ ಬಂದ ಮೇಲೆ... ಏನ್ ಏನು ಬೇಕೋ ಅದನ್ನೆಲ್ಲ ತಿಂದೆದ್ದೆ ತಿಂದಿದ್ದು.... ಯಾವಾಗ ಬಂದು ನಮ್ಮ ಅಮ್ಮನ ಕೈ ಊಟ ಮಾಡ್ತೇನೋ ಅಂತ ಅನ್ನಿಸಿ ಬಿಟ್ ಇತ್ತು...

    ReplyDelete
  13. ಸುಬ್ರಮಣ್ಯ....
    ಧನ್ಯವಾದಗಳು ನನ್ನ ಬ್ಲಾಗ್ ಲೋಕಕ್ಕೆ ಬಂದು ತಮ್ಮ ಅನಿಸಿಕೆಗಳನ್ನು ತಿಳಿಸಿದ್ದಕ್ಕೆ... ಹೌದು,,, ತುಂಬಾ ಸುಂದರವಾದ ದೇಶ ದಕ್ಷಿಣ ಅಮೆರಿಕ.... ಸದ್ಯ ಅಲ್ಲಿ ಇದ್ದಷ್ಟು ದಿನ,,, ನನ್ನ ಆರೋಗ್ಯ ಕೆದಲಿಲ್ಲ.... ಅದು ನನ್ನ ಪುಣ್ಯ,,, ಹಾಂ ನಾನು ಕೂಡ,,, ಎಲ್ಲ emergency ಮಾತ್ರೆ ಗಳನ್ನ ತೆಗೆದು ಕೊಂಡು ಹೋಗಿದ್ದೆ.... ಒಂದು ದಿನ ಬಾಳೇ ಹಣ್ಣು ಕಾಣಿಸಿತು.... ಸರಿ ಸಿಕ್ಕಿದ್ದೇ ಚಾನ್ಸ್ ಅಂತ ಅರ್ದ ಡಸನ್ ತೆಗೆದು ಕೊಂಡು ಬಂದು,,, ತಿಂದೆ... ಆಮೇಲೆ ಸ್ವಲ್ಪ ಶೀತ ಆಗಿದ್ದು ಬಿಟ್ಟರೆ.. ಇನ್ನೇನು ಆಗಲಿಲ್ಲ....

    ReplyDelete
  14. ಸುದೇಶ್,,,
    ಥ್ಯಾಂಕ್ಸ್ ,,, ನನ್ನ updates ಗೆ wait ಮಾಡ್ತಾ ಇದ್ದೆ ಅಂತ ಅಂದ್ರಲ್ಲ ..... ಹೌದು,,, ಕೆಲಸದ ಒತ್ತಡದ ನಡುವೆ... ಇದನ್ನ ಅಪ್ಡೇಟ್ ಮಾಡೋಕೆ ಟೈಮ್ ಸಿಗಲಿಲ್ಲ...
    ನೆಕ್ಷ್ತ ಬ್ಲಾಗ್ ನಲ್ಲಿ,,, ಫೋಟೋಗಳ ಲಿಂಕ್ ಅನ್ನು ಕೊಡ್ತೇನೆ..... ನೋಡಿ.....

    ReplyDelete
  15. tumba dinada nantara nimma blog oduttiddene..tumba chennagide nimma anubhava..
    Raghu.

    ReplyDelete
  16. nice..

    visit my blog @ http://ragat-paradise.blogspot.com

    RAGHU

    ReplyDelete