Wednesday, January 3, 2018

Happy New Year 2018 ೨೦೧೮ ಹೊಸ ವರ್ಷದ ಶುಭಾಶಯಗಳು..



ಪ್ರತಿ ಸರಿ ಹೊಸ ವರ್ಷ ಬರುತ್ತೆ ಹಾಗೆ ಹೋಗುತ್ತೆ...  ಹೊಸ ವರ್ಷದ ಆಚರಣೆ ನಮ್ಮ ಪದ್ಧತಿ ಅಲ್ಲದಿದ್ದರೂ , ಇವಾಗಿನ ಯುವ ಜನತೆಗೆ ತುಂಬ ಕ್ರೇಜ್ ಹುಟ್ಟಿಸಿದೆ.  ಎಲ್ಲರೂ ಸೇರಿಕೊಂಡು, ಎಲ್ಲಾದರು ಒಂದು ಕಡೆ ಪಾರ್ಟಿ ಮಾಡುತ್ತಾ ಹೊಸ ವರ್ಷವನ್ನು ಬರಮಾಡಿ ಕೊಳ್ಳುವುದು ಒಂದು ಸಂಪ್ರದಾಯದಂತೆ ಅಭ್ಯಾಸ ಆಗಿ ಹೋಗಿದೆ. ಬೇಕರಿಗಳಲ್ಲಿ ಕೇಕು ಗಳಿಗೆ ಮುಗಿಬಿದ್ದ ಜನತೆ,  ಮೋಜು ಮಸ್ತಿ ಮಾಡುವ ಯುವಕ ಯುವತಿಯರು.  ಗುಂಡು ಪಾರ್ಟಿ ಗಳಲ್ಲಿ ಮುಳುಗಿರುವ ಹುಡುಗರು ಮತ್ತು ಗಂಡಸರು....   ಒಟ್ಟಿನಲ್ಲಿ  ಹೊಸ ವರ್ಷ ಅನ್ನೊಂದು ಒಂದು ಕಾರಣ ಅಷ್ಟೇ..
ನಮಗೆ ಅಂತ ಅಲ್ಲದಿದ್ದರೂ ನಮ್ಮ ಮಕ್ಕಳು ಎಂಜಾಯ್ ಮಾಡ್ತಾರೆ ಅಂತ ನಾನು ಕೂಡ ಈ ವರುಷದ ಮುನ್ನಾ ದಿನ ಇಂತಹ ಒಂದು ಸಣ್ಣ ಪಾರ್ಟಿ ಆಯೋಜಿಸಿದ್ದೆ.  ಅದು ನಮ್ಮ ರೋಡಿನಲ್ಲಿ.  ಏನಾದ್ರು ವಿಭಿನ್ನ ವಾಗಿ ಮಾಡೋಣ ಅಂತ ನಮ್ಮ ರೋಡಿನ ಕೆಲವು ಕುಟುಂಬ ದ ಜೊತೆ ಮಾತನಾಡಿ.  ಎಲ್ಲರೂ ಒಟ್ಟಿಗೇ ಸೇರಿಕೊಂಡು ಹೊಸ ವರ್ಷದ ಆಚರಣೆ ಮಾಡೋಣ... ಒಂದು ರೀತಿ get together ಆಗುತ್ತೆ.. ಹಾಗೆ ಒಂದಷ್ಟು ಸಮಯ ಎಲ್ಲರೂ ಒಟ್ಟಿಗೆ ಕಳೆದ ಹಾಗೆ ಆಗುತ್ತೆ ಅಂತ ಎಲ್ಲರನ್ನು ಸೇರಿಸಿ , ಅಂತೂ ನಾವು ತುಂಬ ವಿಭಿನ್ನವಾಗಿ ಚಿಕ್ಕ ಮಕ್ಕಳು. ಯುವಕರು ಹಾಗು ವಯಸ್ಸು ಆದ ಅಜ್ಜ ಅಜ್ಜಿಯರು . ಆಂಟಿ ಅಂಕಲ್,  ಎಲ್ಲರೂ ಬೆರೆತು ಒಂದಷ್ಟು ಸಮಯ ಒಟ್ಟಿಗೆ ಕಳೆದವು.  ಎಲ್ಲರೂ ಸೇರಿ ಶೇರ್ ಮಾಡಿಕೊಂಡು ಆಯೋಜಿಸಿದ್ದ ಪರಿ ಚೆನ್ನಾಗಿ ಇತ್ತು.  ಒಳ್ಳೆಯ ಪುಲಾವ್ ಮತ್ತು ಮೊಸರನ್ನ ಹಾಗು ಒಂದು ಸ್ವೀಟ್ . ಮತ್ತು  ಕೊನೆಯಲ್ಲಿ ಕೇಕ್ ತುಂಬ ಚೆನ್ನಾಗಿ ಇತ್ತು .
ಎಂಟು ಗಂಟೆಗೆ ಶುರುವಾದ ನಮ್ಮ ಕಾರ್ಯಕ್ರಮ  ಹೇಗೆ ಮುಗಿಯಿತು ಅಂತ ಗೊತ್ತೇ ಆಗಲಿಲ್ಲ.. ಒಟ್ಟಿಗೆ ಸೇರಿ ಮಾಡಿದ ಊಟ, ಚಿಕ್ಕ ಮಕ್ಕಳ ನೃತ್ಯ ಪ್ರದರ್ಶನ, musical-chair, ಡಾನ್ಸ್ , ಚಿಕ್ಕ ಚಿಕ್ಕ ಮಕ್ಕಳಿಗೆ ಆಡಿಸಿದ puzzle ಗೇಮ್ಸ್,   ನಿಧಿ ಹುಡುಕುವ ಆಟ (Treasure hunt) ಎಲ್ಲ ಮನೆಯವರಿಗೂ ಒಂದು ಒಳ್ಳೆ ವ್ಯಾಯಾಮ ಮಾಡಿಸಿದ ಹಾಗೆ ಆಯಿತು .  ನ್ಯೂಸ್ ಪೇಪರ್ ನಲ್ಲಿ ಚಿಕ್ಕ ಮಕ್ಕಳಿಗೆ ಮಾಡಿದ ಡ್ರೆಸ್ , ಬಲೂನ್ ಆಟ.  ಒಟ್ಟಿನಲ್ಲಿ ನಮ್ಮ ರೋಡಿನ ಎಲ್ಲ ಕುಟುಂಬದವರು ಒಂದು ಕಡೆ ಸೇರಿ ಕೆಲ ಹೊತ್ತು ಹರಟೆ , ಮೋಜು, ಮಾತು, ಆಟ ಆಡಿ ಖುಷಿ ಇಂದ ೨೦೧೮ ಹೊಸ ವರ್ಷವನ್ನು ಬರಮಾಡಿಕೊಂಡರು.
ಹೈಲೈಟ್ ಆಫ್ ದಿ ಶೋ ಅಂದರೆ 55 ವರ್ಷ ಮೇಲ್ಪಟ್ಟ ಎಲ್ಲರೂ ಸೇರಿ musical chair ಆಟ ಆಡಿದ್ದು...  ಮತ್ತು ಅವರನ್ನು ಎಲ್ಲರೂ ಹುರಿದುಂಬಿಸಿದ ರೀತಿ.   ಹಾಗೆ ಚಿಕ್ಕ ಮಕ್ಕಳ ಡಾನ್ಸ್.... ಮತ್ತು ಸೋಲೋ ಪರ್ಫಾರ್ಮೆನ್ಸ್.     

ಅದರ ಒಂದು ಸಣ್ಣ ವೀಡಿಯೊ ತುಣುಕು ಇಲ್ಲಿದೆ ನೋಡಿ

ಚಿಕ್ಕ ಮಕ್ಕಳ musical chair 












 ದೊಡ್ಡವರ musical chair ಗೇಮ್











ಅಜ್ಜ ಅಜ್ಜಿಯರ musical chair ಆಟ 







  Treasure hunt Game







ಎಲ್ಲ ಐಟಂ ಗಳನ್ನೂ ಜೋಡಿಸಿರುವ ಟೀಂ 




ಪೇಪರ್ ಫ್ಯಾಷನ್ ಶೋ



ಸಂತೋಷದಿಂದ ಆಟವನ್ನು ನೋಡುತ್ತಿರುವ ಕುಟುಂಬ






ಕೇಕ್ ಕಟಿಂಗ್ 





2 comments:

  1. ನಗಲು ಕಾರಣಬೇಕೇ ಎನ್ನುವ ಪ್ರಶ್ನೆಗೆ ಇಲ್ಲ ಎನ್ನುತ್ತದೆ ಉತ್ತರ
    ಸಂಭ್ರಮ ಪಡಲು ದಿನಗಳು ಬೇಕೇ ಎಂದರೆ ಇಲ್ಲ ಎನ್ನುತ್ತದೆ ಉತ್ತರ

    ಸಿಕ್ಕ ಸಮಯದಲ್ಲಿ.. ಸಿಕ್ಕ ತಾಣದಲ್ಲಿ ಜೊತೆಗಿದ್ದು ಒಂದಷ್ಟು ನಕ್ಕು ಮನಸ್ಸು ಹಗುರಾಗಿಸುವ ಈ ಕಾರ್ಯಕ್ರಮಗಳು ಖುಷಿ ಕೊಡುತ್ತವೆ..

    ನಿಮ್ಮ ಪ್ರೀತಿಯ ಆಹ್ವಾನಕ್ಕೆ ಮನ್ನಣೆ ಕೊಡಲಾಗದಿದ್ದರೂ, ಈ ಬರಹ ಮತ್ತು ಫೋಟೋ ವಿಡಿಯೋ ತುಣುಕುಗಳ ಮೂಲಕ ಅಲ್ಲೇ ಇದ್ದೆ ಎನ್ನುವ ಸಂಭ್ರಮ ನನ್ನದು..

    ಚಿಕ್ಕ ಚೊಕ್ಕ ಬರಹ.. ಚಿತ್ರಗಳ ಸಹಿತ.. ಸೊಗಸಾಗಿದೆ..

    ReplyDelete
  2. Very nice we all enjoyed a lot thanks so much

    ReplyDelete