Thursday, October 8, 2009

ಬಿಲ್ಡಿಂಗ್ ಗೆ ಪೇಯಿಂಟ್ ಮಾಡೋದು ಅಂದ್ರೆ ಇದೇನಾ ?

ನೀವು ಗಮನಿಸಿರಬೇಕು, ಮೆಜೆಸ್ಟಿಕ್ ಸುತ್ತ ಮುತ್ತಲಿನ ಗೋಡೆಗಳ ಮೇಲೆ ಇತ್ತೀಚಿಗೆ ಸೆನೆಮಾ ವಾಲ್ ಪೋಸ್ಟ್ ಬದಲಾಗಿ, ನಮ್ಮ ಕರ್ನಾಟಕದ ಸಂಸ್ಕೃತಿ ಬಿಂಬಿಸುವ ಸುಂದರವಾದ ಪೇಂಟಿಂಗ್ ಚಿತ್ರಗಳನ್ನು ಬಿಡಿಸ್ತಾ ಇದ್ದಾರೆ ...ಹೀಗೆ ಬಿಡಿಸುವುದಕ್ಕೆ BBMP ನವರು ಎಸ್ಟೋ ಜನ ಕಲಾವಿದರಿಗೆ ಅನುಕೂಲ ಮಾಡಿ ಕೊಟ್ಟಿದ್ದರಂತೆ.. ಖಂಡಿತ ಇದೊಂದು ಒಳ್ಳೆಯ ಬೆಳವಣಿಗೆ..

ನಿಜಕ್ಕೂ BBMP ಗೆ ಧನ್ಯವಾದ ಹೇಳಬೇಕು .ಬರಿ ಕೊಳಕು ಸೆನಿಮಾ posters ನಿಂದ ನಗರದ ಸೌಂದರ್ಯ ಹಾಳಾಗಿ ಹೋಗ್ತಾ ಇತ್ತು . ಮೆಜೆಸ್ಟಿಕ್ ಹಾಗು ಸುತ್ತಮುತ್ತಲಿನ ಗೋಡೆಗಳ ಮೇಲೆ, ನಮ್ಮ ಸಂಸ್ಕೃತಿ , ಕರ್ನಾಟಕದ ಪ್ರಸಿದ್ದ ಪ್ರವಾಸ ತಾಣಗಳ ಪರಿಚಯ ಮಾಡಿಕೊಟ್ಟಿರುವುದು ಸ್ವಾಗತಾರ್ಹ,,
ಬಹುಷಃ ನಮ್ಮ ಇಂಡಿಯಾ ದಲ್ಲಿ ಮೊದಲ ಸಿಟಿ ಅಂತ ಕಾಣುತ್ತೆ ನಮ್ಮ ಬೆಂಗಳೂರು ಈ ರೀತಿ ಪೇಂಟಿಂಗ್ ಗಳನ್ನು ಮಾಡಲು ಹೊರಟಿರುವುದು, ಏನೇ ಇರಲಿ ಇದಂತು ಒಂದು ಒಳ್ಳೆಯ ಹೆಜ್ಜೆ, ಇದನ್ನು ಹಾಗೆ ಕಾಪಾಡಿ ಕೊಂಡು ಬರುವ ಜವಾಬ್ದಾರಿ ನಮ್ಮ ಬೆಂಗಳೂರಿನ ಜನೆತೆಯ ಮೇಲು ಇದೆ . ಬರಿ ಸ್ವಲ್ಪ ದಿನಕ್ಕೋಸ್ಕರ ಉಪಯೋಗಿಸಿ ಹಾಳು ಮಾಡದೇ. ಚೆನ್ನಾಗಿ ಕಾಪಾಡಿಕೊಂಡು ಬರುವ ಜವಾಬ್ದಾರಿ ನಮ್ಮ ಬೆಂಗಳೂರಿಗರ ಮೇಲೆ ಇದೆ....
ಇದೆ ವಿಷಯವಾಗಿ ಏನನ್ನೋ ಹುಡುಕ್ತಾ ಇರಬೇಕಾದ್ರೆ ಬೇರೆ ದೇಶದಲ್ಲಿ ದೊಡ್ಡ ದೊಡ್ಡ ಬಿಲ್ಡಿಂಗ್, ಕಟ್ಟಡಗಳಿಗೆ ಪೇಯಿಂಟ್ ಮಾಡಿರುವ ಕೆಲವು ಅಪರೂಪದ ಚಿತ್ರ ಗಳು ಸಿಕ್ತು,, . ಒಂದೊಂದು ಕಟ್ಟಡದಲ್ಲಿನ ಪೇಂಟಿಂಗ್ ಗಳನ್ನೂ ನೋಡ್ತಾ ಇರಬೇಕಾದ್ರೆ. ಅಚ್ಚರಿ ಎನಿಸುತ್ತದೆ , " ಒಂದು ಬಿಲ್ಡಿಂಗ್ ಗೆ ಈ ರೀತಿನು ಪೇಯಿಂಟ್ ಮಾಡ್ತಾರೆ ಅಂತ ಗೊತ್ತಿರಲಿಲ್ಲ... "ಕೆಳಗಿರುವ ಕೆಲವು ಚಿತ್ರಗಳನ್ನು ನೋಡಿ, ಎಲ್ಲೊ ಒಂದೇ ಒಂದು ಕಡೆ ಮಾಡಿದ್ದಲ್ಲ.. ಜರ್ಮನಿ, ಚೀನಾ, ಅಮೆರಿಕ, ಹೀಗೆ ಕೆಲವು ದೇಶದ ಆಯ್ದ ಸುಂದರ ಬಿಲ್ಡಿಂಗ್ ಪೇಂಟಿಂಗ್ ಇದು... ಯಾವ ಕಲೆಗಾರ ಅಥವಾ ಪುಣ್ಯಾತ್ಮ ಮಾಡಿ maintain ಮಾಡ್ತಾ ಇದ್ದರೋ ಗೊತ್ತಿಲ್ಲ . ಆದರೆ ಒಂದು ಒಳ್ಳೆಯ ಕಲಾ ಸೌಂದರ್ಯದ ಕಟ್ಟಡ ವಾಗಿ ಜನ ಮನಸೂರೆ ಗೊಳ್ಳುತ್ತಾ ಇದೆ . ಹಾಗು ಇಂಥ ಕಟ್ಟಡಗಳು ಅಲ್ಲಿನ ಸೌಂದರ್ಯವನ್ನು ಹೆಚ್ಚಿಸುತ್ತಾ ಇದೆಯಂತೆ...

ಇದೆ ರೀತಿ ನಮ್ಮ ಬೆಂಗಳೂರಿನಲ್ಲೂ ಬಿಡಿಸುತ್ತಿರುವ ಗೋಡೆ ಪೇಂಟಿಂಗ್ ಗಳು ನಮ್ಮ ನಗರದ ಸೌಂದರ್ಯವನ್ನು ಹೆಚ್ಚಿಸುತ್ತದೆ ಅನ್ನುವುದು ನನ್ನ ನಂಬಿಕೆ...

ಇನ್ನು ಹೆಚ್ಚಿಗೆ ಇದೆ ರೀತಿ ಕಲೆಗೆ ಪ್ರೋಸ್ಥಾಹ  ಸಿಕ್ಕು, ನಮ್ಮ ಬೆಂಗಳೂರಿನ ಎಲ್ಲ  ಖಾಲಿ ಗೋಡೆಗಳ ಮೇಲೂ ನಮ್ಮ ಸಂಸ್ಕೃತಿ ಯನ್ನು ಬಿಂಬಿಸುವ ಥರ ಒಳ್ಳೆಯ ಪೇಂಟಿಂಗ್ ಗಳನ್ನೂ ಮಾಡಿದರೆ ಎಷ್ಟು  ಚೆನ್ನಾಗಿ ಇರುತ್ತೆ ..ಅಲ್ವ ..


 





















































17 comments:

  1. ಹೌದು, ಬಿ.ಬಿ.ಎ೦.ಪಿ.ಯವರ ಕ್ರಮ ನಿಜಕ್ಕೂ ಶ್ಲಾಘನೀಯ. ಇದು ಬೇರೆ ನಗರಪಾಲಿಕೆಗಳಿಗೂ ಮಾದರಿಯಾಗಬೇಕು. ಅ೦ತೆಯೇ ನೀವು ತೋರಿಸಿರುವ ಇತರೆ painting ಚಿತ್ರಗಳು superb ಆಗಿವೆ.

    ReplyDelete
  2. ಗುರು,
    ಬೆ೦ಗಳೂರಿನಲ್ಲಿ ಆ ರೀತಿ ಮಾಡುತ್ತಾ ಇದ್ದಾರೆ ಎ೦ದು ತಿಳಿದು ಸ೦ತೊಷವಾಯಿತು . ಬೇರೆ ದೇಶದ ಚಿತ್ರಗಳು ಸು೦ದರವಾಗಿ ಇದೆ .
    ವ೦ದನೆಗಳು .

    ReplyDelete
  3. ಗುರು,
    ಎಲ್ಲಾ ಪೈಂಟಿಂಗ್ಸ್ ಸೂಪರ್...
    BBMP ಒಳ್ಳೆ ಕೆಲಸ ಮಾಡ್ತಾ ಇದೆ...
    ಮಹೇಶ್!

    ReplyDelete
  4. This comment has been removed by the author.

    ReplyDelete
  5. ನಿಮ್ಮ ಹುಡುಕಾಟದ ಫಲ ನಮ್ಮ ಕಣ್ಣ ಮುಂದಿದೆ. ನಿಮ್ಮ ಬ್ಲಾಗ್ ವಿಶೇಷ ಈ ಹೊಸತನ. ಅದು ಹೀಗೇ ಮುಂದುವರೆಯಲಿ

    ReplyDelete
  6. ಧನ್ಯವಾದಗಳು ಪರಾಂಜಪೆ ರವರೆ

    ReplyDelete
  7. ಹೌದು ರೂಪ, ಸಿನಿಮಾ ಪೋಸ್ಟರ್ಗಳನ್ನು ತೆಗೆದು ಹಾಕಿ, ಖಾಲಿ ಇರುವ ಗೋಡೆಗಳ ಮೇಲೆಲ್ಲಾ, ಚಿತ್ರ, ಪೇಂಟಿಂಗ್ ಬಿಡಿಸುವುದಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ,, ಇದು ಒಳ್ಳೆ ಬೆಳವಣಿಗೆ.. ಹೀಗೆ ಮುಂದುವರಿಸಿ,, ಸ್ವಚತೆಯನ್ನು ಕಾಪಾಡಿ ಕೊಂಡು ಬರಬೇಕು...
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

    ReplyDelete
  8. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಮಹೇಶ್

    ReplyDelete
  9. ಕಲಾವಿದರನ್ನು ಪ್ರೋತ್ಸಾಹಿಸಿ, ನಮ್ಮ ಸಂಸ್ಕೃತಿಯನ್ನು ಜನರಿಗೆ ಪರಿಚಯಿಸುತ್ತಿರುವ BBMP ಗೆ ನಾವೆಲ್ಲರೂ ಧನ್ಯವಾದ ಹೇಳಬೇಕು

    ReplyDelete
  10. ಗುರು,

    ಬಿಬಿಎಂಪಿ ರವರ ಕೆಲಸ ನನಗಂತೂ ತುಂಬಾ ಇಷ್ಟವಾಯಿತು. ಹಾಗೆ ಗೋಡೆ ಚಿತ್ರ ಬರೆಯುವ ಕಲಾವಿದರ ಚಿತ್ರಗಳನ್ನು ತೆಗೆದಿದ್ದೇನೆ.
    ಮತ್ತೆ ನೀವು ಇಲ್ಲಿ ಕೊಟ್ಟಿರುವ ಗೋಡೆ ಚಿತ್ರಗಳಂತೂ ಒಂದಕ್ಕಿಂತ ಒಂದು ಅದ್ಬುತ. ನನ್ನ ಮನಸ್ಸಿಗೆ ಬೇಸರವಾದಾಗಲೆಲ್ಲಾ ನಿಮ್ಮ ಬ್ಲಾಗಿಗೆ ಬಂದುಬಿಡುತ್ತೀನಿ. ಹಳೆಯ ಯಾವುದೇ ಪೋಸ್ಟಿಂಗ್ ನೋಡಿದರು ಮನಸ್ಸಿಗೆ ಉಲ್ಲಾಸವೆನಿಸಿಬಿಡುತ್ತೆ...ಅದಕ್ಕಾಗಿ ಥ್ಯಾಂಕ್ಸ್...ಹೀಗೆ ನಿಮ್ಮ ಕಾಯಕ ಸೇವೆ ಮುಂದುವರಿಯಲಿ...

    ReplyDelete
  11. ಗುರು ಅವರೇ...

    ತು೦ಬಾ ಚೆನ್ನಾಗಿದೆ... ಬೆ೦ಗಳೂರಿನಲ್ಲೂ ಇದೇ ತರಹ ಮಾಡುತ್ತಿದ್ದಾರೆ ಅ೦ತ ತಿಳಿದು ಖುಷಿ ಆಯಿತು...ಅದನ್ನು ನೋಡಲು ಕಾತುರನಾಗಿದ್ದೇನೆ..

    ReplyDelete
  12. ಗುರು ನೀವಾದಿರಿ ಶುರು
    ಮತ್ತೆ..ಹುಡುಕಾಟ..ಮತ್ತೆ ಒಂದು ಮಂಜಿಲ್
    ವಿಭಿನ್ನ ನಿಮ್ಮ ಬ್ಲಾಗ್ ಪೋಸ್ಟ್ ಹೀಗೂ ಒಂದು ದಿಲ್
    ನನಗೆ ನೋಡಬೇಕೆನಿಸಿದೆ ಬೆಂಗಳೂರಿನ ಈ ಗೋಡೆಗಳನ್ನು....ಮುಂದಿನ ನಿಮ್ಮ ದಿಲ್..ಎಲ್ಲಿಗೆ...ಕರೆದೊಯ್ಯುತ್ತೋ..???!!

    ReplyDelete
  13. ಹೌದು ಶಿವ ಪ್ರಕಾಶ್,, ನಿಜಕ್ಕೂ ಇದೊಂದು ಒಳ್ಳೆ ಬೆಳವಣಿಗೆ...

    ReplyDelete
  14. ಶಿವೂ, ಒಹ್ ನೀವು ಅವರ ಚಿತ್ರಗಳನ್ನು ತೆಗಿದಿದ್ರ.. ನಾನು ತೆಗೆದು ನನ್ನ ಬ್ಲಾಗ್ನಲ್ಲಿ ಹಾಕಬೇಕೆಂದು ಕೊಂಡಿದ್ದೆ.. ಆದರೆ ಸಮಯದ ಅಭಾವ,, ತೆಗೆದು ಹಾಕಲಾಗಲಿಲ್ಲ..
    ನಿಮ್ಮ ಬರಹದ ಮೂಲಕ. ಚಿತ್ರಗಳ ಸಮೇತ ನಿಮ್ಮ ಬ್ಲಾಗ್ ನಲ್ಲಿ ಹಾಕಿ.. ಚೆನ್ನಾಗಿ ಇರುತ್ತೆ..
    ಗುರು

    ReplyDelete
  15. ಹೌದು ಸುದೇಶ್,, ಒಮ್ಮೆ ಮೆಜೆಸ್ಟಿಕ್ ನ ಸುತ್ತ ಮುತ್ತ ಓಡಾಡಿ ನೋಡಿ.. ಎಲ್ಲ ಕಡೆ ಇವಾಗ ಚಿತ್ರ ಗಳದ್ದೇ ಕಾರುಬಾರು,,,
    ಪ್ರತಿಕ್ರಿಯೆಗೆ ಧನ್ಯವಾದಗಳು

    ReplyDelete
  16. ಹಾ ಹಾ ಏನ್ ಜಲಾನಯನ ಸರ್,, ನಂ ಮೇಲೆ ಕವನ ನೆ ಬರೆದುಬಿತ್ ಇದ್ದೀರಾ...

    ReplyDelete
  17. ಗುರು,
    ಎಲ್ಲಾ ಚಿತ್ರಗಳು ಸು೦ದರವಾಗಿ ಇದೆ!! ಬೆ೦ಗಳೂರಿನಲ್ಲಿ ಈ ರೀತಿ ಮಾಡುತ್ತಾ ಇದ್ದಾರೆ ಎ೦ದು ತಿಳಿದು ಖುಶಿ ಆಯ್ತು.
    ನೀವು ಅಥವಾ ಶಿವು ಅವರು ಅವುಗಳ ಫೋಟೋ ಹಂಚಿಕೊಳ್ಳಿ:)

    ವ೦ದನೆಗಳು

    ReplyDelete