Thursday, August 10, 2017

ನಿತ್ಯ ಹರಿದ್ವರ್ಣದ ಕಾಡು.... ನಮ್ಮ ಮಲೆನಾಡು

ಆಗುಂಬೆ -   ಸುತ್ತ ಮುತ್ತ ತುಂಬ ಒಳ್ಳೆಯ ಜಾಗಗಳಿವೆ ..  ಮುಂಗಾರಿನ ಮಳೆಗಾಲದ ಮಜಾ ಅನುಭವಿಸುವವರಿಗೆ ಇದು ಹೀಳಿ ಮಾಡಿಸಿದ ಜಾಗ..   ಮೊನ್ನೆ ಹೋಗಿದ್ದಾಗ ಎರಡು ಬೆಟ್ಟಗಳಿಗೆ ಚಾರಣಕ್ಕೆಹೋಗಿದ್ದೆವು.  ಒಂದು ಕವಲೇದುರ್ಗ ಮತ್ತೆ ಅಕ್ಕಿರಾಶಿ ಗುಡ್ಡ...    ಹಾಗೆ ಕುಂದಾದ್ರಿ ಬೆಟ್ಟ ಕೂಡ ಹತ್ತಿರವಿದೆ... ತುಂಬ ಅದ್ಬುತವಾದ ಸ್ಥಳಗಳು....  ಕಾಲಿಗೆ ಸಿಗುವ ಸಣ್ಣ ಸಣ್ಣ ಜರಿಗಳು.... ಚಿಕ್ಕ ಜಲಪಾತಗಳು... ಕಡಿದಾದ ಬೆಟ್ಟ ಗುಡ್ಡಗಳ ದಾರಿ.   ಅದ್ಬುತ... ಬೆಟ್ಟದ ಮೇಲೆ ಹೋಗಿ ಹಚ್ಚ ಹಸುರಿನ ಕಾಡಿನ ಸೌಂದರ್ಯ ನೋಡುವುದೇ ಒಂದು ಆನಂದ.....


     
 ಕುಂದಾದ್ರಿ ಬೆಟ್ಟ   ಮಂಜು ಮುಸುಕಿದ ಸಮಯ



 ಅಕ್ಕಿರಾಶಿ ಗುಡ್ಡ ....





    ಕವಲೇದುರ್ಗದ ದಾರಿ....


 ಪಾಳುಬಿದ್ದ ದೇವಸ್ತಾನ




Thursday, August 3, 2017

ಮಲೆನಾಡ ಮಡಿಲಿನಲ್ಲಿ ಒಂದೆರಡು ದಿನ

ಕರ್ನಾಟಕದ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ನಮ್ಮ ಆಗುಂಬೆ ಮೊದಲು..  ಮಳೆಗಾಲದಲ್ಲಿ  ಮಲೆನಾಡಿನಲ್ಲಿ ನೆದೆದಾದುವುದೇ ಒಂದು ಖುಷಿ...
ನಿತ್ಯ ಹರಿದ್ವರ್ಣದ   ಸಹ್ಯಾದ್ರಿ  ಬೆಟ್ಟ  ಅಬ್ಬ ಎಂಥ ವೈವಿದ್ಯಮಯ...  ಎಷ್ಟೋ ಜೀವ ಪ್ರಬೇಧಗಳಿಗೆ ಆಶ್ರಯ ನೀಡುತ್ತಿದೆ ನಮ್ಮ ಸಹ್ಯಾದ್ರಿ......  
ಮುಂಗಾರಿನ ಮಳೆನಲ್ಲಿ ನೆನೆದು ಕೊಂಡು... ಒಂದು ಕೈ ನಲ್ಲಿ ಛತ್ರಿ.  ಇನ್ನೊಂದು ಕೈನಲ್ಲಿ ನನ್ನ ಮುದ್ದಿನ ಕ್ಯಾಮೆರಾ .. (ನಾವು ನೆನೆದರು ಪರವಾಗಿಲ್ಲ ಕ್ಯಾಮೆರಾ ಮಾತ್ರ ನೆನೆಯಬಾರದು.......)  ಚಿಕ್ಕ ಬೆಟ್ಟ ಗುಡ್ಡಗಳನ್ನ ಹತ್ತಿಕೊಂಡು ಹೋಗುವ ಮಜವೇ ಬೇರೆ ...    ಕಳೆದ ಕೆಲವೊಂದು ವರುಷಗಳಿಂದ ಇಂತಹ ಅನುಭವಗಳನ್ನು ಮಿಸ್ ಮಾಡ್ಕೊತ ಇಲ್ಲ..  ಪ್ರತಿವರುಷ ಒಂದಲ್ಲ ಒಂದು ಸಹ್ಯಾದ್ರಿ ಬೆಟ್ಟಗಳ ಸಾಲಿಗೆ ಹೋಗಿ ಬರುತ್ತಿದ್ದೇನೆ..    ಹೋದವಾರ ಆಗುಂಬೆ ಗೆ ಹೋಗಿದ್ದೆ...   ಪ್ರತಿ ಭಾರಿಯಂತೆ  ಅದ್ಭುತ ಅನುಭವ.   ಕವಲೇ ದುರ್ಗದ ಕೋಟೆ ಗೆ ಚಾರಣ ಮಾಡುವ ಮಜವೇ ಬೇರೆ.    ಹಾಗೆ ಕುಂದಾದ್ರಿ ಬೆಟ್ಟ, ಮತ್ತೆ ಅಕ್ಕಿ ರಾಶಿ ಗುಡ್ಡ ಅಂತ ಚಿಕ್ಕ ಬೆಟ್ಟಕ್ಕೆ ಚಾರಣ ಹೋಗಿದ್ದೆವು...     ಕತ್ತಲಾದ ಮೇಲೆ ಮ್ಯಾಕ್ರೋ ಲೆನ್ಸ್ ಹಾಕಿಕೊಂಡು ಕಪ್ಪೆ, ಹಾವುಗಳ ಹುಡುಕಾಟ ಅದು tourch ಬೆಳಕಿನಲ್ಲಿ...    ಒಟ್ನಲ್ಲಿ ಅದ್ಬುತ ಅನುಭವ....  ವರ್ಷಕ್ಕೆ ಒಂದು ಸರಿನಾದ್ರೂ ಹೋಗಿ ಬರಬೇಕು ಕಣ್ರೀ ಇಂತಹ ಜಾಗಕ್ಕೆ .....   ಒಳ್ಳೆ onxygen ಸಿಗುತ್ತೆ ... ಒಂದು ಥರ ರಿಚಾರ್ಜ್ ಮಾಡಿದ ಹಾಗೆ.....   ಕೆಲವೊಂದು ಫೋಟೋಗಳನ್ನು ಹಾಕಿದ್ದೇನೆ ನೋಡಿ.....