Monday, August 22, 2011

ಅರ್ಜೆಂಟೈನ ದೇಶದ ಅನುಭವಗಳು - ಭಾಗ 4

(ಕ್ಷಮಿಸಿ ,,,ಮತ್ತೆ ಅದೇ ಕೆಲಸದ ಒತ್ತಡ,,,,ಅದು ಇದು.... ಸೇರಿಕೊಂಡು ನನ್ನ ಬ್ಲಾಗ್ ಅನ್ನು ಅಪ್ಡೇಟ್ ಮಾಡೋದಕ್ಕೆ ಟೈಮ್ ಸಿಕ್ತಾ ಇಲ್ಲ..... )

ನಾನು ಅರ್ಜೆಂಟೈನ ನಲ್ಲಿ ಇದ್ದ ಪ್ರತಿವಾರದ ಅನುಭವಗಳನ್ನ,,,, ಅಲ್ಲಿ ನೋಡಿದ ಕೆಲವು ಅಪರೂಪದ ಕ್ಷಣಗಳನ್ನ,,, ವಾರವೂ ಅಪ್ಡೇಟ್ ಮಾಡಬೇಕು ಅಂತ ಅಂದುಕೊಂಡಿದ್ದೆ... ಆದರೆ ಅಲ್ಲಿಂದ ಬಂದಮೇಲು ಸಹ ಸಾಧ್ಯವಾಗದೆ ಇದ್ದದ್ದಕೆ ನನಗೆ ಬೇಜಾರಾಗುತ್ತಿದೆ,,, ಇರಲಿ,,, ಅದರೂ ಸಮಯ ಸಿಕ್ಕಾಗಲೆಲ್ಲ ನನ್ನ ಅನುಭವಗಳನ್ನ ಹೇಳ್ಕೊತೇನೆ...ನಾನು ಅರ್ಜೆಂಟೈನ ರಾಜಧಾನಿ, Buenos Aires ನಲ್ಲಿ ಇದ್ದದ್ದು ಕೆಲವೇ ಕೆಅವು ವಾರಗಳಾದರು... ಪ್ರತಿ ವೀಕ್ ಎಂಡ್ ಪ್ರೊಗ್ರಾಮ್ ಅನ್ನು ಮೊದಲೇ ಸಿದ್ದಪದಿಸಿಕೊಂಡ್ ಇದ್ದೆ .. ಅದೇ ರೀತಿ,,, ಸಾಧ್ಯವಾದಷ್ಟು ಸುತ್ತಾಡಿ,,, ಅಲ್ಲಿನ ಜನರ ಅನುಭವಗಳನ್ನ , ಅವರ ಆಚರ ವಿಚಾರಗಳನ್ನ ತಿಳಿದು ಕೊಳ್ಳೋದಕ್ಕೆ ಪ್ರಯತ್ನ ಪಟ್ಟೇ.... ಒಂದು ತರ ವಿಚಿತ್ರ ಅನುಭವಗಳು .....

ಒಂದು ದಿನ ಅಲ್ಲಿನ zoo ನೋಡಬೇಕು ಅಂತ ಪ್ಲಾನ್ ಆಗಿತ್ತು,,, ಅದರ ಬಗ್ಗೆ ಮೊದಲೇ ಎಲ್ಲಾ ವಿವರಗಳನ್ನು ತೆಗೆದು ಕೊಂಡ ಇದ್ದೆ... ನಾನು ಇದ್ದ ಅಪಾರ್ಟ್ಮೆಂಟ್ ನಿಂದ ಕೇವಲ ೪ ಸ್ಟಾಪ್ (tube ನಲ್ಲಿ) ಇತ್ತು ಆ Zoo

, ಸೊ ಒಂದು ಸಂಡೇ ಅಲ್ಲಿಗೆ ಹೋದೆ... ಮಾಮೂಲಿ namma ಮೈಸೂರ್ zoo ತರ ಇರಬಹುದೇನೋ ಅಂದುಕೊಂಡ ಇದ್ದೆ... ಆದರೆ ನನ್ನ ನೀರಿಕ್ಷೆ ಸುಳ್ಳಾಗಿತ್ತು ..... ಇಡೀ ದಿನ ಸುತ್ತಾಡಿ ಸುತ್ತಾಡಿ... ಸಾಕಾಗಿ ಹೋಯ್ತು... ಅಸ್ಟು ನೀಟ್ ಆಗಿ maintain ಮಾಡಿದ್ದಾರೆ.... ಎಲ್ಲಾ ತರದ ಪ್ರಾಣಿ ... ಪಕ್ಷಿ,,,, ಹಾವುಗಳು,,, ಕೊನೆಗೆ ಕ್ರಿಮಿ (ಚಿಟ್ಟೆಗಳು,,,ಜೀಡ ..) ಎಲ್ಲವೂ ಇದ್ದವು,,,

ಅವೊತ್ತು ಸಂಡೇ ಅದ್ದರಿಂದ ತುಂಬಾ ರಶ್ ಇತ್ತು ,,, ಚಿಕ್ಕ ಚಿಕ್ಕ ಮಕ್ಕಳ ಸಮೇತ,,, ಫುಲ್ ಫ್ಯಾಮಿಲಿ ಅಲ್ಲಿಗೆ ಬಂದಿದ್ದರು,,,, ನಾನು ಫುಲ್ zone ಟಿಕೆಟ್ ತೆಗೆದುಕೊಂಡ ಇದ್ದೆ.. (ಬೋಟಿಂಗ್, ಫಿಶ್ ಗ್ಯಾಲರಿ,, snake ಗ್ಯಾಲರಿ ಎಲ್ಲಾ include ಆಗಿತ್ತು )

ಮೊದಲಿಗೆ ಎದುರಾಗಿದ್ದು,,, ಪಕ್ಷಿಗಳ ಲೋಕ,,,, ತುಂಬಾ ದೊಡ್ಡದಾದ ಜಾಗದಲ್ಲಿ,,, ಎಲ್ಲಾ ತರಹದ ಪಕ್ಷಿಗಳನ್ನ ಬಿಟ್ಟಿದ್ದರು,,,, ಒಂದು ಕಡೆ ನವಿಳುಗಲಂತೂ ರೋಡಿನಲ್ಲೇ ನಮ್ಮ ಪಕ್ಕದಲ್ಲೇ ಓಡಾಡಿಕೊಂಡ್ ಇದ್ದವು,,,, ಸಕತ್ ಆಗಿ ಇತ್ತು..... ಅಸ್ತು ಹತ್ತಿರದಿಂದ ನವಿಲನ್ನು ನೋಡೆ ಇರಲಿಲ್ಲ... ಆರಾಮವಾಗಿ .. ನಮ್ಮ ಅಕ್ಕ ಪಕ್ಕದಲ್ಲೇ ಓಡಾಡಿ ಕೊಂಡು ಇದ್ದವು,,, ಅದರ ಜೊತೆ ಆಟವಾಡಿ,,, ಆಮೇಲೆ,,ಅಲ್ಲಿಂದ snake ಲೋಕಕ್ಕೆ ಹೋದೆ,, ಅಬ್ಬ ಒಂದ ಎರಡ,,,,ಹಾವುಗಳು ಇದ್ದದ್ದು,,, ನಾನು ನೋಡೆ ಇರಲಿಲ್ಲ,,, ಅಷ್ಟು ತರಹದ ,,, ವಿಚಿತ್ರ ಹಾವುಗಳು ಇದ್ದವು,,, ಅದು color color ಬೇರೆ ಒಂದು ಕಡೆ ಹಳದಿ ಬಣ್ಣದ್ದು ಇದ್ದರೆ ಇನ್ನೊಂದು ಕಡೆ ಬೂದು,,, ಹಸಿರು,,,, ಕಂದು,,,, ಎಲ್ಲಾ ತರಹದ ಹಾವುಗಳು ಇದ್ದವು,,,,
ಅಲ್ಲಿಂದ ಮುಂದೆ,,,ಮೊಸಳಗೆಗಳ ಲೋಕ.,,,, ಚಿಕ್ಕ ಚಿಕ್ಕ ಮೊಸಳೆ ಇಂದ ಹಿಡಿದು ದೊಡ್ಡ ಗಾತ್ರದ ಮೊಸಳೆಗಳು,,,, ಅಬ್ಬ....!!!!
ಅದಾದಮೇಲೆ,,, ಆಮೆ ..... ಒಂದು ದೊಡ್ಡ ಗಾತ್ರದ,,,, ತುಂಬಾ ವರುಷ ಹಾಳೆಯದಾದ ಎರಡು ಆಮೆ ಗಳು ಇದ್ದವು,,,, ಅದನ್ನ ನೋಡುತ್ತಿದ್ದರೆ ಮೈ ಜುಮ್ ಅಂತ ಇತ್ತು....
ಅಲ್ಲಿಂದ ಹೊರಗಡೆ ಬಂದ ಮೇಲೆ ಹಿಮ ಕರಡಿಯ ಲೋಕ... ಒಂದು ದೊಡ್ಡ ಜಾಗದಲ್ಲಿ,,,, ಅಷ್ಟು ಕೋಲ್ಡ್ ಆಗಿ,,, ಅದಕ್ಕೆ ಬೇಕಾಗೋ ರೀತಿ ನೀಟ್ ಆಗಿ ಮನೆಯನ್ನ ಮಾಡಿದ್ದರು,, ಪಾಪ ನಾನು ಹೋದಾಗ ಅದು ಎರಡು ಕಾಲು ಚಾಚಿಕೊಂಡ್ ನಿದ್ದೆ ಮಾಡ್ತಾ ಇದ್ದು,,,

ಅಲ್ಲಿಂದ ಮುಂದೆ,,, ಕರಡಿ..... ಅದರ ಗತ್ತೇ ಬೇರೆ....ಅಲ್ಲಿಂದ ಇನ್ನು ಮುಂದೆ ಹೋದರೆ ಸಿಂಹ ಹಾಗು ಹುಲಿಗಳ ಲೋಕ,,, ಮಧ್ಯಾನ ಆದದ್ದರಿಂದ ಎಲ್ಲಾ ನಿದ್ದೆ ಮಾಡುತ್ತಿದ್ದವು... ಅಲ್ಲೇ ಹತ್ತಿರದಲ್ಲೇ,,,ಇದ್ದವು ಆನೆಗಳು..... ಅವಕ್ಕೆ ತಿಂಡಿ ಕೊಡೋದಕ್ಕೆ ಎಲ್ಲರೂ ತಾವು ತಂದಿದ್ದ ತಿಂಡಿ ಯನ್ನು ಎಸೆಯುತ್ತ ಇದ್ದರು,,, ಆ ಚಾಲಾಕಿ ಆನೆಗಳು,,, ಸರ್ಕಸ್ ಮಾಡುತ್ತಾ ಆಟವಾಡಿಕೊಂಡು ಅದನ್ನ ತಿನ್ನುತ್ತ ಇದ್ದವು,,,,,


ಚಾಲಾಕಿನ ಆನೆ ಕೆಳಗೆ ಬಿದ್ದಿದ್ದ ಆಹಾರವನ್ನ ಎರಡು ಕಾಲಿನಿಂದ ತಿನ್ನುತ್ತ ಇರೋದು ...
                               ಅಲ್ಲಿ ಆಡಿಸುತ್ತಿದ್ದ ಹದ್ದುಗಳ ಆಟವನ್ನು ಇದು ನೋಡುತ್ತಾ ಇರುವ ಜನ ..


ನಾನು ನೋಡಿರದ ಎಸ್ಟೋ ತರಹದ ಪ್ರಾಣಿಗಳನ್ನು ಅಂದು ನೋಡಿದೆ,,, ನನಗೆ ತುಂಬಾ ಇಷ್ಟ ಆಗಿದ್ದೆ ಅಂದರೆ,,, ಚಿಟ್ಟೆಗಳ ಲೋಕ... ಹಾಗೆ ಕ್ರಿಮಿ ಕೀಟಗಳ ಲೋಕ... ಕ್ಷಮಿಸಿ ಎಲ್ಲಾ ಸತ್ತ ಚಿಟ್ಟೆ, ಮತ್ತು ಕ್ರಿಮಿಗಳನ್ನು,, ಒಂದು ಚೂರು ಹಾಳಾಗದ ಹಾಗೆ ಎಷ್ಟು ಚೆನ್ನಾಗಿ ಜೋಡಿಸಿ ಇಟ್ಟಿದ್ದರು ಗೊತ್ತ... ಮತ್ತೆ ಅವುಗಳ ಬಗ್ಗೆ ಅದ್ಬುತ ಮಾಹಿತಿ ಕೂಡ.... ಅದನ್ನು ನೋಡಿಕೊಂಡು ಮುಂದೆ ಬಂದರೆ ಚಿಕ್ಕದಾದ ಒಂದು ಮಿನಿ ಫಾಲ್ಸ್ ಅನ್ನು ಸೃಷ್ಟಿಸಿದ್ದರು ... ಅಲ್ಲಿಂದ ಮುಂದೆ ಬಂದೆ,,,,ಜಿರಾಫೆ ಮತ್ತೆ ಕಾದು ಮೃಗಗಳ ಜಾಗ.... ಅಲ್ಲಿಯೇ ಎಲ್ಲಾ ಪ್ರಾಣಿಗಳಿಗೂ ಕೊಡುವ ಫುಡ್ ಮಾರುತ್ತ ಇದ್ದರು,,, ರೆಡಿ ಮೇಡ್ food ತರ ... ಎಲ್ಲರ ಕೈನಲ್ಲೂ ಅದು ಇತ್ತು,, ಹೊರಗಡೆ ಇಂದ ತಂದ ತಿಂಡಿ ಪದಾರ್ಥ ಗಳನ್ನ ಕೊಡುವುದಕ್ಕೆ ಅವಕಾಶ ಇರಲಿಲ್ಲ....


ಮಧ್ಯಾನ ಆಗಿತ್ತು ಹೊಟ್ಟೆ ಹಸಿವು,,,, ನನಗೆ ಮೊದಲೇ ಗೊತ್ತಿತು ಅಲ್ಲಿ ಏನು ಸಿಗೋದಿಲ್ಲ ಅಂತ.... ಅದಕ್ಕೆ ಒಂದೆರಡು ಸೇಬು ಮತ್ತೆ ಬಾಲೆ ಹಣ್ಣನ್ನ ಜೋತೆನಲ್ಲಿ ತೆಗೆದು ಕೊಂಡು ಹೋಗಿದ್ದೆ... ಅದನ್ನ ಕುಡಿತು,, ಒಂದು ದೊಡ್ಡ bottle ಪೆಪ್ಸಿ ಕುಡಿದು ಹೊಟ್ಟೆ ತುಂಬಿಸಿ ಕೊಂಡೆ,,,,

ಅಲ್ಲಿಂದ ಸಂಜೆವರೆವಿಗು ಸುತ್ತಾಟ ನೆ ಆಗಿತ್ತು..... ಸಂಜೆವರೆವಿಗು ಇದ್ದರೆ boat ನಲ್ಲಿ ಹೋಗಿ ಹತ್ತಿರದಿಂದ ನೀರಿನ ಪ್ರಾಣಿಗಳನ್ನು ನೋಡಲು ಆಗಲಿಲ್ಲ... ತುಂಬಾ ರಶ್ ಇತ್ತು,,, ಅದೊಂದು ಮಿಸ್ ಆಯಿತು ಅಂತ ಇವಗ್ಲೂ ಬೇಜಾರ್ ಇದೆ.....

ಸಂಜೆ ತನಕ ಹಾಯಾಗಿ ಸುತ್ತಾಡಿಕೊಂಡು,,,,ನನ್ನ ರೂಂ ಸೇರಿದಾಗ ರಾತ್ರಿ ೮ ....
 ಒಂದು ಮಗು ತಾನು ತಂದಿದ್ದ ತಿಂಡಿ ಅನ್ನು ಚಿಕ್ಕ ಒಂಟೆಗೆ ತಿನ್ನುಸುತ್ತ ಇರುವುದು  
 ಅಪರೂಪಕ್ಕೆ ಸೆರೆಸಿಕ್ಕ ಒಂಟೆಯ ...... !!!!
 ಚಿಟ್ಟೆಗಳ ಲೋಕ..... ಎಷ್ಟು ತರಹದ ಚಿಟ್ಟೆ ಅನ್ನುತ್ತಿರ.... ವಹ್ಹ್...


 ಕೀಟಗಳ ಲೋಕ....


ಅಲ್ಲೇ ಒಳಗಡೆ ಕೃತಕವಾಗಿ ಮಾಡಿರುವ ಚಿಕ್ಕ ಫಾಲ್ಸ್

 


ಎಲ್ಲ  ಫೋಟೋಗಳನ್ನು ನಾನು ನನ್ನ ಪಿಕಾಸ ಆಲ್ಬಮ್ ನಲ್ಲಿ ಅಪ್ಲೋಡ್ ಮಾಡಿದ್ದೇನೆ,,, ನೋಡಿರಿ

2 comments:

  1. ಗುರು,
    ತುಂಬ ಸುಂದರವಾದ ಚಿತ್ರಗಳು, ಉತ್ತಮ ವಿವರಣೆ.
    ಧನ್ಯವಾದಗಳು.

    ReplyDelete