Thursday, June 28, 2018

ರಸ್ತೆಗಳು --- ಬದುಕಿನ ಪಯಣವೂ

ರಸ್ತೆಗಳು --- ಬದುಕಿನ ಪಯಣವೂ 

ನನಗೊಂದು ಹುಚ್ಚು ಆಸೆ... ದಾರಿಯಲ್ಲಿ ಹೋಗುತ್ತಿರುವಾಗ ಅಥವಾ ಎಲ್ಲಾದರೂ ಪ್ರವಾಸಕ್ಕೆ ಹೋಗಿದ್ದಾಗ ದಾರಿ ಉದ್ದಕ್ಕೂ ಕಾಣಸಿಗುವ ರಸ್ತೆಗಳನ್ನು ಫೋಟೋ ತೆಗೆಯುವ ಆಸೆ, ಅದೆಷ್ಟು ಫೋಟೋಗಳನ್ನು ತೆಗೆದಿದ್ದೇನೋ ಹೀಗೆ...

ನಮ್ಮ ಬದುಕಿನ ಪಯಣ ಕೂಡ ರಸ್ತೆಯ ರೀತಿಯಲ್ಲಿ ಸಾಗುವುದು, ಒಂದೊಂದು ರೀತಿ, ಒಂದೊಂದು ತರ, ಒಂದೊಂದು ಕಾಲದಲ್ಲಿ ಸನ್ನಿವೇಶಗಳಿಗೆ ತಕ್ಕಂತೆ ನಮ್ಮ ಬದುಕಿನ ಪಯಣದಲ್ಲಿ ನಾವು ಒಗ್ಗಿ ಕೊಳ್ಳಬೇಕು.. ರಸ್ತೆಗಳು ಚೆನ್ನಾಗಿದೆ ಅಂತ ತುಂಬಾ ಜೋರಾಗಿ ಹೊರಟರೆ ಅಪಾಯ ಕಾದಿಟ್ಟ ಬುತ್ತಿ ... ನಮ್ಮ ಬದುಕಿನ ಪಯಣದಲ್ಲಿ ಈ ರಸ್ತೆಗಳಲ್ಲಿ ಕಾಣಸಿಗುವ ಸೌಂದರ್ಯವನ್ನು ಆಸ್ವಾದಿಸುತ್ತಾ ದಾರಿ ಮಧ್ಯದಲ್ಲಿ ಸಿಕ್ಕ ಸಣ್ಣಪುಟ್ಟ ಸಂತೋಷಗಳನ್ನು ಆನಂದಿಸುತ್ತಾ ನಮ್ಮ ಗುರಿಯ ಕಡೆಗೆ ಸಾಗಬೇಕು... ರಸ್ತೆಗಳು ಹಾಗೂ ಬದುಕಿನ ಪಯಣದ ದಾರಿ ಒಂದೇ ... ಗುರಿ ಇದ್ದರೆ ಅದಕ್ಕೆ ತಕ್ಕುದಾದ ಪ್ರಯತ್ನವಿದ್ದರೆ ಗುರಿಯನ್ನು ಸುಲಭವಾಗಿ ತಲುಪಬಹುದು

ಒಂದೊಂದು ಋತುವಿನಲ್ಲೂ ಒಂದೊಂದು ರೀತಿ ಕಾಣುತ್ತದೆ ನಮ್ಮ ರಸ್ತೆಗಳು. ಮಳೆಗಾಲದಲ್ಲಿ ಹಸಿರು ಸಿರಿ ಗಳ ಮಧ್ಯೆ ಸೀಳಿಕೊಂಡು ಹೋಗಿರುವ ಕಪ್ಪು ಬಣ್ಣದ ಗೆರೆಯಂತೆ, ಬೇಸಿಗೆ ಕಾಲದಲ್ಲಿ ಅಕ್ಕಪಕ್ಕ ಒಣಗಿ ಹೋಗಿರುವ ಹುಲ್ಲುಗಳ ನಡುವೆ, ಮರ ಗಿಡಗಳ ನಡುವೆ ಕಪ್ಪಗೆ ಮಲಗಿಕೊಂಡು, ಬಿಸಿಲ ಹೊಡೆತಕ್ಕೆ ಮಿರಿಮಿರಿ ಮಿನುಗುತ್ತಾ ಇರುವ ರಸ್ತೆಗಳು. ಹಾಗೆ ಚಳಿಗಾಲದಲ್ಲಿ ಮುಂಜಾವಿನ ಸಮಯದಲ್ಲಿ ದಟ್ಟ ಮಂಜಿನ ಒಳಗಡೆ ಹುದುಗಿ ಹೋಗಿರುವ ಮಬ್ಬು ಮಬ್ಬಾಗಿರುವ ರಸ್ತೆಗಳು... ಒಟ್ಟಿನಲ್ಲಿ ಒಂದೊಂದು ಋತುವಿನಲ್ಲೂ ಒಂದೊಂದು ರೀತಿ ಕಾಣುವ, ಹಾಗೆ ಬದುಕಿನ ಪಯಣದ ಹಾದಿ ನೆನಪಿಸುವ ಚಿಕ್ಕ, ದೊಡ್ಡ ರಸ್ತೆಗಳು ಅದ್ಭುತವಾದ ಆನಂದವನ್ನು ಕೊಡುತ್ತದೆ... ಈ ನಡುವೆ ನಮ್ಮ ಕರ್ನಾಟಕದ ರಸ್ತೆಗಳು ಕೂಡ ಅತಿ ಸುಂದರವಾಗಿ ನಾಜೂಕಾಗಿ ನಿರ್ಮಾಣಗೊಂಡಿದೆ, ದೊಡ್ಡ ದೊಡ್ಡ ಹೆದ್ದಾರಿಗಳಲ್ಲಿ ಇಂತಹಾ ರಸ್ತೆಗಳ ಮೇಲೆ ಹೋಗುವುದೇ ಒಂದು ಆನಂದ... ಅದೇ ರೀತಿ ಪರಿಸರಕ್ಕೆ ಹಾನಿಯಾಗದೆ ರೀತಿ ನೋಡಿಕೊಳ್ಳಬೇಕಾದದ್ದು ಕೂಡ ನಮ್ಮ ಕರ್ತವ್ಯ.



ಕರ್ನಾಟಕದ ಕೆಲವೊಂದು ರಸ್ತೆಗಳ ಫೋಟೋಗಳು......


















6 comments:

  1. Very nice writing Guru and photos are awesome.

    ReplyDelete
    Replies
    1. ಧನ್ಯವಾದಗಳು ಶಂತಿಪ್ರಸಾದ್

      Delete
  2. ರಸ್ತೆಯ ಬದುಕು.. ಬದುಕಿನ ರಸ್ತೆ ಎರಡನ್ನೂ ಸಮೀಕರಿಸಿದ ರೀತಿ ಸೂಪರ್ ಇದೆ..
    ಮಳೆಯಲ್ಲಿ ಮಿಂದ ರಸ್ತೆ
    ಇಬ್ಬನಿಯಲ್ಲಿ ಮೋರೆ ತೊಳೆದ ರಸ್ತೆ
    ಬಿರುಬಿಸಿಲಿನಲ್ಲಿ ಗಟ್ಟಿಯಾಗಿ ನಿಂತ ರಸ್ತೆ
    ಮೊದಲ ಪೋಷಾಕು ಹೊದ್ದು ನಿಂತ ರಸ್ತೆ
    ಟೀ ಮತ್ತು ಕಾಫೀ ತೋಟಗಳ ನಡುವಿನ ರಸ್ತೆ
    ವಾಹನ ದಟ್ಟಣೆ ತುಂಬಿಕೊಂಡ ರಸ್ತೆ
    ಒಂದಕ್ಕಿಂತ ಒಂದು ಸೊಗಸು..

    ಸೂಪರ್ ಬರಹ.. ಸೂಪರ್ ಚಿತ್ರಗಳು

    ReplyDelete
    Replies
    1. ಧನ್ಯವಾದಗಳು ಶ್ರೀಕಾಂತ್ ಅಣ್ಣ...

      Delete