Monday, April 1, 2019

ನಮಗಾಗಿ ಕಾಡು.... ಕಾಡಿಗಾಗಿ ನಾವಲ್ಲ....







ನಮಗಾಗಿ ಕಾಡು.... ಕಾಡಿಗಾಗಿ ನಾವಲ್ಲ....


ಗೋಪಾಲ್ NGO ಅವರು ಆಯೋಜಿಸಿದ್ದ ಸೀಡ್ ಬಾಲ್(ಮರದ ಬೀಜದ ಮಣ್ಣಿನ ಉಂಡೆ) ಇದರ ತಯಾರಿಸುವ ಕಾರ್ಯಕ್ರಮವನ್ನು ಹುಣಸೂರಿನ ಹತ್ತಿರ ಇರುವ ಚೌಡಿ ಕೆರೆ ಎಂಬ ಗ್ರಾಮದ ಸಮೀಪ ಶಿವಯೋಗ ದೇಶಿ ಗೋಶಾಲಾ ಇಲ್ಲಿ ಆಯೋಜಿಸಿದ್ದರು..

ಬೆಂಗಳೂರಿನಿಂದ ಸುಮಾರು 170 ಕಿಲೋಮೀಟರ್ ಗಳ ದೂರದಲ್ಲಿ ಇದೆ ಇದು ನಾಗರಹೊಳೆ ರಾಷ್ಟ್ರೀಯ ಅರಣ್ಯಕ್ಕೆ ಹೊಂದಿಕೊಂಡಿದೆ.

ನಾವುಗಳು ಮೈಸೂರಿಗೆ ಶನಿವಾರವೇ ಹೋಗಿ ಭಾನುವಾರ ಬೆಳಿಗ್ಗೆ ಎಂಟು ಗಂಟೆ ಹೊತ್ತಿಗೆ ಇಲ್ಲಿಗೆ ಬಂದು ಸೇರಿದೆವು,

ದೇಶಿ ಗೋಶಾಲ ಇಲ್ಲಿಯ ಮುಖ್ಯ ಗುರುಗಳಾದ ಶ್ರೀಯುತ "ತಮ್ಮಯ್ಯ" ಅವರು ಗೋ ತಳಿಗಳ ಬಗ್ಗೆ ಅವುಗಳ ಸಂರಕ್ಷಣೆ ಬಗ್ಗೆ ಕೆಲ ಹೊತ್ತು ತಮ್ಮ ಅನುಭವ ಹಾಗೂ ನಡೆಸುತ್ತಿರುವ ಗೋ ಶಾಲೆಯ ಬಗ್ಗೆ ತಿಳಿ ಹೇಳಿದರು ಇದಾದ ನಂತರ ಅಮೃತ ಆಹಾರ ಇದನ್ನು ಎಲ್ಲರಿಗೂ ಕೊಡಲಾಯಿತು ಹೆಸರು ಕಾಳು ಕೊಬ್ಬರಿ ಬೆಲ್ಲ ಹಸಿ ಕಾಳುಗಳು ಹಾಗೂ ಹಸಿಯಾದ ಕಡಲೇಕಾಯಿ...

ಮೊದಮೊದಲು ಇದನ್ನು ನಮ್ಮಂತ ಬೆಂಗಳೂರಿಗರಿಗೆ ಸ್ವಲ್ಪ ಕಷ್ಟವಾಯಿತು ಏನಪ್ಪಾ ಇವರು ತಿಂಡಿ ಅಂತ ಇದೇನೋ ಕಾಳುಗಳನ್ನು ಕೊಟ್ಟಿದ್ದಾರೆ ಎಂದು... ಕಷ್ಟಪಟ್ಟು ತಿಂದೆವು ಅದಾದ ಸ್ವಲ್ಪ ಹೊತ್ತಿಗೆ ಇಲ್ಲಿಯ ಗೋಶಾಲೆಯ ಗುರುಗಳು ಇದರ ಮಹತ್ವವನ್ನು ತಿಳಿಸಿ ಹೇಳಿದರು... ಬರೀ ಒಂದು 150 ಗ್ರಾಂ ಇರಬಹುದು ಇಷ್ಟರಲ್ಲಿಯೇ ನಮ್ಮ ದೇಹಕ್ಕೆ ಬೇಕಾಗುವ ಎಲ್ಲಾ ಖನಿಜಾಂಶಗಳು ಸೇರಿದ್ದವು... ನಿಜ ಹೇಳಬೇಕೆಂದರೆ ಅಷ್ಟು ಬಿಸಿಲಿನಲ್ಲಿ ನಡೆದಾಡಿ ಅಲ್ಲಿನ ಪರಿಸರವನ್ನು ಗೋಶಾಲೆಯನ್ನು ನೋಡಿ ಸೀಡ್ ಬಾಲ್ ಪ್ರೆಪರೇಶನ್ಸ್ ಎಲ್ಲವನ್ನೂ ಮಾಡಿ ಒಂದುವರೆ ಅಥವಾ 2.0 ಗಂಟೆ ವರೆಗೂ ನಾನಾ ವಿಧದ ಕಾರ್ಯಗಳಲ್ಲಿ ಭಾಗಿಯಾಗಿದ್ದರೂ ಕೂಡ ಒಂದು ಚೂರು ಹಸಿವು ಆಗಲೇ ಇಲ್ಲ.... ಇದು ನಮ್ಮ ಅನುಭವಕ್ಕೆ ಬಂದಾಗಲೇ ಗೊತ್ತಾಗಿದ್ದು ನಾವು ಯಾವ ರೀತಿಯ ಅಮೃತ ಆಹಾರವನ್ನು ತಿಂದೆವು ಎಂದು..... ಇದು ನಿಜಕ್ಕೂ ಅದ್ಭುತ.... ನಮ್ಮ ಸ್ವಂತ ಅನುಭವದ ಮೇಲೆ ನಾನು ಇದನ್ನು ಹೇಳುತ್ತಿದ್ದೇನೆ.. ಹಸಿಯಾದ ಕಾಳು ತರಕಾರಿಗಳು ಕೊಬ್ಬರಿ ಮತ್ತು ಬೆಲ್ಲ ಇಷ್ಟರಲ್ಲಿ ಎಷ್ಟೊಂದು ಸತ್ವವು ಅಡಗಿದೆ ಅಬ್ಬಾ...

ಇದಾದ ಬಳಿಕ ಗೋಶಾಲೆಯ ಪರಿಸರವನ್ನು ಅಲ್ಲಿ ಬೆಳೆಸಿರುವ ಗಿಡಗಳನ್ನು ಮರಗಳನ್ನು ಹಾಗೂ ತಾವೇ ಕಷ್ಟಪಟ್ಟು ನಿರ್ಮಿಸಿದ 6 ಚಿಕ್ಕ ಚಿಕ್ಕ ಕೆರೆ ಅಥವಾ ಹೊಂಡಗಳ ಬಗ್ಗೆ ಅಪೂರ್ವವಾದ ಮಾಹಿತಿ ಅನ್ನು ಇಲ್ಲಿಯ ಗೋ ಶಾಲೆ ಗುರುಗಳು ವಿವರವಾಗಿ ಎಲ್ಲವನ್ನೂ ಬಿಡಿಸಿ ಬಿಡಿಸಿ ಹೇಳಿದರು, ಸುಮಾರು 20 ವರ್ಷದ ಹಿಂದೆ ಇವರು ಇಲ್ಲಿಗೆ ಬಂದು ಕೆರೆಗಳನ್ನು ತೋಡಿ ನೈಸರ್ಗಿಕವಾಗಿ ಬೇರೆ ಯಾವ ಕೆಮಿಕಲ್ಸ್ ಇಲ್ಲದೆ ಕೃಷಿ ಮಾಡತೊಡಗಿದಾಗ..  ಸುತ್ತಮುತ್ತಲ ಹಳ್ಳಿಯವರು ಇವರನ್ನು ನೋಡಿ ಆಡಿ ಕೊಂಡರಂತೆ... ಇವರಿಗೆ ನಿಜವಾಗಿಯೂ ಹುಚ್ಚುಹಿಡಿದಿದೆ ಎಂದು... ಆರು ತಿಂಗಳ ಕಾಲ ಕಷ್ಟಪಟ್ಟು ನೀರಿನ ಹೊಂಡಗಳನ್ನು ಮಾಡಿ ಬಿಟ್ಟರು... ಅದರ ನಿಜವಾದ ಮಹತ್ವ  ಒಂದು ಸಾರಿ ಬೇಸಿಗೆ ಬಂದಾಗ ಗೊತ್ತಾಯ್ತು..  ಬೇರೆ ಎಲ್ಲಾ ಕೆರೆ ಕಟ್ಟೆಗಳು ಒಣಗಿತೊಡಗಿದಾಗ... ಇವರ ಆರು ಹೊಂಡಗಳಲ್ಲಿ ಸಮೃದ್ಧವಾಗಿ ನೀರು ಇರುತ್ತಿತ್ತು ಇದನ್ನು ನೋಡಿ ಅಕ್ಕ ಪಕ್ಕದ ಹಳ್ಳಿಯ ಜನಗಳು ಟ್ಯಾಂಕರ್ ಗಳಲ್ಲಿ ಇಲ್ಲಿಯ ಹೊಳೆಗಳಿಂದ ನೀರನ್ನು ಕೊಂಡು ಹೋಗಿ ಇವರನ್ನು ಶ್ಲಾಘಿಸು ತೊಡಗಿದರು. ಅವಾಗ ಇದರ ಮಹತ್ವ ಗೊತ್ತಾಯಿತು...

ಬರೀ ನೈಸರ್ಗಿಕವಾಗಿ ಸಮೃದ್ಧವಾಗಿ ಬೆಳೆದ ತೆಂಗಿನ ಮರಗಳು ಬೇವು ಕಾಡಿನ ಅರಳಿ ಮರ ಆಲದ ಮರ ಹೊಸದಾಗಿ ನೆಟ್ಟಿರುವ ಔಷಧೀಯ ಸಸ್ಯಗಳು ,, ಸ್ವಾಭಾವಿಕ ಹಾಗೂ ನೈಸರ್ಗಿಕ ಪರಿಸರದಲ್ಲಿ ಬೆಳೆಯುತ್ತಿರುವ ಬಾಳೆ ಗೊನೆಗಳು ಪಪ್ಪಾಯ ಮರಗಳು,, ಅಬ್ಬಬ್ಬಾ ನಿಜವಾಗಲೂ ಇದು ಒಂದು ಅದ್ಭುತ ಅನುಭವ.... ಯಾರಿಗಾದರೂ ಕೃಷಿಯ ಬಗ್ಗೆ ತಿಳಿದುಕೊಳ್ಳಬೇಕು \ ಹಾಗೂ ನೈಸರ್ಗಿಕವಾಗಿ ಬೆಳೆ ಬೆಳೆಸಲು ತಿಳಿದುಕೊಳ್ಳಲು ಒಮ್ಮೆ ಇಲ್ಲಿಗೆ ಭೇಟಿ ನೀಡಲೇಬೇಕು...
ಗೂಗಲ್ ಕೊಂಡಿ ಶಿವಯೋಗ ದೇಶೀ ಗೋಶಾಲೆ 
ನಮ್ಮ ಸಾವಯವ ಪದ್ಧತಿ ಎಷ್ಟು ಅಮೂಲ್ಯವಾದದ್ದು ಅದರ ಮಹತ್ವ ನಿಜವಾಗಲೂ ಅದ್ಭುತ....

ಇದಕ್ಕಿಂತ ಮೊದಲು ಗಾಣವನ್ನು ಮತ್ತು ಅದರ ಮಹತ್ವವನ್ನು ಗಾಣ ನಡೆಸುತ್ತಿರುವ ಸಮಯದಲ್ಲಿ ಅದ್ಭುತವಾಗಿ ತಿಳಿಸಿ ಹೇಳಿದರು...


ದೇಶಿಯವಾಗಿ ಕಲಬೆರಕೆ ಇಲ್ಲದ ಎಣ್ಣೆಯನ್ನು ಯಾಕೆ ಸೇವಿಸಬೇಕು ಅದರಿಂದ ಆಗುವ ಉಪಯೋಗಗಳನ್ನು ವಿವರಿಸಿ ಹೇಳಿದರು..

ಇದರ ಬಳಿಕ ಗೋಪಾಲ್ ಎನ್ನುವ ಸ್ವಯಂ ಸಂಸ್ಥೆ ಇದರ ಬಗ್ಗೆ ವಿವರಣೆಗಳು ಹಾಗೂ ಮಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಇದರ ಬಗ್ಗೆ ಚರ್ಚೆ ನಡೆದವು.. ತದನಂತರ ಬಂದಿರುವ ಸುಮಾರು 100 ಜನಗಳಿಗೆ ಒಳ್ಳೆ ಒಳ್ಳೆ ಮರದ ಬೀಜಗಳನ್ನು ಕೊಡಲಾಯಿತು ಹಾಗೆ ಸೀಡ್ ಬಾಲ್ ಅಂದರೆ ಬೀಜದ ಮಣ್ಣಿನಹುಂಡೆ ಹೇಗೆ ಮಾಡಬೇಕೆಂದು ಹೇಳಿಕೊಡಲಾಯಿತು ಇದನ್ನು ಅನುಸರಿಸಿ ಸ್ವಯಂಸೇವಕರಾಗಿ ಬಂದಿದ್ದ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಪಾಲ್ಗೊಂಡು ಸರಿಸುಮಾರು ಸಾವಿರಕ್ಕೂ ಮೇಲ್ಪಟ್ಟು ಮಣ್ಣಿನ ಬೀಜದ ಉಂಡೆಗಳನ್ನು.. ಸೀಡ್ ಬಾಲ್ ಗಳನ್ನು ಮಾಡಲಾಯಿತು ಇದನ್ನು ಒಣಗಿಸಿ... ಮಾನ್ಸೂನ್ ಮಳೆಗಾಲದ ಸಮಯದಲ್ಲಿ ಕಾಡಿನಲ್ಲಿ ಅಥವಾ ಕಾಡಿನ ಅಂಚಿನಲ್ಲಿ ಎಲ್ಲಾದರೂ ಎಸೆದರೆ ಆಯಿತು... ನೈಸರ್ಗಿಕವಾಗಿ ಬೀಳುವ ಮಳೆ ಗಳಿಂದ ಗಿಡಗಳು ಬೆಳೆದು ಮರಗಳ ಆಗುತ್ತದೆ... ಇತ್ತೀಚೆಗೆ ನಡೆದ ಕಾಳ್ಗಿಚ್ಚು ಅರಣ್ಯ ವಿನಾಶ ದಿಂದ ಬಹುಮುಖ್ಯವಾದ ಅರಣ್ಯ ಸಂಪತ್ತು ನಾಶವಾಗಿದೆ ಇದನ್ನು ಬೆಳೆಸುವ ಸಲುವಾಗಿ ನಮ್ಮ ಈ ಪುಟ್ಟ ಕಾಣಿಕೆ ಇದರಲ್ಲಿ ಎಷ್ಟು ಮರ-ಗಿಡಗಳು ಬರುತ್ತೋ ಗೊತ್ತಿಲ್ಲ, ಆದರೂ ನಮ್ಮ ಪ್ರಯತ್ನ ನಾವು ಮಾಡುತ್ತಿದ್ದೇವೆ ಪ್ರಕೃತಿಗೆ ನಾವು ಸ್ವಲ್ಪ ಕಾಣಿಕೆಯನ್ನು ನಮ್ಮ ಕೈಲಾದ ಮಟ್ಟಿಗೆ ಮಾಡುತ್ತಿದ್ದೇವೆ. ಕಾಡುಗಳ ಸಂರಕ್ಷಣೆ ಹಾಗೂ ಮರಗಿಡಗಳನ್ನು ಹೆಚ್ಚು ಹೆಚ್ಚು ಬೆಳೆಸುವ ದಾರಿ ಜವಾಬ್ದಾರಿ ನಮ್ಮ ಮೇಲಿದೆ.... ಎಲ್ಲರೂ ಸಾಧ್ಯವಾದಷ್ಟು ಇಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ಕೋರೋಣ....

ನಮ್ಮ ಕುಟುಂಬದವರು ನಮ್ಮ ಬಳಗದ ಕುಟುಂಬದವರು ಕೂಡ ಚಿಕ್ಕ ಮಕ್ಕಳು ಹಾಗು ದೊಡ್ಡವರು ಇದರಲ್ಲಿ ಬಾಗಿಯಾಗಿ ಪಾಲ್ಗೊಂಡಿದ್ದ ಕ್ಕೆ ತುಂಬಾ ಸಂತೋಷವಾಯಿತು ವ್ಯರ್ಥವಾಗಿ ಕಳೆಯಬೇಕಿದ್ದ ಒಂದು ಭಾನುವಾರ ಈ ರೀತಿಯ ಪರಿಸರದ ಜೊತೆಯಲ್ಲಿ ಪರಿಸರ ಕ್ಕೋಸ್ಕರ ನಮ್ಮ ಕೈಯನ್ನು ಮಣ್ಣುಮಾಡಿಕೊಂಡು ನೂರಾರು ಮರದ ಬೀಜದ ಮಣ್ಣಿನ ಉಂಡೆಗಳನ್ನು (ಸೀಡ್ಸ್ ಬಾಲ್) ಮಾಡಿದ್ದರ ತೃಪ್ತಿ ಹಾಗೂ ಸಂತೋಷ ನಮ್ಮದಾಯಿತು...

ನಾನುಕೂಡ ಗೋಪಾಲ್ ಸ್ವಯಂ ಸೇವಕ ಸಂಸ್ಥೆಯ ಸೇವಕ ನಾಗಿದ್ದೇನೆ ಮುಂದಿನ ದಿನಗಳಲ್ಲಿ ಇಂತಹ ಹಾಗೂ ನಮ್ಮ ದೇಶಿ ತಳಿಯ ಹಸುಗಳ ಬಗ್ಗೆ ಹಾಗೂ ಅದನ್ನು ಸಾಕುವ ಬಗ್ಗೆ ಹಾಗೆ ಇದರ ಮಹತ್ವ ಹೆಚ್ಚಿನ ಜನರಿಗೆ ತಿಳಿಸಬೇಕೆಂದು ಗೋಪಾಲ್ ಸ್ವಯಂ ಸೇವಕ ಸಂಸ್ಥೆ ಪಣತೊಟ್ಟಿದೆ ಇಂತಹ ಹೆಚ್ಚು ಹೆಚ್ಚು ಕಾರ್ಯಕ್ರಮಗಳ ಬಗ್ಗೆ ನನ್ನ ಫೇಸ್ಬುಕ್ ಬ್ಲಾಗ್ ನಲ್ಲಿ ತಿಳಿಸುತ್ತೇನೆ ಯಾರಿಗಾದರೂ ಇದರ ಬಗ್ಗೆ ಆಸಕ್ತಿ ಇದ್ದಲ್ಲಿ ನನ್ನನ್ನು ಸಂಪರ್ಕಿಸಬಹುದು


We gopals organization website link :- http://wegopals.com/






ಅಮೃತ ಆಹಾರ.


ಆಲದ  ಮರದ ಮಹತ್ವ ನಿಜವಾಗಿಯೂ ನನಗೆ ಇವಾಗ್ಲೆ ಗೊತ್ತಾಗಿದ್ದು.... ಮಟ ಮಟ ಮಧ್ಯಾಹ್ನ .. ಬಿರು ಬಿಸಿಲು.... ತೋಟದ ತುಂಬೆಲ್ಲ ಸುತ್ತಾಡಿ.... ಸುಸ್ತಾಗಿದ್ದೆವು...  ಇಲ್ಲಿ ಬಂದು ಕುಳಿತು ಒಂದು ಮೂರು ಘಂಟೆ ಹೀಗೆ ಹೋಯಿತೋ ಗೊತ್ತಾಗಲೇ ಇಲ್ಲ... ಒಳ್ಳೆ ತಂಪಾದ ವಾತಾವರಣದಲ್ಲಿ ಇದ್ದದ್ದ ಹಾಗೆ ಇತ್ತು...  ಯಾವ ಪೆಂಡಾಲ್, AC  ಫ್ಯಾನ್   ಏನು ಬೇಕಿರಲಿಲ್ಲ..... ಅಷ್ಟು ತಂಪಾದ ನೆರಳು ಹಾಗು ಗಾಳಿ  ಇತ್ತು....  ಅಲ್ಲಿಂದ ಒಂದು ಚೂರು ಹೊರಗೆ ಬಂದರೆ ನಮಗೆ ಗೊತ್ತಾಗುತ್ತಾ ಇತ್ತು ಎಷ್ಟು ಬಿಸಿಲು ಇದೆ ಅಂತ.....    ಅದಕ್ಕೆ ಹೇಳೋದು ಒಂದು ಅರಳಿ ಅಥವಾ ಆಲದ ಮರ ಎಷ್ಟು ಉಪಕಾರಿ ಅಂತ.....



ಗೋಶಾಲೆ ಬಗ್ಗೆ ಕೆಲವು ಮಾಹಿತಿ ನೀಡುತ್ತಿರುವುದು 


 ವೈವಿಧ್ಯ ಸಸ್ಯಗಳ ಬಗ್ಗೆ ಹಾಗು ನೈಸರ್ಗಿಕ ವಾಗಿ ಬೆಳೆಸುವ ವಿಧಾನದ ಬಗ್ಗೆ ಮಾಹಿತಿ.. 
 ಸೀಡ್ಸ್ ಬಾಲ್ಸ್,  ಮರದ ಬೀಜದ ಮಣ್ಣಿನ ಉಂಡೆ ಮಾಡಲು ತಯಾರಿ.



 ನಮ್ಮ ಹಾಗು ನಮ್ಮ ಕಸಿನ್ಸ್ ಕುಟುಂಬ.... ಜೊತೆಯಾಗಿ ಸೀಡ್ಸ್ ಬಾಲ್ ತಯಾರಿಸಲು ಅಣಿಯಾಗುತ್ತಾ

 ಯೋಗದ ಹಾಗು ಆರೋಗ್ಯದ ಮಹತ್ವ ಬಗ್ಗೆ ಒಂದು ಸಣ್ಣ ಕಾರ್ಯಕ್ರಮ.



7 comments:

  1. Words are small to express the feeling . Namaskara for you all .

    ReplyDelete
  2. Thank you for organizing such a event. Thanks to thammaiah sir and Gopal team. Keep doing such activity and save our environment by growing more and more trees.

    ReplyDelete
  3. Tq your natural firming working
    Tq all your team

    ReplyDelete
  4. Tq your natural firming working
    Tq all your team

    ReplyDelete