Saturday, March 23, 2019

World Sparrow Day



World Sparrow Day is a day designated to raise awareness of the house sparrow and then other common birds to urban environments, and of threats to their populations, observed on 20 March. (Wikipedia)ಇಂದು ವಿಶ್ವ ಗುಬ್ಬಚ್ಚಿಗಳ ದಿನ. ಗುಬ್ಬಚ್ಚಿಗಳ ಬಗ್ಗೆ ಅರಿವು ಮೂಡಿಸಲು ..ಇದರ ಬಗ್ಗೆ ಹೆಚ್ಚು ತಿಳಿಸಲು ಮಾರ್ಚ್ ಇಪ್ಪತ್ತನೇ ತಾರೀಕಿನಂದು ವಿಶ್ವ ಗುಬ್ಬಚ್ಚಿ ದಿನವನ್ನು ಆಚರಿಸುತ್ತಾರೆ ..

ಅನಿವಾರ್ಯ ಕಾರಣಗಳಿಂದ ನಾವು ನಮ್ಮ ಸುತ್ತಮುತ್ತ ಗುಬ್ಬಚ್ಚಿಗಳ ಇರುವಿಕೆಯನ್ನು ಕಳೆದು ಕೊಂಡು ಇದ್ದೇವೆ ... ಇದು ಬರಿ ಮೊಬೈಲ್ ಅಥವಾ ಸಿಗ್ನಲಿಂಗ್ ಕಾರಣವಲ್ಲ ಅಂತ ತಜ್ಞರು ಹೇಳುತ್ತಾರೆ... ಅತಿ ಮುಖ್ಯವಾಗಿ ಗುಬ್ಬಚ್ಚಿ ವಾಸಿಸಸಲು ಯೋಗ್ಯವಾದ ವಾತಾವರಣ ಇಲ್ಲ... ಎಲ್ಲ ಕಾಂಕ್ರೀಟ್ ಮನೆ ಹಾಗು ಕಟ್ಟಡಗಳಿಂದ ಇವುಗಳ ವಾಸಕ್ಕೆ ತೊಂದರೆ ಆಗಿದೆ. ಮೊದಲಾದರೆ ಹೆಂಚಿನ ಮನೆಗಳು... ಶೀಟ್ ಮನೆಗಳು....ಇದ್ದವು ಇವಗಳ ಮಧ್ಯ ಒಂದು ಪುಟ್ಟ ಗೂಡು ಕಟ್ಟಿಕೊಂಡು ನಮ್ಮಗಳ ಜೊತೆ ವಾಸ ಮಾಡ್ತಾ ಇದ್ದವು...
ಹಾಗೆ ನಾವು ತರುತ್ತಿದ್ದ ದವಸ ಧನ್ಯ (ಅದು ಸಂಸ್ಕರಣೆ ಮಾಡಿರಲಿಲ್ಲ) ನಮ್ಮ ಮನೆಯಲ್ಲೇ ಅದನ್ನು ಕ್ಲೀನ್ ಮಾಡಿ ಅದರಲ್ಲಿ ಉಳಿದಿದ್ದ ಕಸ ಕಡ್ಡಿ ಹಾಗು ಬೇಡವಾದ ಧಾನ್ಯಗಳನ್ನು ಹಾಗೆ ಮನೆ ಮುಂದೆ ಅಥವಾ ಅಂಗಳದಲ್ಲಿ ಚೆಲ್ಲುತ್ತ ಇದ್ದೆವು... ಅದೇ ಈ ಗುಬ್ಬಚ್ಚಿಗಳ ಮುಖ್ಯ ಆಹಾರ ಆಗಿತ್ತು... ಇವಾಗ ... ಎಲ್ಲ ಮೆಗಾ ಮಾರ್ಟ್ ... ಫ್ರೆಶ್ ಮಾರ್ಟ್ ಅಂತ ಸಂಸ್ಕರಿಸಿ, ಶುದ್ಧ ಮಾಡಿದ ದವಸ ಧಾನ್ಯಗಳನ್ನು ತರುತ್ತಾ ಇದ್ದೇವೆ ಇನ್ನೆಲ್ಲಿ ಕ್ಲೀನ್ ಮಾಡುವುದು ಹಾಗು ಅದನ್ನು ಇವುಗಳಿಗೆ ಕೊಡುವುದು.... ಇದು ಒಂದು ಕಾರಣ ಇರಬಹುದು ಗುಬ್ಬಿಗಳ ಇರವುವಿಕೆ ಕಮ್ಮಿ ಆಗುವುದಕ್ಕೆ ..
ನನಗೆ ಗೊತ್ತಿರುವ ಹಾಗೆ... ನಮ್ಮ ಅಮ್ಮ ಹೊಸಿಲಿನ ಪೂಜೆ ಮಾಡಿ ಒಂದೆರಡು ಅಕ್ಕಿ ಕಾಲು (ಮಂತ್ರಾಕ್ಷತೆ) ಯನ್ನು ಹೊಸಿಲ ಮೇಲೆ ಇಡುತ್ತಿದ್ದರು... ಅದನ್ನು ತಿನ್ನಲು ಈ ಗುಬ್ಬಿಗ ಪೈಪೋಟಿ ನೋಡ್ದಬೇಕಿತ್ತು... ಒಂದೆರಡು ನಿಮಿಷದಲ್ಲೇ ಹೂವ ಸಮೇತ ಅಕ್ಕಿ ಕಾಲುಗಳು ಮಾಯಾ... ಇವಾಗಿನ ಲೈಫ್ ನಲ್ಲಿ ಇದೆಲ್ಲ ಕಮ್ಮಿ ಆಗಿದೆ....


ನಿಮ್ಮ ಮನೆಯ ಮುಂದೆ ಅಥವಾ ಅಂಗಳದಲ್ಲಿ ಜಾಗ ಇದ್ದಾರೆ...ಕೆಲವು ಕಾಳು ಧಾನ್ಯ ಗಳನ್ನೂ ಹಾಕಿ ..ಪಾರಿವಾಳ ಗುಬ್ಬಿ ಹಾಗೆ ಕೆಲವು ಸಣ್ಣ ಪಕ್ಷಿಗಳು ಬರುತ್ತವೆ..

ಹಾಯಾಗೇ ಈ ಬೇಸಿಗೆಯಲ್ಲಿ ಚಿಕ್ಕ ಬಟ್ಟಲಲ್ಲಿ ಮನೆಯ ತಾರಸಿಯ ಮೇಲೆ ನೀರು ಇಡುವುದನ್ನು ಮರೆಯ ಬೇಡಿ ...


No comments:

Post a Comment