Monday, May 15, 2023

Young Birders ... ಚಿಕ್ಕ ಮಕ್ಕಳ ಪಕ್ಷಿ ವೀಕ್ಷಣೆ ಹವ್ಯಾಸ.


ಯಂಗ್ ಬರ್ಡ್ರ್ಸ್  ... ಚಿಕ್ಕ ಮಕ್ಕಳ ಪಕ್ಷಿ ವೀಕ್ಷಣೆ ಹವ್ಯಾಸ.


Early Bird – Connecting children to birds 

ಇವರ ಸಹಯೋಗದಲ್ಲಿ ಮಕ್ಕಳನ್ನು ಪರಿಸರ ಮತ್ತು ಪಕ್ಷಿ ವೀಕ್ಷಣೆ ಗೆ ಪ್ರೋತ್ಸಹಿಸಲು ಒಂದು ವೇದಿಕೆ ಕಲ್ಪಿಸಲಾಗಿದೆ.  ಇದರ ಒಂದು ಭಾಗವಾಗಿ ಕಳೆದ ಭಾನುವಾರ .. ಪಕ್ಷಿ ವೀಕ್ಷಣೆ ಮತ್ತು ಪಕ್ಷಿಗಳ ವಾಸಸ್ಥಾನ ಇವುಗಳ ಬಗ್ಗೆ ಮಾಹಿತಿ ನೀಡಲು ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ ಒಂದು ಕಾರ್ಯಕ್ರಮ ಆಯೋಜಿಸಿದ್ದೆವು..

ಸುಮಾರು ೧೮ ರಿಂದ ೨೦ ಮಕ್ಕಳು ಇದರಲ್ಲಿ ಪಾಲ್ಗೊಂಡು ಅರ್ಬನ್ habiat  ಅಂದರೆ ಮನುಷ್ಯ ವಾಸಿಸುವ ಪ್ರದೇಶದಲ್ಲಿ ನೆಲೆಸಿರುವ ಪಕ್ಷಿಗಳು , ಇದರ ದಿನಚರಿ, ಆಹಾರ ಹುಡುಕುವಿಕೆ, ಗೂಡು ಕಟ್ಟುವಿಕೆ... ಮುಂತಾದ ಕೆಲವು ವಿಸ್ಮಯ ಸಂಗತಿಗಳ ಬಗ್ಗೆ ಪ್ರಾತ್ಯಕ್ಷಿಕೆ ಇಂದ ಕೂಡಿದ ಒಂದು ಅಬೂತಪೂರ್ವ ಕಾರ್ಯಕ್ರಮದಲ್ಲಿ ಈ ಪುಟ್ಟ ಮಕ್ಕಳು ಸಂತಸ ಪಟ್ಟರು.
 ಒಂದು ಅಥವಾ ಎರಡು ಪಕ್ಷಿಗಳ ಬಗ್ಗೆ ಕೂಲಂಕುಷವಾಗಿ ತಿಳಿದು ಕೊಂಡು  ಒಂದೆರಡು ಗಂಟೆ ಅದರ ಬಗ್ಗೆ , ಆ ಹಕ್ಕಿಗಳ ಚಟುವಟಿಕೆ ಬಗ್ಗೆ ತಿಳಿಯುತ್ತ ಪರೋಕ್ಷವಾಗಿ ನೋಡುತ್ತ ಆನಂದ ಪಟ್ಟರು.

ಮೊದಲಿಗೆ ಒಂದು ಸಣ್ಣ ಪರಿಚಯ ಸಮಾರೋಪ ಆದಮೇಲೆ ಬೆಂಗಳೂರಿನ ಬೇರೆ ಬೇರೆ ಮೂಲೆ ಇಂದ ಬಂದಿದ್ದ ಮಕ್ಕಳನ್ನು ಎರಡು ಗುಂಪು ಮಾಡಲಾಯಿತು.. 

ಆಮೇಲೆ ಅವರಿಗೆ ಒಂದು ಕಡೆ ಕುಳಿತು ತನ್ನ ಸುತ್ತ ಮುತ್ತ ಇರುವ ಪರಿಸರ, ಮರ ಗಿಡ, ಹಕ್ಕಿ, ಮನುಷ್ಯರು. ಎಲ್ಲವನ್ನು ನೋಡಿಕೊಂಡು ಒಂದು ಚಿತ್ರ ಬರೆಯಲು ಹೇಳಿದ್ದೆವು ..  ಅವರು ಏನು ನೋಡಿ ..ಅವರದೇ ಇಮ್ಯಾಜಿನೇಶನ್ ನಲ್ಲಿ ಬರೆದಿದ್ದ ಪುಟ್ಟ ಚಿತ್ರಗಳು ತುಂಬಾ ಚೆನ್ನಾಗಿ ಬಂದಿದ್ದೆವು . ಅವಗಳನ್ನು ವರ್ಣಿಸಿದ ಪರಿ.. ಅವರು ಪರಿಸರವನ್ನು ಅರ್ಥ ಮಾಡಿಕೊಂಡ ರೀತಿ.. ಅದ್ಬುತ..

ಅದಾದ ಮೇಲೆ ನಮ್ಮ ಬೆಂಗಳೂರಿನ ಹೆಮ್ಮೆಯ ಕಬ್ಬನ್ ಪಾರ್ಕ್ ನಲ್ಲಿ ಸುತ್ತಾಡಿ  ಪಕ್ಕದಲ್ಲೇ ಇದ್ದ ಒಂದು ಚಿಕ್ಕ ಪಾಂಡ್ ..ನೀರಿನ ಕೊಳ ಇದರಲ್ಲಿ ಕಾಣಿಸುತ್ತ ಇದ್ದ ಕೆಲವು ಪಕ್ಷಿಗಳ ನೋಡಿ ಅದರ ದಿನಚರಿ ನೋಡಿ ಆನಂದ ಪಟ್ಟರು.  pond Heron ನೀರಿನ ಬಕ , water hen (ಹುಂಡು ಕೋಳಿ) ಮೈನ, ಗಿಳಿ  ಇವುಗಳನ್ನು ಹತ್ತಿರದಿಂದ ನೋಡಿ ಸಂಭ್ರಮ ಪಟ್ಟರು.  

ಇದಾದ ಬಳಿಕ ಒಂದು ಹತ್ತಿ ಮರದ ಕೆಳೆಗೆ ಕುಳಿತು ಅವರು ನೋಡಿದ ಪಕ್ಷಿಗಳ ಸಂಪೂರ್ಣ ಪರಿಚಯ ಮಾಡಿಕೊಳ್ಳುತ್ತ ಇರುವಾಗ  ಅದೇ ಮರದ ಮೇಲೆ ಒಂದು Black Kite - ಹದ್ದು ಇವುಗಳ ಗೂಡು ಕಟ್ಟುವ ವಿಧಾನ  ಗಮನ ಸೆಳೆಯಿತು...

ಒಂದೊಂದೇ ಮರದ ಕಡ್ಡಿಗಳನ್ನು ತಂದು ತನ್ನ ಸಂಗಾತಿಗೆ ಕೊಡುತ್ತ ಗೂಡು ಕಟ್ಟುತ್ತ್ತ ಇದ್ದ ದೃಶ್ಯ ಅದ್ಭುತವಾಗಿ ಇತ್ತು . 

ಇದರ ನಡುವೆ ಪುಟ್ಟ ಮಕ್ಕಳ ತಲೆಹರಟೆ ಪಶ್ನೆಗಳು ...ಅವರ ಆಟೋಟ...ಒಂದು ರೀತಿ ಖುಷಿ ಕೊಡುತ್ತ ಭಾನುವಾರದ ಮುಂಜಾವು ಕಳೆದದ್ದೇ ಗೊತ್ತಾಗಲಿಲ್ಲ 

Special Thanks for organising from Early bird side 

Misha Bansal, Amruta padgaonkar, saniya, 

More information and links https://www.early-bird.in/

Photo and video -  Guruprasad

ಇದರ ವಿಡಿಯೋ ಲಿಂಕ್ 

















@earlybirdindia

No comments:

Post a Comment