Wednesday, March 10, 2010

ನನ್ನಾಸೆ,,,,!!!!

ನನ್ನಾಸೆ,,,,


ಮುಂಜಾವಿನ ಮಂಜಿನ ಬಿಂದುಗಳ ಜೊತೆ
ಆಟವಾಡುವ ಅಸೆ .....!!!

ಕೊಡಚಾದ್ರಿ ಬೆಟ್ಟದ ಮೇಲಿನ ಬಿಳಿ ಮೇಘಗಳ
ಜೊತೆ ಹಾರಾಡುವಾಸೆ !!!!

ಸಹ್ಯಾದ್ರಿಯ ಹಸಿರು ವನಗಳ ನಡುವೆ...
ಸಣ್ಣಗೆ ಬೀಳುವ ಮಳೆಯ ಜೊತೆ ಜೊತೆಯಲಿ...
ನಲಿದಾಡುವಾಸೆ.......!!!

ಚುಮು ಚುಮು ಚಳಿಗಾಲದಲ್ಲಿ
ಮುನ್ನಾರಿನ ಬೆಟ್ಟದ ತುದಿಯಲ್ಲಿ
ದಟ್ಟ ಮಂಜಿನ ನಡುವಿನಲ್ಲಿ...
ನಡೆದಾಡಿಕೊಂಡು ಚಾ ಕುಡಿಯುವಾಸೆ....!!!!

ಆಗುಂಬೆಯ ಸವಿ ಸಂಜೆಯಲ್ಲಿ....
ಮುಳುಗುತಿರುವ ಕೆಂಪು ಸೂರ್ಯನನ್ನು
ದೂರದಿಂದಲೇ ಮುಟ್ಟುವ ಅಸೆ.....!!!!

ಜಟಿ ಜಟಿ ಸಣ್ಣನೆ ಮಳೆಯ ನಡುವೆ
ಮಲೆನಾಡ ಪ್ರಕೃತಿಯ ಮಡಿಲಲ್ಲಿ
ಒಬ್ಬನೇ ಡ್ರೈವ್ ಮಾಡಿಕೊಂಡು ಹೋಗುವಾಸೆ ....!!!!

Saturday, March 6, 2010

ಕಸದಿಂದ ಕಲೆ -- Tyre Art !!!!!

ಕಸದಿಂದ ರಸ... ಅಂದರೆ ಇದೆ ಅಲ್ವ.....ಇಲ್ಲಿ ನೋಡಿ,,, ಯಾರೋ ಕಲಾವಿದರು .. ಹಳೆಯ ಬಳಸಿದ ಟೈರ್ ನಲ್ಲೆ ಯಾವ ರೀತಿಯ ಕಲಾಕ್ರುತಿಗಳನ್ನ ಮಾಡಿದ್ದಾರೆ ಅಂತ,,, ಇದನ್ನು ಮಾಡಿರುವವರ ಬಗ್ಗೆ ಅಷ್ಟೊಂದು  information ಸಿಗಲಿಲ್ಲ.
ಆದರು,, ಬೇಡವಾಗಿರುವ ವಸ್ತುಗಳನ್ನ ಉಪಯೋಗಿಸಿಕೊಂಡು ಈ ರೀತಿ ಮಾಡಿರುವ ಅದ್ಬುತ ಕಲೆಗೆ,, ಭೇಷ್ ಎನ್ನಲೇ ಬೇಕು........