Early Bird – Connecting children to birds
ಇವರ ಸಹಯೋಗದಲ್ಲಿ ಮಕ್ಕಳನ್ನು ಪರಿಸರ ಮತ್ತು ಪಕ್ಷಿ ವೀಕ್ಷಣೆ ಗೆ ಪ್ರೋತ್ಸಹಿಸಲು ಒಂದು ವೇದಿಕೆ ಕಲ್ಪಿಸಲಾಗಿದೆ. ಇದರ ಒಂದು ಭಾಗವಾಗಿ ಕಳೆದ ಭಾನುವಾರ .. ಪಕ್ಷಿ ವೀಕ್ಷಣೆ ಮತ್ತು ಪಕ್ಷಿಗಳ ವಾಸಸ್ಥಾನ ಇವುಗಳ ಬಗ್ಗೆ ಮಾಹಿತಿ ನೀಡಲು ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ ಒಂದು ಕಾರ್ಯಕ್ರಮ ಆಯೋಜಿಸಿದ್ದೆವು..
ಮೊದಲಿಗೆ ಒಂದು ಸಣ್ಣ ಪರಿಚಯ ಸಮಾರೋಪ ಆದಮೇಲೆ ಬೆಂಗಳೂರಿನ ಬೇರೆ ಬೇರೆ ಮೂಲೆ ಇಂದ ಬಂದಿದ್ದ ಮಕ್ಕಳನ್ನು ಎರಡು ಗುಂಪು ಮಾಡಲಾಯಿತು..
ಆಮೇಲೆ ಅವರಿಗೆ ಒಂದು ಕಡೆ ಕುಳಿತು ತನ್ನ ಸುತ್ತ ಮುತ್ತ ಇರುವ ಪರಿಸರ, ಮರ ಗಿಡ, ಹಕ್ಕಿ, ಮನುಷ್ಯರು. ಎಲ್ಲವನ್ನು ನೋಡಿಕೊಂಡು ಒಂದು ಚಿತ್ರ ಬರೆಯಲು ಹೇಳಿದ್ದೆವು .. ಅವರು ಏನು ನೋಡಿ ..ಅವರದೇ ಇಮ್ಯಾಜಿನೇಶನ್ ನಲ್ಲಿ ಬರೆದಿದ್ದ ಪುಟ್ಟ ಚಿತ್ರಗಳು ತುಂಬಾ ಚೆನ್ನಾಗಿ ಬಂದಿದ್ದೆವು . ಅವಗಳನ್ನು ವರ್ಣಿಸಿದ ಪರಿ.. ಅವರು ಪರಿಸರವನ್ನು ಅರ್ಥ ಮಾಡಿಕೊಂಡ ರೀತಿ.. ಅದ್ಬುತ..
ಅದಾದ ಮೇಲೆ ನಮ್ಮ ಬೆಂಗಳೂರಿನ ಹೆಮ್ಮೆಯ ಕಬ್ಬನ್ ಪಾರ್ಕ್ ನಲ್ಲಿ ಸುತ್ತಾಡಿ ಪಕ್ಕದಲ್ಲೇ ಇದ್ದ ಒಂದು ಚಿಕ್ಕ ಪಾಂಡ್ ..ನೀರಿನ ಕೊಳ ಇದರಲ್ಲಿ ಕಾಣಿಸುತ್ತ ಇದ್ದ ಕೆಲವು ಪಕ್ಷಿಗಳ ನೋಡಿ ಅದರ ದಿನಚರಿ ನೋಡಿ ಆನಂದ ಪಟ್ಟರು. pond Heron ನೀರಿನ ಬಕ , water hen (ಹುಂಡು ಕೋಳಿ) ಮೈನ, ಗಿಳಿ ಇವುಗಳನ್ನು ಹತ್ತಿರದಿಂದ ನೋಡಿ ಸಂಭ್ರಮ ಪಟ್ಟರು.
ಇದಾದ ಬಳಿಕ ಒಂದು ಹತ್ತಿ ಮರದ ಕೆಳೆಗೆ ಕುಳಿತು ಅವರು ನೋಡಿದ ಪಕ್ಷಿಗಳ ಸಂಪೂರ್ಣ ಪರಿಚಯ ಮಾಡಿಕೊಳ್ಳುತ್ತ ಇರುವಾಗ ಅದೇ ಮರದ ಮೇಲೆ ಒಂದು Black Kite - ಹದ್ದು ಇವುಗಳ ಗೂಡು ಕಟ್ಟುವ ವಿಧಾನ ಗಮನ ಸೆಳೆಯಿತು...
ಒಂದೊಂದೇ ಮರದ ಕಡ್ಡಿಗಳನ್ನು ತಂದು ತನ್ನ ಸಂಗಾತಿಗೆ ಕೊಡುತ್ತ ಗೂಡು ಕಟ್ಟುತ್ತ್ತ ಇದ್ದ ದೃಶ್ಯ ಅದ್ಭುತವಾಗಿ ಇತ್ತು .
ಇದರ ನಡುವೆ ಪುಟ್ಟ ಮಕ್ಕಳ ತಲೆಹರಟೆ ಪಶ್ನೆಗಳು ...ಅವರ ಆಟೋಟ...ಒಂದು ರೀತಿ ಖುಷಿ ಕೊಡುತ್ತ ಭಾನುವಾರದ ಮುಂಜಾವು ಕಳೆದದ್ದೇ ಗೊತ್ತಾಗಲಿಲ್ಲ
Special Thanks for organising from Early bird side
Misha Bansal, Amruta padgaonkar, saniya,
More information and links https://www.early-bird.in/
Photo and video - Guruprasad
ಇದರ ವಿಡಿಯೋ ಲಿಂಕ್
@earlybirdindia