ನನ್ನ ಸಹದ್ಯೋಗಿಯಾ girl friend ನ ತಾಯಿದು ಬರ್ತ್ಡೇ ಇತ್ತಂತೆ....ಆ ಉರು ಇರುವುದು ಪಿನಮಾರ್ ನಿಂದ ಸ್ವಲ್ಪ ದೂರ. ಸೊ ಅದಕ್ಕಾಗಿ ಇವರಿಬ್ಬರು ಕಾರ್ ನಲ್ಲಿ ಹೋಗ್ತಾ ಇದ್ರೂ,,, ನನ್ನನು ಕರೆದರೂ,,, ನೀವು ಬರುವ ಹಾಗಿದ್ದರೆ ನಿಮ್ಮನು ಪಿನಮಾರ್ ಬೀಚ್ ನಲ್ಲಿ ಬಿಟ್ಟು ನಾವು ಊರಿಗೆ ಹೋಗುತ್ತೇವೆ ಮತ್ತೆ ಬರಬೇಕಾದರೆ ವಾಪಾಸ್ ಕರ್ಕೊಂಡ್ ಬರ್ತೇವೆ ಅಂತ.... ನಂಗು ಅದೇ ಬೇಕಿತ್ತು ಸರಿ ಅಂತ....ಓಕೆ ಅಂದೇ.....
ಇವಾಗ ಇಲ್ಲಿ ಬೇಸಿಗೆ ಕಾಲ,,, ಎಲ್ಲರೂ ವೀಕ್ ಎಂಡ್ ಬಂತು ಅಂದರೆ ಯಾವುದಾದರು ಬೀಚ್ ಗೋ,,, ಅಥವಾ ಹಿಲ್ ಸ್ಟೇಷನ್ ಕಡೆಗೋ ಹೊರಟು ಹೋಗುತ್ತಾರಂತೆ..... ಸೊ ಇವಾಗ ಅಲ್ಲಿ ತುಂಬಾ ಬ್ಯುಸಿ ಇರುತ್ತೆ,,, ಜಾಸ್ತಿ ಜನ ಇರ್ತಾರೆ ಅಂತ ಹೇಳಿದ್ರು.... ಆದ ಕಾರಣ,,, ಅಲ್ಲಿ ಹೋಟೆಲ್ ಸಿಗೋದು ಕಷ್ಟ ಆಯಿತು... ನಾವು ಇಲ್ಲಿಂದ ಶನಿವಾರ ಬೆಳಿಗ್ಗೆ ಹೋಗೋದು... ಮತ್ತೆ ಭಾನುವಾರ ಸಂಜೆ ವಾಪಾಸ್ ಬರೋದು ಅಂತ ಡಿಸೈಡ್ ಆಗಿತ್ತು.... ಅಂತು ಕೊನೆ ಗಳಿಗೆ ನಲ್ಲಿ ಒಂದು 3 * ಹೋಟೆಲ್ ಸಿಕ್ತು,,,, ಸ್ವಲ್ಪ ಜಾಸ್ತಿ ಅದರೂ ಏನ್ ಮಾಡೋದು,,,, ಓಕೆ ಅಂತ ಬುಕ್ ಮಾಡಿದೆ .....
ಶನಿವಾರ ಬೆಳಿಗ್ಗೆ 7 ಘಂಟೆ ಎಲ್ಲಾ ರೆಡಿ ಆಗಿರಿ,,, ನಾನು ಬಂದು ಪಿಕ್ ಮಾಡ್ತೇನೆ ಅಂತ ಹೇಳಿದ್ದ... ಸೊ ನಾನು ಕರೆಕ್ಟ್ ಆಗಿ 6 :45ಗೆ ಎಲ್ಲಾ ರೆಡಿ ಆಗಿದ್ದೆ. ಹೇಳಿದ ಸಮಯಕ್ಕೆ ಸರಿಯಾಗಿ ಬಂದು ನನ್ನ pickup ಮಾಡಿದ ..
ಅಲ್ಲಿಂದ ಅವರ ಗರ್ಲ್ ಫ್ರೆಂಡ್ ಮನೆಗೆ ಹೋಗಿ ಅವರನ್ನು ಪಿಕ್ ಮಾಡಿಕೊಂಡು ಹೊರಡುವಾಗ ೮:೦೦ ಆಗಿತ್ತು......
ಕಾರಿನಲ್ಲಿ ಕೂತ್ಕೊಂಡ್ ೪೦೦ KM ಅಂದ್ರೆ ಒಂದು 6 ಟು 7 hours ಆಗ್ಬೋದ ಅಂತ ಕೇಳಿದೆ,,, ಅಯ್ಯೋ ಅಷ್ಟೊಂದ್ ಬೇಡ ಬರಿ 4 hrs ಅಸ್ಟೇ ಅಂತ ಹೇಳಿದ... ನಾನು ಏನ್ ಹೇಳ್ತಾ ಇದಾನೆ ಇವನು,,, ಅಷ್ಟೆನ ಆಗೋದು ಅಂತ ಅನ್ಕೊಂಡೆ,,,, ಆದರೆ ಒಂದು ಸರಿ ಸಿಟಿ ಲಿಮಿಟ್ ದಾಟಿ high way ಗೆ ಹೋದಾಗ ಅಲ್ಲಿನ ರೋಡ್ ನೋಡಿ ಅನ್ನಿಸಿತು,,, ಕರೆಕ್ಟ್ 4 hr ಗೆ ಹೋಗ್ತಾನೆ ಇವನು ಅಂತ....
ಏನ್ high way ರೋಡ್ ರೀ ಅದು.... ಅಬ್ಬ ಒಂದು ಲೈನ್ ನಲ್ಲಿ minimum 120 KM ಗಿಂತ ಕಡಿಮೆ ಹೋಗೋ ಹಾಗೆ ಇಲ್ಲ..... ಅಸ್ಟೇ ಸ್ಪೀಡ್ ನಲ್ಲಿ ಡ್ರೈವ್ ಮಾಡಬೇಕು..... ಇನ್ನೊಂದರಲ್ಲಿ 90 ಇಂದ 110 ವರೆಗೂ ಹೋಗ್ಬೇಕು...... ಅಲ್ಲಿನ ರೋಡ್ ನೋಡಿ ನಿಜವಾಗ್ಲೂ ಸುಮ್ನೆ ಕೂತ್ಕೊಂಡ್ ನೋಡ್ತಾ ಇದ್ದೆ... ಹೋಗೋಕೆ ೪ ಲಾನೇ ರೋಡ್ ,,, ಇನ್ನೊಂದ್ ಕಡೆ ಇಂದ ಬರೋಕೆ ೪ ಲಾನೇ ರೋಡ್..... ಎರಡಕ್ಕೂ ಮದ್ಯಾ ಇನ್ನು 5 ಲಾರಿಗಳು ಒಟ್ಟಿಗೆ ಹೋಗೋ ಅಷ್ಟು ಗ್ಯಾಪ್. ಅಬ್ಬ.... ಸೂಪರ್ ಆಗಿ ಇತ್ತು ರೋಡ್ ಮಾತ್ರ...... ( ಅದು ಪ್ರಿ ಪ್ಲಾನ್ ಮಾಡಿ ರೋಡ್ ನ construct ಮಾಡಿದ್ದಾರೆ ,,, ಇನ್ನ ೧೫ ವರ್ಷ ಅದ್ರು , ಎಷ್ಟೇ ವಾಹನಗಳು ಜಾಸ್ತಿ ಆದರು ,,,, ಯೋಚನೆ ಇಲ್ಲ..... ಮದ್ಯದಲ್ಲಿ ಬಿಟ್ ಇರುವ ಗ್ಯಾಪ್ ನಲ್ಲಿ ಇನ್ನು ಎರಡು ರೋಡ್ ಮಾಡಬಹುದು......ಜಮೀನ್ aquair ಮಾಡಿಕೊಂಡು ರೋಡ್ construct ಮಾಡೋ ಗೋಜೆ ಇಲ್ಲ... ನಮ್ಮಲ್ಲಿ ಯಾವಾಗ ಈ ತರಹ ರೋಡ್ ಆಗೋದೂ ?)
ಎಷ್ಟೊಂದ್ ಕಡೆ... ಟೋಲ್ ಇದೆ... ಇದ್ರೂ ಪರವಾಗಿಲ್ಲ ಅಷ್ಟು ನೀಟ್ ಆಗಿ ಮೈನ್ಟೈನ್ ಮಾಡಿದ್ದಾರೆ... ಪ್ರತಿ 50 KM ಗೆ ಒಂದು ಪೋಲಿಸ್ ವ್ಯಾನ್ ನಿಂತಿರುತ್ತೆ..... ಮದ್ಯದಲ್ಲಿ ಹಳ್ಳಿ ಅಥವಾ ಯಾವುದಾದರು ಉರು ಇದ್ದರೆ,, ಎರಡು ಕಡೆ ಕ್ಲೋಸ್ ಮಾಡಿದ್ದಾರೆ... ಯಾರು ಆಕಡೆ ಇಂದ ಇಕಡೆ ಹೋಗೋಲ್ಲ , ಎಲ್ಲಾ ಕಡೆ ಸೈಡ್ ವಾಕ್ ಇರುತ್ತೆ.....
ಅಂತು ಆ high way ನಲ್ಲಿ 120 - 140 ಕಂ ಸ್ಪೀಡ್ ನಲ್ಲಿ ಹೋಗ್ತಾ ಇದ್ದರೆ..... ಅಬ್ಬ ಸಕತ್ ಅನುಭವ....
ನನ್ನ ಕ್ಯಾಮರಾನ ಫುಲ್ ಚಾರ್ಜ್ ಮಾಡ್ಕೊಂಡ್ ಹೋಗಿದ್ದೆ... ದಾರಿ ಉದ್ದಕ್ಕೂ ಸಿಕ್ಕ ಫೋಟೋ ತೆಗೆದಿದ್ದೆ ತೆಗೆದಿದ್ದು.... ಕಣ್ಣು ಹಾಯಿಸಿದಷ್ಟು ವಿಶಾಲವಾದ ಬಯಲು ಭೂಮಿ,,,,, ಬೇಸಿಗೆ ಆದ್ದರಿಂದ ಎಲ್ಲಾ ಒಣಗಿ...ಹಳದಿ ಬಣ್ಣದ ಒಣಗಿದ ಹುಲ್ಲುಗಳು ಮೈ ಚಾಚಿ ಮಲಗಿತ್ತು..... ಅದರ ಮಧ್ಯ ಮಧ್ಯ....ನೀಟ್ ಆಗಿ ಕಂಪಾರ್ಟ್ ಮೆಂಟ್ ತರ ವಿಂಗಡಿಸಿರುವ ಜಮೀನು ಗಳು... ಮತ್ತೆ ಎಲ್ಲದಕ್ಕೂ ತಂತಿ ಬೇಲಿ..... ಅದರಲ್ಲಿ....ಎಷ್ಟು ನೋಡಿದರು ದಾರಿ ಉದ್ದಕು ಕಾಣಿಸ್ತ ಇರುವ...ಹಸುಗಳು ಮತ್ತೆ ಕುದುರೆ,,,, ಇದು tipical ಅರ್ಜೆಂಟೈನ ದ ನೋಟ.....ಹಾಗೆ ಕೆಲವು ಕಡೆ ಸೂರಿ ಕಾಂತಿ ಹೂವುಗಳು .....ಮತ್ತೆ ಕೆಲವೊಂದು ತರಕಾರಿ ಬೆಳೆ,
ಇಲ್ಲಿ ಹಸು ಮತ್ತೆ ಕುದುರೆನ ತುಂಬಾ ಸಾಕ್ತಾ ರಂತೆ..... ಎಲ್ಲಿ ನೋಡಿದರು ಹುಲ್ಲು ತಿನ್ನುತ ಇದ್ದ ಹಸುಗಳು ಮತ್ತೆ,,, ಕುದುರೆ,,,, ನನ್ನ ಆನಂದಕ್ಕೆ ಮಿತಿಯೇ ಇಲ್ಲ....ಆರಾಮಾಗಿ...ಅವರ ಜೊತೆ ಮಾತಾಡಿಕೊಂಡು ,,, ಅರ್ಜೆಂಟೈನ ದ ಸುಂದರ ನೋಟವನ್ನು ಸವಿಯುತ್ತ ಹೋಗ್ತಾ ಇದ್ದೆ.....
ಮದ್ಯದಲ್ಲಿ,,, ನನ್ನ ಅದೃಷ್ಟಕ್ಕೆ ಜೋರಾಗಿ ಮಳೆ ಬೇರೆ ಬರಬೇಕ,,,, ಒಂದು 50 KM ದೂರ ಜೋರ್ ಮಳೆ ನಲ್ಲೆ ಡ್ರೈವ್ ಮಾಡ್ಕೊಂಡ್ ಹೋಗ್ತಾ ಇದ್ವಿ... ಅದನ್ತು ,,,, ವೌ ಸಕತ್ experience ....
ಒಟ್ಟಿನಲ್ಲಿ ಇಲ್ಲಿನ doubble dekker ವೋವ್ಲೋ ಬಸ್ ನ,,, ದೊಡ್ಡ ದೊಡ್ಡ ಆಯಿಲ್ ತುಂಬಿದ ಲಾರಿನ,,,,ತರ ತರದ ಕಾರ್ ಗಳನ್ನ..... ನೋಡ್ತಾ ಅದರ ಫೋಟೋ ತೆಗಿಥ..... ಫುಲ್ ಎನ್ಜ್ಯೊಎ ಮಾಡ್ಕೊಂಡ್ ಹೋಗ್ತಾ ಇದ್ದೆ..... ಮದ್ಯದಲ್ಲಿ,,,, ಒಂದು ಕಡೆ breakge ಅಂತ ನಿಲ್ಲಿಸಿದೆವು ... ಅಲ್ಲೇ ಕಾಫೀ ಮತ್ತೆ ಸ್ವಲ್ಪ ಸ್ನಚ್ಕ್ ತಿನ್ಕೊಂಡ್ ಹೊರಟ್ವಿ.... ಅಲ್ಲೂ ಎಷ್ಟು ನೀಟ್ ಗೊತ್ತ.... ಎಲ್ಲಾ ಕಡೆನು ಡಿಸಪ್ಲಿನ್,,
ಇದನ್ನೆಲ್ಲಾ ನೋಡಿಕೊಂಡ್ ಪಿನಮಾರ್ ತಲುಪಿದಾಗ 12 :30 ಆಗಿತ್ತು .
(ಪಿನಮಾರ್ ನಲ್ಲಿ ಅನುಭವಿಸಿದ ಅನುಭವ,,, ಅಲ್ಲಿನ ಬೀಚ್,,, ನೈಟ್ ಕಾರ್ ಶೋ..... ನಾನು ನನ್ನ veg meals ಗಾಗಿ ಒದ್ದಾಡಿದ ರೀತಿನ ಮುಂದಿನ ಬರಹದಲ್ಲಿ ಹೇಳುತ್ತೇನೆ....)
ರೋಡ್ ನಲ್ಲಿ ಹೋಗ್ತಾ ತೆಗೆದ ಎಲ್ಲಾ ಫೋಟೋಗಳನ್ನು ಪಿಕಾಸದಲ್ಲಿ ಅಪ್ಲೋಡ್ ಮಾಡಿದ್ದೇನೆ..... ನೋಡಿ...
http://picasaweb.google.com/guru.prasadkr/ArgentinaRoadSideView?authkey=Gv1sRgCNT6pO6ZvbiRuwE&feat=directlink
ಅರ್ಜೆಂಟೈನ high way ರೋಡ್ ನ ಒಂದು ನೋಟ
ವಿಶಾಲವಾದ ಬಯಲುಹುಲ್ಲು ಮೇಯಿ ತ್ತಿರುವ ಕುದುರೆಗಳು
ರೋಡ್ ಸೈಡ್ ನಲ್ಲಿ ಸಿಕ್ಕ ಒಂದು ಕೆರೆ
ನಾನು , ನನ್ನ ಸಹದ್ಯೋಗಿ paballo , ಮತ್ತೆ ಅವನ ಸ್ನೇಹಿತೆ ವಿಕ್ಟೋರಿಯ
dubble deck turist ಬಸ್
ವಿಶಾಲ ಬಯಲು
ಸೂರ್ಯ ಕಾಂತಿ ಹೂವ
ದಾರಿ ಉದ್ದಕು ಕಾಣ ಸಿಗುವ ಹಸುಗಳು
ಪೆಟ್ರೋಲ್ bunk ಹತ್ತಿರ
ವಾಪಾಸ್ ಬರುವಾಗ ... ಮುಳುಗುತಿರುವ ಸೂರ್ಯ